ಆದ್ಯಬ್ರಹ್ಮಣಸ್ಪತಿ ಸೂಕ್ತದ, ಅಂದರೆ ಋಗ್ವೇದದ ಮೊದಲನೇ ಮಂಡಲದ 18ನೇ ಸೂಕ್ತದ ವಿವರಣೆ

ಆದ್ಯಬ್ರಹ್ಮಣಸ್ಪತಿ ಸೂಕ್ತದ, ಅಂದರೆ ಋಗ್ವೇದದ ಮೊದಲನೇ ಮಂಡಲದ 18ನೇ ಸೂಕ್ತದ ವಿವರಣೆ
ಸಂದರ್ಭ - ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಂದಿನ ಪ್ರತ್ಯಕ್ಷದಲ್ಲಿ, ಸಂತಶ್ರೇಷ್ಠ ಶ್ರೀ ತುಳಸಿದಾಸಜಿ ವಿರಚಿತ ಶ್ರೀರಾಮಚರಿತಮಾನಸದ ಸುಂದರಕಾಂಡವನ್ನು ಆಧರಿಸಿದ ‘ತುಳಸೀಪತ್ರ’ ಅಗ್ರಲೇಖನ ಸರಣಿಯ ಅಗ್ರಲೇಖನ ಸಂಖ್ಯೆ 854 - (24-06-2012).

ಸದ್ಗುರು ಶ್ರೀ ಅನಿರುದ್ಧರು ತಮ್ಮ ಸುಂದರಕಾಂಡದ ಕುರಿತು ದಿನಾಂಕ 24-06-2012ರ ಅಗ್ರಲೇಖನದಲ್ಲಿ, ಅಂದರೆ ತುಳಸೀಪತ್ರ 854 ರಲ್ಲಿ, ‘ಬ್ರಹ್ಮರ್ಷಿ ಶ್ಯಾವಾಶ್ವ ಆತ್ರೇಯರು’ ‘ಉದ್ದಾಲಕ’ನಿಗೆ ನೀಡಿದ ವಚನದಂತೆ, ಋಗ್ವೇದದ ಮೊದಲನೇ ಮಂಡಲದ 18ನೇ ಸೂಕ್ತವಾದ, ‘ಆದ್ಯಬ್ರಹ್ಮಣಸ್ಪತಿ ಸೂಕ್ತ’ ಎಂದು ಪ್ರಸಿದ್ಧವಾಗಿರುವ ಸೂಕ್ತದ ಬಗ್ಗೆ ಸಂಕ್ಷಿಪ್ತವಾಗಿ ಮತ್ತು ಸುಲಭವಾಗಿ ಅರ್ಥವಾಗುವಂತೆ ವಿವರಣೆ ನೀಡಿದ್ದಾರೆ.

ತುಳಸೀಪತ್ರ-854

ಸುನತ ಬಿನೀತ ಬಚನ ಅತಿ ಕಹ ಕೃಪಾಲ ಮುಸುಕಾಈ |

ಜೇಹಿ ಬಿಧಿ ಉತರೈ ಕಪಿ ಕಟಕು ತಾತ ಸೋ ಕಹಹು ಉಪಾಈ ||334||

(ಅರ್ಥ: ಸಮುದ್ರದ ಅತ್ಯಂತ ವಿನಯಪೂರ್ವಕವಾದ ಮಾತುಗಳನ್ನು ಕೇಳಿ ಕೃಪಾಳುವಾದ ಶ್ರೀರಾಮನು ಮುಗುಳು ನಕ್ಕು, "ಓ ತಂದೆಯೇ! ವಾನರ ಸೇನೆಯು ಸಮುದ್ರವನ್ನು ದಾಟಿ ಹೋಗುವ ಉಪಾಯವನ್ನು ಹೇಳು" ಎಂದನು.)

ಮಾಘಿ ಗಣೇಶೋತ್ಸವದಲ್ಲಿ, ಶ್ರೀ ಗಣಪತಿ ಅಥರ್ವಶೀರ್ಷದ ಪಠಣ ಸ್ಥಳದಲ್ಲಿ ಶ್ರೀ ಗಣೇಶ ಮೂರ್ತಿಯು ವಿರಾಜಮಾನವಾಗಿದೆ.
 

9 ಕಿರಾತ ಕಾಲ -

ಉದ್ದಾಲಕನಿಗೆ ನೀಡಿದ ವಚನದಂತೆ, ಬ್ರಹ್ಮರ್ಷಿ ಶ್ಯಾವಾಶ್ವ ಆತ್ರೇಯರು ಋಗ್ವೇದದ ಮೊದಲನೇ ಮಂಡಲದ 18ನೇ ಸೂಕ್ತ, ಯಾವುದು ‘ಆದ್ಯಬ್ರಹ್ಮಣಸ್ಪತಿ ಸ್ತೋತ್ರ’ ಎಂದು ಪ್ರಸಿದ್ಧ ಇದೆಯೋ, ಅದನ್ನು ಹೇಳಲು ಮತ್ತು ವಿವರಿಸಲು ಪ್ರಾರಂಭಿಸಿದರು.

