ಮಲ್ಹಾರರಾವ್ ಅವರು ಖಚಿತವಾಗಿ ಮತ್ತು ಸ್ಪಷ್ಟ ಶಬ್ದಗಳಲ್ಲಿ ಹೇಳಿದರು, “ಮಂಗಲ ಪಾಂಡೆಯ ಬಗ್ಗೆ ಬ್ರಿಟಿಷರು, ಬ್ರಿಟಿಷರ ಪರವಾದ ವೃತ್ತಪತ್ರಿಕೆಗಳು, ಸರ್ಕಾರಿ ನೌಕರರು, ವ್ಯಾಪಾರಿಗಳು ಮತ್ತು ಗೂಢಚಾರರನ್ನು ಉಪಯೋಗಿಸಿಕೊಂಡು ಇಂತಹ ಸುದ್ದಿಯನ್ನೇ ಹರಡಿಸಿದರು: ‘ಮಂಗಲ ಪಾಂಡೇ ಅವನು ಭಾಂಗ್ ಸೇವಿಸಿದ್ದ ಮತ್ತು ಅವನು ಯಾವಾಗಲೂ ಅಫೀಮು (opium) ತೆಗೆದುಕೊಳ್ಳುತ್ತಿದ್ದ ಮತ್ತು ಆ ನಶೆಯಲ್ಲಿಯೇ ಅವನು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ. ಅವನ ಹಿಂದೆ ಭಾರತದ ಬಗ್ಗೆ ಯಾವುದೇ ಮೌಲ್ಯವಿರಲಿಲ್ಲ.’
ಆದರೆ ಇದೆಲ್ಲವೂ ಸಂಪೂರ್ಣ ಮತ್ತು ಶುದ್ಧ ಸುಳ್ಳು. ಫಡಕೆ ಮಾಸ್ತರರ ತಂದೆ ಅನಂತರಾವ್ ಫಡಕೆ ಅವರು ಸಹ ಮಂಗಲ ಪಾಂಡೆಯ ಅದೇ ಬಟಾಲಿಯನ್‌ನಲ್ಲಿ ಇದ್ದರು ಮತ್ತು ನಮ್ಮ ಫಕೀರ್ ಬಾಬಾರ ಮಾವ ಸಹ. ಆದ್ದರಿಂದ ನಮ್ಮ ಬಳಿ ನಿಖರವಾದ ಮಾಹಿತಿ ಇದೆ, ಮತ್ತು ಅದು ಕೂಡ ಅಲ್ಲಿ ಉಪಸ್ಥಿತರಿದ್ದ ಜನರಿಂದಲೇ ಸಿಕ್ಕಿದೆ.
ಎಲ್ಲರೂ ಕಿವಿಗೊಟ್ಟು ಕೇಳಿ. ಮಾರ್ಚ್ ೨೯, ೧೮೫೭ ರಂದು ಮಂಗಲ ಪಾಂಡೆ ಯುದ್ಧವನ್ನು ಪ್ರಾರಂಭಿಸಿದ ಮತ್ತು ದಾಳಿಯನ್ನೂ ಮಾಡಿದ, ಈ ಮಾತು ನಿಜ. ಆದರೆ ಅದು ಅವನು ಯಾವುದೇ ನಶೆಯಲ್ಲಿ ಮಾಡಿದ ಕೃತ್ಯವಾಗಿರಲಿಲ್ಲ. ಅವನು ಅಫೀಮು, ಗಾಂಜಾ, ಭಾಂಗ್ ಮತ್ತು ದಾರೂ (ಮದ್ಯ) ಅಥವ, ಒಂದು ಸಾಮಾನ್ಯ ಬೀಡಿಯನ್ನೂ ಸಹ ಸೇದುತ್ತಿರಲಿಲ್ಲ. ಅವನಿಗೆ ಸಾಮಾನ್ಯ ವೀಳೆ ಅಡಿಕೆಯ ವ್ಯಸನವೂ ಇರಲಿಲ್ಲ. ಸಾಮಾನ್ಯವಾಗಿ ಫೆಬ್ರವರಿ ‘೫೭ ರ ಕೊನೆಯ ವಾರದಲ್ಲಿಯೇ ‘ಆ’ ಬಂದೂಕುಗಳು ಮತ್ತು ‘ಆ’ ಕಾಡತೂಸ್‌ಗಳು (ಗುಂಡುಗಳು) ಅವನ ಕ್ಯಾಂಪಿಗೆ ಸರಬರಾಜು ಮಾಡಲ್ಪಟ್ಟವು. ಆದರೆ ಸೈನಿಕರಿಂದ ಸತ್ಯವನ್ನು ಮರೆಮಾಡಲಾಗಿತ್ತು.
