ಎಲ್ಲರನ್ನೂ ಉದ್ಧರಿಸುವವ ನನ್ನ ಸದ್ಗುರು ಅನಿರುದ್ಧ! -ಸಾಕ್ಷೀವೀರಾ ಬೆಂಖಳೆ, ಮಸ್ಕತ್

 

ಪರದೇಶ, ಪರದೇಶದ ಜನರು ಹಾಗೂ ಪರಭಾಷೆ. ಈ ಪರಿಸ್ಥಿತಿಯಲ್ಲಿ, ಈ ಶ್ರದ್ಧಾವಾನ ಕುಟುಂಬದ ಮುಂದೆ ಈ ಒಂದು ಘಟನೆ ಬರುತ್ತದೆ, ಎಂದರೆ ಎಲ್ಲಾ ದಾರಿಗಳು ಮುಚ್ಚುತ್ತಾ ಹೋದಂತೆ ಕಾಣುತ್ತವೆ. ಅವರ ಕಾಲು ಕಮ್ಮಿ ಎರಡು ವರ್ಷದ ಮಗಳು ಮೃತ್ಯುವಿನ ದ್ವಾರದಲ್ಲಿ ನಿಂತಿರುವ ಪರಿಸ್ಥಿತಿ ಉಂಟಾಗುತ್ತದೆ. ಆದರೆ ಅವರಿಗೆ ಪೂರ್ಣ ವಿಶ್ವಾಸ ಇತ್ತೇನೆಂದರೆ, ನಮ್ಮ ಪ್ರಿಯ ಸದ್ಗುರು ಇರುವಾಗ ನಾವು ಯಾಕೆ ಹೆದರಬೇಕು ? ಮುಂದೆ ಏನು ನಡೆಯುತ್ತದೆಯೋ ಅದು ಆಶ್ಚರ್ಯ ಪಡಿಸುವವದಾಗಿದೆ.

------------------------------------------------------------------------------------------------------------------------------


ಹರಿ ಓಂ. ೧೯೯೮ ರಲ್ಲಿ ನಾವು ಬಾಪೂ ಕುಟುಂಬದಲ್ಲಿ ಸೇರಿದೆವು. ನನ್ನ ಗಂಡ, ನೆಸ್ಲೆ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ನಾವು ಮದುವೆ ಆದ ಮೇಲಿಂದ ಮಸ್ಕತ್ ನಲ್ಲಿಯೇ ಇದ್ದೇವೆ. ನಾನು ಇಲ್ಲಿ ನನ್ನ ಕಾಲು ಕಮ್ಮಿ ಎರಡು ವರ್ಷದ ಮಗಳು, ಮೃಣಮಯಿಯ ಅನುಭವವನ್ನು ಎಲ್ಲರಿಗೂ ಹೇಳಲು ಬಯಸುತ್ತೇನೆ. ಸಾಯಿಬಾಬಾರವರು ನೀಡಿದ ವಚನವು ನನಗೆ ನೆನೆಪಿಗೆ ಬರುತ್ತದೆ ಮತ್ತು ನಾವು ಅದನ್ನು ಪ್ರತ್ಯಕ್ಷವಾಗಿ ಅನುಭವಿಸಿದ್ದೇವೆ.


ಮಜ್ ನಾ ಲಾಗೆ ಗಾಡಿ ಘೋಡಿ |

ವಿಮಾನ ಅಥವಾ ಅಗೀನಗಾಡಿ |

ಹಾಕ್ ಮಾರೀ ಜೊ ಅವಲಂಬಿ |

ಪ್ರಗಟೆ ಮೀ ತೆ ಘಡಿ ಅವಲಂಬಿ ||



ನನಗೆ ಗಾಡಿಯೂ ಬೇಕಿಲ್ಲ, ಕುದುರೆಯೂ ಬೇಕಿಲ್ಲ, ವಿಮಾನವಾಗಲಿ ರೈಲಾಗಲಿ ಬೇಡ । ಯಾವ ಕ್ಷಣದಲ್ಲಿ ಯಾರಾದರೂ ನನ್ನನ್ನು ಕರೆಯುತ್ತಾರೋ, ಆ ಕ್ಷಣದಲ್ಲೇ ನಾನು ಪ್ರಕಟಗೊಳ್ಳುತ್ತೇನೆ॥


