ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 15

 

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 15


ತಾತ್ಯಾ ಟೋಪೆ, ಬಾಣಪುರದ ರಾಜ, ಬ್ರಿಟಿಷ್ ಆರ್ಮಿಯಿಂದ ಹೊರಬಂದು ಸ್ವತಂತ್ರವಾಗಿ ಹೋರಾಡುತ್ತಿದ್ದ ಎರಡು ಸಾವಿರ ಭಾರತೀಯ ಸೈನಿಕರ ಗುಂಪು ಮತ್ತು ರಾಣಿ ಲಕ್ಷ್ಮೀಬಾಯಿ - ಈ ನಾಲ್ವರೂ ಒಟ್ಟಾಗಿ ಗ್ವಾಲಿಯರ್ ಕೋಟೆ ಮತ್ತು ಗ್ವಾಲಿಯರ್ ಪ್ರಾಂತದ ಮೇಲೆ ಮುಂಜಾನೆ ಭೀಕರ ದಾಳಿ ಮಾಡಿದರು.


ಗ್ವಾಲಿಯರ್ ಸಂಸ್ಥಾನದವರು ಬ್ರಿಟಿಷರೊಂದಿಗೆ ಸ್ನೇಹ ಹೊಂದಿದ್ದರು, ಆದ್ದರಿಂದ ಅವರು ರಾಣಿ ಲಕ್ಷ್ಮೀಬಾಯಿ ಮತ್ತು ತಾತ್ಯಾ ಟೋಪೆಯವರಿಗೆ ಸಹಾಯ ಮಾಡಲು ನಿರಾಕರಿಸಿದ್ದಲ್ಲದೆ, ಬ್ರಿಟಿಷರಿಗೆ ಎಲ್ಲಾ ಮಾಹಿತಿ ನೀಡಿದರು; ಆದರೆ ಆ ಮಾಹಿತಿಯು ಉದ್ದೇಶಪೂರ್ವಕವಾಗಿ ಅರ್ಧಂಬರ್ಧ ಮತ್ತು ಬ್ರಿಟಿಷರ ದಾರಿ ತಪ್ಪಿಸುವಂತಿತ್ತು.


ಗ್ವಾಲಿಯರ್ ಸಂಸ್ಥಾನಿಕರು ಕೋಟೆಯನ್ನು ರಾಣಿ ಲಕ್ಷ್ಮೀಬಾಯಿಯ ವಶಕ್ಕೆ ನೀಡಿ, ತಮಗೆ ಈ ಹೋರಾಟಕ್ಕೂ ಸಂಬಂಧವಿಲ್ಲ ಎಂದು ಬ್ರಿಟಿಷರಿಗೆ ತೋರಿಸಿಕೊಂಡರು ಮತ್ತು ಗ್ವಾಲಿಯರ್‌ನಿಂದ ದೂರ ಹೋಗಿ ಉಳಿದುಕೊಂಡರು; ಆದರೆ ತಮ್ಮ ಇಬ್ಬರು ಸರ್ದಾರರನ್ನು ರಾಣಿ ಲಕ್ಷ್ಮೀಬಾಯಿಯ ಸಹಾಯಕ್ಕಾಗಿ ಹಿಂದೆ ಬಿಟ್ಟಿದ್ದರು ಮತ್ತು ಅದರ ಜೊತೆಗೆ ಸಾಕಷ್ಟು ಯುದ್ಧ ಸಾಮಗ್ರಿಗಳನ್ನು ಕೂಡ. ಒಟ್ಟು ಹದಿನಾರು ತೊಫಗಳು ಮತ್ತು ಸಾಕಷ್ಟು ಮದ್ದುಗುಂಡುಗಳನ್ನು ಗ್ವಾಲಿಯರ್ ಸಂಸ್ಥಾನವು ರಾಣಿ ಲಕ್ಷ್ಮೀಬಾಯಿಗೆ ಉಡುಗೊರೆಯಾಗಿ ನೀಡಿತು.


