ದುಃಖದ ಬಂಧನದಿಂದ ಮುಕ್ತಿ ನೀಡುವ ‘ರಾಮಬಾಣ’
ಸದ್ಗುರು ಶ್ರೀ ಅನಿರುದ್ಧ ಬಾಪು ರಾಮರಕ್ಷಾ ಸ್ತೋತ್ರಮಂತ್ರ ಮಾಲಿಕೆಯ ೭ನೇ ಪ್ರವಚನದಲ್ಲಿ ಹೇಳುತ್ತಾರೆ, ಆಕಾಶದಿಂದ ಬೀಳುವ ಪ್ರತಿಯೊಂದು ಹನಿ ಕೊನೆಗೆ ಸಮುದ್ರವನ್ನೇ ಸೇರುವಂತೆ, ಯಾವುದೇ ಭಾಷೆಯಿಂದ ಅಥವಾ ಪ್ರದೇಶದಿಂದ ಬಂದ ಭಗವಂತನ ವಿವಿಧ ಪವಿತ್ರ ಸ್ವರೂಪಗಳ ಭಕ್ತಿಯು ಅಂತಿಮವಾಗಿ ಆ ಪರಮೇಶ್ವರನನ್ನೇ ತಲುಪುತ್ತದೆ. ಈ ಭಕ್ತಿ ಮತ್ತು ಪ್ರೇಮಕ್ಕೆ ಯಾವುದರ ಬಂಧನವೂ ಇರುವುದಿಲ್ಲ. ಆದರೆ ಮಾನವ ಜೀವನದಲ್ಲಿ ದುಃಖಗಳ ಅನೇಕ ಬಂಧನಗಳಲ್ಲಿ ನಾವು ಸಿಲುಕಿರುತ್ತೇವೆ, ಅದರಿಂದ ಮುಕ್ತಗೊಳಿಸುವ ನಿಜವಾದ ಉಪಾಯವೆಂದರೆ ’ರಾಮಬಾಣ’. ಅದಕ್ಕಾಗಿಯೇ ನಾವು ‘ರಾಮಬಾಣ ಉಪಾಯ’ ಅಥವಾ ‘ರಾಮಬಾಣ ಔಷಧ’ ಎಂಬ ಶಬ್ದಗಳನ್ನು ಬಳಸುತ್ತೇವೆ.
‘ಧೃತಶರಧನುಷಂ’ – ಕೈಯಲ್ಲಿನ ಬಿಲ್ಲುಗಳಿಗೆ ಬಾಣ ಹೂಡಿದ ರಾಮ
ರಾಮರಕ್ಷೆಯ ಧ್ಯಾನಮಂತ್ರದಲ್ಲಿ ರಾಮನ ವರ್ಣನೆಯು “ಧ್ಯಾಯೇದಾಜಾನುಬಾಹುಂ ಧೃತಶರಧನುಷಂ” ಎಂದಿದೆ, ಅಂದರೆ ಯಾರು ಕೈಯಲ್ಲಿ ಬಿಲ್ಲು-ಬಾಣಗಳನ್ನು ಧರಿಸಿದ್ದಾರೋ ಆ ರಾಮ. ರಾಮನು ಯಾವಾಗಲೂ ಬಿಲ್ಲು-ಬಾಣಗಳನ್ನು ಧರಿಸಿಯೇ ಕಾಣಿಸಿಕೊಳ್ಳುತ್ತಾನೆ, ಬೇರೆ ಯಾವುದೇ ಆಯುಧವನ್ನು ಅವನು ಧರಿಸುವುದಿಲ್ಲ. ಅದಕ್ಕಾಗಿಯೇ ಬುಧಕೌಶಿಕ ಅಂದರೆ ವಿಶ್ವಾಮಿತ್ರ ಋಷಿಗಳು, ಕೈಯಲ್ಲಿನ ಬಿಲ್ಲುಗಳಿಗೆ ಬಾಣ ಹೂಡಿದ ಸ್ಥಿತಿಯಲ್ಲಿರುವ ರಾಮನ ಧ್ಯಾನ ಮಾಡಲು ಹೇಳುತ್ತಾರೆ.
