![]() |
ಸಂದರ್ಭ - ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ ‘ಪ್ರತ್ಯಕ್ಷ’ದಲ್ಲಿನ ‘ತುಳಸಿಪತ್ರ’ ಎಂಬ ಸಂಪಾದಕೀಯ ಮಾಲಿಕೆಯ ಸಂಪಾದಕೀಯ ಸಂಖ್ಯೆ ೧೩೮೬ ಮತ್ತು ೧೩೮೭ |
ಸದ್ಗುರು ಶ್ರೀಅನಿರುದ್ಧ ಬಾಪೂ ಅವರು ತಮ್ಮ ದೈನಿಕ 'ಪ್ರತ್ಯಕ್ಷ'ದಲ್ಲಿನ 'ತುಳಸಿಪತ್ರ'ದ ೧೩೮೬ನೇ ಲೇಖನದಲ್ಲಿ ಹೀಗೆ ಬರೆಯುತ್ತಾರೆ.
ಭಗವಾನ್ ಹಯಗ್ರೀವ ಆ ಹೊಸದಾಗಿ ಮದುವೆಯಾದ ದಂಪತಿಯ ಜೊತೆ ಮಾರ್ಕಂಡೇಯರ ಆಶ್ರಮದ ಕಡೆ ಹೊರಟಾಗ ರಾಜರ್ಷಿ ಶಶಿಭೂಷಣರು ಅತ್ಯಂತ ವಿನಮ್ರವಾಗಿ ಲೋಪಮುದ್ರೆಯನ್ನು ಕೇಳಿದರು, “ಹಿರಿಯ ಬ್ರಹ್ಮವಾದಿನಿ, ಈಗ ಒಂದು ತಿಂಗಳವರೆಗೆ, ಬಹುಶಃ ಅದಕ್ಕಿಂತ ಹೆಚ್ಚು ಸಮಯದವರೆಗೆ ಗೌತಮ ಮತ್ತು ಅಹಲ್ಯ ಇಲ್ಲಿ ಇರುವುದಿಲ್ಲ. ಹಾಗಾಗಿ ನೀನು ಮುಂದೆ ಏನು ಕಲಿಸುತ್ತೀಯೋ ಅದರಿಂದ ಅವರಿಗೆ ವಂಚನೆಯಾಗುತ್ತಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ನೀನು ನ್ಯಾಯಪರಳೆಂದು ತಿಳಿದೇ ನಾನು ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ.”
ಲೋಪಮುದ್ರೆ ಅತ್ಯಂತ ಮೃದುವಾಗಿ ಉತ್ತರ ನೀಡಿದರು, “ಮಗಳನ್ನು ಆಕೆಯ ಪತಿಯ ಜೊತೆ ಕಳುಹಿಸುತ್ತಿರುವ ತಂದೆಯ ಭಾವನೆ ನಿನ್ನ ಕಣ್ಣುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಮತ್ತು ನಿನ್ನ ಈ ವಾತ್ಸಲ್ಯ ಭಾವಕ್ಕೆ ಬೆಲೆ ಕೊಟ್ಟು ನಿನಗೆ ಹೇಳುತ್ತೇನೆ - ೧) ಒಂದು, ಇವರಿಬ್ಬರೂ ಮಾರ್ಕಂಡೇಯರಿಂದ ಶ್ರೀಶಾಂಭವಿ ವಿದ್ಯೆಯ ಒಂಬತ್ತನೇ ಮತ್ತು ಹತ್ತನೇ ಮೆಟ್ಟಿಲುಗಳನ್ನು ವಿಸ್ತಾರವಾಗಿ ಮತ್ತು ಆಳವಾಗಿ ಕಲಿಯಲಿದ್ದಾರೆ. ಇದರ ನಂತರದ ಎಲ್ಲಾ ವಿದ್ಯೆಯೂ ಅವರಿಗೆ ಅಲ್ಲಿಯೇ ದೊರೆಯಲಿದೆ ಮತ್ತು ಸರಿಯಾದ ಸಮಯದಲ್ಲಿ ಅವರು ಇಲ್ಲಿಗೆ ಹಿಂತಿರುಗುತ್ತಾರೆ. ೨) ನೀನು ಅತ್ಯಂತ ಮುಖ್ಯವಾದ ವಿಷಯವನ್ನು ಮರೆತಿದ್ದೀಯ ಮತ್ತು ಅದು ನಿನ್ನ ವಾತ್ಸಲ್ಯದಿಂದಲೇ, ಅದಕ್ಕಾಗಿಯೇ ನಿನಗೆ ನೆನಪಿಸುತ್ತೇನೆ - ಕೈಲಾಸದಲ್ಲಿ ಯಾವಾಗಲೂ ಶಾಶ್ವತ ಸಮಯವೇ ಇರುತ್ತದೆ. ಇಲ್ಲಿ ಕಾಲಕ್ಕೆ ಸ್ಥಾನವಿಲ್ಲ.”
ರಾಜರ್ಷಿ ಶಶಿಭೂಷಣರು ಆನಂದದಿಂದ ಮತ್ತು ಭಾವತುಂಬಿದ ಧ್ವನಿಯಲ್ಲಿ ಲೋಪಮುದ್ರೆಗೆ ಕೃತಜ್ಞತೆ ಸಲ್ಲಿಸಿ, ಅತ್ಯಂತ ಶಾಂತಚಿತ್ತರಾಗಿ ಮತ್ತೊಮ್ಮೆ ಏಕಚಿತ್ತ ಸಾಧಕರಾಗಿ ಅಧ್ಯಯನಕ್ಕೆ ಕುಳಿತರು.
![]() |
ಆದಿಮಾತಾ ಮಹಿಷಾಸುರಮರ್ದಿನಿಯಾ ಪೂಜನೆ |
ಲೋಪಮುದ್ರೆ ಈಗ ಮತ್ತೆ ಮಾತನಾಡಲು ಪ್ರಾರಂಭಿಸಿದರು, “ಒಂಬತ್ತನೇ ಮತ್ತು ಹತ್ತನೇ ಮೆಟ್ಟಿಲಿನಲ್ಲಿ ಅತ್ಯಂತ ಮುಖ್ಯವಾದ ‘ಶ್ರೀಲಲಿತಾ ಸಹಸ್ರನಾಮ'ವನ್ನು ನೀವೆಲ್ಲರೂ ಕಲಿಯಬೇಕು. ಅದು ಕೇವಲ ಬಾಯಿಪಾಠ ಮಾಡುವುದರಿಂದ ಅಥವಾ ಪದೇ ಪದೇ ಜಪ ಮಾಡುವುದರಿಂದ ಆಗುವ ನಿಜವಾದ ಸಾಧನೆಯಲ್ಲ. ಏಕೆಂದರೆ ಶ್ರೀಲಲಿತಾ ಸಹಸ್ರನಾಮದಲ್ಲಿನ ಪ್ರತಿಯೊಂದು ನಾಮವೂ ಸಹಸ್ರಾರ ಚಕ್ರದ ಒಂದು ಅಥವಾ ಅನೇಕ ದಳಗಳನ್ನು ಸಚೇತನಗೊಳಿಸುವ ಮತ್ತು ರಸವನ್ನು ಒದಗಿಸುವ ರಸವಾಹಿನಿಯಾಗಿದೆ. ಇಲ್ಲಿ ಕುಳಿತಿರುವ ಪ್ರತಿಯೊಬ್ಬ ಬ್ರಹ್ಮರ್ಷಿ ಮತ್ತು ಬ್ರಹ್ಮವಾದಿನಿಯು ಈ ಪದವಿಯನ್ನು ಆಗಲೇ ತಲುಪಿದ್ದಾರೆ, ಯಾವಾಗ ಈ ಲಲಿತಾ ಸಹಸ್ರನಾಮ ಮತ್ತು ಅವರ ಸಹಸ್ರಾರ ಚಕ್ರದ ನಡುವೆ ವಿಶಿಷ್ಟ ಸಂಬಂಧ ಏರ್ಪಟ್ಟಿದೆಯೋ ಆಗ. ಅಂದರೆ, ಮಾನವನ ಸಹಸ್ರಾರ ಚಕ್ರದ ಒಂದೊಂದು ದಳವು ಲಲಿತಾ ಸಹಸ್ರನಾಮದ ಒಂದೊಂದು ನಾಮದಿಂದ ತುಂಬಿ ಸಂಪೂರ್ಣವಾಗಿ ಭಾರವಾಗುತ್ತದೆಯೋ, ಆಗಲೇ ಬ್ರಹ್ಮರ್ಷಿ ಮತ್ತು ಬ್ರಹ್ಮವಾದಿನಿಯ ಜನನವಾಗುತ್ತದೆ.
