ಸದ್ಗುರು ಶ್ರೀಅನಿರುದ್ಧರ ಭಾವವಿಶ್ವದಿಂದ - ಪಾರ್ವತೀಮಾತೆಯ ನವದುರ್ಗಾ ಸ್ವರೂಪಗಳ ಪರಿಚಯ – ಭಾಗ ೧೨

ಉಲ್ಲೇಖ: ಸದ್ಗುರು ಶ್ರೀಅನಿರುದ್ಧ ಬಾಪುರವರ ದೈನಿಕ 'ಪ್ರತ್ಯಕ್ಷ'ದಲ್ಲಿನ 'ತುಳಸೀಪತ್ರ' ಎಂಬ ಸಂಪಾದಕೀಯ ಸರಣಿಯ ಸಂಪಾದಕೀಯ ಸಂಖ್ಯೆ ೧೪೦೨ ಮತ್ತು ೧೪೦೩.

ಸದ್ಗುರು ಶ್ರೀಅನಿರುದ್ಧ ಬಾಪುರವರು ತುಳಸಿಪತ್ರ - ೧೪೦೨ ರಲ್ಲಿ ಬರೆಯುತ್ತಾರೆ,

ಬ್ರಹ್ಮವಾದಿನಿ ಲೋಪಮುದ್ರೆಯು ಕೈಲಾಸದ ಭೂಮಿಯಿಂದಲೂ ಎಂಟು ಅಂಗುಲ ಎತ್ತರದಲ್ಲಿ ನಿಂತಿದ್ದ ಒಂಬತ್ತನೆಯ ನವದುರ್ಗೆ ಸಿದ್ಧಿದಾತ್ರಿಯ ಚರಣಗಳ ಮೇಲೆ ತನ್ನ ಮಸ್ತಕವನ್ನು ಇಟ್ಟರು. ನಂತರ ಭಗವಾನ್ ತ್ರಿವಿಕ್ರಮರಿಗೆ ಮತ್ತು ಆದಿಮಾತೆಗೆ ಸಾಷ್ಟಾಂಗ ಪ್ರಣಾಮ ಮಾಡಿ ಬ್ರಹ್ಮವಾದಿನಿ ಲೋಪಮುದ್ರೆಯು ಬ್ರಹ್ಮರ್ಷಿ ಯಾಜ್ಞವಲ್ಕ್ಯರ ಬಳಿ ತನ್ನ ಬದಲಾಗಿ ಬಂದು ಮಾತನಾಡುವಂತೆ ವಿನಂತಿಸಿದರು.

ಬ್ರಹ್ಮರ್ಷಿ ಯಾಜ್ಞವಲ್ಕ್ಯರು ಆದಿಮಾತೆಯ ಅನುಮತಿ ಪಡೆದು ಮುಂದೆ ಬಂದು ಮಾತನಾಡಲು ಶುರು ಮಾಡಿದರು, “ಹೇ ಎಲ್ಲಾ ಉಪಸ್ಥಿತ ಜೇಷ್ಠ ಮತ್ತು ಶ್ರೇಷ್ಠ ಶ್ರದ್ಧಾವಾನರೇ! ಜೇಷ್ಠ ಬ್ರಹ್ಮವಾದಿನಿ ಲೋಪಮುದ್ರೆಯು ಮುಂದಿನ ಭಾಗವನ್ನು ವಿವರಿಸಿ ಹೇಳುವ ಕಾರ್ಯವನ್ನು ನನ್ನ ಮೇಲೆ ವಹಿಸಿದ್ದಾರೆ, ಇದಕ್ಕಾಗಿ ನಾನು ಆಕೆಗೆ ಋಣಿಯಾಗಿದ್ದೇನೆ. ಏಕೆಂದರೆ ಆಕೆಯಿ೦ದಲೆ ನಾನು ಮಹಾಗೌರಿ ಇಂದ ಸಿದ್ಧಿದಾತ್ರಿ ಈ ಪ್ರಯಾಣದ ಸಾಕ್ಷಿದಾರನಾಗಲು ಸಾಧ್ಯವಾಯಿತು.

ಪಾರ್ವತಿಯ ‘ಮಹಾಗೌರಿ’ ಸ್ವಾರೂಪವು ಘನಪ್ರಾಣ ಗಣಪತಿಯನ್ನು ಜನ್ಮ ನೀಡಿದ ನಂತರ, ಆಕೆ ಈಗ ಸುಲಭವಾಗಿ ಎಲ್ಲಾ ವಿಶ್ವದ ಘನಪ್ರಾಣದ ಮಾತೆ ಆದಳು.

- ಅಂದರೆ ‘ಮಹಾಗೌರಿ’ ರೂಪದಿಂದ ಈ ಭಕ್ತಮಾತೆ ಪಾರ್ವತಿಯು ವಿಶ್ವವನ್ನು ನಿರ್ಮಿಸುವ, ವಿಶ್ವದಲ್ಲಿ ಇರುವ ಮತ್ತು ವಿಶ್ವದಲ್ಲಿ ಬದಲಾಗುತ್ತಲೇ ಇರುವ ಎಲ್ಲಾ ರೀತಿಯ ಅಣುರೇಣುಗಳಲ್ಲಿನ ಕಾರ್ಯಶಕ್ತಿ ಮತ್ತು ಪ್ರಭಾವಶಕ್ತಿ ಆಗಿದ್ದಾಳೆ.

