ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 9

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 9

ಮಲ್ಹಾರ್ ರಾವ್ ಮಾತನಾಡುತ್ತಾ-ಮಾತನಾಡುತ್ತಾ ಕ್ಷಣಕಾಲ ನಿಂತರು. ಅವರ ಗಂಟಲು ತುಂಬಿ ಬಂದಿತ್ತು ಮತ್ತು ಕಣ್ಣಂಚುಗಳು ಒದ್ದೆಯಾಗಿದ್ದವು. ಅಲ್ಲಿದ್ದ ಎಲ್ಲಾ ಉಪಸ್ಥಿತರ ಪರಿಸ್ಥಿತಿಯೂ ಹೆಚ್ಚು ಕಡಿಮೆ ಹಾಗೆಯೇ ಆಗಿತ್ತು. ಅದೇ ಕೋಣೆಯಲ್ಲಿ ಮಲ್ಹಾರ್ ರಾವರ ಎಡಗೈ ಕಡೆಗಿನ ಮೂಲೆಯಲ್ಲಿ ಕುಳಿತಿದ್ದ ಮೂವರು ಸ್ತ್ರೀಯರ ಸ್ಥಿತಿ ಮಾತ್ರ ತುಂಬಾ ವಿಭಿನ್ನವಾಗಿತ್ತು.

ಮೊದಲ ಸ್ತ್ರೀ ಎಂದರೆ ಇಪ್ಪತ್ತೊಂದು ವರ್ಷ ಮುಗಿಸಿ ಇಪ್ಪತ್ತೆರಡನೆಯ ವರ್ಷ ನಡೆಯುತ್ತಿರುವ ಜಾನಕಿಬಾಯಿ - ‘ಆದ್ಯ ಹುತಾತ್ಮ ಮಂಗಲ್ ಪಾಂಡೆ ಕೂಡ ಇಪ್ಪತ್ತೆರಡು ವರ್ಷದವನಾಗಿದ್ದನು. ನಾನೂ ಇಪ್ಪತ್ತೆರಡು ವರ್ಷದವಳೇ. ಎದೆಯಲ್ಲಿ ಗುಂಡು ಹೊಕ್ಕುವಾಗ ಎಷ್ಟು ಸುಂದರವೆನಿಸುತ್ತಿರಬಹುದು ಅಲ್ವಾ! ಭಗವಂತನೇ! ನನಗೂ ಹೀಗೆಯೇ ಆಗಲಿ.’

ಎರಡನೆಯ ಸ್ತ್ರೀ, ಫಡ್ಕೆ ಮಾಸ್ತರರ ಪತ್ನಿ ಕಮಲಾಬಾಯಿ. ಈ ಹಿರಿಯ ಹಾಗೂ ಅನುಭವಿ ಸ್ತ್ರೀ ‘ಅವಳಿಗೆ ಏನೇನು ಮಾಡಲು ಸಾಧ್ಯ’ ಎಂಬ ಆಲೋಚನೆಯನ್ನೇ ಮಾಡುತ್ತಿದ್ದಳು, ಆದರೆ ತಲೆಯನ್ನು ಶಾಂತವಾಗಿಯೇ ಇಟ್ಟುಕೊಂಡಿದ್ದಳು.