ಮಂಗಲ ದಿವಾಕರ ಪಾಂಡೆ ಅವನು ಪ್ರತಿದಿನ ಮುಂಜಾನೆ ಎದ್ದು ೧೦೮ ಬಾರಿ ಗಾಯತ್ರಿ ಮಂತ್ರ ಜಪ ಮಾಡುವ ಮತ್ತು ನಂತರ ಮಹಾದೇವನ ಆರಾಧನೆ ಮಾಡುವ ಧಾರ್ಮಿಕ ಮತ್ತು ಸತ್‍ಶೀಲ (ಸದ್ಗುಣಗಳಿರುವ) ಯುವಕನಾಗಿದ್ದನು. ಅವನಿಗೆ ಇಂಗ್ಲೀಷ್ ಭಾಷೆ ಚೆನ್ನಾಗಿ ತಿಳಿದಿತ್ತು. ‘ಈಶ್ವರಿಪ್ರಸಾದ್’ ಹೆಸರಿನ ಆ ಸೈನ್ಯದ ಜಮಾದಾರ (ಹವಾಲ್ದಾರ್) ಇಂಗ್ಲೀಷ್ ಭಾಷೆಯಲ್ಲಿ ಪ್ರವೀಣನಾಗಿದ್ದನು. ಅವನೊಂದಿಗೆ ಇದ್ದು ಇದ್ದು ಮಂಗಲ ಪಾಂಡೆ ಇಂಗ್ಲಿಷ್ ಕಲಿತಿದ್ದನು.
ಹಾಗೆಯೇ ‘ನಂದಕುಮಾರ್’ ಹೆಸರಿನ, ಬುರ್ದ್ವಾನ್, ನಾದಿಯಾ ಮತ್ತು ಹೂಗ್ಲಿ ವಿಭಾಗದ ಭಾರತೀಯ ಬಂಗಾಳಿ ವಂಶದ ದಿವಾನ್ (ಟ್ಯಾಕ್ಸ್ ಕಲೆಕ್ಟರ್)ಗೆ ಬ್ರಿಟಿಷರು ೧೭೭೫ ರಲ್ಲಿ ಗಲ್ಲು ಶಿಕ್ಷೆ ನೀಡಿದ್ದರು, ಅವನ ಸೇಡು ತೀರಿಸಿಕೊಳ್ಳಲು ಬಯಸಿದ್ದ ಮೊಮ್ಮಗನು ಹೆಸರು ಮತ್ತು
ಗ್ರಾಮವನ್ನು ಬದಲಾಯಿಸಿ ‘ನವೀನ್‌ಚಂದ್ರ ಮುಖೋಪಾಧ್ಯಾಯ’ ಎಂಬ ಹೆಸರಿನಲ್ಲಿ ಬ್ರಿಟಿಷ್ ಗವರ್ನಮೆಂಟ್‌ನ ಸೈನ್ಯಕ್ಕೆ ಸಂಬಂಧಿಸಿದ ನೌಕರಿಯಲ್ಲಿ ಸೇರಿಕೊಂಡಿದ್ದನು ಹಾಗು ಅವನು ಇಂಗ್ಲಿಷ್‌ನಲ್ಲಿ ಅತ್ಯಂತ ಪ್ರವೀಣನಾಗಿದ್ದನು. ಆದರೆ ಅವನು ತನ್ನ ಯಾವುದೇ ರಹಸ್ಯವನ್ನು ಎಂದಿಗೂ ಬಹಿರಂಗಪಡಿಸಲು ಬಿಟ್ಟಿರಲಿಲ್ಲ. ಅವನ ಮಗ, ಮಂಗಲ ದಿವಾಕರ ಪಾಂಡೆಯ ಆಪ್ತ ಸ್ನೇಹಿತನಾಗಿದ್ದನು. ಮಂಗಲ ಪಾಂಡೆ ತನ್ನ ಈ ಸ್ನೇಹಿತನೊಂದಿಗೆ ಯಾವಾಗಲೂ ಮಾತನಾಡುತ್ತಾ ಕುಳಿತಿರುತ್ತಿದ್ದ ಮತ್ತು ಅದರಲ್ಲಿ ಬ್ರಿಟಿಷರು ನಡೆಸುತ್ತಿದ್ದ ದೌರ್ಜನ್ಯಗಳ ಬಗ್ಗೆ ಸಂಕಟ ವ್ಯಕ್ತಪಡಿಸುತ್ತಿದ್ದ, ಜೊತೆಗೆ ‘ಏನಾದರೂ ಮಾಡಬೇಕು’ ಎಂಬ ಹಠವನ್ನೂ ಇಟ್ಟುಕೊಂಡಿದ್ದನು. ಆದ್ದರಿಂದ ನವೀನ್‌ಚಂದ್ರ ಮುಖೋಪಾಧ್ಯಾಯನು ಮಂಗಲ ಪಾಂಡೆಯನ್ನು ಒಂದು ತಿಂಗಳಲ್ಲಿ ಇಂಗ್ಲಿಷ್‌ನಲ್ಲಿ ಚೆನ್ನಾಗಿ ತಯಾರಿಸಿದ್ದನು ಮತ್ತು ಇದರ ಬಗ್ಗೆ ಯಾರಿಗೂ ಯಾವುದೇ ಕಲ್ಪನೆ ಇರಲಿಲ್ಲ - ಸಹಜವಾಗಿ ಮಂಗಲ ಪಾಂಡೆಯ ವಿಶ್ವಾಸದಲ್ಲಿದ್ದ ಸ್ನೇಹಿತರನ್ನು ಹೊರತುಪಡಿಸಿ.
ಒಂದು ದಿನ ಮುಂಜಾನೆ ಎದ್ದು ಜಪ ಮಾಡುವ ಮೊದಲು ಸ್ನಾನಕ್ಕಾಗಿ ಬಾವಿಯ ಬಳಿ ಹೋಗಿದ್ದ ಮಂಗಲ ಪಾಂಡೆಗೆ, ಇಬ್ಬರು ಬ್ರಿಟಿಷ್ ಆಫೀಸರ್ಸ್‌ಗಳ ಸಂಭಾಷಣೆಯ ಒಂದು ಭಾಗ ಕೇಳಿಸಿತು. ಹಸುವಿನ ಕೊಬ್ಬು (Cow Fat ಮತ್ತು Beef) ಮತ್ತು ಹಂದಿಯ ಕೊಬ್ಬು (Pig Fat, Pork) ಈ ಶಬ್ದಗಳು ಕೇಳಿಸಿದ್ದರಿಂದ ಮಂಗಲ ಪಾಂಡೆ ಕದ್ದು ಸಂಪೂರ್ಣ ಸಂಭಾಷಣೆಯನ್ನು ಕೇಳಿದ ಮತ್ತು ಅವನಿಗೆ ಬ್ರಿಟಿಷರ ಯೋಜನೆಯ ಬಗ್ಗೆ ತಿಳಿದು ಬಂತು: ಇವರು ಹಿಂದೂ ಮತ್ತು ಮುಸಲ್ಮಾನ ಇಬ್ಬರ ಧರ್ಮವನ್ನೂ ಕೆಡಿಸುವರು, ಏಕೆಂದರೆ ಹಿಂದೂ ಎಂದಿಗೂ ಗೋಮಾಂಸ ತಿನ್ನುವುದಿಲ್ಲ ಮತ್ತು ನಿಜವಾದ ಮುಸಲ್ಮಾನ ಎಂದಿಗೂ ಹಂದಿಯ ಕೊಬ್ಬು ತಿನ್ನುವುದಿಲ್ಲ.