- ಅಂದರೆ ಮಾನವನು ತೆಗೆದುಕೊಳ್ಳುವ ಆಹಾರದಲ್ಲಿನ ಶಕ್ತಿ ಆಕೆಯೇ,

ಮಾನವನು ಮಾಡುವ ಭಕ್ತಿಯಲ್ಲಿನ ಶಕ್ತಿಯೂ ಆಕೆಯೇ,

ಮನುಷ್ಯನು ಯಾವ ವಿಚಾರಗಳನ್ನು ಮಾಡುತ್ತಾನೋ, ಆ ವಿಚಾರಗಳಲ್ಲಿನ ಊರ್ಜೆಯೂ ಆಕೆಯೇ (ಆದರೆ ‘ಕೆಟ್ಟ ವಿಚಾರಗಳ ಊರ್ಜೆ' ಎಂದು ಆಕೆಯ ಅಸ್ತಿತ್ವ ಎಂದಿಗೂ ಇರುವುದಿಲ್ಲ, ಇದಕ್ಕೆ ವಿರುದ್ಧವಾಗಿ ಕೆಟ್ಟ ವಿಚಾರಗಳ ಶಕ್ತಿ ಅಂದರೆ ಪಾರ್ವತಿಯ ಶಕ್ತಿಯ ಅಭಾವ)

ಮತ್ತು ಇದೇ ವಿಷಯವು ಮಾನವನ ಆಚಾರ ಮತ್ತು ವಿಹಾರದ ಬಗ್ಗೆ ಕೂಡ ಇದೆ.

ಹಾಗೆಯೇ ಮನುಷ್ಯನು ಕಣ್ಣುಗಳಿಂದ ಏನು ನೋಡುತ್ತಾನೋ, ಕಿವಿಯಿಂದ ಏನು ಕೇಳುತ್ತಾನೋ, ಮೂಗಿನಿಂದ ಯಾವ ಗಂಧವನ್ನು ಅನುಭವಿಸುತ್ತಾನೋ, ಚರ್ಮದಿಂದ ಯಾವ ಸ್ಪರ್ಶವನ್ನು ಅನುಭವಿಸುತ್ತಾನೋ ಮತ್ತು ನಾಲಿಗೆಯಿಂದ ಯಾವ ಸವಿಯನ್ನು ಗ್ರಹಿಸುತ್ತಾನೋ, ಈ ಎಲ್ಲಾ ಅನುಭವಗಳು ಸ್ಮೃತಿ ಆಗಿ ಮಾನವನ ಮನಸ್ಸಿನಲ್ಲಿ ಸಂಗ್ರಹಿಸಲಾಗುತ್ತದೆ.

ಆದರೆ ಅದರಲ್ಲಿ ಕೂಡ ‘ಪವಿತ್ರ' ಮತ್ತು ‘ಅಪವಿತ್ರ' ಎಂಬ ಈ ಎರಡು ವಿಭಾಗಗಳು ಇದ್ದೇ ಇರುತ್ತವೆ - ಪವಿತ್ರ ಗಂಧದ, ಸ್ಪರ್ಶದ ಶಕ್ತಿ ಪಾರ್ವತಿಯದೇ ಆಗಿದೆ, ಆದರೆ ಅಪವಿತ್ರ ಗಂಧದ, ರುಚಿಯ, ಸ್ಪರ್ಶದ ಶಕ್ತಿ ಅಂದರೆ ಪಾರ್ವತಿಯ ಶಕ್ತಿಯ ಅನುಪಸ್ಥಿತಿ.

ಮತ್ತು ಅದಕ್ಕಾಗಿಯೇ ಮಾನವನು ಯಾವಾಗ ತನ್ನ ಕರ್ಮಸ್ವಾತಂತ್ರ್ಯದ ಉಪಯೋಗ ಮಾಡಿ ತಪ್ಪು ವಿಷಯಗಳನ್ನು ಮಾಡುತ್ತಲೇ ಇರುತ್ತಾನೋ, ಆಗ ವೃತ್ರಾಸುರನು ಜನ್ಮ ತೆಗೆದುಕೊಳ್ಳುತ್ತಲೇ ಇರುತ್ತಾನೆ - ಕೆಲವೊಮ್ಮೆ ಕೇವಲ ತನ್ನ ಜೀವನದಲ್ಲಿ ಅಥವಾ ಕೆಲವೊಮ್ಮೆ ಸಂಪೂರ್ಣ ಸಮಾಜಜೀವನದಲ್ಲಿ.

ಇಂತಹ ಈ ಪಾರ್ವತಿಯು ‘ಸ್ಕಂದಮಾತೆ' ಮತ್ತು ‘ಗಣೇಶಮಾತೆ'ಯಾಗಿ ‘ಮಹಾಗೌರಿ' ಆಗುತ್ತಲೇ ಆಕೆ ಅತ್ಯಂತ ಉತ್ಸಾಹದಿಂದ, ಅಷ್ಟೇ ಅಲ್ಲ ಮೂಲೆಮೂಲೆಯ ಪ್ರತಿಯೊಬ್ಬರಿಗೂ ಉತ್ತಮ ದ್ರವ್ಯಶಕ್ತಿ (ಪದಾರ್ಥ ಶಕ್ತಿ), ಕಾರ್ಯಶಕ್ತಿ, ಹಾಗೆಯೇ ಘನಪ್ರಾಣ ಅಂದರೆ ಕಾರ್ಯಬಲ ಮತ್ತು ಕಾರ್ಯಪ್ರಭಾವ ಸಿಗಬೇಕೆಂದು ಅನೇಕ ವಿಧದ ಪ್ರಯೋಗಗಳನ್ನು ಮಾಡಲು ಶುರು ಮಾಡಿದರು.

ಶಿವಶಂಕರನು ತನ್ನ ಪ್ರೀತಿಯ ಧರ್ಮಪತ್ನಿಯ ಈ ಕರುಣಾಕಾರ್ಯವನ್ನು ನೋಡಿ ಅತ್ಯಂತ ಸಂತೋಷಭರಿತ ಮತ್ತು ಆನಂದಿತರಾದರು.

ಮತ್ತು ಅವರು ಆಕೆಯ ಈ ಕಾರ್ಯದೊಂದಿಗೆ ಆದಿಮಾತೆಯ ಪ್ರೇರಣೆಯಿಂದ ಸ್ವತಃ ಕೂಡ ಸೇರಿಕೊಂಡರು.