ಮೂರನೆಯ ಸ್ತ್ರೀ, ಗೋವಿಂದದಾಜಿಯವರ ಮಗಳು ಸೌ. ಮಂಜುಳಾಬಾಯಿ. ಇವಳ ಅತ್ತೆಮನೆ ಕೂಡ ಅದೇ ಊರಿನಲ್ಲಿತ್ತು. ಇವಳಿಗೆ ಒಂದು ವರ್ಷದ ಮಗುವಿತ್ತು ಮತ್ತು ಅದು ಅವಳ ಮಡಿಲಲ್ಲಿಯೇ ಮಲಗಿತ್ತು. ಇವಳ ವಯಸ್ಸು ಕೂಡ ಇಪ್ಪತ್ತೆರಡೇ ಆಗಿತ್ತು. ಇವಳು ಮೊದಲಿನಿಂದಲೂ ಗೋವಿಂದದಾಜಿಯವರ ಕೈಕೆಳಗೆ ಅವರ ಎಲ್ಲಾ ಕಾರ್ಯಸ್ಥಾನಗಳಲ್ಲಿ ಕಳೆದ ಮೂರು ವರ್ಷಗಳಿಂದ ಸಹಾಯ ಮಾಡುತ್ತಿದ್ದಳು. ಅವಳು ಜಾನಕಿಬಾಯಿಯ ಜೀವದ ಗೆಳತಿಯಾಗಿದ್ದಳು. ಅವಳ ಪತಿ ‘ವಾಸುದೇವ ಗೋವಿಂದ’ ರಾಮಚಂದ್ರ ಧಾರ್‌ಪುರ್‌ಕರ್ ಅವರಷ್ಟೇ ಆಪ್ತ ಮಿತ್ರನಾಗಿದ್ದನು ಹಾಗೂ ಮುಂಬೈ ಮತ್ತು ಧಾರ್‌ಪುರ್ ನಡುವಿನ ಮಾನವ ಸೇತುವೆ (Bridge) ಆಗಿದ್ದನು. ಮಂಜುಳಾಬಾಯಿಯ ಮಗನ ಹೆಸರು ‘ಮಂಗಲಪ್ರಸಾದ್’ ಎಂದೇ ಇತ್ತು - ಬೇಕೆಂದೇ ಇಟ್ಟಿದ್ದು. ಮಂಗಲ್ ಪಾಂಡೆಯೇ ತನ್ನ ಹೊಟ್ಟೆಯಲ್ಲಿ ಹುಟ್ಟಿ ಬಂದಿದ್ದಾನೆ ಎಂದು ಅವಳಿಗೆ ಅನಿಸುತ್ತಿತ್ತು.

ಒಂದು ಐದು ನಿಮಿಷಗಳ ನಂತರ ವಾತಾವರಣ ಸ್ವಲ್ಪ ಹಗುರವಾಯಿತು. ಸಂಪತ್ ರಾವ್ ಸ್ವಲ್ಪ ಅಂಜುತ್ತಲೇ ಪ್ರಶ್ನೆ ಕೇಳಿದನು, “ಮಲ್ಹಾರ್ ರಾವ್! ಮಂಗಲ್ ದಿವಾಕರ್ ಪಾಂಡೆ ಬಲಿದಾನ ಮಾಡಿದನು, ಇದು ಶ್ರೇಷ್ಠ ವಿಷಯವೇ. ಆದರೆ ನೀವು ಅದನ್ನೇ ‘ಮೊದಲ ಬಲಿದಾನ’ ಎಂದು ಏಕೆ ಕರೆಯುತ್ತೀರಿ? ಆ ನಂದಕುಮಾರ್ ನನ್ನೂ ಗಲ್ಲಿಗೇರಿಸಲಾಗಿತ್ತು ಅಲ್ವಾ?”

ಮಲ್ಹಾರ್ ರಾವ್ ಹೇಳಿದರು, “ನಂದಕುಮಾರ್ ನನ್ನು ಬ್ರಿಟಿಷ್ Officer ಕಪಟವೃತ್ತಿಯನ್ನು ಬಳಸಿ ಗಲ್ಲಿಗೇರಿಸಿದ್ದನು, ಇದು ಖಂಡಿತ; ಆದರೆ ಅವನೇನು ಸ್ವಾತಂತ್ರ್ಯ ಹೋರಾಟಗಾರನಾಗಿರಲಿಲ್ಲ. ಅವನು ಬ್ರಿಟಿಷರಿಗಾಗಿ ಭಾರತೀಯ ಜನರಿಂದ Tax ವಸೂಲಿ ಮಾಡುವ ಕೆಲಸ ಮಾಡುತ್ತಿದ್ದನು ಮತ್ತು ಅದರಲ್ಲಿನ ಕೆಲವು ಪಾಲನ್ನು ಅವನು ಭ್ರಷ್ಟ ಬ್ರಿಟಿಷ್ ಅಧಿಕಾರಿಗಳಿಗೆ ಅವರ ಮೋಜು-ಮಸ್ತಿಗಾಗಿ ಕೊಡುತ್ತಿದ್ದನು. ಒಮ್ಮೆ ಪ್ರಸಂಗವಶಾತ್ ಅಂದರೆ