ಜೂನ್ 14ರ ಮುಂಜಾನೆಯವರೆಗೆ ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆ, ರಾವ್‌ಸಾಹೇಬ್ ಪೇಶ್ವೆ, ಬಾಣಪುರ ಮಹಾರಾಜರು ಸೈನ್ಯದ ವ್ಯೂಹರಚನೆಯಲ್ಲಿ ತೊಡಗಿದ್ದರು. ಜನರಲ್ ಹ್ಯೂಜ್ ರೋಸ್‌ಗೆ ರಾಣಿ ಲಕ್ಷ್ಮೀಬಾಯಿಯ ಸೈನ್ಯದ ಅಂದಾಜು ಸಿಗುತ್ತಿರಲಿಲ್ಲ, ಏಕೆಂದರೆ ಕಳೆದ ಒಂದೂವರೆ ತಿಂಗಳಲ್ಲಿ ನೂರಾರು ವೀರ ಪುರುಷರು ಮತ್ತು ಮಹಿಳೆಯರು ವಿವಿಧ ಮಾರ್ಗಗಳ ಮೂಲಕ ಝಾನ್ಸಿಯ ರಾಣಿಯ ಸೈನ್ಯವನ್ನು ಸೇರುತ್ತಿದ್ದರು.


ಜನರಲ್ ಹ್ಯೂಜ್ ರೋಸ್‌ಗೆ ಬರುವ ಗುಪ್ತ ಮಾಹಿತಿಯಂತೆ ರಾಣಿ ಲಕ್ಷ್ಮೀಬಾಯಿಯ ಬಳಿ 14 ಸಾವಿರ ಅವಳ ಸ್ವಂತ ಸೈನ್ಯ, ತಾತ್ಯಾ ಟೋಪೆಯವರ 3 ಸಾವಿರ, ಬಾಣಪುರದ 2 ಸಾವಿರ ಮತ್ತು ಸ್ವತಂತ್ರ ಹೋರಾಟಗಾರರ 4 ಸಾವಿರ ಸೈನಿಕರು ಇರಬಹುದು ಎಂದು ಅಂದಾಜಿಸಲಾಗಿತ್ತು; ಆದರೆ 'ರಾಣಿ ಲಕ್ಷ್ಮೀಬಾಯಿಯ ಸೈನ್ಯದಲ್ಲಿ ಎಷ್ಟು ಸೈನಿಕರು ತರಬೇತಿ ಪಡೆದಿದ್ದಾರೆ ಮತ್ತು ಎಷ್ಟು ಮಂದಿ ಅನುಭವವಿಲ್ಲದಿದ್ದರೂ ಉತ್ಸಾಹದಿಂದ ತುಂಬಿದ ವೀರ ಭಾರತೀಯರು' ಎಂಬುದು ಅವನಿಗೆ ತಿಳಿಯುತ್ತಿರಲಿಲ್ಲ. ಅದಕ್ಕಾಗಿ ಅವನು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದನು.


ಮೇಜರ್ ಜನರಲ್ ಹ್ಯೂಜ್ ರೋಸ್‌ಗೆ ಚೆನ್ನಾಗಿ ಗೊತ್ತಿತ್ತು, ರಾಣಿ ಲಕ್ಷ್ಮೀಬಾಯಿ ಮತ್ತು ಅವಳ ಸೈನ್ಯವೇ ತನ್ನ ಪ್ರಮುಖ ಶತ್ರುಗಳು ಮತ್ತು ಅವರನ್ನು ಸೋಲಿಸುವುದು ಮೊದಲ ಅಗತ್ಯ ಎಂದು.


ಲಾರ್ಡ್ ಡಾಲ್‌ಹೌಸಿಯ ನಂತರ ಗವರ್ನರ್ ಜನರಲ್ ಆಗಿ ಬಂದ ಲಾರ್ಡ್ ಚಾರ್ಲ್ಸ್ ಕ್ಯಾನ್ನಿಂಗ್

(Charles Canning) ಅತ್ಯಂತ ಧೂರ್ತ ರಾಜಕಾರಣಿಯಾಗಿದ್ದ ಮತ್ತು ಮುಖ್ಯವಾಗಿ ಅವನು ಬ್ರಿಟಿಷ್ ರಾಣಿ ವಿಕ್ಟೋರಿಯಾಳ ಆಪ್ತನಾಗಿದ್ದ; ರಾಣಿ ವಿಕ್ಟೋರಿಯಾಳೇ ಅವನನ್ನು ಗವರ್ನರ್ ಜನರಲ್ ಆಗಿ ಭಾರತಕ್ಕೆ ಕಳುಹಿಸಿದ್ದಳು.