‘ಅರ್ಧನಾರಿನಟೇಶ್ವರ' ಈ ರೂಪದ ನಿರ್ಮಾಣದ ಹಿಂದೆ, ಈ ಕಾರ್ಯವು ಕೂಡ ಒಂದು ಪ್ರಮುಖ ಪ್ರೇರಣೆಯಾಗಿತ್ತು.

ಈ ರೀತಿಯಾಗಿ ‘ಮಹಾಗೌರಿ’ ಸ್ವರೂಪವು ಶಿವನೊಂದಿಗೆ ‘ಭೇದ-ಅಭೇದ'ಗಳನ್ನು ಮೀರಿ ಏಕರೂಪವಾಯಿತು, ಆಗಲೇ ಆ ‘ಮಹಾಗೌರಿ’ ಈ ಮೂಲ ರೂಪವನ್ನು ಆದಿಮಾತೆಯು ತನ್ನ ತೇಜಸ್ಸಿನಿಂದ ತೊಳೆದರು.

ಮತ್ತು ಆಕೆಯನ್ನು ಅತ್ಯಂತ ಪ್ರೀತಿಯಿಂದ, ಕೌತುಕದಿಂದ, ವಾತ್ಸಲ್ಯದಿಂದ ತಮ್ಮ ಗಟ್ಟಿಯಾದ ಆಲಿಂಗನದಲ್ಲಿ ತೆಗೆದುಕೊಂಡರು.

ಆ ಸಮಯದಲ್ಲಿ ಮಹಾಗೌರಿಯ ಮೂರೂ ಪುತ್ರರು ಅವರ ಸೀರೆಯ ಸೆರಗು ಹಿಡಿದುಕೊಂಡೇ ನಿಂತಿದ್ದರು - ಎರಡು ಕಡೆ ಗಣಪತಿ ಮತ್ತು ಸ್ಕಂದ ಮತ್ತು ಹಿಂದಿನಿಂದ ಜೇಷ್ಠ ಪುತ್ರ ವೀರಭದ್ರ.

ಮತ್ತು ಪರಮಶಿವನಂತೂ ಜೋಡಿಸಲ್ಪಟ್ಟೇ ಇದ್ದರು.

ಮತ್ತು ಯಾವ ಕ್ಷಣದಲ್ಲಿ ಆದಿಮಾತೆ ಚಂಡಿಕೆಯು ತನ್ನ ತುಟಿಗಳಿಂದ ತನ್ನ ಮಗಳ ಮಸ್ತಕವನ್ನು ಚುಂಬಿಸಿದರೋ, ಆ ಕ್ಷಣಕ್ಕೆ ‘ಸರ್ವಶಕ್ತಿಸಮನ್ವಿತಾ', ‘ಸರ್ವಸಿದ್ಧಿಪ್ರಸವಿಣೀ' ಮತ್ತು ‘ಸರ್ವಕಾರಣಕಾರಿಣೀ' ಈ ಆದಿಮಾತೆಯ ಮೂರೂ ತತ್ವಗಳು ಪಾರ್ವತಿಯಲ್ಲಿ ಪ್ರವಾಹಿಸಿದವು.

ಮತ್ತು ಅದರಿಂದಲೇ ಒಂಬತ್ತನೆಯ ನವದುರ್ಗೆ ‘ಸಿದ್ಧಿದಾತ್ರಿ'ಯು ಅವತರಿಸಿದಳು. ಮತ್ತು ಆದಿಮಾತೆ ಚಂಡಿಕೆಯ ಮಹಾಸಿದ್ಧೇಶ್ವರಿ, ಕಲ್ಪನಾರಹಿತಾ, ಸಿದ್ಧೇಶ್ವರಿ, ಚಿದಗ್ನಿಕುಂಡಸಂಭೂತಾ, ಲಲಿತಾಂಬಿಕ ಈ ಸ್ವರೂಪಗಳೊಂದಿಗೆ ಆಕೆಯ ಏಕತ್ವವು ಸಂಸ್ಥಾಪಿಸಲ್ಪಟ್ಟಿತು.

ಮತ್ತು ಇದರಿಂದಲೇ ಪಾರ್ವತಿಯ ಜೀವನಪ್ರಯಾಣದ ಈ ಒಂಬತ್ತನೆಯ ಘಟ್ಟವು ಈಗ ಶಾಶ್ವತವಾಯಿತು ಮತ್ತು ಆಕೆ ಸ್ವತಃ ಶಾಶ್ವತಳಾದಳು.

ಹೇ ಉಪಸ್ಥಿತ ಆಪ್ತಗಣರೇ! ಘನಪ್ರಾಣ ಗಣಪತಿಯ ಜನ್ಮದ ತುಂಬಾ ಹಿಂದಿನಿಂದಲೇ ನಾನು ‘ಮಾಧ್ಯಾಹ್ನನಂದಿ' ಆಗಿ ಶಿವನ ಸೇವೆಯಲ್ಲಿ ಇದ್ದೆ. ಆದರೆ ಈ ಮಹಾಗಣಪತಿಯ ಜನ್ಮದ ಸಮಯ ಬರುತ್ತಲೇ ಪರಮಶಿವನು ‘ಪ್ರಾತರ್‌-ನಂದಿ'ಯನ್ನು ಜೊತೆಗೆ ತೆಗೆದುಕೊಂಡು ತಪಸ್ಸಿಗಾಗಿ ಹೊರಟುಹೋದರು ಮತ್ತು ನನ್ನನ್ನು ಪಾರ್ವತಿಯ ಸೇವಕನಾಗಿ ಇರಿಸಲಾಯಿತು.

ಅದಕ್ಕಾಗಿಯೇ ಮಹಾಗಣಪತಿಯ ಜನ್ಮದ ನಂತರ ಪಾರ್ವತಿಯು ತನ್ನ ಕಾರ್ಯಕ್ಕೆ ತೊಡಗಿದಾಗ ಆಕೆಯು ನನ್ನನ್ನೇ ತನ್ನ ಪ್ರಮುಖ ಸಹಕಾರಿಯಾಗಿ ಆಯ್ಕೆ ಮಾಡಿದ್ದರು.

