೧. ರಾಮರಕ್ಷಾ ಸ್ತೋತ್ರದಲ್ಲಿನ ಸೀತಾಶಕ್ತಿ
ರಾಮರಕ್ಷಾ ಸ್ತೋತ್ರಮಂತ್ರದ ಮೇಲಿನ ಪ್ರವಚನ ಮಾಲೆಯ ನಾಲ್ಕನೆಯ ಭಾಗದಲ್ಲಿ ಸದ್ಗುರು ಶ್ರೀಅನಿರುದ್ಧ ಬಾಪೂ ಅವರು 'ಸೀತಾಶಕ್ತಿಃ' ಈ ಓದಿನ ಬಗ್ಗೆ ಮಾತನಾಡುತ್ತಾ, ರಾಮರಕ್ಷಾ ಸ್ತೋತ್ರದ ಸೀತೆ ಶಕ್ತಿ ಎಂದು ಹೇಳಿದರು. ಶಕ್ತಿ ಅಂದರೆ ಕೇವಲ ಶಾರೀರಿಕ ಬಲ, ಅಣುಶಕ್ತಿ ಅಥವಾ ಹಣದ ಶಕ್ತಿ ಈ ರೀತಿಯ ಹೊರಗಿನ ಅಥವಾ ಕಾಣಿಸುವ ವಿಷಯಗಳಲ್ಲ, ಆದರೆ ಶಕ್ತಿ ಅಂದರೆ ಪ್ರಾಣಶಕ್ತಿ, ಅದು ಎಲ್ಲಾ ಶಕ್ತಿಗಳ ಮೂಲವಾಗಿದೆ.
ಬಾಪೂ ಅವರು ಬೇರೆ ಬೇರೆ ಉದಾಹರಣೆಗಳಿಂದ ಸ್ಪಷ್ಟಪಡಿಸಿದರು, ಪ್ರಾಣವು ಒಂದು ಶಕ್ತಿ, ಅದು ಕಾಣಿಸುವುದಿಲ್ಲ, ಆದರೆ ಅದರ ಇರುವಿಕೆಯ ಅಥವಾ ಇಲ್ಲದಿರುವಿಕೆಯ ಭಾವದಿಂದ ತಿಳಿಯುತ್ತದೆ. ದೇಹದಲ್ಲಿ ಪ್ರಾಣ ಇರುವಾಗ ದೇಹ ಕ್ರಿಯಾಶೀಲವಾಗಿರುತ್ತದೆ, ಮತ್ತು ಅದು ಹೋದಾಗ ದೇಹ ಚಲನರಹಿತವಾಗುತ್ತದೆ, ಇದರಿಂದಲೇ ಪ್ರಾಣಶಕ್ತಿಯ ಅಸ್ತಿತ್ವ ತಿಳಿಯುತ್ತದೆ.
೨. ಪ್ರಾಣಶಕ್ತಿ ಮತ್ತು ಅದರ ಕಾರ್ಯ
ದೇಹದಲ್ಲಿ ನಡೆಯುವ ಕ್ರಿಯೆಗಳು ಉದಾಹರಣೆಗೆ ಉಸಿರಾಟ, ಹೃದಯ ಸ್ಪಂದನ, ಮೆದುಳಿನ ಕಾರ್ಯ ಇವು ಸ್ವತಃ ಪ್ರಾಣವಲ್ಲ, ಆದರೆ ಈ ಎಲ್ಲಾ ಕ್ರಿಯೆಗಳನ್ನೂ ಪ್ರಾಣಶಕ್ತಿ ನಿರ್ವಹಿಸುತ್ತದೆ.
