ನನ್ನ ಬಾಪೂ ಅವರ ಅನಂತ ಮತ್ತು ಅಗಾಧ ಲೀಲೆಗಳು! - ಶ್ವೇತಾವೀರಾ ಕಸೇಕರ್, ಮುಲುಂಡ್

ನನ್ನ ಬಾಪೂ ಅವರ ಅನಂತ ಮತ್ತು ಅಗಾಧ ಲೀಲೆಗಳು! - ಶ್ವೇತಾವೀರಾ ಕಸೇಕರ್, ಮುಲುಂಡ್

ಈ ಶ್ರದ್ಧಾವಂತ ಮಹಿಳೆ ತನಗಾದ ಹಲವಾರು ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಎಲ್ಲಾ ಅನುಭವಗಳನ್ನು ಓದಿದ ಮೇಲೆ ಸದ್ಗುರು ಅನಿರುದ್ಧರ ಅಪಾರ ಶಕ್ತಿಯ ಅರಿವಾಗದೇ ಇರಲಾರದು. ಸಂಕಟಗಳು ಅಥವಾ ಸಮಸ್ಯೆಗಳು ಏನೇ ಇರಲಿ, ಯಾರದ್ದೇ ಇರಲಿ, ಶ್ರದ್ಧಾವಂತರ ಆಶ್ರಯ ತಾಣ ಒಂದೇ - ಸದ್ಗುರು ಅನಿರುದ್ಧ!

ಹರಿ ಓಂ ಶ್ರೀರಾಮ ಅಂಬಜ್ಞ. ನಾನು ಶ್ವೇತಾವೀರಾ ಕಾಸೇಕರ್, ಮುಲುಂಡ್ (ಪೂರ್ವ) ಉಪಾಸನಾ ಕೇಂದ್ರ. ನಾನು Exim Bank ನಲ್ಲಿ Manager ಆಗಿ ಕೆಲಸ ಮಾಡುತ್ತಿದ್ದೇನೆ. 2002 ರಲ್ಲಿ ನಾನು B.Com. ಕೊನೆಯ ವರ್ಷದಲ್ಲಿದ್ದಾಗ ಮೊದಲ ಬಾರಿಗೆ ಬಾಪೂ ಅವರ ದರ್ಶನ ಪಡೆದೆ. ಡಿಸಿಲ್ವಾ ಶಾಲೆಯಲ್ಲಿ ಪ್ರವಚನದ ಆ ಕೊನೆಯ ಗುರುವಾರವಾಗಿತ್ತು. ಅದಾದ ನಂತರ ಪ್ರತಿ ಗುರುವಾರ ನಡೆಯುವ ಬಾಪೂ ಅವರ ಪ್ರವಚನ ಬಾಂದ್ರಾದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ನಡೆಯುವುದರಲ್ಲಿತ್ತು. ಮನೆಯಲ್ಲಿದ್ದ ತೊಂದರೆಗಳಿಂದಾಗಿ ನಾನು ತುಂಬಾ ಚಿಂತೆಯಲ್ಲಿದ್ದೆ. ನನ್ನ ಚಿಕ್ಕಮ್ಮ ಬಾಪೂ ಅವರ ಹತ್ತಿರ ಮೊದಲಿನಿಂದಲೂ ಹೋಗುತ್ತಿದ್ದರು ಆದರೆ ನನಗೆ ಆ ಸಮಯದಲ್ಲಿ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ. ಮಾಹಿತಿ ಸಿಕ್ಕಾಗ, ಮನಸ್ಸಿನಲ್ಲಿ ಸಾಕಷ್ಟು ಚಿಂತೆಗಳಿದ್ದರಿಂದ ನಾನು ಕೂಡ ಬಾಪೂ ಅವರ ಹತ್ತಿರ ಹೋಗಿ ನೋಡೋಣ ಎಂದು ಯೋಚಿಸಿದೆ. ನಾನು ಮೊದಲ ಬಾರಿಗೆ ಡಿಸಿಲ್ವಾ ಶಾಲೆಗೆ ಪ್ರವಚನಕ್ಕೆ ಹೋದಾಗ, ಮನಸ್ಸಿನಲ್ಲೇ ಬಾಪೂ ಅವರಿಗೆ ಹೇಳಿದೆ, 'ಇನ್ಮುಂದೆ ಬರುವ ಗುರುವಾರದಿಂದ ಪ್ರವಚನ ಬಾಂದ್ರಾದಲ್ಲಿ ಇರುತ್ತೆ, ಹಾಗಾಗಿ ನನಗೆ ಅಲ್ಲಿಗೆ ಬರಲು ಖಂಡಿತಾ ಸಾಧ್ಯವಾಗಲ್ಲ.' ಅದೇ ರಾತ್ರಿ ನನ್ನ ಕನಸಿನಲ್ಲಿ ಬಾಪೂ ಬಂದರು ಮತ್ತು ಆಮೇಲೆ ಹೇಗೆ ಅಂತ ಗೊತ್ತಿಲ್ಲ, ನಾನು ಪ್ರತಿ ಗುರುವಾರ ಪ್ರವಚನಕ್ಕೆ ಹೋಗಲು ಶುರು ಮಾಡಿದೆ.

