ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 28

 
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 28

ಲಾಲಾ ಲಜಪತ ರಾಯ್ ಮತ್ತು ಬಿಪಿನ್ ಚಂದ್ರ ಪಾಲ್ ಈ ಇಬ್ಬರೂ ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯಗಳಲ್ಲಿ ತಿಳಕರ ಪ್ರವಾಸಗಳನ್ನು ಆಯೋಜಿಸಿದ್ದರು. ಆ ಕಾಲದ ಪಂಜಾಬ್ ಪ್ರಾಂತ್ಯದಲ್ಲಿ ಇಂದಿನ ಭಾರತದ ಪಂಜಾಬ್, ಹರಿಯಾಣ ಮತ್ತು ಈಗ ಪಾಕಿಸ್ತಾನದಲ್ಲಿರುವ ಪಂಜಾಬ್‌ನ ಉಳಿದ ಭಾಗಗಳು ಸೇರಿದ್ದವು. ಹಾಗೆಯೇ ಅಂದಿನ ಬಂಗಾಳ ಪ್ರಾಂತ್ಯದಲ್ಲಿ ಇಂದಿನ ಇಡೀ ಬಾಂಗ್ಲಾದೇಶ, ಭಾರತದ ಪಶ್ಚಿಮ ಬಂಗಾಳ ಮತ್ತು ಸುತ್ತಮುತ್ತಲಿನ ಕೆಲವು ಪ್ರದೇಶಗಳು ಬರುತ್ತಿದ್ದವು.

ಕಲ್ಕತ್ತಾದಲ್ಲಿ ತಿಳಕರ ಸಭೆ ನಡೆಯುವುದು ಅಂದಿನ ದಿನಪತ್ರಿಕೆಗಳಲ್ಲಿ ಚರ್ಚೆಯ ದೊಡ್ಡ ವಿಷಯವೇ ಆಗುತ್ತಿತ್ತು. ಒಂದೊಂದು ಸಭೆಗೆ ಅಕ್ಷರಶಃ ಐದೈದು ಸಾವಿರ ಜನರು ಸೇರುತ್ತಿದ್ದರು, ಕೆಲವು ಸಲವಂತೂ ಈ ಸಂಖ್ಯೆ ಅದರ ಎರಡರಷ್ಟು ಅಥವಾ ಮೂರರಷ್ಟು ಆಗುತ್ತಿತ್ತು. ಕಲ್ಕತ್ತಾ ಮತ್ತು ಪಂಜಾಬ್ ಪ್ರಾಂತ್ಯದ ಜನರು ತಿಳಕರನ್ನು ಮುಕ್ತ ಮನಸ್ಸಿನಿಂದ ‘ಭಾರತದ ಸರ್ವೋಚ್ಚ ನಾಯಕ‌’ ಎಂದು ಒಪ್ಪಿಕೊಂಡಿದ್ದರು ಮತ್ತು ಅಲ್ಲಿನ ನಾಯಕರ ಭಾಷಣಗಳಲ್ಲೂ ಹಾಗೆಯೇ ಉಲ್ಲೇಖವಾಗುತ್ತಿತ್ತು.

ಭಾರತದ ಬ್ರಿಟಿಷ್ ಗವರ್ನಮೆಂಟ್ ೧೮೯೭, ೧೯೦೯ ಮತ್ತು ೧೯೧೬ ರಲ್ಲಿ ತಿಳಕರನ್ನು ರಾಜದ್ರೋಹದ ಮತ್ತು ಬ್ರಿಟಿಷರ ವಿರುದ್ಧ ಅಸಮಾಧಾನ ಪ್ರಚೋದಿಸಿದ ಆರೋಪದ ಮೇಲೆ ಒಂದೂವರೆ-ಒಂದೂವರೆ ವರ್ಷಗಳ ಕಾಲ ಜೈಲಿಗೆ ಕಳುಹಿಸಿತ್ತು. ೧೮೯೭ ರ ರಾಜದ್ರೋಹದ ಕೇಸಿನಲ್ಲಿ ಮತ್ತು ಒಂದು ವೈಯಕ್ತಿಕ ಮಟ್ಟದ ಕೇಸಿನಲ್ಲೂ ಬ್ಯಾರಿಸ್ಟರ್ ಮಹಮ್ಮದ್ ಅಲಿ ಜಿನ್ನಾ ಅವರು ತಿಳಕರ ಪರವಾಗಿ ವಕಾಲತ್ತು ಆದರದಿ೦ದ ವಹಿಸಿದ್ದರು. ೧೯೧೩ ಮತ್ತು ೧೯೧೬ ರ ಕೇಸುಗಳಲ್ಲಂತೂ ಜಿನ್ನಾ ಅವರು ತಿಳಕರನ್ನು ಈ ಆರೋಪಗಳಿಂದ ಮುಕ್ತಗೊಳಿಸಲು ಯಶಸ್ವಿಯಾದರು.

