ಸದ್ಗುರು ಶ್ರೀ ಅನಿರುದ್ಧ ಬಾಪು ಅವರು ತುಳಸಿಪತ್ರ - ೧೩೯೮ ರಲ್ಲಿ ಬರೆಯುತ್ತಾರೆ,
ಶ್ರೀ ಶಾಂಭವಿಮುದ್ರೆಯ ಸಂಪೂರ್ಣ ವರ್ಣನೆ ಮತ್ತು ಅದರ ಬಗ್ಗೆ ಇರುವ ಎಚ್ಚರಿಕೆಯನ್ನು ಸರಿಯಾಗಿ ತಿಳಿದುಕೊಂಡ
ನಂತರ ಎಲ್ಲಾ ಶಿವಗಣಗಳು , ಋಷಿಕುಮಾರರು , ಋಷಿಗಳು ಮತ್ತು ಮಹರ್ಷಿಗಳು ಕೂಡ ಪರಸ್ಪರ ಚರ್ಚೆ ಮಾಡಿ ಹಿರಿಯ
ಬ್ರಹ್ಮವಾದಿನಿ ಲೋಪಮುದ್ರೆಯ ಬಳಿ ವಿನಂತಿಸಲು ಶುರು ಮಾಡಿದರು , “ಹೇ ಸರ್ವ ಶ್ರೇಷ್ಠ ಬ್ರಹ್ಮವಾದಿನಿ! ನಮಗೆ
ಶ್ರೀ ಶಾಂಭವಿಮುದ್ರೆಯ ಬಗ್ಗೆ, ಎಂಟನೆಯ ನವದುರ್ಗೆ ಮಹಾಗೌರಿಯ ಬಗ್ಗೆ ಮತ್ತು ಆಕೆ ನಮಗೆ ನೀಡಿದ ಅಷ್ಟ ದಳ
ಶ್ವೇತಪುಷ್ಪದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಪ್ರಬಲ ಇಚ್ಛೆಯುಂಟಾಗುತ್ತಿದೆ ಮತ್ತು ಈ ಇಚ್ಛೆಯು ನಮ್ಮ ಕೈ ಗೆ ಶಾಶ್ವತವಾಗಿ
ಅಂಟಿಕೊಂಡಿರುವ ಈ ಶ್ವೇತಪುಷ್ಪದ ಸುಗಂಧದಿಂದ ಇನ್ನೂ ಹೆಚ್ಚಾಗುತ್ತಿದೆ. ನಮ್ಮ ಮೇಲೆ ಕೃಪೆ ಮಾಡು .”
ಬ್ರಹ್ಮವಾದಿನಿ ಲೋಪಮುದ್ರೆಯು ಮಹಾ ಗೌರಿಯ ಮತ್ತು ಆದಿಮಾತೆಯ ಅನುಮತಿ ಪಡೆದು ಮಾತನಾಡಲು
ಪ್ರಾರಂಭಿಸಿದರು, “ಹೌದು ! ನಿಮ್ಮ ಜಿಜ್ಞಾಸೆಯು ಆ ಶ್ವೇತಪುಷ್ಪದಿಂದಲೇ ಹೆಚ್ಚಾಗುತ್ತಿದೆ.
ಶ್ರದ್ಧಾವಾನರ ಮತ್ತು ಸಜ್ಜನರ ಆಧ್ಯಾತ್ಮಿಕ, ವೈಜ್ಞಾನಿಕ, ಕಲಾ ವಿಷಯಕ, ವ್ಯಾಪಾರ ವಿಷಯಕ, ಕಸುಬು ವಿಷಯಕ,
ದೇಶರಕ್ಷಣೆ-ಧರ್ಮ ರಕ್ಷಣೆ ವಿಷಯಕ, ಪ್ರಾಪಂಚಿಕ ಇಂತಹ ಎಲ್ಲಾ ಕ್ಷೇತ್ರಗಳ ಜಿಜ್ಞಾಸೆಯನ್ನು ಸರಿಯಾದ ಮಾರ್ಗದಲ್ಲಿ ಮತ್ತು
ಸರಿಯಾದ ಕ್ರಮದಲ್ಲಿ ಹೆಚ್ಚಿಸುವ ಕಾರ್ಯ ಈ ಎಂಟನೆಯ ನವದುರ್ಗೆ ಮಹಾ ಗೌರಿಯು ಮಾಡುತ್ತಿರುತ್ತಾಳೆ.
ಏಕೆಂದರೆ ಈ ‘ಮಹಾ ಗೌರಿ' ರೂಪದಿಂದಲೇ , ಆಕೆಯ ದೇಹದ ಮೇಲೆ ಸ್ವತಃ ಪರಮಶಿವನು ಮಾಡಿದ ಏಳನೆಯ ಗಂಗೆಯ
ಲೇಪನದಿಂದಲೇ ಗಣಪತಿಯ ಜನನವಾಗಿದೆ ಮತ್ತು ಈ ಗಣಪತಿಯು ವಿಶ್ವದ ಘನಪ್ರಾಣನಾಗಿದ್ದು ಬುದ್ಧಿದಾತ,
ಪ್ರಕಾಶದಾತ ಮತ್ತು ವಿಘ್ನಹರ್ತ ಆಗಿದ್ದಾನೆ.
