ಉಲ್ಲೇಖ - ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ 'ಪ್ರತ್ಯಕ್ಷ'ದಲ್ಲಿ 'ತುಳಸಿ ಪತ್ರ' ಎಂಬ ಸಂಪಾದಕೀಯ ಸರಣಿಯ
ಸಂಪಾದಕೀಯ ಸಂ . 1390 ಮತ್ತು 1391.
ಸದ್ಗುರು ಶ್ರೀ ಅನಿರುದ್ಧ ಬಾಪು ತುಳಸಿಪತ್ರ - 1390 ಸಂಪಾದಕೀಯದಲ್ಲಿ ಬರೆಯುತ್ತಾರೆ,
ಬ್ರ ಹ್ಮ ವಾ ದಿ ನಿ ಲೋಪಮುದ್ರೆಯ ಮಾತುಗಳು ನಡೆಯುತ್ತಿರುವಾಗಲೇ , ಬ್ರಹ್ಮರ್ಷಿ ಕಾತ್ಯಾಯನನ ಪತ್ನಿ ಮಹಾಮತಿ 'ಕೃತಿ' (ಹೇಗೆ 'ರಾಜರ್ಷಿ 'ಗೆ ಸಮಾನಾಂತರ 'ರಾಜಯೋಗಿನಿ', ಹಾಗೆ 'ಮಹರ್ಷಿ 'ಗೆ ಸಮಾ್ನಾಂತರ 'ಮಹಾಮತಿ') ಅಲ್ಲಿಗೆ ಓಡಿ ಬಂದರು . ಅವರು ತಮ್ಮ ತಪಸ್ಸಿನಿಂದ ಎದ್ದು ಬಂದಿದ್ದರು . ಅವರಿಗೆ ತಮ್ಮ ಪ್ರೀತಿಯ ಮಗಳನ್ನು ನೋಡಬೇಕಾಗಿತ್ತು . ಏಕೆಂದರೆ ಪ್ರತಿದಿನ ಅವಳನ್ನು ನೋಡುವುದು ಕೃತಿಗೆ ಸಾಧ್ಯವಿರಲಿಲ್ಲ - ಏಕೆಂದರೆ ಅವರು 'ಬ್ರಹ್ಮವಾದಿನಿ' ಆಗಿರಲಿಲ್ಲ. ಕೃತಿಯ ಆತುರತೆ ನೋಡಿ ಬ್ರಹ್ಮವಾದಿನಿ ಲೋಪಮುದ್ರೆ ನಗುತ್ತಾ ಹೇಳಿದರು , "ನೋಡಿ! ಕೈಲಾಸದಲ್ಲಿ ಇಲ್ಲಿಯವರೆಗೆ ಇಷ್ಟು ಘಟನೆಗಳು ನಡೆದಿವೆ. ನವದುರ್ಗೆಯ ಐದು ರೂಪಗಳು ಸಹ ಪ್ರಕಟಗೊಂಡಿವೆ. ಆದರೆ ಅದರಿಂದಲೂ ಸಹ ಈ ಮಹಾಮತಿ ಕೃತಿಯ ತಪಸ್ಸು ಭಂಗವಾಗಲಿಲ್ಲ. ಆದರೆ, ಅವರ ಏಕೈಕ ಪ್ರೀತಿಯ ಮಗಳು ನವದುರ್ಗಾ ಕಾತ್ಯಾಯನಿ ಇಲ್ಲಿಗೆ ಬಂದಿದ್ದಾಳೆ, ಈ ಘಟನೆ ಮಾತ್ರ ಮಹಾಮತಿ ಕೃತಿಯನ್ನು ತಪಸ್ಸಿನಿಂದ ಜಾಗೃತಗೊಳಿಸಿತು .
ಓ ಮಹರ್ಷಿ ಜನರೇ ! ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ - ಈ ರೀತಿಯಾಗಿ ತನ್ನ ಸ್ವಂತ ಪ್ರಪಂಚಕ್ಕಾಗಿ ತಪಸ್ಸನ್ನು ಭಂಗ ಮಾಡಿ ಇಲ್ಲಿಗೆ ಬಂದಿರುವ ಈ ಮಹಾಮತಿ ಕೃತಿ ಈಗ 'ಬ್ರಹ್ಮವಾದಿನಿ' ಆಗಬಹುದೇ ?
