ಸಂದರ್ಭ - ಸದ್ಗುರು ಶ್ರೀಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದಲ್ಲಿಯ 'ತುಳಸಿಪತ್ರ' ಎಂಬ ಸಂಪಾದಕೀಯ ಸರಣಿಯ ಸಂಪಾದಕೀಯ ಸಂಖ್ಯೆ 1394 ಮತ್ತು 1395.
ಸದ್ಗುರು ಶ್ರೀಅನಿರುದ್ಧ ಬಾಪು ಅವರು ತುಳಸಿಪತ್ರ - 1394 ರಲ್ಲಿ ಬರೆಯುತ್ತಾರೆ,
ಬ್ರಹ್ಮವಾದಿನಿ ಲೋಪಮುದ್ರೆಯು ಏಳನೆಯ ನವದುರ್ಗೆ ಕಾಲರಾತ್ರಿಯ ಚರಣಗಳ ಮೇಲೆ ಮಸ್ತಕ ಇಟ್ಟು ಮತ್ತು ಆಕೆಗೆ ವಿನಮ್ರವಾಗಿ ಅಭಿವಾದನ ಮಾಡಿ ಮಾತನಾಡಲು ಶುರು ಮಾಡಿದಳು, “ಆತ್ಮೀಯರೇ! ಈ ಏಳನೆಯ ನವದುರ್ಗೆ ಕಾಲರಾತ್ರಿಯು ಶಾಂಭವಿ ವಿದ್ಯೆಯ ಹದಿಮೂರನೆಯ ಮತ್ತು ಹದಿನಾಲ್ಕನೆಯ ಮೆಟ್ಟಿಲುಗಳ (ಕಕ್ಷೆಗಳ) ಅಧಿದೇವತೆ ಮತ್ತು ಅಶ್ವಿನ್ ಶುದ್ಧ ಸಪ್ತಮಿಯ ದಿನ ಮತ್ತು ರಾತ್ರಿಯ ನಾಯಕಿ.
ಈ ಭಗವತಿ ಕಾಲರಾತ್ರಿಯು ಭಕ್ತರ ಶತ್ರುಗಳನ್ನು ಸಂಪೂರ್ಣವಾಗಿ ನಾಶ ಮಾಡುವವಳು. ಆಕೆಯನ್ನು ಪೂಜಿಸುವುದರಿಂದ ಭೂತ, ಪ್ರೇತ, ರಾಕ್ಷಸ, ದೈತ್ಯ, ದಾನವ, ತಮಾಚಾರಿ ಮಾಂತ್ರಿಕ ಮತ್ತು ಪಾಪಿ ಶತ್ರುಗಳು ಹೀಗೆ ಎಲ್ಲರೂ ಒಂದು ವರ್ಷದವರೆಗೆ ಆ ಪೂಜಕ ಭಕ್ತನ ಹತ್ತಿರಕ್ಕೂ ಸುಳಿಯಲು ಸಾಧ್ಯವಿಲ್ಲ.”
ಎಲ್ಲಾ ಶಿವಗಣಗಳು ಗೊಂದಲಗೊಂಡು ಒಬ್ಬರಿಗೊಬ್ಬರು ನೋಡಿಕೊಳ್ಳಲು ಶುರು ಮಾಡಿದರು, “ನಾವು ಪಿಶಾಚಮಯರೇ ಆಗಿದ್ದೇವೆ. ಆದರೆ ನಮಗೆ ಆಕೆಯ ಭಯ ಆಗುವುದರ ಬದಲು ಆಕೆಯ ಬಗ್ಗೆ ಅತೀವ ಪ್ರೀತಿ ಇದೆ ಎಂದು ಅನಿಸುತ್ತದೆ.”
ಲೋಪಮುದ್ರೆ ಮುಗುಳು ನಗುತ್ತಾ ಹೇಳಿದರು, “ಆಕೆ ಇದ್ದದ್ದೇ ಹಾಗೆ ಮತ್ತು ನೀವು ಕೂಡ ‘ಶಿವಗಣ' ಇದ್ದೀರಿ, ಕೇವಲ ಪಿಶಾಚಿಗಳಲ್ಲ ಮತ್ತು ಈಗಲಂತೂ ನಿಮ್ಮ ರೂಪ ಕೂಡ ಬದಲಾಗಿದೆ.”
