Tuesday, 15 July 2025

ಘೋರಕಷ್ಟೋಧ್ಧರಣ ಸ್ತೋತ್ರ ಪಠಣ

 
ಶ್ರಾವಣ ತಿಂಗಳು ಶ್ರವಣಭಕ್ತಿಯ ತಿಂಗಳು ಆಗಿದ್ದು, ಈ ತಿಂಗಳಿನಲ್ಲಿ ಹೆಚ್ಚು ಶ್ರವಣ, ಪಠಣ ಮತ್ತು ಪೂಜೆಯನ್ನು ಮಾಡುವ ಬಗ್ಗೆ ಸದ್ಗುರು ಶ್ರೀ ಅನಿರುದ್ಧ ಬಾಪುರವರು ಶೃದ್ಧಾವಾನರಿಗೆ ಹೇಳಿದ್ದೇ ಇದೆ. ಬಾಪುರವರು ತಮ್ಮ ಪ್ರವಚನದ ಮೂಲಕ ಮತ್ತು ಅಗ್ರಲೇಖನಗಳಲ್ಲಿ ಹಲವಾರು ಬಾರಿ ನಾಮಸ್ಮರಣೆ, ಮಂತ್ರ-ಸ್ತೋತ್ರ ಪಠಣ, ಆಧ್ಯಾತ್ಮಿಕ ಗ್ರಂಥಗಳ ಪಠಣ ಮತ್ತು ಸಾಮೂಹಿಕ ಉಪಾಸನೆಯ ಮಹತ್ವವನ್ನು ಸ್ಪಷ್ಟಪಡಿಸಿದ್ದಾರೆ. ಬಾಪು ಅವರು 28 ಜುಲೈ 2011 ರಂದು ನೀಡಿದ ತಮ್ಮ ಮರಾಠಿ ಪ್ರವಚನದಲ್ಲಿ 'ಶ್ರಾವಣ ಮಾಸದಲ್ಲಿಯ ಘೋರಕಷ್ಟೋಧ್ಧರಣ ಸ್ತೋತ್ರ ಪಠಣದ ಮಹತ್ವ' ದ ಕುರಿತು ಹೇಳಿದರು. ಬಾಪು ಅವರ ಹೇಳಿಕೆಯ ಸಾರಾಂಶ ಹೀಗಿದೆ -
 
"ಸದ್ಗುರುತತ್ವದಷ್ಟು ಪ್ರೀತಿ ಯಾರೂ ಮಾಡುವುದಿಲ್ಲ ಮತ್ತು ಮಾಡಲೂ ಸಾಧ್ಯವಿಲ್ಲ. ಪ್ರತಿಯೊಬ್ಬರ ಸೀಮಿತತೆ ಎಷ್ಟೇ ಹೆಚ್ಚಿದರೂ, ಅದು ಸೀಮಿತವೇ ಇರುತ್ತದೆ. ಆದರೆ ಕೇವಲ ಪರಮಾತ್ಮ ಮಾತ್ರ  ಅಪರಿಮಿತ.. ಈ ಸದ್ಗುರುತತ್ತ್ವವು ಎಲ್ಲಿಯೂ ಮುರಿದಿಲ್ಲ. ಇದು ನಿರ್ಗುಣವಾಗಿದೆ, ನಿರಾಕಾರವಾಗಿದೆ, ಆದರೆ ಅದರ ಜೊತೆ ಅದು ಪೂರ್ಣ ಚೈತನ್ಯದಿಂದ ಕೂಡಿದೆ. ಘೋರಕಷ್ಟೋಧ್ಧರಣ ಸ್ತೋತ್ರವು ಶ್ರೀಗುರು ದತ್ತಾತ್ರೇಯರ ಸ್ತೋತ್ರವಾಗಿದ್ದು, ಇದನ್ನು ರಚಿಸಿದವರು ಶ್ರೀವಾಸುದೇವಾನಂದಸರಸ್ವತಿ ಸ್ವಾಮಿ ಮಹಾರಾಜರು. ಈ ಸ್ತೋತ್ರವು ಐದು ಶ್ಲೋಕಗಳನ್ನೊಳಗೊಂಡಿದ್ದು, ಸುಲಭವಾಗಿ  108 ಬಾರಿ ಪಠಿಸಬಹುದು ಹಾಗೆ ಇದೆ. ಅಂತಹ ಪ್ರಭಾವಶಾಲಿ ಸ್ತೋತ್ರವನ್ನು ನಾವು ಶ್ರಾವಣ ಮಾಸದಲ್ಲಿ ಪಠಿಸುತ್ತೇವೆ."
 