ಮುಂದೆ ಬಾಪೂ ಅವರು ಅಣುವಿನ ಉದಾಹರಣೆ ಕೊಟ್ಟು ಸ್ಪಷ್ಟಪಡಿಸಿದರು, ಅಣುವಿನಲ್ಲಿರುವ ಪ್ರೋಟಾನ್‌ಗಳು ಮತ್ತು ಎಲೆಕ್ಟ್ರಾನ್‌ಗಳ ನಡುವಿನ ಅಂತರವನ್ನು ಕಾಪಾಡುವ ಶಕ್ತಿಯೇ ಅಣುಶಕ್ತಿ. ಯಾವಾಗ ಈ ಎಲೆಕ್ಟ್ರಾನ್‌ಗಳ ರಚನೆಯಲ್ಲಿ ಬದಲಾವಣೆ ಆಗುತ್ತದೆಯೋ, ಆಗ ಮಾತ್ರ ಅಣುವಿನಲ್ಲಿರುವ ಈ ಶಕ್ತಿ ಹೊರಗೆ ಬರುತ್ತದೆ.
ಅದೇ ರೀತಿ, ಪ್ರಾಣಶಕ್ತಿ ಕೂಡ ಎಲ್ಲಾ ವಿಶ್ವದಲ್ಲಿರುವ ಶಕ್ತಿಗಳ ಮೂಲ ರೂಪ, ಆದರೆ ಅದು ಪರಮೇಶ್ವರನ ನಿಯಮದ ಪ್ರಕಾರ ಕಾರ್ಯ ಮಾಡುತ್ತದೆ. ಆದ್ದರಿಂದ ಅದು ಅಸ್ತವ್ಯಸ್ತವಾಗುವುದಿಲ್ಲ, ಅದು ನಿಶ್ಚಿತ ಮಾರ್ಗದಲ್ಲಿ ಸಾಗುತ್ತದೆ.
ಪ್ರಾಣಶಕ್ತಿ ಸಜೀವತೆಯ ಹಿಂದಿನ ಮೂಲಭೂತ ಶಕ್ತಿಯಾಗಿದೆ ಮತ್ತು ಅದು ಮೂರು ರೂಪಗಳಲ್ಲಿ ಕಾರ್ಯ ಮಾಡುತ್ತದೆ:
(೧) ತೃಷಾ (ಹಸಿವು/ಅಗತ್ಯ)
(೨) ಕ್ರಿಯಾ (ಕಾರ್ಯ),
(೩) ತೃಪ್ತಿ (ಸಮಾಧಾನ).
ಜಗತ್ತಿನ ಪ್ರತಿಯೊಂದು ಕಾರ್ಯವೂ ಈ ಮೂರು ಹಂತಗಳ ಮೂಲಕ ಹೋಗುತ್ತದೆ; ಅಗತ್ಯ
ಹುಟ್ಟುತ್ತದೆ → ಕಾರ್ಯ ನಡೆಯುತ್ತದೆ → ಸಮಾಧಾನ ಸಿಗುತ್ತದೆ.
೩. ತೃಪ್ತಿಯ ಕೊರತೆ ಮತ್ತು ಅದರ ಪರಿಣಾಮಗಳು
ಅನೇಕ ಬಾರಿ ಪ್ರಯತ್ನಗಳು ನಡೆಯುತ್ತವೆ, ಕಾರ್ಯ ನಡೆಯುತ್ತದೆ, ಆದರೆ ತೃಪ್ತಿ ಸಿಗುವುದಿಲ್ಲ. ಈ ಅತೃಪ್ತಿಯೇ ದುಃಖದ ಮೂಲ ಕಾರಣ. ಬಾಪೂ ಅವರು ಹೇಳಿದರು, ಶ್ರೀರಾಮ ಅಂದರೆ ಪುರುಷಾರ್ಥ. ಪರಿಶ್ರಮವನ್ನು ಸುಂದರವಾಗಿ ಮಾಡುವ ಶಕ್ತಿಯೇ ಪುರುಷಾರ್ಥ. ತೃಪ್ತಿ ಪಡೆಯುವ ಶಕ್ತಿಯೇ ಪುರುಷಾರ್ಥ, ಮತ್ತು ಸೀತೆ ಅಂದರೆ ತೃಪ್ತಿ. ಆದರೆ ನಮ್ಮ ಜೀವನದಲ್ಲಿ ಸೀತೆ (ತೃಪ್ತಿ) ರಾವಣನ (ದುಷ್ಟ ಕಲ್ಪನೆಯ) ಸೆರೆಯಲ್ಲಿರುತ್ತಾಳೆ. ಆದ್ದರಿಂದ ಪುರುಷಾರ್ಥ ಇದ್ದರೂ ತೃಪ್ತಿ ಸಿಗುವುದಿಲ್ಲ.