ಎಲ್ಲಾ ಋಷಿಸಮುದಾಯವು ಎದ್ದು ನಿಂತು ಲೋಪಮುದ್ರೆಯ ಬಳಿ ವಿನಂತಿ ಮಾಡಲು ಶುರು ಮಾಡಿತು, “ನಮಗೆ ಅರಣ್ಯ-ವನಗಳಿಂದ, ದಟ್ಟವಾದ ಕಾಡುಗಳಿಂದ, ಅನೇಕ ಸ್ಮಶಾನ ಘಟ್ಟಗಳಿಂದ, ಭಾರಿ ನರಸಂಹಾರ ನಡೆದ ಪ್ರಾಚೀನ ಯುದ್ಧಭೂಮಿಗಳಿಂದ ಏಕಾಂಗಿಯಾಗಿ ಪ್ರಯಾಣ ಮಾಡಬೇಕಾಗುತ್ತದೆ ಮತ್ತು ಆಕೆಯ ಗುಣಗಾನವನ್ನು ಕೇಳಿ ನಮಗೆ ಈ ನವದುರ್ಗೆ ಕಾಲರಾತ್ರಿಯ ಚರಣಗಳ ಮೇಲೆ ಮಸ್ತಕ ಇಡಬೇಕೆಂದು ಇಚ್ಛೆಯಾಗುತ್ತಿದೆ. ನಮಗೆ ಅದಕ್ಕೆ ಅನುಮತಿ ದೊರೆಯಬಹುದೇ?”
ಬ್ರಹ್ಮವಾದಿನಿ ಲೋಪಮುದ್ರೆಯು ಪ್ರಶ್ನಾರ್ಥಕ ದೃಷ್ಟಿಯಿಂದ ಭಗವಾನ ತ್ರಿವಿಕ್ರಮನ ಕಡೆಗೆ ನೋಡಿದಳು ಮತ್ತು ಅದರ ಜೊತೆಗೆ ತನ್ನ ಮಾತೆಯ ಅನುಮತಿ ಪಡೆದು ಭಗವಾನ ತ್ರಿವಿಕ್ರಮನು ಮತ್ತೊಮ್ಮೆ ತನ್ನ ಏಕಮುಖ ರೂಪದಲ್ಲಿ ಅವರೆಲ್ಲರ ನಡುವೆ ಬಂದನು ಮತ್ತು ಆತ ಬ್ರಹ್ಮವಾದಿನಿ ಅರುಂಧತಿಯ ಬಳಿ ಲೋಪಮುದ್ರೆಯ ಕೈಗಳನ್ನು ಕೈಯಲ್ಲಿ ಹಿಡಿದು ಎಲ್ಲರಿಗೆ ತೋರಿಸಲು ಹೇಳಿದನು ಮತ್ತು ಲೋಪಮುದ್ರೆಯ ಮಸ್ತಕದ ಮೇಲಿನ ವಸ್ತ್ರವನ್ನು ದೂರ ಮಾಡಿ ಆಕೆಯ ಹಣೆಯ ಭಾಗವನ್ನು ತೋರಿಸಲು ಹೇಳಿದನು.
ಅರುಂಧತಿ ಹಾಗೆ ಮಾಡುತ್ತಲೇ ಎಲ್ಲಾ ಮಹರ್ಷಿ, ಋಷಿವರ್ಯರು ಮತ್ತು ಋಷಿಕುಮಾರರು ಅತೀವ ಆಶ್ಚರ್ಯಚಕಿತರಾದರು ಮತ್ತು ಸ್ವಲ್ಪ ಭಯಭೀತರಾದರು.
ಏಕೆಂದರೆ ಬ್ರಹ್ಮವಾದಿನಿ ಲೋಪಮುದ್ರೆಯ ಮಸ್ತಕಕ್ಕೆ ಮತ್ತು ಕೈಗಳಿಗೆ ಎಲ್ಲಿ ಭಗವತಿ ಕಾಲರಾತ್ರಿಯ ಚರಣಗಳ ಸ್ಪರ್ಶವಾಗಿತ್ತೋ, ಅಲ್ಲಿಂದ ಅನೇಕ ವಿದ್ಯುತ್-ಶಲಾಕೆಗಳು ಲೋಪಮುದ್ರೆಯ ಸಹಸ್ರಾರ ಚಕ್ರದೊಳಗೆ ನುಗ್ಗಿ ಆಟವಾಡುತ್ತಿದ್ದವು ಮತ್ತು ಆಕೆಯ ಕೈಗಳಿಂದ ಅಗ್ನಿಜ್ವಾಲೆಗಳ ಉಂಡೆಗಳು ಆಕೆಯ ದೇಹದ ಎಲ್ಲ 72,000 ನಾಡಿಗಳೊಳಗೆ ಸೇರಿಕೊಂಡು ಆನಂದ ನೃತ್ಯ ಮಾಡುತ್ತಿದ್ದವು.
