ಸೂರ್ಯಕೋಟಿ ಸಮಪ್ರಭ - 1

ಸೂರ್ಯಕೋಟಿ ಸಮಪ್ರಭ - 1  ಸದ್ಗುರು ಶ್ರೀ ಅನಿರುದ್ಧ ಬಾಪೂ ಅವರ ದೈನಿಕ ಪ್ರತ್ಯಕ್ಷದ ಸಂಪಾದಕೀಯ (೦3-೦9-2೦೦6)
ಸದ್ಗುರು ಶ್ರೀ ಅನಿರುದ್ಧ ಬಾಪೂ ಅವರ ದೈನಿಕ ಪ್ರತ್ಯಕ್ಷದ ಸಂಪಾದಕೀಯ (3-9-2೦೦6)


ಭಾರತೀಯ ಕೀರ್ತನ ಪರಂಪರೆಯಲ್ಲಿ, ಪರಮಾತ್ಮನ ವಿವಿಧ ಸ್ವರೂಪಗಳ ಕುರಿತು ಅನೇಕ ಕಥೆಗಳು ಮತ್ತು ಆಖ್ಯಾನಗಳನ್ನು ಹೇಳಲಾಗುತ್ತದೆ. ನಾರದೀಯ ಪದ್ಧತಿಯ ಕೀರ್ತನ ಪರಂಪರೆಯು ಭಾರತದಲ್ಲಿ ಅಕ್ಷರಶಃ ಸಾವಿರಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಶ್ರೀ ಸಾಯಿ ಸಚ್ಚರಿತ್ರೆಯಲ್ಲಿ, ಪರಮ ಪೂಜ್ಯ ಶ್ರೀ ಹೇಮಾಡ್ ಪಂತ ಅವರು ಕೀರ್ತನ ಸಂಸ್ಥೆಯು ನಾರದರನ ಪೀಠ ಎಂದು ದೃಢವಾಗಿ ಪ್ರತಿಪಾದಿಸಿದ್ದಾರೆ. ಕೀರ್ತನಕಾರರು ತಮ್ಮ ಕೀರ್ತನಗಳ ಮೂಲಕ ಶುದ್ಧ ಭಕ್ತಿಯನ್ನು ಪ್ರಚಾರ ಮತ್ತು ಪ್ರಸಾರ ಮಾಡಿದರು, ಮತ್ತು ಸಮಾಜವು ಆದಷ್ಟು ಒಗ್ಗಟ್ಟಿನಿಂದ ಇರಲು ಅಪಾರ ಪ್ರಯತ್ನಗಳನ್ನು ಮಾಡಿದರು. ಮತ್ತು ಪ್ರಯತ್ನಗಳ ಮೂಲಕವೇ, ನಾರದೀಯ ಸಂಪ್ರದಾಯವನ್ನು ನಡೆಸುವ ಅನೇಕ ಅಧಿಕಾರಿಗಳು ಭಗವಂತನ ಮಹಿಮೆಯನ್ನು ವರ್ಣಿಸುವ ಗುಣಾಧಾರಿತ ಕಥೆಗಳನ್ನು ಜನಪ್ರಿಯಗೊಳಿಸಿದರು. ಇದರಿಂದ ಅವರಿಗೆ ಪರಮಾತ್ಮನ ಬೇರೆ ಬೇರೆ ಸ್ವರೂಪಗಳ ಭಕ್ತ ಸಮುದಾಯಗಳನ್ನು ಬೆಸೆಯುವುದು ಸುಲಭ ಸಾಧ್ಯವಾಯಿತು. ಶ್ರೀ ಮಹಾಗಣಪತಿಯ ಕೀರ್ತನಗಳಲ್ಲಿಯೂ ಅನೇಕ ಕಥೆಗಳನ್ನು ಶ್ರೀರಂಗ ಎಂದು ತೆಗೆದುಕೊಳ್ಳಲಾಗುತ್ತದೆ. ಅವುಗಳಲ್ಲಿ ಒಂದು ಪ್ರಸಿದ್ಧ ಮತ್ತು ಜನಪ್ರಿಯ ಲೋಕಕಥೆ ಎಂದರೆ 'ಅಂಧಃಕಾಸುರ ಆಖ್ಯಾನ'.


