ದೇವಾಲಯದಲ್ಲಿದ್ದ ಪುರುಷರು ಸ್ತ್ರೀಯರನ್ನು ಒಳಗೆಯೇ ಇರುವಂತೆ ಸೂಚಿಸಿ ತರಾತುರಿಯಲ್ಲಿ ಹೊರಗೆ ಬಂದರು. ಅಲ್ಲಿ ತಕ್ಷಣವೇ ಗೊಂದಲ ಸೃಷ್ಟಿಯಾಯಿತು. ಮೃತಪಟ್ಟ ಆ ಇಬ್ಬರ ಹೆಂಡತಿಯರು ಮತ್ತು ಇತರ ಸಂಬಂಧಿಕ ಸ್ತ್ರೀಯರು ಗೋಳಾಡುತ್ತಿದ್ದರು. ಇತರ ಸ್ತ್ರೀಯರು ಅವರಿಗೆ ಆಸರೆ ನೀಡುತ್ತಿದ್ದರು.
ಗಾಡಿವಾನನು ‘ಹೇಗೆ ಮತ್ತು ಏನು ನಡೆಯಿತು’ ಎಂಬುದನ್ನು ಸವಿವರವಾಗಿ ಹೇಳುತ್ತಿದ್ದ. ನಾಲ್ಕೈದು ದಷ್ಟಪುಷ್ಟ ಮತ್ತು ಎತ್ತರದ ಪುರುಷರ ತಂಡ, ಗಾಡಿ ನಿಲ್ಲುತ್ತಿದ್ದಂತೆಯೇ ಒಮ್ಮೆಲೇ ಮುಂದೆ ಬಂದು, ಅವರು ಇಬ್ಬರೂ ಮಾಲೀಕರ ಬಳಿ ಇದ್ದ ಎಲ್ಲಾ ಚಿನ್ನ ಮತ್ತು ಹಣವನ್ನು ಕೊಡುವಂತೆ ಕೇಳಿದರು ಎಂದು ಅವನು ಹೇಳಿದ. ಆದರೆ ಇಬ್ಬರೂ ಮಾಲೀಕರು ಹೊಡೆದಾಡಲು ಶುರುಮಾಡಿದರು ಮತ್ತು ಕೂಗಾಡಲೂ ಪ್ರಾರಂಭಿಸಿದರು. ಬಹುಶಃ ಅದರಿಂದಾಗಿ ಆ ಲೂಟಿಕೋರರು ಆ ಇಬ್ಬರಿಗೂ ಇರಿದು, ಅವರ ಮೈ ಮೇಲಿದ್ದ ಎಲ್ಲಾ ಚಿನ್ನ ಮತ್ತು ಅವರ ಬಳಿಯಿದ್ದ ಎಲ್ಲಾ ಹಣ ತೆಗೆದುಕೊಂಡು ಓಡಿ ಹೋದರು.
ಆ ಗಾಡಿವಾನನು ಗೋಗರೆಯುತ್ತಾ ಹೇಳಲು ಶುರುಮಾಡಿದ, “ಸಾಹೇಬರೇ! ನನ್ನನ್ನು ಹೊಡೆಯಬೇಡಿ. ನಾನು ನನ್ನ ಸ್ಥಾನದಿಂದ ಇಳಿದು ಕೆಳಗೆ ಬರುವಷ್ಟರಲ್ಲಿ ನನ್ನ ಇಬ್ಬರೂ ಮಾಲೀಕರು ರಕ್ತಸಿಕ್ತರಾಗಿ ಕೆಳಗೆ ಬಿದ್ದಿದ್ದರು ಮತ್ತು ಆ ಲೂಟಿಕೋರರು ಚಿನ್ನ ಮತ್ತು ಹಣ ತೆಗೆದುಕೊಂಡು ಹೋಗುತ್ತಿದ್ದರು. ಅದನ್ನು ನೋಡಿ ನಾನು ಭಯಪಟ್ಟೆ. ನನ್ನ ಧ್ವನಿ ಹೊರಡಲಿಲ್ಲ. ಅದರಲ್ಲೇ ಆ ಲೂಟಿಕೋರರಲ್ಲಿ ಒಬ್ಬನು ನನಗೆ ಜೋರಾಗಿ ಒದ್ದಿದನು ಮತ್ತು ನಾನು ದೂರಕ್ಕೆ ಬಿದ್ದೆ. ಅವರು ಇಲ್ಲಿಂದ ಹೊರಟು ಹೋದ ನಂತರವೇ ನಾನು ಹೇಗೋ ಎದ್ದು
ಭಯದಿಂದ ಗಾಡಿಯ ಬಳಿ ಬಂದೆ ಮತ್ತು ನನಗೆ ಅಳುವೇ ಬಂತು. ನೋಡಿ! ಈಗಲೂ ನಾನು ನಡುಗುತ್ತಲೇ ಇದ್ದೇನೆ.”