ಏಕೆಂದರೆ ಈ ತಪಸ್ಸಿನಿಂದಲೇ ಅವರು ಬ್ರಹ್ಮವಾದಿನಿ ಆಗಲು ಸಾಧ್ಯವಿತ್ತು ಮತ್ತು ಇದು ಸಾಕ್ಷಾತ್ ಆದಿಮಾತೆ ಮತ್ತು ತ್ರಿವಿಕ್ರಮರ ಯೋಜನೆ ಆಗಿತ್ತು ." ಅಲ್ಲಿ ನೆರೆದಿದ್ದ ಎಲ್ಲರೂ ಈ ಪ್ರಶ್ನೆಯಿಂದ ಗೊಂದಲಕ್ಕೊಳಗಾದರು. ಯಾರಿಗೂ ಸರಿಯಾದ ಉತ್ತರ ಸಿಗಲಿಲ್ಲ. ಇದನ್ನು ನೋಡಿ ಬ್ರಹ್ಮವಾದಿನಿ ಲೋಪಮುದ್ರೆ ಹೇಳಿದರು , "ಹೇ ಮಕ್ಕಳೇ ! ಇದರ ಉತ್ತರ ನಮಗೆ ಶೀಘ್ರದಲ್ಲಿಯೇ ಸಿಗಲಿದೆ. ನಾವು ಸ್ವಲ್ಪ ಕಾಯೋಣ." ಮಹಾಮತಿ ಕೃತಿಯವರಿಗೆ ಲೋಪಮುದ್ರೆಯ ಪ್ರಶ್ನೆ ಕೇಳಿಸಲೇ ಇಲ್ಲ. ಕೃತಿ ಕೇವಲ ಅನಿಮಿಷ ನೇತ್ರಗಳಿಂದ ಭಗವತಿ ಕಾತ್ಯಾಯನಿಯನ್ನು ನೋಡುತ್ತಿದ್ದರು .
ಕೃತಿ ಕೈಗಳನ್ನು ಜೋಡಿಸಿರಲಿಲ್ಲ. ಕೃತಿ ಮಗಳನ್ನು ತಬ್ಬಿಕೊಳ್ಳಲು ಮುಂದೆ ಹೋಗಲಿಲ್ಲ. ಕೃತಿ ತಮ್ಮ ಮಗಳೊಂದಿಗೆ ಏನೂ ಮಾತನಾಡಲಿಲ್ಲ. ಆದರೆ ಕೃತಿಯ ಮುಖದಲ್ಲಿ ಅತ್ಯಂತ ಸಮಾಧಾನವಿತ್ತು. ಮತ್ತು ಅದೇ ಸಮಯದಲ್ಲಿ ಭಗವತಿ ಕಾತ್ಯಾಯನಿ ಬಾಲ್ಯ ರೂಪವನ್ನು ಧರಿಸಿ, ಸಿಂಹದಿಂದ ಕೆಳಗೆ ಹಾರಿ, ಓಡಿ ಹೋಗಿ ತಮ್ಮ ಮಾನವ ತಾಯಿ - ಕೃತಿಯ ತೊಡೆಯೊಳಗೆ ಸೇರಿಕೊಂಡರು . ಈಗ ಮಾತ್ರ ಕೃತಿ ಬಾಲ ಕಾತ್ಯಾಯನಿಯನ್ನು ತಮ್ಮ ತಬ್ಬಿನಲ್ಲಿ ಗಟ್ಟಿಯಾಗಿ ಹಿಡಿದು ಕೊಂಡರು ಮತ್ತು ತಮ್ಮ ಮಗಳ ಕೆನ್ನೆಯನ್ನು ಪದೇ ಪದೇ ಮುತ್ತಿಕ್ಕುತ್ತಾ, ಅವಳ ಕೂದಲಿನಲ್ಲಿ ತಮ್ಮ ಕೈಗಳನ್ನು ತಿರುಗಿಸುತ್ತಿದ್ದರು. ಬಾಲ ಕಾತ್ಯಾಯನಿ ಕೂಡ 'ಅಂಬ! ಅಂಬ!' (ನನ್ನ ತಾಯಿ, ನನ್ನ ತಾಯಿ) ಎಂದು ಪದೇ ಪದೇ ಹೇಳುತ್ತಾ, ತಾಯಿಯ ತೊಡೆಯೊಳಗೆ ಅತ್ಯಂತ ತೃಪ್ತಿಯಿಂದ ನೆಲೆಸಿದ್ದರು .
ಆದರೆ ಒಂದು ಕ್ಷಣಕ್ಕೆ ಮಹಾಮತಿ ಕೃತಿಯ ಕಣ್ಣುಗಳಿಂದ ಕೇವಲ ಎರಡು ಕಣ್ಣೀರು ಹನಿಗಳು ಉದುರಿದವು ಮತ್ತು ಅವುಗಳನ್ನು ತಕ್ಷಣವೇ ಬಾಲ ಕಾತ್ಯಾಯನಿ ತಮ್ಮ ಮಸ್ತಕದಲ್ಲಿ ಸ್ವೀಕರಿಸಿದರು .
