ಈ ಅನಿರುದ್ಧ ನನ್ನ ಮಾರ್ಗದರ್ಶಕ! - ವಿಶಾಲಸಿಂಹ ಬಾಹೆಕರ್, ಬೊರಿವಲಿ

 

ಈ ಅನಿರುದ್ಧ ನನ್ನ ಮಾರ್ಗದರ್ಶಕ! - ವಿಶಾಲಸಿಂಹ ಬಾಹೆಕರ್, ಬೊರಿವಲಿ
ಈ ಅನಿರುದ್ಧ ನನ್ನ ಮಾರ್ಗದರ್ಶಕ! - ವಿಶಾಲಸಿಂಹ ಬಾಹೆಕರ್, ಬೊರಿವಲಿ

ನಾನು ವಿಶಾಲಸಿಂಗ್ ಬಾಹೇಕರ್, ಬೊರಿವಲಿ (ಪ.) ಉಪಾಸನಾ ಕೇಂದ್ರದಿಂದ. ನಾನು ‘ಕ್ಯಾಪ್ಜೆಮಿನಿ ಇಂಡಿಯಾ ಪ್ರೈವೇಟ್ ಲಿಮಿಟೆಡ್’ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸನ್ 2001ರಿಂದ ನಾನು ಬಾಪುಜಿಯೊಂದಿಗೆ ಸಂಪರ್ಕ ಹೊಂದಿದ್ದೇನೆ. ನಾನು ಬಾಪುಜಿಯೊಂದಿಗೆ ಹೇಗೆ ಸಂಪರ್ಕ ಹೊಂದಿದೆನು ಎಂಬ ಅನುಭವವನ್ನು ಇಂದು ಸಂಕ್ಷಿಪ್ತವಾಗಿ ಎಲ್ಲರಿಗೂ ಹೇಳಲು ಬಯಸುತ್ತೇನೆ.


2001ರಲ್ಲಿ ನಾನು ಎಂಜಿನಿಯರಿಂಗ‌ನ ಅಂತಿಮ ವರ್ಷದಲ್ಲಿ ಇದ್ದೆ. ಪ್ರಾರಂಭದಿಂದಲೂ ನಾನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗುತ್ತಿದ್ದೆ ಮತ್ತು ನನಗೆ ಎಂದಿಗೂ ‘ಕೆ.ಟಿ.’ (ಅಂದರೆ ಒಂದು ವಿಷಯದಲ್ಲಿ ಅನುತ್ತೀರ್ಣನಾದಾಗ ಅದರ ಮರುಪರೀಕ್ಷೆ ಬರೆಯುವದು) ಬಂದಿರಲಿಲ್ಲ. ನನ್ನ ಫಲಿತಾಂಶ ಸದಾ ಉತ್ತಮವಾಗಿಯೇ ಬರುತ್ತಿತ್ತು.. ನನ್ನ ಕಾಲೇಜು ವಿಲೇಪಾರ್ಲೆಯ ಪ್ರಸಿದ್ಧ ‘ಡಿ.ಜೆ. ಸಂಘವಿ ಕಾಲೇಜು’ ಆಗಿದ್ದರಿಂದ ಕ್ಯಾಂಪಸ್ ಇಂಟರ್ವ್ಯೂ ಮೂಲಕ ನನಗೆ ಸುಲಭವಾಗಿ ಉದ್ಯೋಗ ಸಿಗುತ್ತದೆ ಎಂದುಕೊಂಡಿದ್ದೆ. ಆದರೆ ಪ್ರತಿ ಬಾರಿ ಪರೀಕ್ಷೆ ಬರೆದು ಕೊನೆಯ ಹಂತದವರೆಗೆ ತಲುಪಿದರೂ ನನ್ನ ಆಯ್ಕೆ ಆಗುತ್ತಿರಲಿಲ್ಲ. ನನ್ನ ಎಲ್ಲಾ ಸ್ನೇಹಿತರಿಗೂ ಎಲ್.&.ಟಿ., ಸಿ.ಎಂ.ಸಿ. ಮುಂತಾದ ದೊಡ್ಡ ಕಂಪನಿಗಳಲ್ಲಿ ಉದ್ಯೋಗಗಳು ದೊರಕಿದವು, ಆದರೆ ನನಗೆ ಮಾತ್ರ ಕೊನೆಯ ಹಂತದಲ್ಲಿ ಕೈತಪ್ಪುತ್ತಿತ್ತು.


ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಹುಟ್ಟತೊಡಗಿದವು – ಪ್ರಥಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದರೂ ನನ್ನೊಂದಿಗೆ ಈ ರೀತಿ ಏಕೆ ಆಗುತ್ತಿದೆ? ಇದರಿಂದ ಮನಸ್ಸಿನಲ್ಲಿ ನಿರಾಶೆ ಹೆಚ್ಚುತ್ತಿತ್ತು. ನನ್ನ ಸ್ನೇಹಿತರು ಧೈರ್ಯ ನೀಡಲು ಪ್ರಯತ್ನಿಸುತ್ತಿದ್ದರು ಆದರೆ ನನ್ನ ನಿರಾಶೆ ಹೆಚ್ಚುತ್ತಲೇ ಹೋಯಿತು. ಕೊನೆಗೆ 2001ರ ಜೂನ್ 2ರಂದು ಕೊನೆಯ ಇಂಟರ್ವ್ಯೂ ಮುಗಿಯಿತು. ಅದು ಶನಿವಾರದ ದಿನವಾಗಿತ್ತು ಮತ್ತು ಆ ದಿನವೇ ನಾನು ಮೊದಲ ಬಾರಿಗೆ ಬಾಪುಜಿಯ ಉಪಾಸನಾ ಕೇಂದ್ರಕ್ಕೆ ಹೋದೆ. ಅಲ್ಲಿಯ ಭಕ್ತಿಭಾವದ ವಾತಾವರಣ ನನಗೆ ತುಂಬಾ ಇಷ್ಟವಾಯಿತು. ನಿಧಾನವಾಗಿ ಆಸಕ್ತಿ ಮೂಡಿತು ಮತ್ತು ಆ ಸಮಯದಲ್ಲಿ ನನ್ನ ಬಳಿ ಕೆಲಸ ಇರಲಿಲ್ಲವಾದ್ದರಿಂದ ಉಪಾಸನಾ ಕೇಂದ್ರದ ಕಾರ್ಯಗಳಲ್ಲಿ ಪಾಲ್ಗೊಳ್ಳತೊಡಗಿದೆ.


ನಿಧಾನವಾಗಿ ನನಗೆ ಬಾಪುಜಿಯ ಬಗ್ಗೆ ಇನ್ನಷ್ಟು ಮಾಹಿತಿ ದೊರಕಿತು. ದಿನಗಳು ಸಾಗುತ್ತಿದ್ದವು, ಹಲವಾರು ಕಂಪನಿಗಳಲ್ಲಿ ಇಂಟರ್ವ್ಯೂ ಕೊಟ್ಟೆ ಆದರೆ ಎಲ್ಲಿಂದಲೂ ಪ್ರತಿಕ್ರಿಯೆ ಬರಲಿಲ್ಲ. ಬಾಪುಭಕ್ತ ಪ್ರಸಾದ್ ಸಿಂಗ್ ಚೌಬಲ್ ನನ್ನ ಸಹಪಾಠಿಗಳಲ್ಲಿ ಒಬ್ಬರು. ಅವರ ತಾಯಿ ಹೇಳಿದರು, “ನೀನು ನಿನ್ನ ಸಮಸ್ಯೆಯನ್ನು ಬರೆದು ಕೊಡು. ನಾವು ಅದನ್ನು ಸುಚಿತದಾದಾ ಅವರಿಗೆ ಕಳುಹಿಸುತ್ತೇವೆ. ನಿನಗೆ ಸರಿಯಾದ ಉತ್ತರ ಸಿಗುತ್ತದೆ.” ಆ ಸಮಯದಲ್ಲಿ ವೈಯಕ್ತಿಕ ಪ್ರಶ್ನೆಗಳನ್ನೂ ಸ್ವೀಕರಿಸುತ್ತಿದ್ದರು. ನಾನು ಸಹ ನನ್ನ ಉದ್ಯೋಗದ ಕುರಿತು ಸಮಸ್ಯೆಯನ್ನು ಬರೆದು ಕೊಟ್ಟೆ.


ನಾನು ಮೂರು ಪ್ರಶ್ನೆಗಳು ಬರೆದಿದ್ದೆ –


ನಾನು ಎಂ.ಇ. ಮಾಡಬಹುದೇ? (ಏಕೆಂದರೆ ಜನವರಿಯಲ್ಲಿ ‘ಗೇಟ್’ ಪರೀಕ್ಷೆ ಇತ್ತು.)