ಆಕೆಯು ನನ್ನನ್ನು ‘ಸಹಕಾರಿ' ಎಂದು ಹೇಳುತ್ತಿದ್ದರು, ಆದರೆ ನಾನು ಮಾತ್ರ ‘ಸೇವಕ' ಆಗಿದ್ದೆ. ಯಾವಾಗ ಮೂರೂ ಪುತ್ರರನ್ನು ಜೊತೆಗೆ ತೆಗೆದುಕೊಂಡು ಶಿವ-ಪಾರ್ವತಿಯರು ಆದಿಮಾತೆಯನ್ನು ಏಕಾಂತದಲ್ಲಿ ಭೇಟಿಯಾಗಲು ಮಣಿ ದ್ವೀಪದಲ್ಲಿ ಹೋದರು, ಆಗಲೂ ಕೂಡ ಈ ಶಿವಪಂಚಾಯತನದ ವಾಹನವಾಗಿ ನನ್ನನ್ನೇ ಶಿವ-ಪಾರ್ವತಿಯರು ಆಯ್ಕೆ ಮಾಡಿದರು.

ಮತ್ತು ಅದಕ್ಕಾಗಿಯೇ ನಾನು ಸಿದ್ಧಿದಾತ್ರಿಯ ಅವತಾರ ಸ್ಥಿತಿಯನ್ನು ಪ್ರತ್ಯಕ್ಷವಾಗಿ ನೋಡಿದ ಏಕೈಕ ಭಾಗ್ಯವಂತ ಶ್ರದ್ಧಾವಾನನಾದೆ.

ಹೇ ಎಲ್ಲಾ ಶ್ರದ್ಧಾವಾನ ಜನರೇ! ಎರಡೂ ನವರಾತ್ರಿಗಳಲ್ಲಿ ಈ ನವದುರ್ಗಾಮಂತ್ರಮಾಲೆಯೊಂದಿಗೆ ಪೂಜೆ ಮಾಡಿ, ಆದಿಮಾತೆ ಚಂಡಿಕೆಯ ಕೃಪೆಯನ್ನು ಪಡೆದುಕೊಳ್ಳುತ್ತಾ ಇರಿ ಏಕೆಂದರೆ ಈ ನವದುರ್ಗೆ ಸಿದ್ಧಿದಾತ್ರಿಯು ಅಂತಹ ಶ್ರದ್ಧಾವಾನರನ್ನು ಸದಾ ತನ್ನ ಅಭಯ ಮುದ್ರೆಯ ನೆರಳಿನಲ್ಲಿಯೇ ಇರಿಸುತ್ತಾರೆ.

ಮತ್ತು ಇದು ಆಕೆಯ ಗುಪ್ತ ಕಾರ್ಯವಾಗಿದೆ ಅದನ್ನು ನಾನು ಇಂದು ಮೊದಲ ಬಾರಿಗೆ ದೇವಾಧಿ ದೇವ ತ್ರಿವಿಕ್ರಮನ ಅನುಮತಿಯಿಂದ ಶ್ರದ್ಧಾವಾನ ವಿಶ್ವಕ್ಕಾಗಿ ಪ್ರಕಟಪಡಿಸುತ್ತಿದ್ದೇನೆ.”

ಬಾಪು ಮುಂದೆ ತುಳಸಿಪತ್ರ - ೧೪೦೩ ಈ ಅಗ್ರಲೇಖದಲ್ಲಿ ಬರೆಯುತ್ತಾರೆ, 

ಬ್ರಹ್ಮರ್ಷಿ ಯಾಜ್ಞವಲ್ಕ್ಯರು ಈ ಸುಂದರ ರಹಸ್ಯವನ್ನು ಪ್ರಕಟಪಡಿಸಿದ ನಂತರ ಅಲ್ಲಿನ ಎಲ್ಲಾ ಉಪಸ್ಥಿತರಲ್ಲಿ ಒಂಬತ್ತನೆಯ ನವದುರ್ಗೆ ಸಿದ್ಧಿದಾತ್ರಿಯ ಚರಣಗಳ ಮೇಲೆ ಮಸ್ತಕ ಇಡಬೇಕೆಂದು ತೀವ್ರ ಇಚ್ಛೆ ಮತ್ತು ತವಕವುಂಟಾಯಿತು. ಆದರೆ ಯಾರೂ ಕೂಡ ಮುಂದೆ ಬಂದು ಅಂತಹ ವಿನಂತಿ ಮಾಡಲು ಧೈರ್ಯ ಮಾಡಲಿಲ್ಲ.

ಅದಕ್ಕೆ ಕಾರಣವೂ ಹಾಗೆಯೇ ಇತ್ತು.

ಏಕೆಂದರೆ ಸ್ವತಃ ಆದಿಮಾತೆ ಮತ್ತು ತ್ರಿವಿಕ್ರಮರ ಜೊತೆಗೆ ಇತರ ಎಲ್ಲಾ ನವದುರ್ಗೆಯರೂ ಕೂಡ ಕೈಲಾಸದ ಭೂಮಿಗೆ ಪಾದಸ್ಪರ್ಶ ಮಾಡಿ ನಿಂತಿದ್ದರು. ಅಂದರೆ ಅವರೆಲ್ಲರ ಚರಣಗಳು ಕೈಲಾಸದ ಭೂಮಿಯ ಮೇಲೆ ಇದ್ದವು.

ಆದರೆ ಈ ಸಿದ್ಧಿದಾತ್ರಿಯು ಇಂತಹ ಏಕೈಕ ನವದುರ್ಗೆ ಆಗಿದ್ದರು, ಅವರು ಕೈಲಾಸದ ಭೂಮಿಯಿಂದ ಎಂಟು ಅಂಗುಲ ಮೇಲೆ ಇದ್ದರು.