ಹಾಗಿದ್ದ ಮೇಲೆ ಇದರ ಮಾತೆಯಾಗಿರುವ ಈ ಮಹಾ ಗೌರಿಯು ತನ್ನ ಭಕ್ತರಿಗೆ ಅಂದರೆ
ಶ್ರದ್ಧಾವಾನರಿಗೆ ಗಣಪತಿಯಿಂದ
ಎಲ್ಲಾ ವರಗಳು ಸಿಗುವಂತೆ ವ್ಯವಸ್ಥೆ ಮಾಡುತ್ತಾಳಲ್ಲವೇ ! ಮತ್ತು ಅದಕ್ಕಾಗಿಯೇ ಈಕೆ ಶ್ರದ್ಧಾವಾನರ ಮನಸ್ಸಿನಲ್ಲಿ ಒಳ್ಳೆಯ
ಮತ್ತು ಉಪಯುಕ್ತ ಜಿಜ್ಞಾಸೆಗಳನ್ನು ನಿರ್ಮಾಣ ಕೂಡ ಮಾಡುತ್ತಾಳೆ ಮತ್ತು ಅವುಗಳನ್ನು ಪೂರ್ಣ ಕೂಡ ಮಾಡಿಸುತ್ತಾಳೆ.
ಪ್ರಿಯ ಆಪ್ತಜನರೇ ! ಈ ಒಬ್ಬಳೇ ಪಾರ್ವತಿಯ ಅಷ್ಟಮಿಯ ರೂಪ ಮಹಾ ಗೌರಿಯು , ಈ ರೀತಿಯಲ್ಲಿ
ಕಾರ್ಯ ಮಾಡುವುದರಿಂದಲೇ ನವರಾತ್ರಿಗಳಲ್ಲಿ ಅಷ್ಟಮಿ ತಿಥಿಯ ಮಹತ್ವವು ಎಲ್ಲೆಡೆ ಪ್ರಖ್ಯಾತವಾಗಿದೆ.
ಹೆಚ್ಚಿನ ಸ್ಥಳಗಳಲ್ಲಿ ಮತ್ತು ಪ್ರದೇಶಗಳಲ್ಲಿ ನವರಾತ್ರಿಗಳಲ್ಲಿನ ಅಷ್ಟಮಿಯ ದಿನ ಹೋಮ, ಹವನ, ಯಜನ, ಯಜ್ಞ
ಮಾಡಲಾಗುತ್ತದೆ, ಅದು ಕೇವಲ ಇದಕ್ಕಾಗಿ - ಏಕೆಂದರೆ ಪಾ ರ್ವತಿಯ ಜೀವನಪ್ರಯಾಣದಲ್ಲಿನ ಈ ‘ಮಹಾ ಗೌರಿ' ಸ್ಥಿತಿ
ಅಂದರೆ ಘಟ್ಟ ಅಂದರೆ ರೂಪವು ಮೊದಲ ಏಳು ರೂಪಗಳೊಂದಿಗೂ ಕೂಡ ಏಕರೂಪವಾಗಿದೆ ಮತ್ತು ಮುಂದಿನ
ಒಂಬತ್ತನೆಯ ರೂಪದೊಂದಿಗೂ ಕೂಡ ಏಕರೂಪವಾಗಿದೆ.
ಮತ್ತು ಇದರಿಂದ ಅಷ್ಟಮಿಯಂದು ಮಾಡಿದ ಹವನವು ಒಂಬತ್ತಕ್ಕೆ ಒಂಬತ್ತು ನವದುರ್ಗೆಯರಿಗೂ ಸಮಾನವಾಗಿ ದೊರೆಯುತ್ತದೆ.
ಅಂತೆಯೇ ಈ ಮಹಾಗೌರಿಯು ಪ್ರಕಟಗೊಂಡದ್ದು ಕೂಡ ಆಶ್ವಿನ್ ಶುದ್ಧ ಅಷ್ಟಮಿಯಂದೇ .
ಅಷ್ಟಮಿಯ ದಿನ ಮಾಡಿದ ಹವನ, ಪೂಜನ, ಆನಂದೋತ್ಸವ, ಭಕ್ತಿನೃತ್ಯ (ಗರಬಾ ಇತ್ಯಾದಿ) ಮತ್ತು ರಾತ್ರಿಯ ಜಾಗರಣ,
ಆದಿಮಾತೆಯ ಚರಿತೆಯ ಪಠಣ (ಮಾತೃವಾತ್ಸಲ್ಯವಿಂದಾನಂ ),
ಆದಿಮಾತೆಯ ಕಾರ್ಯದ ಮತ್ತು ಗುಣಗಳ ಕೀರ್ತನೆಯ ಶ್ರವಣ ಹಾಗೂ ಪಠಣ (ಮಾತೃವಾತ್ಸಲ್ಯ ಉಪನಿಷದ), ಇವೆಲ್ಲವೂ ಸ್ವತಃ ಆದಿಮಾತೆಗೆ ಮತ್ತು ಒಂಬತ್ತಕ್ಕೆ ಒಂಬತ್ತು ನವದುರ್ಗೆಯರಿಗೂ ಅತ್ಯಂತ ಪ್ರಿಯವಾಗಿರುತ್ತದೆ.