ಬಾಲಗಣೇಶನಿಗೆ ಗಜಮುಖ ಪ್ರಾಪ್ತವಾಯಿತು ಮತ್ತು ಬಾಲಗಣೇಶ ಶಿವ-ಶಕ್ತಿಯೊಂದಿಗೆ ಅಂದರೆ ತನ್ನ ತಂದೆ-ತಾಯಿಯೊಂದಿಗೆ ಕೈಲಾಸ ಪರ್ವತದಲ್ಲಿ ಬಾಲಕ್ರೀಡೆಗಳನ್ನು ಮಾಡಲು ಪ್ರಾರಂಭಿಸಿದನು. ಅಣ್ಣ ಕಾರ್ತಿಕೇಯ ಸ್ವಾಮಿ ತಂದೆಯ ಆದೇಶದಂತೆ ಬೃಹಸ್ಪತಿಯ ಆಶ್ರಮದಲ್ಲಿ ಅಧ್ಯಯನಕ್ಕಾಗಿ ಹೋಗಿದ್ದರು. ಒಮ್ಮೆ ಶಿವಶಂಕರರು ತಮ್ಮ ಗಣಗಳೊಂದಿಗೆ ವಿಶ್ವಸಂಚಾರಕ್ಕೆ ಹೊರಟಾಗ, ಬಾಲಗಣೇಶನು ಅವರ ಜೊತೆ ಬರುವುದಾಗಿ ಹಠ ಹಿಡಿದನು. ಮಹಾದೇವರ ವಿಶ್ವಸಂಚಾರದಲ್ಲಿ ಸಹಜವಾಗಿಯೇ ಅನೇಕ ಅಸುರರೊಂದಿಗೆ ಸಂಘರ್ಷವಾಗುವ ನಿರೀಕ್ಷೆಯಿತ್ತು. ಆದ್ದರಿಂದ, ಪಾರ್ವತಿ ಮಾತೆಗೆ ಬಾಲಗಣೇಶನು ತನ್ನ ತಂದೆಯೊಂದಿಗೆ ಹೋಗಬಾರದು ಎಂದು ಅನಿಸುತಿತ್ತು. ಆದರೆ, ಶ್ರೀ ಮಹಾದೇವನು ತಮ್ಮ ಪುತ್ರನನ್ನು ತಮ್ಮ ಜೊತೆ ಕರೆದುಕೊಂಡು ಹೋಗಲು ಸಿದ್ಧರಾಗಿದ್ದರು. ಬಾಲಗಣೇಶನ ಬುದ್ಧಿ ಮತ್ತು ಸಾಮರ್ಥ್ಯದ ಅರಿವು ಶಿವ-ಪಾರ್ವತಿ ಇಬ್ಬರಿಗೂ ಇತ್ತು. ಆದರೆ, ಕೊನೆಗೆ ತಾಯಿ ತಾಯಿಯೇ ಅಲ್ಲವೇ? ಆಕೆಯ ಮಾತೃಹೃದಯ, ಮಗು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಚಿಂತಿಸುವುದಂತೂ ಇದ್ದೇ ಇರುತ್ತದೆ. ಬಾಲಗಣೇಶನ ಹಠ ಮತ್ತು ಪತಿಯ ಕೋಪದ ಹಾಗೂ ಹಠದ ಸ್ವಭಾವದಿಂದ ಪಾರ್ವತಿ ಮಾತೆ ಇಕ್ಕಟ್ಟಿಗೆ ಸಿಲುಕಿದರು. ಪಾರ್ವತಿ ಮಾತೆ ತಮ್ಮ ಅಕ್ಕರೆಯ ಅಣ್ಣನಾದ ಶ್ರೀವಿಷ್ಣುವನ್ನು ಸ್ಮರಿಸಿದರು. (ಇಂದಿಗೂ ಮೀನಾಕ್ಷಿ ದೇವಾಲಯದಲ್ಲಿ ಶಿವ-ಪಾರ್ವತಿ ವಿವಾಹದ ದೃಶ್ಯದಲ್ಲಿ ಶ್ರೀವಿಷ್ಣು ಪಾರ್ವತಿಯ ಹಿರಿಯ ಸಹೋದರನಾಗಿ ಕನ್ಯಾದಾನ ಮಾಡುವುದು ಕಂಡುಬರುತ್ತದೆ.) ಅದೇ ಕ್ಷಣದಲ್ಲಿ, ಸ್ಮರ್ತ್ರುಗಾಮಿ ಶ್ರೀವಿಷ್ಣು ಅಲ್ಲಿ ಪ್ರತ್ಯಕ್ಷರಾದರು. ಅಣ್ಣ-ತಂಗಿಯ ಸಂಬಂಧವು ಮಾನವ ಮಟ್ಟದಲ್ಲಿಯೂ ಅತ್ಯಂತ ಪ್ರೀತಿಯದಾಗಿರುತ್ತದೆ. ದೈವೀ ಮಟ್ಟದಲ್ಲಂತೂ ಸಂಬಂಧದ ಅರ್ಥ ಮತ್ತು ಸಂದರ್ಭಗಳು ಅತ್ಯಂತ ಪವಿತ್ರ ಸಾಂಕೇತಿಕ ಸ್ವರೂಪದ್ದಾಗಿರುತ್ತವೆ, ಏಕೆಂದರೆ ಇವೆಲ್ಲವುಗಳಲ್ಲಿ ಅಭೇದ ಇರುತ್ತದೆ. 