ಅವನು ಭಾರತಕ್ಕೆ ಬಂದ ಕೂಡಲೇ ಬಾಂಬೆ ಯೂನಿವರ್ಸಿಟಿ, ಕಲಕತ್ತಾ ಯೂನಿವರ್ಸಿಟಿ ಮತ್ತು ಮದ್ರಾಸ್ ಯೂನಿವರ್ಸಿಟಿ ಎಂಬ ಮೂರು ಆಧುನಿಕ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಭಾರತೀಯ ಯುವಕರಿಗೆ ಬ್ರಿಟಿಷ್ ಸೇವೆಯಲ್ಲಿ ಅಧಿಕಾರಿಗಳಾಗುವ ದಾರಿ ಮಾಡಿಕೊಟ್ಟನು ಮತ್ತು ಸಾಕಷ್ಟು ಸ್ಕಾಲರ್‌ಶಿಪ್‌ಗಳನ್ನು ಕೂಡ ನೀಡಿದನು. ಇದರಿಂದಾಗಿ ದೊಡ್ಡ ನಗರಗಳ ಭಾರತೀಯ ಯುವಕರು ಹೋರಾಟದಿಂದ ದೂರಾದರು.


ಫರ್ಸ್ಟ್ ಅರ್ಲ್ ಕ್ಯಾನ್ನಿಂಗ್ (First Earl Canning) ಕಳೆದ ಎರಡು ವರ್ಷಗಳಿಂದ ಬಾಕಿ ಇದ್ದ ಲಾರ್ಡ್ ಡಾಲ್‌ಹೌಸಿ ಸಿದ್ಧಪಡಿಸಿದ 'ಹಿಂದೂ ವಿಧವಾ ಪುನರ್ವಿವಾಹ ಕಾಯ್ದೆ'ಯನ್ನು ಜಾರಿಗೆ ತಂದನು ಮತ್ತು ಅದರ ಸೂಚನೆಗಳನ್ನು ಭಾರತದಲ್ಲಿ ಹೊರಡಿಸಲಾಯಿತು.


ದೊಡ್ಡ ಯೂನಿವರ್ಸಿಟಿಗಳು ಮತ್ತು ವಿಧವಾ ಪುನರ್ವಿವಾಹ ಕಾಯ್ದೆಯಿಂದಾಗಿ ಸಾಮಾನ್ಯ ಭಾರತೀಯರಿಗೆ, ವಿಶೇಷವಾಗಿ ಮಧ್ಯಮ ವರ್ಗದ ಸುಧಾರಕರಿಗೆ 'ಬ್ರಿಟಿಷರು ದೇವರಿಗಿಂತ ಮಿಗಿಲು, ಭಾರತವನ್ನು ಉದ್ಧಾರ ಮಾಡಲು ಬಂದಿದ್ದಾರೆ' ಎಂದು ಅನಿಸತೊಡಗಿತು. ಈ ಸುಧಾರಕರು ಯುವಕರನ್ನು ಮತ್ತು ಮಹಿಳೆಯರನ್ನು ಸ್ವಾತಂತ್ರ್ಯ ಯುದ್ಧದಲ್ಲಿ ಭಾಗವಹಿಸದಂತೆ ತಡೆಯಲು ಪ್ರಯತ್ನಿಸಿದರು ಮತ್ತು ಇದರ ಪರಿಣಾಮ 1858ರ ಜನವರಿಯಿಂದಲೇ ಕಾಣತೊಡಗಿತು.


