ಸದ್ಗುರು ಅನಿರುದ್ಧರ ಭಾವಲೋಕದಿಂದ - ಪಾರ್ವತಿ ಮಾತೆಯ ನವದುರ್ಗಾ ಸ್ವರೂಪಗಳ ಪರಿಚಯ – ಭಾ ಗ ೩

ಸದ್ಗುರು ಅನಿರುದ್ಧರ ಭಾವಲೋಕದಿಂದ - ಪಾರ್ವತಿ ಮಾತೆಯ ನವದುರ್ಗಾ ಸ್ವರೂಪಗಳ ಪರಿಚಯ – ಭಾ ಗ ೩

ಸಂದರ್ಭ - ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ ‘ಪ್ರತ್ಯಕ್ಷ’ದಲ್ಲಿನ ‘ತುಳಸಿಪತ್ರ’ ಎಂಬ ಸಂಪಾದಕೀಯ

ಮಾಲಿಕೆಯ ಸಂಪಾದಕೀಯ ಸಂಖ್ಯೆ ೧೩೮೪ ಮತ್ತು ೧೩೮೫.

ಸದ್ಗುರು ಶ್ರೀ ಅನಿರುದ್ಧ ಬಾಪು ಅವರು ‘ತುಳಸಿಪತ್ರ - ೧೩೮೪’ ಸಂಪಾದಕೀಯದಲ್ಲಿ ಹೀಗೆ ಬರೆಯುತ್ತಾರೆ, ಋಷಿ ಗೌತಮರು ಅತ್ಯಂತ ವಿನಯದಿಂದ ನಮಸ್ಕರಿಸಿ ಬ್ರಹ್ಮವಾದಿನಿ ಲೋಪಮುದ್ರೆಯನ್ನು ಕೇಳಿದರು , 

“ಓ ಜ್ಞಾನದಾಯಿನಿ ಮಾತೆ! 

ನಾನು ಸೂರ್ಯನ ಕಿರಣಗಳ ಮತ್ತು ಸೂರ್ಯ ಮಂಡಲದ ಕುರಿತು ಅಧ್ಯಯನ ಮಾಡುತ್ತಿದ್ದಾಗ, ನನಗೆ ಮಾತಾ ಕೂಷ್ಮಾಂಡಳ ದರ್ಶನವಾಯಿತು . ಅವಳು ಪ್ರತಿಯೊಂದು ಸೂರ್ಯಬಿಂಬದ ಮಧ್ಯದಲ್ಲಿ ಕಾಣಿಸಿಕೊಂಡಳು , ಮತ್ತು ಅವಳು ವ್ಯಾಘ್ರದ ಮೇಲೆ ಕುಳಿತು ಸೂರ್ಯ ಹಾಗೂ ಸೂರ್ಯ ನಂತಹ ತಾರೆಗಳ ಮಂಡಲದಲ್ಲಿ ಸಂಚರಿಸುತ್ತಿರುವುದು ನನಗೆ ಕಾಣಿಸಿತು . ದಯವಿಟ್ಟು ಇದರ ಹಿಂದಿನ ರಹಸ್ಯವನ್ನು ನನಗೆ ತಿಳಿಸುತ್ತೀರಾ ?”

ಲೋಪಮುದ್ರೆ ಗೌತಮರ ಕಡೆಗೆ ಮೆಚ್ಚುಗೆಯಿಂದ ನೋಡಿ ಉತ್ತರಿಸಿದರು , “ಓ ಶುದ್ಧಬುದ್ಧಿ ಗೌತಮ! ನಿನ್ನ ಅಧ್ಯ ಯನ ನಿಜವಾಗಿಯೂ ಸರಿಯಾದ ಮಾರ್ಗದಲ್ಲಿದೆ ಮತ್ತು ನೀನು ಸತ್ಯನಿಷ್ಠ ಸಾಧಕನಾ ಗಿದ್ದೀಯೆ.

ನಿನ್ನ ಈ ಸತ್ಯ ನಿಷ್ಠೆಯೇ ಮನುಷ್ಯನ ಜೀವನದ ಎಲ್ಲಾ ರೀತಿಯ ಅಂಧಕಾರವನ್ನು ನಾಶ ಮಾಡುವ ಸೂರ್ಯನಾಗಿದೆ, ಮತ್ತು ಈ ಸತ್ಯ ನಿಷ್ಠೆಯೇ ಮಾತಾ ಕೂಷ್ಮಾಂಡಳಿಗೆ ಅತ್ಯಂತ ಪ್ರಿಯವಾಗಿದೆ, ಮತ್ತು ಅದಕ್ಕಾಗಿಯೇ ಅವಳು ನಿನಗೆ ದರ್ಶನ ನೀಡಿದ್ದಾಳೆ. ಪ್ರತಿಯೊಬ್ಬ ಮನುಷ್ಯನಿಗೂ ಅನೇಕ ಸ್ಥಳಗಳಲ್ಲಿ ಸತ್ಯವನ್ನು ತಿಳಿಯುವ ತೀವ್ರ ಇಚ್ಛೆ ಇರುತ್ತದೆ ಮತ್ತು ಅವರವರ

ಆಧ್ಯಾತ್ಮಿಕ ಅಧಿಕಾರಕ್ಕೆ ಅನುಗುಣವಾಗಿ ಆ ಸತ್ಯವನ್ನು ಈ ಕೂಷ್ಮಾಂಡಾದೇವಿಯೇ ಅವರಿಗೆ ಬಹಿರಂಗಪಡಿಸಿ ತೋರಿಸುತ್ತಾ ಳೆ.