ಅದಾದ ಮುಂದಿನ ಕ್ಷಣದಲ್ಲಿ, ರಾಜರ್ಷಿ ಶಶಿಭೂಷಣನ ಜೀವನದಲ್ಲಿ ಸ್ವಲ್ಪ ಸಮಯದ ಹಿಂದೆ ಏನು ನಡೆದಿತ್ತೋ ಮತ್ತು
ಅವರು 'ಬ್ರಹ್ಮರ್ಷಿ' ಆಗಿದ್ದರೋ, ಬಹುತೇಕ ಹಾಗೆಯೇ ನಡೆಯುತ್ತಿತ್ತು. ನೆರೆದಿದ್ದ ಬ್ರಹ್ಮರ್ಷಿಗಳು ಮತ್ತು ಬ್ರಹ್ಮವಾದಿನಿಯರು ಚಪ್ಪಾಳೆ ತಟ್ಟಿ, ಈ ಅದ್ಭುತ ತಾಯಿ-ಮಗಳ ಜೋಡಿಯ ಮೇಲೆ ಹೂವಿನ ಮಳೆ ಸುರಿಸಲು ಪ್ರಾರಂಭಿಸಿದರು. ಮತ್ತು ಭಗವಾನ್ ತ್ರಿವಿಕ್ರಮರು ಘೋಷಿಸಿದರು, "ಹೇ ಕೃತಿ! ನೀನು ಏನು ತಪಸ್ಸು ಮಾಡುತ್ತಿದ್ದೆಯೋ , ಅದು ಈಗಿನ ಈ ಆಚರಣೆಯ ಮುಂದೆ ತುಂಬಾ ಕ್ಷುಲ್ಲಕವಾ ಗಿದೆ.
ಮತ್ತು ಅದಕ್ಕಾಗಿಯೇ ನೀನು ನಿನ್ನ ಸ್ವಂತ ಅಧಿಕಾರದಿಂದ ಮತ್ತು ಆದಿಮಾತೆಯ ಕೃಪೆಯಿಂದ 'ಬ್ರಹ್ಮವಾದಿನಿ' ಆಗಿದ್ದೀಯ." ಅದೇ ಕ್ಷಣಕ್ಕೆ ನವಬ್ರಹ್ಮವಾದಿನಿ ಕೃತಿಯ ಮಸ್ತಕವನ್ನು ಮಗಳು ಕಾತ್ಯಾಯನಿ ಮುತ್ತಿಕ್ಕಿದರು .
ಅದೇ ಕ್ಷಣಕ್ಕೆ ಬಾಲ್ಯ ರೂಪದಲ್ಲಿದ್ದ ಕಾತ್ಯಾಯನಿ ಅಂದರೆ ಕನ್ಯಾ ಕಾತ್ಯಾಯನಿ ತಮ್ಮ 'ಭಗವತಿ' ರೂಪದಲ್ಲಿ ಸಿಂಹಾ ರೂಢಳಾಗಿ ಕಾಣಿಸತೊಡಗಿದರು .
ಮತ್ತು ನವ ಬ್ರಹ್ಮವಾದಿನಿ ಕೃತಿ ಪ್ರಜ್ಞೆಗೆ ಬಂದು, ಎರಡೂ ಕೈಗಳನ್ನು ಜೋಡಿಸಿ ಆರನೇ ನವದುರ್ಗಾ ಕಾತ್ಯಾಯನಿಯ ಸ್ತೋತ್ರವನ್ನು ಹಾಡಲು ಪ್ರಾರಂಭಿಸಿದರು.
ಈ ಸುಂದರ ಕಾರ್ಯಕ್ರಮವನ್ನು ನೋಡುತ್ತಿದ್ದ ಎಲ್ಲರಿಗೂ ಬ್ರಹ್ಮವಾದಿನಿ ಲೋಪಮುದ್ರೆ ಪ್ರಜ್ಞೆಗೆ ತಂದು ಹೇಳಿದರು, "ಶಾಂಬವಿ ವಿದ್ಯೆಯ ಹನ್ನೊಂದನೇ ಮತ್ತು ಹನ್ನೆರಡನೇ ಮೆಟ್ಟಿಲಿನಲ್ಲಿ (ಕಕ್ಷೆಯಲ್ಲಿ) ಒಂಬತ್ತನೇ ಮತ್ತು ಹತ್ತನೇ ಮೆಟ್ಟಿಲಿನಲ್ಲಿ ಅಸುರ ಮುಕ್ತ ಮಾಡಿದ ನಮ್ಮ ಮನಸ್ಸಿನಲ್ಲಿರುವ ವಾತ್ಸಲ್ಯ , ಪ್ರೀತಿ, ಅನುಕಂಪ, ಸಹಾನುಭೂತಿ, ದಯೆ, ಕರುಣೆ ಮತ್ತು ಸ್ವಾರ್ಥವಿಲ್ಲದೆ ಇನ್ನೊಬ್ಬರಿಗೆ ಸಹಾಯ ಮಾಡುವ ಕೃತಿ ಈ ಗುಣಗಳನ್ನು ಉತ್ತೇಜಿಸಬೇ ಕು ,ಅವುಗಳನ್ನು ಬೆಳೆಸಬೇಕು ಮತ್ತು ಈ ಎಲ್ಲಾ ತತ್ವಗಳು ನಮ್ಮ ಜೀವನದ ಸಹಜ ಭಾಗವಾಗುವಂತೆ ತಪಸ್ಸು ಮಾಡಬೇಕು