ಅಲ್ಲಿಂದಲೇ ಮಂಗಲ ಪಾಂಡೆಯ ಆಲೋಚನೆಗಳ ಚಕ್ರಗಳು ವೇಗವಾಗಿ ಪ್ರಾರಂಭವಾದವು. ಅವನು ಮುಂಜಾನೆ ಮುಂಜಾನೆಯೇ ಈ ಸುದ್ದಿಯನ್ನು ಜಮಾದಾರ ಈಶ್ವರಿಪ್ರಸಾದ್ ಮತ್ತು ತನ್ನ ಸಹೋದ್ಯೋಗಿಗಳಿಗೆ ತಿಳಿಸಿದ. ಅವರ ನಡುವೆ ವ್ಯವಸ್ಥಿತವಾದ ಯೋಜನೆಯನ್ನು ರೂಪಿಸಲು ಶುರುವಾಯಿತು. ಅಲ್ಲಲ್ಲಿಯ ಹಿಂದೂ ಸೈನಿಕ ಸ್ನೇಹಿತರನ್ನು ಈ ಪಿತೂರಿಯಲ್ಲಿ ಸೇರಿಸಿಕೊಳ್ಳಲು ಶುರುವಾಯಿತು. ಮೀರತ್‌ನ ಕ್ಯಾಂಪಿನಲ್ಲಿದ್ದ ಪ್ರತಿಯೊಬ್ಬ ಭಾರತೀಯ ಸೈನಿಕನೂ ಬೇಕಾದ್ದು ಮಾಡಲು ಸಿದ್ಧನಾಗಿದ್ದನು.
ಏಪ್ರಿಲ್ ೧, ೧೮೫೭ ರಿಂದ ಹೊಸ ಕಾಡತೂಸ್‌ಗಳನ್ನು ಬಳಸುವುದನ್ನು ಕಡ್ಡಾಯಗೊಳಿಸಲಾಗುತ್ತಿತ್ತು, ಆದ್ದರಿಂದ ಮಾರ್ಚ್ ೨೮ ರ ರಾತ್ರಿಯನ್ನು ನಿಗದಿಪಡಿಸಲಾಯಿತು. ಎಲ್ಲರೂ ಒಂದು ಕ್ಷಣವೂ ನಿದ್ರಿಸದೆ ರಾತ್ರಿಯಿಡೀ ಎಚ್ಚರವಾಗಿದ್ದರು. ಆದರೆ ರಾತ್ರಿಯಿಡೀ ಬ್ರಿಟಿಷ್ ಅಧಿಕಾರಿ ‘ಲೆಫ್ಟಿನಂಟ್ ಬಾಗ್’ (Baugh) ತನ್ನ ಕೆಲವು ಬ್ರಿಟಿಷ್ ಸಹೋದ್ಯೋಗಿಗಳೊಂದಿಗೆ ಈ ಸಂಪೂರ್ಣ ಬಾರಕ್ ಪೋರ್ (Barrack Pore) ಕ್ಯಾಂಪಿನಲ್ಲಿ ಗಸ್ತು ತಿರುಗುತ್ತಿದ್ದನು ಮತ್ತು ಅವನೊಂದಿಗೆ ಹೊರಗಿನಿಂದ ಬಂದ ಕೆಲವು ಭಾರತೀಯ ಜಮೀನ್‌ದಾರರು, ಠಾಕೂರರು ಮತ್ತು ಕಾಶಿಗೆ ಹೊರಟ ಯಾತ್ರಾರ್ಥಿಗಳೂ ಸಹ ಇದ್ದರು. ಆದ್ದರಿಂದ ಮಂಗಲ ಪಾಂಡೆ ತಾಳ್ಮೆ ಕಾಯ್ದುಕೊಳ್ಳಲು ನಿರ್ಧರಿಸಿದನು, ಆದರೆ ಈ ಎಲ್ಲಾ ಜನರು ನಿಧಾನವಾಗಿ ಅಲ್ಲಿಂದ ಹೊರಟು ಹೋದ ನಂತರ, ತನ್ನೊಂದಿಗೆ ತುಂಬಿದ ಬಂದೂಕು (ಹಳೆಯದು) ಮತ್ತು ಸಾಕಷ್ಟು ಮದ್ದುಗುಂಡುಗಳನ್ನು ತೆಗೆದುಕೊಂಡು ಲೆಫ್ಟಿನಂಟ್ ಬಾಗ್ ಕ್ಯಾಂಪಿನ ಮೇಲೆ ದಾಳಿ ಮಾಡಲು ಸ್ವಂತ ಡೇರೆಯಿಂದ ಹೊರಬಿದ್ದನು.
