ಸದ್ಗುರು ಶ್ರೀಅನಿರುದ್ಧರ ಭಾವವಿಶ್ವದಿಂದ - ಪಾರ್ವತೀಮಾತೆಯ ನವದುರ್ಗಾ ಸ್ವರೂಪಗಳ ಪರಿಚಯ – ಭಾಗ ೯

 


ಸದ್ಗುರು ಶ್ರೀಅನಿರುದ್ಧ ಬಾಪು ಅವರು ತುಳಸಿಪತ್ರ - ೧೩೯೬ ರಲ್ಲಿ ಬರೆಯುತ್ತಾರೆ,

ಎಲ್ಲಾ ಉಪಸ್ಥಿತರ ಮುಂದೆಯೇ ಏಳನೆಯ ನವದುರ್ಗೆ ಕಾಲರಾತ್ರಿಯು ಎಂಟನೆಯ ನವದುರ್ಗೆ ಮಹಾಗೌರಿಯಾಗಿ ಪರಿವರ್ತನೆಯಾಗುತ್ತಿತ್ತು. ಅತ್ಯಂತ ನಿಧಾನವಾಗಿ, ಅತೀ ನಿಧಾನವಾಗಿ.

ಇಲ್ಲಿಯವರೆಗೆ ಯಾವ ರೂಪಾಂತರಕ್ಕೂ (Transformation) ಕ್ಷಣವೂ ಕೂಡ ಹಿಡಿದಿರಲಿಲ್ಲ.

ಕೈಲಾಸದಲ್ಲಿ ಕಾಲವೇ ಅಸ್ತಿತ್ವದಲ್ಲಿ ಇಲ್ಲದಿದ್ದರಿಂದ, ‘ಎಷ್ಟು ನಿಧಾನವಾಗಿ' ಎಂಬುದು ಯಾರಿಗೂ ತಿಳಿಯುತ್ತಿರಲಿಲ್ಲ. ಆದರೆ ಅಲ್ಲಿನ ಪ್ರತಿಯೊಬ್ಬರೂ ನಿರಂತರವಾಗಿ ಯಾವುದಾದರೊಂದು ನಿತ್ಯಜಪವನ್ನು ಮಾಡುತ್ತಿದ್ದರಿಂದ, ಪ್ರತಿಯೊಬ್ಬರಿಗೂ ಸಂಪೂರ್ಣ ಅರಿವಾಗುತ್ತಿತ್ತು ಅವರ ಜಪದ ಎಷ್ಟೋ ಆವರ್ತನೆಗಳ ಆವರ್ತನೆಗಳಾಗುತ್ತಿವೆ ಮತ್ತು ಆದರೂ ಕೂಡ ಈ ರೂಪಾಂತರವು ನಡೆಯುತ್ತಲೇ ಇದೆ.

ಎಲ್ಲಾ ಉಪಸ್ಥಿತರಲ್ಲಿ ಇದರ ಬಗ್ಗೆ ಇದ್ದ ಕುತೂಹಲವು ಈಗ ಗಲಿಬಿಲಿಯಲ್ಲಿ ಬದಲಾಗಲು ಶುರು ಆಯಿತು.


ಮತ್ತು ನಿಧಾನವಾಗಿ ಆ ಗಲಿಬಿಲಿಯು ಮನಸ್ಸನ್ನು ಅಸ್ಥಿರಗೊಳಿಸಲು ಶುರು ಆಯಿತು. - ಮಹರ್ಷಿಗಳಿಂದ ಹಿಡಿದು ಶಿವಗಣರವರೆಗೂ ಪ್ರತಿಯೊಬ್ಬರ ಮನಸ್ಸು ತೀವ್ರತೆಯ ಅತ್ಯುಚ್ಚ ಕಡೆಯಲ್ಲಿ ತಲುಪಿ, ನಂತರ ಅಲ್ಲಿಂದ ಕಡೇಲೋಟವಾದುದರಿಂದ ಸಂಪೂರ್ಣವಾಗಿ ಅಶಾಂತ ಮತ್ತು ಅಸ್ಥಿರ ಆಗಿತ್ತು.

ಎಲ್ಲಾ ಬ್ರಹ್ಮರ್ಷಿಗಣ ಮಾತ್ರ ಈ ನಿಧಾನವಾಗಿ ನಡೆಯುತ್ತಿರುವ ಪ್ರಕ್ರಿಯೆಯಿಂದ ಹೆಚ್ಚು ಹೆಚ್ಚು ಶಾಂತ, ತನ್ಮಯ, ತಲ್ಲೀನ ಮತ್ತು ಆನಂದಿತರಾಗುತ್ತಿದ್ದರು.

ಮತ್ತು ಇದು ತಿಳಿದ ನಂತರ ಉಳಿದ ಎಲ್ಲರ ಮನಸ್ಸಿನಲ್ಲಿನ ಅಶಾಂತತೆ ಮತ್ತು ಅಸ್ಥಿರತೆಯು ಹೆಚ್ಚು ವೇಗವಾಗಿ ಹೆಚ್ಚಾಗಲು ಶುರು ಆಯಿತು.

ಮತ್ತು ಈ ತನ್ನ ಮಕ್ಕಳ ಅವಸ್ಥೆಯನ್ನು ಆದಿಮಾತೆ ನೋಡಲು ಸಾಧ್ಯವೇನು?

ಖಂಡಿತವಾಗಿಯೂ ಇಲ್ಲ.

