'ಸ್ವಂತ ಆತ್ಮವಿಶ್ವಾಸ ಮತ್ತು ನಮ್ಮ ಸದ್ಗುರುವಿನ ಮೇಲಿನ ಅಚಲ ವಿಶ್ವಾಸ ಈ ಎರಡೂ ವಿಷಯಗಳು ಜೀವನದಲ್ಲಿ ಅವಶ್ಯಕವಾಗಿವೆ'. ಈ ಶ್ರದ್ಧಾವಂತ ಮಹಿಳೆಯ ಈ ಮಾತುಗಳು ಅತ್ಯಂತ ಮುಖ್ಯವಾಗಿವೆ. ಮೂಲತಃ, ಸದ್ಗುರುಗಳ ಮೇಲಿನ ಅಚಲ ವಿಶ್ವಾಸವೇ ನಮ್ಮ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ಈ ಅನುಭವದಿಂದ ತಿಳಿಯುತ್ತದೆ.
============
ಹರಿ ಓಂ. ಸದ್ಗುರು ಅನಿರುದ್ಧ ಬಾಪು ಅವರ ಕೃಪಾ ಛಾಯೆ ನನ್ನ ಸಂಪೂರ್ಣ ಕುಟುಂಬದ ಮೇಲೆ ನಿರಂತರವಾಗಿರುವುದು ನಮ್ಮ ಪರಮ ಭಾಗ್ಯ ಎಂದು ನಾನು ಭಾವಿಸುತ್ತೇನೆ. ನನ್ನ ಪತಿ ವಿರಾಜಸಿಂಗ್ ತ್ರಾಸಿ, ಮಗ ಗೌರವಸಿಂಗ್ ತ್ರಾಸಿ ಮತ್ತು ನಾನು ಹಾಂಗ್ ಕಾಂಗ್‌ನಲ್ಲಿ ವಾಸಿಸುತ್ತೇವೆ. ಹಾಂಗ್ ಕಾಂಗ್‌ನಲ್ಲಿ ನಾವು ಇಪ್ಪತ್ತು ವರ್ಷಗಳಿಂದ ನೆಲೆಸಿದ್ದೇವೆ (ಅಂದರೆ ಈ ಅನುಭವವನ್ನು ಹೇಳುವಾಗ). ಬಾಪು ಅವರ ಬಳಿ ಬಂದಾಗಿನಿಂದ ನನಗೆ ಅನೇಕ ಅನುಭವಗಳಾಗಿವೆ. ಬಾಪು ಅವರ ಅತಿ ದೊಡ್ಡ ಕೃಪೆ ಏನೆಂದರೆ, ಅವರು ನಮ್ಮ ಬಳಿಗೆ ಯಾವುದೇ ದೊಡ್ಡ ಸಂಕಟವನ್ನು ಎಂದಿಗೂ ಬರಲು ಬಿಟ್ಟಿಲ್ಲ. ಅವರ ಚರಣಗಳಿಗೆ ನಾವು ನಮಸ್ಕರಿಸುತ್ತೇವೆ ಮತ್ತು ಅಂಬಜ್ಞರಾಗಿದ್ದೇವೆ. ಶ್ರೀರಾಮ್.
ಪ್ರತಿಯೊಬ್ಬರ ಜೀವನದಲ್ಲಿ ಅನೇಕ ಸಂಕಟಗಳು ಬರುತ್ತವೆ. ನನ್ನ ಜೀವನದಲ್ಲೂ ಅಂತಹ ಅನೇಕ ಏರಿಳಿತಗಳು ಬಂದವು. ಪ್ರತಿ ಬಾರಿ ಬಾಪು ಜೊತೆಗಿದ್ದರಿಂದ ನಾವು ನಿಶ್ಚಿ೦ತೆ ಇದ್ದೆವು.