ನನ್ನ ತಾಯಿ-ತಂದೆ ಡಿಸೆಂಬರ್ ೨೦೧೧ ರಲ್ಲಿ ಮೊದಲ ಬಾರಿಗೆ ಮಸ್ಕತ್‌ಗೆ ಬಂದಿದ್ದರು. ತಾಯಿ ಕೆಲಸ ಮಾಡುತ್ತಾರೆ, ತಂದೆ ಸೇವಾನಿವೃತ್ತರಾದವರು. ತಾಯಿಗೆ ಕೇವಲ ಒಂದು ತಿಂಗಳ ರಜೆ ಸಿಕ್ಕಿತ್ತು, ಆದ್ದರಿಂದ ಅವರು ಒಂದು ತಿಂಗಳೇ ನಿಂತು ಭಾರತಕ್ಕೆ ಹಿಂದಿರುಗಲು ಯೋಜಿಸಿದ್ದರು.


ಜನವರಿ ೨೦ರಂದು ಅವರ ರಾತ್ರಿ ೧: ೩೦ ಘಂಟೆಯ ವಿಮಾನ ಇತ್ತು. ನಾವು ಅವರನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಲು ಹೊರಟೆವು. ಆ ದಿನ ಶುಕ್ರವಾರವಾಗಿತ್ತು, ಮತ್ತು ಪ್ರತೀ ಶುಕ್ರವಾರ ನಾವು ಸ್ಥಳೀಯ ಉಪಾಸನಾ ಕೇಂದ್ರದಲ್ಲಿ "ಅಶುಭನಾಶಿನಿ ಸ್ತವನಮ್" ಮತ್ತು "ಶುಭಂಕರ ಸ್ತವನಮ್" ೨೭ ಬಾರಿ ಪಠಣ ಮಾಡುತ್ತೇವೆ.


ಮಸ್ಕತ್‌ನಿಂದ ೧೩೪ ಕಿ.ಮೀ ದೂರದ ಸುವೇಟ್ ಎಂಬ ಊರಿನಲ್ಲಿ ನಾವು ಇರುತ್ತೇವೆ. ಮಸ್ಕತ್ನಿಂದ ಸುವೇಟ್ ನ ದಾರಿ ಸುಮಾರು ೧.೩೦ ಘಂಟೆ ಇದೆ. ತಾಯಿ-ತಂದೆಗೆ ಕೆಲವು ಖರೀದಿಗಳು ಬಾಕಿಯಿದ್ದರಿಂದ, ನಾವು ಕಾರ್ ನಲ್ಲಿಯೇ ಎಲ್ಲರೂ ಸೇರಿ ಉಪಾಸನೆ ಮಾಡಿ, ನಂತರ ಪ್ರಮುಖ್ ಸೇವಕರ ಮನೆಗೆ ಬಾಪೂರವರ ಪಾದುಕೆಯ ದರ್ಶನಕ್ಕೆ ಹೋಗಲು ನಿರ್ಧರಿಸಿದ್ದೇವು. ಆದರೆ ನಾವು ತಲುಪಿದಾಗ, ಅವರು ಮನೆ ಮುಚ್ಚಿ ಹೊರಹೋಗಿದ್ದರಿಂದ ದರ್ಶನಕ್ಕೆ ಸಮಯ ಕಳೆದುಬಿಟ್ಟಿತ್ತು.

ಇದರಿಂದ ನಾನು ಸ್ವಲ್ಪ ನಿರಾಶಗೊಂಡೆನು.


ನನ್ನ ಗಂಡ ನನಗೆ ಸಮಾಧಾನ ಮಾಡುತ್ತ ಹೇಳಿದರು, "ಬಾಪೂ ಎಲ್ಲಾ ಕಡೆಯಲ್ಲಿಯೂ ಇರುತ್ತಾರೆ. ನೀನು ಹೊರಗಿನಿಂದ ನಮಸ್ಕಾರ ಮಾಡಿದರೂ, ಬಾಪೂರವರಿಗೆ ಮುಟ್ಟೆ ಮುಟ್ಟುತ್ತದೆ. ಅವರು ನಮ್ಮೊಡನೆ ಇಲ್ಲಿಯೂ ಇದ್ದೆ ಇದ್ದಾರೆ." ನಂತರ ನಾವು ಹೊರಗಿನಿಂದಲೇ ಬಾಪೂರವರಿಗೆ ನಮಸ್ಕಾರ ಮಾಡಿ, ನಾವು ಮಾಲ್ ನಲ್ಲಿ ಶಾಪಿಂಗ್ ಮಾಡಲು ಹೋದೆವು ಅಲ್ಲಿಂದಲೇ ವಿಮಾನ ನಿಲ್ದಾಣಕ್ಕೆ ಹೋದೆವು.