ರಾಮನ ಬಾಣದ ಏಳು ಅದ್ವಿತೀಯ ಗುಣಗಳು
ಸದ್ಗುರು ಶ್ರೀ ಅನಿರುದ್ಧರು ಈ ಪ್ರವಚನದಲ್ಲಿ ರಾಮನ ಬಾಣದ ಏಳು ಅದ್ವಿತೀಯ ಗುಣಗಳನ್ನು ಹೇಳಿದ್ದಾರೆ. ಅದರಲ್ಲಿ ಮೊದಲನೆಯದು ಏನೆಂದರೆ, ಅದು ಯಾವಾಗಲೂ ತಪ್ಪಾಗದಿರುತ್ತದೆ ಮತ್ತು ಆ ಬಾಣದ ನಿಖರತೆ ಹಾಗೂ ಕಾರ್ಯ ರಾಮನ ಇಚ್ಛೆಯಂತೆಯೇ ಇರುತ್ತದೆ. ರಾಮನ ಇಚ್ಛೆಯಂತೆ ಒಂದು ವೇಳೆ ಬಾಣವು ಶತ್ರುವಿನ ಎದೆಯಿಂದ ತೂರಿ ಹೋಗುವುದಿದ್ದರೂ, ಅವನ ಪ್ರಾಣ ತೆಗೆಯುವುದಿಲ್ಲ ಎಂದಾದರೆ ಹಾಗೆಯೇ ಆಗುತ್ತದೆ. ಈ ಬಾಣದ ವಿಶೇಷತೆ ಏನೆಂದರೆ, ಅದು ಕೇವಲ ಕೆಟ್ಟದ್ದರ ನಾಶ ಮಾಡುತ್ತದೆ ಮತ್ತು ಎಂದಿಗೂ ತಪ್ಪು ಮಾಡುವುದಿಲ್ಲ.
ಸೈತಾನ ಎಂದರೆ ಅಭಾವ – ರಾಮಬಾಣ ಎಂದರೆ ಭಾವ ನಿರ್ಮಿತಿ
ಪರಮೇಶ್ವರ ಎಂದಿಗೂ ಯಾರ ಕೆಟ್ಟದ್ದನ್ನೂ ಮಾಡುವುದಿಲ್ಲ. ಪರಮೇಶ್ವರ ಭಾವಸ್ವರೂಪನಾಗಿದ್ದಾನೆ. ಪರಮೇಶ್ವರನ ಅಭಾವ ನನ್ನ ಮನಸ್ಸಿನಲ್ಲಿ ಉಂಟಾಗುವುದೇ ಸೈತಾನ. ಅದಕ್ಕಾಗಿಯೇ ಅಭಾವಕ್ಕೆ ಅಂದರೆ ಸೈತಾನನಿಗೆ ಪ್ರತ್ಯೇಕ ಅಸ್ತಿತ್ವವಿಲ್ಲ. ಯಾವಾಗ ಪರಮೇಶ್ವರ ಕೇವಲ ಸಾಕ್ಷಿರೂಪನಾಗಿ ಇರುತ್ತಾನೋ, ಆಗ ಅವನ ಕ್ರಿಯಾಶೀಲತೆ ಎಲ್ಲಿ ಇರುವುದಿಲ್ಲವೋ ಅಲ್ಲಿಯೇ ಸೈತಾನೀ ವೃತ್ತಿಯ ಉದಯವಾಗುತ್ತದೆ ಮತ್ತು ರಾಮಬಾಣ ಯಾವಾಗ ಇಂತಹ ಸೈತಾನನ ಎದೆಯ ಮೇಲಿಂದ, ಸೈತಾನೀ ವೃತ್ತಿಯ ಮನುಷ್ಯನ ಎದೆಯ ಮೇಲಿಂದ ಹೋಗುತ್ತದೆಯೋ, ಆಗ ಅದು ಭಾವವನ್ನು ಉಂಟುಮಾಡುತ್ತದೆ. ರಾಮಬಾಣ ತಪ್ಪಾಗಿರುವುದಿಲ್ಲ; ತಪ್ಪುಗಳನ್ನು ತಿದ್ದುವಂತದ್ದಾಗಿದೆ.
