ಉಲ್ಲೇಖ - ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದಿನಪತ್ರಿಕೆ 'ಪ್ರತ್ಯಕ್ಷ' ದಲ್ಲಿ ಪ್ರಕಟವಾದ 'ತುಳಸಿಪತ್ರ' ಯ ಸಂಪಾದಕೀಯ (ಅಗ್ರಲೇಖ) ಸರಣಿಯ ಸಂಪಾದಕೀಯ ಸಂಖ್ಯೆ ೧೪೦೦ ಮತ್ತು ೧೪೦೧ |
ಸದ್ಗುರು ಶ್ರೀ ಅನಿರುದ್ಧ ಬಾಪು ಅವರು ತುಳಸಿಪತ್ರ - ೧೪೦೦ ರಲ್ಲಿ ಬರೆಯುತ್ತಾರೆ.
ಬ್ರಹ್ಮವಾದಿನಿ ಲೋಪಮುದ್ರೆಯು ಎಲ್ಲಾ ಬ್ರಹ್ಮರ್ಷಿಗಳು ಮತ್ತು ಬ್ರಹ್ಮವಾದಿನಿಯರೊಂದಿಗೆ ಆದಿಮಾತೆಯ ಶ್ರೀವಿದ್ಯಾರೂಪಕ್ಕೆ ನಮಸ್ಕಾರ ಮಾಡಿದರು ಮತ್ತು ಅವರೆಲ್ಲರೂ ಲೋಪಮುದ್ರೆಯ ನೇತೃತ್ವದಲ್ಲಿ ಆದಿಮಾತೆ ಶ್ರೀವಿದ್ಯೆಯ ಮುಂದೆ ‘ಧ್ಯಾನಕ್ಕೆ’ ಕುಳಿತರು.
ಈ ಎಲ್ಲಾರ ಕಡೆಗೆ ಇತರ ಎಲ್ಲಾ ಉಪಸ್ಥಿತರು ಧ್ಯಾನ ಕೊಟ್ಟು ನೋಡುತ್ತಿದ್ದರು.
ಆ ಎಲ್ಲಾ ಬ್ರಹ್ಮರ್ಷಿಗಳು ಮತ್ತು ಬ್ರಹ್ಮವಾದಿನಿಯರ ಮುಖಗಳ ಮೇಲೆ ಕ್ರಮೇಣವಾಗಿ ಒಂದು ಅತ್ಯಂತ ಆಹ್ಲಾದದಾಯಕ, ಶಾಂತಿಯುತ ಮತ್ತು ಪ್ರಸನ್ನ ಭಾವವು ಶೋಭಿಸಿತು ಮತ್ತು ಈ ಭಾವವು ಹೆಚ್ಚುತ್ತಲೇ ಇತ್ತು.
ಕೇವಲ ಲೋಪಮುದ್ರೆ ಒಬ್ಬರ ಮುಖವು ಸಂಪೂರ್ಣವಾಗಿ ಸ್ಥಬ್ಧ ಮತ್ತು ಶಾಂತವಾಗಿಯೇ ಇತ್ತು. ಅವರ ಮುಖದ ಮೇಲೆ ಅಂತಹ ಪ್ರಸನ್ನ ಭಾವವೂ ಇರಲಿಲ್ಲ ಮತ್ತು ಅಪ್ರಸನ್ನತೆಯೂ ಇರಲಿಲ್ಲ. ಇದನ್ನು ನೋಡಿ ಎಲ್ಲಾ ಉಪಸ್ಥಿತರು ಹೆಚೆಚ್ಚು ಜಿಜ್ಞಾಸುಗಳಾಗುತ್ತಿದ್ದರು.
ಭಗವಾನ್ ತ್ರಿವಿಕ್ರಮನು ಈಗ ‘ಓಂ ನಮಃ ಚಂಡಿಕಾಯ್ಯೇ’ ಈ ಮಂತ್ರದ ಜಪವನ್ನು ಶುರು ಮಾಡಿದರು ಮತ್ತು ಬ್ರಹ್ಮವಾದಿನಿ ಲೋಪಮುದ್ರೆಯ ಮಸ್ತಕದ ಮೇಲೆ ತಮ್ಮ ವರದಹಸ್ತವನ್ನು ಇಟ್ಟರು.
ಅದರ ಜೊತೆಗೆ ಲೋಪಮುದ್ರೆಯ ಮುಖದ ಮೇಲೂ ಕೂಡ ಅದೇ ರೀತಿಯ ಆಹ್ಲಾದದಾಯಕ, ಶಾಂತಿಯುತ ಮತ್ತು ಪ್ರಸನ್ನ ಭಾವವು ಹರಡಲು ಶುರು ಆಯಿತು.
ಮತ್ತು ಬ್ರಹ್ಮವಾದಿನಿ ಲೋಪಮುದ್ರೆಯ ತುಟಿಗಳು ಒಂದರಿಂದ ಇನ್ನೊಂದು ಬೇರೆ ಆದವು ಮತ್ತು ಆಕೆ ಸ್ವತಃ ಕೂಡ ಓಂ ನಮಃ ಚಂಡಿಕಾಯ್ಯೇ’ ಈ ಜಪವನ್ನು ಮಾಡಲು ಶುರು ಮಾಡಿದರು.
ಮತ್ತು ಅದರ ಜೊತೆಗೆ ಇತರ ಎಲ್ಲಾ ಬ್ರಹ್ಮರ್ಷಿಗಳು ಮತ್ತು ಬ್ರಹ್ಮವಾದಿನಿಯರು ತಮ್ಮ ತಮ್ಮ
ಕಣ್ಣುಗಳನ್ನು ತೆರೆದರು.
ಆದರೆ ಬ್ರಹ್ಮವಾದಿನಿ ಲೋಪಮುದ್ರೆಯ ಕಣ್ಣುಗಳು ಮಾತ್ರ ಇನ್ನೂ ಕೂಡ ಮುಚ್ಚಿಯೇ ಇದ್ದವು. ಆಕೆ ಜೋರಾಗಿ ಮಂತ್ರೋಚ್ಚಾರಣೆ ಮಾಡುತ್ತಿದ್ದರೂ ಕೂಡ ಆಕೆ ಇನ್ನೂ ‘ಧ್ಯಾನದಲ್ಲಿಯೇ' ಇದ್ದಾರೆ ಎಂಬುದು ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ತಿಳಿಯುತ್ತಿತ್ತು.