ನಾವು ಇಬ್ಬರೂ ಮಗು ಜೊತೆಗೆ ಅವರನ್ನು ಬಿಡಲು ಒಳಗಿನ ತನಕ ಹೋದೆವು. ಮೃಣಮಯಿಗೆ ನನ್ನ ತಾಯಿ-ತಂದೆಯ ಮೇಲೆ ತುಂಬಾ ಲೊಭವಾಗಿತ್ತು. ಅವಳು ಅವಳ ಅಜ್ಜ-ಅಜ್ಜಿಯ ಒಟ್ಟಿಗೆ ಸ್ವಲ್ಪ ಹೆಚ್ಚು ಸಮಯ ಕಳೆಯಲೆಂದು ನಾವು ಅಲ್ಲಿಯೇ ಮಾತನಾಡುತ್ತ ನಿಂತೆವು. ನಂತರ ನನ್ನ ತಾಯಿ ಹೇಳಿದುದರಿಂದ, ರಾತ್ರಿಯ ೧ ಗಂಟೆಗೆ ನಾವು ಮನೆಗೆ ಹಿಂತಿರುಗಲು ನಿರ್ಧರಿಸಿದೇವು.


ಹಿಂತಿರುಗುವ ದಾರಿಯಲ್ಲಿ ಮೃಣಮಯಿ ಅವಳಿಗೆ ಕೊಟ್ಟಿರುವ ತಿಂಡಿಯನ್ನು ತಿನ್ನುತ್ತಿದ್ದಳು ಮತ್ತು ಗಾಡಿಯಲ್ಲಿ ಆಡುತ್ತಿದ್ದಳು. ಅದಾಗಲೇ ಅವಳು ಹಾಲು ಬೇಕೆಂದು ಸೂಚಿಸಿದಳು. ಹಾಲು ಕುಡಿದ ನಂತರ ತಕ್ಷಣವೇ ಮಲಗಿದಳು.


ನಾವು ವಿಮಾನ ನಿಲ್ದಾಣದಿಂದ ಕೇವಲ ೮ ಕಿ.ಮೀ. ದೂರ ಹೋಗಿರಬಹುದು, ಇದ್ದಕ್ಕಿದ್ದಂತೆ ನಿದ್ರೆಯಲ್ಲಿದ್ದ ಮೃಣಮಯಿ ಹೆದರಿಕೆಯಿಂದ ಎಚ್ಚರವಾದಳು. ಅವಳು ಕನಸಿನಲ್ಲಿ ಏನೋ ನೋಡಿ ಎಚ್ಚರವಾಗಿರಬಹುದು ಎಂದು ನಾನು ಅವಳ ಬೆನ್ನು ತಪ್ಪುತ್ತಾ ಅವಳನ್ನು ಮಲಗಳು ಹೇಳಿದೆ. ಆದರೆ ನಂತರ ಅವಳು ಕಣ್ಣುಗಳನ್ನು ದೊಡ್ಡ- ದೊಡ್ಡ ಮಾಡಿ ನನ್ನ ಕಡೆಗೆ ನೋಡಿದಳು.


ಅವಳ ಆ ಕಣ್ಣು ನೋಡಿ, ನನ್ನ ಹೃದಯದಲ್ಲಿ ಭಯ ಹುಟ್ಟಿತು. ನಾನು ಮನ್ನಸಿನಲ್ಲಿ ಯೋಚಿಸಿದೆ, 'ಅರೇ ದೇವಾ, ಇವಳು ಇಷ್ಟು ದೊಡ್ಡ ಕಣ್ಣು ಮಾಡಿ ಯಾಕೆ ನೋಡುತ್ತಾ ಇದ್ದಾಳೆ?' ನಾನು ಏನು ಹೇಳುವ ಮುಂದೆಯೇ, ಅವಳು ಅವಳ ಕಣ್ಣುಗಳನ್ನು ಮೇಲೆ ಮಾಡಿದಳು ಹಾಗು ತಿರುಗಿಸಿದಳು.