ಇದನ್ನು ನೋಡುತ್ತಲೇ ಮಹರ್ಷಿಗಳು ಕೂಡ ಭಯಭೀತರಾದರು ಮತ್ತು ಅದನ್ನು ನೋಡಿ ಭಗವಾನ ತ್ರಿವಿಕ್ರಮರು ಹೇಳಿದರು, “ಈ ಕಾಲರಾತ್ರಿ ಹಾಗೆಯೇ ಇದ್ದಾಳೆ. ಈ ಜ್ವಾಲೆಗಳು ಮತ್ತು ವಿದ್ಯುತ್-ಶಲಾಕೆಗಳು ಬ್ರಹ್ಮವಾದಿನಿ ಲೋಪಮುದ್ರೆಗೆ ಯಾವುದೇ ರೀತಿಯಲ್ಲಿ ವೇದನೆ ಅಥವಾ ನೋವನ್ನು ನೀಡುತ್ತಿಲ್ಲ, ಆದರೆ ಇದಕ್ಕೆ ವಿರುದ್ಧವಾಗಿ ಈ ಮಿಂಚು ಮತ್ತು ಜ್ವಾಲೆಗಳಿಂದ ಬ್ರಹ್ಮವಾದಿನಿ ಲೋಪಮುದ್ರೆಯ ಸಹಸ್ರಾರದಲ್ಲಿನ ಎಲ್ಲಾ ಸಿದ್ಧಿಗಳು ಜಾಗೃತವಾಗುತ್ತಿವೆ ಮತ್ತು ಆಕೆಯ ದೇಹದಲ್ಲಿರುವ ಎಲ್ಲಾ ಅಂದರೆ 108 ಶಕ್ತಿಕೇಂದ್ರಗಳು ಪವಿತ್ರ ಯಜ್ಞಕುಂಡವೇ ಆಗಿವೆ.
ಮತ್ತು ಇಂತಹ ತೇಜಸ್ಸನ್ನು ಧಾರಣ ಮಾಡುವುದು ಸಾಮಾನ್ಯ ಮಾನವನಿಗಂತೂ ಸಾಧ್ಯವಿಲ್ಲ; ಆದರೆ ಮಹರ್ಷಿಗಳಿಗೂ ಕೂಡ ಸಾಧ್ಯವಿಲ್ಲ.
ಎಂಟನೆಯ ನವದುರ್ಗೆ ಮಹಾಗೌರಿಯ ರೂಪ ಎಷ್ಟು ಶಾಂತ ಮತ್ತು ಪ್ರಸನ್ನವಾಗಿದ್ದರೂ, ಆಕೆಯ ಚರಣಗಳ ಪ್ರತ್ಯಕ್ಷ ಸ್ಪರ್ಶದಿಂದ ಮಾನವ ದೇಹದಲ್ಲಿನ ಎಲ್ಲಾ 108 ಶಕ್ತಿಕೇಂದ್ರಗಳು ಅತ್ಯಂತ ತಂಪು ಮತ್ತು ಶಾಂತವಾಗುತ್ತವೆ ಮತ್ತು 72,೦೦೦ ನಾಡಿಗಳಿಂದ ಚಂದ್ರನ ತೇಜಸ್ಸು ಜಲಪ್ರವಾಹದಂತೆ ಹರಿಯಲು ಶುರು ಆಗುತ್ತದೆ ಮತ್ತು ಆ ಅತಿ ತಂಪೂ ಕೂಡ ಸಾಮಾನ್ಯ ಶ್ರದ್ಧಾವಾನರಿಗೆ ಮತ್ತು ಮಹರ್ಷಿಗಳಿಗೂ ಕೂಡ ಸಹಿಸುವುದು ಸಾಧ್ಯವಿಲ್ಲ.
ಒಂಬತ್ತನೆಯ ನವದುರ್ಗೆ ಸಿದ್ಧಿದಾತ್ರಿಯು ಅತ್ಯಂತ ಪ್ರಸನ್ನವದನಳಿದ್ದಾಳೆ. ಆದರೆ ಆಕೆಯದು ಮಣಿದ್ವೀಪಮಾತೆಯೊಡನೆ ಏಕರೂಪತ್ವವಾಗಿದೆ.
ಈ ಎಲ್ಲಾ ಕಾರಣಗಳಿಂದ ಈ ಮೂವರ ಪ್ರತಿಮೆಗಳನ್ನು ಪೂಜಿಸುವುದು ಅತ್ಯಂತ ಸುಲಭವಾಗಿದ್ದರೂ, ಅವರ ಪ್ರತ್ಯಕ್ಷ ರೂಪಗಳ ಧ್ಯಾನ ಮಾಡುವುದು ಮಹರ್ಷಿಗಳಿಗೂ ಕೂಡ ಸಾಧ್ಯ ಆಗುವುದಿಲ್ಲ.
ಆದರೆ ಈ ಮೂವರ ಪ್ರತ್ಯಕ್ಷ ಪೂಜೆಯ ಮತ್ತು ಪ್ರತ್ಯಕ್ಷ ಧ್ಯಾನದ ಎಲ್ಲಾ ಲಾಭಗಳನ್ನು ಅಶ್ವಿನ್ ಶುದ್ಧ ನವರಾತ್ರಿಯ ಪಂಚಮಿಯಂದು ಮಾತೆ ಲಲಿತಾಂಬಿಕೆಯ ಪೂಜೆ ಮಾಡಿದರೆ ಸುಲಭವಾಗಿ ಪಡೆಯಬಹುದು.
