ನಿಸರ್ಗ – ಪರಮೇಶ್ವರನದೇ ಒಂದು ಸ್ವರೂಪ
ಸದ್ಗುರು ಶ್ರೀ ಅನಿರುದ್ಧ ಬಾಪು ರಾಮರಕ್ಷಾ ಸ್ತೋತ್ರಮಂತ್ರ ಮಾಲಿಕೆಯ ೯ನೇ ಪ್ರವಚನದಲ್ಲಿ ಹೇಳುತ್ತಾರೆ, ೨೦೦೫ ರ ಹೊಸ ವರ್ಷ ಶುರುವಾಗ್ತಿದೆ, ಆದರೆ ನಾವು ಮಾತ್ರ ಇದ್ದ ಹಾಗೆಯೇ ಇದ್ದೇವೆ. ರಾತ್ರಿ ಶಾಂತವಾಗಿ ಆಕಾಶದ ಕಡೆಗೆ ನೋಡುತ್ತಾ ನಿಂತರೆ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ. ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿ ಈ ಪಂಚಮಹಾಭೂತಗಳಿಂದ ಆಗಿರುವ ಈ ನಿಸರ್ಗವೇ ಈ ಸಗುಣ ಸಾಕಾರ ಪ್ರಕೃತಿ. ಆ ಪರಮಾತ್ಮನನ್ನು ಕರೆಯುವ ನಾವು ಮತ್ತು ನಮ್ಮ ಶಬ್ದಗಳು ಈ ಪಂಚಮಹಾಭೂತಗಳಿಂದಲೇ ಆಗಿವೆ.
ನಿಸರ್ಗದ ಜೊತೆ ನಮ್ಮ ಸಂಬಂಧ ತುಂಬಾ ಹತ್ತಿರದ್ದು. ಆದರೆ ನಾವು ಅದನ್ನು ಮರೆತುಬಿಡ್ತೀವಿ. ಈ ನಿಸರ್ಗ ಅಂದರೆ ನಮ್ಮನ್ನು ಆ ಪರಮಾತ್ಮನ ಜೊತೆ ಜೋಡಿಸುವ ಮತ್ತು ಆ ಪರಮಾತ್ಮನನ್ನು ನಮ್ಮ ಜೊತೆ ಜೋಡಿಸುವ ಪರಮೇಶ್ವರನದೇ ಒಂದು ಸ್ವರೂಪ, ಆ ಪರಮೇಶ್ವರನ ಒಂದು ದೂತ. ನಾವು ಆ ಭಗವಂತನ ಪ್ರಾರ್ಥನೆ ಯಾವಾಗಲೂ ಸಂಕಟ ಬಂದಾಗ ಒಂದೇ ಉದ್ದೇಶದಿಂದ ಮಾಡ್ತೀವಿ, ನನ್ನನ್ನು ಕಾಪಾಡು ಅಂತ. ಅವನು ನಮ್ಮನ್ನು ಕಾಪಾಡೋಕೆ ಓಡಿ ಬರ್ತಾನೆ, ಆದರೆ ನಾವೇ ಅವನ ವಿರುದ್ಧ ದಿಕ್ಕಿನಲ್ಲಿ ಓಡ್ತೀವಿ. ಆಗ ಯಾವಾಗ ನಮಗೆ ಇದು ತಿಳಿಯದಿಲ್ಲವಾಗುತ್ತೋ, ಆಗಲೇ ನಮ್ಮ ಕಷ್ಟಗಳು ಶುರುವಾಗುತ್ತವೆ.