ಈ ಕೂಷ್ಮಾಂಡಳ ನಗುವಿನಿಂದಲೇ ಎಲ್ಲಾ ಸೂರ್ಯರು , ತಾರೆಗಳು ಹುಟ್ಟಿವೆ. ಏಕೆಂದರೆ ಇವಳೇ ಆದಿಮಾತೆಯ ಮೂಲ ಪ್ರಕಾಶಿನಿ ಶಕ್ತಿ. ಅದಕ್ಕಾಗಿಯೇ ಇವಳಿಗೆ ‘ಕಾಶಿ' ಎಂಬ ಹೆಸರೂ ಇದೆ. ಇಡೀ ವಿಶ್ವದ ಎಲ್ಲಾ ತಾರೆಗಳ ತೇಜಸ್ಸನ್ನು ಒಟ್ಟು ಗೂಡಿಸಿದರೂ ಸಹ, ಅದು ಇವಳ ತೇಜಸ್ಸಿನ ಒಂದು ಸಣ್ಣ ಅಂಶದ ಎದುರು ಮಸುಕಾಗಿರುತ್ತದೆ ಮತ್ತು ಅದಕ್ಕಾಗಿಯೇ ಸೂರ್ಯ , ತಾರೆಗಳ ಹತ್ತಿರ ಸಂಚರಿಸಿದರೂ ಇವಳಿಗೆ ಸ್ವಲ್ಪವೂ ತೊಂದರೆಯಾಗುವುದಿಲ್ಲ.  ಹಾಗೆಯೇ , ಈ ವಸುಂಧರೆಗೆ ಬರುವ ಸೂರ್ಯನ ನೇರ ಕಿರಣಗಳನ್ನು ಕೂಡ ಇಲ್ಲಿನ ಜೀವನಕ್ಕೆ ಸಹಾಯವಾಗುವಂತೆ ಮಾಡುವವಳು ಇವಳೇ . ಪ್ರಕಾಶವಿಲ್ಲದೆ ನವನಿರ್ಮಾಣವಿಲ್ಲ ಮತ್ತು ಇವಳಿಲ್ಲದೆ ಪ್ರಕಾಶವಿಲ್ಲ ಮತ್ತು ಅದಕ್ಕಾಗಿಯೇ ಇವಳಿಗೆ ‘ಸಹಸ್ರಪ್ರಕಾಶಸುಂದರಿ’ ಎಂಬ ಹೆಸರೂ ಇದೆ. ಇವಳ ಸಾಧನೆಯನ್ನು ಬ್ರಹ್ಮರ್ಷಿ ಕಶ್ಯಪರು ಮಾಡಿದ್ದರು ಮತ್ತು ಅವರು ನಿನಗೆ ನೀಡಿದ ಜ್ಞಾನವನ್ನು ಅವಳು ಸ್ವತಃ ಅವರಿಗೇ ನೀಡಿದ್ದಳು . ಅದಕ್ಕಾಗಿ, ಅವಳ ಬಗ್ಗೆ ಕೃತಜ್ಞರಾಗಿರಲು ಬ್ರಹ್ಮರ್ಷಿ ಕಶ್ಯಪರು ಯಾಜ್ಞವಲ್ಕ್ಯ , ವಸಿಷ್ಠ ಮೊದಲಾದ ಬ್ರಹ್ಮರ್ಷಿ ಕುಟುಂಬದವರನ್ನು ಜೊತೆಯಲ್ಲಿ ಕರೆದು ಕೊಂಡು ಒಂದು ಯಜ್ಞವನ್ನು ಪ್ರಾರಂಭಿಸಿದರು . 