ಹಣದ ಮುಗ್ಗಟ್ಟು ಇದ್ದ ಕಾರಣ ನಂದಕುಮಾರ್, ಜಮೆಯಾದ Tax ನಲ್ಲಿನ ಕೆಲವು ಪಾಲನ್ನು ತನ್ನ ಬಳಿಯೇ ಇಟ್ಟುಕೊಳ್ಳಲು ಪ್ರಾರಂಭಿಸಿದನು ಮತ್ತು ಅದಕ್ಕಾಗಿ ಅವನನ್ನು ಗಲ್ಲಿಗೇರಿಸಲಾಯಿತು.

ಇದು ಸ್ವಾತಂತ್ರ್ಯ ಯುದ್ಧದ ಬಲಿದಾನವಾಗಿರಲಿಲ್ಲ, ಆದರೆ ಬ್ರಿಟಿಷರ ಹಿಂಸಕ ಹಾಗೂ ಕ್ರೂರ ದಬ್ಬಾಳಿಕೆಯ ಉದಾಹರಣೆಯಾಗಿತ್ತು. ಕೇವಲ ಸ್ವಲ್ಪ ಹಣದ ಕಳ್ಳತನಕ್ಕಾಗಿ ಗಲ್ಲಿಗೇರಿಸುವುದು ಮತ್ತು ಅದೂ ಕೂಡ 70 ವರ್ಷದ ವ್ಯಕ್ತಿಯನ್ನು, ಇದು ಖಂಡಿತವಾಗಿಯೂ ಅನ್ಯಾಯದ ವಿಷಯವಾಗಿತ್ತು, ಆದರೆ ಬಲಿದಾನದ್ದಲ್ಲ.”

ಸಂಪತ್ ರಾವ್ ಮತ್ತೆ ಒಂದು ಪ್ರಶ್ನೆ ಕೇಳಿದನು, “ಮಂಗಲ್ ಪಾಂಡೆಯ ಬಲಿದಾನವಾಯಿತು, ಆ ಜಾಗದಲ್ಲಿ ಒಂದು ಸಾಧಾರಣ ಕಲ್ಲನ್ನಾದರೂ ಇಡಲಾಗಿದೆಯೇ?”

ಮಲ್ಹಾರ್ ರಾವ್ ಭಗವಂತನಿಗೆ ಕೈ ಮುಗಿಯುತ್ತಾ ಹೇಳಿದರು, “ಮಂಗಲ್ ದಿವಾಕರ್ ಪಾಂಡೆಯ ಬಲಿದಾನದ ನಂತರ ಕೇವಲ ಒಂದೇ ತಿಂಗಳಲ್ಲಿ, ಅವನ ಒಬ್ಬ ಆಪ್ತ ಮಿತ್ರ ‘ಧನ್‌ಸಿಂಗ್ ಗುರ್ಜರ್’ ಆ ಜಾಗದಲ್ಲಿ ಒಂದು ನಿರ್ದಿಷ್ಟ ಆಕಾರದ ಕಲ್ಲನ್ನು ಹೂತು, ಅದರ ಪಕ್ಕದಲ್ಲಿ ಒಂದು ತುಳಸಿ ಗಿಡವನ್ನು ನೆಟ್ಟನು. (ಮುಂದೆ ಸ್ವಾತಂತ್ರ್ಯದ ನಂತರ ಇದೇ ಜಾಗದಲ್ಲಿ ಮಂಗಲ್ ಪಾಂಡೆಯ ಸ್ಮಾರಕವನ್ನು ನಿರ್ಮಿಸಲಾಗಿದೆ.)