ಗೇಟ್ ಬರೆದು ಎಂ.ಇ. ಮಾಡಲೋ ಅಥವಾ ಎಂ.ಬಿ.ಎ. ಮಾಡಲೋ?


ಅಥವಾ ಇನ್ನೂ ಉದ್ಯೋಗ ಹುಡುಕುತ್ತಿರಲೋ?


2002ರ ಫೆಬ್ರವರಿ 22ರಂದು ಉತ್ತರ ಬಂತು – “ಉದ್ಯೋಗ ಹುಡುಕುತ್ತಿರು.” ನನಗೆ ಹೀಗಾಗುತ್ತದೆ ಎಂದುಕೊಂಡಿದ್ದೆ – “ಮುಂದೆ ವಿದ್ಯಾಭ್ಯಾಸ ಮುಂದುವರೆಸು.” ಆದರೆ ಹೇಳಿದಂತೆ ನಾನು ಉದ್ಯೋಗ ಹುಡುಕತೊಡಗಿದೆ. ಕೆಲವೇ ದಿನಗಳಲ್ಲಿ, ಮಾರ್ಚ್ 15ರಂದು ನನಗೆ ಉದ್ಯೋಗ ಸಿಕ್ಕಿತು. ‘ಟೈಮ್ಸ್ ಆಫ್ ಇಂಡಿಯಾ’ಯಲ್ಲಿ ಪ್ರಕಟವಾದ ಜಾಹೀರಾತಿನಿಂದ ಅರ್ಜಿ ಹಾಕಿದ್ದೆ ಮತ್ತು ಆಯ್ಕೆ ಆಯಿತು.


ಅಷ್ಟೇ ಅಲ್ಲ, ಕೆಲವೇ ದಿನಗಳಲ್ಲಿ ಬಾಪುಜಿಯ ಕೃಪೆಯಿಂದ ನನಗೆ ಸ್ಪಷ್ಟವಾಯಿತು – “ಉದ್ಯೋಗ ಹುಡುಕುತ್ತಿರು” ಎಂಬ ಉತ್ತರ ಏಕೆ ಬಂದಿತೆಂದು. ನನಗಿಂತ ಮೊದಲು ಕ್ಯಾಂಪಸ್ ಇಂಟರ್ವ್ಯೂ ಮೂಲಕ ಆಯ್ಕೆಯಾದ ಎಲ್ಲಾ ಸ್ನೇಹಿತರಿಗೂ ಪೋಸ್ಟಿಂಗ್ ಮುಂಬೈ ಹೊರಗೆ ಆಯಿತು. ಆದರೆ ನನಗೆ ಮಾತ್ರ ಮುಂಬೈನಲ್ಲೇ ಉದ್ಯೋಗ ಸಿಕ್ಕಿತು!


ಸದ್ಗುರು ಕೆಲವೊಂದು ವಿಷಯಗಳನ್ನು ತಡವಾಗಿ ನೀಡುತ್ತಾರೆ, ಆದರೆ ಆ ತಡದ ಹಿಂದೆ ದೊಡ್ಡ ಉದ್ದೇಶವಿರುತ್ತದೆ. ಅದು ಅವರ ಅಕಾರಣ ಕರುಣೆ ಆಗಿರುತ್ತದೆ. ನನಗೆ ಎಂಟು ತಿಂಗಳ ನಂತರ ಅರ್ಥವಾಯಿತು. ಎಂಟು ತಿಂಗಳ ಬಳಿಕ ನನಗೆ ಮೊದಲ ಉದ್ಯೋಗ ಸಿಕ್ಕಿತು ಮತ್ತು ನಂತರ ಹಿಂತಿರುಗಿ ನೋಡುವ ಸಂದರ್ಭ ಬರಲಿಲ್ಲ. ನಂತರ ಹಲವು ಉದ್ಯೋಗಗಳು ಸಿಗುತ್ತಲೇ ಹೋಯಿತು.