ಇದರ ಹಿಂದಿನ ರಹಸ್ಯ ಇನ್ನೂ ಕೂಡ ತಿಳಿದಿರದ ಕಾರಣ, ‘ವಿನಂತಿ ಹೇಗೆ ಮಾಡಬೇಕು' ಎಂಬ ಪ್ರಶ್ನೆ ಮೂಡುವುದು ಸಹಜವೇ ಆಗಿತ್ತು.

ಆದರೆ ಕೊನೆಗೆ ಸುಮ್ಮನಿರಲು ಆಗದೆ ಬ್ರಹ್ಮರ್ಷಿ ಅಗಸ್ತ್ಯ ಮತ್ತು ಬ್ರಹ್ಮರ್ಷಿ ಕಶ್ಯಪರ ಮೊಮ್ಮಗಳು ಅಹಲ್ಯಾ, ಪತಿ ಬ್ರಹ್ಮರ್ಷಿ ಗೌತಮರ ಅನುಮತಿಯಿಂದ ವಿನಯಪೂರ್ವಕವಾಗಿ ಮುಂದೆ ಬಂದರು ಮತ್ತು ಆಕೆಯು ಎರಡೂ ಕೈಗಳನ್ನು ಜೋಡಿಸಿ ಬ್ರಹ್ಮರ್ಷಿ ಯಾಜ್ಞವಲ್ಕ್ಯರನ್ನು ಕೇಳಿದರು, “ಹೇ ನಿತ್ಯಗುರು ಬ್ರಹ್ಮರ್ಷಿ ಯಾಜ್ಞವಲ್ಕ್ಯರೇ! ನಮ್ಮೆಲ್ಲರ ಮನಸ್ಸಿನಲ್ಲಿ ನಿಜವಾಗಿ ಒಂಬತ್ತಕ್ಕೆ ಒಂಬತ್ತು ನವದುರ್ಗೆಯರನ್ನು ಪ್ರಣಾಮ ಮಾಡಬೇಕೆಂದಿದೆ. ಆದರೆ ಆದಿಮಾತೆಯ ಪಕ್ಕದಲ್ಲಿ ಕಾಣಿಸುತ್ತಿದ್ದ ಮೊದಲ ಎಂಟು ನವದುರ್ಗೆಯರು ಈಗ ಅದೃಶ್ಯವಾಗಿದ್ದಾರೆ ಮತ್ತು ಅದೇ ಸಮಯದಲ್ಲಿ ಒಂಬತ್ತನೆಯ ನವದುರ್ಗೆ ಸಿದ್ಧಿದಾತ್ರಿಯು ತನ್ನ ಕೈಯಲ್ಲಿನ ಸುವರ್ಣಕಮಲಛತ್ರವನ್ನು ಆದಿಮಾತೆಯ ಮಸ್ತಕದ ಮೇಲೆ  ಗಾಳಿಯಲ್ಲಿ ಇಟ್ಟು ಮುಂದೆ ಬಂದು ನಿಂತಿದ್ದಾರೆ.

ನಮ್ಮೆಲ್ಲರಿಗೂ ಅವರ ಚರಣಗಳ ಮೇಲೆ ಮಸ್ತಕ ಇಡಬೇಕಾಗಿದೆ. ಆದರೆ ಇವರ ಕೈಯಲ್ಲಿನ ಸುವರ್ಣಕಮಲಛತ್ರ ಕೂಡ ಆದಿಮಾತೆಯ ಮಸ್ತಕದ ಮೇಲೆ ಗಾಳಿಯಲ್ಲಿ ಇದೆ ಮತ್ತು ಇವರ ಸ್ವಂತ ಚರಣಗಳು ಕೂಡ ಕೈಲಾಸದ ಭೂಮಿಯನ್ನು ಸ್ವಲ್ಪವೂ ಸ್ಪರ್ಶ ಮಾಡದೆ ಗಾಳಿಯಲ್ಲಿಯೇ ಇವೆ.

ಇದನ್ನೆಲ್ಲಾ ನೋಡಿದ ನಂತರ, ಇವರ ಪಾದಸ್ಪರ್ಶವನ್ನು ಕೇಳಬೇಕೋ ಬೇಡವೋ, ಅದುವೇ ನಮಗೆ ತಿಳಿಯುತ್ತಿಲ್ಲ. ಈಗ ನೀವು ನಮಗೆ ದಯವಿಟ್ಟು ಮಾರ್ಗದರ್ಶನ ಮಾಡಿ.”

ಬ್ರಹ್ಮರ್ಷಿ ಯಾಜ್ಞವಲ್ಕ್ಯರು ಅತ್ಯಂತ ಕೌತುಕದಿಂದ ಅಹಲೆಯ ಕಡೆಗೆ ನೋಡಿದರು ಮತ್ತು ಹೇಳಿದರು, “ಹೇ ಮಹಾಮತಿ ಅಹಲ್ಯೇ! ಯಾವ ಪ್ರಶ್ನೆಗಳನ್ನು ನಿನ್ನಗಿಂತ ತಪಸ್ಸಿನಲ್ಲಿ,

ವಯಸ್ಸಿನಲ್ಲಿ, ಜ್ಞಾನದಲ್ಲಿ, ವಿಜ್ಞಾನದಲ್ಲಿ ಶ್ರೇಷ್ಠವಾಗಿರುವ ಮಹರ್ಷಿಗಳು ಮತ್ತು ಮಹಾಮತಿಗಳು ಕೇಳಲು ಧೈರ್ಯ ಮಾಡಲಿಲ್ಲವೋ, ಅದನ್ನು ನೀನು ಅತ್ಯಂತ ಸುಲಭವಾಗಿ ಕೇಳಲು ಸಾಧ್ಯವಾಯಿತು.

