ಗಜವದನ


(ದೈನಿಕ ಪ್ರತ್ಯಕ್ಷದ ಸಂಪಾದಕೀಯ – 31-08-2006)
(ದೈನಿಕ ಪ್ರತ್ಯಕ್ಷದ ಸಂಪಾದಕೀಯ – 31-08-2006)

ಶ್ರೀಗಣಪತಿಯ ಜನ್ಮಕಥೆಯಿಂದ ನಮಗೆ ಸಿಗುವ ಎರಡನೇ ಮಹತ್ವದ ತತ್ವವನ್ನು ಇಂದು ನೋಡೋಣ.

ಶಿವನು ಅಂದರೆ ಅಶುದ್ಧತೆಯ ನಾಶ ಮಾಡುವ ಪರಮಾತ್ಮನ ಅಭಿವ್ಯಕ್ತಿ. ಸಾಮಾನ್ಯ, ಅಶಿಕ್ಷಿತ ವ್ಯಕ್ತಿಯೂ ಕೂಡ ಅಶುದ್ಧ ಅಥವಾ ಹೀನಘಟನೆಗಳನ್ನು ನೋಡಿದಾಗ ಅಥವಾ ಕೇಳಿದಾಗ "ಶಿವ ಶಿವ!" ಅಂತಲೇ ತಕ್ಷಣ ಪ್ರತಿ ಸ್ಪಂದನೆ ನೀಡುತ್ತಾನೆ. ಯಾವುದೇ  ಔಪಚಾರಿಕ ಆಧ್ಯಾತ್ಮಿಕ ತರಬೇತಿಯಿಲ್ಲದೆಯೇ, ಪ್ರತಿಯೊಬ್ಬ ಭಾರತೀಯನು ಅಶುದ್ಧ ಮತ್ತು ಕೊಳಕು ಏನಾಗಿದ್ದರೂ ಅದನ್ನು "ಶಿವ" ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತಾನೆ ಎಂದು ಸಾಂಪ್ರದಾಯಿಕವಾಗಿ ತಿಳಿದಿದ್ದಾನೆ..

ಭಾರತದ ಎಲ್ಲ ಭಾಗಗಳಲ್ಲಿ ಜನರಲ್ಲಿ ಒಂದು ಗಟ್ಟಿಯಾದ ನಂಬಿಕೆ ಇದೆ—ಮಹಿಳೆಯ ಮೇಲೆ ಅಕ್ರಮ ಮಾಡಿರುವ ವ್ಯಕ್ತಿಯು ಶಿವನನ್ನು ಅಭಿಷೇಕ ಮಾಡಿದರೆ ಅಥವಾ ಶಿವನನ್ನು ಆರಾಧಿಸಿದರೆ, ಅವನಿಗೆ ತಕ್ಷಣವೇ ದಂಡನೆ ಸಂಭವಿಸುತ್ತದೆ. ಅಷ್ಟೇ ಅಲ್ಲ, ಇಂತಹ ವ್ಯಕ್ತಿ ಸಲುವಾಗಿ ಇಂತಹ ಆರಾಧನೆ ಮಾಡುವ ಅವನ ಕುಟುಂಬದವರಿಗೂ ಭೀಕರ ದುರಂತಗಳು ಎದುರಾಗುತ್ತವೆ. ಇತರ ನಂಬಿಕೆ ಏನೆಂದರೆ, ಹದಿನಾರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಿಂಸೆ ನೀಡುವ ವ್ಯಕ್ತಿಗೆ ಶಿವನು ಎಂದಿಗೂ ಸಂತೋಷ, ಆರೋಗ್ಯ ಅಥವಾ ಶಾಂತಿ ಅನುಭವಿಸಲು ಅವಕಾಶ ನೀಡುವುದಿಲ್ಲ.ಈ ಎಲ್ಲ ಪರಂಪರಾಗತ ಮತ್ತು ಸಾಂಪ್ರದಾಯಿಕ ನಂಬಿಕೆಗಳು ಪರಮಾತ್ಮನ ಸ್ವರೂಪವಾದ ಪರಮ ಶಿವನನ್ನು ಒಬ್ಬ ಪರಿಶುದ್ಧತೆಯ ರಕ್ಷಣೆಗಾಗಿ ಜಾಗರೂಕರಾಗಿರುವವನು ಮತ್ತು ಪಾಪಗಳನ್ನು ನಾಶಮಾಡಲು ಸಿದ್ಧರಾಗಿರುವವನು ಎಂದು ಬಹಿರಂಗಪಡಿಸುತ್ತವೆ


ಹೀಗಿರುವಾಗ, ಈ ಪವಿತ್ರತೆಯ ರಕ್ಷಕ ಶಿವನು ಹೇಗೆ ನಿರ್ದೋಷ ಬಾಲಕನಾದ ಗಣೇಶನ ತಲೆಯನ್ನು ಕತ್ತರಿಸಬಲ್ಲನು? ಅದು ಸಾಧ್ಯವೇ  ಇಲ್ಲ! ಈ ಘಟನೆ ಅರ್ಥವಲ್ಲದ ತಾತ್ವಿಕ ಮಟ್ಟದಲ್ಲಿ ನಡೆದದ್ದು.

