![]() |
| ಸದ್ಗುರು ಶ್ರೀ ಅನಿರುದ್ಧ ಬಾಪೂ ಅವರ ದೈನಿಕ ಪ್ರತ್ಯಕ್ಷದ ಸಂಪಾದಕೀಯ (05.09.2006) |
ಹಿಂದಿನ ಪೋಸ್ಟನಲ್ಲಿ, ನಾವು ಸದ್ಗುರು ಅನಿರುದ್ಧರು ಪ್ರತಿಪಾದಿಸಿದ ಅಂಧಃಕಾಸುರನ ವಧೆಯ ಕಥೆಯನ್ನು ನೋಡಿದೆವು. "ಈ ಕಥೆಯು ಭಾರತದ ಐದು ಪ್ರಮುಖ ಉಪಾಸನಾ ಸಂಪ್ರದಾಯಗಳನ್ನು ಪರಸ್ಪರ ಗಟ್ಟಿಯಾಗಿ ಜೋಡಿಸುವ ಕಥೆಯಾಗಿದೆ. ಶೈವ, ದೇವಿಪೂಜಕ, ವೈಷ್ಣವ, ಗಾಣಪತ್ಯ ಮತ್ತು ಸೌರ ಈ ಐದು ಸಂಪ್ರದಾಯಗಳ ಆದಿದೇವತೆಗಳನ್ನು ಸಮಾನವಾಗಿ ಮತ್ತು ಏಕಕಾಲದಲ್ಲಿ ಸ್ಥಾಪಿಸುವ ಮೂಲಕ, ಈ ಕಥೆಯು, ಬಣ್ಣಗಳು ವಿವಿಧವಾಗಿದ್ದರೂ ಆಕಾಶ ಒಂದೇ ಎಂದು ಸಹಜವಾಗಿ ತೋರಿಸುತ್ತಿದೆ.
![]() |
| ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ಮನೆಯ ಗಣೇಶೋತ್ಸವದಲ್ಲಿ ಭಕ್ತರು ಸ್ವಯಂಭೂ ಗಣೇಶನ ದರ್ಶನವನ್ನೂ ಪಡೆಯುತ್ತಾರೆ. |
ಈ ಕಥೆಯಲ್ಲಿ ಆಧ್ಯಾತ್ಮಿಕವಾಗಿ ಅನೇಕ ಪ್ರಮುಖ ತತ್ವಗಳನ್ನು ಪ್ರತಿಪಾದಿಸಲಾಗಿದೆ. ಅವುಗಳಲ್ಲಿ ಕೆಲವನ್ನು ಮಾತ್ರ ನಾವು ಇಂದು ನೋಡೋಣ. ಶ್ರೀ ಮಹಾದೇವರ ಕೋಪದಿಂದ ಕೂಡಿದ ಮೊದಲ ಶಬ್ಧದಿಂದ ಶ್ರೀವಿಷ್ಣುವು ಒಬ್ಬ ಅಸುರನ ಗೊಂಬೆಯನ್ನು (ಬಾಗುಲ್ಬುವವನ್ನು) ಸೃಷ್ಟಿಸಿದರು. ಇದು ನಿಜವಾದ ಅಸುರನಾಗಿರಲಿಲ್ಲ, ಆದರೆ ತಾಯಿಯ ಮಾತಿಗಾಗಿ, ತನ್ನ ಪ್ರೀತಿಯ ಮಗುವನ್ನು ಹೆದರಿಸಲು ಸೃಷ್ಟಿಸಲಾದ ಒಂದು ಗೊಂಬೆಯಾಗಿತ್ತು. ಶಿವನ ಕೋಪದ ಶಬ್ಧದಿಂದ ಶ್ರೀವಿಷ್ಣುವು ಸೃಷ್ಟಿಸಿದ ಈ ಅಸುರ ರೂಪದ ಗೊಂಬೆಯು, ಅಜ್ಞಾನಿ ಮಾನವ ಮನಸ್ಸಿನಲ್ಲಿರುವ ಪರಮೇಶ್ವರನ ಭಯವಾಗಿದೆ. ಈ ಭಯವು, ತಪ್ಪು ವಿಷಯಗಳು ನಡೆಯಬಾರದು ಅಂದರೆ 'ಮರ್ಯಾದೆ ಮೀರುವಿಕೆ' (ಪ್ರಜ್ಞಾಪರಾಧ) ಆಗಬಾರದು ಎಂದು ಪ್ರತಿ ಮಾನವನಲ್ಲಿರುವ ಸತ್ವಗುಣಿ ವಿಷ್ಣು ಅಂದರೆ ಪ್ರತಿಯೊಬ್ಬ ಮನುಷ್ಯನಲ್ಲಿರುವ ಬುದ್ಧ್ಜಿವಂತಿಕೆ ಈ ಭಯವನ್ನು ಸೃಷ್ಟಿಸುತ್ತದೆ, ಮತ್ತು ಅದು ಕೂಡ ಶಿವನ, ಅಂದರೆ ಪವಿತ್ರ ಜಾಗೃತಿಯ ಮೂಲಕವೇ ಆಗುತ್ತದೆ. ಪ್ರತಿ ಮಾನವನಲ್ಲಿ ಬುದ್ಧಿಪೂರ್ವಕ ವಿವೇಕ ಮತ್ತು ಪವಿತ್ರತೆಯ ಜಾಗೃತಿ ಈ ಎರಡೂ ಇರುತ್ತವೆ, ಇದು ಅವರ ಪುಣ್ಯದಿಂದಲ್ಲ, ಬದಲಾಗಿ ಭಗವಂತನ ಅಕಾರಣ ಕರುಣೆಯಿಂದ. ಕರ್ಮ ಸ್ವಾತಂತ್ರ್ಯದಿಂದ ಪ್ರಜ್ಞಾಪರಾಧ ಹೆಚ್ಚಾದಂತೆ, ಅವುಗಳ ಅಸ್ತಿತ್ವವೂ ಕ್ಷೀಣಿಸಲು ಪ್ರಾರಂಭಿಸುತ್ತದೆ. ಮತ್ತು 'ಪ್ರಜ್ಞಾಪರಾಧಾತ್ ರೋಗಃ' ಈ ನ್ಯಾಯದಿಂದಾಗಿ, ಮಾನವನ ಜೀವನದಲ್ಲಿ ಸಂಕಷ್ಟಗಳು ಬರುತ್ತಲೇ ಇರುತ್ತವೆ ಮತ್ತು ಅವುಗಳನ್ನು ಎದುರಿಸುವ ಸಾಮರ್ಥ್ಯವು ಕಡಿಮೆಯಾಗುತ್ತಲೇ ಹೋಗುತ್ತದೆ. ಬಾಲಗಣೇಶನ ಈ ಲೀಲೆಯಿಂದ, ಮರ್ಯಾದೆ ಪಾಲನೆಯ ಒಂದು ತತ್ವವನ್ನು ಸುಂದರವಾಗಿ ಮುಂದಿಡಲಾಗುತ್ತದೆ.