ಆಗ ಆ ಯಜ್ಞಕುಂಡದಿಂದ ಈ ಕೂಷ್ಮಾಂಡಾ ಪ್ರಕಟಳಾಗಿ ‘ಬಲಿ’ಯನ್ನು ಕೇಳಿದಳು . ಎಲ್ಲಾ ಬ್ರಹ್ಮರ್ಷಿಗಳು ಗೊಂದಲಕ್ಕೊಳಗಾದರು . ಪ್ರಾಣಿಗಳ ಬಲಿದಾನ ಮಾಡುವುದು ಅವರ ನಿಯಮಗಳಿಗೆ ಒಪ್ಪುತ್ತಿರಲಿಲ್ಲ. ಅದಕ್ಕಾಗಿ ಅವರೆಲ್ಲರೂ ಆದಿಮಾತೆ ಅನಸೂಯೆಯನ್ನು ಆಹ್ವಾನಿಸಿದರು ಮತ್ತು ಅವಳು ಕೂಡಲೇ ಅಷ್ಟಾ ದಶ ಭುಜಾ ಸ್ವರೂಪದಲ್ಲಿ ಪ್ರಕಟವಾಗಿ ತಾನೇ ಹೀಗೆ ಹೇಳಿದಳು , ‘ಈ ವಸುಂಧರೆಯ ಮೇಲಿರುವ ‘ಕೂ ಷ್ಮಾಂ ಡ’ (ಅಂದರೆ ಬೂದು ಗುಂಬಳ) ಎಂಬ ಫಲ ನನ್ನ ಮೂಲ ರೂಪಕ್ಕೆ ‘ಬಲಿ’ಯಾಗಿ ಅತ್ಯಂತ ಪ್ರಿಯವಾಗಿದೆ. ಆದ್ದರಿಂದ ನೀ ವು ಇವಳಿಗೂ ಹಿಂಜರಿಕೆಯಿಲ್ಲದೆ ಬೂದು ಗುಂಬಳವನ್ನೇ ಬಲಿ ನೀಡಿ. ನಾನು ಇಲ್ಲೇ ನಿಂತಿರುತ್ತೇನೆ.’

ಅನಸೂಯೆಯ ಮಾತಿನ ಪ್ರಕಾರ, ಬ್ರಹ್ಮರ್ಷಿ ಕಶ್ಯಪರು ಒಂದು ರಸಭರಿತ ಬೂದು ಗುಂಬಳದ ಬಲಿಯನ್ನು ಮಾತಾ ಕೂಷ್ಮಾಂಡಳಿಗೆ ನೀಡಿದರು . ಅದರ ಜೊತೆಯಲ್ಲಿಯೇ ಆ ಎಲ್ಲ ಬ್ರ ಹ್ಮರ್ಷಿಗಳಿಗೆ ಕಂಡಿತು ಮತ್ತು ಅರ್ಥವಾಯಿತು , ಆದಿಮಾತೆಯ ಪ್ರತಿಯೊಂದು ಉಗ್ರರೂಪವನ್ನೂ ಸಹ ಬೂದು ಗುಂಬಳದ ಬಲಿಯೇ ಶಾಂತಗೊಳಿಸುತ್ತದೆ ಎಂದು . ಆ ಯಜ್ಞದಿಂದ ಪ್ರಕಟವಾದ ಕೂಷ್ಮಾಂಡಳು ಆ ಕೂಷ್ಮಾಂಡ ಬಲಿಯನ್ನು ಪ್ರೀತಿಯಿಂದ ಸ್ವೀಕರಿಸಿ, ಯಜ್ಞ ಮಾಡಿದ ಎಲ್ಲರಿಗೂ ಅಭಯ ವಚನ ನೀಡಿದಳು , ‘ಆದಿಮಾತೆಯ ಮತ್ತು ನನ್ನ ಪ್ರತಿಯೊಂದು ರೂಪಕ್ಕೂ ಬೂದು ಗುಂಬಳದ ಬಲಿದಾನವೇ ಅತ್ಯುಚ್ಚವಾಗಿರುತ್ತದೆ.’

ಗೌತಮ! ಬೂದು ಗುಂಬಳದ ಕುರಿತು ಸರಿಯಾಗಿ ಅಧ್ಯಯನ ಮಾಡು . ಇದರಲ್ಲಿ ಸೂರ್ಯನ ಸುಡುವ ಶಾಖವನ್ನು ಹೀರಿಕೊಳ್ಳುವ ಅದ್ಭುತ ಗುಣವಿದೆ. 

ಯಾವುದೇ ಹೊಸ ನಿರ್ಮಾಣ ಹೇಗೆ ಪ್ರಕಾಶವಿಲ್ಲದೆ ಅಸಾಧ್ಯವೋ , ಹಾಗೆಯೇ ‘ರಸವಿಲ್ಲದೆ ಕೂಡ ಅಸಾಧ್ಯವಾಗಿದೆ ಮತ್ತು ‘ರಸ’ ಧಾತುವಿನ ಅಸ್ತಿತ್ವ ನೀರಿಲ್ಲದೆ ಅಸಾಧ್ಯವಾಗಿದೆ. ಮತ್ತು ಅದಕ್ಕಾಗಿಯೇ ಆ ಕೂಷ್ಮಾಂಡಳ ಬಲಿಯನ್ನು ಸ್ವೀಕರಿಸಿ, ನಾಲ್ಕನೇ ನವದುರ್ಗಾ ಆಗಿರುವ ಕೂಷ್ಮಾಂಡಾ ಪಾರ್ವತಿಯು ‘ಸ್ಕಂದಮಾತೆ’ ಆಗಲು ಸಿದ್ಧತೆಯನ್ನು ಪ್ರಾರಂಭಿಸಿದಳು . ತನ್ನದೇ ಸೂರ್ಯ ತೇಜಸ್ಸಿನಲ್ಲಿ ಕೂಷ್ಮಾಂಡ ರಸವನ್ನು ಬೆರೆಸಿ, ಅವಳು ಸೌಮ್ಯತೆ ಮತ್ತು ಶೀತಲತೆಯನ್ನು ಸ್ವೀಕರಿಸಿದಳು ಮತ್ತು ಅದಕ್ಕಾಗಿಯೇ ಶಿವ ಮತ್ತು ಪಾರ್ವತಿಯರ ಪುತ್ರ ‘ಸ್ಕಂದ’ನು ಜನಿಸಲು ಸಾಧ್ಯವಾಯಿತು . ಈ ಐದನೇ ನವದುರ್ಗಾ ‘ಸ್ಕಂದಮಾತೆಯೇ ಶಾಂಬವಿ ವಿದ್ಯೆಯ ಒಂಬತ್ತನೇ ಮತ್ತು ಹತ್ತನೇ ಹಂತಗಳ, ಮೆಟ್ಟಿಲುಗಳ ಅಧಿದೇವತೆ ಆಗಿದ್ದಾಳೆ. ಮತ್ತು ಇವಳೇ ನವರಾತ್ರಿಯ ಪಂಚಮಿ ತಿಥಿಯ ದಿನ-ರಾತ್ರಿಯ ನಾಯಕಿ.”