ಧನ್‌ಸಿಂಗ್ ಗುರ್ಜರ್ ಮೀರತ್ ನಲ್ಲಿದ್ದ ಬ್ರಿಟಿಷ್ ಠಾಣೆಯಲ್ಲಿ ಕೊತ್ವಾಲನ ಹುದ್ದೆಯಲ್ಲಿದ್ದನು. ಅವನ ಕೈಕೆಳಗೆ 50 ಸೈನಿಕರಿದ್ದರು. ಮಂಗಲ್ ಪಾಂಡೆ ಧನ್‌ಸಿಂಗ್ ನೊಂದಿಗೆ ಮೃತ್ಯುವಿಗೂ ಮುನ್ನ ಸತತ ಮೂರು ದಿನ ಚರ್ಚೆ ಮಾಡಿದ್ದನು, ಆದರೆ ಧನ್‌ಸಿಂಗ್ ಗುರ್ಜರ್ ಗೆ ಲೆಫ್ಟಿನೆಂಟ್ ಬಾಗ್ ತಕ್ಷಣ ಹಿಂದಿರುಗಲು ಆಜ್ಞೆ ನೀಡಿದ್ದನು, ಆದಕಾರಣ ಅವನಿಗೆ ಹಿಂದಿರುಗಲೇಬೇಕಾಯಿತು.

ಧನ್‌ಸಿಂಗ್ ಗುರ್ಜರ್ ಬಳಿ ಆ ಸಮಯದಲ್ಲಿ ಅವನೊಂದಿಗೆ ಕೇವಲ ಒಬ್ಬನೇ ಸೈನಿಕನಿದ್ದನು ಆದ್ದರಿಂದ ಅವನು ಶಾಂತವಾಗಿದ್ದನು, ಆದರೆ ಮೀರತ್ ಠಾಣೆಗೆ ತಲುಪಿದ ಕೆಲವೇ ಗಂಟೆಗಳಲ್ಲಿ ಅವನಿಗೆ ‘ಬರಾಕ್‌ಪೋರ್ ನಲ್ಲಿ ಮಂಗಲ್ ಪಾಂಡೆ ಏನು ಮಾಡಿದನು’ ಎಂಬ ಸುದ್ದಿ ತಿಳಿಯಿತು ಹಾಗೂ ಒಳಗಿನಿಂದಲೇ ಕೆರಳಿ ನಿಂತ ಕೊತ್ವಾಲ್ ಧನ್‌ಸಿಂಗ್ ಗುರ್ಜರ್ ಜೋರಾಗಿ ಕೆಲಸಕ್ಕೆ ಇಳಿದನು. ಅವನು ಒಬ್ಬೊಬ್ಬರನ್ನೇ ಕೂಡಿಸಲು ಪ್ರಾರಂಭಿಸಿದನು ಹಾಗೂ ಸ್ವತಃ ತನ್ನ ಐವತ್ತು ಸೈನಿಕರು ಮತ್ತು ಇತರ ಗುಂಪಿನ ಐವತ್ತು ಸೈನಿಕರು ಹೀಗೆ ನೂರು ಜನರ ಸಣ್ಣ ಸೈನ್ಯವನ್ನು ತಯಾರು ಮಾಡಿದನು. 9 ಏಪ್ರಿಲ್ 1857 ರಂದು ಮೀರತ್ ಠಾಣೆಯಲ್ಲಿ ಮಂಗಲ್ ಪಾಂಡೆಯ ಗಲ್ಲು ಶಿಕ್ಷೆಯ ಸುದ್ದಿ ಬಂದು ತಲುಪಿತು. ಠಾಣೆಯಲ್ಲಿದ್ದ ಬಹುತೇಕ ಪ್ರತಿಯೊಬ್ಬ ಸೈನಿಕನೂ ಸಿಟ್ಟಿಗೆದ್ದಿದ್ದನು, ಆದರೆ ಪ್ರಯೋಜನವೇನು? ಆ ಎರಡು ಸಾವಿರ ಸೈನಿಕರ ಪೈಕಿ ಕೇವಲ ನಲ್ವತ್ತು ಜನ ಧನ್‌ಸಿಂಗ್ ಗುಂಪಿಗೆ ಸೇರುವ ಧೈರ್ಯ ತೋರಿಸಿದರು. ಮಿಕ್ಕವರು ಸುಮ್ಮನೆ ಉಳಿದರು.