ಸದ್ಗುರು ಅನಿರುದ್ಧ ಬಾಪು ಒಂದು ಕಥೆಯ ಮೂಲಕ ವಿವರಿಸುತ್ತಾರೆ, ರಾಮನ ಬಾಣವು ಅಭಾವವನ್ನು ಹೋಗಲಾಡಿಸಲು ಬೇರೆ ಕಡೆಯಿಂದ ಏನನ್ನೋ ತರುವುದಿಲ್ಲ, ಬದಲಾಗಿ ಎಲ್ಲಿ ಅಭಾವವಿದೆಯೋ ಅಲ್ಲಿಯೇ ಭಾವವನ್ನು ನಿರ್ಮಾಣ ಮಾಡುತ್ತದೆ. ಉದಾಹರಣೆಗೆ, ರಾಮನಿಗೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಬಾಣ ಹೊಡೆದು ಗಂಗೆಯನ್ನು ತರಬೇಕಾಗಿದ್ದರೆ, ಆ ನಿರ್ದಿಷ್ಟ ಸ್ಥಳದಿಂದ ಗಂಗೆ ಇರುವ ಸ್ಥಳದವರೆಗೆ ತನ್ನ ಬಾಣದಿಂದ ಭೂಮಿಯನ್ನು ಸೀಳಿ ಗಂಗೆಯನ್ನು ತರುವ ಬದಲು, ರಾಮ ಎಲ್ಲಿ ಬಾಣ ಹೊಡೆಯುತ್ತಾನೋ ಅಲ್ಲಿಯೇ ಗಂಗೆ ಉಂಟಾಗುತ್ತದೆ. ರಾಮನು ಬಿಲ್ಲುಗಳಿಗೆ ಬಾಣ ಹೂಡಿದ್ದಾನೆ ಎಂದು ನಾವು ಅವನ ಧ್ಯಾನ ಮಾಡುತ್ತಿರುವಾಗ, ಈ ಬಾಣ ನನ್ನೊಳಗೆ ಬಂದು ನನ್ನಲ್ಲಿರುವ ಎಲ್ಲಾ ಕೆಟ್ಟದ್ದನ್ನು ದೂರ ಮಾಡಲಿದೆ, ನನ್ನ ಪ್ರಾರಬ್ಧದ ನಾಶ ಮಾಡಲಿದೆ ಎಂಬ ವಿಚಾರ ಯಾವಾಗ ನನ್ನ ಮನಸ್ಸಿನಲ್ಲಿ ಅಧಿಕಾಧಿಕ ದೃಢವಾಗುತ್ತಾ ಹೋಗುತ್ತದೆಯೋ, ಆಗ ನನ್ನ ಅಷ್ಟಭಾವ ಜಾಗೃತಗೊಂಡು ನನ್ನ ಕಣ್ಣುಗಳಿಂದ ನೀರು ಹರಿಯಲು ಶುರುವಾಗುತ್ತದೆಯಲ್ಲ, ಅದು ಗಂಗೆಯಾಗಿರುತ್ತದೆ, ರಾಮನ ಬಾಣದಿಂದ ಉಂಟಾದ ಗಂಗೆಯಾಗಿರುತ್ತದೆ, ಇದು ನನ್ನ ಸಂಪೂರ್ಣ ಜೀವನಕ್ಕೆ ಪಾವಿತ್ರ್ಯವನ್ನು ನೀಡುತ್ತದೆ.