ಇನ್ನೊಬ್ಬರ ಮನಸ್ಸನ್ನು ಅನಾವಶ್ಯಕವಾ ಗಿ ನೋಯಿಸುವುದು , ಇನ್ನೊಬ್ಬರ ಬಗ್ಗೆ ಸಹಾನುಭೂತಿ ಇಲ್ಲದಿರುವುದು, ದಯೆ ಮತ್ತು ಕರುಣೆಯಿಂದ ಕೂಡಿದ ಕೆಲಸಗಳನ್ನು ಮಾಡಲು ಸಾಧ್ಯವಿದ್ದರೂ ಹಾಗೆ ಮಾಡದಿರುವಂತಹ ವಿಷಯಗಳನ್ನು ಶಾಶ್ವತವಾಗಿ ತ್ಯಜಿಸಬೇಕು. ಮತ್ತು ಇವೆಲ್ಲವನ್ನೂ ಮಾಡಿಸುವ ಆದಿಮಾತೆಯ ಶಕ್ತಿ ಅಂದರೆ ಆರನೇ ನವದುರ್ಗಾ ಕಾತ್ಯಾಯನಿ. ಮತ್ತು ಅದಕ್ಕಾಗಿಯೇ ಅವರು ಒಬ್ಬ ಪವಿತ್ರ, ಆದರೆ ಸಾಮಾನ್ಯ ಸ್ತ್ರೀಯ ಗರ್ಭದಲ್ಲಿ ಜನಿಸಿದರು - ಅವರ ಹೆಸರೇ ಕೃತಿ. ಈ ಆರನೇ ನವದುರ್ಗಾ ಕಾತ್ಯಾಯನಿ ಬ್ರಹ್ಮವಾದಿನಿ ಕೃತಿಯ ಮಗಳು. ಹೌದು! ಕಾತ್ಯಾಯನಿಯ ಜನ್ಮದ ಸಮಯದಲ್ಲಿಯೂ ಕೂಡ ಕೃತಿ ಬ್ರಹ್ಮವಾದಿನಿ ಆಗಿದ್ದರು .
ಬ್ರಹ್ಮರ್ಷಿ ಕಾತ್ಯಾಯನನ ತಪಸ್ಸಿಗೆ ಜೋಡಿ ಸಿಗುವಂತೆ - ಅಂದರೆ ತಮ್ಮ ಗರ್ಭದಲ್ಲಿ ಭಗವತಿ 'ಮಗಳು ' ಆಗಿ ಬರಲು ಅವರು ತಮ್ಮ 'ಬ್ರಹ್ಮವಾದಿನಿ' ಪದವನ್ನು ತ್ಯಜಿಸಿದ್ದರು. ಹೇ ಎಲ್ಲ ಜನರೇ ! 'ಪವಿತ್ರ, ಶ್ರೇಷ್ಠ ಮತ್ತು ಸೂಕ್ತ ಮಾತೃತ್ವ'ವೇ ಅತಿದೊಡ್ಡ ತಪಸ್ಸು ."
ಬಾಪು ತುಳಸಿಪತ್ರ - 1391 ಸಂಪಾದಕೀಯದಲ್ಲಿ ಮುಂದುವರೆದು ಬರೆಯುತ್ತಾರೆ,
ಬ್ರಹ್ಮವಾದಿನಿ ಲೋಪಮುದ್ರೆ ಮಾತೃವಾತ್ಸಲ್ಯದ ಗುಣಗಾನ ಮಾಡುತ್ತಿರುವಾಗಲೇ , ಅಗಸ್ತ್ಯ ಪುತ್ರ ಬ್ರಹ್ಮರ್ಷಿ ಕತ ತಮ್ಮ ಸೊಸೆ, ಕೃತಿಯ ಹತ್ತಿರ ಬಂದು ನಿಂತರು ಮತ್ತು ಇನ್ನೊಂದು ಕಡೆಯಿಂದ ಕತನ ಪತ್ನಿ ಬ್ರಹ್ಮವಾದಿನಿ ಕಾಂತಿ ಕೂಡ ಅಲ್ಲಿಗೆ ಬಂದರು .
ಬ್ರಹ್ಮರ್ಷಿ ಕತ ಮತ್ತು ಬ್ರಹ್ಮವಾದಿನಿ ಕಾಂತಿ ಈ ಇಬ್ಬರೂ ಭಾವಪೂರ್ಣ ಸ್ಥಿತಿಯಲ್ಲಿರುವ ತಮ್ಮ ಸೊಸೆಯನ್ನು ಅತ್ಯಂತ ಪ್ರೀತಿಯಿಂದ ಹತ್ತಿರ ತೆಗೆದು ಕೊಂಡರು. ಬ್ರಹ್ಮವಾದಿನಿ ಕಾಂತಿ ಬ್ರಹ್ಮರ್ಷಿ ಕಶ್ಯಪರ ಮಗಳು.