ಲೋಪಮುದ್ರೆಯ ಮಸ್ತಕದ ಮೇಲಿದ್ದ ಭಗವಾನ್ ತ್ರಿವಿಕ್ರಮನ ವರದಹಸ್ತವು ಅವರ ಕೂದಲಿನಿಂದ ಈಗ ಬೇರೆಯಾಗುತ್ತಲೆ ಬ್ರಹ್ಮವಾದಿನಿ ಲೋಪಮುದ್ರೆ ಪದ್ಮಾಸನದಿಂದ ಎದ್ದು ನಿಂತರು ಮತ್ತು ಅವರು ತಮ್ಮ ಎರಡೂ ಕೈಗಳನ್ನು ಜೋಡಿಸಿದರು; ಆದರೂ ಕೂಡ ಅವರು ಇನ್ನೂ ಸಂಪೂರ್ಣವಾಗಿ ‘ಧ್ಯಾನದಲ್ಲಿಯೇ' ಇದ್ದರು.
ಈ ಸಮಯದ ಲೋಪಮುದ್ರೆಯ ಮುಖವು ಕೇವಲ ಆನಂದವನ್ನು ತೋರಿಸುತ್ತಿತ್ತು. ಜಗತ್ತಿನಲ್ಲಿನ ಆನಂದದ ವಿವಿಧ ಬಣ್ಣಗಳು, ವಿವಿಧ ಮೂಲ/ ಸ್ತೋತ್ರಗಳು, ವಿವಿಧ ಪ್ರವಾಹಗಳು, ವಿವಿಧ ಸಾಗರಗಳು ಅವರ ಒಂದೇ ಮುಖದ ಮೇಲೆ ಆನಂದದಿಂದ ವಾಸ ಮಾಡುತ್ತಿದ್ದವು ಎಂದೆನಿಸುತ್ತಿತ್ತು.
ಭಗವಾನ್ ತ್ರಿವಿಕ್ರಮನ ಶಬ್ದಗಳು ಪ್ರತಿಯೊಬ್ಬರ ಕಿವಿಯ ಮೇಲೆ ಬಿದ್ದವು, “ಇದುವೇ ಬ್ರಹ್ಮಾನಂದ ಸ್ಥಿತಿ. ಇದುವೇ ನಿಜವಾದ ಪೂರ್ಣ ಸ್ಥಿತಿ ಮತ್ತು ಪೂರ್ಣ ಗತಿ.
ಇಂತಹ ಬ್ರಹ್ಮಾನಂದವು ಶ್ರೀಶಾಂಭವಿವಿದ್ಯೆಯ ಹದಿನೇಳು ಮತ್ತು ಹದಿನೆಂಟನೆಯ ಕಕ್ಷೆಗಳನ್ನು (ಪಡಿಗಳನ್ನು) ದಾಟಿದ ನಂತರವೇ ಪ್ರಾಪ್ತವಾಗುತ್ತದೆ.
ಈ ಇತರ ಎಲ್ಲಾ ಬ್ರಹ್ಮರ್ಷಿಗಳು ಮತ್ತು ಬ್ರಹ್ಮವಾದಿನಿಯರಿಗೆ ಕೂಡ ಈ ಬ್ರಹ್ಮಾನಂದವು ಪ್ರಾಪ್ತವಾಗಿದೆ. ಆದರೆ ಜೇಷ್ಠ ಬ್ರಹ್ಮವಾದಿನಿ ಲೋಪಮುದ್ರೆಯ ಬಳಿ ಮಾತ್ರ ಮತ್ತೊಂದು ವಿಶಿಷ್ಟ ವಿಷಯವಿದೆ –
- ಲೋಪಮುದ್ರೆಯು ಮಾಡಿದ ಆದಿಮಾತೆಯ ಭಕ್ತಿಯ ಪ್ರಸಾರದಿಂದ ಅಂದರೆ ಕೋಟ್ಯಾನುಕೋಟಿ ಗುಣಸಂಕೀರ್ತನೆಗಳಿಂದ ಮತ್ತು ಅದು ಕೂಡ ‘ನಾನು ಗುಣಸಂಕೀರ್ತನೆ ಮಾಡುತ್ತಿದ್ದೇನೆ' ಎಂಬ ಭಾವ ಸ್ವಲ್ಪವೂ ಇಲ್ಲದ ಕಾರಣ ಈ ಲೋಪಮುದ್ರೆಯು ಸುಲಭವಾಗಿ ತನ್ನ ಬ್ರಹ್ಮಾನಂದವನ್ನು ಕೂಡ ಆದಿಮಾತೆಯ ಚರಣಗಳ ಬಳಿ ಒಂದು ಕ್ಷಣದಲ್ಲಿ ಅರ್ಪಿಸಲು ಶುರು ಮಾಡಿದರು.
ಮತ್ತು ಲೋಪಮುದ್ರೆಯು ಅರ್ಪಿಸಿದ ಆ ಬ್ರಹ್ಮಾನಂದವು, ಆದಿಮಾತೆ ಎಲ್ಲಿಂದ ವ್ಯಕ್ತವಾದರೋ ಆ ಮೂಲ ಸ್ಥಾನದ ಮೇಲೆ ಅಂದರೆ ಶ್ರೀದತ್ತಗುರುಗಳ ಚರಣಗಳ ಬಳಿ ತಲುಪಿತು.