B.Com. ನಲ್ಲಿ ನನಗೆ 77% ಸಿಕ್ಕಿತು. ಆಮೇಲೆ ನನಗೆ ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ಕೆಲಸ ಮಾಡುವ ಇಚ್ಛೆಯಿತ್ತು. ಭಂಡಾರ್ಕರ್ ಕಾಳೆ ಸಿ.ಎ. ಫರ್ಮ್‌ನಲ್ಲಿ ನನಗೆ ಬ್ಯಾಂಕ್ Audit ನ ಒಳ್ಳೆಯ ಅನುಭವ ಸಿಕ್ಕಿತು. ಆದರೆ ಬ್ಯಾಂಕಿಂಗ್ ಸೆಕ್ಟರ್‌ನ ಹಲವಾರು ಪರೀಕ್ಷೆಗಳನ್ನು ಬರೆದರೂ ಮನಸ್ಸಿಗೆ ಒಪ್ಪುವ ನೌಕರಿ ಸಿಗುತ್ತಿರಲಿಲ್ಲ. ನಾನು ಸುಚಿತ್‌ದಾದಾ ಅವರ ಬಳಿ ನನ್ನ ಈ ಪ್ರಶ್ನೆಯನ್ನು ತಗೆದುಕೊಂಡು ಹೋದೆ. ಅವರು ನನಗೆ ಕೆಲವು ಉಪಾಸನೆಗಳನ್ನು ಮಾಡಲು ಹೇಳಿದರು. ಒಂದೂವರೆ ವರ್ಷ ನಾನು ಭಂಡಾರ್ಕರ್ ಕಾಳೆ ಫರ್ಮ್‌ನಲ್ಲಿದ್ದೆ. ಅಲ್ಲಿ ನನಗೆ ತುಂಬಾ ಒಳ್ಳೆಯ ಅನುಭವ ಸಿಕ್ಕಿತು. ಕಾಲಕ್ರಮೇಣ ನನಗೆ ಎನ್.ಕೆ.ಜಿ.ಎಸ್.ಬಿ. ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿತು. ಅಲ್ಲಿ ನಾನು ಅರ್ಧ ಸಂಬಳಕ್ಕೆ ಕೆಲಸ ಮಾಡಿದೆ. ಅದಾದ ನಂತರ ನನ್ನ ಆಯ್ಕೆ ಸಾರಸ್ವತ್ ಬ್ಯಾಂಕ್‌ನಲ್ಲಿ Officer ಹುದ್ದೆಗೆ ಆಯಿತು. ಆದರೆ ನಾನು ಮುಂಬೈಯಿಂದ ಹೊರಗೆ ಹೋಗಲು ನಿರಾಕರಿಸಿದೆ. ಕೊನೆಗೆ Exim Bank ನಲ್ಲಿ ನನ್ನ ಆಯ್ಕೆಯಾಗಿ ನನ್ನನ್ನು  ಸಂದರ್ಶನಕ್ಕೆ ಕರೆಲಾಯಿತು. ನಾನು ಮನಸ್ಸಿನಲ್ಲೇ ಬಾಪೂ ಅವರಿಗೆ ಕೃತಜ್ಞತೆ ಸಲ್ಲಿಸಿದೆ ಏಕೆಂದರೆ ಯಾವುದೇ ಶಿಫಾರಸು ಅಥವಾ ಆ ಕೆಲಸಕ್ಕೆ ಬೇಕಾದ ಅಗತ್ಯ ಶಿಕ್ಷಣವಿಲ್ಲದಿದ್ದರೂ ನನ್ನನ್ನು ಆಯ್ಕೆ ಮಾಡಲಾಗಿತ್ತು; ಅದೂ ಕೂಡ ವರ್ಧಮಾನ ವ್ರತಾಧಿರಾಜನ ಕಾಲದಲ್ಲಿ. ವ್ರತವನ್ನು ಮಾಡಿ ನಾನು ಗುರುವಾರ ಸಂದರ್ಶನಕ್ಕೆ ಹೋದೆ. ಲಿಖಿತ ಪರೀಕ್ಷೆ ತುಂಬಾ ಚೆನ್ನಾಗಿ ಆಯಿತು. ಬ್ಯಾಂಕ್‌ನ ಫಾರ್ಮ್ ತುಂಬುವಾಗ ನಾನು 'ಇತರ ಚಟುವಟಿಯಲ್ಲಿ  ಎಎಡಿಮ್ ಬಗ್ಗೆ ಬರೆದಿದ್ದೆ. ಅದರ ಬಗ್ಗೆಯೇ ನನಗೆ ಪ್ರಶ್ನೆ ಕೇಳಲಾಯಿತು. ಈ ಅವಕಾಶವನ್ನು ಬಳಸಿಕೊಂಡು ನಾನು ಅವರಿಗೆ ನಮ್ಮ ಸಂಸ್ಥೆಯ ಕಾರ್ಯಗಳಾದ Eco-friendly  ಗಣೇಶ ಮೂರ್ತಿ, ಸ್ವಚ್ಛತಾ ಅಭಿಯಾನ,  ಎಎಡಿಮ್ ನ ಎಲ್ಲಾ ಮಾಹಿತಿಯನ್ನು ನೀಡಿದೆ. ಕೊಲ್ಹಾಪುರ ವೈದ್ಯಕೀಯ ಶಿಬಿರದ ಬಗ್ಗೆಯೂ ನಾನು ಅವರಿಗೆ ಸಂಕ್ಷಿಪ್ತವಾಗಿ ತಿಳಿಸಿದೆ. ಅವರು ಈ ಎಲ್ಲಾ ಚಟುವಟಿಕೆಯನ್ನು ಪ್ರಶಂಸಿಸಿದರು ಮತ್ತು 'ಈಕೆ ಎಲ್ಲಾ ಕ್ಷೇತ್ರದಲ್ಲೂ ಹುಷಾರಾಗಿದ್ದಾಳೆ' ಎಂದು ಯೋಚಿಸಿ ನನ್ನನ್ನು ಆಯ್ಕೆ ಮಾಡಿಕೊಂಡರು. ನನ್ನ ವರ್ಧಮಾನ ವ್ರತದ ಮೊದಲ ವರ್ಷದಲ್ಲೇ ಬಾಪೂ ನನಗೆ Exim Bank ನಲ್ಲಿ ಕೆಲಸದ ಉಡುಗೊರೆ ನೀಡಿದರು. ನನ್ನಿಂದ ಮಾಡಿಸಿದ ಉಪಾಸನೆಗಳ ಫಲವೇ ಇದು ಎಂದು ನಾನು ನಂಬುತ್ತೇನೆ.