ಆದಿಮಾತೆ ಶ್ರೀವಿದ್ಯೆಯು ಆ ಎಲ್ಲರ ಕಡೆಗೆ ಕೃಪಾದೃಷ್ಟಿಯಿಂದ ನೋಡಿ ಮಾತನಾಡಲು ಶುರು ಮಾಡಿದಳು, “ಹೇ ವತ್ಸರೇ! ನಿಮ್ಮೆಲ್ಲರ ಮನಸ್ಸು ಈಗ ಸಂಪೂರ್ಣವಾಗಿ ‘ಥರ್ವ’ ಸ್ಥಿತಿಯನ್ನು ತಲುಪಿದೆ.

ಸಾಮಾನ್ಯವಾಗಿ ಮಾನವನು ‘ಥರ್ವ’ ಸ್ಥಿತಿಯನ್ನು ತಲುಪುತ್ತಾನೆ, ಅದು ಅವನ ಷಡ್-ರಿಪುಗಳ ತುದಿಗೆ ಹೋಗುವುದರಿಂದ.

ಆದರೆ ನೀವೆಲ್ಲರೂ ‘ಥರ್ವ’ ಸ್ಥಿತಿಯನ್ನು ತಲುಪಿದ್ದೀರಿ, ಅದು ಕೇವಲ ಮತ್ತು ಕೇವಲ ‘ಅಸತೋ ಮಾ ಸದ್ಗಮಯ' ಎಂಬ ಈ ಒಂದೇ ಕಾರಣಕ್ಕಾಗಿ ಅಂದರೆ ಪವಿತ್ರ ಅಸ್ತಿತ್ವದ ಮತ್ತು ಪವಿತ್ರ ಕೃತಿಯ ರಹಸ್ಯ ಹಾಗೂ ಕಾರಣವನ್ನು ತಿಳಿಯಲು.

ಮತ್ತು ಅದು ಕೂಡ ಯಾವುದೇ ರೀತಿಯ ಸ್ವಾರ್ಥಕ್ಕಾಗಿ ಅಲ್ಲ, ಆದರೆ ಕೇವಲ ಮತ್ತು ಕೇವಲ ಎಂಟನೆಯ ನವದುರ್ಗೆ ಮಹಾಗೌರಿಯನ್ನು ಸಂಪೂರ್ಣವಾಗಿ ತಿಳಿಯಲು - ಸಂಪೂರ್ಣವಾಗಿ ಸಾತ್ವಿಕ ತೀವ್ರತೆಯಿಂದ.

ಹೇ ಶಿವ-ಋಷಿ ತುಂಬರು! ಈ ರೂಪಾಂತರವು ಪೂರ್ಣಗೊಳ್ಳುವವರೆಗೆ ನೀನು ಈ ಎಲ್ಲರಿಗೆ ಈ ರೂಪಾಂತರದ ಕಥೆಯನ್ನು ವಿವರವಾಗಿ ಹೇಳು.”

ಆದಿಮಾತೆ ಶ್ರೀವಿದ್ಯೆಗೆ ಸಾಷ್ಟಾಂಗ ಪ್ರಣಾಮ ಮಾಡಿ ಶಿವ-ಋಷಿ ತುಂಬರು ಕಥೆ ಹೇಳಲು ಶುರು ಮಾಡಿದರು, “ಹೇ ಆಪ್ತಜನರೇ! ಈ ಪಾರ್ವತಿಯು ಒಮ್ಮೆ ಯಾವಾಗ ವಸುಂಧರೆಯ ಮೇಲಿನ ಮತ್ತು ವಸುಂಧರೆಯ ಆಕಾಶದಿಂದ ಆ ಕಾಲದಲ್ಲಿ ಇದ್ದ ಎಲ್ಲಾ ಆಸುರೀ ಶಕ್ತಿಗಳ, ಆಸುರೀ ರೂಪಗಳ ಮತ್ತು ಆಸುರೀ ಗುಣಗಳ ಸಂಪೂರ್ಣವಾಗಿ

ಧ್ವಂಸ ಮಾಡಬೇಕೆಂದು ನಿರ್ಧರಿಸಿದಳೋ, ಆಗಲೇ ಮೊದಲ ಬಾರಿಗೆ ಆಕೆಯ ಈ ‘ಕಾಲರಾತ್ರಿ' ರೂಪವು ಪ್ರಕಟಗೊಂಡಿತ್ತು.

ಪಾರ್ವತಿಯು ಈ ನಿರ್ಧಾರವನ್ನು ಕೇವಲ ಒಂದು ಕಾರಣಕ್ಕಾಗಿ ಮಾಡಿದ್ದರು - ಆ ಸಮಯದಲ್ಲಿ ಭಗವಾನ್ ಪರಮಶಿವನು ಘನಪ್ರಾಣ ಗಣಪತಿಯ ಜನ್ಮ ಆಗುವುದಕ್ಕಾಗಿ ಘೋರ ತಪಸ್ಸಿಗೆ ಕುಳಿತಿದ್ದರು.

ಪರಮಶಿವನ ಈ ತಪಸ್ಸು ಆದಷ್ಟು ಬೇಗ ಪೂರ್ಣಗೊಳ್ಳುವುದು ಅವಶ್ಯಕವಿತ್ತು ಮತ್ತು ಆಸುರೀ ವೃತ್ತಿಯು ಇದಕ್ಕೇ ವಿರೋಧ ಮಾಡುತ್ತಿತ್ತು.