ಚಾರ್ಲ್ಸ್ ಕ್ಯಾನ್ನಿಂಗ್ ಝಾನ್ಸಿ, ಗ್ವಾಲಿಯರ್ ಮತ್ತು ಕಾನಪೂರದ (ಕಾಲಪಿ) ಸುತ್ತಮುತ್ತಲಿನ ಪ್ರದೇಶಗಳಲ್ಲಿ 'ರಾಣಿ ಲಕ್ಷ್ಮೀಬಾಯಿಯನ್ನು ಜೀವಂತ ಅಥವಾ ಸತ್ತ ಸ್ಥಿತಿಯಲ್ಲಿ ಹಿಡಿದು ಕೊಟ್ಟವರಿಗೆ 20,000 ರೂಪಾಯಿ ಬಹುಮಾನ ಮತ್ತು 500 ಎಕರೆ ಜಮೀನು' ಘೋಷಿಸಿದನು - ಎಲ್ಲಾ ಕಡೆ, ಬಜಾರಿನಲ್ಲಿ ಬೋರ್ಡ್‌ಗಳನ್ನು ಹಾಕಲಾಯಿತು, ಜಾಹೀರಾತುಗಳನ್ನು ಹಂಚಲಾಯಿತು ಮತ್ತು ದವಂಡೆ ಹಾಕಿಸಲಾಯಿತು. ಇದರಿಂದಾಗಿ ಹಲವು ಆಸೆಬುರುಕ ಭಾರತೀಯರು ರಾಣಿಯ ಮಾಹಿತಿಯನ್ನು ಬ್ರಿಟಿಷರಿಗೆ ನೀಡತೊಡಗಿದರು ಹಾಗು ಬ್ರಿಟಿಶರಿಗೆ ಅನೇಕ ಕೆಲಸಗಳಲ್ಲಿ ಸಹಾಯ ಮಾಡ ತೊಡಗಿದರು.


ಇಂತಹ ಒಬ್ಬ ದ್ರೋಹಿಯ ಮಾಹಿತಿಯಂತೆ ಮೇಜರ್ ಜನರಲ್ ಹ್ಯೂಜ್ ರೋಸ್ 14 ಜೂನ್ 1858ರ ಮುಂಜಾನೆ 30 ಸಾವಿರ ಸೈನಿಕರೊಂದಿಗೆ ಗ್ವಾಲಿಯರ್ ಮೇಲೆ ಅಕ್ರಲವಿಕ್ರಾಲ ಆಕ್ರಮಣ ಮಾಡಿದನು.


ಈ ದಾಳಿಯು ವೊಟ್ಟು ಆರು ದಿಕ್ಕುಗಳಿಂದ ನಡೆಯಿತು. ಪ್ರತಿ ಕಡೆ 5 ಸಾವಿರ ಸೈನಿಕರು, 150 ತೊಫ಼ುಗಳು ಮತ್ತು 550 ಅತ್ಯಾಧುನಿಕ ರೈಫಲ್‌ಗಳಿದ್ದವು.


ಹಾಗೆಯೇ ಈ ಆರು ಬ್ರಿಟಿಷ್ ಗುಂಪುಗಳ ನಡುವೆ ದ್ರೋಹ ಬಗೆದ 10,000 ಭಾರತೀಯರ ಮಾನವ ಸರಪಳಿಯನ್ನು ನಿರ್ಮಿಸಲಾಯಿತು.


ರಾಣಿ ಲಕ್ಷ್ಮೀಬಾಯಿ ಕೂಡ ತನ್ನ ಸೈನ್ಯವನ್ನು ಇದಕ್ಕೆ ತಕ್ಕಂತೆ ಸಜ್ಜುಗೊಳಿಸಿದಳು. ಎಲ್ಲರಿಗೂ ರಾಣಿ ಲಕ್ಷ್ಮೀಬಾಯಿಯ ನೇತೃತ್ವ ಮಾನ್ಯವಾಗಿತ್ತು.


ಆರು ಕಡೆಗಳಲ್ಲಿ ಘೋರ ಯುದ್ಧ ಆರಂಭವಾಯಿತು. ಬ್ರಿಟಿಷರು ತೊಫ಼ು ಮತ್ತು ರೈಫಲ್‌ಗಳನ್ನು ಮೊದಲು ಬಳಸಿ ಮುನ್ನುಗ್ಗುತ್ತಿದ್ದರು.


ರಾಣಿ ಲಕ್ಷ್ಮೀಬಾಯಿ ಈ ಆರು ಸ್ಥಳಗಳಲ್ಲಿ ನಿರಂತರವಾಗಿ ಸಂಚರಿಸಿ ಎಲ್ಲರಿಗೂ ಪ್ರೋತ್ಸಾಹ ನೀಡುತ್ತಿದ್ದಳು, ಹಾಗು ವ್ಯೂಹರಚನೆಯೂ ಬದಲಿಸುತ್ತಿದ್ದಳು ಮತ್ತು ಸ್ವತಃ ವೀರಾವೇಶದಿಂದ ಹೋರಾಡುತ್ತಿದ್ದಳು.