ಇದರ ನಂತರ ಕೆಲಸದ ಜೊತೆಜೊತೆ ನಾನು ಮ್ಯಾನೇಜ್‌ಮೆಂಟ್ ಪರೀಕ್ಷೆ ಬರೆಯಲು ನಿರ್ಧರಿಸಿದೆ. ಆದರೆ ಪೇಪರ್ ಅಷ್ಟೇನೂ ಚೆನ್ನಾಗಿ ಆಗಲಿಲ್ಲ. ನಾನು ಕೇವಲ 30 ಮಾರ್ಕ್ಸ್‌ನ ಪೇಪರ್ ಮಾತ್ರ ಸರಿಯಾಗಿ ಬರೆದಿದ್ದೆ. ಅದೇ ಸಮಯದಲ್ಲಿ ಒಂದು ಗುರುವಾರ 10ನೇ ಮತ್ತು 12ನೇ ತರಗತಿಯ ಪರೀಕ್ಷೆ ಬರೆಯುವ ಮಕ್ಕಳು ಬಾಪೂ ಅವರ ದರ್ಶನಕ್ಕೆ ಬಂದಿದ್ದರು. ಆ ಸಮಯದಲ್ಲಿ ನಾನು ಕೂಡ ದರ್ಶನ ಪಡೆದೆ. ಬಾಪೂ ಆ ದಿನದ ಪ್ರವಚನದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದರು. ಅದನ್ನು ಕೇಳಿ ನಾನು ಕೂಡ ನಿಶ್ಚಿಂತೆಯಾದೆ. ರಿಸಲ್ಟ್ ಬಂದಾಗಲಂತೂ ನಾನು ಆಶ್ಚರ್ಯಚಕಿತಳಾದೆ. ಕೇವಲ 30% ಪೇಪರ್ ಮಾತ್ರ ಸರಿಯಾಗಿ ಬರೆದಿದ್ದರೂ ನನಗೆ 50% ಸಿಕ್ಕಿತ್ತು.

