ಸದ್ಗುರು ಶ್ರೀಅನಿರುದ್ಧರ ಭಾವಲೋಕದಿಂದ - ಪಾರ್ವತಿ ಮಾತೆಯ ನವದುರ್ಗಾ ರೂಪಗಳ ಪರಿಚಯ - ಭಾಗ 1

ಸದ್ಗುರು ಶ್ರೀಅನಿರುದ್ಧರ ಭಾವಲೋಕದಿಂದ - ಪಾರ್ವತಿ ಮಾತೆಯ ನವದುರ್ಗಾ ರೂಪಗಳ ಪರಿಚಯ - ಭಾಗ 1

ಬುದ್ಧಿದಾತನಾದ ವಿನಾಯಕ ಶ್ರೀಗಣರಾಯನಿಗೆ ಅನಂತ ಚತುರ್ದಶಿಯಂದು ವಿದಾಯ ಹೇಳುವಾಗ ಮನಸ್ಸಿನಲ್ಲಿ ಒಂದು ಬಗೆಯ ದುಃಖ ಉಂಟಾಗುತ್ತದೆ. ಆದರೆ ಕೆಲವೇ ದಿನಗಳಲ್ಲಿ, ನಮ್ಮ ಶ್ರದ್ಧೆಗೆ ಹೊಸ ಚೈತನ್ಯ ನೀಡುವ, ಭಕ್ತಿ ಮತ್ತು ಉತ್ಸಾಹದ ಹೊಸ ಪ್ರಯಾಣ ಆರಂಭವಾಗುತ್ತದೆ, ಅದೇ ಆಶ್ವಿನ್  ನವರಾತ್ರಿ.

ಆಶ್ವಿನ್  ನವರಾತ್ರಿಯ ಕೊನೆಯಲ್ಲಿ, ಅಂದರೆ ದಸರಾದಂದು, ಶ್ರೀರಾಮನು ರಾವಣನನ್ನು ಸಂಹರಿಸಿದನು, ಅಶುಭದ ನಾಶವಾಯಿತು, ಆದ್ದರಿಂದ ಈ ನವರಾತ್ರಿಯನ್ನು ಸದ್ಗುರು ಶ್ರೀಅನಿರುದ್ಧರು 'ಅಶುಭನಾಶಿನಿ ನವರಾತ್ರಿ' ಎಂದು ಕರೆದಿದ್ದಾರೆ.

ಈ ನವರಾತ್ರಿಯಲ್ಲಿ ತಾಯಿ ಜಗದಂಬೆಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ಅದೇ ರೀತಿ ಭಾರತದ ಹಲವು ಭಾಗಗಳಲ್ಲಿ ಈ ಒಂಬತ್ತು ದಿನಗಳಲ್ಲಿ ಭಕ್ತಮಾತೆ ಪಾರ್ವತಿಯ ಒಂಬತ್ತು ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ರೂಪಗಳನ್ನು ಭಕ್ತಿಭಾವದಿಂದ ಪೂಜಿಸಲಾಗುತ್ತದೆ. ಪಾರ್ವತಿ ಮಾತೆಯ ಈ ರೂಪಗಳನ್ನೇ ನಾವು 'ನವದುರ್ಗಾ' ಎಂದು ಕರೆಯುತ್ತೇವೆ.

ದೈನಿಕ ಪ್ರತ್ಯಕ್ಷದ ಸಂಪಾದಕೀಯಗಳ ಮೂಲಕ ಸದ್ಗುರು ಶ್ರೀಅನಿರುದ್ಧರು ತಮ್ಮ ಆಳವಾದ ಅಧ್ಯಯನ ಮತ್ತು ಚಿಂತನೆಯಿಂದ ಈ ನವದುರ್ಗೆಯರ ಮಹತ್ವವನ್ನು ಅತ್ಯಂತ ಸರಳ ಮತ್ತು ಸುಲಭ ಭಾಷೆಯಲ್ಲಿ ವಿವರಿಸಿದ್ದಾರೆ; ಈ ಸಂಪಾದಕೀಯಗಳು ಕೇವಲ ಮಾಹಿತಿ ನೀಡುವಂತವುಗಳಲ್ಲ, ಬದಲಿಗೆ ಭಕ್ತಿಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸುವ ಮತ್ತು ನವದುರ್ಗೆಯರ ನಿಜವಾದ ಪರಿಚಯ ಮಾಡಿಕೊಡುವಂತವುಗಳಾಗಿವೆ.

ಇಂದಿನಿಂದ ಇದೇ ಸಂಪಾದಕೀಯಗಳ ಆಧಾರದ ಮೇಲೆ ಬ್ಲಾಗ್‌ಪೋಸ್ಟ್‌ಗಳನ್ನು ನಮ್ಮೆಲ್ಲರಿಗಾಗಿ ಲಭ್ಯವಾಗಿಸುತ್ತಿದ್ದೇವೆ. ನಾವೆಲ್ಲರೂ ಈ ಭಕ್ತಿಭಾವ ಮತ್ತು ಶ್ರದ್ಧೆಯ ಪ್ರಯಾಣದಲ್ಲಿ ಪಾಲ್ಗೊಳ್ಳೋಣ.


ಉಲ್ಲೇಖ - ಸದ್ಗುರು ಶ್ರೀಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದಲ್ಲಿಯ 'ತುಳಸಿಪತ್ರ' ಎಂಬ ಸಂಪಾದಕೀಯ ಸರಣಿಯ ಸಂಪಾದಕೀಯ ಸಂಖ್ಯೆ 1380 ಮತ್ತು 1381.