ಅವನ ಪಿತೂರಿಯಲ್ಲಿ ಸೇರಿಕೊಂಡಿದ್ದ ಸಹೋದ್ಯೋಗಿಗಳಿಗಾಗಿ ಸಂಕೇತವಾಗಿ ನಿರ್ಧರಿಸಿದ
ತಾತ್ಕಾಲಿಕವಾಗಿ ಹಾಕಿದ ಕೆಂಪು ಬಟ್ಟೆಯನ್ನು ಒಬ್ಬ ಹೇಡಿ ಸಹೋದ್ಯೋಗಿ ತಕ್ಷಣವೇ ಬಚ್ಚಿಟ್ಟನು ಮತ್ತು ಒಬ್ಬಂಟಿಯಾಗಿದ್ದ ಮಂಗಲ ಪಾಂಡೆ ಲೆಫ್ಟಿನಂಟ್ ಬಾಗ್ ನ ನಿವಾಸದ ಬಳಿ ಹೋಗಿ ನಿಂತನು ಮತ್ತು ಅಲ್ಲಿಂದ ಹೊರಬಂದ ಲೆಫ್ಟಿನಂಟ್‌ನ ಮೇಲೆ ಅವನು ಮೊದಲಿಗೆ ಗುಂಡು ಹಾರಿಸಿದನು. ಸ್ವಾತಂತ್ರ್ಯ ಯುದ್ಧದ ಮೊದಲ ಗುಂಡು ಹಾರಿದ್ದು ಇಲ್ಲಿ. ಆದರೆ ದ್ರೋಹಿಗಳು ತಮ್ಮ ಕೆಲಸ ಮಾಡಿದ್ದರು. ಆದ್ದರಿಂದ ಲೆಫ್ಟಿನಂಟ್ ಬಾಗ್ ಸಿದ್ಧನಾಗಿಯೇ ಇದ್ದನು. ಅವನು ತಕ್ಷಣವೇ ಕುದುರೆಯ ಮೇಲೆ ಏರಿ ಓಡಲು ಶುರುಮಾಡಿದನು. ಆದರೆ ಮಂಗಲ ಪಾಂಡೆಯ ಎರಡು ಗುಂಡುಗಳು ಲೆಫ್ಟಿನಂಟ್‌ನ ಕುದುರೆಯ ದೇಹಕ್ಕೆ ತೂರಿಹೋದವು ಮತ್ತು ಕುದುರೆ ಲೆಫ್ಟಿನಂಟ್ ಬಾಘ್‌ನನ್ನು ಹೊತ್ತುಕೊಂಡು ಕೆಳಗೆ ಬಿತ್ತು. ಅದರೊಂದಿಗೆ ಮಂಗಲ ಪಾಂಡೆ ಕತ್ತಿ ಹಿಡಿದು ಬಾಘ್‌ನ ಮೇಲೆ ಧಾವಿಸಿ ಹೋದನು ಮತ್ತು ಅವನ ಮೇಲೆ ಕತ್ತಿಯಿಂದ ಏಳು ಏಟುಗಳನ್ನು ಹಾಕಿದನು. ಆದರೆ ‘ಶೇಖ್ ಪಲ್ಟು’ ಎಂಬ ಲೆಫ್ಟಿನಂಟ್‌ನ ಆಪ್ತ ಸಿಪಾಯಿ ಮಂಗಲ ಪಾಂಡೆಯನ್ನು ಹಿಂದೆ ಎಳೆದು ಕೆಡವಿದನು.