ನನ್ನ ಪರೀಕ್ಷೆ ನಡೆಯುತ್ತಿರುವಾಗಲೇ ಒಂದು ದಿನ ಮಾತೃವಾತ್ಸಲ್ಯ ಉಪನಿಷತ್‌ನ ಪ್ರಕಾಶನ ಸಮಾರಂಭವಿತ್ತು. ಬಾಪೂ ಉಪನಿಷತ್ತಿನ ಬಗ್ಗೆ ನೀಡಿದ ಮಾಹಿತಿಯನ್ನು ಕೇಳಿ, ನಾವು ಈ ಸುವರ್ಣ ಮಹೋತ್ಸವದ ಸಾಕ್ಷಿಯಾಗಿದ್ದೇವೆ ಎಂದು ಹೆಮ್ಮೆ ಎನಿಸಿತು. ಆ ದಿನ ರಾತ್ರಿ ಕೂಡ ಕೇವಲ 50% ಮಾತ್ರ ಓದಲು ಸಾಧ್ಯವಾಗಿತ್ತು. ಮರುದಿನ ನಾನು ಓದಿದ್ದ ಪ್ರಶ್ನೆಗಳೇ ಬಂದವು ಮತ್ತು ನಾನು ಪರೀಕ್ಷೆಯಲ್ಲಿ ಪಾಸ್ ಆದೆ. ಇದೇ ನನ್ನ ಬಾಪೂ ಅವರ ಪವಾಡ! ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಬಾಪೂ ಅವರೇ ನನ್ನಿಂದ ಕೆಲಸ ಮತ್ತು ಶಿಕ್ಷಣ ಎರಡನ್ನೂ ಪೂರೈಸುವಂತೆ ಮಾಡಿದರು. ಬಾಪೂ ಅವರೇ ನನ್ನ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದರು. ನನ್ನ ತಾಯಿಗೂ ಯೋಗ್ಯವಾದ ಸ್ಥಳಕ್ಕೆ ವರ್ಗಾವಣೆಯಾಯಿತು ಮತ್ತು ನನ್ನ ಅಣ್ಣನಿಗೂ ಕೆಲಸ ಸಿಕ್ಕಿತು. ಬಾಪೂ ನಮ್ಮನ್ನು ಕಾಲಕಾಲಕ್ಕೆ ತುಂಬಾ ಚೆನ್ನಾಗಿ ಸಾಕಿ ಸಲಹಿದ್ದಾರೆ.