ಈ ನಿನ್ನ ಪ್ರಾಮಾಣಿಕ ಸ್ವಭಾವ ಮತ್ತು ಬಾಲ್ಯದ ತಿಳುವಳಿಕೆ ಇರುವ ಮನಸ್ಥಿತಿ ಈ ಎರಡು ನಿನ್ನ ನಿಜವಾದ ಶಕ್ತಿಗಳಾಗಿವೆ. ಹೇ ಅಹಲ್ಯೇ! ಗಣಪತಿಯ ಜನ್ಮದ ನಂತರ ಅವನ ‘ಘನಪ್ರಾಣ'ನಾಗಿ ಕಾರ್ಯದ ಆರಂಭ ತಕ್ಷಣವೇ ಆಗಬೇಕಿತ್ತು ಮತ್ತು ಅದಕ್ಕಾಗಿಯೇ ಪರಮಶಿವನ ದೂತನಾಗಿ, ಶಿಷ್ಯನಾಗಿ, ವಾಹನನಾಗಿ ನನ್ನನ್ನು ಪಾರ್ವತಿಯು ಆಯ್ಕೆ ಮಾಡಿದ್ದರು.

ಆದರೆ ನನ್ನ ಈ ಆಯ್ಕೆಯಾಗುತ್ತಲೇ, ಸ್ವತಃ ಬುದ್ಧಿದಾತನಾಗಿರುವ ಗಣಪತಿಯ ಅಧ್ಯಾಪನದ ವ್ಯವಸ್ಥೆಯನ್ನೂ ಕೂಡ ನೋಡಬೇಕಿತ್ತು, ಈ ಕಾರಣದಿಂದ ನಾನು ಚಿಂತೆಗೊಳಗಾಗಿದ್ದೆ ಮತ್ತು ಯಾವಾಗಲೂ ಪ್ರಶ್ನೆಗೆ ಉತ್ತರ ಪಡೆಯುವುದಕ್ಕಾಗಿ ಹಿರಿಯ ಸಹೋದರಿ ಲೋಪಮುದ್ರೆಯ ಬಳಿ ಹೋದೆ.

ಲೋಪಮುದ್ರೆಯು ನನ್ನ ಎಲ್ಲಾ ವಿಚಾರಗಳನ್ನು ಕೇಳಿಕೊಂಡರು ಮತ್ತು ಅವರು ನನಗೆ ಹೇಳಿದರು - ‘ಸ್ವಲ್ಪವೂ ಚಿಂತೆ ಮಾಡಬೇಡ. ನಿನಗೆ ಯಾವ ಚಿಂತೆ ಆಗುತ್ತಿದೆಯೋ ಅದು ಕೂಡ ಆದಿಮಾತೆಯ ಪ್ರೇರಣೆಯೇ ಆಗಿದೆ.

ಏಕೆಂದರೆ ಗಣಪತಿಯ ಜನ್ಮದ ನಂತರ ಯಾವ ಕ್ಷಣಕ್ಕೆ ಮಹಾಗೌರಿ ಗಣಪತಿಯನ್ನು ಅಧ್ಯಯನಕ್ಕಾಗಿ ನಿನ್ನ ಕೈಯಲ್ಲಿ ನೀಡುತ್ತಾರೋ, ಅದೇ ಕ್ಷಣಕ್ಕೆ ನಿನ್ನ ಈ ಚಿಂತೆಯು ತಾನಾಗಿಯೇ ಇಲ್ಲವಾಗುತ್ತದೆ -

- ಏಕೆಂದರೆ ಈ ಘನಪ್ರಾಣ ಗಣಪತಿಯೇ ನಿಜವಾದ ಮತ್ತು ಏಕೈಕ ಚಿಂತಾಮಣಿ ಆಗಿದ್ದಾನೆ.

ಮತ್ತು ಅವನ ಈ ಚಿಂತಾಮಣಿಕಾರ್ಯ ನಿನ್ನಿಂದಲೇ ಆರಂಭವಾಗುತ್ತದೆ.'

ಬ್ರಹ್ಮವಾದಿನಿ ಲೋಪಮುದ್ರೆಯು ಹೀಗೆ ಭರವಸೆ ನೀಡಿದ ಕಾರಣಕ್ಕಾಗಿಯೇ ನಾನು ಈ ಜವಾಬ್ದಾರಿಯನ್ನು ಸ್ವೀಕರಿಸಿದೆ ಮತ್ತು ಸಿದ್ಧಿದಾತ್ರಿಯ ಅವತರಣದ ಏಕೈಕ ಸಾಕ್ಷಿದಾರನಾದೆ.

ಮತ್ತು ಅದರಿಂದಲೇ ಛತ್ರವು ಗಾಳಿಯಲ್ಲಿ ಇರಲು ಸಾಧ್ಯವಾಯಿತು ಮತ್ತು ಸಿದ್ಧಿದಾತ್ರಿಯು ಪವಿತ್ರ ಕೈಲಾಸದ ಮೇಲೆ ಕೂಡ ಪಾದವನ್ನು ಇಡದಿರುವ, ಇದರ ಹಿಂದಿನ ರಹಸ್ಯವು ನನಗೆ ತಿಳಿದಿದೆ.

ಹೇ ಅಹಲ್ಯೇ! ಸಿದ್ಧಿದಾತ್ರಿಯ ಪವಿತ್ರ ಕಾರ್ಯವು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಪಾರ್ವತಿಯ ಈ ರೂಪಕ್ಕೆ ಕಾಲದ  ಬಂಧನವೂ ಇಲ್ಲ ಮತ್ತು  ಸ್ಥಳದ ಬಂಧನವೂ ಇಲ್ಲ.