ಜೂನ್ 14 ಮತ್ತು 15ರ ಎರಡು ದಿನಗಳಲ್ಲಿ ರಾಣಿ ಲಕ್ಷ್ಮೀಬಾಯಿ ಒಬ್ಬಳೇ 300 ಬ್ರಿಟಿಷ್ ಸೈನಿಕರನ್ನು ಮತ್ತು 170 ಬ್ರಿಟಿಷ್ ವ೦ಷದ ಅಧಿಕಾರಿಗಳನ್ನು ಸಾಯಿಸಿದಳು. ಅವಳ ಮೈಮೇಲಿದ್ದ ಹಳೆಯ 59 ಗಾಯಗಳು ಇನ್ನೂ ಮಾಯಿರಲಿಲ್ಲ.


ಜೂನ್ 16ರ ಮುಂಜಾನೆ 9 ಗಂಟೆಗೆ ರಾಣಿಯ ನಂಬಿಕಸ್ಥ ಗುಪ್ತಚರ 'ಸಾಧು ಭಗವಾನ್ ದಾಸ್' ಅವಳನ್ನು ಭೇಟಿಯಾಗಲು ಬಂದನು. ಈ ಭಗವಾನ್ ದಾಸ್ ಹೊದ ಎರಡು ವರ್ಷ ರಾಣಿಯ ಗುಪ್ತ ಕಾರ್ಯ ಮಾಡುತಿದ್ದ. ಇವನನ್ನು (ಸಾಧು) ದಿವಾನ್ ರಘುನಾಥ್ ಸಿಂಗ್ ಅವರು ರಾಣಿಗೆ ಪರಿಚಯಿಸಿದ್ದರು. ರಾಣಿಯ ತಂದೆ ’ಶ್ರೀ ಮೊರೋಪಂತ್ ತಾಂಬೆ’ ಅವರು ಈ ಸಾಧು ಭಗವಾನ್ ದಾಸ್ ಮತ್ಯಾರೂ ಅಲ್ಲ, ತಮ್ಮ ಹಳೆಯ ವಿಶ್ವಾಸದ ಮಿತ್ರ 'ಚಿಂತಾಮಣಿ ರಾಸ್ತೆ' ಎಂದು ಹೇಳಿದ್ದರು.


ಸಾಧು ಭಗವಾನ್ ದಾಸನು ಬ್ರಿಟಿಷ್ ಸೈನ್ಯಬಲದ ಹಾಗು ತೊಫುಖಾನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದನು. ಇವನು ಬ್ರಿಟಿಷ್ ಸೈನ್ಯದಲ್ಲಿಯ ಹಿಂದೂ ಸೈನಿಕರ ಪೂಜೆಗಾಗಿ ಅಡ್ಡಾಡುತ್ತಿದ್ದರಿಂದ ಯಾರೂ ಇವನನ್ನು ಅನುಮಾನಿಸುತ್ತಿರಲಿಲ್ಲ. ಆದರೆ ರಾಣಿಗೆ ಅವನ ಜಠಾ, ದಾಡಿ-ಮೀಸೆ ಮತ್ತು ಭಸ್ಮ, ರುದ್ರಾಕ್ಷ ಮಾಲೆಯಿ೦ದ ಮುಚ್ಚಿಕೊ೦ಡ ಭಗವಾನ್ ದಾಸನ ರೂಪದ ಕಣ್ಣುಗಳು ಯಾವಾಗಲೂ ಪರಿಚಿತವೆನಿಸುತ್ತಿದ್ದವು.