ನನ್ನ ತಾತನ ಒಂದು ಅನುಭವವನ್ನು ಎಲ್ಲರಿಗೂ ಖಂಡಿತವಾಗಿ ಹೇಳಬೇಕೆಂದುಕೊಂಡಿದ್ದೇನೆ. ಅವರು ನನ್ನ ಚಿಕ್ಕಮ್ಮನ ಮನೆಯಲ್ಲಿ ಇರುತ್ತಿದ್ದರು. ಅವರಿಗೆ 85 ವರ್ಷ ವಯಸ್ಸಾಗಿದ್ದಾಗ Prostate Cancer ಇರುವುದು ಪತ್ತೆಯಾಯಿತು. ಅವರು ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು. ಒಂದು ಶನಿವಾರ ನನ್ನ ಚಿಕ್ಕಮ್ಮ ಫೋನ್ ಮಾಡಿ ತಾತ ನೋವಿನಿಂದ ನರಳುತ್ತಿದ್ದಾರೆ ಎಂದು ಹೇಳಿದರು. ನಾನು ತಕ್ಷಣವೇ ಸುಚಿತ್‌ದಾದಾ ಅವರ ಹತ್ತಿರ ಹೋದೆ. ಡಾ. ಶಿವಸಿಂಗ್ ಇವರು ಫೈಲ್ ನೋಡಿದ ತಕ್ಷಣ ಹೇಳಿದರು, "ಇದು ನಾಲ್ಕನೇ  ಸ್ಟೇಜನ ಕ್ಯಾನ್ಸರ್ ಆಗಿದೆ ಮತ್ತು ಗುಣಮುಖರಾಗುವುದು ಕಷ್ಟ." ಆಮೇಲೆ ನಾನು ಸುಚಿತ್‌ದಾದಾ ಅವರಿಗೆ ನನ್ನದೊಂದೇ ಆಸೆಯನ್ನು ಹೇಳಿದೆ, ಕೊನೆಯ ಕ್ಷಣದಲ್ಲಿ ತಾತನಿಗೆ ಯಾವುದೇ ನೋವು ಇರಬಾರದು ಅಷ್ಟೇ. ದಾದಾ ನಮಗೆ ತಾತನಿಗಾಗಿ ರಾಮರಕ್ಷಾ ಸ್ತೋತ್ರ ಹೇಳಲು ಹೇಳಿದರು. ಬಾಪೂ ಇಲ್ಲೂ ನನ್ನ ತಾತನ ಕಾಳಜಿ ವಹಿಸಿದರು ಮತ್ತು ಮರುದಿನವೇ ಚಿಕ್ಕಮ್ಮನ ಫೋನ್ ಬಂತು, ಅಣ್ಣನ (ತಾತನ) ನೋವು ಸಂಪೂರ್ಣವಾಗಿ ನಿಂತುಹೋಗಿದೆ ಎಂದು. ಅವರು ಹಾಸಿಗೆಯಲ್ಲೇ ಮಲಗಿದ್ದರೂ ತುಂಬಾ ಆರಾಮವಾಗಿದ್ದರು. ಸುಮಾರು ಎರಡು ವರ್ಷಗಳ ನಂತರ ತಾತ ಯಾವುದೇ ನೋವಿಲ್ಲದೇ ಕೊನೆಯುಸಿರೆಳೆದರು.

ಅದರ ನಂತರ ಒಂದು ದಿನ ಬಾಪೂ ನನ್ನ ಕನಸಿನಲ್ಲಿ ಬಂದರು ಮತ್ತು ನಾನು ನೋಡಿದಾಗ ಅವರ ಮುಖ ಪೂರ್ತಿ ಗಾಯಗೊಂಡಂತೆ ಕಾಣುತ್ತಿತ್ತು. ತಾತ ಅನುಭವಿಸಬೇಕಾಗಿದ್ದ ಎಲ್ಲಾ ಕಷ್ಟಗಳನ್ನು ಬಾಪೂ ಅವರೇ ತಮ್ಮ ಮೇಲೆ ತಗೆದುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಮಗಾಗಿ ಬಾಪೂ ಎಷ್ಟು ಕಷ್ಟ ಸಹಿಸಬೇಕಾಗುತ್ತೆ ಅಲ್ವಾ! ತಾತನಿಗೆ ಕೊನೆಯ ಕ್ಷಣದಲ್ಲಿ ಬಾಪೂ ಅವರನ್ನು ಒಂದು ಸಣ್ಣ ಮಗುವಿನಂತೆ ಸಾಕಿ ಸಲಹಿದರು.