ತೃಪ್ತಿಯೇ ನಿಜವಾದ ಶಕ್ತಿ. ತೃಪ್ತಿಯಿಂದಲೇ ಹೊಸ ಸಾಮರ್ಥ್ಯ ಹುಟ್ಟುತ್ತದೆ; ಅತೃಪ್ತಿಯು ಮನುಷ್ಯನ ಎಲ್ಲಾ ಶಕ್ತಿಯನ್ನೂ ನಾಶ ಮಾಡುತ್ತದೆ. ಇತರರೊಂದಿಗೆ ಹೋಲಿಕೆ ಮಾಡುವುದರಿಂದಲೂ ಅತೃಪ್ತಿ ಹುಟ್ಟುತ್ತದೆ.
ಬಾಪೂ ಅವರು ಹೇಳುತ್ತಾರೆ, ಸದ್ಗುರುತತ್ವದ ಹತ್ತಿರ ಪ್ರತಿಯೊಬ್ಬರ ಸಾಲು ಬೇರೆ ಬೇರೆ ಇರುತ್ತದೆ. ಆದ್ದರಿಂದ ಹೋಲಿಕೆ ಮಾಡಿ ತಮ್ಮ ಸುಖದುಃಖ ಅಥವಾ ಗುರಿಯನ್ನು ನಿರ್ಧರಿಸಬೇಡಿ. ನಿಮ್ಮ ಶಕ್ತಿಯನ್ನು ಗುರುತಿಸಿ ಅದೇ ಪ್ರಕಾರ ಕಾರ್ಯ ಮಾಡಿ.
೪. ಹೋಲಿಕೆ ಅಂದರೆ ಭಯವನ್ನು ಹುಟ್ಟಿಸುವ 'ಕೈಕಸೀ' ಮತ್ತು ಭಯ ಅಂದರೆ ರಾವಣ
ತೃಪ್ತಿಯೇ ಈ ಪ್ರಾಣಶಕ್ತಿಯ ಅಂತಿಮ ಕಾರ್ಯ. ಮನುಷ್ಯ ಎಷ್ಟು ಪ್ರಯತ್ನಶೀಲನಾಗಿದ್ದರೂ, ಅವನು ಇತರರೊಂದಿಗೆ ಹೋಲಿಕೆ ಮಾಡುತ್ತಿದ್ದರೆ, ಅವನಿಗೆ ತೃಪ್ತಿ ಸಿಗುವುದಿಲ್ಲ.
ಬಾಪೂ ಹೇಳುತ್ತಾರೆ, ಹೋಲಿಕೆಯೇ ‘ಕೈಕಸೀ’ ಅಂದರೆ ರಾವಣನ ತಾಯಿ ಮತ್ತು ಅವಳ ಗರ್ಭದಲ್ಲೇ ಹುಟ್ಟುತ್ತಾನೆ ರಾವಣ ಅಂದರೆ ಭಯ. ಈ ಹೋಲಿಕೆ ಮತ್ತು ಭಯ ನಮ್ಮನ್ನು ಪುರುಷಾರ್ಥ (ಪರಿಶ್ರಮ) ಮತ್ತು ತೃಪ್ತಿ (ಸಮಾಧಾನ) ಇವುಗಳಿಂದ ದೂರ ಇಡುತ್ತದೆ.