‘ಸತ್ಯಯುಗದ ಉತ್ತರಾರ್ಧವೂ ಕೂಡ ಎಲ್ಲಿ ದುರ್ವಿಚಾರಗಳಿಂದ, ದುರ್ಗುಣಗಳಿಂದ,

ದುಷ್ಕರ್ಮಗಳಿಂದ, ದುರ್ಮಂತ್ರಗಳಿಂದ ಮತ್ತು ಆಸುರೀ ವೃತ್ತಿಗಳಿಂದ ತುಂಬಿಹೋಗಬಹುದೇ, ಹಾಗಿದ್ದ ಮೇಲೆ ಇತರ ಯುಗಗಳ ಗತಿಯೇನು?' - ಈ ಪ್ರಶ್ನೆಯು ಎಲ್ಲಾ ಮಹರ್ಷಿಗಳಿಗೆ, ಋಷಿಗಳಿಗೆ ಮತ್ತು ಋಷಿಕುಮಾರರಿಗೆ ಉಂಟಾಯಿತು. ಅದಕ್ಕೆ ಉತ್ತರವು ಇಲ್ಲಿಯೇ ಸಿಗುತ್ತದೆ.

ಆದಿಮಾತೆಯು ಈ ‘ಸಿದ್ಧಿದಾತ್ರಿ' ರೂಪವನ್ನು ಹೀಗೆ ನಿರ್ಮಿಸಿದ್ದಾರೆ, ಅದಕ್ಕೆ ಸ್ಥಳದ ಬಂಧನವೂ ಇಲ್ಲ.

ಇದರ ಅರ್ಥ, ಎಲ್ಲಿ 1) ದುಷ್ಕರ್ಮ 2) ದುರ್ವಾಸನೆ 3) ದುರ್ಮಂತ್ರ 4) ದುಷ್ಟದೇವತೆಪೂಜನೆ ಮತ್ತು 5)ಕುವಿದ್ಯೆ ಇವುಗಳನ್ನು ಉಪಯೋಗಿಸಿ ‘ದುಷ್ಟ ಅಭಿಚಾರಕರ್ಮಗಳು' ಅಂದರೆ ಕುಮಂತ್ರ ಸಿದ್ಧಿಯಿಂದ ಇತರರ ಕೆಟ್ಟದನ್ನು ಮಾಡುವ ಪ್ರಕ್ರಿಯೆ ನಡೆಯುತ್ತಿರುತ್ತದೆಯೋ, ಆ ಸ್ಥಳದ ಮೇಲೆ ಚಂಡಿಕಾಕುಲದ ಇತರ ಸದಸ್ಯರಿಗೆ ಎಂದಿಗೂ ಆಮಂತ್ರಣ ಇರುವುದಿಲ್ಲ; ಏಕೆಂದರೆ ಅವರನ್ನು ಆಹ್ವಾನಿಸುವುದರಿಂದ ಆ ದುಷ್ಟ ಜನರ ಕಾರ್ಯದಲ್ಲಿ ಅಡ್ಡಿ ಉಂಟಾಗುತ್ತದೆ.

ಆದರೆ ಈ ಸಿದ್ಧಿದಾತ್ರಿಗೆ ಯಾವುದೇ ಸ್ಥಳಕ್ಕೆ ಹೋಗಲು  ಮತ್ತು ಇರಲು ಸ್ವಲ್ಪವೂ ಬಂಧನ ಇಲ್ಲ.

ನಿಜವಾಗಿ ಹೇಳಬೇಕೆಂದರೆ ಇತರ ಚಂಡಿಕಾಕುಲದ ಸದಸ್ಯರಿಗೂ ಈ ಬಂಧನ ಇಲ್ಲವೇ ಇಲ್ಲ; ಆದರೆ ಇವರೆಲ್ಲರೂ, ಮಾನವನ ಕರ್ಮಸ್ವಾತಂತ್ರ್ಯದ ಮೇಲೆ ತಮ್ಮ ಕಡೆಯಿಂದ ಬಂಧನ ಬರಬಾರದು ಎಂಬ ಕಾರಣಕ್ಕಾಗಿ ಆಮಂತ್ರಣವಿಲ್ಲದೆ, ಆಹ್ವಾನವಿಲ್ಲದೆ ಕೆಟ್ಟ ಸ್ಥಳಕ್ಕೆ ಹೋಗುವುದಿಲ್ಲ - ಆದರೆ ಅವರ ಭಕ್ತನು ಅಂತಹ ಸ್ಥಳದಲ್ಲಿ ಸಂಕಟದಲ್ಲಿದ್ದರೆ, ಅವನು ನೆನಪಿಸಿಕೊಳ್ಳುತ್ತಲೇ ಆ ಚಂಡಿಕಾಕುಲ ಸದಸ್ಯರು ಅಲ್ಲಿ ಪ್ರಕಟಗೊಳ್ಳುತ್ತಾರೆ.

ಆದರೆ ಈ ಸಿದ್ಧಿದಾತ್ರಿಯು ಇಂತಹ ಏಕೈಕಳು. ಇವರಿಗೆ ಕಾಲದ ಮತ್ತು ಸ್ಥಳದ ಬಂಧನ ಇಲ್ಲದ ಕಾರಣ, ಇವರಿಗೆ ಕರ್ಮಸ್ವಾತಂತ್ರ್ಯದ ಬಂಧನವೂ ಇಲ್ಲ; ಏಕೆಂದರೆ ಯಾರದಾದರೂ ಕರ್ಮಸ್ವಾತಂತ್ರ್ಯವು ಸ್ಥಳ, ಕಾಲ ಇವುಗಳ ಮೇಲೆ ಅವಲಂಬಿಸಿರುತ್ತದೆ.

ಮತ್ತು ಅದಕ್ಕಾಗಿಯೇ ಈ ನವದುರ್ಗೆ ಸಿದ್ಧಿದಾತ್ರಿಯು ಇಂತಹ ಕೊಳಕಿನಲ್ಲಿಯೂ ಕೊಳಕು ಸ್ಥಳದಲ್ಲಿ ಕೂಡ ಅಂತಹ ದುಷ್ಟ ಪ್ರಕ್ರಿಯೆಗಳು ಶುರುವಾಗುವುದಕ್ಕಿಂತ ಮೊದಲಿನಿಂದಲೇ ಗಟ್ಟಿಯಾಗಿ  ನಿಂತಿರುತ್ತಾರೆ -  ಯಾವುದೇ ಸ್ಥಳಕ್ಕೆ ಅಥವಾ ವಸ್ತುವಿಗೆ ಅಥವಾ ಪದಾರ್ಥಕ್ಕೆ ಅಥವಾ ಜೀವಿಗೆ  ಸ್ಪರ್ಶ ಮಾಡದೆ.