ಮತ್ತು ಈ ರೀತಿಯಾಗಿ ಲೋಪಮುದ್ರೆಯಲ್ಲಿನ ಬ್ರಹ್ಮಾನಂದಕ್ಕೆ ಸಚ್ಚಿದಾನಂದ ಅವರ ಬೆಂಬಲ ಸಿಕ್ಕಿತು. ಇದರ ಕಾರಣ ಈ ಬ್ರಹ್ಮವಾದಿನಿ ಲೋಪಮುದ್ರೆಯು, ತನ್ನ ಪ್ರತಿ ಕಾರ್ಯವನ್ನು ಮಾಡುತ್ತಿರುವಾಗಲೂ ಸದಾ ಬ್ರಹ್ಮಾನಂದದಲ್ಲಿಯೇ ಮುಳುಗಿರುತ್ತಾರೆ.
ಶ್ರೀಶಾಂಭವಿವಿದ್ಯೆಯ ಎಲ್ಲಾಹದಿನೆಂಟು ಕಕ್ಷೆಗಳನ್ನು ದಾಟಿದ ನಂತರವೇ ಈ ಸಚ್ಚಿದಾನಂದದ ಪ್ರಾಪ್ತಿಯಾಗುತ್ತದೆ.
ಮತ್ತು ಇಂತಹ ಪ್ರಾಪ್ತಿಯು ಕೇವಲ ಲೋಪಮುದ್ರೆಗೆ ಮಾತ್ರ ಆಗಿದೆ. ಅದಕ್ಕಾಗಿಯೇ ಅವರು ಶ್ರೀವಿದ್ಯಾಸಂಹಿತೆಯ, ಶ್ರೀಶಾಂಭವಿವಿದ್ಯೆಯ, ಶ್ರೀಶಾಂಭವಿಮುದ್ರೆಯ, ಶ್ರೀಶಾಂಭವೀಧ್ಯಾನದ ಮತ್ತು ಸಚ್ಚಿದಾನಂದ ಉಪಾಸನೆಯ ಸರ್ವೋಚ್ಚ ಮಾರ್ಗದರ್ಶಕ ಗುರು ಆಗಿದ್ದಾರೆ.
ಭಗವಾನ್ ತ್ರಿವಿಕ್ರಮನು ‘ಅವಧೂತಚಿಂತನ....' ಎಂದು ಹೇಳುತ್ತಲೇ, ಬ್ರಹ್ಮವಾದಿನಿ ಲೋಪಮುದ್ರೆಯ ಕಣ್ಣುಗಳು ತೆರೆಯಲ್ಪಟ್ಟವು ಮತ್ತು ಅವರು ಕೂಡ ‘....ಶ್ರೀಗುರುದೇವದತ್ತ' ಈ ಶಬ್ದಗಳನ್ನು ಉಚ್ಚರಿಸುತ್ತಲೇ.
ಭಗವಾನ್ ತ್ರಿವಿಕ್ರಮನು ಲೋಪಮುದ್ರೆಗೆ ಮಾತನಾಡಲು ಅನುಮತಿ ನೀಡುತ್ತಲೇ, ಆ ಜೇಷ್ಠ ಬ್ರಹ್ಮವಾದಿನಿಯು ಮಾತನಾಡಲು ಶುರು ಮಾಡಿದರು, “ಹೇ ಪ್ರಿಯ ಆಪ್ತಗಣರೇ! ಶ್ರೀಶಾಂಭವಿವಿದ್ಯೆಯ ಹದಿನೇಳು ಮತ್ತು ಹದಿನೆಂಟನೆಯ ಕಕ್ಷೆಗಳ (ಪಡಿಗಳ) ಅಧಿಷ್ಠಾತ್ರಿ ಆಗಿದ್ದಾರೆ, ಅವರು ಒಂಬತ್ತನೆಯ ನವದುರ್ಗೆ ‘ಸಿದ್ಧಿಧಾತ್ರಿ'.
ಈ ಸಿದ್ಧಿಧಾತ್ರಿ ಯೇ ನವರಾತ್ರಿಯ ನವಮಿ ತಿಥಿಯ ರಾತ್ರಿ ಮತ್ತು ದಿನದ ನಾಯಕಿ ಆಗಿದ್ದಾಳೆ.
ಶ್ರೀಶಾಂಭವಿವಿದ್ಯೆಯ ಹದಿನೇಳನೆಯ ಕಕ್ಷೆಗೆ ಬರುವ ಸಾಧಕನಿಗೆ ಭಗವಾನ್ ತ್ರಿವಿಕ್ರಮರು ಸ್ವತಃ ‘ಶ್ರೀಶಾಂಭವಿಧ್ಯಾನಮ್’ವನ್ನು ಕಲಿಸುತ್ತಾರೆ ಮತ್ತು ಅವರು ಅದರ ಅಭ್ಯಾಸ ಕೂಡ ಮಾಡಿಸುತ್ತಾರೆ.
ಸ್ವಲ್ಪ ವೇಳೆಯ ಹಿಂದೆ ನಾವು ಎಲ್ಲರೂ ಯಾವ ಧ್ಯಾನದಲ್ಲಿ ಕುಳಿತಿದ್ದರಿಂದ ನಾವು ಬ್ರಹ್ಮಾನಂದದಿಂದ ತುಂಬಿಹೋಗಿದ್ದೆವೋ, ಆ ಧ್ಯಾನವೇ - ‘ಶ್ರೀಶಾಂಭವಿಧ್ಯಾನಮ್’.
ಈ ಹದಿನೇಳನೆಯ ಪಡಿಯ ಮೇಲೆ ಭಗವಾನ್ ತ್ರಿವಿಕ್ರಮನು ಆ ಸಾಧಕನ ಕೈಯನ್ನು ನವದುರ್ಗೆ ಸಿದ್ಧಿಧಾತ್ರಿಯ ಕೈಯಲ್ಲಿ ನೀಡುತ್ತಾರೆ.
ಮತ್ತು ಆ ಮಾತೆ ಸಿದ್ಧಿಧಾತ್ರಿಯು ಆ ಸಾಧಕನನ್ನು ತನ್ನ ಮಗನಂತೆ ಮಾನವನ ೧೦೦೮ ವರ್ಷಗಳ ಕಾಲ ತನ್ನ ಹತ್ತಿರ ನೋಡಿಕೊಳ್ಳುತ್ತಾರೆ ಮತ್ತು ಅದರ ನಂತರವೇ ಶಾಂಭವಿಧ್ಯಾನಮ್ ಸಂಪೂರ್ಣ ರೂಪವನ್ನು ತಲುಪುತ್ತದೆ.