ಏಕೆಂದರೆ ಪಂಚಮಿಯ ನಾಯಕಿ ಸ್ಕಂದಮಾತೆ ಆಗಿದ್ದಾಳೆ ಮತ್ತು ಲಲಿತಾಂಬಿಕೆಯು ಎಲ್ಲಾ ಶ್ರದ್ಧಾವಾನರ ಪ್ರತ್ಯಕ್ಷ ಪಿತಾಮಹಿಯೇ ಆಗಿದ್ದಾಳೆ.
ಈ ಆದಿಮಾತೆ ‘ಲಲಿತಾಂಬಿಕಾ' ಸ್ವರೂಪದಲ್ಲಿ ಯಾವಾಗಲೂ ‘ಲಲಿತಾಪಂಚಮಿ'ಯ ಈ ದಿನವೇ ಪ್ರಕಟಗೊಳ್ಳುತ್ತಿರುತ್ತಾಳೆ ಮತ್ತು ಆಗ ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿಯು ಆಕೆಯ ಪ್ರಮುಖ ಸೇನಾಪತಿಗಳಾಗಿರುತ್ತಾರೆ.
ಲಲಿತಾಪಂಚಮಿಯ ಪೂಜೆಯ ವರ್ಣನೆ ಮಾಡಲು ನನಗೂ ಸಹ ಅನೇಕ ದಿನಗಳು ಬೇಕಾಗುತ್ತವೆ.”
ಇಷ್ಟು ಹೇಳಿ ಭಗವಾನ ತ್ರಿವಿಕ್ರಮನು ಕಾಲರಾತ್ರಿಗೆ ಮತ್ತು ಆದಿಮಾತೆಗೆ ಪ್ರಣಾಮ ಮಾಡಿದನು
ಮತ್ತು ಅದರ ಜೊತೆಗೆ ಎಲ್ಲಾ ಒಂಬತ್ತು ನವದುರ್ಗೆಯರು, ದಶಮಹಾವಿದ್ಯೆ, ಸಪ್ತಮಾತೃಕೆಯರು, 64 ಕೋಟಿ ಚಾಮುಂಡರು ಅಲ್ಲಿ ಉಪಸ್ಥಿತರಾದರು
ಮತ್ತು ನಂತರ ಆ ಎಲ್ಲರೂ ಕ್ರಮಬದ್ಧವಾಗಿ ಆದಿಮಾತೆ ಮಹಿಷಾಸುರಮರ್ದಿನಿಯ ರೋಮ-ರೋಮದಲ್ಲಿ ಪ್ರವೇಶಿಸಿದರು.
ಮತ್ತು ಅದರ ಜೊತೆಗೆ ಮಣಿ ದ್ವೀಪನಿವಾಸಿನಿ ಆದಿಮಾತೆಯ ಮೂರನೆಯ ಕಣ್ಣಿನಿಂದ ಏಕಕಾಲದಲ್ಲಿ ತೀಕ್ಷ್ಣ ಮತ್ತು ಸೌಮ್ಯ ಆಗಿರುವಂತಹ ಅಸಾಧಾರಣ ತೇಜಸ್ಸು ಎಲ್ಲೆಡೆಗೆ ಹರಡಲು ಶುರು ಆಯಿತು
ಮತ್ತು ಅದರ ಜೊತೆಗೆ ಆದಿಮಾತೆಯ ಮೂಲ ರೂಪದ ಜಾಗದಲ್ಲಿ ಆಕೆಯ ‘ಲಲಿತಾಂಬಿಕಾ' ಸ್ವರೂಪವು ಕಾಣಿಸಲಾರಂಭಿಸಿತು.
ಲಲಿತಾಂಬಿಕಾ ಪ್ರಕಟಗೊಳ್ಳುತ್ತಲೇ ಎಲ್ಲರಿಗೆ ಅಭಯ ವಚನ ನೀಡಿದಳು, “ಯಾರಿಗೆ ನವರಾತ್ರಿಯಲ್ಲಿನ ಇತರ ದಿನಗಳಲ್ಲಿ ನವರಾತ್ರಿ ಪೂಜೆ ಮಾಡಲು ಆಗುತ್ತದೆಯೋ ಮತ್ತು ಯಾರಿಗೆ ನವರಾತ್ರಿಯಲ್ಲಿನ ಇತರ ದಿನಗಳಲ್ಲಿ ನವರಾತ್ರಿ ಪೂಜೆ ಮಾಡಲು ಆಗುವುದಿಲ್ಲವೋ, ಅಂತಹ ಎಲ್ಲರಿಗಾಗಿಯೂ ಲಲಿತಾಪಂಚಮಿಯ ದಿನ ನನ್ನ ‘ಮಹಿಷಾಸುರಮರ್ದಿನಿ' ಸ್ವರೂಪದ ನನ್ನ ಪ್ರೀತಿಯ ಪುತ್ರನ ಜೊತೆಗೆ ಮಾಡಿದ ಪೂಜೆಯು ಸಂಪೂರ್ಣ ನವರಾತ್ರಿಯ ಫಲವನ್ನು ಆಯಾ ಭಕ್ತರ ಭಾವಕ್ಕೆ ಅನುಗುಣವಾಗಿ ನೀಡಬಹುದು.