ಘೋರಕಷ್ಟೋದ್ಧರಣ ಸ್ತೋತ್ರದ ಪಠಣ ಅಂದರೆ ಅನಿರುದ್ಧಾಜ್ ಅಕಾಡೆಮಿ ಆಫ್ ಡಿಸಾಸ್ಟರ್ ಮ್ಯಾನೇಜ್ಮೆಂಟ್
ಬಾಪು ಹೇಳ್ತಾರೆ, ಘೋರಕಷ್ಟ ಅಂದರೆ Disaster. ಆಧ್ಯಾತ್ಮಿಕ ಮಟ್ಟದಲ್ಲಿ ಯಾವುದು ಘೋರಕಷ್ಟೋದ್ಧರಣ ಸ್ತೋತ್ರದ ಪಠಣವೋ, ಅದೇ ನಮ್ಮ ವ್ಯಾವಹಾರಿಕ ಮಟ್ಟದಲ್ಲಿ ‘ಅನಿರುದ್ಧಾಜ್ ಅಕಾಡೆಮಿ ಆಫ್ ಡಿಸಾಸ್ಟರ್ ಮ್ಯಾನೇಜ್ಮೆಂಟ್’. ಸಂಕಟದಲ್ಲಿ ನಿಸರ್ಗದ ರೌದ್ರ ರೂಪ ಎದುರಿಗೆ ಬಂದರೆ ಒಂದೇ ಕ್ಷಣದಲ್ಲಿ ಇದ್ದದ್ದು ಇಲ್ಲದಂತಾಗುತ್ತದೆ. ಆಗ ನಮ್ಮ ಯಾರೂ ಸಹಾಯಕ್ಕೆ ಬರುವುದಿಲ್ಲ. ಕೇವಲ ಪರಮೇಶ್ವರನ ವರದಹಸ್ತ ಮಾತ್ರ ಅದರಿಂದ ಕಾಪಾಡಬಲ್ಲದು. ಸದ್ಗುರು ಶ್ರೀ ಅನಿರುದ್ಧ ಬಾಪು ಪ್ರವಚನದಲ್ಲಿ ಸುನಾಮಿಯ ಉದಾಹರಣೆ ಕೊಟ್ಟರು. ಸಮುದ್ರ ದಡದಲ್ಲಿ ಆನಂದದಿಂದ ಆಡುತ್ತಿದ್ದ ಲಕ್ಷಾಂತರ ಜನ ಒಂದೇ ಕ್ಷಣದಲ್ಲಿ ಇಲ್ಲವಾದರು. ಎಲ್ಲರೂ ಕೈ ಕೈ ಹಿಡಿದು ನಿಂತಿದ್ದರು, ಆದರೆ ಅಲೆ ಬಂತು ಮತ್ತು ಎಲ್ಲವೂ ಮುಗಿಯಿತು. ಯಾರು ಉಳಿದರು ಅಂದರೆ, ಯಾರ ಮೇಲೆ ದೇವರ ವರದಹಸ್ತ ಇತ್ತೋ ಅವರೇ.
ಯಾವ ಜ್ಯೋತಿಷಿಯೂ ಈ ಭವಿಷ್ಯವಾಣಿ ನುಡಿದಿರಲಿಲ್ಲ. ಆದರೆ ಕಾಪಾಡಿಸುವವನು ‘ಯಾರಿದ್ದಾನೋ’ ಅವನು ತೋರಿಸಿಕೊಟ್ಟ, ನಾನು ಈ ಸಮುದ್ರಕ್ಕಿಂತಲೂ ತುಂಬಾ ಎತ್ತರದಲ್ಲಿ ನಿಂತಿದ್ದೇನೆ ಅಂತ. ನಾನು ನಿಮ್ಮ ಬೆರಳು ಹಿಡಿಯಲು ತಯಾರಿದ್ದೇನೆ, ಆದರೆ ನೀವು ನನ್ನ ಬೆರಳು ಹಿಡಿಯಲು ತಯಾರಾಗಬೇಕು. ಒಂದು ವೇಳೆ ನಾವು ಅವನ ಬೆರಳು ಹಿಡಿಯದಿದ್ದರೆ, ಆಗ ಮಾತ್ರ ಯಾವುದೇ ‘ಬೋಟ್’ ನಮ್ಮನ್ನು ಪಾರು ಮಾಡಲು ಸಾಧ್ಯವಿಲ್ಲ.
ಬಾಪು ಮುಂದೆ ಹೇಳ್ತಾರೆ ನಾವು ’ಘೋರಾತ್ಕಷ್ಟೌದ್ಧರಾತ್ಮಾನ್ನಮಸ್ತೇ’ ಅಂತೀವಿ ಆದರೆ ಅಂತಹ ಪ್ರತ್ಯಕ್ಷ ಕೃತಿ ಕೂಡ ನನ್ನಿಂದ ಆಗಬೇಕು. ಬೇಸಿಕ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕೋರ್ಸ್ (Aniruddha's Academy of Disaster Management) ನಾನು ಮಾಡಬೇಕು. ಆಪತ್ತಿನ ಸಮಯದಲ್ಲಿ ಯೋಚನೆ ಮಾಡಲೂ ಸಮಯ ಇರುವುದಿಲ್ಲ; ಸಿದ್ಧತೆ ಮೊದಲೇ ಮಾಡಿಕೊಳ್ಳಬೇಕಾಗುತ್ತದೆ. ಎಷ್ಟೋ ಸಲ ಸಂಕಟ ಬಂದಾಗ ದೇವರಿಗೆ ದೋಷ ಕೊಡುವುದು ಮಾನವನ ಅತಿ ದೊಡ್ಡ ತಪ್ಪು; ದೇವರು ಅನ್ಯಾಯ ಮಾಡಿಲ್ಲ. ಸಂಕಟದಲ್ಲೂ ಅವನು ನನ್ನ ಜೊತೆ ನಿಂತಿದ್ದಾನೆ, ಅವನು ನನಗೆ ತನ್ನ ಬೆರಳು ಹಿಡಿಯಲು ಹೇಳುತ್ತಿದ್ದಾನೆ. ಅದಕ್ಕೆ ಅವನನ್ನು ದೂಷಿಸುವುದು ನಿಲ್ಲಿಸಿ ಅವನ ಬೆರಳು ಹಿಡಿಯಬೇಕು.