ಶಿವನ "ಕರ್ಪೂರಗೌರ" ಎಂದರೆ ಕರ್ಪೂರದಂತೆ ಶುದ್ಧ ಹಾಗು ಶ್ವೇತ ವರ್ಣದವ. ಅಂತಹ ಪವಿತ್ರವಾದ ಸ್ವರೂಪಕ್ಕೆ ಮಾಯೆಯ ಪರಿಸರದಲ್ಲಿ ಅನೇಕ ವಿಧ ಸಾಧನೆ ಮತ್ತು  ಉಪಾಸನೆಗಳಿಂದ ತಯಾರಾದ ಮಂತ್ರ ಮತ್ತು ಶ್ಲೋಕಗಳಲ್ಲಿದ್ದ ಮಾನವೀಯ ಅಪವಿತ್ರ ಭಾವನೆ ಸಲ್ಲದು/ಸಹಿಸಲಾಗುವುದಿಲ್ಲ. 

ಪಾರ್ವತಿಯ ದ್ರವ್ಯಶಕ್ತಿಯಿಂದ ಹುಟ್ಟಿದ ಉಪಾಸನೆಗಳು ಅಪವಿತ್ರ ಉದ್ದೇಶಗಳಿಗಾಗಿ ಬಳಸಲು ಪ್ರಾರಂಭವಾದಾಗ, ಶಿವನು ಕ್ರೋಧದಿಂದ ಎದ್ದನು. ಆಗ ಅವನು ಇಂತಹ ಮಂತ್ರಗಳಲ್ಲಿ ಅಡಗಿರುವ ಮಾಯಾಬೀಜಗಳನ್ನು ನಾಶಮಾಡಿ, ಪ್ರತಿಯೊಂದು ಮಂತ್ರಕ್ಕೂ ಮೊದಲು ‘ಓಂ’ ಎಂಬ ಪ್ರಣವವನ್ನು ಕಡ್ಡಾಯಗೊಳಿಸಿದನು. ಈ ‘ಓಂ’ ಎಂಬ ಶಬ್ದವೇ ಆಗಿದೆ ಬಾಲಗಣೇಶನ ತಲೆಗೆ ಬದಲಾಗಿದ್ಧ ಆ ಗಜಮುಖ!
ವೇದಗಳಲ್ಲಿ ಕೂಡ ಪ್ರಾರಂಭದಲ್ಲಿ ವಿನಾಯಕ ಗಣಗಳನ್ನು ತೊಂದರೆದಾಯಕ ಮತ್ತು ವಿಘ್ನಕಾರಕರಾಗಿ ವಿವರಿಸಲಾಗಿದೆ. ಆದರೆ ಬ್ರಹ್ಮಣಸ್ಪತಿ—ಅಂದರೆ ಗಣಪತಿಯ ಮೂಲರೂಪ—ಪವಿತ್ರವಾದ ಶುದ್ಧ ರೂಪದಲ್ಲಿ ಮಾತ್ರ ಉಲ್ಲೇಖಿಸಲಾಗಿದೆ. ಈ ಎರಡು ವಿಷಯಗಳ ನಡುವಿನ ವಿರೋಧವು ಮೂಲಭೂತವಾಗಿ ವಿರೋಧಾಭಾಸವಲ್ಲ, ಆದರೆ ಇಲ್ಲಿರುವ ಪ್ರಮುಖ ಸೂತ್ರವೆಂದರೆ ಬ್ರಾಹ್ಮಣಸ್ಪತಿ (ಗಣಪತಿ) ನಿಯಮವಿಲ್ಲದ ವಿನಾಯಕ ಗಣ, ಅಂದರೆ ಓಂ ಇಲ್ಲದ ಅಶುದ್ಧ ಮಂತ್ರ ತಂತ್ರ, ಈ ಪ್ರಮುಖ ತತ್ವವನ್ನು ಇಲ್ಲಿ ಹೇಳಲಾಗಿದೆ. 



ಓಂ ಎಂಬ ಪ್ರಣವದ ಚಿಹ್ನೆಯ ಇತಿಹಾಸವನ್ನು ನೋಡಿದರೆ ಇಸವಿಯ ಮೊದಲಿನ ಕಾಲದಲ್ಲಿ ಕಂಡುಬಂದ ಹಳೆಯ ಶಿಲಾಶಾಸನಗಳಲ್ಲಿ ಈಗಿನಂತೆ (ॐ) ಬರೆದಿರಲಿಲ್ಲ, ಬದಲಾಗಿ ( ) ಈ 
ರೀತಿ ಇದ್ದವು.