ಭಯವು ಹೋಲಿಕೆಯಿಂದಲೇ ಹುಟ್ಟುತ್ತದೆ, ಅದು ನಮ್ಮ ಸಾಮರ್ಥ್ಯವಿದ್ದರೂ ನಮ್ಮನ್ನು ಕೀಳರಿಮೆಗೆ ತಳ್ಳುತ್ತದೆ. ಆದ್ದರಿಂದ ಮನುಷ್ಯನಿಗೆ ತನ್ನ ಕರ್ತವ್ಯವನ್ನು ಕೂಡ ಸರಿಯಾಗಿ ಮಾಡಲು ಆಗುವುದಿಲ್ಲ. ಉದಾಹರಣೆಗೆ ಒಬ್ಬನಿಗೆ ಹಾಡು ಹಾಡಲು ಬರುತ್ತದೆ, ಆದರೆ ವೇದಿಕೆಯ (ಸ್ಟೇಜ್) ಮೇಲೆ ಭಯದಿಂದ ಹಾಡಲು ಆಗುವುದಿಲ್ಲ, ಹಾಗೆಯೇ ನಮ್ಮ ಜೀವನದಲ್ಲಿ ಕೂಡ ಭಯದಿಂದ ನಮ್ಮ ಶಕ್ತಿ ಕಡಿಮೆಯಾಗುತ್ತದೆ.
೫. ನಿಜವಾದ ಮೋಕ್ಷ ಅಂದರೆ ತೃಪ್ತಿ
ಮೋಕ್ಷ ಅಂದರೆ ಏನಾದರೂ ಜಗತ್ತಿನಿಂದ ದೂರ ಹೋಗುವುದು ಅಲ್ಲ, ಆದರೆ ಶರೀರ, ಮನಸ್ಸು, ಪ್ರಾಣ ಈ ಎಲ್ಲ ಹಂತಗಳಲ್ಲೂ ಪೂರ್ಣ ತೃಪ್ತಿಯೇ ನಿಜವಾದ ಮೋಕ್ಷ. ಹೋಲಿಕೆ ಮಾಡದೆ, ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕೆಲಸ ಮಾಡುತ್ತಿರುವುದು, ಮನಃಶಾಂತಿ ಮತ್ತು ತೃಪ್ತಿ ಪಡೆಯುವುದು ಇದೇ ನಿಜವಾದ ಶಕ್ತಿ, ಮತ್ತು ಅದೇ ಶ್ರೀರಾಮರಕ್ಷೆಯ ಪ್ರೇರಣೆ ಕೂಡ.
ಬಾಪೂ ಹೇಳುತ್ತಾರೆ, ನಾವು ಏಕೆ ದುಃಖಿತರಾಗುತ್ತೇವೆ? ಏಕೆಂದರೆ ನಾವು ನಿರಂತರವಾಗಿ ಇತರರೊಂದಿಗೆ ಹೋಲಿಕೆ ಮಾಡುತ್ತೇವೆ. "ಅವನ ಆದಾಯ ಜಾಸ್ತಿ ಇದೆ", "ಅವನು ನನ್ನಂತೆ ಸ್ಥೂಲ ಇಲ್ಲ", "ಅವನು ಬೇಗ ಮುಂದೆ ಹೋದ", ಹೀಗೆ ಹೋಲಿಕೆ ಮಾಡಿ ನಾವು ನಮ್ಮ ಸಮಾಧಾನವನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ ಇತರರೊಂದಿಗೆ ಹೋಲಿಕೆ ಮಾಡಬೇಡಿ.
ನಿಮ್ಮ ಗುರಿಯನ್ನು ತಲುಪಲು ನಿಮ್ಮ ಶಕ್ತಿಗನುಗುಣವಾಗಿ ಹಂತ ಹಂತವಾಗಿ ನಡೆಯಿರಿ. ಅಗತ್ಯವಿದ್ದರೆ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳಿ. ದೊಡ್ಡ ಗುರಿ ತಲುಪುವವರೆಗಿನ ಪ್ರತಿ ಹೆಜ್ಜೆಯಲ್ಲೂ ಸಂತೋಷದಿಂದಿರಿ. ಏಕೆಂದರೆ ತೃಪ್ತಿ ಇದ್ದರೆ ಮಾತ್ರ ಮುಂದೆ ಹೋಗುವ ಶಕ್ತಿ ಸಿಗುತ್ತದೆ. ಸೀತೆ ತೃಪ್ತಿ ಮತ್ತು ತೃಪ್ತಿಗೆ ಹೋಲಿಕೆ ಇಲ್ಲ. ಅವಳು 'ಅತುಲಾ'.