ನಾಮಸ್ಮರಣೆಯ ಜೊತೆ ಕೃತಿಯೂ ಅವಶ್ಯಕ
ನಾಮಸ್ಮರಣೆ ಮುಖ್ಯ, ಆದರೆ ಅದನ್ನು ಪ್ರತ್ಯಕ್ಷ ಜೀವನದಲ್ಲಿ ಹೇಗೆ ಇಳಿಸಿಕೊಳ್ಳಬೇಕು ಎಂಬುದು ಮುಖ್ಯ. ಜೀವನದ ಮೂಲಭೂತ ಅವಶ್ಯಕತೆಗಳನ್ನು (ಅನ್ನ, ಬಟ್ಟೆ) ಮರೆತು ನಾಮಸ್ಮರಣೆ ಮಾಡುವುದು ಅಂದರೆ ಹಸಿವಾದಾಗ ಅನ್ನದ ಬದಲು ಕೇವಲ ಭಗವಂತನ ನಾಮ ತೆಗೆದುಕೊಳ್ಳುವುದು ಸಾಮಾನ್ಯ ಮನುಷ್ಯನಿಗೆ ಸಾಧ್ಯವಿಲ್ಲ. ಆದರೆ, ಸಂಕಟದಲ್ಲಿ ಸಿಲುಕಿದಾಗ ಪರಮೇಶ್ವರನಿಗೆ ತಾನಾಗಿಯೇ ಕೂಗು ಹೋಗುತ್ತದೆ.
೨೦೦೭ ರ ನಂತರ ನಡೆಯುವ ಅನೇಕ ಕೆಟ್ಟ ಘಟನೆಗಳ ಬಗ್ಗೆ ಸದ್ಗುರು ಶ್ರೀ ಅನಿರುದ್ಧರು ಬಾಪು ಎಷ್ಟೋ ಬಾರಿ ಎಚ್ಚರಿಸಿದ್ದಾರೆ; ಇಂತಹ ದೊಡ್ಡ ಘಟನೆಗಳಿಗಾಗಿ ಸ್ವತಃ ತಯಾರಿ, ಜಾಗರೂಕತೆ ಮತ್ತು ಪ್ರಯಾಸ ಅವಶ್ಯಕ. ಬಾಪು ಹೇಳ್ತಾರೆ ನಾನು ಇಲ್ಲಿ ನಿಮಗೆ ಇಷ್ಟವಾಗುವ ಹಾಗೆ ಮಾತನಾಡಲು ಬರುವುದಿಲ್ಲ, ನಿಮ್ಮ ಮನರಂಜನೆಗಾಗಿ ಬರುವುದಿಲ್ಲ ಬದಲಾಗಿ ನನಗೆ ಏನು ಹೇಳಬೇಕಿದೆ ಮತ್ತು ನಿಮ್ಮನ್ನು ಎಚ್ಚರಗೊಳಿಸಿ ಸಜ್ಜುಗೊಳಿಸಬೇಕಿದೆ ಅದಕ್ಕಾಗಿ ಬರುತ್ತೇನೆ. ರಾಮರಕ್ಷೆ, ಘೋರಕಷ್ಟೋದ್ಧರಣ ಸ್ತೋತ್ರ ಇದರ ಪಠಣ ಗುರುಪೂರ್ಣಿಮೆಯ ದಿವಸ ಬಾಪು ಅವರ ‘ಬ್ಯಾಂಕ್’ನಲ್ಲಿ ಜಮೆ ಮಾಡಬೇಕು ಅಂದರೆ ಸಮಯ ಬಂದರೆ ಅದರ ಮೇಲೆ ಬಡ್ಡಿ ಕೊಡೋದನ್ನ ಬಾಪು ಸರಿಯಾಗಿ ಬಲ್ಲರು. ಅನಿರುದ್ಧಾಜ್ ಅಕಾಡೆಮಿ ಆಫ್ ಡಿಸಾಸ್ಟರ್ ಮ್ಯಾನೇಜ್ಮೆಂಟ್‌ನಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ತಯಾರು ಮಾಡಿಕೊಳ್ಳಿ, ಅಂದರೆ ಆಪತ್ತು ಬಂದರೆ ಆ ದಿವಸ ನಾವು ಸಿದ್ಧರಿರುತ್ತೇವೆ. ಯಾರು ಮನಸ್ಸಿನಿಂದ ಭಕ್ತಿ ಮತ್ತು ಸೇವೆ ಮಾಡುತ್ತಾರೋ, ಅವರೇ ಇಂತಹ ಕಠಿಣ ಕಾಲದಲ್ಲಿ ಉಳಿದುಕೊಳ್ಳಲು ಸಾಧ್ಯ.