ಇದರಿಂದ ಈ ಸ್ತೋತ್ರವನ್ನು ಪ್ರತಿದಿನ ಪಠಿಸಬೇಕೆಂದು ನಮ್ಮ ಗಮನಕ್ಕೆ ಬರುವದು,  ಆದರೆ  ಪವಿತ್ರ ಶ್ರಾವಣ ಮಾಸದಲ್ಲಿ ಇದನ್ನು ಸಾಮೂಹಿಕವಾಗಿ 108 ಬಾರಿ ಪಠಿಸಬೇಕೆಂದು ಬಾಪು ಒತ್ತಿ ಹೇಳಿದ್ದಾರೆ, ಇದು ಪ್ರತಿಯೊಬ್ಬ ಭಕ್ತನಿಗೂ ಅಪಾರ ಫಲ ನೀಡುತ್ತದೆ.
 
ಸದ್ಗುರುಗಳ ಮಾರ್ಗದರ್ಶನದಂತೆ ಭಕ್ತರು ತಿಂಗಳು ಪೂರ್ತಿ ಸಾಮೂಹಿಕ ಸ್ತೋತ್ರ ಪಠಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನಃಪೂರ್ವಕವಾಗಿ ಭಾಗವಹಿಸುತ್ತಾರೆ. ಬಾಪು ಅವರು ಸತ್ಯಪ್ರವೇಶದಲ್ಲಿ 'ಯಜ್ಞೇನ-ದಾನೇನ-ತಪಸಾ' ಬಗ್ಗೆ ಹೇಳಿದ್ದಾರೆ. ಅದರಂತೆ ಸ್ತೋತ್ರಪಠಣದ ಜೊತೆಗೆ ಭಕ್ತರು ತಮ್ಮ ಇಚ್ಛೆಯಿಂದ ಅನ್ನಪೂರ್ಣ ಪ್ರಸಾದಮ್ ಯೋಜನೆಗೆ ಧಾನ್ಯ ಇತ್ಯಾದಿಗಳನ್ನು ಅರ್ಪಿಸುತ್ತಾರೆ. ಈ ಬಾರಿ ಪಠಣ ಅವಧಿಯಲ್ಲಿ ಇಚ್ಛೆಯುಳ್ಳ ಭಕ್ತರು ಕೆಳಗಿನ ಲಿಂಕ್ ಮೂಲಕ ಅನ್ನಪೂರ್ಣ ಮಹಾಪ್ರಸಾದಮ್ ಯೋಜನೆಗೆ ದೇಣಿಗೆ ನೀಡಬಹುದು.
 
ಘೋರಕಷ್ಟೋಧ್ಧರಣ ಸ್ತೋತ್ರದ ಕುರಿತು ಒಂದು ಕಥೆಯಿದೆ -
ಶಕ 1833ರಲ್ಲಿ ಅಂದರೆ ಕ್ರಿ.ಶ. 1911ರಲ್ಲಿ ಮಹಾನ್ ಯತಿವರ್ಯ ಶ್ರೀವಾಸುದೇವಾನಂದಸರಸ್ವತಿ ಸ್ವಾಮಿ ಮಹಾರಾಜರ ಇಪ್ಪತ್ತೊಂದನೇ ಚಾತುರ್ಮಾಸ ಕುರುಗಡ್ಡಿಯಲ್ಲಿ ಸಂಪನ್ನವಾಯಿತು. ಅಲ್ಲಿ ಸ್ವಾಮೀಜಿಯ ದರ್ಶನಕ್ಕೆ ಬಂದ ಭಕ್ತನೊಬ್ಬನು ಸಂತಾನಲಾಭ ಹಾಗೂ ಸಾಲ ಮುಕ್ತಿಗಾಗಿ ಪ್ರಾರ್ಥನೆ ಮಾಡಿದನು. ಸ್ವಾಮೀಜಿಯ ಅನುಗ್ರಹದಿಂದ ಕೂಡಲೇ ಆ ಭಕ್ತನಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಹೀಗೆ ಇಬ್ಬರು ಮಕ್ಕಳು ಜನಿಸಿದರು ಮತ್ತು ಅವನ ಮೇಲಿರುವ ಸಾಲವೂ ತೀರಿತು.
 