-ಅಷ್ಟೇ ಏಕೆ ಆಶ್ವಿನ್ ಶುಕ್ಲ ಅಷ್ಟಮಿ ಈ ದಿನವು ಎಲ್ಲಾ ಶ್ರದ್ಧಾವಾನರಿಗಾಗಿ ದೊಡ್ಡ ವರವಾಗಿದೆ.
- ಶ್ರದ್ಧಾವಾನರಿಗೆ ಈ ನವರಾತ್ರಿಯ ಪೂಜೆಯಿಂದ ಈ ಒಂಬತ್ತಕ್ಕೆ ಒಂಬತ್ತು ನವದುರ್ಗೆಯರು ಸಹಾಯಕರಾಗುತ್ತಾರೆ. ಈ
ಮಹಾ ಗೌರಿ ಮತ್ತು ಸ್ಕಂದಮಾತೆ ತಮ್ಮ ತಮ್ಮ ಪುತ್ರರ ಜೊತೆಗೆ ನಿಜವಾದ ಶ್ರದ್ಧಾವಾನನ ಮನೆಯಲ್ಲಿಯೇ ತಮ್ಮ
ಆಶೀರ್ವಾದಮಯ ಸ್ಪಂದನಗಳನ್ನು ವರ್ಷ ಪೂರ್ತಿ ಪ್ರಕ್ಷೇಪಿಸುತ್ತಲೇ ಇರುತ್ತಾರೆ.
ಮತ್ತು ಅದಕ್ಕಾಗಿಯೇ ಶ್ರದ್ಧಾವಾನನು ತನಗೆ ಆಗುವ ರೀತಿಯಲ್ಲಿ ಮತ್ತು ತನಗೆ ಆಗುವ ಪ್ರಮಾಣದಲ್ಲಿ ಆಶ್ವಿನ್ ನವರಾತ್ರ
ಮತ್ತು ಚೈತ್ರ ನವರಾತ್ರ ಈ ಎರಡು ಅತ್ಯಂತ ಪವಿತ್ರ ಉತ್ಸವಗಳನ್ನು ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ
ಪ್ರೀತಿಯಿಂದ, ಶ್ರದ್ಧೆಯಿಂದ ಆನಂದೋತ್ಸವ ಮಾಡುತ್ತಾ ಆಚರಿಸಬೇಕು .
ಹೇ ಶ್ರದ್ಧಾವಾನರೇ! ಯಾವ ಯಾವ ಶ್ರದ್ಧಾವಾನರು ‘ಮಾತೃವಾತ್ಸಲ್ಯವಿಂದಾನಂ’ ಮತ್ತು ‘ಮಾತೃವಾತ್ಸಲ್ಯ ಉಪನಿಷದ’ ಈ
ಗ್ರಂಥಗಳನ್ನು ನಿಯಮಿತವಾ ಗಿ ಶ್ರದ್ಧೆಯಿಂದ ಪಠಣ ಮಾಡುತ್ತಾರೋ ಮತ್ತು ಪ್ರತಿ ನವರಾತ್ರಿಯಲ್ಲಿ ಒಂದೊಂದು ಗ್ರಂಥದ
ಪಾರಾಯಣ ಮಾಡುತ್ತಾರೋ, ಅವರಿಗೆ ಈ ಮಹಾ ಗೌರಿಯು ಎಂಟು ವರ್ಷಗಳ ನಂತರ ಈ ಶ್ವೇತಪುಷ್ಪವನ್ನು ನೀಡುತ್ತಾರೆ.
ಮತ್ತು ಆಮೇಲೆ ಒಮ್ಮೆ ಆ ಶ್ವೇತಪುಷ್ಪವು ಶ್ರದ್ಧಾವಾನನ ಕೈ ಗೆ ಅಂಟಿಕೊಂಡರೆ ಅದು ಶಾಶ್ವತವಾಗಿ ಅಂಟಿಕೊಂಡಿರುತ್ತದೆ.
ಏಕೆಂದರೆ ಆ ಶ್ವೇತಪುಷ್ಪವು ನಿಜವಾಗಿ ಆ ಶ್ರದ್ಧಾವಾನನ ಲಿಂಗದೇಹಕ್ಕೆ ಅಂಟಿಕೊಳ್ಳುತ್ತದೆ.
ಮತ್ತು ಅದರಿಂದ ಅವನ ಯಾವುದೇ ಜನ್ಮದಲ್ಲಿ ಆ ಶ್ವೇತಪುಷ್ಪವು ಅವನಿಂದ ಬೇರೆ ಆಗುವುದಿಲ್ಲ.