ಹದಿನೆಂಟನೆಯ ಪಡಿಯ ಮೇಲೆ ಇದೇ ಸಿದ್ಧಿದಾತ್ರಿಯು ಭಗವಾನ್ ತ್ರಿವಿಕ್ರಮನ ಒಪ್ಪಿಗೆಯೊಂದಿಗೆ ಆ ಸಾಧಕನ ಕೈಯನ್ನು ಪುನಃ ಭಗವಾನ್ ತ್ರಿವಿಕ್ರಮರ ಕೈಯಲ್ಲಿಯೇ ನೀಡುತ್ತಾರೆ.
ಭಗವಾನ್ ತ್ರಿವಿಕ್ರಮ ಸ್ವಲ್ಪವೂ ವಿಳಂಬ ಮಾಡದೆ, ಆ ಸಾಧಕನನ್ನು ತಮ್ಮ ಎರಡೂ ಕೈಗಳಲ್ಲಿ ಒಂದು ಮಗುವಿನಂತೆ ಎತ್ತಿಕೊಳ್ಳುತ್ತಾರೆ.
ಮತ್ತು ಆ ಸಾಧಕನನ್ನು ಎಂಟು ವರ್ಷದ ಮಗುವಾಗಿ ಮಾಡಿ ಆದಿಮಾತೆಯ
‘ಮಣಿದ್ವೀಪನಿವಾಸಿನಿ' ರೂಪದ ಕಡೆಗೆ ಅಂದರೆ ‘ಸಿಂಹಾಸನಸ್ಥ ಅಷ್ಟಾದಶಭುಜ ಮಹಿಷಾಸುರಮರ್ದಿನಿ' ರೂಪದ ಕಡೆಗೆ ಅಂದರೆ ‘ಲಲಿತಾಅಂಬಿಕಾ' ರೂಪದ ಕಡೆಗೆ ಅಂದರೆ ಮೂಲ ‘ಶ್ರೀವಿದ್ಯಾ' ರೂಪದ ಕಡೆಗೆ ತೆಗೆದುಕೊಂಡು ಹೋಗುತ್ತಾರೆ.
ಮಣಿದ್ವೀಪದಲ್ಲಿ ನಂತರ ಆ ಮಗು, ಮಗುವಿನ ಆಟ ಆಡುತ್ತಾ ಸದಾ ಇರುತ್ತದೆ - ಅಂದರೆ ಬ್ರಹ್ಮರ್ಷಿ ಅಥವಾ ಬ್ರಹ್ಮವಾದಿನಿಯಾಗಿಯೇ.
ಮಣಿದ್ವೀಪದಲ್ಲಿ ಮಗುವಾಗಿ ಇರುವಾಗ, ಈ ಎಲ್ಲಾ ಸಾಧಕರು ನಂತರ ವಸುಂಧರೆಯ ಮೇಲೆ ಅಥವಾ ಮಾನವರಿರುವ ಇತರ ಯಾವುದೇ ಗ್ರಹದ ಮೇಲೆ ತಮ್ಮ ಮೂಲ ರೂಪದಲ್ಲಿಯೂ ಕೂಡ ಇರುತ್ತಾರೆ, ಕಾರ್ಯ ಕೂಡ ಮಾಡುತ್ತಾರೆ ಮತ್ತು ಕೆಲವು ಬಾರಿ ಜನ್ಮ ಕೂಡ ತೆಗೆದುಕೊಳ್ಳುತ್ತಾರೆ ಮತ್ತು ಅಲ್ಲಿಯ ಪರಿಸ್ಥಿತಿಗೆ ಅನುಗುಣವಾಗಿ ಮೃತ್ಯುವನ್ನೂ ಕೂಡ ಸ್ವೀಕರಿಸುತ್ತಾರೆ. ಆದರೆ ಇವರ ಜನ್ಮ ಮತ್ತು ಮೃತ್ಯುವಿಗೆ ಯಾವುದೇ ಅರ್ಥವಿಲ್ಲ. ಇವರು ಸದಾ ಬ್ರಹ್ಮಾನಂದಿಗಳು ಆಗಿರುತ್ತಾರೆ.’
ಬ್ರಹ್ಮವಾದಿನಿ ಲೋಪಮುದ್ರೆಯು ಇಷ್ಟು ಹೇಳಿದ ಕೂಡಲೇ ಆದಿಮಾತೆ ಶ್ರೀವಿದ್ಯೆಯ ಚರಣಗಳ ಮೇಲೆ ವಿವಿಧ ಬಣ್ಣಗಳ ಸುಗಂಧಿತ ಪುಷ್ಪಗಳನ್ನು ಅರ್ಪಿಸಿದರು. ಅದರ ಜೊತೆಗೆ ಆದಿಮಾತೆಯ ಸಿಂಹಾಸನಸ್ಥ ಮಣಿ ದ್ವೀಪ-ಸ್ವರೂಪವು ಅಲ್ಲಿ ಶೋಭಿಸಿತು.
ಮತ್ತು ಆದಿಮಾತೆಯ ಎಡಭಾಗದಲ್ಲಿ ನಾಲ್ಕು ಮತ್ತು ಬಲಭಾಗದಲ್ಲಿ ನಾಲ್ಕು ಹೀಗೆ ಪಾಡ್ಯದಿಂದ ಹಿಡಿದು ಅಷ್ಟಮಿಯವರೆಗಿನ ನವದುರ್ಗೆಯರು ನಿಂತಿದ್ದರು.
ಮತ್ತು ಆದಿಮಾತೆಯ ಮಸ್ತಕದ ಮೇಲೆ ಸುವರ್ಣಕಮಲಛತ್ರವನ್ನು ಹಿಡಿದು ಒಂಬತ್ತನೆಯ ನವದುರ್ಗೆ ಸಿದ್ಧಿಧಾತ್ರಿಯು ನಿಂತಿದ್ದರು.
