Wednesday, 30 July 2025

ತ್ರಿವಿಕ್ರಮ ಲಾಕೆಟ್ ಮತ್ತು ಉದಿಯ ಮಹಿಮೆ ಅಪಾರ! - ಚೇತನ್‌ಸಿಂಗ್ ಸಹಾರೆ, ಇಂದೋರ್

 
ತ್ರಿವಿಕ್ರಮ ಲಾಕೆಟ್ ಮತ್ತು ಉದಿಯ ಮಹಿಮೆ ಅಪಾರ! - ಚೇತನ್‌ಸಿಂಗ್ ಸಹಾರೆ, ಇಂದೋರ್

ಒಬ್ಬ ಶ್ರದ್ಧಾವಂತ, ಅನಿರೀಕ್ಷಿತ ಇಚ್ಛೆಯಂತೆ, ತನ್ನ ಮದುವೆಗೆ ಸಿದ್ಧವಾಗಿ ನಿಂತಿದ್ದ ಅಳಿಯನ ಕುತ್ತಿಗೆಗೆ ತ್ರಿವಿಕ್ರಮ ಲಾಕೆಟ್ ಹಾಕುತ್ತಾನೆ. ತದನಂತರ ಆ ಲಾಕೆಟ್ ಮತ್ತು ಉದಿಯ ಪ್ರಭಾವದಿಂದ, ಬಾಪು ಭಕ್ತನಲ್ಲದ ಆತನ ಅಳಿಯ, ಮದುವೆಯ ಸಮಾರಂಭದಲ್ಲಿಯೇ ತನ್ನ ಮೇಲಿದ್ದ ವಿಘ್ನಗಳಿಂದ ಸುಲಭವಾಗಿ ಮುಕ್ತನಾಗುತ್ತಾನೆ!

-----------------------------------

ಎಲ್ಲವೂ ಅತರ್ಕ್ಯ!

ಹರಿ ಓಂ. ನಾನು 8 ಮೇ 2018 ರಂದು ನನಗೆ ಆದ ಸದ್ಗುರು ಶ್ರೀಅನಿರುದ್ಧ ಬಾಪು ಅವರ ಅನುಭವವನ್ನು ಎಲ್ಲರ ಮುಂದೆ ಪ್ರಸ್ತುತಪಡಿಸಲಿದ್ದೇನೆ.

ನನ್ನ ಈ ಅನುಭವದಿಂದ ಬಾಪು ಅವರಿಗೆ ನಮ್ಮ ಬಗ್ಗೆ ಎಷ್ಟು ಕಾಳಜಿ ಇದೆ ಮತ್ತು ಅವರು ತಮ್ಮ ಭಕ್ತರೊಂದಿಗೆ ಕ್ಷಣ ಕ್ಷಣವೂ ಇದ್ದು, ಭಕ್ತರ ಮತ್ತು ಅವರ ಕುಟುಂಬದ ರಕ್ಷಣೆ ಹೇಗೆ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿಯುತ್ತದೆ.

ನನ್ನ ಅಳಿಯನ ಮದುವೆಯಲ್ಲಿ ಭಾಗವಹಿಸಲು ನನ್ನ ಸಹೋದರಿ, ನಾನು ಮತ್ತು ನನ್ನ ಕುಟುಂಬ 6 ಮೇ 2018 ರಂದು ಇಂದೋರ್‌ನಿಂದ ವರ್ಧಾಕ್ಕೆ ಹೊರಟೆವು. ಬಯಸಿದ ಸ್ಥಳಕ್ಕೆ ತಲುಪಿದ ತಕ್ಷಣ ನಾನು ನನ್ನ ಅಳಿಯನನ್ನು ಭೇಟಿಯಾದೆ ಮತ್ತು ಅವನಿಗೆ "ನೀನು ಹೇಗಿದ್ದೀಯಾ?" ಎಂದು ಕೇಳಿದೆ. ಇದನ್ನು ಕೇಳಲು ಒಂದು ಕಾರಣವಿತ್ತು. ನನ್ನ ಅಳಿಯ ಬಹಳಷ್ಟು ಮದ್ಯಪಾನ ಮಾಡುತ್ತಿದ್ದ, ಆದರೆ ಎರಡು ದಿನಗಳಿಂದ ಅವನು ಮದ್ಯಪಾನ ಮಾಡುವುದನ್ನು ನಿಲ್ಲಿಸಿದ್ದನು. ಆದ್ದರಿಂದ ಅವನು ನನಗೆ ಸ್ವಲ್ಪ ಉತ್ತಮವಾಗಿ ಕಾಣಿಸುತ್ತಿದ್ದನು.