೬. ತೃಪ್ತಿಯಿಲ್ಲದೆ ಕಾರ್ಯ ಸುಸಂಗತವಾಗುವುದಿಲ್ಲ
ತೃಪ್ತಿಯೇ ಪುರುಷಾರ್ಥದ ನಿಜವಾದ ಪ್ರೇರಣೆ ಮತ್ತು ಅದಿಲ್ಲದೆ ಯಾವುದೇ ಕಾರ್ಯ ಸುಸಂಗತವಾಗುವುದಿಲ್ಲ.
ಬಾಪೂ ಅವರು ಒಂದು ಸುಲಭ ಉದಾಹರಣೆ ಕೊಡುತ್ತಾರೆ, ಉದಾಹರಣೆಗೆ, ನೀವು ಒಂದು ಕಡೆ ಕೆಲಸ ಮಾಡುತ್ತಿದ್ಡೀರಿ ಮತ್ತು ಅಲ್ಲಿ ತಿಂಗಳ ಸಂಬಳವೇ ಸಿಗಲಿಲ್ಲ, ಆಗ ಮುಂದಿನ ತಿಂಗಳು ಕೆಲಸ ಮಾಡಲು ಉತ್ಸಾಹ ಇರುತ್ತದೆಯೇ?
ಅದೇ ರೀತಿ ಜೀವನದಲ್ಲೂ ಕೂಡ – ಕಾರ್ಯ (ಪುರುಷಾರ್ಥ) ಮಾಡಿದರೆ ಅದರಿಂದ ತೃಪ್ತಿ ಸಿಗಬೇಕು. ಪುರುಷಾರ್ಥದ ಪ್ರತಿ ಹಂತದಲ್ಲೂ ತೃಪ್ತಿ ಸಿಗಬೇಕು. ಇಲ್ಲವಾದರೆ ನಾವು ಆಯಾಸಗೊಳ್ಳುತ್ತೇವೆ, ನಿರುತ್ಸಾಹಗೊಳ್ಳುತ್ತೇವೆ.
'ಸೀತೆ' ತೃಪ್ತಿಯ ಸಂಕೇತ. ಅವಳ ಸಂಬಂಧ ಸೆರೆಬ್ರಲ್ ಕಾರ್ಟೆಕ್ಸ್ (ಮೆದುಳಿನ ಉನ್ನತ ಭಾಗ) ಮತ್ತು ಅದರ ಪೋಷಣೆಗೆ ಬೇಕಾಗುವ ವಿಶೇಷ ಶರ್ಕರದ (ಗ್ಲೂಕೋಸ್) ಜೊತೆಗೆ ಇದೆ. ಈ ಶರ್ಕರವೇ ಸಿಗದೇ ಹೋದರೆ, ಮನುಷ್ಯನ ಪುರುಷಾರ್ಥವೇ ಮುಗಿದುಹೋಗುತ್ತದೆ. ನಮ್ಮ ಮೆದುಳು, ನಮ್ಮ ಮನಸ್ಸು, ಇದು ಸಮಾಧಾನದ (ತೃಪ್ತಿಯ) ಶಕ್ತಿಯಿಂದಲೇ ನಡೆಯುತ್ತದೆ.
ತೃಪ್ತಿ ಸಿಗದೇ ಹೋದರೆ ಮನುಷ್ಯ ಸುಳ್ಳು ನಿರೀಕ್ಷೆಗಳಲ್ಲಿ, ಹೋಲಿಕೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ, ಮತ್ತು ಅಂತಹ ಸಮಯದಲ್ಲಿ ಸುಳ್ಳು ಅಥವಾ ಅಪೂರ್ಣ ತೃಪ್ತಿ ಹುಟ್ಟುತ್ತದೆ – ಅದು ವಿಕೃತಿ ಮತ್ತು ದೌರ್ಬಲ್ಯದ ಕಡೆಗೆ ಕರೆದುಕೊಂಡು ಹೋಗುತ್ತದೆ.