2007 ರಲ್ಲಿ ನಾವು ಹಾಂಗ್ ಕಾಂಗ್‌ನಲ್ಲಿಯೇ ನನ್ನ ಪತಿಯ ಐವತ್ತನೇ ಹುಟ್ಟುಹಬ್ಬವನ್ನು ಆಚರಿಸಿದೆವು. ಆ ದಿನ ನಾವು ಪ್ರೀತಿಯಿಂದ ಬಾಪು ಅವರ ಪಾದುಕೆಗಳನ್ನು ಪೂಜಿಸಿದೆವು. ಇದರ ತಕ್ಷಣವೇ ನಮ್ಮ ಮನೆಯಲ್ಲಿ ಒಂದು ಭಯಾನಕ ಅಪಘಾತ ಸಂಭವಿಸಿತು. ನನ್ನ ಅತ್ತೆಗೆ ಒಂದು ದಿನ ಬೆಳಿಗ್ಗೆ 11 ಗಂಟೆಗೆ ವಿಪರೀತ ಹಸಿವಾಯಿತು. ಚಳಿಗಾಲವಾಗಿದ್ದರಿಂದ ನಾನು ಅತ್ತೆಗೆ, "ನಾವು ಬಿಸಿಬಿಸಿ ಸಮೋಸ ತಿನ್ನೋಣ" ಎಂದು ಹೇಳಿದೆ. ನಾನು ತಕ್ಷಣ ಅಡುಗೆ ಮನೆಗೆ ಹೋಗಿ ಸಮೋಸ ತಯಾರಿಸಲು ಗ್ಯಾಸ್ ಹಚ್ಚಿದೆ ಮತ್ತು ಒಂದು ಚಿಕ್ಕ ಕಡಾಯಿಯಲ್ಲಿ ಎಣ್ಣೆ ಹಾಕಿ ಅದನ್ನು ಕಡಿಮೆ ಉರಿಯಲ್ಲಿ ಇಟ್ಟೆ. ಇದ್ದಕ್ಕಿದ್ದಂತೆ ನನಗೆ ಫೋನ್ ರಿಂಗ್ ಕೇಳಿಸಿತು. ಹೋಗಿ ನೋಡಿದರೆ, ಅದು ಒಂದು ತಪ್ಪು ಫ್ಯಾಕ್ಸ್ ಬಂದಿತ್ತು. ನನಗೆ ಫ್ಯಾಕ್ಸ್ ಯಂತ್ರದ ಬಗ್ಗೆ ಮಾಹಿತಿ ಇಲ್ಲದ ಕಾರಣ, ತಪ್ಪಾಗಿ ನಾನು ಒಂದು ಬಟನ್ ಒತ್ತಿದೆ, ಅದರಿಂದ ಫ್ಯಾಕ್ಸ್ ಯಂತ್ರದಿಂದ ಒಂದರ ನಂತರ ಒಂದು ಕಾಗದ ಹೊರಬರಲು ಪ್ರಾರಂಭಿಸಿತು. ನಾನು ಅದನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಾನು ಮೂಲತಃ ಹೆದರುವ ಸ್ವಭಾವದವಳಾದ್ದರಿಂದ ನಾನು ತುಂಬಾ ಭಯಭೀತಳಾದೆ.