ಈಗ ಪ್ರಶ್ನೆ ಇದಾಗಿದೆ ಈ ಪುಷ್ಪವು ಅಷ್ಟ ದಳಗಳದ್ದೇ ಏಕೆ?
ಉತ್ತರ ಆದಿಮಾತೆಯ ‘ಶಾಕoಭರಿ ಶತಾಕ್ಷಿ’ ಅವತಾರದಿಂದಲೇ ನೀಡಿ ಇಡಲಾಗಿದೆ - ಮಾನವನು ಪ್ರಪಂಚವನ್ನು ಮಾಡಬೇಕಾಗಲಿ ಅಥವಾ ಆಧ್ಯಾತ್ಮವನ್ನು ಅಥವಾ ಎರಡನ್ನೂ .
ಆದರೆ ಆ ಪ್ರತಿ ಕಾರ್ಯಕ್ಕಾಗಿ ಅವನಿಗೆ ಭೌತಿಕ, ಪ್ರಾಣಿಕ ಮತ್ತು ಮಾನಸಿಕ ಮಟ್ಟದಲ್ಲಿನ ಅನ್ನ, ಜಲ ಮತ್ತು ವಾಯು
ಬೇಕೇ ಬೇಕಾಗುತ್ತದೆ.
ಮತ್ತು ಮಾನವನ ತ್ರಿವಿಧ ದೇಹಗಳಿಗೆ ಬೇಕಾದ ಅನ್ನ, ಜಲ, ವಾಯು ಈ ಆದಿಮಾತೆಯ ಅಷ್ಟಧಾ ಪ್ರಕೃತಿಯಿಂದಲೇ ಬರುತ್ತಿರುತ್ತದೆ.
ಮತ್ತು ಈ ಶ್ವೇತ ಅಷ್ಟದಳ ಪುಷ್ಪವು ಆ ಅಷ್ಟಧಾ ಪ್ರಕೃತಿಯ ವರವಾಗಿದೆ ಮತ್ತು ಅದು ಕೂಡ ಶ್ವೇತ ಅಂದರೆ
ಸಂಪೂರ್ಣವಾಗಿ ಶುದ್ಧ ಮತ್ತು ಪವಿತ್ರವಾಗಿದೆ.”
ಬಾಪು ಮುಂದೆ ತುಳಸಿಪತ್ರ - 1399 ಈ ಅಗ್ರಲೇಖದಲ್ಲಿ ಬರೆಯುತ್ತಾ ರೆ,
ಈ ರೀತಿಯಾಗಿ ನವರಾತ್ರಿಯಲ್ಲಿನ ಅಷ್ಟಮಿ ತಿಥಿಯ ಮಹಾತ್ಮ್ಯ ಮತ್ತು ಮಹಾ ಗೌರಿಯು ನೀಡಿದ ಶ್ವೇತ ಅಷ್ಟದಳಪುಷ್ಪಗಳ
ಬಗ್ಗೆ ಶ್ರದ್ಧಾವಾನರಿಗೆ ವಿವರಿಸಿ ಹೇಳಿದ ನಂತರ ಬ್ರಹ್ಮವಾದಿನಿ ಲೋಪಮುದ್ರೆಯು ಎಲ್ಲಾ ಉಪಸ್ಥಿತ ಬ್ರಹ್ಮರ್ಷಿಗಳಿಗೆ
ಮತ್ತು ಬ್ರಹ್ಮವಾದಿನಿಗಳಿಗೆ, ಆದಿಮಾತೆಯ ಅನುಮತಿ ಪಡೆದು ಅಲ್ಲಿನ ಉಪಸ್ಥಿತರ ಸಣ್ಣ ಸಣ್ಣ ಗುಂಪುಗಳಿಗೆ
‘ಶ್ರೀ ಶಾಂಭವಿಮುದ್ರೆ'ಯನ್ನು ಪ್ರತ್ಯಕ್ಷವಾಗಿ ಮಾಡಿ ತೋರಿಸುವಂತೆ ವಿನಂತಿಸಿದರು .
ಪ್ರತಿಯೊಬ್ಬ ಬ್ರಹ್ಮರ್ಷಿ ಮತ್ತು ಬ್ರಹ್ಮವಾದಿನಿಯು ತಮ್ಮ ತಮ್ಮ ಗುಂಪುಗಳನ್ನು ತೆಗೆದುಕೊಂಡು ಬೇರೆ ಬೇರೆ ಜಾಗದಲ್ಲಿ
ಹೋಗಿ ಕುಳಿತರು .
ಯಾರು ಯಾರ ಬಳಿ ಹೋಗಬೇಕು , ಇದನ್ನು ಸದ್ಗುರು ತ್ರಿವಿಕ್ರಮನೇ ಹೇಳಿದರು ಮತ್ತು ಎಲ್ಲಿ ಕೂರಬೇಕು ಅದನ್ನು ಕೂಡ
ಹೇಳಿದರು .