ಧನ್‌ಸಿಂಗ್ ಗುರ್ಜರ್ ನ ನೂರ ನಲ್ವತ್ತು ಸೈನಿಕರಿಗೆ ತಮ್ಮಲ್ಲಿದ್ದ ಕಾಡತೂಸುಗಳನ್ನು ಕೊಡುವ ಧೈರ್ಯ ಕೂಡ ಉಳಿದ ಸೈನಿಕರಲ್ಲಿದ್ದ ಕೇವಲ ಮೂವತ್ತು-ನಲ್ವತ್ತು ಜನರಲ್ಲಿ ಮಾತ್ರ ಇತ್ತು, ಆದರೆ ಧನ್‌ಸಿಂಗ್ ಗುರ್ಜರ್ ನ ತೇಜಃಪುಂಜ ಮಾತುಗಳು ಮೆಲ್ಲಮೆಲ್ಲನೆ ಇತರರ ಮೇಲೆ ಪರಿಣಾಮ ಬೀರಲಾರಂಭಿಸಿದವು ಮತ್ತು ನಂತರ ಸಾಕಷ್ಟು ಕಾಡತೂಸುಗಳು ಜಮೆಯಾಗತೊಡಗಿದವು ಮತ್ತು ಅವನ ಸೈನಿಕರ ಸಂಖ್ಯೆಯೂ 250 ರವರೆಗೆ ತಲುಪಿತು. 21

ಏಪ್ರಿಲ್ ರಂದು ಈಶ್ವರಿಪ್ರಸಾದ್ ಗೂ ಗಲ್ಲು ಶಿಕ್ಷೆ ನೀಡಲಾಯಿತು, ಈ ಸುದ್ದಿ ಬಂದ ಮೇಲಂತೂ ಹೆಚ್ಚೆಚ್ಚು ಸೈನಿಕರು ಮುಂದೆ ಬರಲಾರಂಭಿಸಿದರು ಹಾಗೂ ಸ್ವಾತಂತ್ರ್ಯ ಯುದ್ಧದ ಬೆಂಕಿ ಹತ್ತಿರದ ಇತರ ಏಳು ಠಾಣೆಗಳಲ್ಲಿಯೂ ಹಬ್ಬಿತು.

ಪರಸ್ಪರ ಸುದ್ದಿಗಳ ಹಾಗೂ ಸಂದೇಶಗಳ ವಿನಿಮಯವಾಗತೊಡಗಿತು. ಪ್ರತಿ ಠಾಣೆಗೂ ಮತ್ತು ನೆಲೆಗೂ ಅವರವರ ಗುರಿಯನ್ನು ನೇಮಿಸಿ ಕೊಡಲಾಯಿತು ಮತ್ತು 10 ಮೇ 1857 ರಂದು ಕೊತ್ವಾಲ್ ಧನ್‌ಸಿಂಗ್ ಗುರ್ಜರ್ ನ ನೇತೃತ್ವದಲ್ಲಿ ಮೀರತ್ ಠಾಣೆಯಲ್ಲಿದ್ದ ಬ್ರಿಟಿಷ್ Officers ಇದ್ದ ನೆಲೆಯ ಮೇಲೆ ಜೋರಾದ ದಾಳಿ ಮಾಡಲಾಯಿತು.