ಜಿನ್ನಾ ಅವರು ಅತ್ಯಂತ ಸುಶಿಕ್ಷಿತ ಮತ್ತು ಆಧುನಿಕ ವಿಚಾರಗಳ ಕಾಂಗ್ರೆಸ್ ನಾಯಕರಾಗಿದ್ದರು ಹಾಗೂ ಅವರಿಗೆ ತಿಳಕರ ಬಗ್ಗೆ ಅಪಾರ ಗೌರವವಿತ್ತು. ಇದರಿಂದಾಗಿ ಸುಶಿಕ್ಷಿತ ಮುಸ್ಲಿಂ ಯುವವರ್ಗ ತಿಳಕರ ಬೆನ್ನಿಗೆ ನಿಲ್ಲಲು ಶುರುವಾಯಿತು. ತಿಳಕರ ಜನಪ್ರಿಯತೆ ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯಗಳಿಂದ ಎಲ್ಲೆಡೆ ಹರಡಲು ಆರಂಭವಾಯಿತು. ಇದನ್ನು ಕಂಡು ಬ್ರಿಟಿಷರಿಗೆ ಹೊಟ್ಟೆ ಉರಿಯಾಗತೊಡಗಿತು ಮತ್ತು ಅವರು ಕುತಂತ್ರಗಳನ್ನು ಮಾಡತೊಡಗಿದರು; ಇದರ ಪರಿಣಾಮವಾಗಿಯೇ ಲಾರ್ಡ್ ಕರ್ಜನ್ ಎಂಬ ಅತ್ಯಂತ ಧೂರ್ತ, ಕುಟಿಲ ಮತ್ತು ಕ್ರೂರ ಸ್ವಭಾವದ ವ್ಯಕ್ತಿಯನ್ನು ಭಾರತಕ್ಕೆ ಕಳುಹಿಸಲಾಯಿತು. ಈ ಮನುಷ್ಯ ಹಿಂದೂ-ಮುಸ್ಲಿಮರ ನಡುವೆ ವೈರತ್ವ ಉಂಟುಮಾಡುವುದು ಮತ್ತು ಹಿಂದೂ-ಮುಸ್ಲಿಂ ದಂಗೆಗಳನ್ನು ಹಚ್ಚುವುದು ಎಂಬ ಎರಡು ಮುಖ್ಯ ಗುರಿಗಳನ್ನು ಇಟ್ಟುಕೊಂಡಿದ್ದನು.

ಇದಕ್ಕಾಗಿಯೇ ಅವನು ಸಂಯುಕ್ತ ಬಂಗಾಳ ಪ್ರಾಂತ್ಯವನ್ನು ‘ಮುಸ್ಲಿಂ ಬಹುಸಂಖ್ಯಾತ ಪೂರ್ವ ಬಂಗಾಳ‌’ ಮತ್ತು ‘ಹಿಂದೂ ಬಹುಸಂಖ್ಯಾತ ಪಶ್ಚಿಮ ಬಂಗಾಳ‌’ ಎಂದು ಇಭ್ಭಾಗ ಮಾಡಿದನು. ಇದರಲ್ಲಿ ಯಾವ ನಿರ್ಧಾರ ತಗೊಂಡರೂ ತಿಳಕರಿಗೆ ನಷ್ಟವೇ ಆಗುತ್ತದೆ ಮತ್ತು ಭಾರತವೂ

ಇಭ್ಭಾಗವಾಗುತ್ತದೆ ಎಂದು ಲಾರ್ಡ್ ಕರ್ಜನ್ ನಂಬಿದ್ದನು, ಆದರೆ ಹಾಗೆ ಆಗಲೇ ಇಲ್ಲ.