ಈಗ ಒಬ್ಬಳು ಅತ್ಯಂತ ತೇಜಸ್ವಿ, ಅಪ್ರತಿಮ ಸೌಂದರ್ಯವತಿಯಾದ ಋಷಿಕುಮಾರಿ ಅತ್ಯಂತ ವಿನಯದಿಂದ ನಿಂತು ಕೊಂಡಳು . ಅವಳು ಎದ್ದಾಗ ಬ್ರಹ್ಮವಾದಿನಿ ಪೂರ್ಣಾಹುತಿಯ ಅನುಮತಿ ಪಡೆದಿದ್ದಳು , ಇದು ಎಲ್ಲರ ಗಮನಕ್ಕೂ ಬಂದಿತ್ತು . ಆದರೆ ಇವಳು ಯಾರು ? ಇದು ಯಾರಿಗೂ ಗೊತ್ತಿರಲಿಲ್ಲ. ಆ ಯುವತಿಯನ್ನು ನೋಡಿ ಲೋಪಮುದ್ರೆ ಅತ್ಯಂತ ವಾತ್ಸಲ್ಯದಿಂದ ಕೇಳಿದರು , “ಮಗಳೇ ! ನಿನ್ನ ಪ್ರಶ್ನೆ ಏನು ?” ಅವಳು ಅರ್ಧ ಮುಚ್ಚಿದ ರೆಪ್ಪೆಗಳಿಂದಲೇ ಪ್ರಶ್ನಿಸಿದಳು , “ಎಲ್ಲಾ ಸೂರ್ಯರ ತೇಜಸ್ಸನ್ನು ಸುಲಭವಾಗಿ ಸಹಿಸಿಕೊಳ್ಳುವ ಪಾರ್ವತಿಗೆ ಶಿವನ .... (ಉಚ್ಚರಿಸದ ಶಬ್ದ - ವೀರ್ಯ ) ಮತ್ತು ಅದರಿಂದಾ ದ ಗರ್ಭ ಸಹಿಸಲಾಗಲಿಲ್ಲ, ಇದು ಹೇಗೆ ಸಾಧ್ಯ ? ಇದರ ಹಿಂದೆ ಖಂಡಿತವಾಗಿಯೂ ಯಾವುದೋ ಪವಿತ್ರ ಮತ್ತು ಅತ್ಯಂತ ಗುಪ್ತ ರಹಸ್ಯ ವಿರಬೇಕು .  

ನನಗೆ ಸದಾ ಈ ರಹಸ್ಯವನ್ನು ಹುಡುಕುವ ಇಚ್ಛೆ ಇದೆ ಮತ್ತು ಅದಕ್ಕಾಗಿ ನಾನು ಸ್ಕಂದಮಾತೆಯ ಆರಾಧನೆ ಮಾಡಬೇಕಿದೆ. ನಾನು ಯಾರ ಬಳಿಹೋಗಬೇಕು ?” ಬ್ರಹ್ಮವಾದಿನಿ ಲೋಪಮುದ್ರೆ ಅವಳನ್ನು ಹತ್ತಿರ ಕರೆದು ಅವಳ ಹಣೆಯನ್ನು ಆಘ್ರಾಣಿಸಿ ಹೀಗೆ ಹೇ ಳಿದರು , “ಓ ರಾಜರ್ಷಿ ಶಶಿಭೂಷಣ ಮತ್ತು ಬ್ರಹ್ಮವಾದಿನಿ ಪೂರ್ಣಾಹುತಿ! ನಿಮ್ಮ ಈ ಮಗಳು ನಿಜವಾಗಿಯೂ ತನ್ನ ಹೆಸರಿನಂತೆ ‘ಅ-ಹಲ್ಯಾ ’ (ನಾಶವಾಗದವಳು ) ಆಗಿದ್ದಾಳೆ.” 