ನನಗೆ ಇನ್ನೊಂದು ಅನುಭವ ಹೇಳಬೇಕಾಗಿದೆ, ಅದು ಶ್ರೀಗುರುಕ್ಷೇತ್ರಮದ್ದು. ಶ್ರೀ ಅನಿರುದ್ಧ ಗುರುಕ್ಷೇತ್ರಮದಲ್ಲಿ ದೊಡ್ಡ ಅಮ್ಮನಿಗೆ ಮಾಡಿದ ಪ್ರಾರ್ಥನೆ ಎಂದಿಗೂ ವ್ಯರ್ಥವಾಗಲು ಸಾಧ್ಯವಿಲ್ಲ. ನನ್ನ ತಾಯಿಗೆ  ಸ್ಪೊಂಡಿಲೈಟಿಸ ವೇದನೆ ಶುರುವಾಗಿತ್ತು. ಆಕೆಯನ್ನು ಮುಲುಂಡ್‌ನ ಆಸ್ಪತ್ರೆಗೆ ಸೇರಿಸಲಾಯಿತು ಮತ್ತು  Traction  ಶುರುವಾಯಿತು. ನಂತರ ಒಂದು ತಿಂಗಳು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದರು. ನಾನು ತುಂಬಾ ಹೆದರಿಹೋದೆ ಮತ್ತು ನನ್ನ ತಾಯಿ ಇನ್ನು ಎಂದಿಗೂ ಗುಣಮುಖಳಾಗುವುದಿಲ್ಲ ಎಂದುಕೊಂಡೆ. ನಾನು ಗುರುಕ್ಷೇತ್ರಮದಲ್ಲಿ ದೊಡ್ಡ ಅಮ್ಮನಿಗೆ ಮತ್ತು ತ್ರಿವಿಕ್ರಮನಿಗೆ ಪ್ರಾರ್ಥನೆ ಮಾಡಿದೆ.

ಆಮೇಲೆ ಮನೆಗೆ ಬಂದಾಗ ಕಂಡ ದೃಶ್ಯವನ್ನು ನೋಡಿ ನಾನಂತೂ ಆಶ್ಚರ್ಯಚಕಿತಳಾದೆ. ಮನೆಯ ಬಾಗಿಲಿಗೆ ಹಾರ ಹಾಕಲಾಗಿತ್ತು. ತಾಯಿಯ ಬಳಿ ಇದರ ಬಗ್ಗೆ ಕೇಳಿದಾಗ ಆಕೆ ಹೇಳಿದಳು, "ನಿನ್ನ ಚಿಕ್ಕಮ್ಮನ ಹುಟ್ಟಿದ ಹಬ್ಬದ ನಿಮಿತ್ತ ಆಕೆ ಪುಷ್ಪಸೇವೆ ತೆಗೆದುಕೊಂಡಿದ್ದರಿಂದ ನಾನು ಆಕೆಯ ಜೊತೆ ಗುರುಕ್ಷೇತ್ರಮಕ್ಕೆ ಹೋಗಿ ಬಂದೆ ಮತ್ತು ಪ್ರಸಾದದ ರೂಪದಲ್ಲಿ ಸಿಕ್ಕ ಹಾರವನ್ನು ನಮ್ಮ ಬಾಗಿಲಿಗೆ ಹಾಕಿದ್ದೇನೆ." ನನ್ನ ತಾಯಿ ಗುಣಮುಖಳಾಗಿರುವುದನ್ನು ನೋಡಿ ನಾನಂತೂ ಮೂಕವಿಸ್ಮಿತಳಾದೆ. ನಾನು ದೊಡ್ಡ ಅಮ್ಮನ ಹತ್ತಿರ ಹಠ ಮಾಡಿ ಪ್ರಾರ್ಥನೆ ಮಾಡುವುದೇನು, ತಕ್ಷಣವೇ ತಾಯಿ ನಡೆದುಕೊಂಡು ಗುರುಕ್ಷೇತ್ರಮಕ್ಕೆ ಹೋಗುವುದೇನು! ಇದೆಲ್ಲವೂ ನನ್ನ ತಿಳುವಳಿಕೆಗೆ ಮೀರಿದ್ದಾಗಿತ್ತು. ನಮ್ಮ ಮೇಲೆ ದೊಡ್ಡ ಅಮ್ಮನಿಗೆ ಮತ್ತು ಬಾಪೂ ಅವರಿಗೆ ಎಷ್ಟು ಕರುಣೆ ಇದೆ ಅಲ್ವಾ! ನನಗೆ ತಿಳಿಯದಂತೆಯೇ ದೊಡ್ಡ ಅಮ್ಮ ನನಗೆ ತುಂಬಾ ದೊಡ್ಡ ಉಡುಗೊರೆಯನ್ನು ನೀಡಿದ್ದರು.