ಲೋಕಮಾನ್ಯ ತಿಳಕರು ಬಿಪಿನ್ ಚಂದ್ರ ಪಾಲ್ ಅವರ ಸಹಾಯದಿಂದ ಇಡೀ ಬಂಗಾಳ ಪ್ರಾಂತ್ಯದಲ್ಲಿ ಬ್ರಿಟಿಷರ ವಿರುದ್ಧ ದೊಡ್ಡ ಹೋರಾಟವನ್ನೇ ರೂಪಿಸಿದರು. ಬ್ರಿಟಿಷ್ ಸರ್ಕಾರಕ್ಕೆ ನಿಷ್ಠರಾಗಿದ್ದ ಕೆಲವು ಆಸೆಬುರುಕ ಭಾರತೀಯರು ಕೆಲವು ಕಡೆ ಹಿಂದೂ-ಮುಸ್ಲಿಂ ದಂಗೆಗಳನ್ನು ಹಬ್ಬಿಸಲು ಪ್ರಯತ್ನಿಸಿದರು. ಆದರೆ ತಿಳಕರ ಅನೇಕ ಸಹೋದ್ಯೋಗಿಗಳು ಬೀದಿಗಿಳಿದು ಮತ್ತು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ತಿಳಕರ ಉದ್ದೇಶವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು ಹಾಗೂ ಈ ಬಂಗಾಳ ವಿಭಜನೆಗೆ ಇದ್ದ ವಿರೋಧವನ್ನು ಮತ್ತಷ್ಟು ತೀವ್ರಗೊಳಿಸಿದರು. ಕೊನೆಗೆ ಈ ವಿಭಜನೆಯನ್ನು ೧೯೧೧ ರಲ್ಲಿ ರದ್ದುಗೊಳಿಸಲಾಯಿತು.

ಇದೇ ಸಮಯದಲ್ಲಿ ‘ಅರಬಿ೦ದೊ ಘೋಷ್’ ಎಂಬ ಬಂಗಾಳಿ ಉಗ್ರಗಾಮಿ ನಾಯಕರು ಮುಂದೆ ಬಂದರು ಮತ್ತು ತಿಳಕರ ಪರವಾಗಿ ಇಡೀ ಉತ್ತರ ಭಾರತದಲ್ಲಿ ಪ್ರಚಾರ ಕಾರ್ಯ ಮಾಡತೊಡಗಿದರು. ಇದೇ ಅರಬಿ೦ದೊ ಘೋಷರು ಮುಂದೆ ಪಾಂಡಿಚೇರಿಯಲ್ಲಿ ಒಂದು ಆಶ್ರಮ ಕಟ್ಟಿ, ಒಂದು ವಿಶಿಷ್ಟವಾದ ಮತ್ತು ಸಂಪೂರ್ಣ ವೇದಗಳನ್ನು ಅನುಸರಿಸುವ ಆಧ್ಯಾತ್ಮಿಕ ವಸತಿಯನ್ನು ಸ್ಥಾಪಿಸಿದರು.

ಅದೇ ಸಮಯದಲ್ಲಿ ‘ಚಿದಂಬರಂ ಪಿಳ್ಳೈ’ ಅವರು ದಕ್ಷಿಣ ಭಾರತದಲ್ಲಿ ತಿಳಕರನ್ನು ಪ್ರತಿನಿಧಿಸತೊಡಗಿದರು. ಇದರಿಂದಾಗಿ ಇಡೀ ದಕ್ಷಿಣ ಭಾರತದ ತೀರಾ ಸಾಮಾನ್ಯ ಮತ್ತು ಅನಕ್ಷರಸ್ಥ ಪ್ರಜೆಗೂ ಕೂಡ, ‘ತಿಳಕರು ನಮ್ಮ ನಾಯಕರು, ನಾವು ಅವರಿಗೆ ಸಪೋರ್ಟ್ ಮಾಡಲೇಬೇಕು ಮತ್ತು ಅವರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಬಲವಾಗಿ ಅನ್ನಿಸತೊಡಗಿತು.

ದಿನದಿಂದ ದಿನಕ್ಕೆ ತಿಳಕರ ಜನಪ್ರಿಯತೆ ಹೆಚ್ಚುತ್ತಲೇ ಇತ್ತು ಮತ್ತು ತಿಳಕರು ಮೆಲ್ಲಮೆಲ್ಲನೆ ‘ಪ್ರತಿಯೊಬ್ಬ ಭಾರತೀಯನೂ ಸುಲಭವಾಗಿ ಬ್ರಿಟಿಷರನ್ನು ವಿರೋಧಿಸಬಹುದಾದ‌’ ಸ್ವಾತಂತ್ರ್ಯ ಹೋರಾಟದ ದಾರಿಗಳನ್ನು ಜನರ ಮುಂದೆ ಇಟ್ಟರು.