ಸಂತ ಶ್ರೇಷ್ಠ ಜ್ಞಾನೇಶ್ವರರು ಬಹಳ ಸುಂದರವಾಗಿ ಹೇಳುತ್ತಾರೆ:

ಮನೆ ವಿರುಪದಲ್ಲಿ ಗಣೇಶೋತ್ಸವದಲ್ಲಿ ಗಣೇಶಮೂರ್ತಿಗೆ ಪುಷ್ಪಹಾರ ಅರ್ಪಿಸುತ್ತಿರುವ ಸದ್ಗುರು ಶ್ರೀಅನಿರುದ್ಧ ಬಾಪು
ಮನೆ ವಿರುಪದಲ್ಲಿ ಗಣೇಶೋತ್ಸವದಲ್ಲಿ ಗಣೇಶಮೂರ್ತಿಗೆ ಪುಷ್ಪಹಾರ ಅರ್ಪಿಸುತ್ತಿರುವ ಸದ್ಗುರು ಶ್ರೀಅನಿರುದ್ಧ ಬಾಪು

ಓಂ ನಮೋಜಿ ಆಧ್ಯಾ। ವೇದ ಪ್ರತಿಪಾಧ್ಯಾ।
ಜಯ ಜಯ ಸ್ವಸಂವೇಧ್ಯಾ। ಆತ್ಮರೂಪಾ॥"


ಹೀಗೆ ಸ್ಪಷ್ಟ ಮತ್ತು ಸರಳ ಪದಗಳಲ್ಲಿ, ಈ ಗಣೇಶನು ಈ ಜಗತ್ತಿನ ಮೊದಲ ಅಭಿವ್ಯಕ್ತಿಯಾದ ಓಂ ಶಬ್ದವನ್ನು ತನ್ನ ರೂಪವಾಗಿ ತೆಗೆದುಕೊಂಡಿದ್ದಾನೆ ಮತ್ತು ಆದ್ದರಿಂದ ಅವನು ಸ್ವಯಂ-ಅರಿವುಳ್ಳವನು ಎಂದು ಹೇಳಲಾಗಿದೆ.

ಗಣಪತಿ ಅಥರ್ವಶೀರ್ಷ ಎಂಬುದೇ ಮಹಾಗಣಪತಿಯ ಮೂಲಕಥೆಯ ಅತ್ಯುತ್ತಮ ವಿವರಣೆ. "ಥರ್ವ" ಎಂದರೆ ಚಂಚಲತೆ, ಗೊಂದಲ ಮತ್ತು ಚಂಚಲತೆ ಮತ್ತು ಗೊಂದಲವನ್ನು ತೆಗೆದುಹಾಕುವ ಮಂತ್ರ, ಅದೇ ಅಥರ್ವಶೀರ್ಷ ಮಂತ್ರ. ಮತ್ತು ಈ ಮಂತ್ರ ಎಲ್ಲಾ ಮಂತ್ರಗಳ ಮಸ್ತಕ ಪ್ರಾಯವಾಗಿದೆ  ಅಂದರೆ ದೇಹದಲ್ಲಿ ಶಿರ/ಮಸ್ತಕ ಹೇಗೆ ಉನ್ನತ ಸ್ಥಾನದಲ್ಲಿದೆಯೋ ಹಾಗೆ. ಅವನೇ ಗಣಪತಿ.



ಆದ್ದರಿಂದಲೇ ಪಾರ್ವತಿಗೆ ತನ್ನ ಮಗ ಗಣಪತಿಯ ಮೇಲಿನ ಪ್ರೀತಿ ಅಪಾರ. ಅನೇಕ ಕಥೆಗಳು ಅವರ ಬಾಂಧವ್ಯವನ್ನು ಸಾರುತ್ತವೆ. ಏಕೆಂದರೆ ‘ಓಂ’ ಎಂದರೆ ಯಾವ ಅನುಚಿತತೆಗೆ ಸಹ ಬೆಂಬಲವಿಲ್ಲ. ಅದು ಸದಾ ಯೋಗ್ಯತೆಯ ಪರವಾಗಿಯೇ ನಿಲ್ಲುತ್ತದೆ. ಈ ಕಾರಣಕ್ಕೇ, ಈ ಗಜವದನ, ಮಂಗಳಮೂರ್ತಿಯಾದ ಮಹಾಗಣಪತಿಯ ನಮಸ್ಕಾರವಿಲ್ಲದೆ ಯಾವುದೇ ಮಾನವ ಕಾರ್ಯ ಶುಭವಾಗದು.