ಬಾಪುಜಿ ಪ್ರತಿಯೊಬ್ಬರಿಗೂ ಏನಾದರೂ ಮಾಡುತ್ತಾರೆ, ಆದರೆ ಅದು ಹಲವಾರು ಬಾರಿ ನಮ್ಮ ಆಲೋಚನೆಗೂ ಮೀರಿರುತ್ತದೆ. ನಾವು ಊಹಿಸದೇ ಇರುವ ಉತ್ತಮ ಘಟನೆಗಳು ನಡೆಯುತ್ತವೆ. ಇದು ಪ್ರತಿಯೊಬ್ಬ ಭಕ್ತನ ಮೇಲಿರುವ ಅವರ ಅಕಾರಣ ಕರುಣೆ. ಈ ಅನುಭವದಿಂದ ನನ್ನ ಬಾಪುಜಿಯ ಮೇಲಿನ ನಂಬಿಕೆ ಇನ್ನಷ್ಟು ಗಟ್ಟಿ ಅಯಿತು ಮತ್ತು ನಾನು ಬಾಪುಜಿಯ ಕಾರ್ಯದಲ್ಲಿ ಹೆಚ್ಚು ಸಕ್ರಿಯನಾದೆ. ಇದೇ 2001ರ ನನ್ನ ಮೊದಲ ಅನುಭವ.


ಇನ್ನು ನನ್ನ ಎರಡನೇ ಅನುಭವ ಹೇಳುತ್ತೇನೆ.


ನಾಗಪುರದಲ್ಲಿ ನಮ್ಮ ಒಂದು ‘ರೋ ಹೌಸ್’ ಇದೆ. ನನ್ನ ತಂದೆ ಮತ್ತು ತಮ್ಮನ ಕುಟುಂಬ ಅಲ್ಲಿ ವಾಸಿಸುತ್ತಾರೆ. ತಂದೆ ಬ್ಯಾಂಕ್ ಕೆಲಸದ ನಿಮಿತ್ತ ವರ್ಷದಲ್ಲಿ ಒಂದೆರಡು ಸಲ ಮುಂಬೈಗೆ ಬರುತ್ತಿದ್ದರು. ಹಾಗೆಯೇ ಅವರು ಕಳೆದ ತಿಂಗಳು ತಮ್ಮನೊಂದಿಗೆ ಮುಂಬೈಗೆ ಬಂದಿದ್ದರು. ಆ ಸಮಯದಲ್ಲಿ ನನ್ನ ಭಾಭಿ ತವರಿಗೆ ಹೋಗಿದ್ದರು. ಹೀಗಾಗಿ ನಾಗಪುರದ ಮನೆ ಮುಚ್ಚಿದ್ದೇ ಇತ್ತು.


ಜುಲೈ 14ರಂದು ನಾಗಪುರದಲ್ಲಿ ಭಾರೀ ಮಳೆ ಬರುತ್ತಿತ್ತು. ಆ ವೇಳೆಗೆ ನಮ್ಮ ಮನೆಯಲ್ಲಿ ಕಳ್ಳರು ನುಗ್ಗಿದರು ಮತ್ತು ಮನೆಯ ಮುಖ್ಯ ಬಾಗಿಲು ಹಾಗೂ ಹಿಂಬಾಗಿಲನ್ನು ಒಡೆದರು. ರೋ ಹೌಸ್ ಎರಡು ಅಂತಸ್ತಿನದು. ಕಳ್ಳರು ಎರಡೂ

ಮಹಡಿಗಳನ್ನು ತೆರೆದು ಎಲ್ಲಾ ಸಾಮಾನುಗಳನ್ನು ಚಲ್ಲಾಪಿಲ್ಲಿ ಮಾಡಿದ್ದರು ಮತ್ತು ಬೆಲೆಬಾಳುವ ವಸ್ತುಗಳನ್ನು ಹಾಗೂ ಹಣವನ್ನು ಒಂದು ಚೀಲದಲ್ಲಿ ತುಂಬಿಕೊಂಡರು... ಆದರೆ...!