ಬಾಪು ಅವರು ಮುಂದೆ ‘ತುಳಸಿಪತ್ರ - ೧೩೮೫’ 

ಸಂಪಾದಕೀಯದಲ್ಲಿ ಹೀಗೆ ಬರೆಯುತ್ತಾರೆ, ಲೋಪಮುದ್ರೆ ಅಹಲ್ಯೆಯ ಜೊತೆ ಕೆಲವು ಮಾತುಗಳನ್ನು ನಿಧಾನವಾಗಿ ಹೇಳಿ, ಅವಳನ್ನು ಮತ್ತೆ ತನ್ನ ತಾಯಿಯ ಹತ್ತಿರ ಹೋಗಿ ಕುಳಿತು ಕೊಳ್ಳಲು ಹೇಳಿದರು ಮತ್ತು ನಂತರ ಅವರು ಮುಂದೆ ಹೀಗೆ ಹೇಳತೊಡಗಿದರು , “ಈ ಅಹಲ್ಯೆ ನಿಜವಾಗಿಯೂ ಅತ್ಯಂತ ಶ್ರೇಷ್ಠ ಮತ್ತು ಪವಿತ್ರ ಇಚ್ಛೆಯನ್ನು ವ್ಯಕ್ತಪಡಿಸಿದ್ದಾಳೆ.

ನವದುರ್ಗಾ ಸ್ಕಂದಮಾತೆಯ ಉಪಾಸನೆಯನ್ನು ಸ್ತ್ರೀ ಮತ್ತು ಪುರುಷ ಇಬ್ಬರೂ ಮಾಡಬಹುದು , ವೈರಾಗಿ ಮತ್ತು ಸಂಸಾರಿ ಇಬ್ಬರೂ ಮಾಡಬಹುದು, ಶ್ರೀಮಂತ ಮತ್ತು ಬಡವ ಇಬ್ಬರೂ ಮಾಡಬಹುದು, ಜ್ಞಾನಿ ಮತ್ತು ಅಜ್ಞಾನಿ ಇಬ್ಬರೂ ಮಾಡಬಹುದು , ಇದರಲ್ಲಿ ಪ್ರಶ್ನೆಯೇ ಇಲ್ಲ. 

ಏಕೆಂದರೆ ಈ ನವದುರ್ಗಾ ಸ್ಕಂದಮಾತೆಯು ತನ್ನ ಪುತ್ರರಿಗೆ ಮತ್ತು ಪುತ್ರಿಯರಿಗೆ ಪರಾಕ್ರಮ, ಶೌರ್ಯ, ರಣವಿವೇಕ ಮತ್ತು ಆಕ್ರಮಣಶೀಲತೆ ಈ ಗುಣಗಳ ಜೊತೆಗೆ, ಸೂಕ್ತ ಸ್ಥಳದಲ್ಲಿ ಕ್ಷಮೆ ಮತ್ತು ಕಷ್ಟಗಳನ್ನು ಸಂತೋಷದಿಂದ ಸಹಿಸುವ ಸಾಮರ್ಥ್ಯವನ್ನು ನೀಡುತ್ತಾಳೆ. ಮತ್ತು ಈ ಎಲ್ಲಾ ಗುಣಗಳಿಂದಲೇ ಈ ವಸುಂಧರೆಯ ಮೇಲೆ ಅನೇಕ ಪವಿತ್ರ ಮತ್ತು ಪರಾಕ್ರಮಿ ರಾಜರು ಹುಟ್ಟಿದರು . 

ಅಂತೆಯೇ, ಭಾರತವರ್ಷದಲ್ಲಿ ಯಾವಾಗ ಸನಾತನ ಧರ್ಮದ ಅವನತಿ ಪ್ರಾರಂಭವಾಗುತ್ತದೋ ಮತ್ತು ಅದಕ್ಕೆ ಕಾರಣ ‘ಕೆಟ್ಟ ಮಾರ್ಗದವರ ಆಕ್ರಮಣ’ ಆಗಿರುತ್ತದೋ , ಆಗ ಈ ನವದುರ್ಗಾ ಸ್ಕಂದಮಾತೆಯೇ ತನ್ನ ಕೆಲವು ಉತ್ತಮ ಭಕ್ತರಿಗೆ ಮೇಲಿನ ಎಲ್ಲಾ ಗುಣಗಳನ್ನು ಒದಗಿಸುತ್ತಾಳೆ ಮತ್ತು ಸನಾತನ ವೈದಿಕ ಧರ್ಮವನ್ನು ಮತ್ತೆ ಅತ್ಯುಚ್ಚ ಸ್ಥಾನಕ್ಕೆ ತಲುಪಿಸುತ್ತಾ ಳೆ.