ನವಕಮಲದಳಸ್ಪರ್ಧಿನೇತ್ರಂ ಪ್ರಸನ್ನಂ’ – ರಾಮನ ಕಣ್ಣುಗಳಲ್ಲಿನ ಪ್ರಸನ್ನತೆ
ನಂತರ ಬಾಪು ಧ್ಯಾನಮಂತ್ರದಲ್ಲಿನ ’ನವಕಮಲದಳಸ್ಪರ್ಧಿನೇತ್ರಂ ಪ್ರಸನ್ನಂ’ ಎಂಬ ಶ್ಲೋಕದ ಅರ್ಥವನ್ನು ವಿವರಿಸಿದರು. ಈ ರಾಜೀವಲೋಚನ ರಾಮನ ಕಣ್ಣುಗಳು ಆಗ ತಾನೇ ಅರಳಿದ ಕಮಲದ ದಳಗಳಂತೆ ಪ್ರಸನ್ನತೆ ಮತ್ತು ಹೊಸ ಚೈತನ್ಯ ನೀಡುವಂತಹದ್ದಾಗಿವೆ. ಮನುಷ್ಯನ ಕಣ್ಣುಗಳು ಎಂದಿಗೂ ಸುಳ್ಳು ಹೇಳುವುದಿಲ್ಲ, ಅದರಲ್ಲಿನ ಭಾವನೆಗಳು ಸತ್ಯವಾಗಿರುತ್ತವೆ ಮತ್ತು ಭಕ್ತನಿಗಾಗಿ ರಾಮನ ಕಣ್ಣುಗಳಲ್ಲಿ ಎಂದಿಗೂ ಕೋಪ ಕಾಣುವುದಿಲ್ಲ ಅಥವಾ ಆ ಕಣ್ಣುಗಳು ಭಕ್ತನಿಗೆ ಅಶಾಂತಿಯನ್ನು ನೀಡುವುದಿಲ್ಲ. ಒಂದು ವೇಳೆ ಎಂದಾದರೂ ಕೋಪ ಬಂದರೆ ಅದು ಭಕ್ತರನ್ನು ಪ್ರಸನ್ನಗೊಳಿಸುವಂತಹದ್ದೇ ಆಗಿರುತ್ತದೆ. ಮಾನವನ ಕಣ್ಣುಗಳು ಜ್ಞಾನೇಂದ್ರಿಯಗಳಾಗಿವೆ, ದೃಶ್ಯ ಸೃಷ್ಟಿಯನ್ನು ನೋಡಿ ಅದರಿಂದ ಜ್ಞಾನವನ್ನು ಒಳಗೆ ತೆಗೆದುಕೊಳ್ಳುವಂತಹವಾಗಿವೆ; ಆದರೆ ಏಕಮೇವವಾಗಿರುವ ಈ ರಾಮನ ಕಣ್ಣುಗಳು ಮಾತ್ರ ಕೊಡುವಂತಹದ್ದಾಗಿವೆ. ಪ್ರಸನ್ನತೆ, ಶಾಂತಿ ನೀಡುವಂತಹದ್ದಾಗಿವೆ. ಲೌಕಿಕ ದೃಷ್ಟಿಯಲ್ಲಿ ರಾಮನ ದಳಗಳು ಮುಚ್ಚುತ್ತಿರಬಹುದು ಆದರೆ ಇವನ ಕಣ್ಣುಗಳು ಮಾತ್ರ ಎಂದಿಗೂ ಮುಚ್ಚುವುದಿಲ್ಲ ಮತ್ತು ಇಂತಹ ರಾಮನ ನಾವು ಧ್ಯಾನ ಮಾಡಬೇಕಿದೆ. ಅರಳುವ ಕಮಲ ಭಾರತೀಯ ಸಂಸ್ಕೃತಿಯಲ್ಲಿ ಪಾವಿತ್ರ್ಯದ, ಪ್ರಸನ್ನತೆಯ ಪ್ರತೀಕವೆಂದು ತಿಳಿಯಲಾಗಿದೆ. ನನ್ನ ಜೀವನ ಹೀಗೆ ಅರಳಬೇಕು ಮತ್ತು ಅದಕ್ಕಾಗಿಯೇ ವಿಶ್ವಾಮಿತ್ರ ಋಷಿ ಅಂದರೆ ಬುಧಕೌಶಿಕ ಋಷಿ ನನಗೆ ರಾಮನ ಧ್ಯಾನ ಮಾಡಲು ಹೇಳುತ್ತಿದ್ದಾರೆ.