 ಸದ್ಗುರು ಶ್ರೀ ಅನಿರುದ್ಧ ಬಾಪು ತುಳಸಿಪತ್ರ-1380  ಈ ಸಂಪಾದಕೀಯದಲ್ಲಿ ಬರೆಯುತ್ತಾರೆ, 


ಬ್ರಹ್ಮವಾದಿನಿ ಲೋಪಮುದ್ರೆಯು ಮೂಲಾರ್ಕಗಣೇಶನ ಸತ್ಯಯುಗದ ಸ್ಥಾಪನೆಯ ಕಥೆಯನ್ನು ಹೇಳಿದ ನಂತರ ಪ್ರೀತಿಯಿಂದ ಪಾರ್ವತಿ ಮಾತೆಯನ್ನು ನೋಡಲಾರಂಭಿಸಿದಳು. 

ಆ ಅನ್ನಪೂರ್ಣ ಪಾರ್ವತಿಯು ಲೋಪಮುದ್ರೆಗೆ  ಹೇಳಿದಳು, ಹೇ ಬ್ರಹ್ಮವಾದಿನಿ ಲೋಪಮುದ್ರೆ! ಈ ಕಥೆಯನ್ನು ನೀನು ಎಷ್ಟು ಸುಂದರವಾಗಿ ಹೇಳಿದೆ.!

ಶ್ರೀಶಾಂಬವಿವಿದ್ಯೆಯ  ಮೊದಲ ಕಕ್ಷೆಯ ಬಗ್ಗೆ ವಿವರಿಸುವಾಗ ಈ ಕಥೆಯನ್ನು ಹೇಳಿ ನೀನು ಶ್ರದ್ಧಾವಂತರಿಗೆ ಈ ಮೊದಲ ಹೆಜ್ಜೆಯನ್ನು ಇಡುವುದು ತುಂಬ ಸುಲಭಗೊಳಿಸಿದೆ."

ಶಿವ-ಋಷಿ ತುಂಬರು ಅತ್ಯಂತ ಪ್ರೀತಿಯಿಂದ ಭಕ್ತಮಾತೆ ಪಾರ್ವತಿಯನ್ನು ಕೇಳಿದರು, "ಹೇ ತಾಯಿ! ಬ್ರಹ್ಮವಾದಿನಿ ಲೋಪಮುದ್ರೆಯು ತನ್ನ ಜವಾಬ್ದಾರಿಯನ್ನು ಪೂರೈಸಿದ್ದಾಳೆ. ಆದರೆ ಈ ಮೊದಲ ಹೆಜ್ಜೆಯಲ್ಲಿರುವ ಅನೇಕ ವಿಷಯಗಳನ್ನು ನೀನು ಮಾತ್ರವೇ ಸ್ಪಷ್ಟಪಡಿಸಬಹುದು. ಏಕೆಂದರೆ 'ದಕ್ಷಕನ್ಯೆ ಸತಿ' ಮತ್ತು 'ಹಿಮವಾನ್‌ಕನ್ಯೆ ಪಾರ್ವತಿ' ಈ ನಿನ್ನ ಎರಡೂ ಜನ್ಮಗಳಲ್ಲಿ ನೀನು ಈ ಶಾಂಬವಿವಿದ್ಯೆಯ ಪ್ರತಿಯೊಂದು ಹೆಜ್ಜೆಯ ಮೇಲೆ ಅತ್ಯಂತ ಸರಿಯಾದ ಪ್ರಯಾಣ ಮಾಡಿ ತಪಸ್ಸು ಮಾಡಿದ್ದೀಯೆ ಮತ್ತು ಅದು ಸಹ ಮಾನವ ಜನ್ಮದಲ್ಲಿ ಬಂದು ಸೂಕ್ಷ್ಮದಲ್ಲಿರುವ ಪರಮಶಿವನನ್ನು ಪಡೆಯುವುದಕ್ಕಾಗಿಯೇ;

ಮತ್ತು ಈ ನಿನ್ನ ತಪಸ್ಸಿನಿಂದಲೇ ನಿನ್ನ ಮತ್ತು ಶಿವನ ವಿವಾಹ ಬಂಧನ ನೆರವೇರಿತು ಮತ್ತು ಸ್ಕಂದ ಹಾಗೂ ಗಣಪತಿಯ ಉತ್ಪತ್ತಿಯಾಯಿತು."

ದೇವರ್ಷಿ ನಾರದರು ಶಿವ-ಋಷಿ ತುಂಬರು ಅವರ ಮಾತಿಗೆ ಸಂಪೂರ್ಣ ಒಪ್ಪಿಗೆ ನೀಡಿದರು ಮತ್ತು ಹೇಳಿದರು, "ಹೇ ಭಕ್ತಮಾತೆ ಪಾರ್ವತಿ! ನೀನು ಸ್ವತಃ ತಪಸ್ಸನ್ನು ಆಚರಿಸಿ ಕೊನೆಗೆ ಶಿವನಿಂದಲೇ ಈ ಶಾಂಬವಿವಿದ್ಯೆಯನ್ನು   ಪುನಃ ಪಡೆದುಕೊಂಡಿದ್ದಿ ಮತ್ತು ಆದ್ದರಿಂದ ನೀನೇ ಶಾಂಬವಿವಿದ್ಯೆಯ ಪ್ರಥಮ ದೀಕ್ಷಿತೆ, ಪ್ರಥಮ ಉಪಾಸಿಕೆ ಮತ್ತು ಪ್ರಥಮ ಸಾಧಿಕೆಯಾದೆ.”.