ಮತ್ತು ಮಂಗಲ ಪಾಂಡೆಯ ಯೋಜನೆಯ ಸುಳಿವು ತಿಳಿದಿದ್ದ ಬ್ರಿಟಿಷ್ ಸಾರ್ಜಂಟ್-ಮೇಜರ್ (Sergeant-Major) ಹ್ಯೂಸನ್ (Hewson) ಅಲ್ಲಿಗೆ ಬಂದು ತಲುಪಿದನು. ಹ್ಯೂಸನ್ ಸೋಲನ್ನು ಕಂಡು ಕೋಪಗೊಂಡು ಜಮಾದಾರ ಈಶ್ವರಿಪ್ರಸಾದ್‌ಗೆ ಮಂಗಲ ಪಾಂಡೆಯ ಮೇಲೆ ದಾಳಿ ಮಾಡಲು ಆಜ್ಞಾಪಿಸಿದನು. ಆದರೆ ಈಶ್ವರಿಪ್ರಸಾದ್ ಅವನ ಆಜ್ಞೆಯನ್ನು ತಿರಸ್ಕರಿಸಿ, ಮಂಗಲ ಪಾಂಡೆಗೆ ಸಹಾಯ ಮಾಡಲು ಶುರುಮಾಡಿದನು. ಹ್ಯೂಸನ್‌ನ ಸಹಾಯಕ್ಕೆ ಶೇಖ್ ಪಲ್ಟು ಧಾವಿಸಿ ಬಂದನು. ಅವನು ಇತರ ಸಿಪಾಯಿಗಳಿಗೆ ಸಹಾಯ ಮಾಡಲು ಹೇಳಲು ಶುರುಮಾಡಿದನು, ಆದರೆ ಮಂಗಲ ಪಾಂಡೆಯ ನಿಷ್ಠಾವಂತ ಸಹೋದ್ಯೋಗಿಗಳು ಕಲ್ಲುಗಳಿಂದ ಮತ್ತು ಚಪ್ಪಲಿಗಳಿಂದ ಹೊಡೆಯಲು ಶುರುಮಾಡಿದರು.
ಮಂಗಲ ಪಾಂಡೆ ಮತ್ತು ಅವನ ಸಹೋದ್ಯೋಗಿಗಳು ಆ ಯುದ್ಧವನ್ನು ಬಹುತೇಕ ಗೆದ್ದೇಬಿಟ್ಟಿದ್ದರು. ಮಂಗಲ ಪಾಂಡೆ ಜೋರಾಗಿ ಘೋಷಣೆಗಳನ್ನು ಕೂಗುತ್ತಿದ್ದ,
೧) ಮಾರೋ ಫಿರಂಗಿ ಕೋ. (ವಿದೇಶಿಯರನ್ನು ಕೊಲ್ಲು.)
೨) ನೀವು ನಮ್ಮ ಕಪ್ಪು ಮನುಷ್ಯನ ಪ್ರಾಮಾಣಿಕತೆಯನ್ನು ನೋಡಿದ್ದೀರಿ, ಇನ್ನು ಮುಂದೆ ನಮ್ಮ ಕೋಪವನ್ನು ನೋಡಿ. (You have tested a black man’s loyalty - now test his fury.)
೩) ಈ ಕಾಡತೂಸ್‌ಗಳನ್ನು ಕಚ್ಚುವುದರಿಂದ ನಾವೆಲ್ಲರೂ ಧರ್ಮಭ್ರಷ್ಟರಾಗುತ್ತೇವೆ. ಈಗಲೇ ಎಚ್ಚರಗೊಳ್ಳಿ. (By biting these cartridges, we shall become infidels, awake!)
೪) ನಾನು ಹಿಂದುಸ್ಥಾನಿ ಮತ್ತು ನಾನೇ ಹಿಂದುಸ್ಥಾನ್. (I am true Indian and I am Hindustan myself.)
ಅಷ್ಟರಲ್ಲಿ ಮೇಜರ್ ಜನರಲ್ ಜಾನ್ ಬೆನೆಟ್ ಹರ್ಸೇ (Hearsey) ಅಲ್ಲಿಗೆ ಬಂದು ತಲುಪಿದನು. ಅವನು ತನ್ನೊಂದಿಗೆ ದೊಡ್ಡ ಸೈನ್ಯವನ್ನು ತಂದಿದ್ದನು. ಜನರಲ್ ಆಜ್ಞೆ ಕೇಳದ ಪ್ರತಿಯೊಬ್ಬ ಭಾರತೀಯ ಸೈನಿಕನನ್ನು ಗುಂಡಿಕ್ಕಿ ಕೊಲ್ಲುವ ಬೆದರಿಕೆ ಹಾಕಿದನು. ಆದ್ದರಿಂದ ಏನೂ ಮಾಹಿತಿ ಇಲ್ಲದ, ಅವನೊಂದಿಗೆ ಬಂದಿದ್ದ ಸೈನಿಕರು ಮುಂದೆ ಬಂದರು. ಸಿಕ್ಕ ಆಯುಧಗಳಿಂದ ಹೊಡೆದಾಟ ಶುರುವಾಯಿತು. ಎಲ್ಲೆಡೆ ರಕ್ತಪಾತ ಕಾಣಿಸಲಾರಂಭಿಸಿತು.