ಗಾಯವನ್ನು ಮಾಗಿಸಿ ಮರಳಿ ಬರುವ ರಾಮಬಾಣ
ರಾಮನ ಬಾಣದ ಎರಡನೇ ವಿಶೇಷತೆ ಏನೆಂದರೆ, ರಾಮ ತನ್ನ ಬಾಣವನ್ನು ಯಾವ ದಿಕ್ಕಿನಲ್ಲಿ ಕಳುಹಿಸುತ್ತಾನೋ ಅದೇ ದಿಕ್ಕಿನಲ್ಲಿ ಅದು ಮರಳಿ ಬರುತ್ತದೆ. ಈ ಬಾಣದಿಂದ ಯಾವ ಗಾಯ ಉಂಟಾಗಿರುತ್ತದೆಯೋ, ಅದೇ ಗಾಯವನ್ನು ತುಂಬುತ್ತಾ (ಗುಣಪಡಿಸುತ್ತಾ) ಆ ಬಾಣ ಮರಳಿ ಬರುತ್ತದೆ. ಗಾಯವಾಯಿತು ಎಂದರೆ ಶರೀರದ ಜೀವಕೋಶಗಳ ಅಭಾವ ಉಂಟಾಯಿತು ಎಂದರ್ಥ. ಆ ಅಭಾವದ ರೂಪಾಂತರವನ್ನು ಭಾವದಲ್ಲಿ ಮಾಡಲು ಆ ಬಾಣ ಮತ್ತೆ ಅದೇ ದಿಕ್ಕಿನಲ್ಲಿ ಮರಳಿ ಬರುತ್ತದೆ, ಅಂದರೆ ಅವನ ಅಕ್ಷಯ ಬತ್ತಳಿಕೆಗೆ ಮರಳಿ ಬರುತ್ತದೆ.
ವೇದನಾರಹಿತ ಮತ್ತು ರಕ್ತರಹಿತ ರಾಮಬಾಣ
ಮೂರನೇ ವಿಶೇಷತೆ ಏನೆಂದರೆ ರಾಮನ ಬಾಣಕ್ಕೆ ಎಂದಿಗೂ ರಕ್ತ ತಗುಲುವುದಿಲ್ಲ ಮತ್ತು ರಾಮಬಾಣ ಎಂದಿಗೂ ನೋವು ಕೊಡುವುದಿಲ್ಲ. ರಾಮನ ಬಾಣ ಯಾವಾಗ ಯಾವುದೇ ಸಜೀವಿಯ ಶರೀರದಲ್ಲಿ ಪ್ರವೇಶಿಸುತ್ತದೆಯೋ, ಆ ಸಜೀವಿ ಎಷ್ಟೇ ಪಾಪಿಯಾಗಿರಲಿ ಅಥವಾ ಪುಣ್ಯವಂತನಾಗಿರಲಿ, ಅವನ ಶರೀರ ರಾಮನ ಬಾಣವನ್ನು ಸ್ವಾಗತಿಸುತ್ತದೆ. ಆ ಬಾಣಕ್ಕೆ ಸಜೀವಿಯ ಶರೀರದ ಪ್ರತಿಯೊಂದು ಭಾಗ ದಾರಿ ಮಾಡಿಕೊಡುತ್ತದೆ.
೧೦೮ ಶಕ್ತಿಕೇಂದ್ರಗಳನ್ನು ಜಾಗೃತಗೊಳಿಸುವ ರಾಮಬಾಣ
ನಾಲ್ಕನೇ ವಿಶೇಷತೆ ಏನೆಂದರೆ ರಾಮನ ಬಾಣ ಶರೀರದ ಯಾವುದೇ ಭಾಗದಿಂದ ಹೋದರೂ, ಅದು ಸಂಪೂರ್ಣ ಶರೀರದಲ್ಲಿರುವ ಎಲ್ಲಾ ೧೦೮ ಶಕ್ತಿಕೇಂದ್ರಗಳನ್ನು ಜಾಗೃತಗೊಳಿಸುತ್ತದೆ.