ಧನ್‌ಸಿಂಗ್ ನ ಓಜಸ್ವಿ ಮಾತಿನಿಂದ ಹಾಗೂ ಪ್ರಚಂಡ ತಲಮಲದಿಂದಾಗಿ ಸುಮಾರು 600 ಸೈನಿಕರು ಬೇರೆ ಬೇರೆ ನೆಲೆಗಳಿಂದ ತುರ್ತಾಗಿ ಮೀರತ್ ಗೆ ತಲುಪಿದ್ದರು ಮತ್ತು ಅವರೂ ಕೂಡ ಸಶಸ್ತ್ರರಾಗಿದ್ದರು.

ಸಂಪೂರ್ಣ ಪಶ್ಚಿಮ ಉತ್ತರ ಪ್ರದೇಶ, ದೆಹಲಿ, ಆಗ್ರಾ, ಡೆಹರಡೂನ್, ಬಿಜನೋರ್, ಪಂಜಾಬ್, ರಾಜಸ್ಥಾನ, ಝಾನ್ಸಿ ಹಾಗೂ ಮಹಾರಾಷ್ಟ್ರದಿಂದ ಕ್ರಾಂತಿಕಾರಿ ವಿಚಾರಗಳಿಂದ ಪ್ರೇರಿತರಾದ ಸಾಮಾನ್ಯ ನಾಗರಿಕರು ಕುಡುಗೋಲು, ಕತ್ತಿ, ಗರಗಸ, ಸುತ್ತಿಗೆ, ಕೊಡಲಿ, ದೊಣ್ಣೆಯಂತಹ ಶಸ್ತ್ರಗಳನ್ನು ತೆಗೆದುಕೊಂಡು ಮೀರತ್ ಗೆ ಬಂದು ತಲುಪಿದ್ದರು ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು.

ಮೀರತ್ ನ ಆಸುಪಾಸಿನ ಹಳ್ಳಿಗಳ ಅಕ್ಷರಶಃ ಸಾವಿರಾರು ಗುರ್ಜರ್ ಜಾತಿಯ ಹಳ್ಳಿಗರು ಸಿಕ್ಕ ಶಸ್ತ್ರದೊಂದಿಗೆ ಅಲ್ಲಿ ಜಮೆಯಾಗಿದ್ದರು.

10 ಮೇ ರಾತ್ರಿ 9 ಗಂಟೆಗೆ ಧನ್‌ಸಿಂಗ್ ಹಾಗೂ ಅವನ ಒಂದು ತುಕಡಿ ಮೀರತ್ ಠಾಣೆಯ ಬ್ರಿಟಿಷ್ ಅಧಿಕಾರಿಗಳ ಕಟ್ಟಡದ ಮೇಲೆ ದಾಳಿ ನಡೆಸಿತು ಹಾಗೂ ಅವರೆಲ್ಲರನ್ನೂ ಬಂದಿವಾನ್ ಮಾಡಿತು. ರಾತ್ರಿ ಎರಡು ಗಂಟೆಗೆ ಮೀರತ್ ನಲ್ಲಿದ್ದ ಪ್ರಮುಖ ಜೈಲನ್ನು ಮುರಿದು 876 ಕೈದಿಗಳನ್ನು ಬಿಡಿಸಲಾಯಿತು ಹಾಗೂ ತಮ್ಮೊಂದಿಗೆ ಸೇರಿಸಿಕೊಳ್ಳಲಾಯಿತು. ನಂತರ ಜೈಲಿಗೆ ಬೆಂಕಿ ಹಚ್ಚಲಾಯಿತು.

ಬೆಳಗಾಗುವಷ್ಟರಲ್ಲಿ ಇಪ್ಪತ್ತೆರಡು ಬ್ರಿಟಿಷ್ Officers ಕೊಲ್ಲಲ್ಪಟ್ಟಿದ್ದರು, 80 ಬ್ರಿಟಿಷ್ Soldiers ಕೊಲ್ಲಲ್ಪಟ್ಟಿದ್ದರು ಮತ್ತು ಸುಮಾರು ಅಷ್ಟೇ ಜನ ಧನ್‌ಸಿಂಗ್ ನ ಸೆರೆಯಲ್ಲಿದ್ದರು.