ಹಾಗಾದರೆ ಉಳಿದವರ ಗತಿಯೇನು? ಈ ಪ್ರಶ್ನೆ ನಿಮಗೆ ಮೂಡಬಹುದು, ಅಥವಾ ಮೂಡಲೇಬೇಕು. ಏಕೆಂದರೆ ಪ್ರಶ್ನೆಯಿಲ್ಲದೆ ಪ್ರಯತ್ನವಿಲ್ಲ, ಪ್ರಯತ್ನವಿಲ್ಲದೆ ಉತ್ತರವಿಲ್ಲ ಮತ್ತು ಉತ್ತರವಿಲ್ಲದೆ ಪ್ರಗತಿಯಿಲ್ಲ. ಶ್ರೀಶಾಂಭವಿ ವಿದ್ಯೆಯ ಒಂಬತ್ತನೇ ಮತ್ತು ಹತ್ತನೇ ಮೆಟ್ಟಿಲು ಪ್ರತಿಯೊಬ್ಬನ ತನ್ನೊಳಗಿನ ಅಸುರೀ ಪ್ರವೃತ್ತಿಯ ಜೊತೆಗಿನ ಯುದ್ಧವೇ ಆಗಿದೆ. ಯಾವುದೇ ಯುದ್ಧವು ಲಲಿತಾ ಸಹಸ್ರನಾಮವಿಲ್ಲದೆ ವಿಜಯಿಯಾಗಲು ಸಾಧ್ಯವಿಲ್ಲ. ಲಲಿತಾ ಸಹಸ್ರನಾಮದ ಬೆಂಬಲ ಮತ್ತು ಆಧಾರದಿಂದ ಹೋರಾಡುವ ಪಕ್ಷವು ದೇವಯಾನ ಪಂಥದ್ದು ಮತ್ತು ಅವರಿಗೆ ಶುದ್ಧ ವಿಜಯ ಸಿಗುತ್ತದೆ. ಎರಡೂ ಪಕ್ಷಗಳು ಲಲಿತಾ ಸಹಸ್ರನಾಮದ ಆಧಾರದಿಂದ ಹೋರಾಡುತ್ತಿದ್ದರೆ, ಸ್ವತಃ ಲಲಿತಾಂಬಿಕೆಯೇ ಆ ಯುದ್ಧದಲ್ಲಿ ಹಸ್ತಕ್ಷೇಪ ಮಾಡಿ ಆ ಎರಡು ಪಕ್ಷಗಳಲ್ಲಿ ಸಾಮರಸ್ಯವನ್ನು ಏರ್ಪಡಿಸುತ್ತಾಳೆ. ಏಕೆಂದರೆ ‘ಲಲಿತಾಂಬಿಕಾ' ರೂಪವು ಯುದ್ಧಕರ್ತ್ರಿಯೂ ಹೌದು ಮತ್ತು ಶಾಂತಿಕರ್ತ್ರಿಯೂ ಹೌದು. ಅದಕ್ಕಾಗಿಯೇ ಲಲಿತಾಂಬಿಕೆಯ ಧನುಸ್ಸು ಯಾವುದೇ ಲೋಹದಿಂದ ಮಾಡಿದ್ದಲ್ಲ, ಬದಲಾಗಿ ಯಾವಾಗಲೂ ಹೊಸದಾಗಿರುವ ಕಬ್ಬಿನದ್ದಾಗಿದೆ ಮತ್ತು ಆಕೆಯ ಬಾಣಗಳು ಕಮಲದ ದಂಟು ಮತ್ತು ಕಮಲದ ಮೊಗ್ಗುಗಳಿಂದಲೇ ಮಾಡಲ್ಪಟ್ಟಿವೆ.