ಮತ್ತು ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಈ ಮೂವರ ಚರಣಗಳ ಮೇಲೆ ಮಸ್ತಕ ಇಡುವುದರಿಂದ ದೊರೆಯುವ ಲಾಭಗಳು, ಅತ್ಯಂತ ಸೌಮ್ಯ ರೂಪದಲ್ಲಿ ಲಲಿತಾಪಂಚಮಿಯ ದಿನ ಕೇವಲ ನನಗೆ ಮತ್ತು ತ್ರಿವಿಕ್ರಮನಿಗೆ ಬಿಲ್ವಪತ್ರೆ ಅರ್ಪಿಸುವುದರಿಂದ ದೊರೆಯುತ್ತವೆ.
ಏಕೆಂದರೆ ನೀವು ಈಗಲೇ ನೋಡಿದ್ದೀರಿ ಎಲ್ಲಾ ನವದುರ್ಗೆಯರು, ಎಲ್ಲಾ ಸಪ್ತಮಾತೃಕೆಯರು, ನನ್ನ ಎಲ್ಲಾ ಅವತಾರಗಳು ಮತ್ತು ೬೪ ಕೋಟಿ ಚಾಮುಂಡರು ನನ್ನಲ್ಲಿಯೇ ವಾಸ ಮಾಡುತ್ತಾರೆ.”
ಬಾಪು ಮುಂದೆ ತುಳಸಿಪತ್ರ - 1395 ರಲ್ಲಿ ಬರೆಯುತ್ತಾರೆ,
ಎಲ್ಲಾ ಬ್ರಹ್ಮರ್ಷಿ ಮತ್ತು ಬ್ರಹ್ಮವಾದಿನಿಯರು ಅತೀವ ಪ್ರೀತಿಯಿಂದ ಮತ್ತು ಆದರದಿಂದ ಲಲಿತಾಂಬಿಕೆಯ ‘ಲಲಿತಾಷ್ಟಕ ಸ್ತೋತ್ರ'ವನ್ನು ಸಾಮವೇದೀಯ ಪದ್ಧತಿಯಲ್ಲಿ ಹೇಳಲು ಶುರು ಮಾಡಿದರು ಮತ್ತು ಅದರ ಜೊತೆಗೆ ‘ಲಲಿತಾಂಬಿಕಾ' ಸ್ವರೂಪವು ‘ಮಣಿ ದ್ವೀಪನಿವಾಸಿನಿ' ರೂಪದಲ್ಲಿ ಮತ್ತೆ ವಿಲೀನವಾಯಿತು.
ಮತ್ತು ಅದರ ಜೊತೆಗೆ ಆ ಮಣಿ ದ್ವೀಪನಿವಾಸಿನಿ ಆದಿಮಾತೆ ಕೂಡ ಅದೃಶ್ಯವಾಗಿ ‘ಅಷ್ಟಾದಶಭುಜ ಅನಸೂಯ' ಮತ್ತು ‘ಶ್ರೀವಿದ್ಯೆ' ಈ ಎರಡು ರೂಪಗಳಲ್ಲಿಯೇ ಮೊದಲಿನಂತೆ ಕಾಣಿಸಲಾರಂಭಿಸಿದಳು.
ಈಗ ಬ್ರಹ್ಮವಾದಿನಿ ಲೋಪಮುದ್ರೆಯು ಮುಂದೆ ಬಂದು ‘ಕಾಲರಾತ್ರಿಂ ಬ್ರಹ್ಮಸ್ತುತಾಂ ವೈಷ್ಣವೀಂ ಸ್ಕಂದಮಾತರಮ್' ಈ ಮಂತ್ರವನ್ನು ಜಪಿಸಲು ಶುರು ಮಾಡಿದಳು ಮತ್ತು ಅದರ ಜೊತೆಗೆ ಏಳನೆಯ ನವದುರ್ಗೆ ಕಾಲರಾತ್ರಿಯು ತನ್ನ ಎಂದಿನ ರೂಪದಲ್ಲಿಯೇ; ಆದರೆ ಸೌಮ್ಯ ತೇಜಸ್ಸಿನಿಂದ ಯುಕ್ತಳಾಗಿ ಸಾಕಾರಗೊಂಡಳು.