"ಪರಮಾತ್ಮನು ಚಿಕ್ಕ ವಯಸ್ಸಿನಲ್ಲಿ ಮಾಡುವುದು ಸರಿಯಲ್ಲ ಎಂದು ಆ ಜಗದಂಬೆಗೆ ಅನಿಸುತ್ತದೆ, ಅಂದರೆ ದ್ರವ್ಯಶಕ್ತಿ-ಪ್ರಕೃತಿ ಮಾತೆ ಪಾರ್ವತಿಯು ಹಾಕಿಕೊಟ್ಟ ಮರ್ಯಾದೆಯನ್ನು ಪಾಲಿಸುವುದು ಸೂಕ್ತ ಮತ್ತು ಅವಶ್ಯಕವಾಗಿದೆ. ಪರಮಾತ್ಮ ಶ್ರೀ ಮಹಾಗಣಪತಿಯು ತನ್ನ ಈ ಲೀಲೆಯಿಂದ ಹಿರಿಯರು ಮತ್ತು ಜ್ಯೇಷ್ಠರ ಮಾತಿನ ಮರ್ಯಾದೆಯನ್ನು ಮೀರುವುದು ಯಾವಾಗಲೂ ಸೂಕ್ತವಲ್ಲ ಎಂಬ
ಉದಾಹರಣೆಯನ್ನು ಮನುಷ್ಯನ ಮುಂದೆ ಪ್ರಸ್ತುತ ಪಡಿಸಿದ್ದಾರೆ. ಅಂತಹ ಮರ್ಯಾದೆ ಮೀರುವ ಬಗ್ಗೆ ಯೋಚಿಸಿದರೆ ಭಯ ಹುಟ್ಟಿಸುವ ಗೊಂಬೆ (ಬಾಗುಲ್ಬುವ) ಸೃಷ್ಟಿಯಾಗುತ್ತದೆ. ಹಾಗಾದರೆ, ಈ ಯೋಚನೆಯನ್ನು ಕಾರ್ಯರೂಪಕ್ಕೆ ಬಂದರೆ ನಿಜವಾದ ಅಸುರ ಸೃಷ್ಟಿಯಾಗುವುದಿಲ್ಲವೇ? ಪ್ರತಿಯೊಬ್ಬ ಮನುಷ್ಯನು ತನ್ನ ವಯಸ್ಸು, ತನ್ನ ಶಾರೀರಿಕ ಮತ್ತು ಮಾನಸಿಕ ಬಲ, ತನ್ನ ಕರ್ತವ್ಯ ಮತ್ತು ತನ್ನ ಜವಾಬ್ದಾರಿಯ ಸ್ಥಿತಿಯನ್ನು ಅರಿತುಕೊಂಡೇ ಯಾವುದೇ ಕಾರ್ಯವನ್ನು ಕೈಗೊಳ್ಳಬೇಕು."
ಶ್ರೀವಿಷ್ಣು ಮತ್ತು ಜಗನ್ಮಾತೆ ಪಾರ್ವತಿಯ ಈ ಸೂಕ್ತ ಯೋಜನೆಯಿಂದಾಗಿ ಶಿವನು ಬಾಲಗಣೇಶನನ್ನು ತಾಯಿಯ ಬಳಿ ಬಿಟ್ಟು ತನ್ನ ಕಾರ್ಯಕ್ಕಾಗಿ ಹೊರಡುತ್ತಾರೆ. ಅಂದರೆ, ಯಾವಾಗ ಮಾನವನ ಮನಸ್ಸು ವಿವೇಕದಿಂದ ಭೌತಿಕ ಶಕ್ತಿಯ ಮರ್ಯಾದೆಯನ್ನು ಗುರುತಿಸುತ್ತಿದೆಯೊ, ಅಂತಃಕರಣದಲ್ಲಿಯ ಪವಿತ್ರತೆಯ ಜಾಗೃತಿಯು ವಿಶ್ವ ಸಂಚಾರ ಮಾಡಿ ತನ್ನ ಅಸುರ ಸಂಹಾರದ ಕಾರ್ಯವನ್ನು ಮಾಡುತ್ತಲೇ ಇರುತ್ತದೆ. ಮರ್ಯಾದೆ ಪಾಲನೆಯಾದ ತಕ್ಷಣ, ಅಂತಃಕರಣದಲ್ಲಿಯ ಪವಿತ್ರತೆಯ ಜಾಗೃತಿ ಮತ್ತು ಅಧಿಕಾರ ಎರಡೂ ಜೊತೆಯಾಗಿ ಬೆಳೆಯಲು ಪ್ರಾರಂಭಿಸುತ್ತವೆ, ಮತ್ತು ಆಗ ಮನಸ್ಸು ಮತ್ತು ಜೀವನದಲ್ಲಿ ನೆಲೆಸಿರುವ ಅಸುರರ ನಾಶ ಖಂಡಿತವಾಗಿ ಆಗುತ್ತದೆ.