ಸೂಕ್ತ 18

(1) ಸೋಮಾನಂ ಸ್ವರಣಂ ಕೃಣುಹಿ ಬ್ರಹ್ಮಣಸ್ಪತೇ ಕಕ್ಷೀವಂತಂ ಯಃ ಔಷಿಜಃ॥

ಹೇ ಜ್ಞಾನದ ಒಡೆಯನಾದ ಬ್ರಹ್ಮಣಸ್ಪತಿಯೇ! ನೀನು ಔಷಿಜನ ಮಗನಾದ ಕಕ್ಷೀವಾನ‌ನನ್ನು ತೇಜಸ್ವಿಯಾಗಿ ಮಾಡಿ ಅವನ ಪರಮೋತ್ಕರ್ಷವನ್ನು ಸಾಧಿಸಿದೆ, ಅದೆ ರೀತಿ ನಿನಗಾಗಿ ಸ್ತೋತ್ರವನ್ನು ಹಾಡುವ, ಆದರೆ ಅತ್ಯಂತ ಕ್ಷುಲ್ಲಕನಾದ ನನ್ನಂತಹ ಭಕ್ತನನ್ನು ಪ್ರಗತಿಯ ಪಥದಲ್ಲಿ ನಡೆಸು.

(2) ಯಃ ರೇವಾನ್‌ ಯಃ ಅಮೀವಹಾ ವಸುವಿತ್‌ ಪುಷ್ಟಿವರ್ಧನಃ ಸಃ ನಃ ಸಿಷುಕ್ತು ಯಃ ತುರಃ॥

ಹೇ ಬ್ರಹ್ಮಣಸ್ಪತಿಯೇ! ನೀನು ‘ರೇವಾನ್’ ಅಂದರೆ ಯಾವುದೇ ಐಶ್ವರ್ಯವನ್ನು ನೀಡಬಲ್ಲವನು, ನೀನೇ ‘ವಸುವಿತ್’ ಅಂದರೆ ಅತ್ಯಂತ ದಾನಶೂರ, ಹಾಗೆಯೇ ‘ಪುಷ್ಟಿವರ್ಧನ’ ಅಂದರೆ ಬಲವನ್ನು ವೃದ್ಧಿಗೊಳಿಸುವವನು ಮತ್ತು ‘ತುರಃ’ ಅಂದರೆ ಯಾವುದೇ ಕಾರ್ಯವನ್ನು ಶೀಘ್ರಗತಿಯಲ್ಲಿ ಮಾಡುವವನು. ಆದ್ದರಿಂದಲೇ, ನೀನು ನಮ್ಮ ಮೇಲೆ ಶೀಘ್ರವಾಗಿ ಕೃಪೆ ಮಾಡು.

(3) ಮಾ ನಃ ಶಂಸಃ ಅರರುಷಃ ಧೂರ್ತಿಃ ಪ್ರಣಙ್ ಮರ್ತ್ಯಸ್ಯ ರಕ್ಷ ನಃ ಬ್ರಹ್ಮಣಸ್ಪತೇ॥

ಹೇ ಬ್ರಹ್ಮಣಸ್ಪತಿಯೇ! ದುರಾಚಾರಿ ಮತ್ತು ಧೂರ್ತ ಶತ್ರುಗಳ ಮಾತುಗಳು ಹಾಗೂ ಅವರ ದುಷ್ಕರ್ಮಗಳಿಂದ ನಮಗೆ ತೊಂದರೆಯಾಗಲು ಬಿಡಬೇಡ,. ನಮ್ಮನ್ನು ಎಲ್ಲಾ ಕಡೆಯಿಂದ ರಕ್ಷಿಸು.

(4) ಸಃ ಧ ವೀರಃ ನ ರಿಷ್ಯತಿ ಯಂ ಇಂದ್ರಃ ಬ್ರಹ್ಮಣಸ್ಪತಿಃ ಸೋಮಃ ಹಿನೋತಿ ಮರ್ತ್ಯಂ॥

ಯಾವ ಮಾನವನ ಮೇಲೆ ಬ್ರಹ್ಮಣಸ್ಪತಿಯೊಂದಿಗೆ ಇಂದ್ರ ಮತ್ತು ಸೋಮರು ಕೃಪೆ ತೋರುತ್ತಾರೋ, ಆ ಭಕ್ತನು ಎಂದಿಗೂ ನಾಶವಾಗುವುದಿಲ್ಲ ಅಥವಾ ದುರ್ಬಲನಾಗುವುದಿಲ್ಲ.