ಆದ್ದರಿಂದ ಈ ವಿಶ್ವದ ಘನಪ್ರಾಣನಿಗೆ ಜನ್ಮ ನೀಡುವ ಪ್ರಕ್ರಿಯೆಗೆ ಕೇವಲ ಹತ್ತು ಸಾವಿರ ವರ್ಷಗಳ ಕಾಲ ಉಳಿದಿದ್ದರಿಂದ ಈ ಭಕ್ತಮಾತೆಯು ಅಂತಹ ಕಠಿಣ ನಿರ್ಧಾರ ಮಾಡಿ ಯುದ್ಧವನ್ನು ಆರಂಭಿಸಿದರು ಮತ್ತು ಆಕೆಯು ತನ್ನ ನಿರ್ಧಾರವನ್ನು ಮಾನವನ ನೂರು

ವರ್ಷಗಳಲ್ಲಿಯೇ ಸಂಪೂರ್ಣ ಮಾಡಿದರು.

ಮತ್ತು ಅದರ ಜೊತೆಗೆ ಪರಮಶಿವನ ತಪಸ್ಸು ಕೇವಲ ಮಾನವನ ಎಂಟು ವರ್ಷಗಳಲ್ಲಿ ಸಫಲ ಮತ್ತು ಸಂಪೂರ್ಣವಾಯಿತು ಮತ್ತು ಇದರಿಂದ ಆದಿಮಾತೆಗೆ ಬೇಕಾದ ಕ್ಷಣಕ್ಕೆ ಶಿವಗಂಗಾಗೌರಿಪುತ್ರ ವಿನಾಯಕ ಬ್ರಹ್ಮಣಸ್ಪತಿಯು ‘ಗಣಪತಿ'ಯಾಗಿ ಜನ್ಮ ತಳೆಯುವುದಕ್ಕಾಗಿ ಸಂಪೂರ್ಣ ಸಿದ್ಧತೆಯಾಯಿತು.


ಪರಮಶಿವನು ತಪಸ್ಸು ಮುಗಿಸಿ ಕಣ್ಣು ತೆರೆಯುತ್ತಲೇ ಅವನಿಗೆ ಪಾರ್ವತಿಯ ಈ ಭೀಕರ ರೂಪವು ಕಾಣಿಸಿತು ಮತ್ತು ‘ಕೇವಲ ತನ್ನ ಸ್ವಂತಕ್ಕಾಗಿಯೇ ತನ್ನ ಪ್ರೀತಿಯ ಸಹಧರ್ಮಿಣಿಯು ತನ್ನ ಸೌಂದರ್ಯವನ್ನು ದೂರ ಎಸೆದು ಈ ಭಯಾನಕ ರೂಪವನ್ನು ಧಾರಣ ಮಾಡಿದ್ದಾರೆ' ಎಂದು ತಿಳಿದು ಪರಮಶಿವನು ಆಕೆಯ ಕಡೆಗೆ ಅತ್ಯಂತ ಪ್ರೀತಿಯಿಂದ ಸ್ನೇಹಭರಿತ ದೃಷ್ಟಿಯಿಂದ ನೋಡಿದರು.

ಮತ್ತು ಅದರ ಜೊತೆಗೆ ಭರ್ಗಲೋಕದಲ್ಲಿ ಹರಿಯುವ ಗಂಗಾ (ಏಳನೆಯ ಗಂಗಾ) ಭಗವಾನ್ ಪರಮಶಿವನ ಎರಡೂ ಕಣ್ಣುಗಳಿಂದ ಪ್ರವಹಿಸಿತು ಮತ್ತು ಪರಮಶಿವನು ತನ್ನ ಪ್ರೀತಿಯ ಪತ್ನಿಗೆ ಆ ಏಳನೆಯ ಗಂಗಾ ನದಿಯ ಜಲದಿಂದ ಅಭಿಷೇಕ ಮಾಡಲು ಶುರು ಮಾಡಿದರು.

ಸ್ವತಃ ಪರಮಶಿವನು ಆ ಏಳನೆಯ ಗಂಗಾ ನದಿಯ ಜಲದಿಂದ ಹನಿ ಹನಿ ಜಲವನ್ನು ತೆಗೆದುಕೊಂಡು ಪಾರ್ವತಿಯ ದೇಹಕ್ಕೆ ಲೇಪನ ಮಾಡುತ್ತಿದ್ದರು.

ಮತ್ತು ಇಂತಹ ವಿಲಕ್ಷಣ ಅಭಿಷೇಕ ಸ್ನಾನ ಮತ್ತು ಲೇಪನವು ಮಾನವನ 108 ವರ್ಷಗಳ ಕಾಲ ನಡೆಯಿತು.

ಮತ್ತು ಆ ಕ್ಷಣಕ್ಕೆ ಪಾರ್ವತಿಯ ಈ ಎಂಟನೆಯ ನವದುರ್ಗೆಯ ಸ್ವರೂಪ ‘ಮಹಾಗೌರಿ' ಶೋಭಿಸಿತು.”

ಶಿವ-ಋಷಿ ತುಂಬರುಗಳ ಕಥೆ ಮುಗಿಯಿತು ಮತ್ತು ಅದೇ ಕ್ಷಣಕ್ಕೆ ಎಂಟನೆಯ ನವದುರ್ಗೆ ‘ಮಹಾಗೌರಿ' ತನ್ನ ಸಂಪೂರ್ಣ ವೈಭವದೊಂದಿಗೆ ಗೋಚರಿಸಿದಳು.