ಭಗವಂತ ನನ್ನವನು ಮತ್ತು ನಾನು ಭಗವಂತನ – ‘ಸ್ಪರ್ಧಿನೇತ್ರಂ ಪ್ರಸನ್ನಂ’
ಈ ಶ್ಲೋಕದ ಮುಂದಿನ ಶಬ್ದವೆಂದರೆ ’ಸ್ಪರ್ಧಿನೇತ್ರಂಪ್ರಸನ್ನಂ’. ಬಾಪು ಹೇಳ್ತಾರೆ ಈ ಸ್ಪರ್ಧೆ ಎಂಬ ಶಬ್ದ ಮಾತ್ರ ರಾಮನಿಗಾಗಿ ಅಲ್ಲ ಮಾನವನಿಗಾಗಿದೆ. ಈ ಭಗವಂತ ಹೇಗೆ ನನಗಾಗಿದ್ದಾನೋ ಹಾಗೆಯೇ ನಾನು ಕೂಡ ಈ ಭಗವಂತನಿಗಾಗಿಯೇ ಇದ್ದೇನೆ. ಭಗವಂತ ನನ್ನವನು, ಆಗ ಮೊದಲು ನಾನು ಭಗವಂತನವನಾಗಬೇಕು, ಇದು ಆ ಸ್ಪರ್ಧೆ. ನನ್ನ ಮನಸ್ಸಿನಲ್ಲಿ ಇರುವ ರಾಮನಿಗಾಗಿನ ಭಾವ ಮತ್ತು ಪ್ರತ್ಯಕ್ಷ ರಾಮ ಇವನ ನಡುವಿನ ಈ ಸ್ಪರ್ಧೆ. ಪ್ರತ್ಯಕ್ಷ ರಾಮ ಅನಂತನಾಗಿದ್ದಾನೆ, ವಿಶಾಲನಾಗಿದ್ದಾನೆ. ನನ್ನ ಮನಸ್ಸಿನಲ್ಲಿರುವ ರಾಮನನ್ನು ನಾನು ಯಾವ ರೀತಿ ಮಾಡಿಕೊಳ್ಳುತ್ತೇನೆಯೋ ಅದರ ಮೇಲೆ ಎಲ್ಲವೂ ಅವಲಂಬಿಸಿದೆ. ನನ್ನ ಮನಸ್ಸಿನಲ್ಲಿ ನನ್ನ ಪರಮೇಶ್ವರನ ಬಗ್ಗೆ ನನ್ನ ಭಕ್ತಿ, ಭಾವ ಏನಿದೆಯೋ, ನನ್ನ ಮನಸ್ಸಿನಲ್ಲಿ ಪರಮೇಶ್ವರನ ಯಾವ ಮೂರ್ತಿಯನ್ನು ನಾನು ತಯಾರು ಮಾಡಿದ್ದೇನೆಯೋ ಅದನ್ನು ನಾನು ಬದಲಾಯಿಸಬೇಕು. ಅಂದರೆ ಏನು? ಪರಮೇಶ್ವರ ನನ್ನ ಒಳ್ಳೆಯದು ಮಾಡುತ್ತಾನೋ ಇಲ್ಲವೋ ಎಂಬ ವಿಚಾರ ಮಾಡದೆ, ಇವನು ನನ್ನ ಪರಮೇಶ್ವರ, ಇವನು ನನ್ನವನು ಮತ್ತು ನಾನು ಅವನವನು, ಇವನು ನನ್ನ ಕಲ್ಯಾಣ ಮಾಡಲೆಂದೇ ಇದ್ದಾನೆ ಮತ್ತು ನಾನು ನನ್ನ ಕಲ್ಯಾಣ ಮಾಡಿಕೊಂಡೇ ತೀರುತ್ತೇನೆ. ನಾನು ನನ್ನ ಜೀವನದಲ್ಲಿ ಅನೇಕ ಸಂಕಟಗಳನ್ನು ಎದುರಿಸುತ್ತೇನೆ ಆದರೆ ನನಗೆ ಖಾತ್ರಿ ಇರುತ್ತದೆ ಸಂಕಟಗಳಲ್ಲಿ ನನ್ನ ಹಿಂದೆ, ನನ್ನ ಅಕ್ಕಪಕ್ಕ, ನನ್ನ ಮುಂದೆ ನನ್ನ ಇವನು ನಿಂತೇ ಇರುತ್ತಾನೆ, ನೂರಕ್ಕೆ ನೂರೆಂಟು ಶೇಕಡಾವಾರು