(5) ತ್ವಂ ತಂ ಬ್ರಹ್ಮಣಸ್ಪತೇ ಸೋಮಃ ಇಂದ್ರಃ ಚ ಮರ್ತ್ಯಂ ದಕ್ಷಿಣಾ ಪಾತು ಅಂಹಸಃ ॥

ಹೇ ಬ್ರಹ್ಮಣಸ್ಪತಿಯೇ! ನೀನು ಸ್ವತಃ ಇಂದ್ರ, ಸೋಮ ಮತ್ತು ದಕ್ಷಿಣಾ (ದಕ್ಷ ಪ್ರಜಾಪತಿಯ ಮಗಳು) ಇವರೊಂದಿಗೆ ಭಕ್ತನನ್ನು ಅವನ ಪಾಪಗಳಿಂದ ಪಾರುಮಾಡಿ ಅವನನ್ನು ರಕ್ಷಿಸಬೇಕು ಎಂದು ವಿನಮ್ರ ಪ್ರಾರ್ಥನೆ.

(6) ಸದಸಃ ಪತಿಂ ಅದ್ಭುತಂ ಪ್ರಿಯಂ ಇಂದ್ರಸ್ಯ ಕಾಮ್ಯಂ ಸನಿಂ ಮೇಧಾಂ ಅಯಾಸಿಷಂ॥

ಹೇ ಬ್ರಹ್ಮಣಸ್ಪತಿಯೇ! ನೀನು ಎಲ್ಲಾ ಸದನಗಳ ಅಧಿಪತಿ, ಅಂದರೆ ಎಲ್ಲೆಲ್ಲಿ ಸಮೂಹವು ನಿರ್ಮಾಣವಾಗುತ್ತದೆಯೋ, ಅಲ್ಲಿನ ಸಾಂಘಿಕ ಭಾವನೆಯ ನಿಯಂತ್ರಕ ನೀನು. ಆದ್ದರಿಂದಲೇ ನೀನು ಒಂದೇ ಸಮಯದಲ್ಲಿ ಭಕ್ತರ ಸಂಘದಲ್ಲಿರುವ ಎಲ್ಲರ ಆಸೆಗಳನ್ನು ಪೂರೈಸಬಲ್ಲ ಅದ್ಭುತ ದಾನಶೂರ. ನೀನು ಕಿರಾತರುದ್ರನಿಗೆ ಅತ್ಯಂತ ಪ್ರಿಯನಾದವನು. ನನ್ನ ಮೇಧಾಶಕ್ತಿ, ಅಂದರೆ ಬುದ್ಧಿಯು ತೀಕ್ಷ್ಣವಾಗಿರಲಿ ಎಂದು ನಾನು ನಿನಗೆ ಪ್ರಾರ್ಥಿಸುತ್ತೇನೆ.

ಶ್ರೀ ಅನಿರುದ್ಧಗುರುಕ್ಷೇತ್ರದಲ್ಲಿ ಶ್ರೀಚಂಡಿಕಾಕುಲ ಮತ್ತು ಶ್ರೀಮೂಲರ್ಕ ಗಣೇಶ

 (7) ಯಸ್ಮಾತ್‌ ಋತೇ ನ ಸಿಧ್ಯತಿ ಯಃ ವಿಪಶ್ಚಿತಃ ಚ ನ ಸಃ ಧೀನಾಂ ಯೋಗಂ ಇನ್ವತಿ॥

ಯಾರ ಸಹಾಯ ಮತ್ತು ಆಧಾರವಿಲ್ಲದೆ ತಪಸ್ವಿಗಳ ತಪಸ್ಸು, ಗಾಯತ್ರಿ ಉಪಾಸಕರ ಯಜ್ಞ ಮತ್ತು ವಿದ್ವಾಂಸರ ಜ್ಞಾನಸಾಧನೆಯು ಯಶಸ್ವಿಯಾಗುವುದಿಲ್ಲವೋ, ಆ ಬ್ರಹ್ಮಣಸ್ಪತಿಯು ಶ್ರದ್ಧಾವಂತರ ಪ್ರಜ್ಞೆಗೆ ಸತತವಾಗಿ ಪ್ರೇರಣೆ ನೀಡುತ್ತಿರಲಿ.