ಪಾರ್ವತಿಯು ತನ್ನ ಸಮಸ್ಯೆಯನ್ನು ಶ್ರೀವಿಷ್ಣುವಿಗೆ ತಿಳಿಸಿದಳು ಮತ್ತು ಶ್ರೀವಿಷ್ಣು ತಕ್ಷಣವೇ ಒಂದು ಉಪಾಯವನ್ನು ಸೂಚಿಸಿದರು. ಶ್ರೀವಿಷ್ಣು ಪಾರ್ವತಿ ಮಾತೆಗೆ ಮಹಾದೇವರೊಂದಿಗೆ ವಿಷಯದ ಬಗ್ಗೆ ವಾದ ಮಾಡಲು ಹೇಳಿದರು ಮತ್ತು 'ಅವರ ಕೋಪಯುಕ್ತ ಮೊದಲ ಶಬ್ದ ಹೊರಬೀಳುತ್ತಿದ್ದಂತೆಯೇ, ಶಬ್ದವನ್ನೇ ನಾನು ಒಬ್ಬ ಅಸುರನಾಗಿ ಪರಿವರ್ತಿಸುತ್ತೇನೆ ಮತ್ತು ಭಯಂಕರ ಭೀತಿಹುಟ್ಟಿಸುವಂತಹ ಪ್ರಾಣಿ (बागुलबुवा) ಬಗ್ಗೆ ಬಾಲಗಣೇಶನ ಮನಸ್ಸಿನಲ್ಲಿ ಭಯವನ್ನು ಹುಟ್ಟಿಸುತ್ತೇನೆ. ಇದರಿಂದ ಶ್ರೀಬಾಲಗಣೇಶನೇ ತನ್ನ ಹಠವನ್ನು ಬಿಟ್ಟುಬಿಡುತ್ತಾನೆ ಮತ್ತು ಶಿವಶಂಕರರೂ ತಮ್ಮ ಕೋಪವನ್ನು ನಿಯಂತ್ರಿಸಿ, ತಮ್ಮ ಮಗನ ಮೇಲಿನ ಪ್ರೀತಿಯಿಂದ ಬಾಲಗಣೇಶನನ್ನು ತಮ್ಮ ಜೊತೆ ಕರೆದುಕೊಂಡು ಹೋಗುವ ಹಠವನ್ನು ಬಿಟ್ಟುಬಿಡುತ್ತಾರೆ' ಎಂದು ಹೇಳಿದರು. ಅದರಂತೆಯೇ ಎಲ್ಲವೂ ನಡೆಯಿತು ಮತ್ತು ಶ್ರೀಶಿವ ತಮ್ಮ ಕೆಲಸಕ್ಕೆ ಹೊರಟರು. ಬಾಲಗಣೇಶನು ತಾಯಿಯೊಂದಿಗೆ ಕೈಲಾಸದಲ್ಲಿಯೇ ಉಳಿದನು. ಮಹಾದೇವರ ಕೋಪಯುಕ್ತ ಮೊದಲ ಶಬ್ದದಿಂದ ವಿಷ್ಣುವು ಸೃಷ್ಟಿಸಿದ ಅಸುರನು ಕಾರ್ಯ ಮುಗಿದ ನಂತರ ಕಣ್ಮರೆಯಾದನು, ಆದರೆ ಶ್ರೀಬಾಲಗಣೇಶನ ಮನಸ್ಸಿನಲ್ಲಿ ಮೂಡಿದ ಭಯವನ್ನು ಬಾಲಗಣೇಶನು ಕೇವಲ ಮಾತೃಪ್ರೇಮದಿಂದ ಸ್ವೀಕರಿಸಿದ್ದನು, ಮಗುವೇ ತಾಯಿಯ ಹಠವನ್ನು ಪೂರೈಸಿದ್ದನು. ಶ್ರೀಮಹಾದೇವ ಅಲ್ಲಿಂದ ಹೊರಟುಹೋದ ನಂತರ ಬಾಲಗಣೇಶನು ಮನಸ್ಸಿನಲ್ಲಿದ್ದ ಭಯವನ್ನು ಉಗುಳಿ ಹಾಕಿದನು ಮತ್ತು ಉಗುಳಿನಿಂದಲೇ ಒಬ್ಬ ಅತ್ಯಂತ ಭಯಂಕರ ರಾಕ್ಷಸನು ಸೃಷ್ಟಿಯಾದನು. ಉಗುಳಿದ ಭಯದಿಂದ ಹುಟ್ಟಿದ ರಾಕ್ಷಸನೇ ಅಂಧಃಕಾಸುರ.