ಈಕೆ ಚತುರ್ಭುಜೆಯಾಗಿದ್ದಳು. ಇವರ ಬಲಗೈ ಮೇಲ್ಭಾಗದ ಕೈ ಅಭಯ ಮುದ್ರೆಯಲ್ಲಿತ್ತು, ಬಲಗೈ ಕೆಳಭಾಗದ ಕೈ ತ್ರಿಶೂಲವನ್ನು ಧಾರಣ ಮಾಡಿಕೊಂಡಿತ್ತು, ಇವರ ಎಡಗೈ ಮೇಲ್ಭಾಗದ ಕೈಯಲ್ಲಿ ಸೌಮ್ಯ ಮತ್ತು ಪ್ರಶಾಂತ ಧ್ವನಿಯನ್ನು ಉಂಟು ಮಾಡುವ ಡಮರು ಇತ್ತು ಮತ್ತು ಇವರ ಎಡಗೈ ಕೆಳಭಾಗದ ಕೈ ವರದ ಮುದ್ರೆಯಲ್ಲಿತ್ತು.

ಈ ಮಹಾಗೌರಿಯು ವಿಲಕ್ಷಣ ಗೌರವ ವರ್ಣದವರಾಗಿದ್ದರು.

ಇವರ ಎಲ್ಲಾ ವಸ್ತ್ರಗಳು ಕೂಡ ಚಂದ್ರವರ್ಣದವಾಗಿದ್ದವು.

ಇವರ ಸರ್ವಾಂಗದ ಮೇಲೆ ಮುತ್ತಿನ ಆಭರಣಗಳು ಇದ್ದವು ಮತ್ತು ಕತ್ತಿನಲ್ಲಿ ಬಿಳಿಯ ಸುಗಂಧಿತ ಪುಷ್ಪಗಳ ಹಾರಗಳಿದ್ದವು.

ಇವರ ದೃಷ್ಟಿ ಸಂಪೂರ್ಣ ವಾತ್ಸಲ್ಯದಿಂದ ತುಂಬಿದ, ಸೌಮ್ಯ, ಪ್ರಶಾಂತ ಮತ್ತು ತೃಪ್ತಿಕರವಾಗಿತ್ತು.

ಇವರು ವೃಷಭಾರೂಢರಾಗಿದ್ದರು.

ಈ ವೃಷಭ ಕೂಡ ಸಂಪೂರ್ಣ ಗೌರವ ವರ್ಣದ ಮತ್ತು ಅತ್ಯಂತ ಶಾಂತ ಸ್ವಭಾವದಾಗಿತ್ತು.

ಇವರ ಹಣೆಯಲ್ಲಿ ಮೂರನೆಯ ಕಣ್ಣು ಇರಲಿಲ್ಲ.

ಮಹಾಗೌರಿಯ ಕಣ್ಣು ರೆಪ್ಪೆಗಳ ಕೂದಲುಗಳ ಚಲನೆಯಿಂದ ಅತ್ಯಂತ ಸುಗಂಧಿತ ಮತ್ತು ಶಾಂತಿದಾಯಕ ಶಕ್ತಿಪ್ರವಾಹ ಎಲ್ಲೆಡೆಗೆ ಹರಡುತ್ತಿತ್ತು.

ಮತ್ತು ಅವುಗಳ ಸ್ಪರ್ಶವಾಗುತ್ತಲೇ ಅಲ್ಲಿನ ಪ್ರತಿಯೊಬ್ಬ ಉಪಸ್ಥಿತರ ‘ಥರ್ವ'ಆಗಿದ್ದ ಮನಸ್ಸು ಸಂಪೂರ್ಣವಾಗಿ ‘ಅಥರ್ವ' ಆಗುತ್ತಿತ್ತು.

ಬಾಪು ಮುಂದೆ ತುಳಸಿಪತ್ರ - 1397 ಈ ಅಗ್ರಲೇಖದಲ್ಲಿ ಬರೆಯುತ್ತಾರೆ,

ಆದಿಮಾತೆ ಶ್ರೀವಿದ್ಯೆಯು ಬ್ರಹ್ಮವಾದಿನಿ ಲೋಪಮುದ್ರೆಗೆ ಮಹಾಗೌರಿಯ ಪೂಜೆ ಮಾಡುವಂತೆ ಆಜ್ಞೆ ಮಾಡಿದರು ಮತ್ತು ಅದರಂತೆ ಲೋಪಮುದ್ರೆಯು ಇತರ ಎಲ್ಲಾ ಬ್ರಹ್ಮವಾದಿನಿಯರ ಜೊತೆಗೆ ಸುಗಂಧಿತ ಬಿಳಿಯ ಪುಷ್ಪಗಳಿಂದ ಮಹಾಗೌರಿಯ ಪೂಜೆ ಮಾಡಿದರು.

ಮಹಾಗೌರಿಯು, ತನಗೆ ಅರ್ಪಿಸಲಾಗಿದ್ದ ಎಲ್ಲಾ ಸುಗಂಧಿತ ಬಿಳಿಯ ಪುಷ್ಪಗಳನ್ನು ತನ್ನ ಸ್ವಂತ ಎರಡೂ ಕೈಗಳಿಂದ ತೆಗೆದುಕೊಂಡು ಎಲ್ಲಾ ಉಪಸ್ಥಿತರ ಮೇಲೆ ಸುರಿಮಳೆ ಮಾಡಿದರು.