ಅವಳ ದೇಹ ಗಟ್ಟಿಯಾಗತೊಡಗಿತು. ಅವಳು ಜ್ವರದಿಂದ ತುಂಬಾ ಕಂಗಾಲಾಗುತ್ತಿದ್ದಳು. ನಾನು ಅವಳನ್ನು ನೋಡಿ ತುಂಬಾ ಹೆದರಿ ಹೋದೆ. ನಾನು ನನ್ನ ಗಂಡರಿಗೆ ಅವಳ ಕಣ್ಣುಗಳು ಮೇಲೆ ಹೋಗಿದೆ ಎಂದು ತೋರಿಸಿದೆ, ಅವಳು ನಿದ್ದೆಯಲ್ಲಿ ಇರಬಹುದು ಎಂದು ಅವರಿಗೆ ಅನ್ನಿಸಿತು. ಆದರೆ ನಾನು ಅವರಿಗೆ ಹೇಳಿದೆ, ಇದು ಏನೋ ಬೇರೆಯೇ ! ಅವಳು ನಿದ್ದೆಯಲ್ಲಿ ಇರಲೇ ಇಲ್ಲ. ನಾನು ತುಂಬಾ ಗಾಬರಿಯಾಗಿದ್ದೆ. ಯಾಕೆಂದರೆ ಅವಳು ಏನೂ ಉತ್ತರವೇ ಕೊಡುತ್ತಿರಲಿಲ್ಲ.


ಮಸ್ಕತ್‌ನಲ್ಲಿ ತಕ್ಷಣವೇ ಗಾಡಿ ನಿಲ್ಲಿಸಲು ತುಂಬಾ ಕಷ್ಟವಾಗುತ್ತದೆ. ಆದರೆ ನನ್ನ ಗಂಡ ಹೇಗೆಯೋ ಮಾಡಿ ಗಾಡಿಯನ್ನು ಅಂಚಿನ ಬಳಿ ನಿಲ್ಲಿಸಿದರು.


ನಾವು ಯಾವಾಗಲು ಗಾಡಿನಲ್ಲಿ ಬಿಸಿ ಮತ್ತು ತಂಪಾದ ನೀರು ಹಾಗು ತಿನ್ನುವ ವಸ್ತು ಗಾಡಿಯಲ್ಲಿ ಇಡುತ್ತೇವೆ. ಅವಳಿಗೆ ಜ್ವರ ಬಂದಿದ್ದರಿಂದ ನನ್ನ ಗಂಡ, ೧.೫ ಲೀಟರ್ ಶೀತಲ ನೀರನ್ನು ಅವಳ ಮೇಲೆ ಹಾಕಿದರು. ಆದರೆ ಮುಂಚೆಯೇ ಅವಳ ಡಾಕ್ಟರ್ ನಮಗೆ ಹೇಳಿದ್ದರು, ಅವಳಿಗೆ ಜ್ವರ ಬಂದರೆ ಅವಳ ಮೇಲೆ ಶೀತಲವದ ನೀರನ್ನು ಹಾಕಬೇಕೆಂದು.


ನಾನು ಅವಳ ಬೆನ್ನು ಮತ್ತು ಎದೆಯನ್ನು ತಿಕ್ಕಿದೆ ಆದರೆ ಅವಳ ಏನೂ ಪ್ರತಿಸಾದವಿರಲಿಲ್ಲ. ಮೃಣಮಯಿಯ ಗತಿವಿಧಿಗಳು ಪೂರ್ಣವಾಗಿ ನಿಂತು ಹೋಗಿತ್ತು. ನನ್ನ ಮಗಳು ಹೋದಳು ಎಂದು ನಾನು ಹೇನಿಸಿ, ನಾನು ಅಲ್ಲಿಯೇ ಜೋರ-ಜೋರಾಗಿ ಅಳಲು ಆರಂಭಿಸಿದೆ.


ಮಸ್ಕತ್‌ನಲ್ಲಿ ಓಮಾನಿ ಜನರು ಇರುತ್ತಾರೆ ಹಾಗು ಅವರು ಕೇವಲ ಅರೇಬಿಕ್ ಭಾಷೆ ಮಾತನಾಡುತ್ತಾರೆ. ಅವರಿಗೆ ಕನ್ನಡ, ಹಿಂದಿ ಅಥವಾ ಮರಾಠಿ ಭಾಷೆ ಅರಿಯುವುದಿಲ್ಲ.