ಪ್ರತಿಯೊಬ್ಬ ಶಿವಗಣ ಮತ್ತು ಋಷಿಸಮುದಾಯ, ಅವರಿಗೆ ಹೇಳಿದ ಜಾಗದಲ್ಲಿ ಹೋಗಿ ಕೂರುತ್ತಲೇ ಆಶ್ಚರ್ಯದ
ಮಹಾಸಾಗರದಲ್ಲಿ ಲೂಟಿ ಮಾಡಿದರು ಮತ್ತು ಈಜಿದರು .
ಕಾರಣ ಕೂಡ ಹಾಗೆಯೇ ಇತ್ತು - ಪ್ರತಿ ಬ್ರಹ್ಮರ್ಷಿ ವಾ ಬ್ರಹ್ಮವಾದಿನಿಯ ಗುಂಪಿನ ಪಕ್ಕದಲ್ಲಿ ಒಂದೊಂದು ಗಂಗಾ ನದಿ
ಹರಿಯುತ್ತಿತ್ತು .
ಪ್ರತಿ ಬ್ರಹ್ಮರ್ಷಿ ವಾ ಬ್ರಹ್ಮವಾದಿನಿಯ ಆಸನದ ಹಿಂದೆ ಒಂದು ಅರಳಿದ ಬಿಲ್ವವೃಕ್ಷ ಇತ್ತು .
ಮತ್ತು ಮುಖ್ಯವಾಗಿ ಪ್ರತಿ ಗುಂಪು ಇತರ ಗುಂಪುಗಳ ದೃಶ್ಯವನ್ನೂ ಕೂಡ ನೋಡಲು ಸಾಧ್ಯವಿತ್ತು .
ಎಷ್ಟು ದೊಡ್ಡ ಗಂಗೆಗಳು ! ಎಷ್ಟು ದೊಡ್ಡ ಬಿಲ್ವವೃಕ್ಷಗಳು ! ಮತ್ತು ಎಲ್ಲಿ ಎಲ್ಲಿ ನೋಡಬೇಕು ?
ಬ್ರಹ್ಮವಾದಿನಿ ಲೋಪಮುದ್ರೆಯ ಬಳಿ ಮಾತ್ರ ಯಾವುದೇ ಗುಂಪು ನೀಡಲಾಗಲಿಲ್ಲ. ಆಕೆಗೆ ತನ್ನ ಮಾರ್ಗದರ್ಶಕಳ
ಕಾರ್ಯವನ್ನೇ ಮಾಡಬೇಕಿತ್ತು .
ಬ್ರಹ್ಮವಾದಿನಿ ಲೋಪಮುದ್ರೆಯು ಅತ್ಯಂತ ವಿನಮ್ರ ಭಾವದಿಂದ ಆದಿಮಾತೆ ಶ್ರೀ ವಿದ್ಯೆಯ ಚರಣಗಳ ಹತ್ತಿರ ಹೋಗಿ
ನಿಂತರು , “ಹೇ ಎಲ್ಲಾ ಶ್ರದ್ಧಾವಾನ ಆಪ್ತಗಣರೇ ! ಈಗ ನಿಮ್ಮ ಎಲ್ಲವನ್ನು ನೋಡಿ ಆಗಿದೆ, ಹಾಗೆಯೇ ಅದರ
ಆಶ್ಚರ್ಯವನ್ನೂ ಕೂಡ ಮಾಡಿ ಆಗಿದೆ. ಆದ್ದರಿಂದ ಈ ಕ್ಷಣದಿಂದ ಮಾತ್ರ ಆಯಾ ಗುಂಪಿನ ಸದ್ಗುರುವಿನ ಕಡೆಗೇ ಲಕ್ಷ್ಯ ಕೇಂದ್ರೀಕರಿಸಿ.
ನಿಮ್ಮ ಗುರುಗಳು ನಿಮಗೆ ಇಂದು ಶ್ರೀ ಶಾಂಭವಿಮುದ್ರೆಯನ್ನು ಪ್ರದಾನ ಮಾಡುವುದಿಲ್ಲ, ಆದರೆ ಕೇವಲ ನಿಮ್ಮ ಮುಂದೆ
ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಲಿದ್ದಾರೆ.”
ಬ್ರಹ್ಮವಾದಿನಿ ಲೋ್ಪಮುದ್ರೆಯ ಹೇಳಿಕೆಯಂತೆ ಅಲ್ಲಿನ ಪ್ರತಿಯೊಬ್ಬ ಉಪಸ್ಥಿತನು ಕೇವಲ ತಮ್ಮ ತಮ್ಮ ಗುರುಗಳ ಕಡೆಗೆ
ನೋಡಲು ಶುರು ಮಾಡಿದನು .