ಆಶ್ಚರ್ಯವೇನೆಂದರೆ ಪ್ರತಿಯೊಬ್ಬರಿಗೂ ಕೇವಲ ಒಂದೇ ಬಿಳಿಯ ಪುಷ್ಪ ದೊರೆಯಿತು ಮತ್ತು ಪ್ರತಿಯೊಬ್ಬರ ಕೈಯಲ್ಲಿನ ಆ ಬಿಳಿಯ ಪುಷ್ಪವು ಎಂಟು ದಳಗಳ ಆಗಿತ್ತು.

ನಂತರ ಎಂಟನೆಯ ನವದುರ್ಗೆ ಮಹಾಗೌರಿಯು ವಿವಿಧ ಬಣ್ಣಗಳ ಸುಗಂಧಿತ ಪುಷ್ಪಗಳಿಂದ ಆದಿಮಾತೆ ಶ್ರೀವಿದ್ಯೆಯ ಮತ್ತು ಅನಸೂಯೆಯ ಪೂಜೆ ಮಾಡಿದರು.

ಮತ್ತು ಮಹಾಗೌರಿಯು ತನ್ನ ಕೈಯಲ್ಲಿನ ಪುಷ್ಪಗಳನ್ನು ಆದಿಮಾತೆಯ ಚರಣಗಳ ಬಳಿ ಸುರಿಯುತ್ತಲೇ, ಪ್ರತಿಯೊಬ್ಬ ಉಪಸ್ಥಿತರ ಕೈಯಲ್ಲಿನ ‘ಆ' ಬಿಳಿಯ ಪುಷ್ಪವು ಈಗ ಹೆಚ್ಚು ತೇಜಃಪುಂಜ ಮತ್ತು ಆಹ್ಲಾದದಾಯಕವಾಗಿ ಕಾಣಿಸಿತು.

ಮತ್ತು ಆ ಅಷ್ಟದಳಪುಷ್ಪವು ಪ್ರತಿಯೊಬ್ಬರ ತ್ರಿವಿಧ ದೇಹಗಳಲ್ಲಿ ಶಾಂತಿ, ಪ್ರಸನ್ನತೆ, ಸ್ಥೈರ್ಯ, ಧೈರ್ಯ ಮತ್ತು ಆಹ್ಲಾದ ಈ ಗುಣಗಳನ್ನು ಹರಡುತ್ತಿತ್ತು.

ಪ್ರತಿಯೊಬ್ಬ ಉಪಸ್ಥಿತರಿಗೂ ಅರಿವಾಗುತ್ತಿತ್ತು ‘ಆ' ಅಷ್ಟದಳಪುಷ್ಪವು ಅವರ ಕೈಗಳಿಗೆ ಶಾಶ್ವತವಾಗಿ ಅಂಟಿಕೊಂಡಿದೆ ಮತ್ತು ‘ಆ' ಪುಷ್ಪವು ಅವರ ಸಂಪೂರ್ಣ ಮನಸ್ಸನ್ನೇ ಹೆಚ್ಚು ಹೆಚ್ಚು ಸುಂದರ ಮತ್ತು ಸಬಲ ಮಾಡುತ್ತಿದೆ.

ಬ್ರಹ್ಮವಾದಿನಿ ಲೋಪಮುದ್ರೆ ಮಹಾಗೌರಿಯ ಆಜ್ಞೆಯಂತೆ ಉಪಸ್ಥಿತರ ಕಡೆಗೆ ತಿರುಗಿ ಮಾತನಾಡಲು ಶುರು ಮಾಡಿದರು, “ಹೇ ಉಪಸ್ಥಿತ ಆಪ್ತಗಣರೇ! ಈ ಎಂಟನೆಯ ನವದುರ್ಗೆ ಮಹಾಗೌರಿಯು ಶಾoಭವಿ ವಿದ್ಯೆಯ ಹದಿನೈದನೆಯ ಮತ್ತು ಹದಿನಾರನೆಯ ಪಡಿಗೆ (ಕಕ್ಷ್ಯಗೆ) ಅಧಿದೇವತೆಯಾಗಿದ್ದಾಳೆ.

ಮತ್ತು ನವರಾತ್ರಿಯ ಅಷ್ಟಮಿ ತಿಥಿಯ ದಿನ ಮತ್ತು ರಾತ್ರಿಯ ನಾಯಕಿ ಆಗಿದ್ದಾಳೆ.
ಸ್ವತಃ ಪರಮಶಿವನು ಆ ಏಳನೆಯ ಗಂಗಾ ನದಿಯ ಜಲದಿಂದ ಹನಿ ಹನಿ ಜಲವನ್ನು ತೆಗೆದುಕೊಂಡು ಪಾರ್ವತಿಯ ದೇಹಕ್ಕೆ ಲೇಪನ ಮಾಡುತ್ತಿದ್ದರು.

ಮತ್ತು ಇಂತಹ ವಿಲಕ್ಷಣ ಅಭಿಷೇಕ ಸ್ನಾನ ಮತ್ತು ಲೇಪನವು ಮಾನವನ 108 ವರ್ಷಗಳ ಕಾಲ ನಡೆಯಿತು.

ಮತ್ತು ಆ ಕ್ಷಣಕ್ಕೆ ಪಾರ್ವತಿಯ ಈ ಎಂಟನೆಯ ನವದುರ್ಗೆಯ ಸ್ವರೂಪ ‘ಮಹಾಗೌರಿ' ಶೋಭಿಸಿತು.”

ಶಿವ-ಋಷಿ ತುಂಬರುಗಳ ಕಥೆ ಮುಗಿಯಿತು ಮತ್ತು ಅದೇ ಕ್ಷಣಕ್ಕೆ ಎಂಟನೆಯ ನವದುರ್ಗೆ ‘ಮಹಾಗೌರಿ' ತನ್ನ ಸಂಪೂರ್ಣ ವೈಭವದೊಂದಿಗೆ ಗೋಚರಿಸಿದಳು.