![]() |
ಶ್ರೀಯಂತ್ರದ ಆರತಿ ಮಾಡುವಾಗ ಸದ್ಗುರು ಶ್ರೀ ಅನಿರುದ್ಧ ಬಾಪೂ |
ನವದುರ್ಗಾ ಸ್ಕಂದಮಾತೆ ಈ ಲಲಿತಾ ಸಹಸ್ರನಾಮದ ಅಧ್ಯಯನದ ಮಾರ್ಗದರ್ಶಕಳು ಮತ್ತು ಭಗವಾನ್ ಹಯಗ್ರೀವನು ಈ ಸಹಸ್ರನಾಮವನ್ನು ಯಾವಾಗಲೂ ಹಾಡುತ್ತಿರುತ್ತಾನೆ. ಭಗವಾನ್ ಸ್ಕಂದನ ಜನನದ ನಂತರ ಸರಿಯಾಗಿ ಒಂದು ವರ್ಷದ ಬಳಿಕ ಈ ಸ್ಕಂದಮಾತೆ ಪಾರ್ವತಿ ಲಲಿತಾ ಸಹಸ್ರನಾಮದ ಪಠಣದಲ್ಲಿ ಧ್ಯಾನಸ್ಥಳಾಗಿ ಎಷ್ಟು ಮುಳುಗಿ ಹೋದಳೆಂದರೆ ಅವಳಿಗೆ ಬೇರೆ ಯಾವುದೇ ಪ್ರಜ್ಞೆ ಉಳಿಯಲಿಲ್ಲ. ಆ ಒಂದು ವರ್ಷದ ಮಗು ಸ್ಕಂದ ಅಂದರೆ ಕುಮಾರ, ಆಡುತ್ತಾ ಆಡುತ್ತಾ ಹಿಮಾಲಯದ ಮಣಿಶಿಖರಕ್ಕೆ (ಎವರೆಸ್ಟ್) ಹೋಗಿ ತಲುಪಿದ ಮತ್ತು ಅಲ್ಲಿಂದ ಕೆಳಗೆ ಹಾರಲು ನೋಡುತ್ತಿದ್ದ. ಆಗ ಯಾವಾಗಲೂ ಜಾಗೃತರಾಗಿರುವ ಲಲಿತಾಂಬಿಕೆಯು ತಕ್ಷಣವೇ ಮಣಿಶಿಖರಕ್ಕೆ ಬಂದು, ಕೆಳಗೆ ಬೀಳುತ್ತಿದ್ದ ಕುಮಾರ ಕಾರ್ತಿಕೇಯನ ಬಲಗೈಯನ್ನು ಗಟ್ಟಿಯಾಗಿ ಹಿಡಿದರು. ಸರಿಯಾಗಿ ಅದೇ ಸಮಯದಲ್ಲಿ ಆಂತರಿಕ ವಾತ್ಸಲ್ಯದಿಂದ ಜಾಗೃತಗೊಂಡ ಸ್ಕಂದಮಾತೆ ಪಾರ್ವತಿಯೂ ತನ್ನ ಸ್ಥಾನದಿಂದ ಮಣಿಶಿಖರದ ಕಡೆ ಓಡುತ್ತಾ ಹತ್ತಿದಳು ಮತ್ತು ಕೆಳಗೆ ಬೀಳುತ್ತಿದ್ದ ಕುಮಾರ ಕಾರ್ತಿಕೇಯನ ಎಡಗೈಯನ್ನು ಹಿಡಿದಳು.
ಆ ಇಬ್ಬರ ಮನಸ್ಸಿನಲ್ಲಿ ಪರಸ್ಪರರ ಬಗ್ಗೆ ಅತ್ಯಂತ ಕೃತಜ್ಞತೆಯ ಭಾವವಿತ್ತು ಮತ್ತು ಮುಂದೆ ದೇವಸೇನಾಪತಿಯಾಗುವ ಕುಮಾರ ಕಾರ್ತಿಕೇಯನ ಮೇಲೆ ಅಪಾರ ವಾತ್ಸಲ್ಯವಿತ್ತು. ಸ್ಕಂದಮಾತೆ ಪಾರ್ವತಿಯ ಲಲಿತಾ ಸಹಸ್ರನಾಮದ ಪಠಣವು, ಅವಳು ಜಾಗೃತಗೊಂಡ ನಂತರ, ಓಡುತ್ತಾ ಶಿಖರ ಹತ್ತುತ್ತಿರುವಾಗ ಮತ್ತು ಕಾರ್ತಿಕೇಯನನ್ನು ಹಿಡಿದ ನಂತರವೂ ಮುಂದುವರೆಯಿತು. ಇದರಿಂದ ಲಲಿತಾಂಬಿಕೆ ಅತ್ಯಂತ ಪ್ರಸನ್ನಳಾದಳು. ಈಗ ಸ್ಕಂದನ ಆರೂ ಮುಖಗಳಿಗೆ ಒಂದೇ ಸಮಯದಲ್ಲಿ ಹಸಿವಾಯಿತು ಮತ್ತು ಅದನ್ನು ಅರಿತು ಆ ಇಬ್ಬರಿಗೂ ಒಂದೇ ಸಮಯದಲ್ಲಿ ಹಾಲು ತುಂಬಿ ಬಂತು. ಸ್ಕಂದ ಕಾರ್ತಿಕೇಯನು ಆ ಇಬ್ಬರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಮತ್ತು