ನಾನು ಅಲ್ಲಿ ಜೋರ-ಜೋರಾಗಿ ಬೊಬ್ಬೆ ಹೊಡೆಯುತ್ತಿದೆ 'ಯಾರಾದರೂ ನಮಗೆ ಸಹಾಯ ಮಾಡಿ, ನನ್ನ ಮಗಳು ಹೋಗಿದ್ದಾಳೆ' ಆದರೆ ಮದ್ಯ ರಾತ್ರಿಯಲ್ಲಿ ಹೈವೇ ಯಲ್ಲಿ ಯಾರು ಬರಬಹುದು? ಅದರಲ್ಲೂ ಅದು ವಿದೇಶ, ಅಲ್ಲಿ ನಮ್ಮ ಭಾಷೆ ಯಾರಿಗೂ ಗೊತ್ತಾಗುವುದು ಇಲ್ಲ.


ನನ್ನ ಗಂಡ ಹೇಳಿದರು, ನಾವು ಅವಳನ್ನು ಆಸ್ಪತ್ರೆಗೆ ಕರಕೊಂಡು ಹೋಗುವ. ಅದಕ್ಕಾಗಿ ನಾವು ಪುನಃ ಗಾಡಿಯಲ್ಲಿ ಕುಳಿತೆವು ಹಾಗು 'ಘೋರಕಷ್ಟೋದ್ದರಣ ಸ್ತೋತ್ರ' ದ ಪಠಣ ಮಾಡಲು ಆರಂಭಿಸಿದೆವು. ನಾವು ಈ ಸ್ತೋತ್ರ ದ ಪಠಣ ಮಾಡಿ ಇನ್ನೊಮ್ಮೆ ಗಾಡಿ ಸ್ಟಾರ್ಟ್ ಮಾಡುತ್ತಿರುವಾಗಲೇ, ನಮ್ಮ ಗಾಡಿಯ ಮುಂದೆ ಒಂದು ಬಿಳಿ ಬಣ್ಣದ ಗಾಡಿ ರಿವರ್ಸ್‌ನಲ್ಲಿ ಬಂದು ನಿಂತಿತು. ನಮ್ಮ ಎದುರು ಆ ಕಾರು ಯಾವಾಗ ಬಂದು ನಿಂತಿತೆಂದು ನಮಗೆ ತಿಳಿಯಲೇ ಇಲ್ಲ. ಎಲ್ಲಿಂದ ಬಂತು ಅದೂ ಗೊತ್ತಿಲ್ಲ. ಯಾಕೆಂದರೆ ನಾನು ಮೊದಲು ಹೇಳಿದಾಗೆ, ಆ ರಸ್ತೆಯಲ್ಲಿ ಯಾವುದೇ ಕಾರ್ ಕಾಣಲೇ ಇಲ್ಲ. ಮಸ್ಕತ್ ನಲ್ಲಿ ಎಡ ಕೈಯ ಡ್ರೈವರ್ಸ್ ಇರುತ್ತಾರೆ.

ನಮ್ಮ ಬಳಿ ಆ ಕಾರ್ ನಿಲ್ಲುತ್ತಾಳೆ, ಗಾಡಿಯಿಂದ ಒಬ್ಬ ಕಂದೂರ, ಎಂದರೆ ಅರೇಬಿಕ್ ಜನರ ಪಾರಂಪರಿಕ ಉಡುಪು ಧರಿಸಿದ ವ್ಯಕ್ತಿ ಇಳಿದನು.


ಬಂದ ಕ್ಷಣವೇ ಅವನು ಮೃಣಮಯಿ ಯನ್ನು ಅವನ ಬಳಿ ಕೊಡಲು ಹೇಳಿದನು. ನಾನು ಕೂಡ ಇಷ್ಟು ಸರಳತೆಯಿಂದ ಮೃಣಮಯಿ ಯನ್ನು ಅವನ ಕೈಯಲ್ಲಿ ಕೊಟ್ಟು ಬಿಟ್ಟೆ, ಯಾರೋ ನಮ್ಮ ಹಳೆಯ ಪರಿಚಯ ಇದ್ದವನಾಗೆ.