ಈ ಗಡಿಬಿಡಿಯಲ್ಲಿ ನಾನು ಗ್ಯಾಸ್ ಹಚ್ಚಿರುವುದನ್ನು ಮರೆತೇಬಿಟ್ಟಿದ್ದೆ. ಇದ್ದಕ್ಕಿದ್ದಂತೆ ಸ್ವಲ್ಪ ಸಮಯದ ನಂತರ ನನಗೆ ಏನೋ ಬಿದ್ದ ಶಬ್ದಗಳು ಕೇಳಿಸತೊಡಗಿದವು. ನಾನು ಕಿಟಕಿಗಳು ತೆರೆದಿದ್ದರಿಂದ ಬಹುಶಃ ಏನಾದರೂ ಕೆಳಗೆ ಬಿದ್ದಿರಬಹುದು ಎಂದು ಯೋಚಿಸಿದೆ. ನಾವು ಮಲಗುವ ಕೋಣೆಯಲ್ಲಿದ್ದೆವು. ನಾನು ಮಲಗುವ ಕೋಣೆಯಿಂದ ಕಿಟಕಿಗಳನ್ನು ಮುಚ್ಚಲು ಹೊರಗೆ ಬಂದಾಗ, ನನಗೆ ಅಡುಗೆಮನೆಯಿಂದ ಹೊಗೆ ಬರುತ್ತಿರುವುದು ಕಾಣಿಸಿತು. ನನ್ನ ಅಡುಗೆಮನೆಯ ಬಾಗಿಲು ಮುಚ್ಚಿತ್ತು. ಬಾಗಿಲು ತೆರೆಯುತ್ತಿದ್ದಂತೆ ಒಳಗಿನ ಭಯಾನಕ ದೃಶ್ಯವನ್ನು ನೋಡಿದಾಗ, ನನಗೆ ಕಡಾಯಿ ಗ್ಯಾಸ್ ಮೇಲೆ ಇಟ್ಟಿರುವುದು ನೆನಪಾಯಿತು. ನಾನು ಈ ಹಿಂದೆ ಇಂತಹ ದೊಡ್ಡ ಬೆಂಕಿಯನ್ನು ಎಂದಿಗೂ ನೋಡಿರಲಿಲ್ಲ. ನನ್ನ ಇಡೀ ಅಡುಗೆಮನೆ ಹೊಗೆ ಮತ್ತು ಬೆಂಕಿಯಿಂದ ತುಂಬಿತ್ತು. ಬರುತ್ತಿದ್ದ ಶಬ್ದ ಸೀಲಿಂಗ್‌ನಲ್ಲಿದ್ದ ಟ್ಯೂಬ್‌ಲೈಟ್ ಮತ್ತು ಬಲ್ಬ್‌ಗಳ ಒಡೆಯುವ ಶಬ್ದವಾಗಿತ್ತು. ಅವು ಒಡೆದು ಕೆಳಗೆ ಬೀಳುತ್ತಿದ್ದವು ಮತ್ತು ಗ್ಯಾಸ್ ರೇಂಜ್ ಮೇಲಿದ್ದ ಚಿಮಣಿಯ ತುಂಡುಗಳೂ ಸಹ ಸುಟ್ಟು ಕೆಳಗೆ ಬೀಳುತ್ತಿದ್ದವು.
ನಾನು ತುಂಬಾ ಹೆದರಿದ್ದೆ ಮತ್ತು ಬಾಪುಗೆ, 'ಬಾಪು, ನೀವೇ ಎಲ್ಲವನ್ನೂ ಸರಿಪಡಿಸಿ' ಎಂದು ಹೇಳಿದೆ. ಆಗ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ನನ್ನಲ್ಲಿ ಬಂದಿತ್ತು, ನಾನು ಹಿಂದಿನ ಮುಂದಿನ ಯೋಚಿಸದೆ ಅಡುಗೆಮನೆಗೆ ನುಗ್ಗಿ ಗ್ಯಾಸ್ ಬಂದ್ ಮಾಡಿ ಹೊರಗೆ ಬಂದೆ. ಎಲೆಕ್ಟ್ರಿಕಲ್ ಬಾಕ್ಸ್ ನಮ್ಮ ಅಡುಗೆಮನೆಯಲ್ಲಿಯೇ ಇರುತ್ತದೆ. ಅದನ್ನು ಬಂದ್ ಮಾಡುವ ಧೈರ್ಯ ನನಗೆ ಆಗಲಿಲ್ಲ ಏಕೆಂದರೆ ಬೆಂಕಿ ಅಷ್ಟು ಹರಡಿತ್ತು, ನನ್ನ ಮುಂದೆ, ಅಡುಗೆಮನೆಯ ಬಾಗಿಲು ಮುಚ್ಚಿ ಹೊರಗೆ ಬರುವ ಹೊರತು ಬೇರೆ ಯಾವ ಆಯ್ಕೆಯೂ ಇರಲಿಲ್ಲ. ಅತ್ತೆ ನನಗೆ ನಿರಂತರವಾಗಿ ಧೈರ್ಯ ತುಂಬುತ್ತಾ ಹೇಳುತ್ತಿದ್ದರು, "ಬಾಪು ನಮ್ಮ ಜೊತೆ ಇದ್ದಾರೆ, ಹಾಗಾಗಿ ಸ್ವಲ್ಪವೂ ಹೆದರಬೇಡ ." ಅದರಿಂದ ನಾನು ಧೈರ್ಯದಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೆ. ನಾನು 999 ಸಂಖ್ಯೆಗೆ ಕರೆ ಮಾಡಿ ಆರನೇ ಮಾಲಿಗೆಯಿಂದ ಕೆಳಗೆ ಮ್ಯಾನೇಜ್‌ಮೆಂಟ್ ಆಫೀಸ್‌ಗೆ ಓಡಿ ಹೋದೆ. ಕೇವಲ 5 ನಿಮಿಷಗಳಲ್ಲಿ ನಮ್ಮಲ್ಲಿ ಪೊಲೀಸ್, ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಮತ್ತು ಆಂಬುಲೆನ್ಸ್ ಹಾಜರಿದ್ದರು. ವಿದೇಶದಲ್ಲಿ ನೆರೆಹೊರೆಯಲ್ಲಿ ಯಾರು ವಾಸಿಸುತ್ತಿದ್ದಾರೆಂಬುದು ಸಹ ತಿಳಿದಿರುವುದಿಲ್ಲ. ಆ ದಿನ ಆಶ್ಚರ್ಯಕರವಾಗಿ, ನಮ್ಮ ನೆರೆಹೊರೆಯವರೂ ಸಹ ನಮಗೆ ಸಹಾಯ ಮಾಡಿದರು. ಇಷ್ಟು ದೊಡ್ಡ ಅಪಘಾತ ಸಂಭವಿಸಿದರೂ ನಮ್ಮೆಲ್ಲರ ಮುಖದಲ್ಲಿ ಒಂದು ವಿಶ್ವಾಸದ ಭಾವವಿತ್ತು ಮತ್ತು ನಮಗೆ ಏನೂ ಆಗಿರಲಿಲ್ಲ. ಇದನ್ನು ನೋಡಿದಾಗ ಎಲ್ಲರೂ ಆಶ್ಚರ್ಯಪಟ್ಟರು.
ನನ್ನ ಪತಿ ಮನೆ ಮಾಲೀಕರಿಗೆ ಫೋನ್ ಮಾಡಿ ಅಪಘಾತದ ಗಂಭೀರತೆಯನ್ನು ತಿಳಿಸಿದರು. ಹಾಂಗ್ ಕಾಂಗ್‌ನಲ್ಲಿ ನಿಯಮಗಳು ಅತ್ಯಂತ ಶಿಸ್ತಿನಿಂದ ಕೂಡಿರುತವೆ ಮತ್ತು ನಮ್ಮ ಮನೆ ಮಾಲೀಕರ ಸ್ವಭಾವವೂ ಅತ್ಯಂತ ಕಠಿಣವಾಗಿತ್ತು. ಇಷ್ಟಾದರೂ, ಯಾವುದೇ ರೀತಿಯಲ್ಲಿ ಹೇಗೆ ಹಾನಿಯಾಗಿದೆ ಎಂದು ನೋಡಲು ಅಥವಾ ಹಣ ತೆಗೆದುಕೊಳ್ಳಲು ಸಹ ಅವರು ಮನೆಗೆ ಬರಲಿಲ್ಲ. ಇದರ ಬದಲಿಗೆ ಅವರು ಹೇಳಿದರು, "ಏನೇ ಇರಲಿ, ಎಲ್ಲಾ ದುರಸ್ತಿ ಕೆಲಸಗಳನ್ನು ನೀವೇ ಮಾಡಿಸಿಕೊಳ್ಳಿ". ದೊಡ್ಡ ಪ್ರಮಾಣದ ಹಾನಿಯಾಗಿದ್ದರೂ ಯಾರಿಗೂ ಏನೂ ಆಗಿರಲಿಲ್ಲ. ಬಾಪು ನಮ್ಮೆಲ್ಲರ ಕಾಳಜಿ ವಹಿಸಿದ್ದರು. ದೊಡ್ಡ ಪ್ರಮಾಣದ ನಷ್ಟವಾಗಿದ್ದರೂ ನಾವು ಎಲ್ಲರೂ ಸುರಕ್ಷಿತರಾಗಿದ್ದೆವು. ಬಾಪು ಅವರ ಅಕಾರಣ ಕರುಣೆಗೆ ಯಾರು ಪಾತ್ರರಾಗುತ್ತಾರೋ, ಅವರ ಜೀವನದಲ್ಲಿ ಸುಖ, ಸಮಾಧಾನ ಮತ್ತು ಆನಂದದ ಚಿಲುಮೆ ಹೇರಳವಾಗಿ ಹರಿಯುತ್ತಲೇ ಇರುತ್ತದೆ.