ಆ ಇಬ್ಬರ ಸ್ತನಪಾನ ಮಾಡುತ್ತಿದ್ದ. ಮತ್ತು ಸಂಪೂರ್ಣ ಸ್ತನಪಾನದ ನಂತರ ಆರೂ ಮುಖಗಳಿಂದ ತೇಗುಗಳು ಹೊರಬಂದವು - ಆ ತೇಗುಗಳು ಸಾಮಾನ್ಯ ತೇಗುಗಳಾಗಿರಲಿಲ್ಲ, ಬದಲಾಗಿ ಶ್ರೀಲಲಿತಾ ಸಹಸ್ರನಾಮದ ಸಹಜ ಮತ್ತು ಸ್ವಾಭಾವಿಕ ಉಚ್ಚಾರಣೆಗಳಾಗಿದ್ದವು. ಇದರಿಂದ ಆ ಕ್ಷಣಕ್ಕೆ ಲಲಿತಾಂಬಿಕೆ ಮತ್ತು ಸ್ಕಂದಮಾತೆ ಪಾರ್ವತಿ ಒಂದಾದರು. ಮತ್ತು ನಂತರ, ಯಾವ ರೀತಿ ‘ಶ್ರೀಯಂತ್ರ’ವು ಲಕ್ಷ್ಮೀ ಮತ್ತು ಮಹಾಲಕ್ಷ್ಮೀಯರ ಒಂದುಗೂಡಿದ ಸ್ಥಾನವಾಗಿದೆಯೋ ಮತ್ತು ‘ಶ್ರೀಸೂಕ್ತ’ವು ಲಕ್ಷ್ಮೀ ಮತ್ತು ಮಹಾಲಕ್ಷ್ಮೀಯರ ಒಂದುಗೂಡಿದ ಸ್ತೋತ್ರವಾಗಿದೆಯೋ, ಅದೇ ರೀತಿ ‘ಶ್ರೀಲಲಿತಾ ಸಹಸ್ರನಾಮ’ವು ಪಾರ್ವತಿ ಮತ್ತು ಲಲಿತಾಂಬಿಕೆಯ ಒಂದುಗೂಡಿದ ಸ್ತೋತ್ರವಾಯಿತು ಮತ್ತು ‘ಶಾಂಭವಿವಿದ್ಯಾ’ ಇಬ್ಬರ ಒಂದುಗೂಡಿದ ಸ್ಥಾನವಾಯಿತು.
ಬಾಪೂ ಮುಂದೆ ತುಳಸಿಪತ್ರ - ೧೩೮೭ನೇ ಲೇಖನದಲ್ಲಿ ಹೀಗೆ ಬರೆಯುತ್ತಾರೆ.
ಇವೆಲ್ಲಾ ಕಥೆಗಳನ್ನು ಕೇಳುತ್ತಾ ಅಲ್ಲೇ ಕುಳಿತಿದ್ದ ಭಗವಾನ್ ಸ್ಕಂದನ ಮನಸ್ಸಿನಲ್ಲಿ ಆ ಹಳೆಯ ವಾತ್ಸಲ್ಯದ ನೆನಪುಗಳು ಅತ್ಯಂತ ವೇಗವಾಗಿ ಜಾಗೃತಗೊಂಡವು ಮತ್ತು ಅವನು ತನ್ನ ಜನ್ಮದಾತೃ ಮಾತೆ ಪಾರ್ವತಿಯ ಚರಣಗಳ ಮೇಲೆ ತಲೆ ಇಟ್ಟು ಲಲಿತಾ ಸಹಸ್ರನಾಮದ ಪಠಣವನ್ನು ಪ್ರಾರಂಭಿಸಿದ - ತಾನಾಗಿಯೇ ಮತ್ತು ಸಹಜವಾಗಿ; ಸರಿಯಾಗಿ ಅದೇ ಸಮಯದಲ್ಲಿ ರಾಜರ್ಷಿ ಶಶಿಭೂಷಣರಿಗೆ ಪಾರ್ವತಿಯ ಎಂದಿನ ‘ಚಂದ್ರಘಂಟಾ' ರೂಪದ ಬದಲಿಗೆ ‘ಸ್ಕಂದಮಾತಾ' ರೂಪ ಕಾಣಿಸತೊಡಗಿತು. ಅಷ್ಟೇ ಅಲ್ಲ, ಆ ಸ್ಕಂದಮಾತೆಯ ಆಕೃತಿ ಅತ್ಯಂತ ನಿಧಾನವಾಗಿ ವಿಸ್ತೃತ ಮತ್ತು ವ್ಯಾಪಕವಾಗುತ್ತಾ ಹೋಯಿತು ಮತ್ತು ಒಂದು ಕ್ಷಣಕ್ಕೆ ಅವರಿಗೆ ಇಡೀ ಆಕಾಶವು ಸ್ಕಂದಮಾತೆಯ ರೂಪದಿಂದ ತುಂಬಿದಂತೆ ಭಾಸವಾಯಿತು. ಇದರೊಂದಿಗೆ ರಾಜರ್ಷಿ ಶಶಿಭೂಷಣರು ಎದ್ದು ನಿಂತು, ಸಹಜವಾಗಿ ಆ ಆಕಾಶವ್ಯಾಪಿ ಸ್ಕಂದಮಾತೆಯ ಚರಣಗಳನ್ನು ಸ್ಪರ್ಶಿಸಲು ಆ ಚರಣಗಳ ಕಡೆಗೆ ಹೋಗತೊಡಗಿದರು.