ಅದರಲ್ಲೇ ಇವನಿಗೆ ತಾಯಿ-ತಂದೆ ಯಾರೂ ಇಲ್ಲ. ಈ ಅನಾಥ ಹುಡುಗನನ್ನು ನಮ್ಮ ಈ ದೇವರ ಮನೆಗೆ ಹೋದ ಪೊಲೀಸ್ ಆಫೀಸರ್ ಸಾಹೇಬರೇ ಕೆಲಸಕ್ಕೆ ಇಟ್ಟುಕೊಂಡರು ಮತ್ತು ಅವರ ಮನೆಯ ಜಗುಲಿಯ ಮೇಲೆ ಇರುತ್ತಾನೆ. ಇವನ ತಂದೆಯೂ ಕುದುರೆ ಗಾಡಿವಾಲನೇ ಆಗಿದ್ದರು. ಆದ್ದರಿಂದ ಇವನು ಕೇವಲ ಕುದುರೆಗೆ ಹೆದರುವುದಿಲ್ಲ.”
ಈ ಮಾಹಿತಿಯಿಂದ ಹಿರಿಯ ಪೊಲೀಸ್ ಅಧಿಕಾರಿ ಸ್ವಲ್ಪ ಸೌಮ್ಯರಾದರು, “ಏನಪ್ಪಾ ಸಖ್ಯಾ! ಎಷ್ಟು ದಿನಗಳಿಂದ ಸಾಹೇಬರ ಬಳಿ ಕೆಲಸದಲ್ಲಿದ್ದೀಯ? ಮತ್ತು ಆ ಲೂಟಿಕೋರರಲ್ಲಿ ಯಾರನ್ನಾದರೂ ಗುರುತಿಸಿದೆ ಯಾಕೇ?”
ಸಖ್ಯಾ ಎರಡೂ ಕೈಗಳನ್ನು ಜೋಡಿಸಿ ಮತ್ತು ಮೊಣಕಾಲೂರಿ ಕುಳಿತು ಹೇಳಿದ, “ಸಾಹೇಬರೇ! ನಾನು ಸಾಹೇಬರ ಮಾವನ ಮನೆಯ ಊರಿನಲ್ಲಿ ಇರುತ್ತಿದ್ದೆ. ಅವರ ಮಾವಂದಿರೇ ನನಗೆ ಶಿಫಾರಸು ಕೊಟ್ಟು ಅವರ ಬಳಿ ಕಳುಹಿಸಿದರು. ಕಳೆದ ಮೂರು ವರ್ಷಗಳಿಂದ ನಾನು ಅವರ ಕುದುರೆ ಗಾಡಿ ನೋಡಿಕೊಳ್ಳುತ್ತೇನೆ ಮತ್ತು ಕುದುರೆಗಳ ಆರೈಕೆ ಮಾಡುತ್ತೇನೆ.