ಮುಂದೆ ಬಾಲಗಣೇಶನು ತನ್ನ ಮನಸ್ಸಿನಲ್ಲಿ ಹುಟ್ಟಿದ ಭಯವನ್ನು ಉಗಿದು ಹಾಕುತ್ತಾನೆ ಮತ್ತು ಅದರಿಂದಲೇ ಭಯಂಕರ ಮತ್ತು ನಿರಂತರವಾಗಿ ಬೆಳೆಯುವ 'ಅಂಧಃಕಾಸುರ'ನು ಹುಟ್ಟುತ್ತಾನೆ. ಮಾನವನು ಯಾವುದೇ ಒತ್ತಡದಿಂದ ಅಥವಾ ಭಯದಿಂದ ಮರ್ಯಾದೆಯನ್ನು ಪಾಲಿಸಿದಾಗ, ಸ್ವಲ್ಪ ಸಮಯದ ನಂತರ ಆ ಒತ್ತಡವನ್ನು ತ್ಯಜಿಸಲು ಬಯಸುತ್ತಾನೆ. ಸಹಜವಾಗಿ ಇಲ್ಲಿ ನಿರೀಕ್ಷಿಸಲಾದ ಒತ್ತಡವೆಂದರೆ ಪರಮೇಶ್ವರನ ನಿಯಮಗಳ ಭಯ. ಮಾನವನಿಗೆ ಈ ಭಯವು ಅನಾನುಕೂಲವೆಂದು ಅನಿಸಿದಾಗ, ಒಂದು ಕ್ಷಣದಲ್ಲಿ ಮಾನವ ಮನಸ್ಸು ವಿವೇಕಕ್ಕೆ ವಿಮುಖವಾಗಿ ಈ ಭಯವನ್ನು ಎಸೆದುಬಿಡುತ್ತದೆ ಮತ್ತು ಸಹಜವಾಗಿ ಆ ಭಯದ ಜಾಗವನ್ನು ವಿಕೃತ ಅಹಂಕಾರ ಮತ್ತು ದುರಹಂಕಾರ ಪಡೆಯುತ್ತದೆ. ಇದೇ ಆ ಅಂಧಃಕಾರ, ಇದೇ ಅಂಧಃಕಾಸುರನ ರೂಪ. ಒಮ್ಮೆ ಈ ಅಂಧಕಾಸುರನು ಪ್ರಕಟವಾದರೆ, ಅವನು ಬೆಳೆಯುತ್ತಲೇ ಇರುತ್ತಾನೆ.