ಆವಾಹನೆ/ಆಹ್ವಾನವಿಲ್ಲದೆ ಬಿಡದ ರಾಮಬಾಣ
ರಾಮನ ಬಾಣದ ಐದನೇ ವಿಶೇಷತೆ ಏನೆಂದರೆ ಎದುರಿನವರು ಆವಾಹನೆ ಮಾಡದಿದ್ದರೆ ಅಥವಾ ಆಹ್ವಾನ (ಸವಾಲು) ನೀಡದಿದ್ದರೆ ರಾಮ ಎಂದಿಗೂ ಬಾಣ ಬಿಡುವುದಿಲ್ಲ. ಬಾಣ ಕೇವಲ ಆವಾಹನೆ ಅಥವಾ ಆಹ್ವಾನದ ನಂತರವೇ ಬಿಡುಗಡೆಯಾಗುತ್ತದೆ. ರಾಮನು ಪೂರ್ಣ ಸತ್ವಗುಣಿಯಾಗಿರುವುದರಿಂದ ಅವನು ಅಚಲ (Masterly Inactive). ನಾವು ಅವನಿಗೆ ಎಲ್ಲಿಯವರೆಗೆ ಆವಾಹನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಅವನು ಚಲಿಸುವುದಿಲ್ಲ ಮತ್ತು ಬಾಣ ಬಿಡುವುದಿಲ್ಲ. ರಾಮನ ಪ್ಲಾನ್ ಯಾವಾಗಲೂ ಎದುರಿನ ವ್ಯಕ್ತಿಯ ಮೇಲಿಂದಲೇ ನಿರ್ಧಾರವಾಗುತ್ತದೆ. ಅದಕ್ಕಾಗಿಯೇ ಅವನನ್ನು ಚಲಿಸುವಂತೆ ಮಾಡಲು ರಾವಣನಿಗಿಂತ ಹನುಮಂತನಂತಹ ಭಕ್ತರಾಗುವುದು ಯಾವಾಗಲೂ ಒಳ್ಳೆಯದು.
ಪ್ರೇಮ ಮತ್ತು ದ್ವೇಷಕ್ಕೆ ಅನುಸಾರವಾಗಿ ಬೇಕಾಗುವ ರಾಮಬಾಣಗಳ ಸಂಖ್ಯೆ
ಆರನೇ ವಿಶೇಷತೆ ಏನೆಂದರೆ ನಮ್ಮ ರಾಮನ ಮೇಲಿನ ಪ್ರೇಮ ಮತ್ತು ಭಕ್ತಿ ಎಷ್ಟು ಗಾಢವಾಗಿರುತ್ತದೆಯೋ, ಅಷ್ಟು ಕಡಿಮೆ ಬಾಣಗಳ ಅವಶ್ಯಕತೆ ಇರುತ್ತದೆ; ಇದಕ್ಕೆ ವಿರುದ್ಧವಾಗಿ ದ್ವೇಷ ಎಷ್ಟು ಹೆಚ್ಚಾಗಿರುತ್ತದೆಯೋ, ಅಷ್ಟು ಹೆಚ್ಚು ಬಾಣಗಳು ಬೇಕಾಗುತ್ತವೆ. ಇದರ ಬಗ್ಗೆ ಸದ್ಗುರು ಅನಿರುದ್ಧ ಬಾಪು ಹೇಳುತ್ತಾರೆ, ರಾಮನು ರಾವಣನಿಗಾಗಿ ಅಸಂಖ್ಯಾತ ಬಾಣಗಳನ್ನು ಬಳಸಿದನು, ಆದರೆ ನಾವು ಹಿಂದಿನ ಪ್ರವಚನದ ಕಥೆಯಲ್ಲಿ ಕೇಳಿದಂತೆ ಹನುಮಂತನಿಗೆ ಹೊಡೆದ ಒಂದೇ ಬಾಣದಿಂದ ರಾಮ ಸ್ವತಃ ಗಾಯಗೊಂಡನು.
