ಪರಮಪೂಜ್ಯ ಸದ್ಗುರು ಶ್ರೀ ಅನಿರುದ್ಧ ಬಾಪು ಅವರು 2013ರಲ್ಲಿ ಎಲ್ಲ ಶ್ರದ್ಧಾವ೦ತರ ಹಿತಕ್ಕಾಗಿ ತಮ್ಮ ಪ್ರವಚನದಲ್ಲಿ 'ಸ್ವಸ್ತಿಕ್ಷೇಮ ಸಂವಾದಂ' ಎಂಬ ಪರಿಕಲ್ಪನೆಯನ್ನು ಎಲ್ಲರ ಮುಂದೆ ಇಟ್ಟರು.
ಇದರಲ್ಲಿ ಪ್ರತಿಯೊಬ್ಬ ಶ್ರದ್ಧಾವ೦ತರು ಚಂಡಿಕಾಕುಲದ ಯಾವುದೇ ಸದಸ್ಯರ ಜೊತೆ ಸಂವಾದ ನಡೆಸಬಹುದು. ಶ್ರದ್ಧಾವ೦ತರ ಮನಸ್ಸಿನಲ್ಲಿರುವ ಭಾವನೆಗಳು, ವಿಚಾರಗಳು ಅಥವಾ ಅವನು ಏನು ಹೇಳಬೇಕೆಂದು ಬಯಸುತ್ತಾನೋ ಅದನ್ನು ಆ ಸದಸ್ಯರ ಮುಂದೆ ವ್ಯಕ್ತಪಡಿಸಬೇಕು.
ಸ್ವಸ್ತಿಕ್ಷೇಮ ಸಂವಾದಂ ಎಂದರೇನು?
ಪ್ರತಿಯೊಬ್ಬ ವ್ಯಕ್ತಿಯು ತನ್ನ ಮನಸ್ಸಿನಲ್ಲಿರುವ ಯಾವುದೇ ವಿಷಯವನ್ನು ಈ ಚಂಡಿಕಾಕುಲದ ಯಾವುದೇ ಸದಸ್ಯರೊಂದಿಗೆ ಮಾತನಾಡಬಹುದು. ನಾವು ಏನು ಮಾತನಾಡುತ್ತಿದ್ದೇವೆಯೋ, ಅದನ್ನು ತಾಯಿ ಭಗವತಿಯು ಖಂಡಿತ ಕೇಳುತ್ತಿದ್ದಾಳೆ ಎಂಬ ಪೂರ್ಣ ನಂಬಿಕೆ ನಮ್ಮ ಮನಸ್ಸಿನಲ್ಲಿ ಇರಬೇಕು.
ಮನಸ್ಸಿನಲ್ಲಿ ಏನು ಮಾತನಾಡಲಾಗುತ್ತದೆಯೋ, ಅದನ್ನೇ ಕೇಳಲಾಗುತ್ತದೆ. ಇದು ಒಂದು ಸಂವಾದ. ನಮ್ಮ ಮನಸ್ಸಿನ ವಿಷಯವು ಅವರ ಬಳಿ ತಲುಪಿದಾಗ, ಅವರ ವಿಷಯ (ಸಂದೇಶ) ಪ್ರಾಣಮಯ ಸಂವಾದದಿಂದ, ಪ್ರಾಣಗಳ ಕಂಪನಗಳಿಂದ (Vibrations) ನಮ್ಮ ಪ್ರಾಣಗಳೊಂದಿಗೆ ಸಂಪರ್ಕ ಹೊಂದುತ್ತದೆ.
ಪ್ರತಿಯೊಬ್ಬರಿಗೂ ಮನಸ್ಸು ಬದಲಾಗಬೇಕೆಂದು ಅನಿಸುತ್ತದೆ, ಆದರೆ ಇದು ಮನುಷ್ಯರಿಗೆ ಕಷ್ಟ. 'ಸ್ವಸ್ತಿಕ್ಷೇಮ ಸಂವಾದಂ' (Swastikshema Samvadam) ಮೂಲಕ ನಾವು ಕರ್ಮಸ್ವಾತಂತ್ರ್ಯದ ಸರಿಯಾದ ಬಳಕೆಯನ್ನು ಮಾಡಿ ಮನಸ್ಸಿನಲ್ಲಿ ಸೂಕ್ತ ಬದಲಾವಣೆಗಳನ್ನು ತರಬಹುದು.
'ಸ್ವಸ್ತಿಕ್ಷೇಮ ಸಂವಾದಂ' (Swastikshema Samvadam) ಎಂಬುದು ದಿವ್ಯ ಚಂಡಿಕಾಕುಲದೊಂದಿಗೆ (Divine Chandikakul) ನಡೆಸಲಾಗುವ ಸಂವಾದವಾಗಿದೆ ಎಂದು ನಮ್ಮ ಸದ್ಗುರು ಅನಿರುದ್ಧ ಬಾಪು ಅವರು 'ಪಿತೃವಚನಮ್'ನಲ್ಲಿ ಹೇಳಿದ್ದಾರೆ, ಇದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು.
ಸ್ವಸ್ತಿಕ್ಷೇಮ ಸಂವಾದವನ್ನು ಹೇಗೆ ಮಾಡುವುದು?
ಮೊದಲಿಗೆ ಬಾಪು ಅವರ ಧ್ವನಿಯಲ್ಲಿ, ಈ ಕೆಳಗಿನ ಜಪವನ್ನು ಮಾಡಲಾಗುತ್ತದೆ. ಆಗ ಸ್ವಸ್ತಿಕ್ಷೇಮ ಸಂವಾದವು ಪ್ರಾರಂಭವಾಗುತ್ತದೆ.
"ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ|
ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೇ||"
ನಂತರ ಕನಿಷ್ಠ 5 ನಿಮಿಷಗಳ ಕಾಲಾವಕಾಶ ಇರುತ್ತದೆ, ಆ ಸಮಯದಲ್ಲಿ ಪ್ರತಿಯೊಬ್ಬ ಶ್ರದ್ಧಾವ೦ತರು ಕಣ್ಣುಗಳನ್ನು ಮುಚ್ಚಿಕೊಂಡು, ನಾವು ಪ್ರತ್ಯಕ್ಷವಾಗಿ ಚಂಡಿಕಾಕುಲದ ಮುಂದೆ ಕುಳಿತಿದ್ದೇವೆ ಎಂದು ಭಾವಿಸಿ, ಅರಿತುಕೊಂಡು, ಚಂಡಿಕಾಕುಲದ ಯಾವುದೇ ಸದಸ್ಯರೊಂದಿಗೆ ಅಥವಾ ಎಲ್ಲರೊಂದಿಗೆ ಒಟ್ಟಾಗಿ, ತನಗೆ ಇಷ್ಟ ಬಂದಂತೆ ಸಂವಾದ ಮಾಡಬೇಕು. ಈ ಅವಧಿಯ ನಂತರ ಬಾಪು ಅವರ ಧ್ವನಿಯಲ್ಲಿ ಮಾತೃವಾತ್ಸಲ್ಯ ಉಪನಿಷತ್ತಿನ ಈ ಶ್ಲೋಕವನ್ನು ಪ್ಲೇ ಮಾಡಲಾಗುತ್ತದೆ.
"ನಮಃ ಸರ್ವಶುಭಂಕರೇ| ನಮಃ ಬ್ರಹ್ಮತ್ರಿಪುರಸುಂದರಿ| ಶರಣ್ಯೇ ಚಂಡಿಕೇ ದುರ್ಗೇ| ಪ್ರಸೀದ ಪರಮೇಶ್ವರಿ||"
ಸ್ವಸ್ತಿಕ್ಷೇಮ ಸಂವಾದವನ್ನು ಎಲ್ಲಿ ಮಾಡಬಹುದು?
ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ಭರವಸೆ ಮತ್ತು ಗ್ಯಾರಂಟಿ ಏನೆಂದರೆ, ಈ ರೀತಿ ಸ್ವಸ್ತಿಕ್ಷೇಮ ಸಂವಾದದ ಮೂಲಕ ಚಂಡಿಕಾ ಕುಲದೊಂದಿಗೆ ಅಥವಾ ಚಂಡಿಕಾಕುಲದ ಯಾವುದೇ ಸದಸ್ಯರೊಂದಿಗೆ ನಡೆಸಿದ ಸಂವಾದವು ಯಾವುದೇ ಇತರ ಮಾಧ್ಯಮ/ಏಜೆಂಟ್ ಇಲ್ಲದೆ ಅವರ ಬಳಿಗೆ ಸುಲಭವಾಗಿ ಖಂಡಿತ ತಲುಪುತ್ತದೆ. ಪ್ರತಿಯೊಂದು ಅಧಿಕೃತ ಉಪಾಸನಾ ಕೇಂದ್ರದಲ್ಲೂ ಈ ರೀತಿ ಸ್ವಸ್ತಿಕ್ಷೇಮ ಸಂವಾದವನ್ನು ಪ್ರಾರಂಭಿಸುವ ವ್ಯವಸ್ಥೆ ಮಾಡಲಾಗಿದೆ ಮತ್ತು ಆ ಸಂವಾದದ ಸಮಯದಲ್ಲಿ ಆ ಉಪಾಸನಾ ಕೇಂದ್ರವು ಹರಿಗುರುಗ್ರಾಮವೇ ಆಗಿರುತ್ತದೆ ಎಂಬುದು ಬಾಪು ಅವರ ಸಂಕಲ್ಪ. ಬಾಪು ಅವರ ಸಂಕಲ್ಪದ ಪ್ರಕಾರ, ಸ್ವಸ್ತಿಕ್ಷೇಮ ಸಂವಾದವನ್ನು ಶ್ರೀಹರಿಗುರುಗ್ರಾಮದಲ್ಲಿ ಮತ್ತು ಉಪಾಸನಾ ಕೇಂದ್ರದಲ್ಲಿ ಮಾಡಬಹುದು. ಜೊತೆಗೆ ಭಾನುವಾರ ಆನ್‌ಲೈನ್ ಇಂಗ್ಲಿಷ್ ಉಪಾಸನೆಯಲ್ಲೂ ಸ್ವಸ್ತಿಕ್ಷೇಮ ಸಂವಾದದ ಲಾಭ ಪಡೆಯಬಹುದು. ಈ ಉಪಾಸನೆಯು ಪ್ರತಿ ಭಾನುವಾರ ಬೆಳಿಗ್ಗೆ 10 ಮತ್ತು ರಾತ್ರಿ 8.30ಕ್ಕೆ aniruddha.tv ಯಲ್ಲಿ ಪ್ರಸಾರವಾಗುತ್ತದೆ.
ಶ್ರದ್ಧಾಳುಗಳಿಗೆ 'ಸ್ವಸ್ತಿಕ್ಷೇಮ ಸಂವಾದಂ'ನಿಂದ ಬಹಳ ಸುಂದರ ಮತ್ತು ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುವ ಅನುಭವಗಳು ಬಂದಿವೆ.
---------------------------