ಕಾಂತಿ ಕೃತಿಯ ಕೈಯನ್ನು ಕೈಯಲ್ಲಿ ತೆಗೆದು ಕೊಂಡು ಅವರಿಗೆ ಹೇಳಿದರು , "ಹೇ ಮಗಳೇ ! ನನಗೆ ಕೇವಲ ಎಂಟು ಗಂಡು ಮಕ್ಕಳು ಜನಿಸಿದರು ಆದರೆ ಒಬ್ಬ ಮಗಳು ಹುಟ್ಟಲಿಲ್ಲ. ಆದ್ದರಿಂದ ಮಗಳ ಸುಖದ ಆಸೆ ನನ್ನ ಮನಸ್ಸಿನಲ್ಲಿ ಯಾವಾಗಲೂ
ಜಾಗೃತವಾಗಿತ್ತು ಮತ್ತು ಈ ಆಸೆಯಿಂದಲೇ ನಾನು 'ಮಹಾಮತಿ'ಯಿಂದ 'ಬ್ರಹ್ಮವಾದಿನಿ' ಆಗಲು ಸಾಧ್ಯವಾಗಲಿಲ್ಲ ಮತ್ತು ಇದನ್ನು ನನಗೆ ತಾತ ಕಶ್ಯಪ ಮತ್ತು ಅಗಸ್ತ್ಯ ಇಬ್ಬರೂ ಹೇಳಿದರೂ , ನನ್ನ ಮನಸ್ಸು ಮಾತ್ರ ಮಗಳ ಸುಖವನ್ನು ತ್ಯಜಿಸಲು ಸಿದ್ಧವಾಗಿರಲಿಲ್ಲ.
ಆದರೆ, ನಿನ್ನ ವಿವಾಹ ನನ್ನ ಹಿರಿಯ ಮಗ ಕಾತ್ಯಾಯನನೊಂದಿಗೆ ಆದಾಗ ಮತ್ತು ನೀನು ನಮ್ಮ ಆಶ್ರಮದಲ್ಲಿ ವಾಸಿಸಲು ಪ್ರಾರಂಭಿಸಿದಾಗ, ಅಂದಿನಿಂದ ನೀನು ನಿನ್ನ ಪ್ರೀತಿಯಿಂದ ನನಗೆ ಅದ್ಭುತ ಮಗಳ ಸುಖವನ್ನು ನೀಡಿದೆ ಮತ್ತು ಅಂತಹ ಮಗಳ ಸುಖದಿಂದ ತೃಪ್ತಳಾದ ನಾನು ಆಗ 'ಬ್ರಹ್ಮವಾದಿನಿ'ಯಾದೆ."
ಈಗ ಬ್ರಹ್ಮರ್ಷಿ ಕತ ಮಾತನಾಡಲು ಪ್ರಾರಂಭಿಸಿದರು , "ಹೇ ಸೊಸೆ ಕೃತಿ! ನೀನು ನಿಜವಾಗಿಯೂ ಧನ್ಯಳಾಗಿದ್ದೀಯ ಮತ್ತು ನಮ್ಮ ಕುಲವನ್ನೂ ಧನ್ಯ ಮಾಡಿದ್ದೀಯ.
ಹೇ ಮಗ ಕಾತ್ಯಾಯನ! ನಿನ್ನ ಮತ್ತು ನಿನ್ನ ಹೆಂಡತಿಯ ವಾತ್ಸಲ್ಯ ಭಕ್ತಿ ಅಪರಿಮಿತವಾಗಿದೆ; ವಿಶಿಷ್ಟವಾಗಿ ಅದು ಅದ್ವಿತೀಯವಾಗಿದೆ. ಯಾರು ನಿಮ್ಮ ಆರಾಧ್ಯ ದೈವವೋ, ಅವರನ್ನು ನೀವು 'ಮಗಳು ' ರೂಪದಲ್ಲಿ ಪಡೆದು ಕೊಂಡಿದ್ದೀರಿ ಮತ್ತು ಅವರನ್ನು ಮಗುವಿನಂತೆ ಬೆಳೆಸುತ್ತಿರುವಾಗಲೇ ನೀವು ಇಬ್ಬರೂ ಅವರನ್ನೇ ದೃಢವಾಗಿ ಪೂಜಿಸುತ್ತಿದ್ದೀರಿ ಮತ್ತು ಇನ್ನೂ ಪೂಜಿಸುತ್ತಿದ್ದೀರಿ.
ಹೇ ತಂದೆ ಅಗಸ್ತ್ಯ ಮತ್ತು ಕಶ್ಯಪ! ನೀವು ಶ್ರೇಷ್ಠರಾಗಿದ್ದೀರಿ. ನೀವು ಹಿರಿಯರಾಗಿದ್ದೀರಿ. ನಿಮಗೆ ಇಬ್ಬರಿಗೂ ಚೆನ್ನಾಗಿ ತಿಳಿದಿದೆ, ವಾತ್ಸಲ್ಯ ಭಕ್ತಿಯೇ ನಿಜವಾದ ಮಧುರ ಭಕ್ತಿ ಎಂದು ಮತ್ತು ಅಂತಹ ಈ ನಿಜವಾದ ಮಧುರ ಭಕ್ತಿಯೇ ಎಲ್ಲೆಡೆ ಹರಡುವುದು , ಇದು ದ್ವಾಪರ ಯುಗದ ಮತ್ತು ಕಲಿಯುಗದ ಅನಿವಾರ್ಯ ಅಗತ್ಯವಾಗಿದೆ.