ಪ್ರತಿಯೊಬ್ಬ ಬ್ರಹ್ಮರ್ಷಿ ಮತ್ತು ಬ್ರಹ್ಮವಾದಿನಿ ಅಂದರೆ ‘ಬ್ರಹ್ಮಗುರು ’ ಈಗ ಪದ್ಮಾಸನದಲ್ಲಿ ಸ್ಥಿರವಾಗಿದ್ದರು .
ಅವರು ಮೊದಲಿಗೆ ಎರಡೂ ಕೈಗಳನ್ನು ಜೋಡಿಸಿ ದತ್ತಗುರುಗಳ ಮತ್ತು ಆದಿಮಾತೆಯ ಪ್ರಾ ರ್ಥನೆ ಮಾಡಿದರು ಮತ್ತು
ನಂತರ ಅವರು ತಮ್ಮ ತಮ್ಮ ಕಣ್ಣುಗಳನ್ನು ಮುಚ್ಚಿ ಕುಳಿತರು .
ಅವರ ಯಾವುದೇ ಚಲನವಲನ ಆಗುತ್ತಿರಲಿಲ್ಲ - ಕಣ್ಣು ರೆಪ್ಪೆಗಳದ್ದು ಮತ್ತು ಮೂಗಿನ ಹೊಳ್ಳೆಗಳದ್ದೂ ಕೂಡ.
ಮತ್ತು ಇದರಿಂದ ಕಣ್ಣು ರೆಪ್ಪೆಗಳ ಹಿಂದೆ ಏನು ನಡೆಯುತ್ತಿದೆ, ಅದು ಮುಂದೆ ಕುಳಿತಿರುವ
ಯಾರಿಗೂ ಕಾಣಿಸುತ್ತಿರಲಿಲ್ಲ.
ಆದರೆ ಕೈಲಾಸದ ಮೇಲೆ ಮತ್ತು ಅದು ಕೂಡ ಆದಿಮಾತೆ ಮತ್ತು ತ್ರಿವಿಕ್ರಮನ ಉಪಸ್ಥಿತಿಯಲ್ಲಿ ಹೀಗೆ ಹೇಗೆ ಆಗಲು
ಸಾಧ್ಯ ?
ಇಲ್ಲ! ಇಲ್ಲಿ ಇಂತಹ ಸ್ಥಿತಿಯಲ್ಲಿ ಯಾವ ಶ್ರದ್ಧಾವಾನನು ಯಾವುದರಿಂದಲೂ ವಂಚಿತನಾಗಿರಲು ಸಾಧ್ಯವಿಲ್ಲ. ಭಗವಾನ್
ತ್ರಿವಿಕ್ರಮನು ಪ್ರತಿ ಸಮೂಹದ ಪಕ್ಕದಲ್ಲಿ ಹರಿಯುತ್ತಿದ್ದ ಆಯಾ ಗಂಗೆಯ ಜಲದಿಂದ ಲೋಪಮುದ್ರೆಗೆ ಪ್ರತಿ
ಬ್ರಹ್ಮಗುರುಗಳ ಕಣ್ಣು ರೆಪ್ಪೆಗಳ ಮೇಲೆ ಸಿಂಚನ ಮಾಡಲು ಹೇಳಿದರು .
ಅದರ ಜೊತೆಗೆ ಪ್ರತಿಯೊಬ್ಬರಿಗೂ ಬ್ರಹ್ಮಗುರುಗಳ ಕಣ್ಣು ರೆಪ್ಪೆಗಳು ಕಾಣಿಸುತ್ತಿದ್ದರೂ , ಆ ಕಣ್ಣು ರೆಪ್ಪೆಗಳ ಹಿಂದಿರುವ ಅವರ
ಕಣ್ಣುಗಳ ಚಲನೆ ಸರಿಯಾಗಿ ಕಾಣಿಸಿತು .
ಆ ಪ್ರತಿ ಬ್ರಹ್ಮಗುರುವಿನ ಎರಡೂ ಕಣ್ಣುಗಳು , ಅವರವರ ಎರಡು ಹುಬ್ಬುಗಳಿಂದ ಸಮಾನ ದೂರದಲ್ಲಿರುವ
ಮಧ್ಯ ಬಿಂದುವಿನ ಮೇಲೆ ಕೇಂದ್ರೀಕೃತವಾಗಿದ್ದವು .
ಮತ್ತು ಅವರ ಕಣ್ಣುಗಳಿಂದ ಅತ್ಯಂತ ಪವಿತ್ರ ಮತ್ತು ಶುದ್ಧ ಭಾವವು ಸೌಮ್ಯ ಮತ್ತು ಮೃದುವಾದ ವಿದ್ಯುತ್-ಶಕ್ತಿಯ
ರೂಪದಲ್ಲಿ ಅವರ ಆಜ್ಞಾ ಚಕ್ರದ ಕಡೆಗೆ ಹರಿಯುತ್ತಿತ್ತು .
ಮತ್ತು ಅದರ ಜೊತೆಗೆ ಅವರ ಆಜ್ಞಾ ಚಕ್ರವು ಒಂದು ವಿಲಕ್ಷಣವಾದ ಸುಂದರ ತೇಜಸ್ಸಿನಿಂದ ತುಂಬಿ ಹರಿಯುತ್ತಿತ್ತು .