ಅಂಧಃಕಾಸುರನು ಹುಟ್ಟಿದ ತಕ್ಷಣವೇ ತನ್ನ ರೂಪ ಮತ್ತು ಆಕಾರವನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಭಯಾನಕಗೊಳಿಸಲು ಪ್ರಾರಂಭಿಸಿದನು. ಬಾಲಗಣೇಶನು ಅವನೊಂದಿಗೆ ಯುದ್ಧವನ್ನು ಪ್ರಾರಂಭಿಸಿದನು, ಆದರೆ ಕೊನೆಗೆ ಆತ ಸಾಕ್ಷಾತ್ ಗಣೇಶನ ಮನಸ್ಸಿನಿಂದ ಹೊರಹಾಕಲ್ಪಟ್ಟ ಕೊಳಕಿನಿಂದಲೇ ಸೃಷ್ಟಿಯಾಗಿದ್ದನು. ಆದ್ದರಿಂದ ಅವನ ಸಾಮರ್ಥ್ಯವೂ ಕಡಿಮೆಯೇನೂ ಇರಲಿಲ್ಲ. ಯುದ್ಧವು ಇಪ್ಪತ್ತೊಂಬತ್ತು ದಿನಗಳ ಕಾಲ ನಡೆಯಿತು. ಮೂವತ್ತನೆಯ ದಿನ, ಮಾವನು ಅಳಿಯನಿಗೆ ಸಹಾಯ ಮಾಡಲು ನಿರ್ಧರಿಸಿದನು ಮತ್ತು ಶ್ರೀವಿಷ್ಣು ಬಾಲಗಣೇಶನ ಕಿವಿಯಲ್ಲಿನ ಭಿಕಬಾಳಿಯ ಮೇಲೆ ಸೂಕ್ಷ್ಮ ರೂಪದಲ್ಲಿ ಕುಳಿತು, ಸ್ವತಃದ (ಗಣೇಶನ) 'ಸೂರ್ಯಕೋಟಿ ಸಮಪ್ರಭ' ಸ್ವರೂಪದ ನೆನಪು ಮಾಡಿಕೊಟ್ಟನು. ಅದರೊಂದಿಗೆ ಕೋಟಿ ಸೂರ್ಯರ ತೇಜಸ್ಸು ಬಾಲಗಣೇಶನ ದೇಹದಿಂದ ಪ್ರಜ್ವಲಿಸಿತು ಮತ್ತು ನಂತರ ಸಹಜವಾಗಿಯೇ ಅಂಧಃಕಾಸುರ ಸಂಪೂರ್ಣವಾಗಿ ನಾಶವಾದನು. ಶ್ರೀಮಹಾದೇವನು ಹಿಂತಿರುಗಿ ಬಂದ ನಂತರ ಕಥೆಯನ್ನು ಕೇಳಿದಾಗ, ಅವನು ತಕ್ಷಣ ವಿಷ್ಣುಲೋಕಕ್ಕೆ ಹೋಗಿ ಶ್ರೀವಿಷ್ಣುವನ್ನು ಅತ್ಯಂತ ಕೃತಜ್ಞತೆಯಿಂದ ಮತ್ತು ಪ್ರೀತಿಯಿಂದ ಅಪ್ಪಿಕೊಂಡನು. ಗಣಪತಿಯ ಕಿವಿಯಲ್ಲಿ ಭಿಕಬಾಳಿ ಹಾಕುವ ಪದ್ಧತಿಯು ಕಥೆಯಿಂದಲೇ ಪ್ರಾರಂಭವಾಗಿದೆ ಎಂದು ಕಾಣುತ್ತದೆ.


ಸಂಪಾದಕೀಯದ ಕೊನೆಯಲ್ಲಿ ಸದ್ಗುರು ಶ್ರೀಅನಿರುದ್ಧ ಬಾಪೂ ಅವರು ಹೀಗೆ ಬರೆಯುತ್ತಾರೆ -

' ಕಥೆಯ ಆಧ್ಯಾತ್ಮಿಕ ಅರ್ಥ ಮತ್ತು ಪ್ರಭಾವವನ್ನು ನಾವು ನಾಳೆ (ಅಂದರೆ ನಮ್ಮ ಮುಂದಿನ ಪೋಸ್ಟ‌ನಲ್ಲಿ) ನೋಡೋಣ.'