ಧ್ಯಾಸ (ಹಂಬಲ) ಹುಟ್ಟಿದ ಮೇಲೆಯೇ ಬಿಡುವ ರಾಮಬಾಣ
ರಾಮನ ಬಾಣದ ಏಳನೇ ವಿಶೇಷತೆ ಏನೆಂದರೆ, ರಾಮನ ಬಾಣ ಕೇವಲ ಆಗಲೇ ಬಿಡುಗಡೆಯಾಗುತ್ತದೆ, ಯಾವಾಗ ಎದುರಿನ ವ್ಯಕ್ತಿ ಶತ್ರುತ್ವದಿಂದ ಅಥವಾ ಮಿತ್ರತ್ವದಿಂದ ರಾಮನ ಧ್ಯಾಸ (ಹಂಬಲ) ಪಡುವುದಿಲ್ಲವೋ ಅಲ್ಲಿಯವರೆಗೆ ಬಾಣ ಬಿಡುವುದಿಲ್ಲ. ಮತ್ತು ನಮಗೆ ಒಮ್ಮೆ ರಾಮನ ಧ್ಯಾಸ ಹಿಡಿದರೆ ರಾಮನ ಬಾಣ ಬಿಡುಗಡೆಯಾಗುತ್ತದೆ ಮತ್ತು ರಾಮನಿಗೂ ನಮ್ಮ ಧ್ಯಾಸ ಹಿಡಿಯುತ್ತದೆ. ಸಂತ ಕಬೀರದಾಸರು ಹೇಳುತ್ತಾರೆ – “ರಾಮ ಹಮಾರಾ ಜಪ ಕರೇ, ಹಮ್ ಬೈಠೇ ಆರಾಮ”. ಅಂದರೆ ಯಾವಾಗ ನಾವು ರಾಮನ ಧ್ಯಾಸ ಹಿಡಿಯುತ್ತೇವೋ, ಆಗ ರಾಮನಿಗೂ ನಮ್ಮ ಧ್ಯಾಸ ಹಿಡಿಯುತ್ತದೆ. ಪ್ರಾಪಂಚಿಕ ಜೀವನದಲ್ಲಿ ಯಾವುದೇ ಧ್ಯಾಸ ಇಟ್ಟುಕೊಳ್ಳಿ, ಆದರೆ ರಾಮನ ಧ್ಯಾಸ ಮಾತ್ರ ಕಾಯಂ ಆಗಿ ಇಟ್ಟುಕೊಳ್ಳಿ; ಆಗ ರಾಮನ ಯಾವುದೇ ರೂಪವಿರಲಿ, ಕೃಷ್ಣನಿರಲಿ ಅಥವಾ ಮಹಾವಿಷ್ಣುವಿರಲಿ. ಅವನು ಒಬ್ಬನೇ ಆಗಿದ್ದಾನೆ. ಇಂತಹ ೭ ವಿಶೇಷತೆಗಳಿರುವ ಬಾಣ ನಮ್ಮ ಬಿಲ್ಲುಗಳ ಮೇಲೆ ಹೂಡಲಾಗಿದೆ. ಈ ಬಿಲ್ಲು ಕೂಡ ವಿಶೇಷವಾಗಿದೆ. ಅದರ ಮೂರು ಗುಣಧರ್ಮಗಳಿವೆ:
ರಾಮನ ನಿರಾಕಾರ ಬಿಲ್ಲು ರಾಮನ ಬಿಲ್ಲು ನಿರಾಕಾರವಾಗಿದೆ, ಅಂದರೆ ಅದಕ್ಕೆ ಯಾವುದೇ ನಿರ್ದಿಷ್ಟ ಆಕಾರವಿಲ್ಲ. ಅದು ರಾಮನ ಇಚ್ಛೆಯಂತೆಯೇ ಬೇಕಾದ ಆಕಾರವನ್ನು ಬೇಕಾದಾಗ ಧಾರಣೆ ಮಾಡಬಹುದು.