ಸಾಹೇಬರೇ! ಒಂದಂತೂ ಕತ್ತಲು ಮತ್ತು ಅದರಲ್ಲಿ ಆ ಲೂಟಿಕೋರರು ಮುಖವನ್ನು ಕಂಬಳಿಯಿಂದ ಅರ್ಧ ಮುಚ್ಚಿಕೊಂಡಿದ್ದರು. ಆದ್ದರಿಂದ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಆದರೆ ಯಾರೂ ಪರಿಚಿತರಂತೆ ಕಾಣಿಸಲಿಲ್ಲ. ಆದರೆ ಯಾರು ನನಗೆ ಒದ್ದನೋ, ಆ ಲೂಟಿಕೋರನ ಕಾಲಿನಲ್ಲಿ ದೊಡ್ಡ ಕಡಗವಿತ್ತು. ಅಂತಹ ದಪ್ಪಗಿನ ಕಾಲು ಕಡಗವನ್ನು ನಾನು ಈ ಮೊದಲು ಎಂದಿಗೂ ನೋಡಿರಲಿಲ್ಲ.”
ಇತರ ಹಲವಾರು ವಿಚಾರಣೆಗಳೂ ಆದವು ಮತ್ತು ಪೊಲೀಸ್ ಅಧಿಕಾರಿಗಳಿಗೆ ಯಾರೋ ಬೇರೆ ಪ್ರದೇಶದಿಂದ ಬಂದ ಲೂಟಿಕೋರರ ತಂಡವಾಗಿರಬೇಕು ಎಂದು ಖಚಿತವಾಯಿತು. ಅವರು ಮೃತದೇಹದ ಎಲ್ಲಾ ಪರೀಕ್ಷೆಯನ್ನು ಬರೆದುಕೊಂಡರು ಮತ್ತು ಹಾಜರಿದ್ದ ಪ್ರೌಢ ವ್ಯಕ್ತಿಗಳ ಹೇಳಿಕೆಗಳನ್ನೂ ತೆಗೆದುಕೊಂಡರು. ಯಾರಿಗೂ ಏನೂ ತಿಳಿದಿರಲಿಲ್ಲ. ಎಲ್ಲರೂ ಕೇವಲ ಗಾಡಿವಾನನ ಕೂಗಾಟವನ್ನು ಕೇಳಿದ್ದರು ಮತ್ತು ದೇವಾಲಯದಿಂದ ಹೊರಗೆ ಬಂದ ನಂತರ ಆ ಮೃತದೇಹಗಳನ್ನು ನೋಡಿದ್ದರು.
ಆ ಮೃತ ಪೊಲೀಸ್ ಅಧಿಕಾರಿಯ ಹೆಂಡತಿಯೂ ಅಳುತ್ತಾ-ಅಳುತ್ತಾ ಹೇಳಿದರು, “ಈ ಸಖ್ಯಾ ನನ್ನ ತವರು ಮನೆಯಲ್ಲಿ ಕುದುರೆಗಳ ಕೆಲಸ ನೋಡಿಕೊಳ್ಳುತ್ತಿದ್ದ. ಅವನು ತುಂಬ ಪ್ರೀತಿಯವನು
ಮತ್ತು ವಿಶ್ವಾಸಾರ್ಹನು. ಅವನು ಸಾಹೇಬರಿಗೆ ಘಾತ ಮಾಡುವುದಿಲ್ಲ.”
ನಿಧಾನವಾಗಿ ಜನರೆಲ್ಲ ಚದುರಿ ಹೋದರು. ಪೊಲೀಸ್ ಅಧಿಕಾರಿಗಳು ಮತ್ತು ಸಿಪಾಯಿಗಳು ಹೊರಟುಹೋದರು. ಇಬ್ಬರೂ ಶವಗಳನ್ನು ಸರಿಯಾದ ಕ್ರಮಗಳ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ದೇವಾಲಯದ ಆವರಣದಲ್ಲಿ ಕೇವಲ ಗ್ರಾಮದ ಕೆಲವು ಆಯ್ದ ಪ್ರತಿಷ್ಠಿತರು ಮತ್ತು ದೇವಾಲಯಕ್ಕೆ ಯಾವಾಗಲೂ ಬರುವ ಭಜನಾ ಮಂಡಳಿಯವರು ಮಾತ್ರ ನಿಂತಿದ್ದರು.