ಈಕೆ ಚತುರ್ಭುಜೆಯಾಗಿದ್ದಳು. ಇವರ ಬಲಗೈ ಮೇಲ್ಭಾಗದ ಕೈ ಅಭಯ ಮುದ್ರೆಯಲ್ಲಿತ್ತು, ಬಲಗೈ ಕೆಳಭಾಗದ ಕೈ ತ್ರಿಶೂಲವನ್ನು ಧಾರಣ ಮಾಡಿಕೊಂಡಿತ್ತು, ಇವರ ಎಡಗೈ ಮೇಲ್ಭಾಗದ ಕೈಯಲ್ಲಿ ಸೌಮ್ಯ ಮತ್ತು ಪ್ರಶಾಂತ ಧ್ವನಿಯನ್ನು ಉಂಟು ಮಾಡುವ ಡಮರು ಇತ್ತು ಮತ್ತು ಇವರ ಎಡಗೈ ಕೆಳಭಾಗದ ಕೈ ವರದ ಮುದ್ರೆಯಲ್ಲಿತ್ತು.

ಈ ಮಹಾಗೌರಿಯು ವಿಲಕ್ಷಣ ಗೌರವ ವರ್ಣದವರಾಗಿದ್ದರು.

ಇವರ ಎಲ್ಲಾ ವಸ್ತ್ರಗಳು ಕೂಡ ಚಂದ್ರವರ್ಣದವಾಗಿದ್ದವು.

ಇವರ ಸರ್ವಾಂಗದ ಮೇಲೆ ಮುತ್ತಿನ ಆಭರಣಗಳು ಇದ್ದವು ಮತ್ತು ಕತ್ತಿನಲ್ಲಿ ಬಿಳಿಯ ಸುಗಂಧಿತ ಪುಷ್ಪಗಳ ಹಾರಗಳಿದ್ದವು.

ಇವರ ದೃಷ್ಟಿ ಸಂಪೂರ್ಣ ವಾತ್ಸಲ್ಯದಿಂದ ತುಂಬಿದ, ಸೌಮ್ಯ, ಪ್ರಶಾಂತ ಮತ್ತು ತೃಪ್ತಿಕರವಾಗಿತ್ತು.

ಇವರು ವೃಷಭಾರೂಢರಾಗಿದ್ದರು.

ಈ ವೃಷಭ ಕೂಡ ಸಂಪೂರ್ಣ ಗೌರವ ವರ್ಣದ ಮತ್ತು ಅತ್ಯಂತ ಶಾಂತ ಸ್ವಭಾವದಾಗಿತ್ತು.

ಇವರ ಹಣೆಯಲ್ಲಿ ಮೂರನೆಯ ಕಣ್ಣು ಇರಲಿಲ್ಲ.

ಮಹಾಗೌರಿಯ ಕಣ್ಣು ರೆಪ್ಪೆಗಳ ಕೂದಲುಗಳ ಚಲನೆಯಿಂದ ಅತ್ಯಂತ ಸುಗಂಧಿತ ಮತ್ತು ಶಾಂತಿದಾಯಕ ಶಕ್ತಿಪ್ರವಾಹ ಎಲ್ಲೆಡೆಗೆ ಹರಡುತ್ತಿತ್ತು.

ಮತ್ತು ಅವುಗಳ ಸ್ಪರ್ಶವಾಗುತ್ತಲೇ ಅಲ್ಲಿನ ಪ್ರತಿಯೊಬ್ಬ ಉಪಸ್ಥಿತರ ‘ಥರ್ವ'ಆಗಿದ್ದ ಮನಸ್ಸು ಸಂಪೂರ್ಣವಾಗಿ ‘ಅಥರ್ವ' ಆಗುತ್ತಿತ್ತು.

ಬಾಪು ಮುಂದೆ ತುಳಸಿಪತ್ರ - 1397 ಈ ಅಗ್ರಲೇಖದಲ್ಲಿ ಬರೆಯುತ್ತಾರೆ,

ಪರಮಶಿವನು ಭರ್ಗಲೋಕದಲ್ಲಿನ ಏಳನೆಯ ಗಂಗೆಯ ಜಲದ ಲೇಪ ಮತ್ತು ಅಭಿಷೇಕ ಮಾಡಿ ಈ ‘ಮಹಾಗೌರಿ' ರೂಪವನ್ನು ನಿರ್ಮಾಣ ಮಾಡಿದರು, ಈ ವಿಷಯವನ್ನು ನಾವು ಕೇಳಿದ್ದೇವೆ.

ಆದರೆ ಏಳನೆಯ ಗಂಗೆ ಇದೆಯಾದರೆ, ಉಳಿದ ಆರು ಗಂಗೆಗಳೇನು? ಈ ಪ್ರಶ್ನೆ ಮೂಡುವುದು ಸಹಜ.

ಆದರೆ ಸದ್ಯಕ್ಕೆ ಕೇವಲ ಇಷ್ಟು ಮಾತ್ರ ನೆನಪಿನಲ್ಲಿಡಬೇಕು ಭೂಲೋಕದಲ್ಲಿ ಅವತರಿಸಿದ ಆ ಮೊದಲ ಗಂಗೆ ಮತ್ತು ನಂತರ ಪ್ರತಿ ಲೋಕದಲ್ಲಿನ ಒಂದೊಂದು ಗಂಗೆ.