ಸ್ಥಿರತೆಯನ್ನು ನೀಡುವ ರಾಮನ ಬಿಲ್ಲು
ರಾಮನ ಬಿಲ್ಲು ಸದಾ ಅಧಃ-ಊರ್ಧ್ವ (ಕೆಳಗೆ-ಮೇಲೆ) ಈ ಎರಡು ದಿಕ್ಕುಗಳಲ್ಲಿ ಸ್ಥಿರವಾಗಿರುತ್ತದೆ. ಅಂದರೆ ಅದು ನೇರವಾಗಿರುತ್ತದೆ, ಓರೆಯಾಗುವುದಿಲ್ಲ. ಈ ಬಿಲ್ಲು ಬಾಣಕ್ಕೆ ಯೋಗ್ಯ ಗತಿ ಮತ್ತು ಸ್ಥಿರತೆಯನ್ನು ನೀಡುತ್ತದೆ. ರಾಮನ ಬಿಲ್ಲಿನ ಅಧಃ ತುದಿ ಅಂದರೆ ಕೆಳಗಿನ ತುದಿಯು ಬಾಣವನ್ನು ಜೋಡಿಸಿದರೂ ಸಹ ಭೂಮಿಗೆ ತಗುಲಿಯೇ ಇರುತ್ತದೆ, ಪೃಥ್ವಿಯೊಂದಿಗೆ ಸಂಬಂಧ ಹೇಳುವಂತಹುದಾಗಿದೆ, ಅದಕ್ಕಾಗಿಯೇ ಅದು ಸ್ಥಿರವಾಗಿರುತ್ತದೆ. ರಾಮ ತನ್ನ ಭಕ್ತನಿಗೆ ಅವನ ಉಪಾಸನೆಯ ಯಾವ ಫಲವು ಅವನಿಗೆ ದಕ್ಕುತ್ತದೆಯೋ ಅಷ್ಟನ್ನೇ ನೀಡುತ್ತಾನೆ.
ಸದಾ ಕಾರ್ಯನಿರತವಾಗಿರುವ ರಾಮನ ಬಿಲ್ಲು
ರಾಮನ ಅವತಾರಕ್ಕೂ ಮೊದಲು ಮತ್ತು ನಂತರವೂ ಈ ಬಿಲ್ಲು ಸಕ್ರಿಯವಾಗಿದೆ. ಪ್ರತ್ಯಕ್ಷದಲ್ಲಿ ರಾಮನ ಬಿಲ್ಲು ಅಂದರೆ ಹನುಮಂತ. ಹನುಮಂತ ಅಂದರೆ ರಾಮನ ಬಿಲ್ಲು, ಮತ್ತು ಅವನ ಗದೆ ಅಂದರೆ ರಾಮನಾಮ. ಆದ್ದರಿಂದ ಎಲ್ಲಿ ರಾಮನಾಮವಿದೆಯೋ ಅಲ್ಲಿ ಹನುಮಂತ ಇದ್ದೇ ಇರುತ್ತಾನೆ. ರಾಮ-ಹನುಮಂತನ ಸಂಬಂಧ ಅತೂಟವಾಗಿದೆ (ದೃಢವಾಗಿದೆ)
ರಾಮನ ಆಯುಧಗಳು ಮತ್ತು ಲಕ್ಷ್ಮಣ, ಸೀತೆ ಹಾಗೂ ಹನುಮಂತ
ಸದ್ಗುರು ಶ್ರೀ ಅನಿರುದ್ಧ ಮುಂದೆ ಹೇಳುತ್ತಾರೆ ರಾಮನ ಬಿಲ್ಲು, ರಾಮನ ಬಾಣ ಮತ್ತು ರಾಮನ ಬತ್ತಳಿಕೆ ಈ ಮೂರೂ ಆಯುಧಗಳ ಒಡೆತನ ಪ್ರತ್ಯಕ್ಷದಲ್ಲಿ ರಾಮನದ್ದಲ್ಲ, ಅವುಗಳ ರಕ್ಷಣೆ ಮತ್ತು ನಿಯಂತ್ರಣವನ್ನು ಮಹಾಶೇಷ ಲಕ್ಷ್ಮಣ ಮಾಡುತ್ತಾನೆ. ಅಂದರೆ ರಾಮನ ಬಾಣ, ರಾಮನ ಬಿಲ್ಲು ಮತ್ತು ರಾಮನ ಬತ್ತಳಿಕೆ, ಇವುಗಳನ್ನು