ಇಲ್ಲಿಯವರೆಗೆ ಇವಳ ಸಾಧನೆಯನ್ನು ಯಾವಾಗ ಮಾಡಲಾಗಿದೆಯೋ , ಆಗಲೆಲ್ಲಾ ಭಾರತವರ್ಷದಲ್ಲಿ ಸ್ಕಂದ ಕಾರ್ತಿಕೇಯ ನಂತಹ ಉತ್ತಮ ಸೇನಾ ಪತಿಗಳು ನಿರ್ಮಾಣವಾಗಿದ್ದಾರೆ. ಈಗ ಭಂಡಾಸುರನ ರೂಪದಲ್ಲಿ ಶ್ಯೇನ ಪ್ರದೇಶದಲ್ಲಿ (ಚೀನಾ ) ಅಂತಹ ಭಾರತ ವಿರೋಧಿ ಅಸುರರ ಉದಯವಾಗಿದೆ ಮತ್ತು ಅದಕ್ಕಾಗಿ, ಓ ಅಹಲ್ಯೆ ! ನಿನ್ನ ಅಧ್ಯಯನ ಮತ್ತು ಸಾಧನೆಯಿಂದ ಭಂಡಾಸುರನ ವಧೆಗಾಗಿ ಸೂಕ್ತ ಮತ್ತು ಪೋಷಕ ವಾತಾವರಣ ಖಂಡಿತವಾಗಿಯೂ ನಿರ್ಮಾಣವಾಗುತ್ತದೆ. 

ಶಾಂಬವಿ ವಿದ್ಯೆಯ ಒಂಬತ್ತನೇ ಮತ್ತು ಹತ್ತನೇ ಹಂತದಲ್ಲಿ, ಆಧ್ಯಾತ್ಮಿಕ ಸಾಧನೆಯಲ್ಲಿ ಮತ್ತು ಸಂಸಾರದಲ್ಲಿಯೂ ಅನೇಕ ವಿಕಾಸ ವಿರೋಧಿಗಳ, ಅಂದರೆ ಪ್ರಗತಿ ವಿರೋಧಿಗಳ ಜೊತೆ ಭಾರಿ ಹೋರಾಟ ನಡೆಸಬೇಕಾಗುತ್ತದೆ ಮತ್ತು ಅದಕ್ಕಾಗಿ ಆಸುರಿ ವೃತ್ತಿಗಳ ಜೊತೆ ಹೋರಾಡಲು ಕಲಿಯುವುದು ಅತ್ಯಂತ ಅವಶ್ಯಕವಾಗಿದೆ. ಏಕೆಂದರೆ ಆಸುರಿ ವೃತ್ತಿಗಳು ಈ ವೃತ್ರಾಸುರನ ರಣಹದ್ದುಗಳ ಮೂಲಕ ಮಾನವನ ಮನಸ್ಸಿನಲ್ಲಿ ಪ್ರವೇಶಿಸಿ ವಸುಂಧರೆಯ ಮೇಲಿನ ಆಸುರಿ ಬಲವನ್ನು ಹೆಚ್ಚಿಸುತ್ತಾ ಹೋಗುತ್ತವೆ. ಮತ್ತು ಸ್ಕಂದ ಕಾರ್ತಿಕೇಯನು ಮನುಷ್ಯನ ಮನಸ್ಸಿನಲ್ಲಿರುವ ಅಂತಹ ಆಸುರಿ ವೃತ್ತಿಗಳನ್ನು ಸಂಪೂರ್ಣವಾಗಿ ನಾಶ ಮಾಡುವ ಕೆಲಸವನ್ನು ಮಾಡುತ್ತಾನೆ. 

ಮತ್ತು ಅದಕ್ಕಾಗಿ ಅವನಿಗೆ ತನ್ನದೇ ಆದ ಸಾಧನೆಯ ಅವಶ್ಯಕತೆಯಿರುವುದಿಲ್ಲ, ಬದಲಾಗಿ ನವರಾತ್ರಿ ಸಾಧನೆಯ ಮತ್ತು ಆದಿಮಾತೆಯ ಜ್ಞಾನ ರಸದಿಂದ ಮಾಡಿದ ಮತ್ತು ಶೌರ್ಯ ರಸದಿಂದ ಗಟ್ಟಿಯಾದ ಸ್ವರೂಪದ ಸಾಧನೆಯ ಅವಶ್ಯಕತೆಯಿರುತ್ತದೆ. ಮತ್ತು ಆದಿಮಾತೆಯ ಈ ಸ್ವರೂಪವನ್ನು ‘ಶ್ರೀ ಲಲಿತಾಂಬಿಕಾ ’ ಎಂದು ಕರೆಯುತ್ತಾರೆ. 

ಪುತ್ರ ಸ್ಕಂದನಿಗೆ ಮೊದಲ ಬಾರಿಗೆ ಎದೆ ಹಾಲುಣಿಸುವಾಗಲೇ ಈ ನವದುರ್ಗಾ ಸ್ಕಂದಮಾತೆಯು ‘ಲಲಿತಾ ಸಹಸ್ರನಾಮ’ವನ್ನು ಮೊದಲ ಬಾರಿಗೆ ಉಚ್ಚರಿಸಿದಳು ಮತ್ತು ಅದಕ್ಕಾಗಿಯೇ ಲಲಿತಾ ಸಹಸ್ರನಾಮದ ಪಠಣ, ಅಧ್ಯಯನ, ಚಿಂತನೆ ಮತ್ತು ಮನನವೇ ಶಾಂಬವಿ ವಿದ್ಯೆಯ ಒಂಬತ್ತನೇ ಮತ್ತು ಹತ್ತನೇ ಹಂತದ ಪ್ರಮುಖ ಸಾಧನೆಯಾಗಿದೆ.