"ಭಕ್ತರ ಇಚ್ಛೆಗಳು ಈಡೇರಲಿ, ಮತ್ತು ಕಲಿಯುಗದಲ್ಲಿ ಭಕ್ತರು ಎದುರಿಸುತ್ತಿರುವ ಕಷ್ಟಗಳು ದೂರವಾಗಲಿ, ಅವರು ಶಾಶ್ವತ ಶುಭವನ್ನು ಪಡೆಯಲಿ, ನಮ್ಮ  ಕಷ್ಟಗಳು ಹೇಗೆ ದೂರವಾಯಿತು, ನಾವು ಹೇಗೆ ಸುಖಿಯಾದೆವು ಮತ್ತು ಜೊತೆಗೆ ಹೆಚ್ಚು ಭಕ್ತಿಯುಳ್ಳವರಾದೆವು; ಅದೇ ರೀತಿ ಭಕ್ತರ ಕಷ್ಟಗಳು ನಿವಾರಣೆಯಾಗಲು ಒಂದು ಸ್ತೋತ್ರವನ್ನು ಬರೆದುಕೊಟ್ಟರೆ ಎಲ್ಲ ಭಕ್ತರಿಗೂ ಅದರ  ಪ್ರಯೊಜನವಾಗುವದು" ಎಂದು ಆ ಭಕ್ತನು ಸ್ವಾಮೀಜಿಯವರಿಗೆ ವಿನಂತಿಸಿದನು. ಕರುಣಾಮಯ ಹೃದಯದ ಶ್ರೀವಾಸುದೇವಾನಂದಸರಸ್ವತಿ ಸ್ವಾಮಿ ಮಹಾರಾಜರು ಆ ವಿನಂತಿಯನ್ನು ಒಪ್ಪಿಕೊಂಡು ಈ ಘೋರಕಷ್ಟೋಧ್ಧರಣ ಸ್ತೋತ್ರವನ್ನು ರಚಿಸಿದರು.
 
ಧನ್ಯನಾದನು ಆ ಭಕ್ತನು ಮತ್ತು ಧನ್ಯರಾದರು ಶ್ರೀಮಹಾರಾಜರು. ಪವಿತ್ರ ದತ್ತಕ್ಷೇತ್ರ ನೃಸಿಂಹವಾಡಿಯಲ್ಲಿ ಈ ಸ್ತೋತ್ರವನ್ನು ನಿತ್ಯ ಪಠಿಸಲಾಗುತ್ತದೆ.
 
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಈ ಘೋರಕಷ್ಟೋಧ್ಧರಣ ಸ್ತೋತ್ರದ ಸಾಮೂಹಿಕ ಪಠಣ ಸಂಸ್ಥೆಯ ಪರವಾಗಿ ಆಯೋಜಿಸಲಾಗುತ್ತದೆ. ಗುರುವಾರವನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಮತ್ತು ಸಂಜೆ 5:30 ರಿಂದ ರಾತ್ರಿ 9:00 ರವರೆಗೆ ಪಠಣ ನಡೆಯುತ್ತದೆ. ಗುರುವಾರ ದಿನ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಮತ್ತು ಮಧ್ಯಾಹ್ನ 4:00 ರಿಂದ ಸಂಜೆ 7:00 ರವರೆಗೆ ಪಠಣ ನಡೆಯುತ್ತದೆ. ಮತ್ತು ಭಕ್ತರ ಸೌಲಭ್ಯಕ್ಕಾಗಿ ಒಂದು ದಿನ ಆನ್ ‌ಲೈನ್ ಪಠಣವೂ ಏರ್ಪಡಿಸಲಾಗುತ್ತದೆ.
 