![]() |
ಸ್ಕಂದಮಾತಾ ಮತ್ತು ಅವಳ ಎಡ ಪಾದ |
ಅವರು ಆ ಚರಣಗಳ ಹತ್ತಿರ ಹೋಗುತ್ತಾ ಹೋದಂತೆ, ಸ್ಕಂದಮಾತೆಯ ಆ ಎರಡೂ ಚರಣಗಳು ಭೂಮಿಯಿಂದ ಮೇಲಕ್ಕೆ ಹೋಗತೊಡಗಿದವು. ಈಗ ಆ ಸಿಂಹವಾಹಿನಿ ಸ್ಕಂದಮಾತೆಯ ಬಲ ಚರಣವು ಭೂಮಿಯ ಕಡೆಗೆ ಸಹಜ ಸ್ಥಿತಿಯಲ್ಲಿದ್ದರೆ, ಅವಳು ತನ್ನ ಎಡಗಾಲನ್ನು ಮಡಚಿ ಅದರ ಮೇಲೆ ಬಾಲ ಸ್ಕಂದನನ್ನು ಹಿಡಿದಿದ್ದಳು ಮತ್ತು ಅದಕ್ಕಾಗಿಯೇ ಆಕೆಯ ಎಡ ಚರಣವು ಅಡ್ಡವಾಗಿದ್ದರೂ ನೇರವಾಗಿ ನಿಂತಿತ್ತು. ರಾಜರ್ಷಿ ಶಶಿಭೂಷಣರು ಆ ಬಲ ಚರಣವು ಹತ್ತಿರದಲ್ಲಿದ್ದರೂ, ಆಕೆಯ ಆ ಎಡ ಚರಣದ ಕಡೆಗೇ ಸಂಪೂರ್ಣವಾಗಿ ಆಕರ್ಷಿತರಾಗಿದ್ದರು. ಅವರಿಗೆ ಆ ಎಡ ಚರಣದ ನಿಂತ ಅಂಗಾಲು ಮೇಲೆ ಏನು ಕಾಣಿಸುತ್ತಿತ್ತು? ರಾಜರ್ಷಿ ಶಶಿಭೂಷಣರು ಸಂಪೂರ್ಣವಾಗಿ ಹುಚ್ಚರಾಗಿದ್ದರು, ಅವರು ಆನಂದದ ಒಂದೊಂದು ಮೆಟ್ಟಿಲನ್ನು ಮೇಲೆರುತ್ತಾ ಹೋಗುತ್ತಿದ್ದರು ಮತ್ತು ಈಗ ಅವರು ನಿಧಾನವಾಗಿ ಸ್ಪಷ್ಟ ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದರು, “ಹೇ ಸ್ಕಂದಮಾತೆ! ಹೇ ನವದುರ್ಗೆ! ನಿನ್ನ ಈ ಎಡ ಚರಣದ ಅಂಗಾಲಿನ ಮೇಲೆ ನನಗೆ ಎಲ್ಲಾ ಬ್ರಹ್ಮರ್ಷಿ ಮತ್ತು ಬ್ರಹ್ಮವಾದಿನಿಯರ ತಪಸ್ಸುಗಳು ಕಾಣಿಸುತ್ತಿವೆ. ಮತ್ತು ಆ ತಪಸ್ಸು ಮಾಡುವ ಬ್ರಹ್ಮರ್ಷಿಗಳ ಕಣ್ಣುಗಳ ಮುಂದೆಯೂ ನನಗೆ ಮತ್ತೆ ಕೇವಲ ಈ ನಿನ್ನ ಎಡ ಚರಣ ಮಾತ್ರ ಹೀಗೆಯೇ ಕಾಣಿಸುತ್ತಿದೆ. ಮತ್ತು ಆ ಪ್ರತಿಯೊಬ್ಬ ಬ್ರಹ್ಮರ್ಷಿಗೆ ನಿನ್ನ ಅಂಗಾಲಿನಲ್ಲಿ ಏನು ಕಾಣಿಸುತ್ತಿದೆ ಎಂಬುದು ನನಗೆ ತಿಳಿದಿಲ್ಲ - ಆದರೆ ಅವರ ಎರಡೂ ಕಣ್ಣುಗಳು ನಿನ್ನ ಆ ಅಂಗಾಲನ್ನು ನೋಡುತ್ತಾ ವಿಸ್ತಾರಗೊಳ್ಳುತ್ತಿವೆ, ಅಷ್ಟು ಮಾತ್ರ ನನಗೆ ಕಾಣಿಸುತ್ತಿದೆ. ಅಹಾಹಾ! ನಿನ್ನ ಆ ಎಡ ಮತ್ತು ಬಲ ಕೈಗಳಲ್ಲಿರುವ ಎರಡೂ ಕಮಲ ಪುಷ್ಪಗಳು ಈಗ ಆ ಬ್ರಹ್ಮರ್ಷಿಗಳ ತಲೆಗಳನ್ನು ಸ್ಪರ್ಶಿಸುತ್ತಿವೆ. ಅಹಾಹಾ! ನಿನ್ನ ಆ ಎರಡು ಕೈಗಳಲ್ಲಿರುವ ಕಮಲ ಪುಷ್ಪಗಳು ನಿಜವಾಗಿ ನಿನ್ನ ಮತ್ತು ಶಿವನ ಸಹಸ್ರಾರ ಚಕ್ರಗಳು ಮತ್ತು ಅವುಗಳ ಸ್ಪರ್ಶವಾದ ಕೂಡಲೇ...."
ಇಷ್ಟು ಹೇಳಿ ರಾಜರ್ಷಿ ಶಶಿಭೂಷಣರು ಮೃತರಾದಂತೆ, ಉಸಿರಾಟ ಮತ್ತು ಹೃದಯ ಬಡಿತ ಇಲ್ಲದೆ, ಅಂತರಿಕ್ಷದಲ್ಲಿ ತೇಲತೊಡಗಿದರು. ಅವರ ಧರ್ಮಪತ್ನಿ ಪೂರ್ಣಾಹುತಿ ಅತ್ಯಂತ ಪ್ರೀತಿಯಿಂದ ಮತ್ತು ಅತಿಯಾದ ಆನಂದದಿಂದ ಅಂತರಿಕ್ಷಕ್ಕೆ ಹಾರಿ ತಮ್ಮ ಪತಿಯ ದೇಹದ ಬಲಗೈಯನ್ನು ಕೈಯಲ್ಲಿ ಹಿಡಿದು ಅವರನ್ನು ನಿಧಾನವಾಗಿ ಮತ್ತೆ ಕೈಲಾಸಕ್ಕೆ ಇಳಿಸಲು ಪ್ರಾರಂಭಿಸಿದರು. ಮತ್ತು ಯಾವ ಕ್ಷಣದಲ್ಲಿ ರಾಜರ್ಷಿ ಶಶಿಭೂಷಣರ ಹೆಜ್ಜೆಗಳು ಕೈಲಾಸ ಭೂಮಿಯನ್ನು ಸ್ಪರ್ಶಿಸಿದವೋ, ಆ ಕ್ಷಣದಲ್ಲಿ ಅವರು ಮತ್ತೆ ಸಂಪೂರ್ಣವಾಗಿ ಪ್ರಾಣವಂತರಾದರು. ಮತ್ತು ಅವರ ಮೊದಲ ಉಸಿರಿನ ಜೊತೆಗೆ ಅವರ ಸಹಸ್ರಾರ ಚಕ್ರ ಕಮಲವು ಸಂಪೂರ್ಣವಾಗಿ ಅರಳಿ ಅವರ ತಲೆಯಿಂದ ಹತ್ತು ದಿಕ್ಕುಗಳಿಗೆ ಹೊರಹೊಮ್ಮಿ ಹೋದದ್ದು ಎಲ್ಲರಿಗೂ ಕಾಣಿಸತೊಡಗಿತು. ಬ್ರಹ್ಮರ್ಷಿಯಾಗುತ್ತಿರುವ ಒಬ್ಬ ವ್ಯಕ್ತಿಯನ್ನು ಇಂದು ಬ್ರಹ್ಮರ್ಷಿಗಳಲ್ಲದ ಅನೇಕರು ನೋಡುತ್ತಿದ್ದರು ಮತ್ತು ಹಿರಿಯ ಬ್ರಹ್ಮವಾದಿನಿ ಲೋಪಮುದ್ರೆ ಹೇಳುತ್ತಿದ್ದರು, “ಈಗ ಶಶಿಭೂಷಣರು ‘ಬ್ರಹ್ಮರ್ಷಿ'ಯಾಗಿದ್ದಾರೆ ಮತ್ತು ನಾನು ಸ್ವಲ್ಪ ಮೊದಲು ಹೇಳಿದ, ಬ್ರಹ್ಮರ್ಷಿಯ ಜನನವಾಗುವ ಸಂಪೂರ್ಣ ಪ್ರಕ್ರಿಯೆಯನ್ನು ನೀವೆಲ್ಲರೂ ಈಗ ನೋಡಿದ್ದೀರಿ.”
![]() |
ಆದಿಮಾತಾ ಶ್ರೀವಿದ್ಯಾ |
‘ಬ್ರಹ್ಮರ್ಷಿ ಶಶಿಭೂಷಣರಿಗೆ ಜಯವಾಗಲಿ' ಎಂಬ ಘೋಷಣೆಗಳನ್ನು ಕೂಗುತ್ತಾ ಅಲ್ಲಿನ ಎಲ್ಲರೂ ಆನಂದದಿಂದ ನೃತ್ಯ ಮಾಡಲು ಪ್ರಾರಂಭಿಸಿದರು. ಶಿವ, ಮಹಾವಿಷ್ಣು, ಪ್ರಜಾಪತಿ ಬ್ರಹ್ಮ, ಗಣಪತಿ, ವೀರಭದ್ರ, ದೇವರ್ಷಿ ನಾರದ ಮತ್ತು ಶಿವ-ಋಷಿ ತುಂಬುರೂ ಕೂಡ ಇದರಲ್ಲಿ ಸೇರಿಕೊಂಡಿದ್ದರು. ಮತ್ತು ಬ್ರಹ್ಮರ್ಷಿ ಶಶಿಭೂಷಣರ ಎರಡೂ ಕಣ್ಣುಗಳು ತೆರೆದ ಕೂಡಲೇ ಅವರು ಆದಿಮಾತೆ ಶ್ರೀವಿದ್ಯೆಯ ಚರಣಗಳ ಮೇಲೆ ಬಿದ್ದು ನಮಸ್ಕರಿಸಿದರು. ಸರಿಯಾಗಿ ಅದೇ ಕ್ಷಣದಲ್ಲಿ ಸ್ಕಂದ ಕಾರ್ತಿಕೇಯನ ಮುಖದಿಂದ ಲಲಿತಾ ಸಹಸ್ರನಾಮದ ಒಂದು ವಿಶಿಷ್ಟ ಮತ್ತು ಅದ್ಭುತ ನಾಮ ಉಚ್ಚರಿಸಲ್ಪಟ್ಟಿತು,
‘ಓಂ ಕಲ್ಪನಾರಹಿತಾಯೈ ನಮಃ’.
ಮತ್ತು ಈ ನಾಮದ ಉಚ್ಚಾರದ ಜೊತೆಗೆ ಬ್ರಹ್ಮವಾದಿನಿ ಲೋಪಮುದ್ರೆ ಮತ್ತು ನವದುರ್ಗಾ ಸ್ಕಂದಮಾತೆಯು ಸ್ಕಂದನ ಧ್ವನಿಯಲ್ಲಿ ತಮ್ಮ ಧ್ವನಿಯನ್ನು ಬೆರೆಸಿ ಅದೇ ನಾಮವನ್ನು ೧೦೮ ಬಾರಿ ಉಚ್ಚರಿಸಿದರು.