ಪರಮಶಿವನು ನಿನಗೆ ಶಾಂಬವಿವಿದ್ಯೆಯಲ್ಲಿಯ ಪ್ರತಿಯೊಂದು ಸಣ್ಣ ಅಂಶವನ್ನು ಆಳವಾಗಿ ವಿವರಿಸಿ ಹೇಳಿದ್ದಾನೆ, ಆದ್ದರಿಂದ ನಾನು ಎಲ್ಲರ ಪರವಾಗಿ ನಿನಗೆ ಪ್ರಾರ್ಥಿಸುತ್ತೇನೆ, ಬ್ರಹ್ಮವಾದಿನಿ ಲೋಪಮುದ್ರೆಯು ಶಾಂಬವಿವಿದ್ಯೆಯನ್ನು ವಿವರಿಸುವಾಗ, ನಿನಗೆ ಬೇಕಾದಾಗ ನಮ್ಮೆಲ್ಲರ ಮನೋಗತವನ್ನು ಅರಿತು ನೀನೇ ಮಾತನಾಡಲು ಆರಂಭಿಸು.

ಹೇ ಪಾರ್ವತಿ! ನೀನು ಆದಿಮಾತೆಯ ಒಂದು ಅದ್ಭುತ ಕನ್ಯೆಯಾಗಿದ್ದೀಯೆ, ನಿನ್ನ ಪ್ರತಿಯೊಂದು ಕೃತಿಯಲ್ಲೂ 'ಶಾಂಬವಿವಿದ್ಯಾ' ಒಂದೇ ಮಾರ್ಗವಾಗಿರುತ್ತದೆ ಮತ್ತು ಇದೇ ಕಾರಣದಿಂದ ನಿನ್ನ ಈ ಶಾಂಬವಿವಿದ್ಯೆಯ ತಪಸ್ಸಿನಲ್ಲಿನ ಒಂಬತ್ತು ರೂಪಗಳು (HL) ನವದುರ್ಗಾ ಎಂದು ಪ್ರಸಿದ್ಧವಾಗಿವೆ. 1) ಶೈಲಪುತ್ರಿ, 2) ಬ್ರಹ್ಮಚಾರಿಣಿ, 3) ಚಂದ್ರಘಂಟಾ, 4) ಕೂಷ್ಮಾಂಡ, 5) ಸ್ಕಂದಮಾತಾ, 6) ಕಾತ್ಯಾಯನಿ, 7) ಕಾಲರಾತ್ರಿ, 8) ಮಹಾಗೌರಿ, 9) ಸಿದ್ಧಿದಾತ್ರಿ."

ನಂತರ ಎಲ್ಲಾ ಋಷಿವೃಂದದತ್ತ ತಿರುಗಿ ದೇವರ್ಷಿ ನಾರದರು ಹೇಳಿದರು, "ಪಾರ್ವತಿಯ ಈ ಒಂಬತ್ತು ರೂಪಗಳನ್ನು ನವರಾತ್ರಿಗಳಲ್ಲಿ ಕ್ರಮವಾಗಿ ಒಂದೊಂದು ದಿನ ಪೂಜಿಸಲಾಗುತ್ತದೆ.

ಏಕೆಂದರೆ, ಯಾವ ರೀತಿ ‘ಶ್ರೀಸೂಕ್ತ’ ವು ಭಕ್ತಮಾತೆ ಲಕ್ಷ್ಮಿ  ಮತ್ತು ಆದಿಮಾತೆ ಮಹಾಲಕ್ಷ್ಮಿಯರ ಸಂಯೋಜಿತ ಸ್ತೋತ್ರವಾಗಿದೆಯೋ, ಅದೇ ರೀತಿ 'ನವರಾತ್ರಿಪೂಜನ'ವು ಭಕ್ತಮಾತೆ ಪಾರ್ವತಿ ಮತ್ತು ಆದಿಮಾತೆ ದುರ್ಗೆಯ ಸಂಯೋಜಿತ ಪೂಜೆಯಾಗಿದೆ.

ಮತ್ತು ಈ ನವದುರ್ಗೆಯರಲ್ಲಿ ‘ಬ್ರಹ್ಮಚಾರಿಣಿ’  ಸ್ವರೂಪವು ಶ್ರೀಶಾಂಬವಿವಿದ್ಯೆಯ ಆಚಾರಪ್ರತೀಕವೇ ಆಗಿದೆ.

ಈಕೆಯ ತಪಸ್ಸಿನ ಕೊನೆಯಲ್ಲಿ ಪರಮಶಿವನು ಈಕೆಯನ್ನು ಪಡೆದಾಗ, ಈಕೆಯು ತನ್ನ ಪತಿಯ ಬಳಿ ಕೇವಲ ಎರಡು ಇಚ್ಛೆಗಳನ್ನು ವ್ಯಕ್ತಪಡಿಸಿದಳು - 1) ಶಿವನ ಮೇಲಿನ ಅವಳ ಪ್ರೇಮ ಅಖಂಡ ಮತ್ತು ಅಕ್ಷಯವಾಗಿರಬೇಕು ಹಾಗೂ 2) ಪರಮಶಿವನಂತೆ ಅವಳ ಪ್ರತಿಯೊಂದು ಕಾರ್ಯವೂ ಆದಿಮಾತೆಯ ಸೇವೆಗಾಗಿಯೇ ಇರಬೇಕು.