೭. ರಾಮರಕ್ಷಾ ಸ್ತೋತ್ರಮಂತ್ರ – ತೃಪ್ತಿ ಮತ್ತು ಪುರುಷಾರ್ಥವನ್ನು ಎಚ್ಚರಿಸುವಂತದ್ದು
ರಾಮರಕ್ಷಾ ಸ್ತೋತ್ರಮಂತ್ರ 'ಮಂತ್ರ' ಈ ಶಬ್ದದ ಅರ್ಥಕ್ಕೆ ಸಂಬಂಧಿಸಿದೆ. ಯಾವುದರ ಚಿಂತನೆ ಮಾಡಿದರೆ ಅದು ರಕ್ಷಣೆ ಮಾಡುತ್ತದೆಯೋ ಅದು ಮಂತ್ರ. ಮಂತ್ರ ಅಂದರೆ ಅದು ಮನಮಯ ಮತ್ತು ಪ್ರಾಣಮಯವೂ ಆಗಿದೆ, ಅದು ಮಂತ್ರ.
ಎಲ್ಲಿ ಮನಸ್ಸು ಮತ್ತು ಪ್ರಾಣ ಒಂದಾಗುತ್ತವೆಯೋ, ಅಲ್ಲಿಯೇ ಪುರುಷಾರ್ಥ ಅಂದರೆ ಪ್ರಯತ್ನ ಮತ್ತು ಯಶಸ್ಸು ಸಾಧ್ಯವಾಗುತ್ತದೆ. ರಾಮರಕ್ಷಾ ಒಂದು ಸ್ತೋತ್ರಮಂತ್ರ – ಅದು
ಪುರುಷಾರ್ಥವನ್ನು ಉಂಟುಮಾಡುತ್ತದೆ ಮತ್ತು ತೃಪ್ತಿ ಕೊಡುತ್ತದೆ.
ಬಾಪೂ ಅವರು ತೃಪ್ತಿಯಿಂದ ಪುರುಷಾರ್ಥ, ಪುರುಷಾರ್ಥದಿಂದ ತೃಪ್ತಿ ಇದರ ಸುಂದರ ಉದಾಹರಣೆ ಕೊಡುತ್ತಾ ಹೇಳಿದರು, ಮಳೆ ಬಿದ್ದಾಗ ಭೂಮಿಯಲ್ಲಿ ತೃಪ್ತಿ ಉಂಟಾಗುತ್ತದೆ, ಆಗ ಅದು ಬೀಜಗಳನ್ನು ಮೊಳಕೆ ಹೊಡೆಸುತ್ತದೆ, ಗಿಡಗಳನ್ನು ಬೆಳೆಸುತ್ತದೆ. ಆ ಗಿಡಗಳು ಅದಕ್ಕೆ ನೆರಳು ಕೊಡುತ್ತವೆ, ತಾಪಮಾನವನ್ನು ನಿಯಂತ್ರಣದಲ್ಲಿ ಇಡುತ್ತವೆ ಮತ್ತು ಇತರರಿಗೂ ಉಪಯುಕ್ತವಾಗುತ್ತವೆ. ಕೇವಲ ತನಗಾಗಿ ತೃಪ್ತಿ ಅಂದರೆ ಅಪೂರ್ಣತೆ; ನಿಜವಾದ ತೃಪ್ತಿ ಇತರರ ಕಲ್ಯಾಣಕ್ಕಾಗಿ ಕಾರ್ಯ ಮಾಡುವಂತದ್ದು.