ಮಲ್ಹಾರರಾವ್ ಗ್ರಾಮದ ಉಪಾಧ್ಯಾಯರನ್ನು ಪ್ರಶ್ನಿಸಿದರು, “ನಮ್ಮ ಈ ಪವಿತ್ರ ದೇವಾಲಯದ ಅಂಗಳದಲ್ಲಿಯೇ ಇಂತಹ ರಕ್ತಪಾತವಾಗಿದೆ. ನಾವು ವಾರಕರಿಗಳು ಮಾಂಸಾಹಾರವನ್ನೂ ಸಹ ಮಾಡುವುದಿಲ್ಲ. ಹಾಗಾದರೆ ಈ ಜಾಗವನ್ನು ಈಗ ಶುದ್ಧೀಕರಿಸಬೇಕಾಗಿದೆಯಲ್ಲವೇ?” ಈ ಪ್ರಶ್ನೆ ನಿಜವಾಗಿ ಅಲ್ಲಿನ ಪ್ರತಿಯೊಬ್ಬರಿಗೂ ಕಾಡುತ್ತಿತ್ತು.
ಉಪಾಧ್ಯಾಯರು ಮಿನುಗುವ ದೀಪದ ಬೆಳಕಿನಲ್ಲಿ ಪಂಚಾಂಗವನ್ನು ತಿರುಗಿಸುತ್ತಾ ಹೇಳಿದರು, “ಮಲ್ಹಾರರಾವ್! ಮುಹೂರ್ತವೂ ಚೆನ್ನಾಗಿರಲಿಲ್ಲ ಮತ್ತು ನಕ್ಷತ್ರವಂತೂ ಬಹಳ ಕೆಟ್ಟದಾಗಿತ್ತು. ಆದ್ದರಿಂದ ಶುದ್ಧೀಕರಣ ಮತ್ತು ಶಾಂತಿಪಾಠ ಮಾಡಲೇಬೇಕು. ಈ ಅಂಗಳದಲ್ಲಿಯೇ ಎಲ್ಲಾ ವ್ಯವಸ್ಥೆ ಮಾಡಬೇಕು. ಅಲ್ಲಿ ನಾಲ್ಕೂ ಕಡೆ ಮಂಟಪ ಕಟ್ಟಿಕೊಳ್ಳಬೇಕು. ‘ಯಾರೊಬ್ಬರ ಅಶುಭ ಛಾಯೆಯೂ ಬೀಳಬಾರದು’ ಎಂದು ಮಂಟಪದ ನಾಲ್ಕೂ ಬದಿಯನ್ನು ದಪ್ಪದಾದ ಟೆಂಟ್ ಬಟ್ಟೆಗಳಿಂದ ಮುಚ್ಚಬೇಕು ಮತ್ತು ಈ ಮಂಟಪದಲ್ಲಿ ಕೇವಲ ಆಯ್ದ ಜನರಿಗೆ ಮಾತ್ರ ಒಳಗೆ ಹೋಗಿ ಬರಲು ಅನುಮತಿ ಇರಬೇಕು.” ಉಪಾಧ್ಯಾಯರು ಬೇಕಾಗುವ ಸಾಮಗ್ರಿಗಳ ದೊಡ್ಡ ಪಟ್ಟಿಯನ್ನು ಮಾಡಿಕೊಟ್ಟರು.
ಉಪಾಧ್ಯಾಯರು ಮತ್ತು ಮಲ್ಹಾರರಾವ್ ಸೇರಿಕೊಂಡು ಗ್ರಾಮದ ಸೂಕ್ಷ್ಮ ಬುದ್ಧಿಯ ಜನರನ್ನು ಮಾತ್ರ ಈ ಕೆಲಸಕ್ಕೆ ನೇಮಿಸಿದರು. ಸಹಜವಾಗಿಯೇ ಅವರಿಗೆ ದೇವಾಲಯದ ಆವರಣದಿಂದ ಹೊರಗೆ ಹೋಗಲು ಅನುಮತಿ ಇರಲಿಲ್ಲ.