ಶಿವನಿಂದ ಈ ವರವನ್ನು ಕೇಳುವಾಗ ಈ ಪಾರ್ವತಿಯು ಪರಮಶಿವನೊಂದಿಗೆ ಮತ್ತು ಅವನ 'ಆದಿಮಾತೆಯ ಮಗು' ಎಂಬ ಭಾವದೊಂದಿಗೆ ಎಷ್ಟು ತನ್ಮಯತೆಯಿಂದ ಒಂದಾದಳು ಎಂದರೆ ಅವಳು ಸಂಪೂರ್ಣ ಶಿವಮಯಳಾದಳು ಮತ್ತು ಇದೇ ಕಾರಣದಿಂದ ಹುಟ್ಟಿನಿಂದ ಕಪ್ಪಾಗಿರುವ ಈ ಪಾರ್ವತಿಯು ಶುಭ್ರವರ್ಣದ ‘ಮಹಾಗೌರಿ’ ಮತ್ತು ವೃಷಭ ವಾಹನ ಇರುವವಳಾದಳು.

ಮತ್ತು ಆದಿಮಾತೆಯು ಪಾರ್ವತಿಯ ಈ ಪ್ರೇಮಭಾವವನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸಿ ಪಾರ್ವತಿಗೆ ‘ಸಿದ್ಧಿದಾತ್ರಿ’ ಎಂಬ ನವದುರ್ಗೆಯರ ಒಂಬತ್ತನೇ ರೂಪವನ್ನು, ಅಂದರೆ ಮಹಾದುರ್ಗೆಯ ತನ್ನದೇ ಆದ ಸಿದ್ಧೇಶ್ವರಿ ರೂಪದ ಸುಲಭ ಸ್ವರೂಪವನ್ನು ನೀಡಿದಳು.

ಮತ್ತು ಅದೇ ಸಮಯದಲ್ಲಿ ಆ ಸಿದ್ಧಿದಾತ್ರಿ ಪಾರ್ವತಿಯೇ  'ಶಾಂಬವಿವಿದ್ಯೆಯ ಮೂರ್ತಿ' ಎಂದು ಘೋಷಿಸಲಾಯಿತು."

ದೇವರ್ಷಿ ನಾರದರ ಈ ಭಕ್ತವತ್ಸಲ ಮಾತುಗಳನ್ನು ಕೇಳಿ ಪಾರ್ವತಿಯು ಆದಿಮಾತೆಯ ಆಜ್ಞೆಯಂತೆ ಸಿದ್ಧಿದಾತ್ರಿ  ರೂಪವನ್ನು ಧರಿಸಿದಳು ಮತ್ತು ಮಾತನಾಡಲು ಶುರು ಮಾಡಿದಳು. ಆದರೆ ಶಿವ-ಋಷಿ ತುಂಬರು ಅತ್ಯಂತ ವಿನಯದಿಂದ ಮತ್ತು ಪ್ರೀತಿಯಿಂದ ಅವಳನ್ನು ನಡುವೆಯೇ ನಿಲ್ಲಿಸಿ ಮೊದಲು ಎಲ್ಲ ಶ್ರದ್ಧಾವಂತರಿಗೆ 'ನವದುರ್ಗಾ' ಸ್ವರೂಪಗಳ ಪರಿಚಯ ಮಾಡಿಕೊಟ್ಟರು -


 ಸದ್ಗುರು ಶ್ರೀ ಅನಿರುದ್ಧ ಬಾಪು ತುಳಸಿಪತ್ರ-1381 ಸಂಪಾದಕೀಯದಲ್ಲಿ ಬರೆಯುತ್ತಾರೆ,


ಪಾರ್ವತಿಯ 'ನವದುರ್ಗಾ' ರೂಪಗಳ ಪರಿಚಯವನ್ನು ಪಡೆಯುವಾಗ ಕೈಲಾಸದಲ್ಲಿ ಪ್ರತಿಯೊಬ್ಬರೂ ಅಷ್ಟೊಂದು ಆನಂದಿತ ಮತ್ತು ಉತ್ಸಾಹಿತರಾಗಿದ್ದರು ಎಂದರೆ ಅಲ್ಲಿ ಆನಂದಸಾಗರವೇ ಹರಡಿತ್ತು.

ಈಗ ಮತ್ತೊಮ್ಮೆ ಬ್ರಹ್ಮವಾದಿನಿ ಲೋಪಮುದ್ರೆಯು ಮಾತನಾಡಲು ಶುರು ಮಾಡಿದಳು, "ಹೇ ಅತ್ಯುತ್ತಮ ಋಷಿವರ  ಶ್ರದ್ಧಾವಾನರೇ! ಶಾಂಬವಿವಿದ್ಯೆಯ ಉಪಾಸನೆಯು ಮೊದಲ ಹೆಜ್ಜೆಯಿಂದ ಹದಿನೆಂಟನೇ ಹೆಜ್ಜೆಯವರೆಗೆ ನಿರ್ವಿಘ್ನವಾಗಿ  ನಡೆಯಲಿ ಎಂದೇ ಮೂಲಾರ್ಕಗಣೇಶನ ಉಪಾಸನೆಯನ್ನು ಹೇಳಲಾಗಿದೆ.


