ಅಸಾಧ್ಯವನ್ನು ಸಾಧ್ಯವನ್ನಾಗಿ ಮಾಡುವವರು ಸದ್ಗುರು ಅನಿರುದ್ಧ ! - ಅವಿನಾಶಸಿಂಹ ದೇಶಮುಖ, ಬುರ್ಹಾನಪುರ

ಅಸಾಧ್ಯವನ್ನು ಸಾಧ್ಯವನ್ನಾಗಿ ಮಾಡುವವರು ಸದ್ಗುರು ಅನಿರುದ್ಧ !  -  ಅವಿನಾಶಸಿಂಹ ದೇಶಮುಖ, ಬುರ್ಹಾನಪುರ

ಕೆಟ್ಟ ಅಭ್ಯಾಸಗಳು ತುಂಬಾ ಬೇಗ ಅಂಟಿಕೊಳ್ಳುತ್ತವೆ ಮತ್ತು ಎಷ್ಟೇ ಪ್ರಯತ್ನ ಮಾಡಿದರೂ ಅವುಗಳನ್ನು ಬಿಡಿಸುವುದು ಅಸಾಧ್ಯವೆಂದು ಹೇಳಲಾಗುತ್ತದೆ. ಆದರೆ ಈ ಭಕ್ತನ ತಂದೆಯ ಜೀವನದಲ್ಲಿ ನಡೆದದ್ದು, ಸದ್ಗುರು ಅನಿರುದ್ಧರ ಕೃಪೆಯಿಂದಲೇ ಸಾಧ್ಯವಾಯಿತು; ಇಲ್ಲದಿದ್ದರೆ ಅದು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ ಎಂದು ಈ ಭಕ್ತ ದೃಢವಾಗಿ ಹೇಳುತ್ತಾರೆ.

ಹರಿ ಓಂ. ಮಹಾತಾಯಿ ಮಹಿಷಾಸುರಮರ್ದಿನಿ ಹಾಗು ಸದ್ಗುರು ಶ್ರೀ ಅನಿರುದ್ಧ ಬಾಪೂರವರಿಗೆ ವಂದಿಸಿ ನಾನು ನನಗೆ ಬಂದಿರುವ, ನನ್ನ ತಂದೆಯವರ ಒಂದು ಮರೆಯಲಾಗದ ಅನುಭವವನ್ನು ಹೇಳುವವನಿದ್ದೇನೆ. ಬಾಪೂರವರ ಆಶೀರ್ವಾದದಿಂದ ನಾನು ಮೇ 2018 ರಿಂದ ಬಾಪೂರವರ ಸಾನಿಧ್ಯದಲ್ಲಿ ಇದ್ದೇನೆ  ಎಂದು ನಾನು ಸಂತೋಷದಿಂದ ಹೇಳಬಯಸುವೆ. ಕೇವಲ ಒಂದೇ ವರ್ಷದಲ್ಲಿ ನನಗೆ ಬಾಪೂರವರ ಅಸಂಖ್ಯ ಅನುಭವಗಳು ಬಂದಿವೆ.