ಮತ್ತು ಆ ಆಜ್ಞಾ ಚಕ್ರದಿಂದಲೂ ಕೂಡ ಒಂದು ಅತ್ಯಂತ ವಿಲಕ್ಷಣ ಪ್ರವಾಹವು ಆ ಬ್ರಹ್ಮಗುರುಗಳ ಕಣ್ಣುಗಳೊಳಗೆ
ಪ್ರವೇಶಿಸುತ್ತಿತ್ತು .
ಆದರೆ ಈ ವಿಲಕ್ಷಣ ಪ್ರವಾಹವು ಜಲದ ಅಥವಾ ವಿದ್ಯುತ್ ಶಕ್ತಿಯದ್ದಾಗಿರಲಿಲ್ಲ, ಆದರೆ ಅತ್ಯಂತ ಸುಂದರ, ಸೌಮ್ಯ ಮತ್ತು
ಶಾಂತವಾದ ಈ ಹಿಂದೆ ಎಂದೂ ನೋಡದ ಅದ್ಭುತ ಪ್ರಕಾಶದದ್ದಾಗಿತ್ತು .
ಮತ್ತು ಈ ಅದ್ಭುತ ಪ್ರಕಾಶಪ್ರವಾಹವು ಆ ಬ್ರಹ್ಮಗುರುಗಳ ಕಣ್ಣುಗಳಲ್ಲಿ ಪ್ರವೇಶಿಸಿ ನಂತರ ಅವರ ತ್ರಿವಿಧ ದೇಹದಲ್ಲಿನ
72,000 ನಾಡಿಗಳಲ್ಲಿ ಪ್ರವಹಿಸುತ್ತಿತ್ತು .
ಮತ್ತು ಈ ಪ್ರಕಾಶದಿಂದ ಆ ಬ್ರಹ್ಮಗುರುಗಳ ದೇಹದ ಪ್ರತಿ ಸ್ಥೂಲ ಜೀವಕೋಶವು ಅತ್ಯಂತ ಯೌವ್ವನಯುಕ್ತ,
ತೇಜೋಮಯ ಮತ್ತು ಶುದ್ಧವಾಗುತ್ತಿತ್ತು ಮತ್ತು ಅವರ ಮಾನಸಿಕ ದ್ರವ್ಯದ ಪ್ರತಿ ಕಣವೂ ಕೂಡ.
ಅಷ್ಟರಲ್ಲಿ ಎಲ್ಲರ ಕಿವಿಯ ಮೇಲೆ ‘ಓಂ ಶ್ರೀ ದತ್ತಗುರವೇ ನಮಃ 'ಎಂಬ ಭಗವಾನ್ ತ್ರಿವಿಕ್ರಮರ ಧ್ವನಿಯಲ್ಲಿನ
ಮಂತ್ರವು ಕೇಳಿಸಿತು. ಮತ್ತು ಅದರ ಜೊತೆಗೆ ಕಣ್ಣು ರೆಪ್ಪೆಗಳ ಹಿಂದಿನಿಂದ ಕಾ ಣಿಸುತ್ತಿದ್ದ ಎಲ್ಲವೂ ಅದೃಶ್ಯವಾಯಿತು .
ಎಲ್ಲಾ ಬ್ರಹ್ಮಗುರುಗಳು ಮಾತ್ರ ತಮ್ಮ ಕಣ್ಣುಗಳನ್ನು ತೆರೆಯಲು ತಕ್ಷಣವೇ ಶುರು ಮಾಡಲಿಲ್ಲ -
ಅವರ ತ್ರಿವಿಧ ದೇಹದಲ್ಲಿ
ಪಡೆದ ಆ ದಿವ್ಯ ಪ್ರಕಾಶವನ್ನು ಅವರು ಸರಿಯಾಗಿ ಶೇಖರಿಸಿ ಇಟ್ಟು ಕೊಳ್ಳುತ್ತಿದ್ದಾರೆ ಎಂದೆನಿಸಿತು .
ಭಗವಾನ್ ತ್ರಿವಿಕ್ರಮರ ‘ಶ್ರೀ ದತ್ತಗುರವೇ ನಮಃ' ಈ ಜಪವು ನಡೆಯುತ್ತಲೇ ಇತ್ತು . ನಂತರ ಬ್ರಹ್ಮರ್ಷಿ ಅಗಸ್ತ್ಯರು ಮೊದಲು
ತಮ್ಮ ಕಣ್ಣು ರೆಪ್ಪೆಗಳನ್ನು ತೆರೆದರು . ಅವರ ನಂತರ ಇತರ ಎಲ್ಲಾ ಬ್ರಹ್ಮಗುರುಗಳು ಕೂಡ ಕ್ರಮಬದ್ಧವಾಗಿ ತಮ್ಮ ತಮ್ಮ
ಕಣ್ಣು ರೆಪ್ಪೆಗಳನ್ನು ತೆರೆದರು .