ಈಗ ನನ್ನ ಎರಡನೇ ಅನುಭವವನ್ನು ಹೇಳುತ್ತೇನೆ. ಸ್ವಂತ ಆತ್ಮವಿಶ್ವಾಸ ಮತ್ತು ನಮ್ಮ ಸದ್ಗುರುಗಳ ಮೇಲೆ ಅಚಲ ವಿಶ್ವಾಸ ಈ ಎರಡೂ ವಿಷಯಗಳು ಜೀವನದಲ್ಲಿ ಅವಶ್ಯಕವಾಗಿವೆ. ಆತ್ಮವಿಶ್ವಾಸವಿದ್ದರೆ ನಮ್ಮ ಜೀವನದ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯುತ್ತವೆ. ಸದ್ಗುರುಗಳ ಮೇಲಿನ ವಿಶ್ವಾಸದಿಂದ ಭಕ್ತನ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತಾ ಹೋಗುತ್ತದೆ. ನನ್ನ ಆತ್ಮವಿಶ್ವಾಸ ಆರಂಭದಲ್ಲಿ ಕಡಿಮೆಯಾಗಿದ್ದರಿಂದ ನನಗೆ ಪ್ರತಿ ಬಾರಿಯೂ ತುಂಬಾ ಭಯವಾಗುತ್ತಿತ್ತು. ಅದರಲ್ಲಿ ನೀರಿನ ಭಯವಂತೂ ಚಿಕ್ಕಂದಿನಿಂದಲೇ ಇತ್ತು. ನಾನು ನೀರಿನಲ್ಲಿ ಮುಳುಗುತ್ತಿದ್ದೇನೆ ಎಂಬಂತಹ ಅನೇಕ ಕನಸುಗಳು ನನಗೆ ಯಾವಾಗಲೂ ಬೀಳುತ್ತಿದ್ದವು.