ಲೋಪಮುದ್ರೆಯು ಆಕೆಗೆ ಪ್ರಣಾಮ ಮಾಡಿ ಮಾತನಾಡಲು ಶುರು ಮಾಡಿದಳು, “ಆತ್ಮೀಯರೇ! ಶಾಂಭವಿ ವಿದ್ಯೆಯ ಹದಿಮೂರನೆಯ ಮತ್ತು ಹದಿನಾಲ್ಕನೆಯ ಮೆಟ್ಟಿಲಿನಲ್ಲಿ (ಕಕ್ಷೆಯಲ್ಲಿ), ತನ್ನ ಆಧ್ಯಾತ್ಮಿಕ ಪ್ರವೃತ್ತಿಗೆ ಅಡ್ಡ ಬರುವ ಎಲ್ಲಾ ಶತ್ರುಗಳನ್ನು ನಾಶ ಮಾಡುವುದು ಪ್ರತಿಯೊಬ್ಬ ಸಾಧಕನಿಗೂ ಅತೀವ ಅವಶ್ಯಕವಾಗಿರುತ್ತದೆ. ಏಕೆಂದರೆ ಹಾಗೆ ಮಾಡದೆ ಇದ್ದರೆ ಪವಿತ್ರತೆಗೆ ವಿರೋಧ ಇರುವ ಅಸುರ ಮತ್ತು ಆಸುರೀ ಪ್ರವೃತ್ತಿಯ ಮಾನವರು ಆ ಸಾಧಕನ ಮುಂದಿನ ಪ್ರಯಾಣವನ್ನು ಕಠಿಣ ಮಾಡಿಬಿಡುತ್ತಾರೆ.
ಮತ್ತು ಅದಕ್ಕಾಗಿಯೇ ಎಲ್ಲಾ ಷಡರಿಪುಗಳನ್ನು ಬಿಟ್ಟಿರುವ ಸಾಧಕನು, ತಪಸ್ವಿಯು ಈಗ ಪರಾಕ್ರಮಿ ಮತ್ತು ಶೂರನಾದ ವೀರ ವ್ಯಕ್ತಿಯ ರೂಪದಲ್ಲಿ ಕಾರ್ಯ ಮಾಡಬೇಕಾಗುತ್ತದೆ.
ಮತ್ತು ಅದಕ್ಕಾಗಿಯೇ ಈ ಏಳನೆಯ ನವದುರ್ಗೆ ಕಾಲರಾತ್ರಿ ಅತ್ಯಂತ ದಕ್ಷಳಾಗಿರುತ್ತಾಳೆ.
ಏಕೆಂದರೆ ಪಾರ್ವತಿಯು ಕೂಡ ತನ್ನ ಜೀವನರೂಪಿ ತಪಶ್ಚರ್ಯೆಯಲ್ಲಿ ‘ಸ್ಕಂದಮಾತೆ' ಮತ್ತು ‘ಕಾತ್ಯಾಯನಿ' ಈ ಎರಡು ಕಕ್ಷೆಗಳನ್ನು ದಾಟಿದ ನಂತರ, ಕೆಲವು ಬಾರಿ ಪರಮಶಿವನ ಹೆಗಲಿಗೆ ಹೆಗಲು ಕೊಟ್ಟು ಮತ್ತು ಅನೇಕ ಬಾರಿ ಸ್ವತಃ
ಒಬ್ಬಳೇ ಅಕ್ಷರಶಃ ಸಾವಿರಾರು ಅಸುರರ ಜೊತೆ ಯುದ್ಧ ಮಾಡಿದ್ದಾಳೆ ಮತ್ತು ಆಕೆಯು ಪ್ರತಿಯೊಬ್ಬ ಅಸುರನನ್ನು ಖಚಿತವಾಗಿಯೂ ಕೊಂದು ಹಾಕಿದ್ದಾಳೆ.
ಮತ್ತು ಆ ಸಮಯದಲ್ಲಿ ಆಕೆಯು ಯುದ್ಧಭೂಮಿಯಲ್ಲಿ ಪ್ರಕಟಗೊಳ್ಳುವ ಸ್ವರೂಪವೇ ಏಳನೆಯ ನವದುರ್ಗೆ ‘ಕಾಲರಾತ್ರಿ' - ಯಾರು ತನ್ನ ಮಕ್ಕಳ ರಕ್ಷಣೆಗಾಗಿ ಸದಾ ಯುದ್ಧಕ್ಕೆ ಸಿದ್ಧಳಾಗಿರುತ್ತಾಳೆ.
ಓ ಪ್ರಿಯ ಆತ್ಮೀಯರೇ! ಸರಿಯಾಗಿ ನೋಡಿ. ಆಕೆಯ ಚಾಂದ್ರತಲವಾರಿಯ ಮೇಲೆ ಕೂಡ ಅಲಗಿನ ಪ್ರತಿ ಬದಿಯಲ್ಲಿ ಒಂದೊಂದು ಕಣ್ಣು ಇದೆ.