ಇದಕ್ಕಾಗಿ ನಾನು ಮತ್ತು ನನ್ನ ಪತ್ನಿ ಏನಾದರೂ ಮಾಡಲು ಬಯಸುತ್ತೇವೆ. ನಮಗೆ ಕೆಲವು ಉಪದೇಶ ಮತ್ತು ಆಜ್ಞೆಗಳನ್ನು ನೀಡಿ."
ಈಗ ಬ್ರಹ್ಮರ್ಷಿ ಅಗಸ್ತ್ಯ ಮತ್ತು ಬ್ರಹ್ಮರ್ಷಿ ಕಶ್ಯಪ ತಮ್ಮ ತಮ್ಮ ಧರ್ಮ ಪತ್ನಿಯರೊಂದಿಗೆ ತಮ್ಮ ತಮ್ಮ ಮಕ್ಕಳ ಪಕ್ಕದಲ್ಲಿ ಬಂದು ನಿಂತರು ಮತ್ತು ಆ ನಾಲ್ವರೂ ಆದಿಮಾತೆ ಶ್ರೀ ವಿದ್ಯೆ ಮತ್ತು ತ್ರಿವಿಕ್ರಮರಿಗೆ ಇದೇ ಪ್ರಶ್ನೆಯನ್ನುಕೇಳಿದರು.
ಭಗವಾ ನ್ ತ್ರಿವಿಕ್ರಮರು ಈಗ ಏಕಮುಖ ರೂಪವನ್ನು ಧರಿಸಿ ಆ ನಾಲ್ವರಿಗೆ ಅತ್ಯಂತ ವಿನಯದಿಂದ ಮತ್ತು ಪ್ರೀತಿಯಿಂದ ಹೇಳಿದರು ,
"ನಿಮ್ಮ ನಾಲ್ವರ ಜ್ಞಾನವೂ ಅಪಾರವಾಗಿದೆ ಮತ್ತು ಭಕ್ತಿಯೂ ಸಹ.
ನೀವು ನನಗೆ ಈ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೀರಿ?" ಆ ನಾಲ್ವರೂ ಒಂದೇ ಧ್ವನಿಯಲ್ಲಿ, ಒಂದೇ ಬಾಯಿಯಿಂದ ಉತ್ತರ ನೀಡಿದರು, "ಏಕೆಂದರೆ ನೀವೇ ಏಕೈಕ ಶ್ರೇಷ್ಠ ಮಾತೃಭಕ್ತರಾಗಿದ್ದೀರಿ."
ತ್ರಿವಿಕ್ರಮರು : "ಹೌದು , ಇರಬಹುದು ! ಆದರೆ ಇದರ ಅರ್ಥ ಒಂದೇ .
ನನ್ನಲ್ಲಿ ಮಾತೃಭಕ್ತಿ ಎಲ್ಲಿಂದ ಮತ್ತು ಹೇಗೆ ಬಂತು ?
ಏಕೆಂದರೆ ನಿಜವಾದ ಅತ್ಯುತ್ತಮ ಮತ್ತು ಸರ್ವೋಚ್ಚ ವಾತ್ಸಲ್ಯ ಭಕ್ತಿ ನನ್ನ ತಾಯಿಯಲ್ಲಿಯೇ ಇದೆ.
ಅವಳಿಗೆ ನನ್ನ ಮೇಲೆ ಎಷ್ಟೊಂದು ನೈಸರ್ಗಿಕ ಪ್ರೀತಿ ಇದೆಯೋ , ಅಷ್ಟೇ ಪ್ರೀತಿ ಪ್ರತಿಯೊಬ್ಬ ನಿಜವಾದ ಭಕ್ತನ ಮೇಲೆಯೂ ಇದೆ ಮತ್ತು ಅದಕ್ಕಾಗಿಯೇ ನನ್ನ ಆದಿಮಾತೆ ಚಂಡಿಕೆಯೇ ವಾತ್ಸಲ್ಯ ಭಕ್ತಿಯ ಅಂದರೆ ನಿಜವಾದ ಮಧುರ ಭಕ್ತಿಯ ಏಕೈಕ ಮತ್ತು ಮೂಲ ಮೂಲವಾಗಿದೆ ಮತ್ತು ಆ ಮೂಲವನ್ನು ಶಿವಪತ್ನಿ ಪಾರ್ವತಿ ಸಂಪೂರ್ಣವಾಗಿ 'ಸ್ಕಂದಮಾತೆ' ರೂಪದಲ್ಲಿ ಸ್ವೀಕರಿಸಿದಾಗ, ಆಗಲೇ ಸ್ಕಂದಮಾತೆಯಿಂದ 'ಕಾತ್ಯಾಯನಿ' ಈ ಆರನೇ ನವದುರ್ಗಾ ಪ್ರಕಟಗೊಂಡಳು .