ಆಶ್ಚರ್ಯದ ಮಾತೆಂದರೆ, ಆ ಒಮಾನಿ ಮನುಷ್ಯ ನನ್ನ ಹತ್ತಿರ ಮರಾಠಿ ಯಲ್ಲಿ ಹೇಳುತ್ತಿದ್ದ, ' ಮೀ ದತ್ತ ಆಯೆ (ನಾನು ದತ್ತ)! ಮೀ ದತ್ತ ಆಯೆ (ನಾನು ದತ್ತ)' ಎಂದು ನಾನು ಒಂದು ಬರಿ ಅಲ್ಲ ಎರಡು ಬಾರಿ ಕೇಳಿದೆನು. ಅಲ್ಲಿ ಏನೂ ನಡೆಯುತ್ತಿತ್ತೋ ಅದು ನನ್ನ ತಿಳುವಳಿಕೆಯನ್ನು ಮೀರಿತ್ತು.

ನನಗೆ ಇದೇ ಮಾತು ಮನ್ನಸಿನಲ್ಲಿ ಬರುತ್ತಿತ್ತು, ಈ ಒಮಾನಿ ಮನುಷ್ಯ ಮರಾಠಿ ಯಲ್ಲಿ ' ಮೀ ದತ್ತ ಆಯೆ (ನಾನು ದತ್ತ)' ಎಂದು ಹೇಗೆ ಹೇಳಬಹುದು ?


ನನಗೆ ಏನೂ ಅರ್ಥವಾಗುತ್ತಿರಲಿಲ್ಲ. ಆದರೆ ನಂತರ ತುಂಬಾ ದೊಡ್ಡ ವಿಷಯ ಆದದೇನೆಂದರೆ, ನನ್ನ ಮಗಳು, ಇಷ್ಟರ ತನಕ ನನ್ನ ಮಡಿಲಲ್ಲಿ ನಿಷ್ಪ್ರಾಣ ಬಿದ್ದಿದಲೋ, ಅವಳು ಅವರ ಕೈಯಲ್ಲಿ ಹೋದಾಗ ಚಲಾವಣೆ ಮಾಡಲು ಆರಂಭಿಸಿದ್ದಳು ಹಾಗು ಕಣ್ಣು ತೆರೆದು ಅಲ್ಲಿ-ಇಲ್ಲಿ ನೋಡುತ್ತಿದ್ದಳು. ನಾನು ಅವರಿಗೆ ಹೇಳಿದೆನು, 'ನಿಮ್ಮ ಕೈಯಲ್ಲಿ ಬರುತ್ತಲೇ ನನ್ನೀ ಮಗಳು ಜೀವಿತ ಆದಳು'. ಅವಾಗ ಆವರು ಹೇಳಿದರು, (ನಾನು ಸ್ಪಷ್ಟವಾಗಿ ಕೇಳಿದೆ), 'ನಾನು ಒಬ್ಬ ಡಾಕ್ಟರ್. ಐ ಆಮ್ ಆ ಡಾಕ್ಟರ್. ನಂತರ ಅವರು ಹೇಳಿದರು, 'ಯುವರ್ ಬೇಬಿ ಇಸ್ ಫೈನ್, ಡೋಂಟ್ ಟೇಕ್ ಟೆನ್ಶನ್, ಶೀ ಇಸ್ ಫೈನ್' (ನಿಮ್ಮ ಮಗು ಈಗ ಚೆನ್ನಾಗಿದೆ. ಕಾಳಜಿ ಮಾಡ ಬೇಡಿ).


ನಂತರ ಅವರು ನನಗೆ, ಮೃಣಮಯಿಯನ್ನು ಆಸ್ಪತ್ರೆಗೆ ಕರ ಕೊಂಡು ಹೋಗಲು ಹೇಳಿದರು. ನನ್ನ ಗಂಡ ಗಾಡಿಯಿಂದ ಇಳಿದು ಅವರ ಹತ್ತಿರ ಹೋಗಿ ನಿಂತರು. ಆ ಒಮಾನಿ ಮನುಷ್ಯ ಅವರನ್ನು ತಿರುಗಿ ಅವರತ್ತ ನೋಡಿದರು ಹಾಗು ನನಗೆ ಇಂಗ್ಲಿಷ್ ನಲ್ಲಿ ಹೇಳಿದ ವಾಖ್ಯಗಳು ಅವರಿಗೆ ಮರಾಠಿ ಯಲ್ಲಿ ಕೇಳಿಸಿತು. ಅಲ್ಲಿ ಏನೂ ನಡೆಯುತಿತ್ತೊ ಅದು ಅಕಲ್ಪನೀಯವಾಗಿತ್ತು. ನಮ್ಮ ವಿಚಾರದ ಮೀರಿತ್ತು. ನಾವಿಬ್ಬರೂ ನಿಶ್ಚೇಷ್ಟಿತರಾಗಿದ್ದೆವು.