೧) ಮೊದಲನೆಯದಾಗಿ ವಿದೇಶಿ ವಸ್ತುಗಳ ಬಹಿಷ್ಕಾರ - ಅದರಲ್ಲೂ ವಿಶೇಷವಾಗಿ ಬ್ರಿಟನ್‌ನಿಂದ ಬರುವ ಮಾಲನ್ನು ಬಹಿಷ್ಕರಿಸುವುದು. ಬ್ರಿಟಿಷರು ಭಾರತದ ಕಚ್ಚಾ ವಸ್ತುವನ್ನು ಅತ್ಯಂತ ಅಗ್ಗವಾಗಿ ಒಯ್ದು, ಅದರಿಂದಲೇ ಬ್ರಿಟನ್‌ನಲ್ಲಿ ತಯಾರಾದ ಪಕ್ಕಾ ಮಾಲನ್ನು ಭಾರತೀಯರಿಗೆ ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಮಾರುತ್ತಿದ್ದರು. ಕೆಲವು ಸಲವಂತೂ ಇದು ಹತ್ತು ಪಟ್ಟು ಕೂಡ ಇರುತ್ತಿತ್ತು.

ಈ ಕಾರ್ಯಕ್ರಮದ ಅಡಿಯಲ್ಲಿ ತಿಳಕರು ಜನರಿಗೆ ಬ್ರಿಟಿಷ್ ಮಾಲು ಮಾರುವ ಅಂಗಡಿಗಳ ಮುಂದೆ ಹೋಗಿ ‘ಪಿಕೆಟಿಂಗ್‌’ ಮಾಡಲು ಹೇಳಿದರು ಮತ್ತು ಜನರು ಹಾಗೆಯೇ ಮಾಡಲು ಶುರು ಮಾಡಿದರು. ಜನರಿಗೆ ಇದು ತುಂಬಾ ಸರಳ ಮತ್ತು ಸುಲಭದ ವಿಷಯವಾಗಿತ್ತು - ವಿದೇಶಿ ವಸ್ತುಗಳ ಅಂಗಡಿಗೆ ಹೋಗುವವರನ್ನು ತಡೆಯುವುದು, ಅವರಿಗೆ ಬ್ರಿಟಿಷರ ನೀತಿಯನ್ನು ತಿಳಿಹೇಳುವುದು. ಒಂದು ವೇಳೆ ಜನ ಕೇಳದಿದ್ದರೆ, ದೇಶಭಕ್ತರ ಗುಂಪುಗಳು ಮಾನವ ಸರಪಳಿ ನಿರ್ಮಿಸಿ ಅಂಗಡಿಯೊಳಗೆ ಹೋಗುವ ಹಾದಿಯನ್ನೇ ಮುಚ್ಚಿಬಿಡುತ್ತಿದ್ದರು. ಇದರಿಂದಾಗಿ ಬ್ರಿಟಿಷ್ ವಸ್ತುಗಳ ಮಾರಾಟ ಶೇಕಡಾ ಐವತ್ತರಷ್ಟು ಕಡಿಮೆಯಾಯಿತು ಮತ್ತು ಬ್ರಿಟಿಷ್ ಸರ್ಕಾರ ಹಾಗೂ ಬ್ರಿಟಿಷ್ ಉದ್ಯಮಿಗಳಿಗೆ ದೊಡ್ಡ ಹೊಡೆತ ಬಿತ್ತು.