ಈ ಸ್ತೋತ್ರದ ಕೊನೆಯ ಶ್ಲೋಕದ ಪ್ರಕಾರ, ಈ ಸ್ತೋತ್ರ ಪಠಣದಿಂದ ಸದ್ಧರ್ಮ, ಪ್ರೇಮ, ಸದ್ಬುದ್ಧಿ, ಇಶ್ವರ ಭಕ್ತಿ ಮತ್ತು ಸತ್ಸಂಗ ದೊರೆಯುತ್ತದೆ. ಮಾನವನ ಲೋಕಿಕ ಮತ್ತು ಆಧ್ಯಾತ್ಮಿಕ ಇಚ್ಛೆಗಳು ಈಡೇರುತ್ತವೆ. ಭಗವಂತನ ಮೇಲಿನ ಪ್ರೀತಿ, ಭಗವಂತನ ಬಗ್ಗೆ ಆಕರ್ಷಣೆ ಹೆಚ್ಚಾಗುತ್ತದೆ. ಪರಮಾನಂದಸ್ವರೂಪ ಶ್ರೀಗುರು ದತ್ತಾತ್ರೇಯರಿಗೆ ನಮಸ್ಕರಿಸಿ, "ಘೋರಕಷ್ಟಗಳಿಂದ ನಮ್ಮನ್ನು ಉದ್ಧರಿಸು" ಎಂಬ ಮನವಿಯೂ ಈ ಸ್ತೋತ್ರದಲ್ಲಿ ಇದೆ.
 
ಈ ಸ್ತೋತ್ರದಲ್ಲಿ "ಶ್ಲೋಕಪಂಚಕಮೇತದ್ಯೋ ಲೋಕಮಂಗಲವರ್ಧನಮ್। ಪ್ರಪಠೇನ್ನಿಯತೋ ಭಕ್ತ್ಯಾ ಸ ಶ್ರೀದತ್ತಪ್ರಿಯೋ ಭವೇತ್॥" ಎಂದು ಕೊನೆಯಲ್ಲಿ ಹೇಳಲಾಗಿದೆ. ಇದರಿಂದ ನಮಗೆ ತಿಳಿಯುತ್ತದೆ ಈ ಸ್ತೋತ್ರ ಜಗತ್ತಿಗೆ ಮಂಗಳಕರವಾಗಿದೆ". ಈ ಸ್ತೋತ್ರವನ್ನು ಸಂಪೂರ್ಣ ನಂಬಿಕೆಯಿಂದ ಪಠಿಸುವ ಭಕ್ತನು ಶ್ರೀಗುರು ದತ್ತಾತ್ರೇಯರಿಗೆ ಪ್ರಿಯನಾಗುತ್ತಾನೆ" ಎಂದು ಶ್ರೀವಾಸುದೇವಾನಂದಸರಸ್ವತಿ ಹೇಳುತ್ತಾರೆ. ‘ಶ್ರೀ ಗುರುವಿಗೆ ಪ್ರಿಯನಾಗುವುದು’  - ಇದು ಭಕ್ತನಿಗೆ ಅತಿ ಶ್ರೇಷ್ಠ ಸಾಧನೆ ಆಗಿದೆ.

ಶ್ರದ್ಧಾವಾನರು ತಮ್ಮ ಲೌಕಿಕ ಸಮಸ್ಯೆಗಳನ್ನು ಪರಿಹರಿಸುವ, ಅವರ ಆಸೆಗಳನ್ನು ಪೂರೈಸುವ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವ ಈ ಪರಿಣಾಮಕಾರಿ ದತ್ತ ಸ್ತೋತ್ರವನ್ನು ಪಠಿಸುವ ಅವಕಾಶ ಸದ್ಗುರು ಶ್ರೀ ಅನಿರುದ್ಧರಿಂದ ಸಿಕ್ಕಿತು

ಭಕ್ತಿಯಿಂದ ಸೇವೆಯ ವಿವಿಧ ಆಯ್ಕೆಗಳನ್ನು ಶ್ರದ್ಧಾವಂತರಿಗೆ ಲಭ್ಯವಾಗುವಂತೆ ಮಾಡಿರುವ ಬಾಪೂರವರು ಎ.ಎ.ಡಿ.ಎಮ್. (ಅನಿರುದ್ಧಾಜ್ ಅಕಾಡೆಮಿ ಆಫ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್) ಅನ್ನು ಸ್ಥಾಪಿಸಿರುವುದೇ ಮೂಲತಃ ಘೋರಕಷ್ಟೋದ್ಧರಣ ಸ್ತೋತ್ರದ ಪ್ರಾತ್ಯಕ್ಷಿಕ (ಪ್ರ್ಯಾಕ್ಟಿಕಲ್) ರೂಪವಾಗಿದೆ.


No comments:

Post a Comment