ಉಳಿದ ಈ ಗಂಗಾಜ್ಞಾನವು ಶಾoಭವಿ ವಿದ್ಯೆಯ ಹದಿನೈದನೆಯ ಮತ್ತು ಹದಿನಾರನೆಯ ಕಕ್ಷೆಗಳನ್ನು ದಾಟಿದ ನಂತರವೇ ತಿಳಿಯುತ್ತದೆ.

ಈ ಏಳನೆಯ ಅಂದರೆ ಭರ್ಗಲೋಕೀಯ ಗಂಗೆಯು ಕ್ಷೀರಸಾಗರದ ಜಲದಿಂದಲೇ ನಿರ್ಮಾಣವಾಗಿದೆ ಮತ್ತು ಇದುವೇ ‘ಅಮೃತವಾಹಿನಿ', ‘ಅಮೃತವರ್ಷಿಣಿ' ಮತ್ತು ‘ಚಂದ್ರಮಧುಪ್ರಸವಿಣಿ' ಈ ಹೆಸರುಗಳಿಂದ ಗುರುತಿಸಲ್ಪಟ್ಟಿದೆ.

ಮಹಾಗೌರಿ ಮತ್ತು ಭರ್ಗಲೋಕೀಯ ಏಳನೆಯ ಗಂಗೆ ಈ ಇಬ್ಬರು ಒಬ್ಬರನ್ನೊಬ್ಬರು ಅವಳಿ ಸಹೋದರಿಯರು ಎಂದು ಭಾವಿಸಲಾಗಿದೆ - ಏಕೆಂದರೆ ಆ ಇಬ್ಬರ ಕಾರ್ಯವೇ ಅವಳಿ ಆಗಿದೆ.

ಶಾoಭವಿ ವಿದ್ಯೆಯ ಹದಿನೈದನೆಯ ಮತ್ತು ಹದಿನಾರನೆಯ ಪಡಿಗಳ ಮೇಲೆ ಉಪಾಸಕರು, ತಮ್ಮ ಗುರುಗಳ ಮುಂದೆ ಕುಳಿತು, ಗುರುಗಳ ಮಾರ್ಗದರ್ಶನದಲ್ಲಿ ‘ಶ್ರೀಶಾoಭವಿಮುದ್ರ'ವನ್ನು ಕಲಿಯಬೇಕಾಗುತ್ತದೆ, ಅದರ ಪ್ರತಿದಿನ ಮೂರು ಹೊತ್ತೂ ಅಭ್ಯಾಸ ಮಾಡಬೇಕಾಗುತ್ತದೆ, ಅದರ

ಅಭ್ಯಾಸ ಮಾಡಬೇಕಾಗುತ್ತದೆ ಮತ್ತು ಅದರ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಬೇಕಾಗುತ್ತದೆ.

ಮತ್ತು ಇದೆಲ್ಲವನ್ನು ಉಂಟು ಮಾಡುವುದು, ಆ ಎಂಟನೆಯ ನವದುರ್ಗೆ ಮಹಾಗೌರಿ.

ನೋಡಿ! ನಾವು ಮೊದಲಿನಿಂದಲೂ ನೋಡುತ್ತಿದ್ದೇವೆ ಮಹಾಗೌರಿಗೆ ಹಣೆಯ ಪ್ರದೇಶದ ಮೇಲೆ ಮೂರನೆಯ ಕಣ್ಣಿಲ್ಲ. ಅಲ್ಲಿ ಕುಂಕುಮತಿಲಕವಿದೆ.

ಆದರೆ ಇದು ಸತ್ಯವಲ್ಲ.

ಮಹಾಗೌರಿಗೂ ಕೂಡ ಮೂರನೆಯ ಕಣ್ಣು ಇದ್ದೇ ಇದೆ.

ಆದರೆ ನಾವು ಯಾರೂ ಕೂಡ ಅದನ್ನು ನೋಡಲು ಸಾಧ್ಯವಿಲ್ಲ.

ಮಹರ್ಷಿಗಳು ಮತ್ತು ಬ್ರಹ್ಮವಾದಿನಿಯರೂ ಕೂಡ ಇಲ್ಲ.

ಇದಕ್ಕೆ ಕಾರಣವೇನು?

ಇದೇ ಶ್ರೀಶಾoಭವಿಮುದ್ರೆಯ ರಹಸ್ಯವಾಗಿದೆ. ಈ ಮುದ್ರೆಯನ್ನು ಮಾಡುವಾಗ ಉಪಾಸಕನು ತನ್ನ ಗುರುಗಳ ಆಜ್ಞೆಯಂತೆ ಸುಖಾಸನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಎರಡೂ ಕಣ್ಣುಗಳನ್ನು ಸಂಪೂರ್ಣವಾಗಿ ಮುಚ್ಚಿ, ನಂತರ ಆ ಮುಚ್ಚಿದ ರೆಪ್ಪೆಗಳ ಹಿಂದಿರುವ ಕಣ್ಣುಗಳನ್ನು ತಮ್ಮ ಸ್ವಂತ ಆಜ್ಞಾಚಕ್ರದ ಸ್ಥಾನದ ಮೇಲೆ ಅಂದರೆ ಮೂರನೆಯ ಕಣ್ಣು ಸ್ಥಾನದ ಮೇಲೆ ನಿಧಾನವಾಗಿ ಕೇಂದ್ರೀಕರಿಸಬೇಕಾಗುತ್ತದೆ.