ಸೀತೆ ತೃಪ್ತಿಯ ಶಕ್ತಿ, ಆದರೆ ರಾಮ ಅಂದರೆ ಪುರುಷಾರ್ಥ. ತೃಪ್ತಿಯಿಂದಲೇ ಪುರುಷಾರ್ಥ ಸಾಧ್ಯವಾಗುತ್ತದೆ ಮತ್ತು ಪುರುಷಾರ್ಥದಿಂದಲೇ ನಿಜವಾದ ತೃಪ್ತಿ ಸಿಗುತ್ತದೆ.
೮. ರಾಮರಕ್ಷಾ – ಆಲಸ್ಯವನ್ನು ನಾಶ ಮಾಡಿ ಪ್ರೇರಣೆ ಕೊಡುವುದು
ಬಾಪೂ ಅವರು ಹೇಳಿದರು, ರಾಮರಕ್ಷಾ ಸ್ತೋತ್ರದ ಪಠಣದಿಂದ ನಮ್ಮ ತೃಪ್ತಿ ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಇದು ಪುರುಷಾರ್ಥವನ್ನು ಹೆಚ್ಚಿಸುವ ತೃಪ್ತಿ. ಈ ತೃಪ್ತಿ ಆಲಸ್ಯವನ್ನು ದೂರ ಮಾಡುತ್ತದೆ, ಪ್ರೇರಣೆ ಕೊಡುತ್ತದೆ ಮತ್ತು ಮನೋಬಲವನ್ನು ಹೆಚ್ಚಿಸುತ್ತದೆ.
ಈ ಸ್ತತ್ರದ ಪ್ರಭಾವದಿಂದ ನಮ್ಮ ಕಾರ್ಯಕ್ಷಮತೆ ಹೆಚ್ಚುತ್ತದೆ ಮತ್ತು ರಾಮ ಅಂದರೆ ಎಲ್ಲಾ ರೀತಿಯ ಪುರುಷಾರ್ಥಗಳ ಮೂಲ ಶಕ್ತಿ ಪಡೆಯುತ್ತದೆ.
ಒಬ್ಬ ಸಾಮಾನ್ಯ ಮನುಷ್ಯನಿಗೆ ಆಧ್ಯಾತ್ಮ ಕೂಡ ಸರಿಯಾಗಿ ಗೊತ್ತಿಲ್ಲವಾದರೂ ಅವನು ಮನಃಪೂರ್ವಕವಾಗಿ ರಾಮರಕ್ಷಾವನ್ನು ಹೇಳಲು ಪ್ರಾರಂಭಿಸಿದರೆ, ಅವನ ಮನಸ್ಸಿನಲ್ಲಿರುವ ಆಲಸ್ಯ ತಾನಾಗಿಯೇ ಹೊರಟುಹೋಗುತ್ತದೆ. ಅವನಿಗೆ ಕೆಲಸ ಮಾಡುವ ಪ್ರೇರಣೆ ಸಿಗುತ್ತದೆ. ಕೇವಲ ರಾಮರಕ್ಷಾವನ್ನು ಹೇಳುವಾಗ, ಭಕ್ತಿ ಮಾಡುವಾಗ ಹೋಲಿಕೆ ಮಾಡಬಾರದು. ಏಕೆಂದರೆ ಹೋಲಿಕೆ ಆದರೆ ತೃಪ್ತಿ ಹೋಯಿತು. ತೃಪ್ತಿ ಮತ್ತು ಪುರುಷಾರ್ಥ ಈ ಇಬ್ಬರ ಸಂಬಂಧ ನಿರಂತರವಾಗಿ ಪರಸ್ಪರ ಪೂರಕವಾಗಿ ಇರುತ್ತದೆ, ಸೀತೆ ಇಲ್ಲದೆ ರಾಮ ಮತ್ತು ರಾಮ ಇಲ್ಲದೆ ಸೀತೆ ಇರುವುದು ಸಾಧ್ಯವಿಲ್ಲ. ರಾಮರಕ್ಷಾ ಸ್ತೋತ್ರಮಂತ್ರದಲ್ಲಿ ಈ 'ಸೀತೆ' ಅಂದರೆ ತೃಪ್ತಿ ಕಾರ್ಯನಿರ್ವಹಿಸುತ್ತಾಳೆ, ಆದರೆ 'ರಾಮ' ಅಂದರೆ ಪುರುಷಾರ್ಥ – ಶಕ್ತಿ, ಓಜ.