ಯಾವಾಗ ಯಾವಾಗ ಆಕೆಯ ನಿಜವಾದ ಶ್ರದ್ಧಾವಾನ ಭಕ್ತನು ತನ್ನ ಭಕ್ತಿಸಾಧನೆಯಲ್ಲಿ ಪ್ರಗತಿ ಮಾಡುತ್ತಾನೋ, ಆವಾಗ ಅವನ ಪ್ರಪಂಚದ ಮೇಲೆ ಅಥವಾ ಆಧ್ಯಾತ್ಮದ ಮೇಲೆ ದಾಳಿ ಮಾಡಲು ಬರುವ ಪ್ರತಿಯೊಬ್ಬರ ಮೇಲೆ ಭಗವತಿ ಕಾಲರಾತ್ರಿಯ ಕಣ್ಣು ಇಟ್ಟಿರುತ್ತದೆ, ಸರಿಯಾದ ಸಮಯದಲ್ಲಿ ಈ ಕಾಲರಾತ್ರಿಯು ತನ್ನ ಚಾಂದ್ರತಲವಾರಿಯನ್ನು ಆ ದುಷ್ಟ ವ್ಯಕ್ತಿಯ ಮೇಲೆ ಅಥವಾ ಅಸುರನ ಮೇಲೆ ಎಸೆಯುತ್ತಾಳೆ - ತನ್ನ ಸ್ಥಾನದಿಂದ ಸ್ವಲ್ಪವೂ ಕದಲದೆ.
ಏಕೆಂದರೆ ಆಕೆಯ ಚಾಂದ್ರತಲವಾರಿಯ ಎರಡೂ ಕಣ್ಣುಗಳು ಈ ತಲವಾರಿಗೆ ಸರಿಯಾಗಿ ಮಾರ್ಗದರ್ಶನ ಮಾಡುತ್ತವೆ ಮತ್ತು ಆ ಅಸುರನು ಎಲ್ಲಿ ಅಡಗಿದ್ದರೂ, ಅವನ ಸುತ್ತಲಿನ ಎಲ್ಲಾ ಸಂರಕ್ಷಕ ಗೋಡೆಗಳು ಮತ್ತು ಅಡೆತಡೆಗಳನ್ನು ಭೇದಿಸಿ ಈ ಚಾಂದ್ರತಲವಾರಿಯು ಆ ಶ್ರದ್ಧಾವಾನನ ಶತ್ರುವಿನ ವಿನಾಶವನ್ನು ಉಂಟುಮಾಡುತ್ತದೆ.
ಈಗ ಆಕೆಯ ಕೈಯಲ್ಲಿರುವ ಕಂಟಕಾಸ್ತ್ರದ ಕಡೆಗೆ ನೋಡಿ. ಇದಕ್ಕೆ ಏಳು ಕಂಟಕಗಳು (ಮುಳ್ಳುಗಳು) ಇವೆ. ಇದರಲ್ಲಿನ ಆರು ಕಂಟಕಗಳು ಆರಕ್ಕೆ ಆರು ಲೋಕಗಳಿಂದ ಸೂಕ್ಷ್ಮಾತಿಸೂಕ್ಷ್ಮ ಪವಿತ್ರತೆಯ ಶತ್ರುಗಳಾದ ಅಂದರೆ ಅಸುರರ ಮತ್ತು ದೈತ್ಯರ ಪ್ರಭಾವವನ್ನು ಇಲ್ಲವಾಗಿಸುತ್ತವೆ.
ವಾಸ್ತವವಾಗಿ ಇಲ್ಲಿಯವರೆಗೂ ಎಂದಿಗೂ ಆರನೆಯ ಕಂಟಕದ ಉಪಯೋಗವೇ ಆಗಿಲ್ಲ. ಏಕೆಂದರೆ ಆರನೆಯ ಲೋಕದಲ್ಲಿ ಅಸುರರು ಎಂದಿಗೂ ಪ್ರವೇಶಿಸಲು ಸಾಧ್ಯವಾಗಿಲ್ಲ.
ಮತ್ತು ಏಳನೆಯ ಲೋಕದಲ್ಲಿ ಆಸುರೀ ಪ್ರವೃತ್ತಿಗಳಿಗೆ ಪ್ರವೇಶ ಸಿಗುವುದು ಕೂಡ ಸಾಧ್ಯವಿಲ್ಲ.
ಹಾಗಿದ್ದರೆ ಈ ಏಳನೆಯ ಕಂಟಕದ ಕಾರ್ಯವೇನು?
ಈ ಏಳನೆಯ ಕಂಟಕವು ಹದಿಮೂರನೆಯ ಮತ್ತು ಹದಿನಾಲ್ಕನೆಯ ಮೆಟ್ಟಿಲಿನ (ಕಕ್ಷೆಯ) ಶಾಂಭವಿ ವಿದ್ಯೆಯ ಸಾಧಕನಿಗೆ, ಆತ ತನ್ನ ಅಂತಃಕರಣದ ಮೇಲೆ ಏನೇ ಕೆತ್ತಬೇಕಿದ್ದರೂ - ಭಾವ, ಶಬ್ದ, ಧ್ಯಾನ, ಚಿತ್ರ, ಪ್ರಸಂಗ, ಅನುಭವ, ಸ್ತೋತ್ರ, ಮಂತ್ರ, ನಾಮ - ಅವುಗಳನ್ನು ಕೆತ್ತಲು ಭಗವತಿ ಕಾಲರಾತ್ರಿಯಿಂದ ಸಿಗುವ ಅತ್ಯುತ್ತಮ ಲೇಖನ-ಸಾಧನವಾಗಿದೆ.