ಏಕೆಂದರೆ ಶಾಂಬವಿವಿದ್ಯೆಯ ಉಪಾಸನೆ ಮಾಡುವಾಗ ಯಾವುದೇ ತಪ್ಪು ಆದರೆ, ಅಂದರೆ ಆಹಾರ, ವಿಹಾರ, ಆಚಾರ, ವಿಚಾರಗಳಲ್ಲಿ ತಪ್ಪಾದರೆ ನಡೆಯುವುದಿಲ್ಲ ಮತ್ತು ಶ್ರೀಮೂಲಾರ್ಕಗಣೇಶನ ಮಂತ್ರ ಪಠಣದಿಂದ ಈ ದೋಷಗಳು ಆಗುವುದೇ ಇಲ್ಲ ಅಥವಾ ಸ್ವಲ್ಪವಾದರೂ ಆದರೂ, ಅದು ತಕ್ಷಣವೇ ಇಲ್ಲವಾಗುತ್ತವೆ.

ಶ್ರೀಮೂಲಾರ್ಕಗಣೇಶಮಂತ್ರ :-

ಓಂ ಗಂ ಗಣಪತೇ ಶ್ರೀಮೂಲಾರ್ಕಗಣಪತೇ ವರವರದ ಶ್ರೀಆಧಾರಗಣೇಶಾಯ ನಮಃ.

ಸರ್ವವಿಘ್ನಾನ್ ನಾಶಯ ಸರ್ವಸಿದ್ಧಿಂ ಕುರು ಕುರು ಸ್ವಾಹಾ॥


ಶಾಂಬವಿವಿದ್ಯೆಯ ಮೊದಲ ಹೆಜ್ಜೆಯಲ್ಲಿ ಆದಿಮಾತೆ ಮತ್ತು ತ್ರಿವಿಕ್ರಮನಿಗೆ ಶರಣಾಗುವಾಗ ಮೊದಲು ಮೂಲಾರ್ಕಗಣೇಶನ ಈ ಮಂತ್ರವನ್ನು ಪ್ರತಿದಿನ ಕನಿಷ್ಠ 5 ಬಾರಿ ಪಠಿಸಬೇಕು." 

ಅವಳನ್ನು ನಡುವೆಯೇ ನಿಲ್ಲಿಸಿ ಬ್ರಹ್ಮವಾದಿನಿ ಕಾತ್ಯಾಯನಿಯು (ಬ್ರಹ್ಮರ್ಷಿ ಯಾಜ್ಞವಲ್ಕ್ಯರ ಮೊದಲ ಪತ್ನಿ) ಅತ್ಯಂತ ವಿನಯದಿಂದ ಪ್ರಶ್ನಿಸಿದಳು, "ಹೇ ಹಿರಿಯ ಸಹೋದರಿ ಲೋಪಮುದ್ರೆ! ಮೂಲಾರ್ಕಗಣೇಶನ ಈ ಮಂತ್ರವನ್ನು ಶಾಂಬವಿವಿದ್ಯೆಯ ಉಪಾಸಕರು ಮಾತ್ರವೇ ಪಠಿಸಬೇಕೇ? ಇತರ ಶ್ರದ್ಧಾವಂತರು ಪಠಿಸಬಾರದೇ?"

ಸಿದ್ಧಿದಾತ್ರಿ ಪಾರ್ವತಿಯು ಅತ್ಯಂತ ನಗುವ ಮುದ್ರೆಯಿಂದ ಬ್ರಹ್ಮವಾದಿನಿ ಕಾತ್ಯಾಯನಿಯ ಕಡೆ ನೋಡಿದಳು, "ಹೇ ಪ್ರಿಯ ಪುತ್ರಿ ಕಾತ್ಯಾಯನಿ! ನಿನಗೆ ನಿನ್ನ ಪತಿಯಂತೆ ಯಾವಾಗಲೂ ಸಾಮಾನ್ಯ ಜನರ ಕಲ್ಯಾಣದ ಚಿಂತೆ ಕಾಡುತ್ತಿರುತ್ತದೆ. ಆದ್ದರಿಂದ ನಾನು ನಿನ್ನಿಂದ ಈ ಪ್ರಶ್ನೆಯನ್ನು ನಿರೀಕ್ಷಿಸಿದ್ದೆ.

ಹೇ ಕಾತ್ಯಾಯನಿ! ಹೇಳುವುದನ್ನು ಕೇಳು, ಈ ಮೂಲಾರ್ಕಗಣೇಶನ ಮಂತ್ರವನ್ನು ಯಾವುದೇ ಶ್ರದ್ಧಾವಂತರು ಪಠಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಅದಕ್ಕಾಗಿ ಶಾಂಬವಿವಿದ್ಯೆಯ ಉಪಾಸಕನಾಗಿರಬೇಕೆಂಬ ಯಾವುದೇ ಷರತ್ತು ಇಲ್ಲ.

ಏಕೆಂದರೆ, ಹಾಗೆ ನೋಡಿದರೆ, ಪ್ರತಿಯೊಬ್ಬ ಶ್ರದ್ಧಾವಂತನು ಚಂಡಿಕಾಕುಲದೊಂದಿಗೆ ಜೀವನ ನಡೆಸುತ್ತಿರುವಾಗ ಶಾಂಬವಿವಿದ್ಯೆಯ ಮೊದಲ ಮತ್ತು ಎರಡನೇ ಹೆಜ್ಜೆಯ ಉಪಾಸಕನಾಗಿಯೇ ಇರುತ್ತಾನೆ.

ಮತ್ತು ಇಷ್ಟೇ ಅಲ್ಲ, ಆದಿಮಾತೆಯ ತೀವ್ರ ಭಕ್ತಿ ಮಾಡುವ ಶ್ರದ್ಧಾವಂತನಿಂದ ಈ ಆದಿಮಾತೆಯು ಅವನ ಪ್ರಗತಿಗೆ ಅನುಗುಣವಾಗಿ ಅವನ ಯಾವುದಾದರೂ ಜನ್ಮದಲ್ಲಿ ಅವನಿಂದ ಶಾಂಬವಿವಿದ್ಯಾ-ಉಪಾಸನೆಯನ್ನು ಯಾವುದಾದರೂ ರೀತಿಯಲ್ಲಿ ಮಾಡಿಸುತ್ತದೆ."