ಹೇ ಆದಿಮಾತೆ! ಹೇ ಮಹಿಷಾಸುರಮರ್ದನಿ! ಹೇ ಮಹಾದುರ್ಗೆ ! ಹೇ ಶ್ರೀ ವಿದ್ಯೆ ! ಹೇ ಅನಸೂಯೆ! ನೀನೇ ಈಗ ಈ ನಾಲ್ವರ ಪ್ರಶ್ನೆಗೆ ಉತ್ತರವನ್ನು ಕೊಡಬೇಕು , ಇದು ನನ್ನ ನಿಮ್ಮ ಪಾದಗಳಲ್ಲಿ ವಿನಮ್ರ ಪ್ರಾರ್ಥನೆ."
ಭಗವಾನ್ ತ್ರಿವಿಕ್ರಮರ ಈ ಮಾತುಗಳೊಂದಿಗೆ ಆದಿಮಾತೆಯ 'ಅನಸೂಯೆ' ಮತ್ತು 'ಶ್ರೀ ವಿದ್ಯೆ' ಈ ಎರಡೂ ರೂಪಗಳು ಒಟ್ಟುಗೂಡಿ, ಮೊದಲು ಎಲ್ಲಾ ಆಯುಧಗಳಿಂದ ಸಜ್ಜಾಗಿ ನಿಂತಿರುವ ಅಷ್ಟಾದಶ ಭುಜ ಮಹಿಷಾಸುರಮರ್ದಿನಿ ತಮ್ಮ
ತೇಜಸ್ಸಿನಿಂದ ಪ್ರಕಾಶಿಸತೊಡಗಿದರು ಮತ್ತು ಭಗವಾನ್ ತ್ರಿವಿಕ್ರಮರು ಬಾಲ್ಯ ಭಾವದಿಂದ ಓಡಿ ಹೋಗಿ ಅವಳ ಸೆರಗನ್ನು
ಹಿಡಿದಾಗ, ಆ ಕ್ಷಣಕ್ಕೆ ಮಣಿದ್ವೀಪದಲ್ಲಿ ಸಿಂಹಾಸನಾ ರೂಢ
ಅಷ್ಟಾದಶಭುಜ ಚಂಡಿಕೆ 'ಪ್ರಸನ್ನ ಮತ್ತು ಶಾಂತವಾ ಗಿ ನಗುತ್ತಾ ಕುಳಿತಿರುವ ಮತ್ತು ವಾತ್ಸಲ್ಯ ಪ್ರೀತಿ ಅವಳ ಕಣ್ಣುಗಳಿಂದ ಹರಿಯುತ್ತಿದೆ' ಎಂದು ಕಾಣಿಸತೊಡಗಿದರು.
ಈಗ ಅವರು ಭಗವಾನ್ ಏಕಮುಖ ತ್ರಿವಿಕ್ರಮನ ಮಸ್ತಕವನ್ನು ಕೈಯಿಂದ ಸ್ಪರ್ಶಿಸುತ್ತಿದ್ದಂತೆಯೇ ಅವರು ಎಂಟು ವರ್ಷದ ಬಾಲ್ಯ ರೂಪದಲ್ಲಿ ಕಾಣಿಸತೊಡಗಿದರು ಮತ್ತು ಓಡಿ ಹೋಗಿ ಅವಳ ತೊಡೆಯ ಮೇಲೆ ಕುಳಿತರು.
ಮತ್ತು ಅವರನ್ನು ಮೃದುವಾಗಿ ಮುದ್ದಿಸುತ್ತಾ ಈ ಚಿದಗ್ನಿ ಕುಂಡ ಸಂಭೂತ ಆದಿಮಾತೆ ಮಾತನಾಡಲು ಪ್ರಾರಂಭಿಸಿದರು, "ಹೌದು ! ನನ್ನ ಪ್ರೀತಿಯ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳೇ ! ತ್ರೇತಾ ಯುಗದಲ್ಲಿ ಈಗ ಶೀಘ್ರದಲ್ಲಿಯೇ 'ಪರಶುರಾಮ' ಮತ್ತು 'ಶ್ರೀ ರಾ ಮ'ರು ಜನಿಸುತ್ತಾರೆ ಮತ್ತು ಈ ಇಬ್ಬರ ಬಾಲ್ಯ ರೂಪದ ಆರಾಧನೆಯೇ ಅಂದರೆ ನಿಜವಾದ ಮಧುರ ಭಕ್ತಿಯೇ ಭಕ್ತರನ್ನು ಆಕರ್ಷಿಸುತ್ತದೆ.
ಪರಶುರಾಮನ ಮತ್ತು ಶ್ರೀ ರಾಮನ ಜನ್ಮ ದಿನವನ್ನು ಆ ಇಬ್ಬರ ಬಾಲಮೂರ್ತಿಗೆ ವತ್ಸಲ ಉಪಚಾರ ಮಾಡಿ ಅಂದರೆ ನಾಮಕರಣ, ತೊಟ್ಟಿಲು, ತೊಡೆಯ ಮೇಲೆ ಮಲಗಿಸುವುದು, ಸ್ತ್ರೀ ಮತ್ತು ಪುರುಷರು ಇಬ್ಬರೂ ಸೇರಿ ತೊಟ್ಟಿಲು ಹಾಡು ಹಾಡುವುದು ಮತ್ತು ಅವರ ಬಾಲಮೂರ್ತಿಗಳ ಅಭಿಷೇಕಾದಿ ಉಪಚಾರಗಳಿಂದ ಪೂಜಿಸುವುದು, ಭಕ್ತರನ್ನು ಅನೇಕ ಪಾಪಗಳಿಂದ ಮುಕ್ತಗೊಳಿಸುತ್ತದೆ.