ಮತ್ತು ಈ ಏಳನೆಯ ಕಂಟಕವು ಯಾವಾಗ ಶ್ರದ್ಧಾವಾನನಿಗೆ ದೊರೆಯುತ್ತದೆಯೋ, ಆಗಲೇ ಸ್ವತಃ ಭಗವಾನ ತ್ರಿವಿಕ್ರಮನು, ಸಾಧಕನಿಗೆ ಬೇಕಾದದ್ದನ್ನು ಆತ ಬರೆದು ಮುಗಿಸಿದ ನಂತರ, ಆ ಸಾಧಕನಿಗೆ ಶಾಂಭವಿ ವಿದ್ಯೆಯ ಮಂತ್ರವನ್ನು ಸ್ವತಃ ನೀಡುತ್ತಾನೆ.
ಮತ್ತು ಇಲ್ಲಿ ಆ ಶ್ರದ್ಧಾವಾನ ಸಾಧಕನನ್ನು ಮಾತೆ ಕಾಲರಾತ್ರಿಯು ಮಹಾಗೌರಿ ರೂಪ ಧಾರಣ ಮಾಡಿ ಆತನನ್ನು ಶಾಂಭವಿ ವಿದ್ಯಾರ್ಥಿಯಾಗಿ ಸ್ವೀಕರಿಸುತ್ತಾಳೆ.
ಓ ಗೌತಮ ಮತ್ತು ಅಹಲ್ಯ, ಬನ್ನಿ. ನಿಮಗೆ ಸ್ವಾಗತ.. ನೀವು ಇಲ್ಲಿಯವರೆಗೂ ಎಲ್ಲವನ್ನು ಕಲಿತುಕೊಂಡೇ ಬಂದಿದ್ದೀರಿ.”
ಎಲ್ಲಾ ಬ್ರಹ್ಮರ್ಷಿ ಮತ್ತು ಬ್ರಹ್ಮವಾದಿನಿಯರು ಇತರ ಎಲ್ಲಾ ಉಪಸ್ಥಿತರ ಜೊತೆಗೆ ಎದ್ದು ನಿಂತು ಗೌತಮ-ಅಹಲ್ಯರನ್ನು ಪ್ರೀತಿಯಿಂದ ಸ್ವಾಗತಿಸಿದರು.
ಮತ್ತು ಲೋಪಮುದ್ರೆ ಮುಂದೆ ಮಾತನಾಡಲು ಶುರು ಮಾಡಿದಳು, “ಕಾಲರಾತ್ರಿಯ ಉಗ್ರ ಮತ್ತು ಆದರೂ ಕೂಡ ಅತ್ಯಂತ ಸಾತ್ವಿಕ ಪ್ರೀತಿಯಿಂದ ತುಂಬಿರುವ ರೂಪದಿಂದ ಎಂಟನೆಯ ನವದುರ್ಗೆ ಮಹಾಗೌರಿಯ ಕಡೆಗೆ ಹೋಗುವುದು ಅಂದರೆ ಅತೀವ ಉಗ್ರ ಮತ್ತು ದಹಿಸುವ ತೇಜಸ್ಸಿನಿಂದ ಅತ್ಯಂತ ಸೌಮ್ಯ, ತಂಪಾದ ತೇಜಸ್ಸಿನವರೆಗಿನ ಪ್ರಯಾಣ.
ಅಂದರೆ ವಿಶ್ವದ ಎರಡು ಧ್ರುವಗಳ ಜ್ಞಾನ.”
ಈಗ ಏಳನೆಯ ನವದುರ್ಗೆ ಕಾಲರಾತ್ರಿಯೇ ನಿಧಾನವಾಗಿ ಎಂಟನೆಯ ನವದುರ್ಗೆ ‘ಮಹಾಗೌರಿ'ಯಾಗಲು ಶುರು ಮಾಡಿದಳು.
ಗೌತಮ ಮತ್ತು ಅಹಲ್ಯರು ಭಗವತಿ ಕಾಲರಾತ್ರಿಯನ್ನು ಸ್ತವನ ಮಾಡಿ ಆಕೆಯಿಂದ ಅತೀವ ಪ್ರೀತಿಯಿಂದ ವಿದಾಯ ಪಡೆಯುತ್ತಿದ್ದರು.
ಆದರೆ ಭಗವತಿ ಕಾಲರಾತ್ರಿಯು ತನ್ನ ಅಂಗುಷ್ಠಮಾತ್ರ ಸ್ವರೂಪವನ್ನು ಬ್ರಹ್ಮರ್ಷಿ ಗೌತಮನ ಹೃದಯದಲ್ಲಿ ಸ್ಥಾಪಿಸಿದಳು.