ಭಕ್ತಮಾತೆ ಪಾರ್ವತಿಯ ಈ ಉತ್ತರದಿಂದ ಎಲ್ಲ ಋಷಿಕುಮಾರರು ಮತ್ತು ಶಿವಗಣರು ಸಹ ಅತ್ಯಂತ ಪ್ರೋತ್ಸಾಹಿತರಾದರು ಮತ್ತು ಮುಂದಿನ ಭಾಗವನ್ನು ಹೆಚ್ಚು ಗಮನ ಕೊಟ್ಟು ಕೇಳಲು ಇನ್ನಷ್ಟು ಉತ್ಸುಕರಾದರು.

ಲೋಪಮುದ್ರೆ :- "ಶ್ರೀಶಾಂಬವಿವಿದ್ಯೆಯ ಎರಡನೇ ಹೆಜ್ಜೆ ಎಂದರೆ 'ಆದಿಮಾತೆ ಚಂಡಿಕೆಯಿಂದಲೇ ಎಲ್ಲ ವಿಶ್ವದ ಉತ್ಪತ್ತಿಯಾಗಿದೆ ಮತ್ತು ಇದೇ ಕಾರಣದಿಂದ ಎಲ್ಲ ವಿಶ್ವವು ಆಕೆಗೆ ಎಷ್ಟು ತಿಳಿದಿದೆಯೋ ಅಷ್ಟು ಯಾರಿಗೂ ತಿಳಿದಿರಲು ಸಾಧ್ಯವಿಲ್ಲ' ಎಂಬುವುದನ್ನು ನಿರಂತರವಾಗಿ ನೆನಪಿಟ್ಟುಕೊಂಡು ಪ್ರತಿಯೊಂದು ಕಾರ್ಯವನ್ನು ಮಾಡುತ್ತಿರುವುದು.

ಸಾಮಾನ್ಯ ದಿನನಿತ್ಯದ ಜೀವನ ಕಾರ್ಯಗಳನ್ನು ಮಾಡುವಾಗಲೂ, ಸಾಧನೆ ಮಾಡುವಾಗಲೂ, ಇತರ ವಿಶೇಷ ಕಾರ್ಯಗಳನ್ನು ಮಾಡುವಾಗಲೂ ಮತ್ತು ಏನಾದರೂ ತಪ್ಪು ನಡೆಯುತ್ತಿರುವಾಗಲೂ, 'ಈ ಆದಿಮಾತೆಯು ಅದೇ ಕ್ಷಣದಲ್ಲಿ ಅದನ್ನು ಅರಿಯುತ್ತಾಳೆ' ಎಂಬುದನ್ನು ಗಮನದಲ್ಲಿಡಬೇಕು.

ಊಹಿಸಿಕೂಳ್ಳಿ! ಸಾಧಕನ ಮನಸ್ಸಿನಲ್ಲಿ ಯಾವುದೇ ಒಳ್ಳೆಯ ಅಥವಾ ಕೆಟ್ಟ ವಿಚಾರ ಬಂದರೆ, ಸಾಧನೆಯಲ್ಲಿ ಏನಾದರೂ ತಪ್ಪಾದರೆ ಅಥವಾ ಕೈಯಿಂದ ಯಾವುದೇ ದೊಡ್ಡ ತಪ್ಪು ಆದರೆ, ಆಗಲೂ ಶಾಂಬವಿವಿದ್ಯೆಯ ಸಾಧಕರಿಗೆ ಚಿಂತಿಸುವ ಕಾರಣವಿರುವುದಿಲ್ಲ ಮತ್ತು ಹೆದರುವ ಅವಶ್ಯಕತೆಯಂತೂ ಇಲ್ಲವೇ ಇಲ್ಲ.

ಆ ಶ್ರದ್ಧಾವಂತ ಸಾಧಕನು ಕೇವಲ ಅತ್ಯಂತ ಮುಕ್ತವಾಗಿ ತನ್ನ ಮನಸ್ಸಿನಲ್ಲಿಯೇ ಆದಿಮಾತೆ ಮತ್ತು ತ್ರಿವಿಕ್ರಮನಿಗೆ, ತನಗೆ ಏನು ಅನಿಸುತ್ತದೆ ಅದನ್ನು ಹೇಳಬೇಕು ಮತ್ತು 5 ಬಾರಿ 'ಅಂಬಜ್ಞ' ಎಂದು ಹೇಳಬೇಕು."

ಇಲ್ಲೆ ನಿಲ್ಲದೆ ಒಬ್ಬ ಋಷಿಕುಮಾರನು ಅತ್ಯಂತ ಆಶ್ಚರ್ಯದಿಂದ ಮತ್ತು ಪ್ರೀತಿಯಿಂದ ಹೀಗೆ ಉದ್ಗರಿಸಿದನು, "ಏನು! ಇದು ಇಷ್ಟು ಸುಲಭವೇ!"