ಇರುತ್ತಾನೆ ಮತ್ತು ಇವನು ಪ್ರೇಮಮಯಿಯಾಗಿದ್ದಾನೆ. ಇವನು ಎಷ್ಟು ಪ್ರೀತಿಸುತ್ತಾನೋ ಅಷ್ಟು ನನಗೆ ಇವನ ಮೇಲೆ ಪ್ರೀತಿ ಮಾಡಲು ಆಗುತ್ತಿಲ್ಲ. ಇದನ್ನು ಮೊದಲು ನಾವು ಒಪ್ಪಿಕೊಳ್ಳೋಣ ಮತ್ತು ನಮ್ಮ ಪ್ರೀತಿಯನ್ನು ಆದಷ್ಟು ಹೆಚ್ಚಿಸಲು ಪ್ರಯತ್ನ ಮಾಡೋಣ. ಎಲ್ಲಾ ಮಾನವರ ಮೇಲೂ ಪರಮಾತ್ಮ ಸಮಾನವಾಗಿ ಪ್ರೀತಿಸುತ್ತಾನೆ. ಈ ಪ್ರೀತಿ ಕೊಡುವಾಗ ನಮ್ಮ ಜಾತಿ, ಧರ್ಮ, ಶ್ರೀಮಂತಿಕೆ ಅಥವಾ ನಾನು ಎಷ್ಟು ಪಾಪಿ ಎಂಬುದು ಅವನಿಗೆ ಯಾವ ವ್ಯತ್ಯಾಸ ಬೀಳುವುದಿಲ್ಲ. ಅವನು ಪ್ರತಿಯೊಬ್ಬರಿಗೂ ಅವಕಾಶ ನೀಡಲು ತಯಾರಿದ್ದಾನೆ. ಆದರೆ ಅವನ ಈ ಕೃಪೆ ಪಡೆಯಲು, ಈ ಅವಕಾಶ ಸ್ವೀಕರಿಸಲು ನಾನು ನನ್ನ ಮನಸ್ಸಿನಲ್ಲಿರುವ ಭಗವಂತನ ಪ್ರತಿಮೆ ಏನಿದೆಯೋ ಅದನ್ನು ಸರಿಯಾಗಿ ಸಾಕಾರಗೊಳಿಸಬೇಕು; ಸ್ಪರ್ಧಿನೇತ್ರಂಪ್ರಸನ್ನಂ ನಲ್ಲಿ ಯಾವ ಸ್ಪರ್ಧೆ ಇದೆಯೋ ಆ ಸ್ಪರ್ಧೆ ಅಂದರೆ ಮೊಲ ಮತ್ತು ಆಮೆಯ ಕಥೆ.
ಆಮೆಯ ಕಥೆ – ಮೊಲ ಪ್ರಯಾಸ ಮತ್ತು ಪ್ರಾರಬ್ಧ ಇವುಗಳ ಸ್ಪರ್ಧೆ
ಇದಾದ ನಂತರ ಬಾಪು ನಮ್ಮ ಉಪನಿಷತ್ತುಗಳಿಂದಲೇ ಬಂದಿರುವ ಮೊಲ ಮತ್ತು ಆಮೆಯ ಕಥೆಯನ್ನು ಹೇಳಿದರು. ಮೊಲ ಅಂದರೆ ನಮ್ಮ ಪರಮೇಶ್ವರನನ್ನು ಪ್ರಾಪ್ತಿ ಮಾಡಿಕೊಳ್ಳುವ ಪ್ರಯಾಸ ಮತ್ತು ಆಮೆ ಅಂದರೆ ನಮ್ಮ ಪ್ರಾರಬ್ಧ. ಪ್ರಯಾಸ ಮತ್ತು ಪ್ರಾರಬ್ಧ ಇವುಗಳ ಸ್ಪರ್ಧೆ ಇದೆ. ಪ್ರಯಾಸ ಪರಮೇಶ್ವರನನ್ನು ಸಾಕ್ಷಿಯಾಗಿಟ್ಟುಕೊಂಡೇ ಇರಲು ಸಾಧ್ಯ ಮತ್ತು ಆಮೆ ನಡೆಯುವ (ಅಂದರೆ ಪ್ರಾರಬ್ಧ) ತನ್ನ ಕೆಲಸ ಮಾಡುತ್ತಲೇ ಇರುತ್ತದೆ. ನಾವು ಪರಮೇಶ್ವರನನ್ನು ಸಾಕ್ಷಿಯಾಗಿಟ್ಟುಕೊಂಡು ಓಡಲೇಬೇಕು, ಆದರೆ ಅದಕ್ಕೆ ಅವಶ್ಯಕವಾದದ್ದು ಏನು? ಜಾಗರೂಕರಾಗಿರುವುದು. ಈ ಸ್ಪರ್ಧೆ ತೀರ್ಮಾನ ಮಾಡುತ್ತದೆ ಜೀವನದಲ್ಲಿ ನನಗೆ ಪ್ರಸನ್ನತೆ ಸಿಗುತ್ತದೋ ಇಲ್ಲವೋ ಅಂತ? ಯಾವ ಅರ್ಥದಲ್ಲಿ ನಾನು ಸಂಕಟದಲ್ಲಿದ್ದೇನೆಯೋ ಆ ಅರ್ಥದಲ್ಲಿ ನನ್ನ ಮೊಲ ಮಲಗಿದೆ ಮತ್ತು ನನ್ನ ಆಮೆ ಮುಂದೆ ಹೋಗುತ್ತಲೇ ಇದೆ, ಯಾಕೆಂದರೆ ಅದು ಹೋಗುತ್ತಲೇ ಇರುತ್ತದೆ. ನಾವು ‘ಕೂರ್ಮಗತಿ’ ಶಬ್ದವನ್ನು ಆಮೆಯ ಗತಿಗೆ ಅಂದರೆ ಪ್ರಾರಬ್ಧದ ಕೂರ್ಮನ ಗತಿಗೆ ಬಳಸುತ್ತೇವೆ. ಇದೇ ಕೂರ್ಮನ ಬೆನ್ನಿನ ಮೇಲೆ ಅಮೃತಮಂಥನವಾಗುತ್ತದೆ, ಅದರಿಂದ ವಿಷವೂ ಬರುತ್ತದೆ ಮತ್ತು ಅಮೃತವೂ ಬರುತ್ತದೆ. ಆದರೆ ವಿಷ ಕುಡಿಯಲು ಶಿವ ಪ್ರಸನ್ನನಾಗಿರಬೇಕಾಗುತ್ತದೆ ಮತ್ತು ಅಮೃತ ಹಂಚಲು ಆ ವಿಷ್ಣು ಪ್ರಸನ್ನನಾಗಿರಬೇಕಾಗುತ್ತದೆ. ಹಾಗಾದರೆ ವಿಷ್ಣು ಮತ್ತು ಶಿವನ ಏಕರೂಪನಾಗಿರುವ ಹರಿಹರ, ತ್ರಿವಿಕ್ರಮ ಯಾರಿದ್ದಾನೋ; ಅವನೇ ಆ ಸದ್ಗುರು ನನ್ನ ಆಯುಷ್ಯದಲ್ಲಿ ಒಂದು ವೇಳೆ ಗಟ್ಟಿಯಾಗಿ ನಿಂತಿದ್ದರೆ, ನನಗೆ ವಿಷದ ಭಯವಿಲ್ಲ ಮತ್ತು ಅಮೃತಕ್ಕಾಗಿ ಅಸಹಾಯನಾಗುವ ಅವಶ್ಯಕತೆ ಇಲ್ಲ. ಅವನು ನನಗೆ ಎಲ್ಲವನ್ನೂ ಕೊಡಲು ಸಮರ್ಥನಾಗಿದ್ದಾನೆ. ನಿಜವಾದ ಓಡುವ ತಾಕತ್ತು ಮೊಲದ್ದೇ ಹೆಚ್ಚಿದೆ. ಅಂದರೆ ಮಾನವಿ ಪ್ರಯಾಸ, ಮಾನವಿ ಪರಿಶ್ರಮ ಪ್ರಾರಬ್ಧಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಆದರೆ, ವೇಗ ಹೆಚ್ಚಿಸಿ ಯಾವುದೋ ಹಂತಕ್ಕೆ ತಲುಪಿದಾಗ ನಾವು ನಿದ್ದೆ ಮಾಡುತ್ತೇವೆ ಅದಕ್ಕೆ ಆ ಪ್ರಾರಬ್ಧದ ಆಮೆ ನಮಗಿಂತ ಮುಂದೆ ಹೋಗಿಬಿಡುತ್ತದೆ ಮತ್ತು ನನ್ನ ಇಡೀ ಜೀವನವನ್ನು ಆವರಿಸಿಕೊಳ್ಳುತ್ತದೆ ಎಂಬುದು ನನಗೆ ತಿಳಿಯಬೇಕು.