ಫಡಕೆ ಮಾಸ್ತರರು ಎರಡೂ ಕೈಗಳನ್ನು ಜೋಡಿಸಿ ಭಗವಂತನನ್ನು ಸ್ಮರಿಸುತ್ತಾ ಹೇಳಿದರು, “ಇದು ಸ್ವಯಂ ಭಗವಂತನ ಕೃಪೆಯಿಂದಲೇ ಆಗಬಹುದು. ನನ್ನನ್ನು ಬಿಟ್ಟುಬಿಡಿ. 'ಇಬ್ಬರೂ ಸಹೋದರರು ಬಂದಿದ್ದಾರೆ' ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಜಾನಕೀಬಾಯಿ ಎಷ್ಟು ಚುರುಕಾಗಿ ಧನಗರಿ ಕಂಬಳಿ ಹೊದ್ದು ನನಗೆ ಸೇರಿಕೊಂಡಳು, ಅದು ಆಶ್ಚರ್ಯಕರವಾಗಿತ್ತು ಮತ್ತು ಅವಳು ಆ ನೀಚ ಪೊಲೀಸ್ ಆಫೀಸರ್ ಮೇಲೆಯೇ ಕೊಡಲಿಯೇಟು ಹಾಕಿದಳು.”
ಮಲ್ಹಾರರಾವ್ ಪ್ರೀತಿಯಿಂದ ತಮ್ಮ ಸೊಸೆಯನ್ನು ನೋಡುತ್ತಾ ಹೇಳಿದರು, “ಮಗಳೇ! ನೀನು ನಿಜವಾಗಿಯೂ ರಣರಾಗಿಣಿ. ಈ ಇಬ್ಬರು ನೀಚ ಸಹೋದರರೇ ನಮ್ಮ ಜಿಲ್ಲೆಯ ಅನೇಕ ದೇಶಭಕ್ತರನ್ನು ಬಹಳಷ್ಟು ಹಿಂಸಿಸಿದ್ದರು. ಆ ವ್ಯಾಪಾರಿ ಸಹೋದರ ಪೊಲೀಸರಿಗೆ ಗುಪ್ತ ಮಾಹಿತಿಗಳನ್ನು ನೀಡುತ್ತಿದ್ದ ಮತ್ತು ಸ್ವಾತಂತ್ರ್ಯ ಸೇನಾನಿಗಳನ್ನು ಹಿಡಿದು ಕೊಡುತ್ತಿದ್ದ, ಮತ್ತು ಆ ಪೊಲೀಸ್ ಆಫೀಸರ್ ಸಹೋದರ ಆ ಎಲ್ಲರನ್ನು ಅತಿಯಾಗಿ ಹಿಂಸಿಸುತ್ತಿದ್ದ ಮತ್ತು ಅದು ಕೂಡ ಜನರ ಮುಂದೆ. ಇದರಿಂದಾಗಿ ಭಾರಿ ಭಯದ ವಾತಾವರಣ ನಿರ್ಮಾಣವಾಗಿತ್ತು.”
ಫಕೀರಬಾಬಾ ‘ಪ್ರಭು ರಾಮಚಂದ್ರ ಕೀ ಜೈ’ ಎಂದು ಹೇಳಿ ಅತ್ಯಂತ ಆದರದಿಂದ ಹೇಳಿದರು, “ಇಲ್ಲಿನ ಭಯ ದೂರವಾಗಿದೆ. ಕಾರ್ಯದ ಆರಂಭವನ್ನು ಜಾನಕಿ ಮಾಡಿದ್ದಾಳೆ. ಅದಕ್ಕೆ ಮಹಾದೇವ್ ರಾವ್ ಫಡಕೆ ಅವರು ನೆರವು ನೀಡಿದ್ದಾರೆ ಮತ್ತು ಸಂಪೂರ್ಣ ಯೋಜನೆಯನ್ನು ರಾಮಚಂದ್ರನು ಹಾಕಿದ್ದನು. ರಾಮ, ಜಾನಕಿ ಮತ್ತು ಶಿವ ಒಟ್ಟಿಗೆ ಬಂದ ಮೇಲೆ ಅಶುಭದ ನಾಶವಾಗಲೇಬೇಕು.”
(ಕಥೆ ಮುಂದುವರಿಯುವುದು)

.jpg)
.jpg)
.jpg)
.jpg)
.jpg)
.jpg)