ಇವರ ಮುಖದಲ್ಲಿ ಮತ್ತು ಆದಿಮಾತೆಯ ಮುಖದಲ್ಲಿ ಸ್ವಲ್ಪವೂ ವ್ಯತ್ಯಾಸ ಇರಲಿಲ್ಲ.
ಬಾಪು ಮುಂದೆ ತುಳಸಿಪತ್ರ - ೧೪೦೧ ಈ ಅಗ್ರಲೇಖದಲ್ಲಿ ಬರೆಯುತ್ತಾರೆ,
ಒಂಬತ್ತನೆಯ ನವದುರ್ಗೆ ಸಿದ್ಧಿಧಾತ್ರಿಯು ಎಲ್ಲಾ ಉಪಸ್ಥಿತರ ಮುಂದೆ ಬಂದು ಕೈಲಾಸದ ಭೂಮಿಗೂ ಕೂಡ ಪಾದಸ್ಪರ್ಶ ಮಾಡದೆ ನಿಂತರು.
ಮಾತೆ ಸಿದ್ಧಿಧಾತ್ರಿಯ ವರ್ಣವು ಹೊಸ ಗುಲಾಬಿಪುಷ್ಪದ ದಳಗಳಂತೆ ಇತ್ತು.
ಅವರ ಕಣ್ಣುಗಳು ಅತ್ಯಂತ ವಿಶಾಲವಾಗಿಯೂ ಭೇದಕವಾಗಿಯೂ ಇದ್ದವು. ಅವರ ದೃಷ್ಟಿ ಯಾರದ್ದೂ ಆರಪಾರವಾಗಿ ಹೋಗುವಂತಹುದಾಗಿತ್ತು.
ಅವರು ಚತುರ್ಭುಜರು ಆಗಿದ್ದರು. ಅವರ ಹಣೆಯ ಭಾಗದ ಮೇಲೆ ಮೂರನೆಯ ನೇತ್ರದ ಬದಲಿಗೆ ಕುಂಕುಮತಿಲಕವೇ ಕಾಣಿಸುತ್ತಿತ್ತು.
ಇವರ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದಾ ಮತ್ತು ಪದ್ಮ ಈ ಆಯುಧಗಳಿದ್ದವು.
ಇವರ ವಸ್ತ್ರವು ಕೆಂಪು ಬಣ್ಣದ ಮತ್ತು ಸುವರ್ಣ ಅಂಚಿನದ್ದಾಗಿತ್ತು.
ಮತ್ತು ಮುಖ್ಯವಾಗಿ ಇವರ ಪ್ರತಿಯೊಂದು ಚಲನೆಯೂ ಕೂಡ ಅತೀ ಮೃದು, ಸೌಮ್ಯ ಮತ್ತು ನಿಧಾನವಾಗಿತ್ತು.
ಮಾತೆ ಸಿದ್ಧಿಧಾತ್ರಿಯ ಮುಖದ ಮೇಲೆ ಒಂದೇ ಒಂದು ಭಾವವು ಪ್ರಸನ್ನವಾಗಿ ಶೋಭಿಸುತ್ತಿತ್ತು ಮತ್ತು ಅದು ಅಂದರೆ ‘ಸಂತೋಷ’
ಮತ್ತು ಆ ಸಂತೋಷವು ಮಾತೆಯ ಮುಖದಿಂದ ಹೊರಟು ಪ್ರತಿ ಶ್ರದ್ಧಾವಾನರ ಬಳಿ ತನ್ನ ಶಕ್ತಿಯಿಂದ ತಾನೇ ತಲುಪುತ್ತಿತ್ತು.
ಭಗವಾನ್ ತ್ರಿವಿಕ್ರಮನು ಸನ್ನೆ ಮಾಡುತ್ತಲೇ ಬ್ರಹ್ಮವಾದಿನಿ ಲೋಪಮುದ್ರೆಯು ನವದುರ್ಗೆ ಸಿದ್ಧಿಧಾತ್ರಿಯ ಕುತ್ತಿಗೆಗೆ ಸುಗಂಧಿತ ಮಲ್ಲಿಗೆ ಪುಷ್ಪಗಳ ಮಾಲೆಯನ್ನು ಅರ್ಪಿಸಿದರು. ಮತ್ತು ಅವರ ಚರಣಗಳ ಮೇಲೆ ಸಂಪಿಗೆಯ ಮತ್ತು ಗುಲಾಬಿಯ ಪುಷ್ಪಗಳನ್ನು ಅರ್ಪಿಸಿದರು.
ಮುಂದಿನ ವಿಷಯವನ್ನು ನೋಡಿ ಮಾತ್ರ ಪ್ರತಿಯೊಬ್ಬರೂ ಅತ್ಯಂತ ಆಶ್ಚರ್ಯಚಕಿತರಾದರು; ಏಕೆಂದರೆ ಸಿದ್ಧಿಧಾತ್ರಿಯ ಚರಣಗಳ ಮೇಲೆ ಅರ್ಪಿಸಿದ ಪ್ರತಿಯೊಂದು ಪುಷ್ಪವೂ ಬ್ರಹ್ಮವಾದಿನಿ ಲೋಪಮುದ್ರೆಯ ಕುತ್ತಿಗೆಯಲ್ಲಿ ಬಂದು ಒಂದು ಸುಂದರವಾದ ಪುಷ್ಪಮಾಲೆಯಾಗಿ ತಯಾರಾಯಿತು.