ಓ ಮಗಳೇ ಅಹಲ್ಯೆ ! ಭಗವಾನ್ ಹಯಗ್ರೀವರು ತಾವೇ ಈಗ ತಾನೇ ಮಾರ್ಕಂಡೇಯ ಋಷಿಗೆ ಈ ಲಲಿತಾ ಸಹಸ್ರನಾಮವನ್ನು ಕಲಿಸಿದ್ದಾರೆ. ನೀನು ಬ್ರಹ್ಮರ್ಷಿ ಮಾರ್ಕಂಡೇಯರ ಬಳಿ ಹೋಗಿ ಅವರ ಶಿಷ್ಯೆಯಾಗು ಮತ್ತು ಲಲಿತಾ ಸಹಸ್ರನಾಮದ ಸಾಧಕಿಯಾಗು ಮತ್ತು ‘ವಜ್ರಾದಪಿ ಕಠೋರಾಣಿ’, ‘ಮೃದೂನಿ ಕುಸುಮಾದಪಿ’ ಎಂಬ ಸಿದ್ಧಿಯನ್ನು ಪಡೆದು ಕೋ . ಏಕೆಂದರೆ ಈ ತತ್ತ್ವದಿಂದಲೇ ನವದುರ್ಗಾ ಸ್ಕಂದಮಾತೆಯು ತುಂಬಿ ಹರಿಯುತ್ತಿರುತ್ತಾಳೆ. ಓ ಶುದ್ಧಬುದ್ಧಿ ಗೌತಮ! ನೀನು ಇವಳ ಜೊತೆಯಲ್ಲೇ ಬ್ರಹ್ಮರ್ಷಿ ಮಾರ್ಕಂಡೇಯರ ಆಶ್ರಮಕ್ಕೆ ಹೋಗಬೇ ಕು , ಎಂಬುದು ನನ್ನ ಸಲಹೆಯಾಗಿದೆ.”

ಲೋಪಮುದ್ರೆಯ ಈ ಸಲಹೆಯನ್ನು ಕೇಳಿ ರಾಜರ್ಷಿ ಶಶಿಭೂಷಣರು ಮಗಳ ಬಗ್ಗೆ ಚಿಂತೆಯಿಂದ ಸ್ವಲ್ಪ ಆತಂಕಿತರಾದರು - ಮದುವೆಯಾಗದ ಮತ್ತು ಯುವತಿಯಾದ ಮಗಳನ್ನು ಅದೇ ರೀತಿ ಮದುವೆಯಾಗದ ಮತ್ತು ಯುವಕನಾದ ಋಷಿಕುಮಾರನ ಜೊತೆ ದೂರದ ಪ್ರಯಾಣಕ್ಕೆ ಕಳುಹಿಸುವುದು ಅವರಿಗೆ ಸರಿಯೆನಿಸಲಿಲ್ಲ. ಆದರೆ ಬ್ರ ಹ್ಮವಾದಿನಿ ಪೂರ್ಣಾಹುತಿ ಮಾತ್ರ ಅತ್ಯಂತ ಸಂತೋಷವಾಗಿದ್ದರು .

ಶಶಿಭೂಷಣರು ತಮ್ಮ ಪತ್ನಿಯ ಕಿವಿಯಲ್ಲಿ ತಮ್ಮ ಮನಸ್ಸಿನ ಮೇಲಿನ ಶಂಕೆಯನ್ನು ಹೇಳಿದಾಗ, ಅವರು ಮುಗುಳು  ನಗುತ್ತಾ ಅವರ ಕಿವಿಯಲ್ಲಿ ಹೇಳಿದರು , “ನೀವು ಕೇವಲ ಒಂದು ಶಬ್ದವನ್ನು ಮರೆತು ಬಿಟ್ಟಿದ್ದೀರಿ - ‘ಅನುರೂಪ’ - ಪರಸ್ಪರರಿಗೆ ಅನುಗುಣವಾದವರು .”

ಬ್ರಹ್ಮವಾದಿನಿ ಲೋಪಮುದ್ರೆ ಇದೆಲ್ಲವನ್ನೂ ನೋಡುತ್ತಿದ್ದರು ಮತ್ತು ತಿಳಿಯುತ್ತಿದ್ದರು . ಅವರು ಋಷಿ ಗೌತಮರನ್ನು ಮತ್ತು ಋಷಿಕನ್ಯೆ ಅಹಲ್ಯೆಯನ್ನು ತಮ್ಮ ಹತ್ತಿರ ಕರೆದರು ಮತ್ತು ಗೌತಮರ ಪೋಷಕ ತಂದೆ ಕಶ್ಯಪರನ್ನು ಮತ್ತು ಅಹಲ್ಯೆಯ ತಂದೆ-ತಾಯಿಯರನ್ನೂ ಕರೆದರು . ಅವರೆಲ್ಲರೂ ಸಮ್ಮತಿಸಿದರು ಮತ್ತು ಕೈಲಾಸದಲ್ಲಿ ಆನಂದೋತ್ಸವ ಹರಡಿತು , ಏಕೆಂದರೆ ಅಲ್ಲಿನ ಪ್ರತಿಯೊಬ್ಬರಿಗೂ ಈ