ನಮ್ಮ ಮಗಳು ನಮಗೆ ಜೀವಂತ ಸಿಕ್ಕಿದಳು ಎಂಬ ಸಂತೋಷ ದಲ್ಲಿ ನಾವು ಅ ಮನುಷ್ಯ ನಲ್ಲಿ ಏನೂ ಕೇಳಲೇ ಇಲ್ಲ, ನೀನು ಯಾರು, ಎಲ್ಲಿ ಇರುತ್ತಿ, ಎಲ್ಲಿ ಹೋಗುತ್ತಾ ಇದ್ದಿ!

ಆದರೆ ನಂತರ ಆ ಮನುಷ್ಯ ನೇ ಹತ್ತಿರ ದಿಂದ ಹೋಗುತ್ತಿರುವ ಪೊಲೀಸ್ ಗಾಡಿ ಯನ್ನು ನಿಲ್ಲಿಸಿ,

ಅವರಿಗೆ ಹೇಳಿದರು, 'ಇವರು ತುಂಬಾ ಗಾಬರಿಗೊಂಡು ಹಾಗೂ ಒತ್ತಡದಲ್ಲಿದ್ದಾರೆ. ಆದ್ದರಿಂದ ನೀವು ಅವರಿಗೆ ಆಸ್ಪತ್ರೆಯ ವಿಳಾಸವನ್ನು ನೀಡಿ'. ಪೊಲೀಸ್ ರವರು ನಮಗೆ ಆಸ್ಪತ್ರೆಯ ವಿಳಾಸವನ್ನು ಕೊಟ್ಟರು.


ನಾವು ಆ ಮನುಷ್ಯನ ಕೃತಜ್ಞತೆ ಸಲ್ಲಿಸಲು ಹಿಂತಿರುಗಿ ನೋಡಿದಾಗ, ಅಲ್ಲಿ ಆ ಮನುಷ್ಯ ಅಥವಾ ಅವರ ಕಾರ್ ಕಾಣಿಸಲೇ ಇಲ್ಲ. ಆ ಸುನ್‌ಸಾನ್ ಹೆದ್ದಾರಿಯಲ್ಲಿ ಅವರು ಅಷ್ಟೊಂದು ಬೇಗನೆ ನಮ್ಮ ಕಣ್ಣಿಗೆ ಕಾಣದೆ ಮಾಯವಾಗಿದ್ದು ಹೇಗೆ ಎಂಬುದರ ಬಗ್ಗೆ ನಮಗೆ ಅಚ್ಚರಿ ಆಗುತಿತ್ತು.


ಹುಡುಗಿ ಚೇತನಕ್ಕೆ ಬಂದಿದ್ದಾಳೆ ಎಂಬುದಕ್ಕೆ ನಾವು ಖುಷಿ ಆಗಿಯೇ ಇದ್ದೆವು, ಆದರೆ ಆ ಕ್ಷಣದಲ್ಲಿ ನಮ್ಮ ಮನಸ್ಸಿನಲ್ಲಿ ಒಂದೇ ಒಂದು ವಿಚಾರ ಇತ್ತು- ಆ ವ್ಯಕ್ತಿ ‘ಹುಡುಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ’ ಎಂದು ಹೇಳಿರುವುದರಿಂದ, ಅವಳನ್ನು ಅಲ್ಲಿಗೆ ಕರೆದುಕೊಂಡು ಹೋಗಲೇಬೇಕು ಎಂಬುದು.