೨) ಸ್ವದೇಶಿ ಚಳವಳಿ - ಈ ಚಳವಳಿಯನ್ನು ಲೋಕಮಾನ್ಯ ತಿಳಕರೇ ಭಾರತದಲ್ಲಿ ಮೊದಲ ಬಾರಿಗೆ ಶುರು ಮಾಡಿದರು. ಅದಕ್ಕಾಗಿ ಅವರು ತಮ್ಮ ಭಾಷಣಗಳಲ್ಲಿ ಕೇವಲ ಬ್ರಿಟಿಷ್ ಮಾಲನ್ನು ಬಹಿಷ್ಕರಿಸಿದರೆ ಸಾಲದು, ಆ ವಸ್ತುಗಳ ಬದಲಿಗೆ ಭಾರತದಲ್ಲಿ ತಯಾರಾದ ಮಾಲು ಸಿಗುವುದು ಅಗತ್ಯ ಎಂದು ಸಾರಿದರು. ಇದರಿಂದಾಗಿ ಕರಾಚಿಯಿಂದ ಮದ್ರಾಸಿನವರೆಗೆ ಅನೇಕ ಭಾರತೀಯ ಸಣ್ಣ ಮತ್ತು ದೊಡ್ಡ ಉದ್ಯಮಿಗಳು ಉತ್ಸಾಹದಿಂದ ಭಾರತದಲ್ಲೇ ವಸ್ತುಗಳನ್ನು ತಯಾರಿಸಲು ಶುರು ಮಾಡಿದರು.

ಇದೆಲ್ಲವನ್ನೂ ನೋಡಿ ಸಿಟ್ಟಿಗೆದ್ದ ಲಾರ್ಡ್ ಕರ್ಜನ್, ತನ್ನ ಕೆಲವು ವಿಶೇಷ ಕೂಲಿ ಪತ್ರಕರ್ತರನ್ನು ತಿಳಕರ ಕಲ್ಕತ್ತಾದ ಸಭೆಯ ನಂತರದ ಪತ್ರಿಕಾಗೋಷ್ಠಿಯಲ್ಲಿ ನುಗ್ಗಿಸಿದನು.

ಈ ಬ್ರಿಟಿಷ್ ಪರ ಪತ್ರಕರ್ತರು ಗದ್ದಲ ಎಬ್ಬಿಸಿ ತಿಳಕರಿಗೆ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದರು. ಅವರ ಪ್ರಶ್ನೆ ಹೀಗಿತ್ತು - “ಮಿಸ್ಟರ್ ತಿಳಕ್! ೧೮೧೮ ರ ಮೊದಲು ಭಾರತದ ಮೂರನೇ ಎರಡರಷ್ಟು ಭಾಗದ ಮೇಲೆ ಮರಾಠರ ಆಳ್ವಿಕೆ ಇತ್ತು. ನೀವು ಕೂಡ ಮರಾಠಿಯವರೇ. ನಿಮಗೆ ಈಗ ಮತ್ತೆ ಅದೇ ಮರಾಠಾ ರಾಜ್ಯವನ್ನು ಭಾರತದ ಮೇಲೆ ತರಬೇಕಲ್ಲವೇ?”

ತಿಳಕರನ್ನು ಮರಾಠಿಯಲ್ಲದ ಜನರಿಂದ ಬೇರ್ಪಡಿಸುವ ಚತುರ ಪ್ರಯತ್ನ ಇದಾಗಿತ್ತು.

ಆದರೆ ಲೋಕಮಾನ್ಯ ತಿಳಕರು ಅತ್ಯಂತ ಸ್ಪಷ್ಟ ಶಬ್ದಗಳಲ್ಲಿ ಮತ್ತು ಬಹಿರಂಗವಾಗಿ ಮೈಕ್ ಮೂಲಕವೇ ಉತ್ತರಿಸಿದರು, “ಈ ಕಲ್ಪನೆ ಈಗ ಹಳೆಯದಾಗಿದೆ. ಈ ಆಧುನಿಕ ಯುಗದಲ್ಲಿ ಭಾರತದ ಎಲ್ಲಾ ಪ್ರಾಂತ್ಯಗಳನ್ನು ಪ್ರತಿನಿಧಿಸುವ ಪ್ರಜಾಪ್ರಭುತ್ವ ಸರ್ಕಾರ ಬರುತ್ತದೆ. ನನ್ನ ತಂಡದಲ್ಲಿ ಬಂಗಾಳಿ ನಾಯಕರಿದ್ದಾರೆ, ಪಂಜಾಬಿ ನಾಯಕರಿದ್ದಾರೆ, ತೆಲುಗು, ಕನ್ನಡ ಮತ್ತು ಮದ್ರಾಸಿ (ತಮಿಳು) ನಾಯಕರಿದ್ದಾರೆ ಮತ್ತು ನಮ್ಮ ಕಾರ್ಯಕರ್ತರು ಎಲ್ಲೆಡೆ ಹರಡಿದ್ದಾರೆ. ಆದ್ದರಿಂದ ಬ್ರಿಟಿಷರು ಭಾರತ ಬಿಟ್ಟು ಹೋದ ಮೇಲೆ ಯಾವುದೋ ಒಂದು ಸಮುದಾಯದ ರಾಜ್ಯ ಸ್ಥಾಪನೆಯಾಗುವುದಿಲ್ಲ; ಬದಲಿಗೆ ‘ರಾಜ-ಪ್ರಜೆ’ ಎಂಬ ವ್ಯವಸ್ಥೆಯೇ ಇಲ್ಲವಾಗಿ ಜನರ ಸರ್ಕಾರ ರಚನೆಯಾಗುತ್ತದೆ.”