‘ಶಹೀದ್ ಮಂಗಲ್ ಪಾಂಡೆ ಅಮರ್ ರಹೇ’ ಎಂಬ ಘೋಷಣೆ ಕೂಗುತ್ತಾ, ಸಾಧಾರಣ ಶಸ್ತ್ರ ಹಿಡಿದಿದ್ದ, ದೇಶಾದ್ಯಂತ ಬಂದಿದ್ದ ಸಾವಿರಾರು ಭಾರತೀಯ ನಾಗರಿಕರು ಮೀರತ್ ನಲ್ಲಿದ್ದ, ಬ್ರಿಟಿಷರಿಗೆ ಸಂಬಂಧಿಸಿದ ಪ್ರತಿಯೊಂದು ಕಟ್ಟಡ, ಕಾಗದಪತ್ರ, ಪೊಲೀಸ್ ಠಾಣೆ ಹಾಗೂ ಇಂತಹ ಅನೇಕ ವಿಷಯಗಳನ್ನು ಅಕ್ಷರಶಃ ಸುಟ್ಟು ಬೂದಿ ಮಾಡಿದ್ದರು.

ನಂತರ ಅವರಲ್ಲಿನ ಅರ್ಧ ಸೈನಿಕರು ಹಾಗೂ ಅರ್ಧ ನಾಗರಿಕರು 12 ಮೇ ರಂದು ದೆಹಲಿಯವರೆಗೆ ಹೋಗಿ ತಲುಪಿದರು ಹಾಗೂ ವಿದ್ರೋಹ ಮೀರತ್ ನ ಅಕ್ಕಪಕ್ಕದ ಹಳ್ಳಿಗಳಲ್ಲಿ ಕೂಡ ಹಬ್ಬಿತು.

ಬ್ರಿಟಿಷ್ ಕಂಪನಿ ಸರ್ಕಾರ ಜೋರಾದ ಪ್ರತಿದಾಳಿ ಮಾಡಲು ಪ್ರಾರಂಭಿಸಿತು. ಬ್ರಿಟಿಷರ ಬಳಿ ಸೈನ್ಯಬಲವೂ ದೊಡ್ಡದಿತ್ತು ಹಾಗೂ ಶಸ್ತ್ರಾಸ್ತ್ರಗಳಂತೂ ವಿಫುಲವಾಗಿದ್ದವು ಮತ್ತು ಹೆಚ್ಚು ಪರಿಣಾಮಕಾರಿಯೂ ಆಗಿದ್ದವು.

ಈ ವಿದ್ರೋಹದ ಬೆಂಕಿ ದೆಹಲಿಯಲ್ಲಿ ಕೂಡ ಹಬ್ಬುತ್ತಿರುವುದನ್ನು ಕಂಡು ಉತ್ತರಪ್ರದೇಶ, ಪಂಜಾಬ್, ಬಂಗಾಳ, ಮಹಾರಾಷ್ಟ್ರ ಹಾಗೂ ಪಾಟ್ನಾದಲ್ಲಿಯೂ ಇಂತಹದೇ ಘಟನೆಗಳು ನಡೆಯುತ್ತಿವೆ ಎಂಬುದನ್ನು ಕಂಡು ಬ್ರಿಟಿಷ್ ಕಂಪನಿ ಸರ್ಕಾರ ಸಿಟ್ಟಿಗೆದ್ದಿತು. ಅವರಿಗೆ ತಮ್ಮ ಅಧಿಕಾರ ಹೋಗುವ ಅಪಾಯ ಕಾಣಿಸತೊಡಗಿತು.