ಯಾಕಾಗಿ?

ಸಿದ್ಧಿದಾತ್ರಿಯು ಯಾವುದೇ ಚಂಡಿಕಾ ವಿರೋಧಿ ಮಾರ್ಗದಲ್ಲಿರುವ ಅಂದರೆ ದೇವಯಾನ ಪಂಥ ವಿರೋಧಿ ಮಾರ್ಗದಲ್ಲಿರುವವರ, ಅವರು ಪಡೆದಿರುವ ಯಾವುದೇ ಸಿದ್ಧಿಯನ್ನು ನ್ಯೂನತೆಗಳೊಂದಿಗೆ ಮತ್ತು ಅಪೂರ್ಣವಾಗಿಯೇ ಇಡುತ್ತಾರೆ. ಅದಕ್ಕಾಗಿಯೇ ಶ್ರದ್ಧಾವಾನರ ಸಂರಕ್ಷಣೆ ನಡೆಯುತ್ತಲೇ ಇರುತ್ತದೆ.

ಆದರೆ ಇದೆಲ್ಲವನ್ನೂ ಅವರು ಏನು ಮಾಡುತ್ತಾರೋ ಅದು ಬರೀ ಗಾಳಿಯನ್ನೂ ಕೂಡ ಸ್ಪರ್ಶ ಮಾಡದೆ; ಏಕೆಂದರೆ ಈಕೆಯ ‘ಶ್ರದ್ಧಾವಾನರ ಸುಲಭ ಸಂರಕ್ಷಣೆ' ಎಂಬ ಈ ಕಾರ್ಯಕ್ಕಾಗಿ ಆಕೆಯ ಪ್ರತಿಯೊಂದು ಕ್ರಿಯೆಯು ಅಸ್ಪರ್ಶವಾಗಿ ಇರುವುದು ಅವಶ್ಯಕವಿಲ್ಲವೇನು?

ಹೇ ಅಹಲ್ಯೇ! ನೀನು ಸ್ವತಃ ಪ್ರಶ್ನೆ ಕೇಳಿದೆ. ಅದಕ್ಕಾಗಿಯೇ ಆಕೆಯ ಚರಣಗಳನ್ನು ಸ್ಪರ್ಶ ಮಾಡುವ ಮೊದಲ ಅಧಿಕಾರ ನಿನಗೆ ಮತ್ತು ನಂತರ ಉಳಿದ ಪ್ರತಿಯೊಬ್ಬರಿಗೂ.

ಹೇ ಅಹಲ್ಯೇ! ಪ್ರಣಾಮ ಮಾಡು.”

ಮಹಾಮತಿ ಅಹಲೆಯು ನವದುರ್ಗೆ ಸಿದ್ಧಿದಾತ್ರಿಯ ಚರಣಗಳನ್ನು ಸ್ಪರ್ಶ ಮಾಡಿ ಅದರ ಮೇಲೆ ತನ್ನ ಮಸ್ತಕವನ್ನು ಇಡುತ್ತಲೇ ಮಾತೆ ಸಿದ್ಧಿದಾತ್ರಿಯು ಅಹಲ್ಯೆಗೆ ವರವನ್ನು ನೀಡಿದರು, “ಹೇ ಪ್ರಿಯ ಮಗಳೇ ಅಹಲ್ಯೇ! ನಿನ್ನ ಈ ಬಾಲ್ಯದ ತಿಳುವಳಿಕೆ ಇರುವ ಸ್ವಭಾವವು ಸದಾ ಇದೇ ರೀತಿಯಲ್ಲಿ ಇರಲಿ. ಅದರಿಂದಲೇ ಪ್ರತಿ ಯುಗದಲ್ಲಿ ನೀನು ಮಹತ್ತರ ಕಾರ್ಯಗಳನ್ನು ಮಾಡಿಸುತ್ತೀಯ.

ಹೇ ಅಹಲ್ಯೇ! ‘ಚಾಂದ್ರವಿದ್ಯೆ' ಅಂದರೆ ಚಂದ್ರ ವಿಜ್ಞಾನವನ್ನು ನಿನಗೆ ನಿನ್ನ ತಂದೆ ತಾಯಿಯಾದ ಶಶಿಭೂಷಣ ಮತ್ತು ಪೂರ್ಣಾಹುತಿಯು ಕಲಿಸಲು ಶುರು ಮಾಡಿದ್ದಾರೆ. ಆ ಅಧ್ಯಯನದ ಉಪಯೋಗವನ್ನು ‘ಸೂರ್ಯವಿಜ್ಞಾನ' ಅಧ್ಯಯನ ಮಾಡುವ ನಿನ್ನ ಪತಿಯಾದ ಗೌತಮನ ಕಾರ್ಯಕ್ಕೆ ಪೂರಕವಾಗುವ ರೀತಿಯಲ್ಲಿ ಮಾಡುತ್ತಾ ಇರು.

ಇದರಿಂದಲೇ ಪ್ರತಿ ಯುಗದಲ್ಲಿನ ಎಲ್ಲಕ್ಕಿಂತ ದೊಡ್ಡ ಜಾಗತಿಕ ಯುದ್ಧಗಳಲ್ಲಿ  ‘ವಿಜಯಶೀಲೆ' ನೀನೇ ಇರುತ್ತೀಯ.”

मराठी >> हिंदी >> English >> ગુજરાતી>> తెలుగు>> বাংলা>> தமிழ்>> മലയാളം>>