ಮೊಲವನ್ನು (ಪ್ರಯಾಸವನ್ನು) ಸದಾ ಜಾಗರೂಕವಾಗಿ ಹಾಗೂ ಪ್ರಸನ್ನವಾಗಿಡುವವನು - ರಾಮ
ಈ ಮೊಲವನ್ನು ಸದಾ ಜಾಗರೂಕವಾಗಿಡುವವನು, ನಮ್ಮನ್ನು ಲವಲವಿಕೆಯಿಂದ ಇಡುವವನು ಈ ರಾಮನೇ. ಮತ್ತು ಯಾವಾಗ ನಾವು ಪ್ರಸನ್ನರಾಗಿರುತ್ತೇವೋ ಆಗ ಮಾತ್ರ ಲವಲವಿಕೆಯಿಂದಿರಲು ಸಾಧ್ಯ. ಪ್ರಸನ್ನತೆಯಿಂದಲೇ ನಮ್ಮ ಶೋಕದ ನಾಶವಾಗುತ್ತದೆ, ನಮ್ಮ ಖೇದದ ನಾಶವಾಗುತ್ತದೆ, ನಮ್ಮ ಕೊರಗಿನ ನಾಶವಾಗುತ್ತದೆ. ನಮಗೆ ಪರಮೇಶ್ವರ ಮಾನವಜನ್ಮ ನೀಡಿದ್ದಾನೆ ಅಂದರೆ ನಮ್ಮ ಪರಿಶ್ರಮ, ಪ್ರಯಾಸ ಮೊಲದ್ದಾಗಿದೆ. ಮನುಷ್ಯನನ್ನು ಬಿಟ್ಟು ಮಿಕ್ಕೆಲ್ಲ ಪ್ರಾಣಿಗಳು ಮಾತ್ರ ಭೋಗಯೋನಿ ಆಗಿವೆ. ತಮ್ಮ ಪ್ರಾರಬ್ಧ ಬದಲಿಸಲು ಅವರಿಗೆ ಯಾವ ಪ್ರಯಾಸವನ್ನೂ ಮಾಡಲು ಸಾಧ್ಯವಿಲ್ಲ. ಆದರೆ ನಾವು ಪ್ರಾಣಿಯಂತೆ ವರ್ತಿಸುತ್ತೇವೆ, ನಾವು ಪಶುಗಳಂತೆ ವರ್ತಿಸುತ್ತೇವೆ ಅದಕ್ಕೆ ನಮ್ಮ ವಿಷಯದಲ್ಲೂ ವಿರುದ್ಧ ಆಗುತ್ತದೆ. ನಮ್ಮ ಪರಿಶ್ರಮ ಆಮೆಯಂತೆ ಇರುತ್ತದೆ ಮತ್ತು ನಮ್ಮ ಪ್ರಾರಬ್ಧ ಮೊಲದ ವೇಗದಲ್ಲಿ ಮುಂದೆ ಹೋಗುತ್ತದೆ. ಅಂದರೆ ನಮಗಾಗಿ ಈ ಸ್ಪರ್ಧೆ ಅದರ ವಿರುದ್ಧ ಆಗಬೇಕು. ಆಮೆಗೆ ಏನು ನಡೆಯಬೇಕೋ ಅದು ಅದರ ವೇಗದಲ್ಲಿ ನಡೆಯಲಿ ಆದರೆ ಮೊಲ ಮಾತ್ರ ಸಾವಿರಾರು ಮೈಲು ಮುಂದೆಯೇ ಹೋಗಿರಬೇಕು. ಎಲ್ಲಿ ಹೋಲಿಕೆಯೇ ಇಲ್ಲವೋ ಅಂತಹ ಈ ಸ್ಪರ್ಧೆ ಇದೆ. ಆದರೆ ಯಾವಾಗ? ಯಾವಾಗ ನಾನು ರಾಮನ ಧ್ಯಾನ ಮಾಡುತ್ತೇನೆಯೋ ಆಗಲೇ.
ಬಾಪು ಪ್ರವಚನದ ಕೊನೆಯಲ್ಲಿ ಹೇಳ್ತಾರೆ, "ಮುಂದಿನ ಶಬ್ದ ಎಲ್ಲಕ್ಕಿಂತ ಸುಂದರವಾಗಿದೆ, ’ವಾಮಾಂಕಾರೂಢಸೀತಾಮುಖಕಮಲಮಿಲಲ್ಲೋಚನಂ’ ಇಲ್ಲೂ ಕಣ್ಣುಗಳ ಸಂಬಂಧವಿದೆ ಮತ್ತು ‘ಮುಖಕಮಲ’ ಕೂಡ ಇದೆ. ಆದರೆ ಯಾರದ್ದು, ಸೀತೆಯದ್ದು. ಯಾಕೆಂದರೆ ರಾಮನ ಪ್ರಸನ್ನತೆ ಅಂದರೆ ಸೀತೆ, ಯಾರು ಇಡೀ ಜಗತ್ತಿನ ಕ್ರಿಯಾಶಕ್ತಿಯಾಗಿದ್ದಾಳೋ ಅವಳು." ಮುಂದಿನ ಪ್ರವಚನದಲ್ಲಿ ಅವರು ಈ ಶ್ಲೋಕದ ಸವಿಸ್ತಾರ ವಿವೇಚನೆ ಮಾಡಲಿದ್ದಾರೆ.