ರಾಮನ ಅಂಗದ ಮೇಲಿಂದ ತೆಗೆದಿಡುವುದು ಮತ್ತು ಮತ್ತೆ ರಾಮನ ಅಂಗದ ಮೇಲೆ ಹಾಕುವುದು ಈ ಕಾರ್ಯವನ್ನು ಕೇವಲ ಆ ಏಕಮೇವ ಮಹಾಶೇಷ ಲಕ್ಷ್ಮಣನೇ ಮಾಡಬಲ್ಲನು. ರಾಮನ ಬಿಲ್ಲು ಅಂದರೆ ಹನುಮಂತ, ಆದರೆ ಈ ಬಿಲ್ಲನ್ನು ಬಳಸುವ ಇಚ್ಛಾಶಕ್ತಿ ಅಂದರೆ ಸೀತಾಮಾತೆ. ರಾಮನ ಬಾಣದ ಕಾರ್ಯವೇನೆಂದರೆ ನಮ್ಮ ಆಯುಷ್ಯದಲ್ಲಿ ಪುರುಷಾರ್ಥ ಯಾವುದು ಹೊರಟು ಹೋಗಿದೆಯೋ ಅಥವಾ ಧರ್ಮ, ಅರ್ಥ, ಕಾಮ, ಮೋಕ್ಷ, ಭಕ್ತಿ ಅಥವಾ ಮರ್ಯಾದೆ ಈ ಪುರುಷಾರ್ಥದ ಯಾವ ಅಭಾವ ಉಂಟಾಗಿದೆಯೋ, ಆ ಪುರುಷಾರ್ಥವನ್ನು ಮತ್ತೆ ಸಿದ್ಧ ಮಾಡುವುದು. ಇದಕ್ಕಾಗಿ ನಾವು ರಾಮರಕ್ಷೆಯ ಪಠಣ ಮಾಡುವಾಗ ರಾಮನ ಧ್ಯಾನ ಮಾಡುತ್ತಾ ‘ಧೃತಶರಧನುಷ್ಯಂ’ ರಾಮ ಅಂದರೆ ಅವನ ಬತ್ತಳಿಕೆ ಸಮೇತ, ಬಾಣ ಸಮೇತ ಮತ್ತು ಬಿಲ್ಲು ಸಮೇತ ರಾಮನನ್ನು ನಮ್ಮ ಕಣ್ಣೆದುರು ತಂದುಕೊಳ್ಳಬೇಕು.
ದೇವರಿಗೆ ಶರಣಾಗುವ ಹುಚ್ಚು ಹಿಡಿಸುವ ಧ್ಯಾನಮಂತ್ರ
ಕೊನೆಯಲ್ಲಿ ಬಾಪು ಹೇಳುತ್ತಾರೆ ಧ್ಯಾನಮಂತ್ರ ಹೇಳುವಾಗ ಎಷ್ಟು ಸಾಧ್ಯವಿದೆಯೋ ಅಷ್ಟು ಧ್ಯಾನ ಮಾಡುವ ಪ್ರಯತ್ನ ಮಾಡಬೇಕು. ಇದಕ್ಕಾಗಿ ರಾಮರಕ್ಷೆ ಹೇಳುವಾಗ, ಧ್ಯಾನ ಮಾಡುವಾಗ ಒಂದೊಂದು ಶಬ್ದದ ಮೇಲೂ ಗಮನ ಕೊಟ್ಟರೆ ಸಾಕು. ಧ್ಯಾನಮಂತ್ರದ ಕಾರ್ಯವೇನು? ಈ ಧ್ಯಾನಮಂತ್ರದಿಂದಲೇ ನನಗೆ ದೇವರ ನಾಮದ ಹುಚ್ಚು ಹಿಡಿಯುತ್ತದೆ, ನನಗೆ ದೇವರ ಸ್ತುತಿಯ ಹುಚ್ಚು ಹಿಡಿಯುತ್ತದೆ, ನನಗೆ ದೇವರ ರೂಪದ ಹುಚ್ಚು ಹಿಡಿಯುತ್ತದೆ. ನನಗೆ ದೇವರಿಗೆ ಶರಣಾಗುವ ಹುಚ್ಚು ಹಿಡಿಯುತ್ತದೆ. ಇದೆಲ್ಲವನ್ನೂ ಮಾಡುವ ಕೆಲಸವನ್ನು ಯಾರು ಮಾಡುತ್ತಾರೋ ಅದುವೇ ಧ್ಯಾನಮಂತ್ರ.