ದಂಪತಿಯ ಹೊಂದಾಣಿಕೆ ಸಂಪೂರ್ಣವಾಗಿ ಒಪ್ಪಿಗೆಯಾಗಿತ್ತು ಮತ್ತು ಇಷ್ಟವಾಗಿತ್ತು . ಸ್ವತಃ ಬ್ರಹ್ಮರ್ಷಿ ವಸಿಷ್ಠ ಮತ್ತು ಬ್ರಹ್ಮವಾದಿನಿ ಅರುಂಧತಿಯು ಸಮಾರಂಭದ ಜವಾಬ್ದಾರಿಯನ್ನು ವಹಿಸಿಕೊಂಡರು .

ಗೌ ತಮರು ಅಹಲ್ಯೆಯ ಕೈ ಹಿಡಿದು ಅವಳೊಂದಿಗೆ ತಕ್ಷಣವೇ ಬ್ರಹ್ಮರ್ಷಿ ಮಾರ್ಕಂಡೇಯರ ಆಶ್ರಮದ ಕಡೆಗೆ ಹೊರಟರು . 

ಅಲ್ಲಿನ ಪ್ರತಿಯೊಬ್ಬರಿಗೂ ಅನಿಸುತ್ತಿತ್ತು , ಈ ಹೊಸದಾಗಿ ಮದುವೆಯಾದ ದಂಪತಿಗೆ ಮದುವೆಯ ನಂತರ ಸ್ವಲ್ಪ ಸಮಯವಾದರೂ ಯಾವುದೇ ಕಷ್ಟವಿಲ್ಲದೆ ಮತ್ತು ಸುಖ-ಸೌಕರ್ಯಗಳಿಂದ ಇರಲು ಸಿಗಲಿ ಎಂದು . ಅವರೆಲ್ಲರ ಮನಸ್ಸಿನಲ್ಲಿರುವ ಈ ಭಾವನೆಯನ್ನು ತಿಳಿದ ಭಗವಾನ್ ಹಯಗ್ರೀವರು ಸ್ವತಃ ಅಲ್ಲಿ ಪ್ರಕಟರಾಗಿ, ಆದಿಮಾತೆಗೆ ನಮಸ್ಕರಿಸಿ ಹೀಗೆ ಹೇಳಿದರು , “ಓ ಆದಿಮಾತೆ! ನಾನು ಈ ಹೊಸದಾಗಿ ಮದುವೆಯಾದ ದಂಪತಿಯನ್ನು ನನ್ನ ಬೆನ್ನ ಮೇಲೆ ಕುಳ್ಳಿರಿಸಿಕೊಂಡು ಒಂದು ಕ್ಷಣದಲ್ಲಿ ಮಾರ್ಕಂಡೇಯರ ಆಶ್ರಮಕ್ಕೆ ಕರೆದು ಕೊಂಡು ಹೋಗಬಲ್ಲೆ. ಇದರಿಂದ ಅವರಿಗೆ ತಮ್ಮ ೨९ ದಿನಗಳ ಪ್ರಯಾಣದ ಸಮಯ ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸಲು ಸಿಗುತ್ತದೆ.”

ಆದಿಮಾತೆಯು ಸಂತೋಷದಿಂದ ಹಯಗ್ರೀವರಿಗೆ ಅನುಮತಿ ನೀಡಿದಳು . ಹಯಗ್ರೀವರು ಗೌತಮ ಮತ್ತು ಅಹಲ್ಯೆಯನ್ನು ತಮ್ಮ ಹೆಗಲ ಮೇಲೆ ತೆಗೆದುಕೊಂಡು , ಕೈ ಜೋಡಿಸಿ ಆದಿಮಾತೆಯ ಬಳಿ ಪ್ರಶ್ನಿಸಿದರು , “ಓ ಆದಿಮಾತೆ! ಎಲ್ಲಾ ಬ್ರಹ್ಮರ್ಷಿ ಮತ್ತು ಮಹರ್ಷಿಗಳು ಇಲ್ಲಿ ಸೇರಿರುವಾಗ, ಒಬ್ಬಂಟಿ ಮಾರ್ಕಂಡೇಯ ಮಾತ್ರ ಇನ್ನೂ ತನ್ನ ಆಶ್ರಮದಲ್ಲಿ ಏಕೆ ಕುಳಿತು ಕೊಂಡಿದ್ದಾರೆ?” ಆದಿಮಾತೆ ಶ್ರೀ ವಿದ್ಯಾ ಉತ್ತರಿಸಿದರು , “ನವಬ್ರಹ್ಮರ್ಷಿ ಮಾರ್ಕಂಡೇಯರು ನಿನ್ನ ಆಗಮನಕ್ಕಾಗಿ ಕಾಯುತ್ತಿದ್ದಾರೆ.”