ಲೋಪಮುದ್ರೆಯು ಅತ್ಯಂತ ವಾತ್ಸಲ್ಯದಿಂದ ಆ ಋಷಿಕುಮಾರನ ಕಡೆ ನೋಡಿದಳು, "ಹೌದು! ಆದರೆ ಯಾವ ಸರಳ, ನೇರ ಮತ್ತು ನಿಷ್ಕಪಟ ಭಾವದಿಂದ ನೀನು ಈ ಪ್ರಶ್ನೆಯನ್ನು ಕೇಳಿದೆಯೋ, ಅದೇ ರೀತಿ ಎಲ್ಲವನ್ನೂ ಹೇಳಬೇಕು ಅಷ್ಟೇ."

ಆದರೂ ಆ ಋಷಿಕುಮಾರನಿಗೆ ಇನ್ನೂ ಒಂದು ಪ್ರಶ್ನೆ ಕೇಳಬೇಕಾಗಿತ್ತು. ಆದರೆ ಈ ಬಾರಿ ಅವನು ಸರಿಯಾದ ಅನುಮತಿ ತೆಗೆದುಕೊಂಡು ಪ್ರಶ್ನಿಸಿದನು, "ಹೇ ಬ್ರಹ್ಮವಾದಿನಿ ಲೋಪಮುದ್ರೆ! ನಿಮ್ಮೆಲ್ಲರ ವಾತ್ಸಲ್ಯವನ್ನು ನೋಡಿಯೇ ನನಗೆ ಪ್ರಶ್ನೆ ಕೇಳುವ ಧೈರ್ಯ ಬರುತ್ತಿದೆ.

ನನ್ನಲ್ಲಿ ಇನ್ನೂ ಅನೇಕ ದುರ್ಗುಣಗಳಿವೆ, ಅನೇಕ ರೀತಿಯ ಭಯಗಳು ಮತ್ತು ಚಿಂತೆಗಳು ನನಗೆ ಆಗಾಗ ಕಾಡುತ್ತವೆ. ನಾನು ಇನ್ನೂ ಕಾಮಕ್ರೋಧಾದಿ ಷಡ್ವಿಕಾರಗಳಿಂದ ಮುಕ್ತನಾಗಿಲ್ಲ.

ನಿಜ ಹೇಳಬೇಕೆಂದರೆ ನಾನು ಈಗ 'ಋಷಿಕುಮಾರ'ನಾಗಿಲ್ಲ, ಬದಲಿಗೆ ಗುರುಕುಲದ ನಿಯಮಗಳ ಪ್ರಕಾರ 'ಋಷಿ' ಆಗಿದ್ದೇನೆ ಮತ್ತು ಇದೇ ಕಾರಣದಿಂದ ನನಗೆ ಶಾಂಬವಿವಿದ್ಯೆಯ ಉಪಾಸನೆ ಮಾಡುವುದು ಅತ್ಯಂತ ಅವಶ್ಯಕ ಎಂದು ಅನಿಸುತ್ತಿದೆ ಮತ್ತು ಮಾಡುವ ಭಯವೂ ಇದೆ.

ನನ್ನಲ್ಲಿರುವ ಈ  ತಾಮಸೀ ತಮೋಗುಣಗಳನ್ನು  ಇಲ್ಲವಾಗಿಸಲು ನಾನು ಶಾಂಬವಿವಿದ್ಯೆಯ ಉಪಾಸನೆ ಮಾಡಬಹುದೇ?"

ಬ್ರಹ್ಮವಾದಿನಿ ಲೋಪಮುದ್ರೆಯು ಆ ಋಷಿಕುಮಾರನನ್ನು ಕೇಳಿದಳು, "ಓ ಪುತ್ರ! ನೀನು ಯಾವ ತಳಮಳದಿಂದ ಈ ಪ್ರಶ್ನೆಯನ್ನು ಕೇಳುತ್ತಿದ್ದೀಯೆ, ಆ ತಳಮಳವೇ ಶಾಂಬವಿವಿದ್ಯೆಯ ಎರಡನೇ ಹೆಜ್ಜೆಯಲ್ಲಿ ಅತ್ಯಂತ ಅವಶ್ಯಕವಾಗಿರುತ್ತದೆ.

ಮತ್ತು ಇದನ್ನು ನೆನಪಿಡು, ನೀವೆಲ್ಲರೂ ಮೊದಲ ಹೆಜ್ಜೆಯನ್ನು ಈಗಾಗಲೇ ಹಿಡಿದಿದ್ದೀರಿ ಮತ್ತು ಇದೇ ಕಾರಣದಿಂದ ನಾನು ನಿಮಗೆ ಮುಂದಿನ ಹೆಜ್ಜೆಗಳನ್ನು ವಿವರಿಸಲು ಸಾಧ್ಯವಾಗುತ್ತಿದೆ.

ಎಲ್ಲಾ ಉಪಸ್ಥಿತ ಶ್ರದ್ಧಾವಾನರೇ! ಶಿವ-ತ್ರಿಪುರಾಸುರ ಯುದ್ಧದ ಕಥೆಯು ಶಾಂಬವಿವಿದ್ಯೆಯದೇ ಕಥಾಸ್ವರೂಪ ಆಗಿದೆ ಮತ್ತು ಆ ಇತಿಹಾಸದ ನೀವು ಪ್ರತಿಯೊಬ್ಬರೂ ಒಂದು ಭಾಗವಾಗಿದ್ದೀರಿ."

ಅವಳ ಈ ಮಾತನ್ನು ಕೇಳಿದ ಕೂಡಲೇ ಆ ಋಷಿಕುಮಾರನು ಅತ್ಯಂತ ವಿನಯದಿಂದ ಅವಳ ಚರಣಗಳ ಮೇಲೆ ತಲೆಯಿಟ್ಟು ನಂತರ ಎದ್ದು ನಿಂತನು ಮತ್ತು ಆ ಸಮಯದಲ್ಲಿ ಅವನ ಮುಖವು ಸೂರ್ಯನ ಉದಯದ ಕಿರಣಗಳ ತೇಜಸ್ಸಿನಿಂದ ಹೊಳೆಯುತ್ತಿತ್ತು.