ನನ್ನ ಸ್ನೇಹಿತೆಯೊಬ್ಬಳಿಗೆ ಮಕ್ಕಳಿಲ್ಲದ ಕಾರಣ ತುಂಬಾ ನಿರಾಶಳಾಗಿದ್ದಳು. ಒಂದು ದಿನ ಆಕೆ ನನ್ನ  ಡೆಸ್ಕಿನ ಮೇಲೆ ಬಾಪೂ ಅವರ ಫೋಟೋ ನೋಡಿದಳು. ಆಗ ಆಕೆ ಅವರ ಬಗ್ಗೆ ವಿಚಾರಿಸಿದಳು. ನಾನು ಆಕೆಗೆ ಬಾಪೂ ಅವರ ಬಗ್ಗೆ ಮಾಹಿತಿ ನೀಡಿದೆ ಮತ್ತು ತಕ್ಷಣವೇ ಗಣೇಶ ಉತ್ಸವವಿದ್ದರಿಂದ ಬಾಪೂ ಅವರ ಮನೆಯ ಗಣಪತಿಯ ಹಾಗೂ ಬಾಪೂ ಅವರು ತಿಳಿಸಿದ ಸಂಕಲ್ಪ ಅಡಿಕೆಯ ಬಗ್ಗೆ ಹೇಳಿದೆ. ಆಕೆ ಸಾಕಷ್ಟು 'ದೇವ್ರು ದೇವ್ರು' ಅಂತ ಪೂಜೆ, ಹರಕೆಗಳನ್ನು ಮಾಡಿದ್ದಳು. ಆಗ ನಾನು ಆಕೆಗೆ ಹೇಳಿದೆ, "ನಿನಗೆ ಸರಿ ಅನಿಸಿದರೆ ನೀನು ಬಾಪೂ ಅವರ ದರ್ಶನಕ್ಕೆ ಬಾ ಮತ್ತು ಸಂಕಲ್ಪ ಅಡಿಕೆಯನ್ನು ತಗೆದುಕೊಂಡು ಸಂಕಲ್ಪ ಮಾಡು. ಬಾಪೂ ಖಂಡಿತ ನಿನಗೆ ಸಹಾಯ ಮಾಡುತ್ತಾರೆ." ಆಕೆ ಅದೇ ರೀತಿ ಮಾಡಿದಳು ಮತ್ತು ಅದೇ ವರ್ಷ ಆಕೆಗೆ ಒಂದು ಮುದ್ದಾದ ಮಗು ಆಯಿತು. ಮೊದಲ ಬಾರಿಗೆ ಗಣೇಶ ಉತ್ಸವಕ್ಕೆ ಬಂದ ನನ್ನ ಸ್ನೇಹಿತೆಯ ಮನದಾಸೆಯೂ ಬಾಪೂ ಅವರ ಕೃಪೆಯಿಂದ ಈಡೇರಿತು.

ಪ್ರತಿಯೊಬ್ಬರ ಜೀವನದಲ್ಲೂ ಸಂಕಟಗಳು ಬಂದೇ ಬರುತ್ತವೆ. ಆದರೆ ನಮ್ಮ Dad ಸರಿಯಾದ ಮಾರ್ಗದರ್ಶನ ನೀಡಿ ಪ್ರತಿಯೊಬ್ಬ ಭಕ್ತನನ್ನು ಅದರಿಂದ ಸುಲಭವಾಗಿ ಹೊರಗೆ ತರುತ್ತಾರೆ, ಇದನ್ನು ನಾನು ಮತ್ತು ನನ್ನ ಸಿಬ್ಬಂದಿ ಹಾಗೂ ಕುಟುಂಬದವರು ಸಂಪೂರ್ಣ ವಿಶ್ವಾಸದಿಂದ ಎಲ್ಲರಿಗೂ ಹೇಳುತ್ತಿದ್ದೇವೆ. 

ನಾನು ಅಂಬಜ್ಞ.

ಹರಿ ಓಂ

ನಾಥಸಂವಿಧ

-------------------------------------------------------------------------------

Hindi English