ನಮಗೆ ಆಸ್ಪತ್ರೆಯ ವಿಳಾಸ ಸಿಕ್ಕಿತ್ತು, ಆದರೆ ಭಾರೀ ಮಳೆಯಿಂದ ರಸ್ತೆಗಳು ತುಂಬಾ ಹಾಳಾಗಿದ್ದವು. ಜೊತೆಗೆ ಅನೇಕ ಡೈವರ್ಜನ್‌ಗಳು ಇದ್ದುದರಿಂದ ಆಸ್ಪತ್ರೆಗೆ ಹೋಗುವ ದಾರಿ ನಮಗೆ ಸಿಗುತ್ತಿರಲಿಲ್ಲ. ಮುಂದೆ ಹೋಗುತ್ತಿದ್ದಾಗ ಒಂದು ಆಸ್ಪತ್ರೆ ಕಾಣಿಸಿತು, ಆದರೆ ಅದು ಮುಚ್ಚಿತ್ತು. ಮೃಣಮಯಿ ಇನ್ನೂ ಶಿಥಿಲವಾಗಿದ್ದಳು; ಅವಳು ಪುನಃ ಪುನಃ ಕಣ್ಣುಗಳನ್ನು ಮುಚ್ಚುತ್ತಿದ್ದಳು.

ಅಷ್ಟರಲ್ಲಿ ನನ್ನ ಗಂಡನಿಗೆ ನೆನಪಾಯಿತು, ಅವರು ಅದೇ ದಿನ ಬೆಳಿಗ್ಗೆ ಒಂದು ಮಾಲ್‌ ಪಕ್ಕದಲ್ಲಿ ಹೊಸ ಆಸ್ಪತ್ರೆಯನ್ನು ನೋಡಿದ್ದರು. ನಾವು ಅತ್ತ ಕಡೆಗೆ ಹೊರಟೆವು. ಆ ಸದ್ಗುರುತತ್ತ್ವವು ನಮ್ಮಿಗಾಗಿ ಈಗಾಗಲೇ ಅಲ್ಲಿ ತುರ್ತು ವ್ಯವಸ್ಥೆಯನ್ನು ಸಿದ್ಧಪಡಿಸಿಟ್ಟಿದ್ದರು. ನಾವು ಸುಮಾರು ಎರಡು ಗಂಟೆಗೆ ಆ ಆಸ್ಪತ್ರೆಗೆ ತಲುಪಿದೆವು.


ಮೃಣಮಯಿಯನ್ನು ಎಮರ್ಜೆನ್ಸಿ ವಾರ್ಡ್‌ನಲ್ಲಿ ದಾಖಲಿಸಲಾಯಿತು. ಅಲ್ಲಿ ತಕ್ಷಣವೇ ವ್ಯವಸ್ಥೆಗಳನ್ನು ಮಾಡಿ ಅವಳ ಬಿ.ಪಿ., ಪಲ್ಸ್‌ ಎಲ್ಲಾ ಪರೀಕ್ಷೆಗಳನ್ನು ಮಾಡಲಾಯಿತು. ನಮಗೆ ಬಹಳ ಚಿಂತೆ ಆಗಿತ್ತು, ಆದರೆ ಎಲ್ಲಾ ರಿಪೋರ್ಟ್ ಗಳು ನಾರ್ಮಲ್ ಬಂದವು. ಈಗ ಅವಳ ಜ್ವರ ಕೂಡ ಇಳಿದು ಹೋಗಿತ್ತು.


ಬಾಪುರವರ ಕೃಪೆಯಿಂದ ನಮ್ಮ ಮಗಳನ್ನು ನಾವು ಸುರಕ್ಷಿತವಾಗಿ ಮರಳಿ ಪಡೆದುಕೊಂಡೆವು. ನನ್ನ ಮನಸ್ಸಿಗೆ ಒಂದು ವಿಚಾರ ಬಂತು, ನಾವು ಬಾಪುರವರ ಶ್ರದ್ಧಾವಾನರು, ಬಾಪುರವರಿಂದ ಸಾವಿರಾರು ಮೈಲು ದೂರದಲ್ಲಿದ್ದರೂ ಸಹ, ಆ ಸದ್ಗುರುತತ್ತ್ವದ ಕೃಪೆ ನಮ್ಮವರೆಗೆ ತಲುಪದೇ ಇರುವುದಿಲ್ಲ.


|| ಹರಿ ಓಂ | ಶ್ರೀರಾಮ | ಅಂಬಜ್ಞ | ನಾಥಸಂವಿಧ್ ||