ಸದ್ಗುರು ಅನಿರುದ್ಧರು ಹೇಳುತ್ತಾರೆ, ಆಯುರ್ವೇದದ ಪ್ರಕಾರ ಸೀತೆ ಶಾಂತ-ಸ್ನಿಗ್ಧತೆ ಅಂದರೆ ತೃಪ್ತಿ, ಮತ್ತು ರಾಮ ಉಷ್ಣ-ಸ್ನಿಗ್ಧತೆ ಅಂದರೆ ಪುರುಷಾರ್ಥ (ಅಂದರೆ ಶಕ್ತಿ) ಇವುಗಳ ಸಂಕೇತ.
ರಾಮನಾಮ ಅಂದರೆ ಓಜವನ್ನು ಹುಟ್ಟಿಸುವ ಶಕ್ತಿ, ಓಜವನ್ನು ಕೊಡುವ ಶಕ್ತಿ. ಓಜದ ಮೂಲ ಶಕ್ತಿ ರಾಮ. ಓಜವಿಲ್ಲದೆ ತೃಪ್ತಿ ಇಲ್ಲ ಮತ್ತು ತೃಪ್ತಿಯಿಲ್ಲದೆ ಓಜವಿಲ್ಲ. ರಾಮರಕ್ಷಾ ಸ್ತೋತ್ರಮಂತ್ರದ ಪಠಣದಿಂದಲೇ ಈ ಎರಡೂ ವಿಷಯಗಳು ನನಗೆ ಸಿಗಬಹುದು.
೯. ರಾಮರಕ್ಷಾ ಸ್ತೋತ್ರದ ನಿರ್ಮಾಣ - ಬುಧಕೌಶಿಕ ಋಷಿ
ರಾಮನನ್ನು ಪಡೆಯಬೇಕಾದರೆ ಮೊದಲು ತೃಪ್ತಿ – ಅಂದರೆ ಸೀತೆ ಅಗತ್ಯ ಎಂದು ಬಾಪೂ
ಅವರು ಸ್ಪಷ್ಟಪಡಿಸುತ್ತಾರೆ. ರಾಮರಕ್ಷಾ ಸ್ತೋತ್ರ ತೃಪ್ತಿ ಮತ್ತು ಪುರುಷಾರ್ಥ, ಎರಡನ್ನೂ ಜಾಗೃತಗೊಳಿಸುತ್ತದೆ. ಮತ್ತು ಈ ಸ್ತೋತ್ರವನ್ನು ಬುಧಕೌಶಿಕ ಋಷಿ ಅತ್ಯಂತ ತೃಪ್ತ ಸ್ಥಿತಿಯಲ್ಲಿ, ಎಲ್ಲಾ ಜೀವಿಗಳ ಕಲ್ಯಾಣಕ್ಕಾಗಿ ಬರೆದರು. ಬುಧಕೌಶಿಕ ಋಷಿ ಸಂಪೂರ್ಣವಾಗಿ ತೃಪ್ತರಾಗಿದ್ದರು ಮತ್ತು ಈ ತೃಪ್ತಿಯಿಂದಲೇ ಅವರಿಗೆ ಇಡೀ ವಿಶ್ವಕ್ಕಾಗಿ ಪುರುಷಾರ್ಥ ಮಾಡಬೇಕೆಂಬ ಇಚ್ಛೆ ಆಯಿತು ಮತ್ತು ರಾಮರಕ್ಷಾ ಈ ಸ್ತೋತ್ರಮಂತ್ರ ಹುಟ್ಟಿಕೊಂಡಿತು. ಆದ್ದರಿಂದ ಅದರಿಂದ ಸಿಗುವ ತೃಪ್ತಿ ಮತ್ತು ಪುರುಷಾರ್ಥ ಇವುಗಳು ಅತುಲನೀಯವಾಗಿವೆ.