ನಮ್ಮ ಹಾಂಗ್ ಕಾಂಗ್‌ನ ಉಪಾಸನಾ ಕೇಂದ್ರದ ಒಂದು ಕುಟುಂಬವು ಬಾಪು ಅವರ ಪಾದುಕೆಗಳ ಪೂಜೆಯನ್ನು ಬೋಟಿನಲ್ಲಿ ಆಯೋಜಿಸಿದ್ದರು. ಇದು ಆನಂದದ ಸಮಾರಂಭವಾಗಿತ್ತು, ಆದರೆ ನನಗೆ ಮಾತ್ರ ಭಯವಾಗುತ್ತಿತ್ತು. ಇದಕ್ಕೆ ಕಾರಣವೆಂದರೆ, ಮೊದಲು ಇದಕ್ಕಾಗಿ ಬೋಟಿನಲ್ಲಿ ಹೋಗಬೇಕಾಗಿತ್ತು. ಇಷ್ಟೇ ಅಲ್ಲದೆ, 100 ಅಡಿ ಎತ್ತರಕ್ಕೆ ನಾವು ನಡೆಯಬೇಕಾಗಿತ್ತು. ನನ್ನ ಪತಿ ಹಡಗಿನಲ್ಲಿಯೇ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಯಾವುದೇ ವ್ಯತ್ಯಾಸವಿರಲಿಲ್ಲ ಮತ್ತು ಮಗನು ಬೋಟಿನಲ್ಲಿ, ಅದೂ ಇಷ್ಟು ಎತ್ತರದಲ್ಲಿ ಹೋಗುವುದರಿಂದ ತುಂಬಾ ಉತ್ಸಾಹದಲ್ಲಿದ್ದನು. ಆದರೆ ನನ್ನಂತೂ ಭಯದಿಂದ ತತ್ತರಿಸಿ ಹೋಗಿದ್ದೆ. ನನ್ನ ಮನಸ್ಸಿನಲ್ಲಿ ಈ ವಿಚಾರವೂ ಬಂದು ಹೋಯಿತು, ಇವರಿಗೆ ಪೂಜೆಗಾಗಿ ಬೇರೆ ಜಾಗ ಸಿಗಲಿಲ್ಲವೇ? ನಾನು ಮನಸ್ಸಿನಲ್ಲೇ ಬಾಪುಗೆ ಹಾಗೆ ಹೇಳಿದೆ, 'ಬಾಪು, ಇಷ್ಟು ಎತ್ತರದಲ್ಲಿ, ಅದೂ ನೀರಿನಲ್ಲಿ ಹೋಗಿ ಪೂಜೆ ಏಕೆ ಮಾಡಬೇಕು ಇವರಿಗೆ?' ನನ್ನ ಮಗ ನನಗೆ ಧೈರ್ಯ ತುಂಬುತ್ತಾ, "ಅಮ್ಮಾ, ಸ್ವಲ್ಪವೂ ಹೆದರಬೇಡ. ನೀನು ನಮ್ಮಿಬ್ಬರ ಮಧ್ಯೆ ನಡೆಯು" ಎಂದು ಹೇಳುತ್ತಿದ್ದ. ಹಾಗೆಯೇ ಪತಿಯೂ, "ಮೇಲೆ ಹತ್ತುವಾಗ ಸ್ವಲ್ಪವೂ ಹಿಂದೆ ತಿರುಗಿ ನೋಡಬೇಡ" ಎಂದು ಹೇಳಿದರು. ನಾನು ಬಾಪು ಅವರ ಹೆಸರನ್ನು ಜಪಿಸುತ್ತಾ ಮೇಲೆ ಏರುತ್ತಿದ್ದೆ. ಇದರ ನಡುವೆ ತು೦ಬಾ ಜೊರಿ೦ದ ಮಳೆಯೂ ಸುರಿಯುತ್ತಿತ್ತು. ಈ ಎಲ್ಲಾ ಭಯಗಳಿಂದ ನಾನು ಆನಂದದಿಂದ ವಂಚಿತಳಾಗಿದ್ದೆ.