![]() |
| ನೇ ಮಾಘಿ ಗಣೇಶೋತ್ಸವ ಸದ್ಗುರು ಶ್ರೀ ಅನಿರುದ್ಧ ಬಾಪು ಅವರಿಗೆ ಪೂಜೆ ಮತ್ತು ಉಪಚಾರವನ್ನು ಅರ್ಪಿಸುತ್ತಿರುವ ಶ್ರೀಬ್ರಹ್ಮಣಸ್ಪತಿಗಳು |
ನಾನು ಏನೇ ಮಾಡಿದರೂ ಆ ಪರಮೇಶ್ವರನು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ.' ಇಂತಹ ಮನೋಭಾವವೇ ನಿಜವಾದ ಅಂಧಃಕಾರ- ಅಂಧಕಾಸುರ. ಆದರೆ ಸಾಕ್ಷಾತ್ ಪವಿತ್ರತೆ ಅಂದರೆ ಶಿವನ ಮತ್ತು ಪಾರ್ವತಿಯ ಅಂದರೆ ಕಾರ್ಯಶಕ್ತಿ (ದ್ರವ್ಯಶಕ್ತಿ)ಯ ಪುತ್ರನಾದ ಈ ಮಹಾಗಣಪತಿ, ಅಂದರೆ ಮಾನವನ ಜೀವಂತ ಆತ್ಮದ ದ್ರವ್ಯಗುಣದಿಂದ ತುಂಬಿದ ಸತ್ವಗುಣವು, ಎಷ್ಟು ಚಿಕ್ಕದಾಗಿದ್ದರೂ ಅಂದರೆ ಚಿಕ್ಕ ವಯಸ್ಸಿನದಾಗಿದ್ದರೂ ಈ ಅಂಧಃಕಾಸುರನನ್ನು ಸಂಪೂರ್ಣವಾಗಿ ನಾಶ ಮಾಡಲು ಸಮರ್ಥವಾಗಿರುತ್ತದೆ. ಈ ಯುದ್ಧದಲ್ಲಿ, ಈ ದ್ರವ್ಯಗುಣಗಳಿಂದ ತುಂಬಿದ ಸತ್ವಗುಣಕ್ಕೆ ಭಾವಗುಣಗಳಿಂದ ತುಂಬಿದ ಸತ್ವಗುಣ ಶ್ರೀವಿಷ್ಣುವು ಸಹಾಯ ಮಾಡುತ್ತಾರೆ ಮತ್ತು ಒಂದು ಕ್ಷಣದಲ್ಲಿ ಆ ಸತ್ವಗುಣದ ತೇಜಸ್ಸು 'ಕೋಟಿ ಸೂರ್ಯಸಮಪ್ರಭ' (ಕೋಟಿ ಸೂರ್ಯರಂತೆ ಪ್ರಕಾಶಮಾನ) ಆಗುತ್ತದೆ ಮತ್ತು ನಂತರ ಏನಾಗುತ್ತದೆ? ಆ ಬಾಲಗಣೇಶನು ಅಂಧಃಕಾಸುರನನ್ನು ಸುಲಭವಾಗಿ ನಾಶ ಮಾಡುತ್ತಾನೆ. ಭಾವಗುಣಗಳಿಂದ ತುಂಬಿದ ಸತ್ವಗುಣ ಎಂದರೆ ಭಕ್ತಿಯ ಪ್ರಭಾವ.
ಸಂಪಾದಕೀಯದ ಕೊನೆಯಲ್ಲಿ ಸದ್ಗುರು ಶ್ರೀ ಅನಿರುದ್ಧ ಬಾಪೂ ಬರೆಯುತ್ತಾರೆ:
ಮಿತ್ರರೇ, ಪ್ರತಿಯೊಬ್ಬರ ಜೀವನದಲ್ಲಿ ಯಾವುದೇ ಒಂದು ತಿರುವಿನಲ್ಲಿ ಈ ಅಂಧಃಕಾಸುರನು ಪದೇ ಪದೇ ಬರುತ್ತಲೇ ಇರುತ್ತಾನೆ ಆದರೆ ಆ ಮಂಗಳಮೂರ್ತಿ ಮಹಾಗಣಪತಿಯ ಆರಾಧನೆ ಮತ್ತು ನಿಮ್ಮ ಇಷ್ಟದೇವತೆಯ ಭಕ್ತಿಯು ನಿಮ್ಮನ್ನು ಆ ತಿರುವಿನಿಂದ ನಿಧಾನವಾಗಿ ಪ್ರಕಾಶಮಯ ಮಾರ್ಗದಲ್ಲಿ ಕೊಂಡೊಯ್ಯಬಹುದು.
ನಮ್ಮ ದೈನಂದಿನ ಜೀವನದಲ್ಲಿ ಗಣಪತಿ ಹೇಗೆ ಆನಂದವನ್ನು ತರುತ್ತಾನೆ? ಅನಿರುದ್ಧ ಬಾಪು ವಿವರಿಸುತ್ತಾರೆ