ಕೆಲವು ಕಡೆ ಮಾತ್ರ ಬ್ರಿಟಿಷ್ ಗೆಲ್ಲುತ್ತಿದ್ದರು, ಆದರೆ ಬಹುತೇಕ ಕಡೆ ಸ್ವಾತಂತ್ರ್ಯ ಹೋರಾಟಗಾರರೇ ಗೆಲ್ಲುತ್ತಿದ್ದರು. ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನ ಬಾಯಲ್ಲಿ ಮೂರೇ ಘೋಷಣೆಗಳಿದ್ದವು. ‘1) ಫಿರಂಗಿ ಕೋ ಮಾರ್ ಡಾಲೋ. 2) ಶಹೀದ್ ಮಂಗಲ್ ಪಾಂಡೆ ಅಮರ್ ರಹೇ. ಮತ್ತು 3) ಕ್ರಾಂತಿಸೂರ್ಯ ಧನ್‌ಸಿಂಗ್ ಗುರ್ಜರ್ ಕಿ ಜೈ ಹೋ.’ ಮೂರು ತಿಂಗಳು ಈ ಚಕಮಕಿ ನಡೆಯುತ್ತಲೇ ಇತ್ತು ಮತ್ತು ಬ್ರಿಟಿಷರು ಚೆನ್ನಾಗಿಯೇ ಏಟು ತಿನ್ನಬೇಕಾಯಿತು.

ಕೊನೆಗೆ ಬ್ರಿಟಿಷರು ಕಪಟನೀತಿಯನ್ನು ಬಳಸಿ, ಧನ್‌ಸಿಂಗ್ ಆ ಸಮಯದಲ್ಲಿ ಇದ್ದ ಮೀರತ್ ಹತ್ತಿರದ ಹಳ್ಳಿಯ ಮೇಲೆ (ಪಾನ್ಸಲಿ ಅಥವಾ ಗಗೋಲ್) ಹತ್ತು ದೊಡ್ಡ ಫಿರಂಗಿಗಳಿಂದ ಅತ್ಯಂತ ಕ್ರೂರ ದಾಳಿ ಮಾಡಿದರು ಮತ್ತು 500 ಕುದುರೆ ಸವಾರ ಸಿಪಾಯಿಗಳು ಹಳ್ಳಿಯೊಳಗೆ ನುಗ್ಗಿ ಕಗ್ಗೊಲೆ ಮಾಡಲು ಪ್ರಾರಂಭಿಸಿದರು. ಅಕ್ಷರಶಃ ಸಾವಿರಾರು ಪುರುಷರು ಹಾಗೂ ಸ್ತ್ರೀಯರನ್ನು ಕತ್ತರಿಸಲಾಯಿತು ಮತ್ತು ಉಳಿದವರನ್ನು ಗಲ್ಲಿಗೇರಿಸಲಾಯಿತು ಮತ್ತು ಅದೂ ಕೂಡ ಪ್ರತಿಯೊಂದು ಚೌಕಗಳಲ್ಲಿ.

ಧನ್‌ಸಿಂಗ್ ಗುರ್ಜರ್ ಕೊತ್ವಾಲ್ ಇಲ್ಲಿಯೇ ಹುತಾತ್ಮನಾದನು ಹಾಗೂ ಅದೂ ಕೂಡ ಸುಮಾರು ನೂರು ಬ್ರಿಟಿಷ್ ಸೈನಿಕರನ್ನು ಕೊಂದು ಹಾಕಿಯೇ.

ಈ ಹಳ್ಳಿಯಲ್ಲಿಯೇ ಧನ್‌ಸಿಂಗ್ ಗುರ್ಜರ್ ಗೆ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಪ್ರಬಲ ಬೆಂಬಲವಿತ್ತು ಎಂಬ ಪುರಾವೆಗಳು ಬ್ರಿಟಿಷರ ಕೈಗೆ ಸಿಕ್ಕಿದವು ಹಾಗೂ ಒಂದೇ ರಾತ್ರಿಯಲ್ಲಿ ಬ್ರಿಟಿಷರಿಗೆ ಬಡ ಸ್ವಭಾವದ, ಅಸಹಾಯಕ, ಏಕಾಂಗಿ ವಿಧವೆ ರಾಣಿ ಲಕ್ಷ್ಮೀಬಾಯಿ ಪ್ರಚಂಡ ಅಪಾಯಕಾರಿ ಎನಿಸತೊಡಗಿದಳು.”

(ಕಥೆ ಮುಂದುವರೆಯುವುದು)