ನಾವು ಸುರಕ್ಷಿತವಾಗಿ 100 ಅಡಿಗಳಷ್ಟು ಎತ್ತರಕ್ಕೆ ತಲುಪಿದೆವು ಮತ್ತು ಅಲ್ಲಿ ಮೊದಲು ನನಗೆ 70 ವರ್ಷದ, ನಮ್ಮ ಶ್ರದ್ಧಾವಂತ ಸ್ನೇಹಿತೆಯ ತಾಯಿ ಭೇಟಿಯಾದರು. ಅವರೂ ನಮ್ಮಂತೆಯೇ ಮೇಲೆ ಏರಿ ಬಂದಿದ್ದರು ಮತ್ತು ಆನಂದದಿಂದ ನಮ್ಮ ಸ್ವಾಗತಕ್ಕೆ ನಿಂತಿದ್ದರು. ಅವರನ್ನು ನೋಡಿದ ತಕ್ಷಣ ನನಗೆ ನನ್ನ ಬಗ್ಗೆಯೇ ನಾಚಿಕೆ ಎನಿಸಿತು. ನಾನು ನೀರಿಗೆ ಹೆದರುತ್ತಿದ್ದೆ, ಆದರೆ ಬಾಪು ನನ್ನ ಜೊತೆ ಇದ್ದಾರೆ ಎಂಬ ದೃಢ ವಿಶ್ವಾಸ ನನ್ನಲ್ಲಿ ಇದ್ದಿದ್ದರೆ, ನನ್ನ ಆತ್ಮವಿಶ್ವಾಸ ಖಂಡಿತ ಹೆಚ್ಚುತ್ತಿತ್ತು. ಆದರೆ ನಾನು ನನ್ನದೇ ಭಯದಲ್ಲಿ ಸಿಕ್ಕಿಬಿದ್ದಿದ್ದೆ. ಬಾಪು ಅವರ ಕೃಪೆಯಿಂದ ಈ ತಪ್ಪು ನನ್ನ ಗಮನಕ್ಕೆ ಬಂತು. ಈ ಎಪ್ಪತ್ತರ ಆಜ್ಜಿ ಅಷ್ಟು ಎತ್ತರಕ್ಕೆ ಬರಲು ಸಾಧ್ಯವಾದರೆ, ನನಗೆ ಎತ್ತರ ಮತ್ತು ನೀರಿಗೆ ಹೆದರಲು ಕಾರಣವೇನು? ಈ ಆಲೋಚನೆ ಬಂದ ತಕ್ಷಣ ನಾನು ಪಾದುಕಾ ಪೂಜೆಯ ಸಂಭ್ರಮದಲ್ಲಿ ಆನಂದದಿಂದ ಭಾಗವಹಿಸಿದೆ, ಏಕೆಂದರೆ ಮನಸ್ಸಿನ ಭಯವು ಬಾಪು ಅವರ ಮೇಲಿನ ವಿಶ್ವಾಸವಾಗಿ ಪರಿವರ್ತಿತವಾಗಿತ್ತು.
ಆ ದಿನದಿಂದ ನನ್ನ ನೀರಿನ ಭಯ ಹೋಯಿತು ಮತ್ತು ಕನಸುಗಳು ಸಹ ನಿಂತುಹೋದವು. ಆತ್ಮವಿಶ್ವಾಸ ಹೆಚ್ಚಿದ ಕಾರಣ ಈಗ ನನ್ನಲ್ಲಿ ತುಂಬಾ ಉತ್ತಮ ಬದಲಾವಣೆ ಆಗಿದೆ. ಭಯ ಮತ್ತು ಕೀಳರಿಮೆಯಿಂದ ನಾನು ನನ್ನ ಅನೇಕ ಸಕಾರಾತ್ಮಕ ವಿಷಯಗಳನ್ನು ಕಳೆದುಕೊಂಡಿದ್ದೆ. ನನ್ನ ಬರಹ ಮತ್ತು ಅಂತಹ ಅನೇಕ ಹವ್ಯಾಸಗಳನ್ನು ನಾನು ಈಗ ಪ್ರಾರಂಭಿಸಲು ಸಾಧ್ಯವಾಯಿತು. ಬಾಪು ಭಕ್ತಿಯಿಂದ ಅನೇಕ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತವೆ. ಬಾಪು ಅವರಲ್ಲಿ ಒಂದೇ ಒಂದು ಬೇಡಿಕೆ ಇದೆ. 'ಬಾಪು, ನಿಮ್ಮ ಮೇಲಿನ ನನ್ನ ವಿಶ್ವಾಸವು ಹೀಗೆಯೇ ಸದಾ ಹೆಚ್ಚುತ್ತಿರಲಿ ಎಂದು ನಿಮ್ಮ ಚರಣಗಳಿಗೆ ಪ್ರಾರ್ಥಿಸುತ್ತೇನೆ.'
ಹರಿ ಓಂ ಶ್ರೀರಾಮ್ ಅಂಬಜ್ಞ
ನಾಥಸಂವಿಧ
ગુજરાતી >> বাংলা >>
No comments:
Post a Comment