ಒಂದು ಅಪಾರ್ಟ್‌ಮೆಂಟ್ ನಲ್ಲಿ ಕಳ್ಳತನವಾದರೆ ತಕ್ಷಣ ನೆರೆಹೊರೆಯವರಿಗೆ ತಿಳಿಯುತ್ತಿತ್ತು. ಆದರೆ ರೋ ಹೌಸ್ ಆಗಿರುವುದರಿಂದ ತಕ್ಷಣ ಯಾರಿಗೂ ತಿಳಿಯುವುದು ಸಾಧ್ಯತೆ ಇಲ್ಲ. ಇಲ್ಲಿ ಸಹ ಬಾಪುಜಿಯೇ ಸಹಾಯಮಾಡಿದರು. ಎದುರಿನ ಮನೆಯ ಮೇಲ್ಛಾವಣಿಯಿಂದ ನಮ್ಮ ಮನೆ ತೆರೆದಿರುವುದನ್ನು ನೆರೆಹೊರೆಯವರು ನೋಡಿದರು. ಅವರಿಗೆ ಅನುಮಾನ ಬಂತು ಮತ್ತು ತಮ್ಮನಿಗೆ ಫೋನ್ ಮಾಡಿದರು. ತಮ್ಮನು ಮುಂಬೈಯಲ್ಲಿರುವುದನ್ನು ತಿಳಿದ ನಂತರ ಅವರು ಶಂಕೆ ವ್ಯಕ್ತಪಡಿಸಿದರು – ಮನೆಯಲ್ಲಿ ಕಳ್ಳತನವಾಗಿರಬಹುದು ಎಂದು. ತಕ್ಷಣ ತಮ್ಮನು ಭಾಭಿಗೆ ಫೋನ್ ಮಾಡಿದರು. ಅವರು ತಕ್ಷಣ ಮನೆಗೆ ತೆರಳಿ ನೋಡಿದಾಗ – ಎಲ್ಲಾ ಸಾಮಾನುಗಳು ಅಸ್ತವ್ಯಸ್ತವಾಗಿತ್ತು!

ಆದರೆ... ಕಳ್ಳರು ಕದ್ದ ಎಲ್ಲಾ ಬೆಲೆಬಾಳುವ ವಸ್ತುಗಳು – ಹಣ, ಆಭರಣ ಮತ್ತು ಇತರ ಸಾಮಾನುಗಳು ಹಾಲ್ ನ ಸೋಫಾದ ಮೇಲೆಯೇ ಬಿದ್ದಿದ್ದವು! ನಿಜವಾಗಿ ಏನಾಯಿತು ಎಂದರೆ ತಮ್ಮನ ಮಗಳ ಆಟಿಕೆಗಳು ಒಂದು ಚೀಲದಲ್ಲಿ ಅದೇ ಸೋಫಾದ ಮೇಲೆ ಇಡಲಾಗಿತ್ತು. ಕಳ್ಳರು ಕದ್ದಿದ್ದ ವಸ್ತುಗಳನ್ನು ಒಂದು ಚೀಲದಲ್ಲಿ ತುಂಬಿ ಸೋಫಾದ ಮೇಲೆ ಇಟ್ಟು, ಓಡುವಾಗ ಗಡಿಬಿಡಿಯಲ್ಲಿ ತಪ್ಪಾಗಿ ಆಟಿಕೆಗಳ ಚೀಲವನ್ನೇ ಎತ್ತಿಕೊಂಡು ಓಡಿಬಿಟ್ಟರು.

ಇದು ಬಾಪುಜಿಯ ಲೀಲೆಯೇ ಎಂದು ನಾನು ನಂಬುತ್ತೇನೆ. ಮನೆಗೆ ಕಳ್ಳರು ನುಗ್ಗಿದರೂ ನಮ್ಮ ಯಾವುದೇ ನಷ್ಟವಾಗಲು ಬಾಪುಜಿ ಬಿಡಲಿಲ್ಲ. ನಮ್ಮ ಮನೆಯನ್ನು ಬಾಪುಜಿಯೇ ರಕ್ಷಿಸಿದ್ದಾರೆ ಎಂದು ನಾವು ನಂಬುತ್ತೇವೆ.

ಮುಂಬೈ ಎಲ್ಲಿ ಮತ್ತು ನಾಗಪುರ ಎಲ್ಲಿ – ಎರಡೂ ಸ್ಥಳಗಳ ನಡುವೆ ನೂರಾರು ಮೈಲಿಗಳ ಅಂತರ. ಆದರೆ ಸದ್ಗುರುತತ್ವಕ್ಕೆ ದೂರದ ಏನೂ ಅಡೆತಡೆಯಿಲ್ಲ. ಆದ್ದರಿಂದಲೇ ನಮ್ಮ ಮನೆ ಉಳಿಯಿತು.

ಇದೇ ಬಾಪುಜಿಯ ಕರುಣೆ, ಅದು ಪ್ರತಿಯೊಬ್ಬ ಭಕ್ತನ ಮೇಲೂ ಸದಾ ಸುರಿಯುತ್ತದೆ.

ನಾನು ಬಾಪುಜಿಗೆ ಋಣಿಯಾಗಿದ್ದೇನೆ ಮತ್ತು ಸದಾಕಾಲವೂ ಇರುತ್ತೇನೆ.

॥ ಹರಿ:ಓಂ। ಶ್ರೀರಾಮ। ಅಂಬಜ್ಞ॥