ತಮ್ಮಲ್ಲಿನ ಎಲ್ಲಾ ಪುಷ್ಪಗಳನ್ನು ಅರ್ಪಿಸಿದ ನಂತರ ಲೋಪಮುದ್ರೆಯು ಆದಿಮಾತೆಯ ಮತ್ತು ಸಿದ್ಧಿಧಾತ್ರಿಯ ಅನುಮತಿ ಪಡೆದು ಎಲ್ಲಾ ಉಪಸ್ಥಿತರೊಂದಿಗೆ ಮಾತನಾಡಲು ಪ್ರಾರಂಭಿಸಿದರು, “ಹೇ ಸೌಭಾಗ್ಯವಂತ ಆಪ್ತಗಣರೇ! ನೀವೆಲ್ಲರೂ ನಿಜವಾಗಿಯೂ ಬಹಳ ಸೌಭಾಗ್ಯವಂತರು ಏಕೆಂದರೆ ನಿಮ್ಮೆಲ್ಲರಿಗೂ ಸರಿಯಾದ ಕ್ರಮದಲ್ಲಿ ಒಂಬತ್ತಕ್ಕೆ ಒಂಬತ್ತು ನವದುರ್ಗೆಯರ ದರ್ಶನವೂ ಕೂಡ ಆಯಿತು ಮತ್ತು ಅವರ ಮಹಾತ್ಮ್ಯಯ ಶ್ರವಣವೂ ಕೂಡ ಮಾಡಲಾಯಿತು.
ಈ ವಿಶ್ವದಲ್ಲಿ ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಮಹಿಮಾ, ಈಶತ್ವ ಮತ್ತು ವಶಿತ್ವ, ಸರ್ವಕಾಮಾವಸಾಹಿತಾ, ಸರ್ವಜ್ಞತ್ವ ಇಂತಹ ಅನಂತ ಸಿದ್ಧಿಗಳಿವೆ.
ಅವುಗಳಲ್ಲಿ ಅಣಿಮಾ, ಲಘಿಮಾ, ಮಹಿಮಾ ಇತ್ಯಾದಿ ಎಂಟು ಪ್ರಮುಖ ಸಿದ್ಧಿಗಳು ಎಂದು ಭಾವಿಸಲಾಗಿದೆ.
ವಸುಂಧರೆಯ ಮೇಲೆ ಮಾತ್ರವಲ್ಲ, ಇತರ ಭೂಮಿಗಳ ಮೇಲೆ ಕೂಡ ಅನೇಕ ಜನರು ಯಾವ ತಪಸ್ಸುಗಳನ್ನು ಮಾಡುತ್ತಿರುತ್ತಾರೋ, ಅವು ಬಹುತೇಕ ಯಾವುದಾದರೂ ಸಿದ್ಧಿಯ ಪ್ರಾಪ್ತಿಗಾಗಿ ಇರುತ್ತವೆ.
ಯಾವ ಯಾವ ತಪಸ್ವಿಯು ಯಾವ ಯಾವ ಚಂಡಿಕಾಕುಲದ ಸದಸ್ಯರನ್ನು ತನ್ನ ಆರಾಧ್ಯದೇವತೆ ಎಂದು ಭಾವಿಸಿ ತಪಸ್ಸು ಮಾಡುತ್ತಾನೋ ಅಥವಾ ಸಾಧನೆ ಮಾಡುತ್ತಾನೋ, ಅವನಿಗೆ ಆಯಾ ದೇವತೆಯಿಂದ ವರವು ದೊರೆಯುತ್ತದೆ ಮತ್ತು ಈ ವರಗಳು ಸಿದ್ಧಿಗಳಾಗಿದ್ದರೆ ಈ ಒಂಬತ್ತನೆಯ ನವದುರ್ಗೆ ಸಿದ್ಧಿಧಾತ್ರಿಯು ಆ ಸಾಧಕನಿಗೆ ದೊರೆಯುವ ಸಿದ್ಧಿಯ ಮೇಲೂ ಕೂಡ ತನ್ನ ಕಣ್ಣು ಇಟ್ಟರುತ್ತಾರೆ.
ಏಕೆಂದರೆ ನವದುರ್ಗೆ ಸಿದ್ಧಿಧಾತ್ರಿಯ ಪ್ರಭಾಮಂಡಲದಿಂದಲೇ ಎಲ್ಲಾ ರೀತಿಯ ಸಿದ್ಧಿಗಳು ನಿರ್ಮಾಣವಾಗುತ್ತವೆ. ಅಲ್ಲಿಂದಲೇ ಈ ಎಲ್ಲಾ ಸಿದ್ಧಿಗಳ ನಿಜವಾದ ಕಾರ್ಯವು ಸಂಪೂರ್ಣ ಬ್ರಹ್ಮಾಂಡದಲ್ಲಿ ನಡೆಯುತ್ತಿರುತ್ತದೆ.
ವಾಸ್ತವವಾಗಿ ಸಿದ್ಧಿಗಳ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪೇ ಆಗಿದೆ. ಏಕೆಂದರೆ ಸಿದ್ಧಿ ಪಡೆದುಕೊಂಡ ಕಾರಣ ಯಾವ ಸತ್ತಾ ಪ್ರಾಪ್ತವಾಗುತ್ತದೆಯೋ, ಅದನ್ನು ಉಪಯೋಗಿಸುವ ಬುದ್ಧಿಯು ನ್ಯಾಯಯುತವಾಗಿಲ್ಲದಿದ್ದರೆ ಮತ್ತು ಪವಿತ್ರವಾಗಿಲ್ಲದಿದ್ದರೆ, ಆ ಸಾಧಕನು ಅಸುರನಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.
ಮತ್ತು ಮುಖ್ಯವಾಗಿ ನಿಜವಾದ ಶ್ರದ್ಧಾವಾನನಿಗೆ ಯಾವುದೇ ಸಿದ್ಧಿಯನ್ನು ಪಡೆದುಕೊಳ್ಳುವ ಅವಶ್ಯಕತೆ ಇಲ್ಲ.