ಹಾಗೆಯೇ ಪರಶುರಾಮನ ಮೇಲಿನ ಬಾಲಭಕ್ತಿಯನ್ನು ದುಷ್ಟ ಬುದ್ಧಿಯ ಜನರು ನಿಧಾನವಾ ಗಿ ನಾಶಮಾಡಲು ಪ್ರಯತ್ನಿಸಿದಾಗ, ಆಗ ಆ ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಜನ್ಮ ತಾಳುತ್ತಾನೆ ಮತ್ತು ಬಾಲ್ಯ ರೂಪದಲ್ಲಿ ಅಸಂಖ್ಯಾತ ಲೀಲೆಗಳು , ಆಟಗಳು ಮತ್ತು ಮಧುರ ಕೆಲಸಗಳನ್ನು ಮಾಡುತ್ತಾನೆ ಮತ್ತು ಸ್ವತಃ ಪ್ರೇಮರಸವಾಗಿರುತ್ತಾನೆ.
ಅಂತಹ ಈ ಮಧುರಾಧಿಪತಿ, ಗೋಕುಲ ನಿವಾಸಿ ಬಾಲಕೃಷ್ಣನ ಜನ್ಮ ದಿನದ ಮಹತ್ವವನ್ನು ನಾನು ಸ್ವತಃ ಅವರ ಸಹೋದರಿ ಆಗಿ ಮತ್ತು 'ವಿಂಧ್ಯ ವಾಸಿನಿ'ಯಾಗಿ ಹೆಚ್ಚಿಸುತ್ತೇನೆ.
ಕಲಿಯುಗದಲ್ಲಿ ಶ್ರೀ ರಾಮನ ಜನ್ಮೋತ್ಸವವು ಭಕ್ತರಿಗೆ ಭಕ್ತಿಯನ್ನು ದೃಢಪಡಿಸಲು ಸಹಾಯ ಮಾಡುತ್ತದೆ ಮತ್ತು ಪ್ರತಿಯೊಬ್ಬ ಭಕ್ತನೂ ಶ್ರೀ ಕೃಷ್ಣನ ಜನ್ಮೋತ್ಸವವನ್ನು ಅತ್ಯಂತ ಪ್ರೀತಿಯಿಂದ ಮತ್ತು ಉತ್ಸಾಹದಿಂದ ಆಚರಿಸಿ 'ಪವಿತ್ರತೆಯೇ ಪ್ರಮಾಣ' ಎಂಬ ರಹಸ್ಯವನ್ನು ಹೇಳುವ ಶ್ರೀ ಕೃಷ್ಣನ ರಾಸಲೀಲೆಯನ್ನು ಅವರ ಜನ್ಮ ದಿನದಂದು ಆಚರಿಸಿ ನಿಜವಾ ದ ಮಧುರ ಭಕ್ತಿಯನ್ನು ನೇರವಾಗಿ ನನ್ನಿಂದಲೇ ಪಡೆಯುತ್ತಾನೆ.
ಹೇ ಅಗಸ್ತ್ಯ ಮತ್ತು ಕಶ್ಯಪ! ಬ್ರಹ್ಮರ್ಷಿ ಕಾತ್ಯಾಯನ ಮತ್ತು ಬ್ರಹ್ಮವಾದಿನಿ ಕೃತಿ ಇವರಿಬ್ಬರೇ 'ದಶರಥ' ಮತ್ತು 'ಕೌಸಲ್ಯೆ ' ಆಗಿ ಶ್ರೀ ರಾಮನ ತಾಯಿ ಮತ್ತು ತಂದೆ ಆಗುತ್ತಾರೆ ಮತ್ತು ಇವರೇ 'ವಸುದೇವ-ದೇವಕಿ' ಆಗಿ ಶ್ರೀ ಕೃಷ್ಣನ ತಾಯಿ-ತಂದೆ ಆಗುತ್ತಾರೆ ಮತ್ತು ಬ್ರಹ್ಮರ್ಷಿ ಕತ ಮತ್ತು ಬ್ರಹ್ಮವಾದಿನಿ ಕಾಂತಿ 'ನಂದ-ಯಶೋದೆ' ಆಗಿ ನನ್ನನ್ನೇ ಜನ್ಮ ತಾಳುವಂತೆ ಮಾಡುತ್ತಾರೆ ಮತ್ತು ಶ್ರೀ ಕೃಷ್ಣನ ಬಾಲಲೀಲೆಗಳ ಆನಂದವನ್ನು ಅನುಭವಿಸುತ್ತಾರೆ.