ಆದರೆ ಅದು ಸಾಮಾನ್ಯ ಹೊಡೆದಾಟವಾಗಿರಲಿಲ್ಲ. ಅದು ಸ್ವಾತಂತ್ರ್ಯದ ಮೊದಲ ಯುದ್ಧವಾಗಿತ್ತು. ೬೦೦ ಬ್ರಿಟಿಷರಿಗೆ ನಿಷ್ಠರಾಗಿದ್ದ ಸೈನಿಕರು ಮತ್ತು ಮಂಗಲ ಪಾಂಡೆಯೊಂದಿಗಿನ ಇಪ್ಪತ್ತನಾಲ್ಕು ಜನರು ಈ ಹೋರಾಟವನ್ನು ಸಂಜೆಯಾಗುತ್ತಾ
ಮುಗಿಸಿದರು. ಈಶ್ವರಿಪ್ರಸಾದ್ ಮಂಗಲ ಪಾಂಡೆಯ ಸೂಚನೆಯಂತೆ ಉಳಿದ ಇಪ್ಪತ್ತನಾಲ್ಕು ಸಹೋದ್ಯೋಗಿಗಳನ್ನು ಕಾಡಿಗೆ ಓಡಿಸಿದನು.
ಕೊನೆಗೆ ಸಾಯಂಕಾಲ ಐದು ಗಂಟೆಗೆ ಮಂಗಲ ಪಾಂಡೆ ಮತ್ತು ಈಶ್ವರಿಪ್ರಸಾದ್ ಅವರನ್ನು ಬಂಧಿಸಲಾಯಿತು ಮತ್ತು ರಕ್ತದಿಂದ ಮಲೆತುಹೋದ ಪಾಂಡೆ ಆದರೂ ಸಹ ನೇರವಾಗಿ ನಡೆಯುತ್ತಾ ಜೋರಾಗಿ ಘೋಷಣೆಗಳನ್ನು ಕೂಗುತ್ತಲೇ ಇದ್ದನು. ಅವನನ್ನು ನಾಮಕಾವಾಸ್ತೆ ಮಿಲಿಟರಿ ಹಾಸ್ಪಿಟಲ್‌ನಲ್ಲಿ ಇಡಲಾಯಿತು ಮತ್ತು ಏಳು ದಿನಗಳ ಕೋರ್ಟ್‌ಮಾರ್ಶಲ್ ನಾಟಕ ಮಾಡಿ ಮಂಗಲ ಪಾಂಡೆಯನ್ನು ಏಪ್ರಿಲ್ ೮, ೧೮೫೭ ರಂದು ಸಾವಿರಾರು ಜನರ ಸಮ್ಮುಖದಲ್ಲಿ ನೇಣುಗಂಬಕ್ಕೆ ಏರಿಸಲಾಯಿತು ಮತ್ತು ಈಶ್ವರಿಪ್ರಸಾದ್‌ಗೆ ಏಪ್ರಿಲ್ ೨೧ ರಂದು ಶಿಕ್ಷೆ ನೀಡಲಾಯಿತು.
ಸ್ನೇಹಿತರೇ! ನಮ್ಮ ಭಾರತದ ಸ್ವಾತಂತ್ರ್ಯ ಯುದ್ಧದ ಈ ಎರಡು ಮೊದಲ ಬಲಿದಾನಗಳು. ಇವರ ಹೆಸರನ್ನು ಉಚ್ಚರಿಸದೆ ಸ್ವಾತಂತ್ರ್ಯ ಸಂಗ್ರಾಮದ ಕಥೆ ಶುರುವಾಗಲು ಸಾಧ್ಯವಿಲ್ಲ.”
(ಕಥೆ ಮುಂದುವರಿಯುತ್ತದೆ)


.jpg)
%20-photo%20is%20must.jpg)