ನನ್ನ ತಂದೆಯವರು ಕಳೆದ ಮೂವತ್ತು ವರ್ಷಗಳಿಂದ ಮದ್ಯಪಾನ ಮಾಡುತ್ತಿದ್ದರು. 10 ಡಿಸೆಂಬರ್ 2018 ರ ದಿನ ಅವರು ಮದ್ಯಸೇವನೆ ಮಾಡಿದ್ದಿತ್ತು. ಸಾತತ್ಯದಿಂದ ಮದ್ಯ ಸೇವಿಸುವದಿಂದ ಅವರ ಆರೋಗ್ಯ ಅಕಸ್ಮಾತ್ತಾಗಿ ಕೆಟ್ಟಿತು. ನಾವು ಊರಲ್ಲಿ ಉಪಲಬ್ಧವಿರುವ ಡಾಕ್ಟರರ ಉಪಚಾರ ಮಾಡಿದೆವು. ನನ್ನ ತಂದೆಯವರ ಆರೋಗ್ಯ ಇಷ್ಟು ಕೆಟ್ಟಿತೆಂದರೆ ಅವರು ಯಾವಕ್ಷಣಕ್ಕೂ ಕೋಮಾದಲ್ಲಿ ಹೋಗಬಹುದೆಂದು ಡಾಕ್ಟರರು ಹೇಳಿದರು. ಡಾಕ್ಟರರು ಬೇಗನೆ ತಂದೆಯವರನ್ನು ಜಳಗಾವಕ್ಕೆ ಕೊಂಡೊಯ್ಯುವ ಸಲಹೆ ನೀಡಿದರು.  ತಂದೆಯವರು ಜಳಗಾವ ತನಕ ಹೋಗಲೂ ಸಾಧ್ಯವೇ ಇಲ್ಲವೆಂದು  ನಮ್ಮ ವಾಡಿಯಲ್ಲಿಯ  ಎಲ್ಲ ಜನರ  ಅಭಿಪ್ರಾಯವಿತ್ತು. ಅವರ ಆರೋಗ್ಯ ತುಂಬಾ ಕೆಟ್ಟಿದ್ದಿತ್ತು. 

ಊರಲ್ಲಿ ಅಷ್ಟೇನೂ ಸರಿಯಾಗಿ ಉಪಚಾರ ಆಗಲು ಸಾಧ್ಯವಿರಲಿಲ್ಲವೆಂದು ಜಳಗಾವಕ್ಕೆ ಹೋಗುವದು ಅತ್ಯಂತ ಆವಶ್ಯಕವಂತೂ ಇದ್ದೇ  ಇತ್ತು.  ಆದರೆ ಜಳಗಾವಕ್ಕೆ ಹೋಗುವ ಮೊದಲೇ ದಾರಿಯಲ್ಲಿ ತಂದೆಯವರ ಪ್ರಾಣ ಹೋಗಬಹುದು ಎಂಬ ಎಲ್ಲರ ನಿಶ್ಚಿತ ಅಭಿಪ್ರಾಯವಿತ್ತು. ನನ್ನ ಬಾಪೂರವರ ಮೇಲೆ ನನ್ನ ದೃಢ ನಂಬಿಕೆಯಿತ್ತು. ಯಾರೂ ಏನೇ ಅನ್ನಲಿ, ನನ್ನ ಸದ್ಗುರು ಬಾಪೂ ಜೊತೆಯಲ್ಲಿರುವಾಗ ತಂದೆಯವರಿಗೆ ಏನೇನೂ ಆಗುವದಿಲ್ಲವೆಂದು ನನ್ನ ದೃಢ ನಂಬಿಕೆಯಿತ್ತು. ನಾವು ತಂದೆಯವರಿಗೆ ಆಂಬುಲೆನ್ಸ್ ದಿಂದ ಜಳಗಾವಕ್ಕೆ ಕೊಂಡೊಯ್ಯಲು ಹೊರಟೆವು. ಗಾಡಿಯಲ್ಲಿ ನಾನು ಸಾತತ್ಯದಿಂದ ಬಾಪೂರವರ ನಾಮಸ್ಮರಣೆ ಮಾಡುತ್ತಿದ್ದೆ. ಜಳಗಾವದ  ಆಸ್ಪತ್ರೆಗೆ ತಲುಪುವ ಮೊದಲೇ ನನ್ನ ತಂದೆಯವರು ಕೋಮಾದಲ್ಲಿ ಹೋದರು. ಅವರು ಕೋಮಾದಲ್ಲಿ ಹೋಗಿದ್ದರೂ ಕೆಲಕ್ಷಣದಲ್ಲಿಯೇ ಮತ್ತೆ ಪ್ರಜ್ಞೆಯಲ್ಲಿ ಬಂದರು. ಆಮೇಲೆ ನಾವು ಆಸ್ಪತ್ರೆಗೆ ಬಂದೆವು ಹಾಗು ಅವರನ್ನು ನೇರ ಅತೀದಕ್ಷತೆ ವಿಭಾಗದಲ್ಲಿ (ICU) ಇಡಲಾಯಿತು. ಯಾರಿಗೆ ಹೇಳಿದರೂ ನಿಜವೆನಿಸಲಾರದು, ಆದರೆ ಕೇವಲ ಎರಡೇ ಗಂಟೆಯಲ್ಲಿ ತಂದೆಯವರ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿತು!  

ಇದೆಲ್ಲ ಬಾಪೂರವರೇ ಘಟಿಸಿ ತಂದಿದ್ದೆಂದು ನಾನು ಅವರ ಮೇಲಿನ ನಂಬಿಕೆಯಿಂದ ಹೇಳುತ್ತೇನೆ. ಕೇವಲ ಎರಡೇ ದಿನಗಳಲ್ಲಿ ತಂದೆಯವರಿಗೆ ಮನೆಗೆ ಕಳಿಸಲಾಯಿತು. 

ಇದಾದ ಮೇಲೆ ಒಂದು ಆಶ್ಚರ್ಯಕಾರಕ ಘಟನೆ ನಮ್ಮೆಲ್ಲರ ಜೀವನದಲ್ಲಿ ನಡಯಿತು. ಅದರಿಂದ ಇಡೀ ಕುಟುಂಬಿಯರಿಗೆ ತುಂಬಾ ಸಂತೋಷವಾಯಿತು ಹಾಗು ನಾವೆಲ್ಲರೂ ಬಾಪೂರವರ ಚರಣಸನ್ನಿಧಿಗೆ ಋಣಿಯಾಗಿದ್ದೇವೆ. ತಂದೆಯವರು ಅನಾರೋಗ್ಯ ಹೊಂದಿದ ದಿನದಿಂದಲೇ —

ಅವರ ಮದ್ಯಪಾನ ಸಂಪೂರ್ಣವಾಗಿ, ಸ್ವಯಂಪ್ರೇರಿತವಾಗಿ ನಿಂತುಹೋಯಿತು.

ಮೂವತ್ತು ವರ್ಷಗಳ ಅಭ್ಯಾಸ… ಬಲವಂತವಿಲ್ಲದೆ… ಔಷಧಿಗಳಿಲ್ಲದೆ… ಉಪದೇಶವಿಲ್ಲದೆ… ಒಂದೇ ಕ್ಷಣದಲ್ಲಿ ನಿಂತುಹೋಯಿತು.

ಆಗಿದ್ದೆಲ್ಲವನ್ನು ಬಾಪೂರವರೇ ಘಟಿಸಿ ತಂದಿದ್ದಿತ್ತು. ಅವರ ಕೃಪೆ ನಮ್ಮೆಲ್ಲರ ಮೇಲೆ ಅಪಾರವಿದೆ.

‘ಬಾಪೂ, ಯಾವುದೇ ಬಿಕ್ಕಟ್ಟಿನಲ್ಲಿ ಮನಸ್ಸಿಗೆ ಸಾಮರ್ಥ್ಯ ನೀಡಲು ನೀನೆ ಓಡಿ ಬರುವೆ. ಯಾವುದೇ ದುಃಖವನ್ನು ಸಹಿಸಲು ನೀನೆ ನಮಗೆ  ಶಕ್ತಿ ಕೊಡುವೆ. ನೀನೆ ನಮ್ಮ ಸಂರಕ್ಷಕನಾಗಿರುವೆ ಮತ್ತು ಅದಕ್ಕಾಗಿಯೇ ನಾವು ನಿನ್ನ ಎಲ್ಲ ಶ್ರದ್ಧಾವಂತ ಭಕ್ತರು ನಿರಂತರವಾಗಿ ಪ್ರೀತಿಯಿಂದ ನಿನ್ನ ತಾರಕಮಂತ್ರದ ಜಪ ಮಾಡುತ್ತೇವೆ '.

'ಓಂ ಮನಃ ಸಾಮರ್ಥ್ಯದಾತಾ ಶ್ರೀ ಅನಿರುದ್ಧಾಯ ನಮಃ'

|| ಹರಿ ಓಂ | ಶ್ರೀರಾಮ | ಅಂಬಜ್ಞ | ನಾಥಸಂವಿಧ್ ||

----------------------------------------------------------------------------

Hindi English