ಆ ಎಲ್ಲಾ ಬ್ರಹ್ಮರ್ಷಿ ಮತ್ತು ಬ್ರಹ್ಮವಾದಿನಿಯರು ಈಗ ಹೆಚ್ಚು ತೇಜಸ್ವಿ, ಹೆಚ್ಚು ಯೌವ್ವನಯುಕ್ತ, ಹೆಚ್ಚು ಶಕ್ತಿವಂತರು ಮತ್ತು
ಬಲಶಾಲಿಗಳಾ ಗಿ ಕಾಣಿಸುತ್ತಿದ್ದರು .
ಬ್ರಹ್ಮವಾದಿನಿ ಲೋಪಮುದ್ರೆಯು ನಗುವ ಮುಖದಿಂದ ಎಲ್ಲರಿಗೆ ಹೇಳಿದರು , “ಶ್ರೀ ಶಾಂಭವಿಮುದ್ರೆಯ ಸಾಧನೆಯಿಂದ
ಪ್ರತಿ ಸಾಧಕನ ಸ್ಥೂಲ ದೇಹ, ಪ್ರಾಣಮಯ ದೇಹ ಮತ್ತು ಮನೋಮಯ ದೇಹ ಹೀಗೆಯೇ ಯಾವಾಗಲೂ ನಿತ್ಯ ನೂತನ
ಮತ್ತು ತಾಜಾವಾಗಿ ಇರುತ್ತಾರೆ.
ಆದರೆ ಆಜ್ಞಾ ಚಕ್ರದಿಂದ ಆ ಪ್ರಕಾಶವು ಹೊರಗೆ ಬಂದದ್ದು , ಎಲ್ಲಿಂದ ಬಂತು , ಇದು ಕೇವಲ ಶ್ರೀ ಶಾಂಭವಿವಿದ್ಯೆಯ
ಹದಿನೇಳು ಮತ್ತು ಹದಿನೆಂಟನೆಯ ಕಕ್ಷೆಯಲ್ಲಿಯೇ ತಿಳಿಯುತ್ತದೆ.
‘ಶ್ರೀ ಶಾಂಭವಿಮುದ್ರೆಯನ್ನು ಸದ್ಗುರು ತ್ರಿವಿಕ್ರಮರ ಬಳಿ ಪಡೆದುಕೊಳ್ಳುವುದು ' ಇದುವೇ ಪ್ರತಿ ಶ್ರದ್ಧಾವಾನನ ಜನ್ಮ ಸರಣಿಯ
ಅತ್ಯುಚ್ಚ ಗುರಿಯಾಗಬೇಕು ; ಏಕೆಂದರೆ ಶ್ರೀ ಶಾಂಭವಿಮುದ್ರೆ ಲಭಿಸಿದ ನಂತರ ದುಃಖ, ಭಯ, ಕ್ಲೇಶ ಈ ವಿಷಯಗಳು
ಪೀಡಿಸುವುದಿಲ್ಲ. ಮತ್ತು ಎಷ್ಟು ಸಂಕಟಗಳು ಬಂದರೂ ಕೂಡ, ಶ್ರದ್ಧಾವಾನನು ಅದರಿಂದ ಪಾರಾಗಿ ಹೋಗುತ್ತಾನೆ.
ಹೇ ಉಪಸ್ಥಿತ ಶ್ರದ್ಧಾವಾನರೇ ! ಈ ಎಂಟನೆಯ ನವದುರ್ಗೆ ಮಹಾ ಗೌರಿಯು ತನ್ನ ಇತರ ಎಂಟು ರೂಪಗಳಂತೆ ಅತ್ಯಂತ
ಕೃಪಾಳು ಆಗಿದ್ದಾರೆ.
ಪ್ರಿಯಜನರೇ ! ‘ಈ ಒಂಬತ್ತು ಜನರಲ್ಲಿ ಯಾರು ಹೆಚ್ಚು ಕೃಪಾಳು ಅಥವಾ ಯಾರು ಹೆಚ್ಚು ಪರಿಣಾಮಕಾರಿ' ಎಂಬ
ವಿಚಾರವನ್ನು ಅಪ್ಪಿತಪ್ಪಿಯೂ ಕೂಡ ಮಾಡಬೇಡಿ.
ಏಕೆಂದರೆ ಪ್ರತಿಯೊಬ್ಬರ ಮಾರ್ಗ ಬೇರೆ ಆಗಿದ್ದರೂ , ಪ್ರತಿಯೊಬ್ಬರ ಪ್ರೀತಿ, ಕೃಪೆ ಮತ್ತು ಅನುಗ್ರಹ ಒಂದೇ ಆಗಿದೆ.
ಏಕೆಂದರೆ ಕೊನೆಯಲ್ಲಿ ಈ ಒಂಬತ್ತು ಜನರೆಂದರೆ ಒಬ್ಬಳೇ ಪಾರ್ವತಿಯಾಗಿದ್ದಾಳೆ.”