ತಿಳಕರ ಈ ಬಹಿರಂಗ ಮತ್ತು ಸ್ಪಷ್ಟ ಉತ್ತರವನ್ನ ಕೇಳಿ ಲಾರ್ಡ್ ಕರ್ಜನ್‌ನ ಕುತಂತ್ರ ಸಂಪೂರ್ಣ ವಿಫಲವಾಯಿತು ಮತ್ತು ಇಡೀ ಭಾರತದ ಜನತೆ ಲೋಕಮಾನ್ಯ ತಿಳಕರನ್ನೇ ತಮ್ಮ ಏಕೈಕ ಸರ್ವೋಚ್ಚ ನಾಯಕ ಎಂದು ಒಪ್ಪಿಕೊಂಡರು.

೧೯೦೭ ರಲ್ಲಿ ಸೂರತ್‌ನಲ್ಲಿ ನಡೆದ ಕಾಂಗ್ರೆಸ್‌ನ ವಾರ್ಷಿಕ ಅಧಿವೇಶನದಲ್ಲಿ ನಾಮದಾರ್ ಗೋಪಾಲ ಕೃಷ್ಣ ಗೋಖಲೆ ಮತ್ತು ಅವರ ಸಹಚರರು ತಿಳಕರನ್ನು ಹಣಿಯಲು ತುಂಬಾ ಪ್ರಯತ್ನಿಸಿದರು. ಅವರಿಗೆ ಉಗ್ರಗಾಮಿ ಬಣದ ಅಸ್ತಿತ್ವವೇ ಒಪ್ಪಿಗೆ ಇರಲಿಲ್ಲ. ತಿಳಕರ ಬೆಂಬಲಿಗರು ಗಟ್ಟಿಯಾಗಿ ನಿಂತರು, ಆದರೆ ಗೋಖಲೆಯವರು ಕಾಂಗ್ರೆಸ್ ಅನ್ನು ಒಡೆಯುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್‌ನಲ್ಲಿ ‘ಜಹಾಲ‌’ (ಉಗ್ರಗಾಮಿ) ಮತ್ತು ‘ಮವಾಳ‌’ (ಮೃದುಗಾಮಿ) ಎಂಬ ಎರಡು ಭಾಗಗಳು ಉಂಟಾದವು.

೧೯೦೭ ರ ಮಾರ್ಚ್ ತಿಂಗಳಲ್ಲಿ ಖುದೀರಾಮ್ ಬೋಸ್ ಮತ್ತು ಪ್ರಫುಲ್ಲ ಚಾಕಿ ಎಂಬ ಇಬ್ಬರು ಬಂಗಾಳಿ ತಿಳಕ್ ಅಭಿಮಾನಿಗಳು ಮೊದಲು ಕಲ್ಕತ್ತಾದಲ್ಲಿ ತಿಳಕರನ್ನು ಭೇಟಿಯಾದರು ಮತ್ತು

ನಂತರ ಮೂರು ಬಾರಿ ಪುಣೆಗೆ ಬಂದು ತಿಳಕರನ್ನು ಭೇಟಿ ಮಾಡಿದರು. ‘ತಿಳಕರು ಅವರಿಗೆ ನಿಖರವಾಗಿ ಯಾವ ಸಹಾಯ ಮಾಡಿದ್ದರು’ ಎಂಬುದು ಆ ದೇವರಿಗೇ ಗೊತ್ತು.

ಆದರೆ ಈ ಇಬ್ಬರು ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದರು.

(ಕಥೆ ಮುಂದುವರಿಯುವುದು)