ಇಂದು ಕೂಡ ಎಲ್ಲಾ ಮಾಹಿತಿ ರಾಣಿಗೆ ನೀಡಿ ಸಾಧು ಭಗವಾನ್ ದಾಸ ಗುಪ್ತ ಮಾರ್ಗದಿ೦ದ ಹೊರಟಾಗ, ರಾಣಿ ಅವನ ಬೆನ್ನಿನ ಮೇಲಿನ ರಕ್ತದ ಕಲೆಗಳನ್ನು ನೋಡಿ ಗಾಬರಿಯಾದಳು. ಭಗವಾನ್ ದಾಸ್ ಕಣ್ಣೆದುರೇ ಕೆಳಗೆ ಬಿದ್ದನು ಮತ್ತು ಅವನ ತಲೆಯ ಮೇಲಿದ್ದ ಜಠಾ ಮತ್ತು ನಕಲಿ ಗಡ್ಡ-ಮೀಸೆಗಳು ಕಳಚಿ ಬಿದ್ದವು.


ರಾಣಿಯ ಕಣ್ಣೆದುರು ಅವಳ ತಂದೆ ಮೊರೋಪಂತ್ ತಾಂಬೆ ಕೊನೆಯ ಉಸಿರೆಳೆಯುತ್ತಿದ್ದರು. ರಾಣಿ ಆವೇಶದಿಂದ ತಂದೆಯ ತಲೆಯನ್ನು ಮಡಿಲಲ್ಲಿ ಇಟ್ಟುಕೊಂಡಳು, ಆ ಕ್ಷಣದಲ್ಲೇ ಅವರು ಪ್ರಾಣ ಬಿಟ್ಟರು. ಕ್ಷಣಕಾಲ ರಾಣಿ ದುಃಖಿತಳಾದಳು - 'ಈ ಕಣ್ಣುಗಳನ್ನು ನಾನು ಹೇಗೆ ಗುರುತಿಸಲಿಲ್ಲ?' ಎಂದುಕೊಂಡಳು.


ಆದರೆ ಮರುಕ್ಷಣವೇ ತಂದೆಯ ಪಾದಕ್ಕೆ ನಮಸ್ಕರಿಸಿ ತನ್ನ 'ಬಾದಲ್' ಕುದುರೆಯನ್ನೇರಿ ಯುದ್ಧಕ್ಕೆ ಧುಮುಕಿದಳು. ಈ ಕುದುರೆಯನ್ನು ಅವಳ ತಂದೆಯೇ ಉಡುಗೊರೆ ನೀಡಿದ್ದರು.


ರಾಣಿ ಲಕ್ಷ್ಮೀಬಾಯಿ ತುಮ್ಬಲ್ ಯುದ್ದ ಶುರು ಮಾಡಿದರು. ಅವಳು ತನ್ನ ಎಲ್ಲಾ ಶಕ್ತಿಯಿ೦ದ ಯುದ್ದ ಮಾಡುತ್ತಿದ್ದಳು. ಅವಳು ಒಂದು ಕ್ಷಣವೂ ನಿದ್ರಿಸದೆ ಹೋರಾಡುತ್ತಿದ್ದಳು.


ಜೂನ್ 18ರ ಮುಂಜಾನೆ ಬ್ರಿಟಿಷರು ರಾಣಿ ಇದ್ದ ಜಾಗದ ಮೇಲೆ ನಾಲ್ಕೂ ಕಡೆಯಿಂದ ತೊಫಿನ ದಾಳಿ ನಡೆಸಿದರು. ಒಂದು ಕಡೆ ರಾಣಿ ಲಕ್ಷ್ಮೀಬಾಯಿ, ಮುಂದರ್ ಬೇಗಂ, ರಾಜಕುಂವರ್ ಯಾದವ್, ಮಂಜುನಾಥ್ ಪಹಾಡಿ, ಹಾಗು ಅವಳ ಸೋದರಳಿಯ ರಾಮಚಂದ್ರರಾವ್ ಮತ್ತು 250 ಸೈನಿಕರಿದ್ದರು. ಸುತ್ತಲೂ 150 ಸಾವಿರ ಬ್ರಿಟಿಷ್ ವ೦ಶದ ಸೈನಿಕರು ಮತ್ತು 250 ತೊಫುಗಲು, ೧೦ ಸಾವಿರ ಬ್ರಿಟಿಷ್ ಸೈನಿಕರಿದ್ದರು.