ಈ ಋಚೆಯನ್ನು ‘ಜ್ಞಾನಸಾಧನಾಗಾಯತ್ರಿ’ ಎಂದು ಕರೆಯುತ್ತಾರೆ ಮತ್ತು ಇದರ ಅನುಷ್ಠಾನದಿಂದ ಮೂರು ವಿಷಯಗಳು ಸಿದ್ಧಿಸುತ್ತವೆ. ಅ) ಸಾಧಕನ ಬುದ್ಧಿಯು ತೀಕ್ಷ್ಣ ಮತ್ತು ಬಲಶಾಲಿ ಆಗುತ್ತದೆ ಬ) ಅವನ ಅರ್ಥವನ್ನು ಅರ್ಥ್ಮಮಾಡಿಕೊಳ್ಳುವ ಶಕ್ತಿ ಹೆಚ್ಚುತ್ತ ಹೋಗುತ್ತದೆ. ಕ) ಅವನು ಎಷ್ಟೇ ಜ್ಞಾನವಂತನಾದರೂ, ಅವನು ಚಂಡಿಕಾಕುಲಕ್ಕೆ ವಿನಮ್ರನಾಗಿ ಮತ್ತು ಶರಣಾಗತನಾಗಿ ಉಳಿಯುತ್ತಾನೆ.

(8) ಆತ್‌ ಹೃಧ್ನೋತಿ ಹವಿಷ್ಕೃತಿಂ ಪ್ರಾಂಚಂ ಕೃಣೋತಿ ಅಧ್ವರಂ ಹೋತ್ರಾ ದೇವೇಷು ಗಚ್ಛತಿ॥

ಈ ಮಹಾನ್ ಬ್ರಹ್ಮಣಸ್ಪತಿಯು ಯಜ್ಞ ಮಾಡುವವರ ಮತ್ತು ರೈತರ ನಿರಂತರ ಉನ್ನತಿಯನ್ನು ಮಾಡುತ್ತಿರುತ್ತಾನೆ. ಈ ಬ್ರಹ್ಮಣಸ್ಪತಿಯೇ ಎಲ್ಲಾ ರೀತಿಯ ಯಜ್ಞಗಳನ್ನು ಸಫಲ ಮತ್ತು ಸಂಪೂರ್ಣಗೊಳಿಸುತ್ತಾನೆ. ಈ ಬ್ರಹ್ಮಣಸ್ಪತಿಯೇ ಪರಮಾತ್ಮನನ್ನು ಪ್ರಶಂಸಿಸುವ ನಮ್ಮ ವಾಣಿಗೆ ಅರ್ಥಪೂರ್ಣಮಾಡುತ್ತಾನೆ.

(೯) ನರಾಶಂಸಂ ಸುಧೃಷ್ಟಮಂ ಅಪಶ್ಯಂ ಸ ಪ್ರಥಸ್ತಮಂ ದಿವಃ ನ ಸದ್ಮ-ಮಖಸಂ॥

ಸೂರ್ಯನಿಗಿಂತಲೂ ತೇಜಸ್ವಿಯಾಗಿರುವ, ಅತ್ಯಂತ ಪರಾಕ್ರಮಿಯಾಗಿರುವ, ಯಾವುದೇ ಕಾರ್ಯವನ್ನು ಸುಲಭವಾಗಿ ಮಾಡುವ, ಭಕ್ತರಿಗೆ ಅತ್ಯಂತ ಪ್ರಿಯನಾದ ಮತ್ತು ಮಾನವರಿಂದ ಯಾವಾಗಲೂ ಮೊದಲು ಪೂಜಿಸಲ್ಪಡುವ ಬ್ರಹ್ಮಣಸ್ಪತಿಯನ್ನು ನಾನು ಕಂಡೆನು ಮತ್ತು ಅವನ ದರ್ಶನದಿಂದ ತೃಪ್ತನಾದೆನು.

ಅಗ್ರಲೇಖನದ ಕೊನೆಯಲ್ಲಿ ಸದ್ಗುರು ಶ್ರೀ ಅನಿರುದ್ಧ ಬಾಪು ಬರೆಯುತ್ತಾರೆ -

‘ನನ್ನ ಪ್ರೀತಿಯ ಶ್ರದ್ಧಾವಂತ ಮಿತ್ರರೇ, ನಾವು ಅಷ್ಟವಿನಾಯಕನ ಪೂಜೆ ಮತ್ತು ದರ್ಶನದ ಸಮಯದಲ್ಲಿ, ಕಿರಾತರುದ್ರಪುತ್ರ ಬ್ರಹ್ಮಣಸ್ಪತಿ ಮತ್ತು ಪರಮಶಿವಪುತ್ರ ಗಣಪತಿ ಇವರ ಏಕರೂಪತ್ವದ ಸಾಕ್ಷಾತ್ಕಾರವನ್ನು ನೀಡುವ ಗೌರಿಪುತ್ರ ಸ್ವರೂಪವನ್ನು ಪೂಜಿಸುತ್ತೇವೆ.’
ಮಾಘಿ ಗಣೇಶೋತ್ಸವದಲ್ಲಿ ಅಷ್ಟವಿನಾಯಕನ ದರ್ಶನ ಪಡೆದ ಸದ್ಗುರು ಶ್ರೀ ಅನಿರುದ್ಧ ಬಾಪು