ಏಕೆಂದರೆ ಯಾವಾಗ ನಿಜವಾದ ಶ್ರದ್ಧಾವಾನನು ಎರಡೂ ನವರಾತ್ರಿಗಳಲ್ಲಿ ಆದಿಮಾತೆಯ/ನವದುರ್ಗೆಯರ ಶ್ರದ್ಧಾಪೂರ್ವಕವಾಗಿ ಅಂತಃಕರಣದಿಂದ ನಿಯಮಿತ ಪೂಜೆಯನ್ನು ಮಾಡುತ್ತಾನೋ, ಆದಿಮಾತೆಯ ಚರಿತ್ರೆಯನ್ನು ಪದೇ ಪದೇ ಪಠಣ ಮಾಡುತ್ತಾ ಇರುತ್ತಾನೋ ಮತ್ತು ಅವರ ಗುಣಸಂಕೀರ್ತನದಲ್ಲಿ ತಲ್ಲೀನನಾಗಿ ಹೋಗುತ್ತಾನೋ ಆಗ ಅವನ ಜೀವನದಲ್ಲಿ ಅವಶ್ಯಕವಿರುವ ಎಲ್ಲಾ ಸಿದ್ಧಿಗಳ ಕಾರ್ಯವನ್ನು ಈ ಮಾತೆ ಸಿದ್ಧಿಧಾತ್ರಿಯು, ಪ್ರಾರ್ಥನೆ ಮಾಡದೆ ಇದ್ದರೂ ಕೂಡ ಶ್ರದ್ಧಾವಾನನಿಗೆ ಒದಗಿಸುತ್ತಲೇ ಇರುತ್ತಾಳೆ.
ಅಷ್ಟೇ ಅಲ್ಲ, ಆದಿಮಾತೆಯ ಈ ಚಂಡಿಕಾಕುಲದಲ್ಲಿಯ ಎಲ್ಲಾ ಪುತ್ರರ ಮತ್ತು ಕನ್ಯೆಯರ ಸಂಪೂರ್ಣ ಭಕ್ತಿ ಮಾಡುವವರಿಗೂ ಕೂಡ ಈ ನವದುರ್ಗೆ ಸಿದ್ಧಿಧಾತ್ರಿಯು ಸರಿಯಾದ ಸಮಯದಲ್ಲಿ ಸರಿಯಾದ ಸಿದ್ಧಿಗಳ ಕಾರ್ಯವನ್ನು ಖಂಡಿತವಾಗಿಯೂ ಒದಗಿಸುತ್ತಾ ಇರುತ್ತಾಳೆ.
ಆಕೆಯ ಮುಖದ ಮೇಲೆ ನಿರಂತರವಾಗಿ ಶೋಭಿಸುವ ಸಂತೋಷವೇ ಎಲ್ಲಾ ಶ್ರದ್ಧಾವಾನರಿಗೆ ಧೈರ್ಯವನ್ನು ನೀಡುತ್ತದೆ. ಅಂದರೆ ನಿಮ್ಮ ಶ್ರದ್ಧಾಪೂರ್ವಕವಾಗಿ ಮಾಡಿದ ಪ್ರತಿಯೊಂದು ವಿಷಯವನ್ನು ಇವರು ಸಂತೋಷದಿಂದ ಸ್ವೀಕರಿಸುತ್ತಾರೆ ಮತ್ತು ನಿಮ್ಮ ಅಲ್ಪಸೇವೆಯಿಂದಲೂ ಕೂಡ ಇವರು ಪ್ರಸನ್ನರಾಗುತ್ತಾರೆ - ಆದರೆ ನೀವು ಸಿದ್ಧಿಗಳು ಬಯಸುವುದಾದರೆ ಮಾತ್ರ ಇವರ ಮುಖದ ಮೇಲಿನ ಸಂತೋಷವನ್ನು ನಿಮಗೆ ನೋಡಲು ಸಾಧ್ಯವಾಗುವುದಿಲ್ಲ.
ಪ್ರತಿ ಬ್ರಹ್ಮರ್ಷಿ ಮತ್ತು ಬ್ರಹ್ಮವಾದಿನಿಯರ ಬಳಿ ವಿವಿಧ ರೀತಿಯ ಸಿದ್ಧಿಗಳಿವೆ ಮತ್ತು ಅವರ ಇಚ್ಛೆಯ ಪ್ರಕಾರ ಅವರಿಗೆ ಬೇಕಾದ ಸಿದ್ಧಿಗಳು ಅವರಿಗೆ ಯಾವಾಗಲು ದೊರೆಯಬಹುದು.
ಇಷ್ಟು ಹೇಳಿ ಜೇಷ್ಠ ಬ್ರಹ್ಮವಾದಿನಿ ಲೋಪಮುದ್ರೆಯು ಇದ್ದಕ್ಕಿದ್ದಂತೆ ನಿಂತರು ಮತ್ತು ಭಗವಾನ್ ತ್ರಿವಿಕ್ರಮನು ಮಾತನಾಡಲು ಶುರು ಮಾಡಿದರು, “ಹೇ ನನ್ನ ಮಕ್ಕಳೇ! ಈ ಎಲ್ಲಾ ಬ್ರಹ್ಮರ್ಷಿಗಳಿಗೆ ಮತ್ತು ಬ್ರಹ್ಮವಾದಿನಿಗಳಿಗೆ ಶ್ರೀಶಾಂಭವಿವಿದ್ಯೆಯ ಹದಿನೆಂಟನೆಯ ಪಡಿಯ (ಕಕ್ಷೆ) ಮೇಲೆ
ಮೊದಲು ೧೦೮ ಸಿದ್ಧಿಗಳು ಪ್ರಾಪ್ತವಾಗುತ್ತವೆ ಮತ್ತು ಅವರವರ ಇಚ್ಛೆಗೆ ಅನುಗುಣವಾಗಿ ಅವರಿಗಾಗಿ ಎಲ್ಲಾ ಸಿದ್ಧಿಗಳು ಲಭ್ಯವೂ ಆಗುತ್ತವೆ.