ಅವನ ಮುಖವನ್ನು ನೋಡಿ ಎಲ್ಲ ಋಷಿಕುಮಾರರು ಮತ್ತು ಶಿವಗಣರು ಆಶ್ಚರ್ಯ ವ್ಯಕ್ತಪಡಿಸಲಾರಂಭಿಸಿದರು ಮತ್ತು ಇದನ್ನು ನೋಡಿ ಲೋಪಮುದ್ರೆಯು ಅವನನ್ನು ಪ್ರಶ್ನಿಸಿದಳು, "ನಿನ್ನ ಮುಖದ ಮೇಲೆ ಈ ಬಾಲಾರ್ಕ-ಕಿರಣಗಳ ತೇಜಸ್ಸು ಹರಡಿದೆ, ಅದರ ಕಾರಣ ನಿನಗೆ ಗೊತ್ತಿದೆಯೇ?"

ಆ ಋಷಿಕುಮಾರನು ಅತ್ಯಂತ ವಿನಯದಿಂದ 'ಇಲ್ಲ' ಎಂದು ಉತ್ತರ ನೀಡಿದನು ಮತ್ತು ಅದರ ಜೊತೆಗೆ ಬ್ರಹ್ಮರ್ಷಿ ಕಶ್ಯಪರು ಎದ್ದು ನಿಂತರು, "ಹೇ ಹಿರಿಯ ಬ್ರಹ್ಮವಾದಿನಿ ಲೋಪಮುದ್ರೆ! ಈ ಋಷಿಕುಮಾರನ ಹೆಸರು 'ಗೌತಮ'. ಈ ನಾಮಕರಣವನ್ನು ನಾನೇ ಮಾಡಿದ್ದೇನೆ. ಏಕೆಂದರೆ ಇವನ ಸ್ವಭಾವ ಮಧ್ಯಾಹ್ನದ ಪ್ರಖರ ಸೂರ್ಯನಂತೆ ಇದೆ ಮತ್ತು ಇವನು ತನ್ನ ತಪಸ್ಸುಗಳನ್ನು ಕೂಡ ಅದೇ ಪ್ರಖರತೆಯಿಂದ ಮಾಡಿದ್ದಾನೆ.

ಆದರೆ ಇವನು ತನ್ನ ಬಗ್ಗೆಯೂ ಅಷ್ಟೊಂದು ಕರ್ತವ್ಯಕಠೋರ ನಾಗಿದ್ದಾನೆಂದರೆ ಇವನು ತನ್ನ ಅತಿ ಚಿಕ್ಕ ತಪ್ಪನ್ನೂ ಸಹ ಕ್ಷಮಿಸುವುದಿಲ್ಲ ಮತ್ತು ಅದರ ಪ್ರಾಯಶ್ಚಿತ್ತವನ್ನು ಮಾಡುತ್ತಿರುತ್ತಾನೆ ಮತ್ತು 'ಸೂರ್ಯಕಿರಣ' ವಿಜ್ಞಾನದ ಇವನು ಶ್ರೇಷ್ಠ ವಿಜ್ಞಾನಿ ಆಗಿದ್ದಾನೆ. ಅವನ ಈ ಪ್ರಖರ ಸತ್ಯನಿಷ್ಠ, ನೀತಿನಿಷ್ಠ ಮತ್ತು ಧರ್ಮನಿಷ್ಠ ಸ್ವಭಾವದಿಂದಲೇ ನಾನು ಅವನಿಗೆ ‘ಗೌತಮ’ (ಗೌ=ಸೂರ್ಯಕಿರಣ) ಎಂಬ ಹೆಸರನ್ನು ನೀಡಿದ್ದೇನೆ.

ಹೇ ಪ್ರಿಯ ಶಿಷ್ಯ ಗೌತಮ! ನಿನ್ನ ತಳಮಳವೂ ಇದೇ ರೀತಿ ಪ್ರಖರವಾಗಿದೆ ಮತ್ತು ಅದಕ್ಕಾಗಿಯೇ ನಿನ್ನ ಮುಖದ ಮೇಲೆ ಈ ಸೂರ್ಯ ತೇಜಸ್ಸು ಹರಡಿದೆ."

ಋಷಿ ಗೌತಮನು ಭಕ್ತಮಾತೆ ಪಾರ್ವತಿಯನ್ನು ಅತ್ಯಂತ ವಿನಯಪೂರ್ವಕವಾಗಿ ಕೇಳಿದನು, "ಹೆ ಭಕ್ತಮಾತೆ ಸಿದ್ಧಿದಾತ್ರಿ! ನನ್ನ ಸ್ವಭಾವದಲ್ಲಿನ ಈ ಪ್ರಖರತೆ ಯಾವಾಗ ದೂರವಾಗುತ್ತದೆ?"

ಪಾರ್ವತಿಯು ನಕ್ಕು ಉತ್ತರ ನೀಡಿದಳು, "ಯಾವಾಗ ನಿನ್ನ ಮುಂದೆ ಒಂದು ಬಂಡೆಯಿಂದ ಜೀವಂತ ಸ್ತ್ರೀ ಆಕಾರ ಪಡೆದುಕೊಳ್ಳುತ್ತಾಳೋ ಆಗ.