ರಾಣಿ ಲಕ್ಷ್ಮೀಬಾಯಿಯ ದೇಹದಲ್ಲಿ ರಕ್ತ ಸುರಿಯದ ಒ೦ದೂ ಜಾಗವೇ ಇರಲಿಲ್ಲ, ಆದರೂ ಅವಳು ಯುದ್ದ ಮಾಡುತ್ತಿದ್ದಳು. ಅವಳ ಕುದುರೆ ಬಾದಲ್‌ನ ನಾಲ್ಕೂ ಕಾಲುಗಳಿಗೆ ಗುಂಡು ಬಿದ್ದಿದ್ದರಿಂದ ರಾಣಿ ಕೆಳಗೆ ಬಿದ್ದಳು. ಬೀಳುವಾಗಲೇ ತನ್ನ ದತ್ತು ಪುತ್ರ ದಾಮೋದರರಾವ್‌ನನ್ನು ರಾಜಕುಂವರ್ ಯಾದವ್‌ಗೆ ಒಪ್ಪಿಸಿ ಸುರಕ್ಷಿತವಾಗಿ ಹೋಗಲು ದಾರಿ ತೋರಿಸಿದಳು. ಕೆಳಗೆ ಬಿದ್ದರೂ ಹೋರಾಡುತ್ತಿದ್ದ ಹಾಗೂ ಕೈಯಲ್ಲಿ ತಲವಾರು ಹಿಡಿದು ಇನ್ನೂ ಯುದ್ದ ಮಾಡುತ್ತಿದ್ದ ರಾಣಿ ಮತ್ತೊಂದು ಕುದುರೆಯ ಮೇಲೆ ಜಿಗಿದಳು.


ಎರಡೂ ಕೈಗಳಲ್ಲಿ ತಲವಾರಿನಿಂದ ಹೋರಾಡುತ್ತಿದ್ದ ರಾಣಿಯ ಬೆನ್ನಿಗೆ ಬ್ರಿಟಿಷ್ ಸೈನಿಕನೊಬ್ಬ ಇರಿದನು. ಕೊನೆಯ ಉಸಿರೆಳೆಯುವಾಗ ರಾಣಿ ಲಕ್ಷ್ಮೀಬಾಯಿಯು ರಾಜಕುಂವರ್ ಮತ್ತು ರಾಮಚಂದ್ರನಿಗೆ ಕಿರುಚಿ ಹೇಳಿದಳು "ಯಾವುದೇ ಬ್ರಿಟಿಷನ ಸ್ಪರ್ಶ ನನ್ನ ಮೃತದೇಹಕ್ಕೆ ಆಗಬಾರದು". ಅವಳ ಬಾಯಲ್ಲಿ ಗೀತೆಯ ಶ್ಲೋಕಗಳಿದ್ದವು. ಅವಳು ಝಾನ್ಸಿಯ ಕಡೆಗೆ ನೋಡುತ್ತಿದ್ದಳು. ಕಣ್ಣೆದುರು ಕಾಣುತ್ತಿದ್ದ ಶ್ರೀಕೃಷ್ಣನನ್ನು ಕಣ್ಣು ತು೦ಬಿ ನೋಡಿ "ವಾಸುದೇವಾ! ನಾನು ಕೇವಲ ನಿನಗೆ ಶರಣು" ಎಂದು ಪ್ರಾಣ ಬಿಟ್ಟಳು. ಮುಂದಿನ ಐದು ನಿಮಿಷಗಳಲ್ಲಿ ಅವಳ ದೇಹವನ್ನು ರಾಮಚಂದ್ರರಾವ್, ರಾಜಕುಂವರ್ ಹಾಗು ಮೊತಿಬಾಯಿ ಕಾಡಿಗೆ ಒಯ್ದು ಅಗ್ನಿಸ೦ಸ್ಕಾರ ಮಾಡಲಾಯಿತು.


ರಾಣಿ ಲಕ್ಷ್ಮೀಬಾಯಿ ಎಂದಿಗೂ ಸಾಯಲು ಸಾಧ್ಯವಿಲ್ಲ. ಅವಳು ಇಂದೂ ಭಾರತ ಮಾತೆಯ ಹೃದಯದಲ್ಲಿದ್ದಾಳೆ ಮತ್ತು ಸದಾ ಇರುತ್ತಾಳೆ.


(ಕಥೆ ಮುಂದುವರಿಯುವುದು)