ಆದರೆ ನಿಜವಾದ ಗುಟ್ಟು ಇಲ್ಲಿಯೇ ಇದೆ. ಯಾವಾತನು ಈ ಪ್ರಾಪ್ತವಾದ ಎಲ್ಲಾ ಸಿದ್ಧಿಗಳನ್ನು ತಕ್ಷಣವೇ ಆದಿಮಾತೆಯ ಚರಣಗಳ ಬಳಿ ಅರ್ಪಿಸುವುದಿಲ್ಲವೋ ಮತ್ತು ಅವುಗಳಿಂದ ಮುಕ್ತನಾಗಲು ಬಯಸುವುದಿಲ್ಲವೋ, ಆತ ಬ್ರಹ್ಮರ್ಷಿಯಾಗಲು ಸಾಧ್ಯವೇ ಇಲ್ಲ
ಹದಿನೆಂಟನೆಯ ಪಡಿಯ ಮೇಲೆ ಪ್ರಾಪ್ತವಾದ ಎಲ್ಲಾ ಸಿದ್ಧಿಗಳನ್ನು ಯಾವಾಗ ಆದಿಮಾತೆಯ ಚರಣಗಳ ಬಳಿ ಅರ್ಪಿಸಲಾಗುತ್ತದೆಯೋ, ಆಗ ಅವರ ಈ ನಿಷ್ಕಾಮ ಭಾವವನ್ನು ನೋಡಿ ಆದಿಮಾತೆಯು ಆಯಾ ಬ್ರಹ್ಮರ್ಷಿ ಅಥವಾ ಬ್ರಹ್ಮವಾದಿನಿಯ ಎಲ್ಲಾ ಸಿದ್ಧಿಗಳನ್ನು ಈ ಸಿದ್ಧಿಧಾತ್ರಿಯ ಬಳಿ ಒಪ್ಪಿಸುತ್ತಾರೆ.
ಮತ್ತು ಈ ಸಿದ್ಧಿಧಾತ್ರಿಯು ಪ್ರತಿಯೊಬ್ಬರ ಸಿದ್ಧಿಗಳನ್ನು ತನ್ನ ಪ್ರಭಾಮಂಡಲದಲ್ಲಿ ಅವರವರ ಹೆಸರಿನಲ್ಲಿಯೇ ರಕ್ಷಿಸಿಡುತ್ತಾರೆ.
ಮತ್ತು ಆಗಲೇ ಆದಿಮಾತೆ, ಶ್ರೀದತ್ತಾತ್ರೇಯ ಮತ್ತು ಸಿದ್ಧಿಧಾತ್ರಿಯು ಆಯಾ ಬ್ರಹ್ಮರ್ಷಿ ಅಥವಾ ಬ್ರಹ್ಮವಾದಿನಿಗೆ ಅವರ ಬಳಿ ಇಲ್ಲದ ಸಿದ್ಧಿಗಳ ಉಪಯೋಗವನ್ನು, ಕೇವಲ ಸಿದ್ಧಿಧಾತ್ರಿಯ ಸ್ಮರಣೆಯಿಂದ ಉಪಯೋಗಿಸುವ ವರವನ್ನು ನೀಡುತ್ತಾರೆ.”
ಬ್ರಹ್ಮವಾದಿನಿ ಲೋಪಮುದ್ರೆಯು ಭಗವಾನ್ ತ್ರಿವಿಕ್ರಮರಿಗೆ ಮನಸ್ಸಿನಲ್ಲಿಯೇ ನಮಸ್ಕಾರ ಮಾಡಿ ಹೇಳಿದರು, “ಹೇ ಆಪ್ತಗಣರೇ! ಗೃಹಸ್ಥರಿಗಾಗಿ ಈ ಒಂಬತ್ತನೆಯ ನವದುರ್ಗೆ ಸಿದ್ಧಿಧಾತ್ರಿಯು ಅವರ ಎಲ್ಲಾ ಪ್ರಕಾರದ ಅಭ್ಯುದಯ ಮಾಡಲು ಸಿದ್ಧರಾಗಿರುತ್ತಾರೆ.
ಬೇರೆಯವರಿಗೆ ಅನ್ಯಾಯದಿಂದ ದುಃಖ ನೀಡದೆ, ಶ್ರದ್ಧಾವಾಂತನು ಎಷ್ಟು ಸುಖದ ಇಚ್ಛೆ ಮಾಡುತ್ತಾರೋ, ಅಷ್ಟೆಲ್ಲವನ್ನು ಈ ನವದುರ್ಗೆ ಸಿದ್ಧಿಧಾತ್ರಿಯು ಶ್ರದ್ಧಾವಾನನಿಗೆ ಒದಗಿಸುತ್ತಲೇ ಇರುತ್ತಾರೆ.
ಮುಖ್ಯವಾಗಿ ಈ ನವದುರ್ಗೆ ಸಿದ್ಧಿಧಾತ್ರಿ ಮತ್ತು ಆದಿಮಾತೆಯ ಎಲ್ಲಾ ವಿದ್ಯೆಗಳ ಮೇಲೆ ಸಾಮ್ರಾಜ್ಯ ಸ್ಥಾಪಿಸುವ ಸಿದ್ಧೇಶ್ವರಿ ಸ್ವರೂಪವು ಪರಸ್ಪರ ಸಂಬಂಧದಿಂದ ಬಂಧಿಸಲ್ಪಟ್ಟಿದ್ದಾರೆ.
ಪಾರ್ವತಿಯು ತನ್ನ ಜೀವನದ ಈ ಒಂಬತ್ತನೆಯ ಘಟ್ಟದ ನಂತರವೇ ಅನ್ನಪೂರ್ಣ, ಸದಾಪೂರ್ಣ, ಭಾವಪೂರ್ಣ, ಪ್ರೇಮಪೂರ್ಣ ಮತ್ತು ಶಕ್ತಿಪೂರ್ಣ ಈ ಪಂಚವಿಧ ಕಾರ್ಯಗಳಿಂದ ‘ಕ್ಷಮಾ’ ಈ ಆದಿಮಾತೆಯ ಸಹಜಭಾವನೆಯ ಪ್ರತಿ ಶ್ರದ್ಧಾವಾನರಿಗೆ ಪ್ರಾಪ್ತಿಯಾಗಬೇಕು ಎಂಬ ಕಾರಣಕ್ಕಾಗಿ ಅಖಂಡವಾಗಿ ಕಾರ್ಯನಿರತರಾಗಿದ್ದಾರೆ.
ಮತ್ತು ಅವರು ಯಾವಾಗಲೂ ಹೀಗೆಯೇ ಸಕ್ರಿಯರಾಗಿರುತ್ತಾರೆ.”