ಈ ಕ್ರಿಯೆಯನ್ನು ಎಷ್ಟು ಸಮಯ ಮಾಡಬೇಕು, ಹೇಗೆ ಮಾಡಬೇಕು, ಆ ಸಮಯದಲ್ಲಿ ಮಂತ್ರ ಹೇಳಬೇಕೇ, ಯಾವ ಮಂತ್ರಗಳನ್ನು ಹೇಳಬೇಕು, ಯಾವಾಗ ಮನಸ್ಸನ್ನು ಶಾಂತವಾಗಿಡಬೇಕು ಮತ್ತು ಯಾವಾಗ ಮನಸ್ಸನ್ನು ಆ ಆಜ್ಞಾಚಕ್ರಕ್ಕೆ ಕಟ್ಟಿ ಇಡಬೇಕು ಮತ್ತು ಹೇಗೆ, ಇದೆಲ್ಲವನ್ನು ಸದ್ಗುರುವು ಪ್ರತಿಯೊಬ್ಬ ಉಪಾಸಕನಿಗೆ ಬ್ರಾಹ್ಮಮುಹೂರ್ತದ ಸಮಯದಲ್ಲಿ ಪವಿತ್ರ ನದಿಯ ದಡದಲ್ಲಿ ಕಲಿಸುತ್ತಾರೆ.”

ಬ್ರಹ್ಮವಾದಿನಿ ಲೋಪಮುದ್ರೆಯು ಮಾಡಿದ್ದ ಈ ಶ್ರೀಶಾoಭವಿ ಮುದ್ರೆಯ ವರ್ಣನೆಯನ್ನು ಕೇಳಿ ಮಹರ್ಷಿಗಳಿಂದ ಶಿವಗಣರವರೆಗೂ ಎಲ್ಲರೂ ಅತ್ಯಂತ ಆನಂದಿತರಾದರು ಮತ್ತು ಪ್ರತಿಯೊಬ್ಬರ ಮನಸ್ಸಿನಲ್ಲಿ ‘ನನಗೂ ಇದು ಸಿಗಬೇಕು' ಎಂಬ ಇಚ್ಛೆ ಹುಟ್ಟಿಕೊಂಡಿತು.

ಮತ್ತು ಅಂತಹ ಇಚ್ಛೆ ಅವರ ಮನಸ್ಸಿನಲ್ಲಿ ಮೂಡುತ್ತಲೇ ಬ್ರಹ್ಮವಾದಿನಿ ಲೋಪಮುದ್ರೆಯು ಹೇಳಿದರು, “ಸುಮ್ಮನೆ ಬೇಡವಾದ ಸಾಹಸಗಳನ್ನು ಮಾಡಬೇಡಿ. ನನ್ನ ಅಥವಾ ಯಾರದೇ ವರ್ಣನೆಯನ್ನು ಕೇಳಿ ತಕ್ಷಣವೇ ಪ್ರಯತ್ನ ಮಾಡಬೇಡಿ.

ಏಕೆಂದರೆ ಈ ಶ್ರೀಶಾoಭವಿಮುದ್ರೆಯು ಶ್ರೀಶಾoಭವಿ ವಿದ್ಯೆಯ ಹದಿನೈದನೆಯ ಮತ್ತು

ಹದಿನಾರನೆಯ ಪಡಿಯ ಮೇಲೆ ಮಾತ್ರ ಲಭಿಸುತ್ತದೆ ಮತ್ತು ಮಾಡಲೂ ಕೂಡ ಬರುತ್ತದೆ.

ಈ ಶ್ರೀಶಾoಭವಿಮುದ್ರೆಯು ಶಿವ-ಶಕ್ತಿಯ ಏಕತ್ವ, ಏಕರೂಪತ್ವ ಮತ್ತು ನಿರಂತರ ಸಹಚರ್ಯ ಹಾಗೂ ‘ಭೇದವಿದ್ದರೂ ಕೂಡ ಅಭೇದ' ಎಂಬಂತಹ ವಿಲಕ್ಷಣ ಸ್ವರೂಪ ಮತ್ತು ಅದರ ಹಿಂದಿನ ರಹಸ್ಯವನ್ನು ಪ್ರಕಟಪಡಿಸುವಂತದ್ದಾಗಿದೆ.

‘ಆದಿಮಾತೆ ಮತ್ತು ಆಕೆಯ ‘ಆದಿಪಿತ' ರೂಪವನ್ನು ತಿಳಿಯುವುದು ಮತ್ತು ಅವರದ್ದೇ ಆಗಿರುವುದು' ಇದುವೇ ಏಕೈಕ ಉದ್ದೇಶ ಮತ್ತು ಇದುವೇ ಏಕೈಕ ಗುರಿ ಈ ಕಕ್ಷೆಗಳ ಮೇಲೆ ಇರಬೇಕಾಗುತ್ತದೆ.

ಮತ್ತು ಉಪಸ್ಥಿತ ಆಪ್ತಗಣರೇ! ಇಷ್ಟು ದೊಡ್ಡ ಜ್ಞಾನವನ್ನು ನೀಡುವ ಈ ಮಹಾಗೌರಿಯು ಸಾಮಾನ್ಯ ಶ್ರದ್ಧಾಬಾನರಿಗೆ, ಅವರವರ ಮಟ್ಟದಲ್ಲಿ ಹೆಚ್ಚು ಮನಃಶಾಂತಿ, ಸಬಲತೆ, ಚಿತ್ತಸ್ಥೈರ್ಯತೆ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ನೀಡುತ್ತಲೇ ಇರುತ್ತಾರೆ.”