ವರ್ಧಾ ತಲುಪಿದ ದಿನದಿಂದ ನನ್ನ ಮನಸ್ಸಿನಲ್ಲಿ ನನ್ನ ಅಳಿಯನ ಬಗ್ಗೆ ಚಿಂತೆ ಇತ್ತು. ನಾನು ಸದಾ ಅವನ ಬಗ್ಗೆಯೇ ಯೋಚಿಸುತ್ತಿದ್ದೆ. ಅವನು ಬಾಪು ಭಕ್ತನಾಗಿರಲಿಲ್ಲ, ಆದರೆ ನನಗೆ ಪದೇ ಪದೇ ಅನಿಸುತ್ತಿತ್ತು, ನಾವು ಅವನಿಗೆ ತ್ರಿವಿಕ್ರಮ ಲಾಕೆಟ್ ಧರಿಸಲು ಕೊಡಬೇಕು ಎಂದು. ನನಗೆ ತಿಳಿಯುವ ಮೊದಲೇ ನಾನು ನನ್ನ ಕುತ್ತಿಗೆಯಲ್ಲಿದ್ದ ತ್ರಿವಿಕ್ರಮ ಲಾಕೆಟ್ ಅನ್ನು ಅಳಿಯನ ಕುತ್ತಿಗೆಗೆ ಹಾಕಿದೆ. ನಿಜವಾಗಿಯೂ ಹೇಳಬೇಕೆಂದರೆ; ನನ್ನ ಲಾಕೆಟ್ ಅನ್ನು ಅವನಿಗೆ ಹೇಗೆ ಕೊಟ್ಟೆ ಎಂದು ನನಗೂ ತಿಳಿಯಲಿಲ್ಲ! ಈ ಕೃತ್ಯವನ್ನು ನಾನು ಮನಃಪೂರ್ವಕವಾಗಿ ಮಾಡಬೇಕೆಂದು ಅನಿಸಿತು ಮತ್ತು ನಾನು ಅದನ್ನು ಮಾಡಿದೆ. ಮದುವೆಯಾಗುವ ತನಕ ಈ ಲಾಕೆಟ್ ಅನ್ನು ಕುತ್ತಿಗೆಯಿಂದ ತೆಗೆಯಬಾರದು ಎಂದು ಅಳಿಯನಿಗೆ ಹೇಳಿದೆ. ಆಶ್ಚರ್ಯಕರ ವಿಷಯವೆಂದರೆ, ಬಾಪು ಭಕ್ತನಾಗಿಲ್ಲದಿದ್ದರೂ ಅಳಿಯನು ಇದನ್ನು ಒಪ್ಪಿಕೊಂಡನು. ನನಗೆ ನಿರಾಳವಾಯಿತು.

ಈ ಘಟನೆಯ ಕೆಲವೇ ಕ್ಷಣಗಳಲ್ಲಿ ಒಂದು ವಿಚಿತ್ರ ಘಟನೆ ನಡೆಯಿತು. ಅಳಿಯನಿಗೆ ಏನೋ ಆಗಲು ಶುರುವಾಯಿತು, ಆದರೆ ನಮಗೆಲ್ಲರಿಗೂ ಅದರ ರೋಗನಿರ್ಣಯವಾಗುತ್ತಲೇ ಇರಲಿಲ್ಲ. ನನ್ನ ಅಳಿಯ ಇದ್ದಕ್ಕಿದ್ದಂತೆ ನಡುಗಲು ಶುರುವಾದನು. ನನ್ನ ಹೆಂಡತಿ ಅಳಿಯನಿಗೆ ಶಗುನದ ಮೆಹಂದಿ ಹಚ್ಚುತ್ತಿದ್ದಾಗಂತೂ ಅವನು ತುಂಬಾ ನಡುಗಲು ಶುರುವಾದನು.  ಮಾರನೆಯ ದಿನ  ಮದುವೆ ಮತ್ತು ಇದು ಏನು ನಡೆಯುತ್ತಿದೆ ಎಂದು ತಿಳಿಯುತಿರಲಿಲ್ಲ.  ಯಾರ ಮದುವೆಯೋ, ಅವರ ಆರೋಗ್ಯವೇ ಹದಗೆಡುತ್ತಿತ್ತು. ಏನಾದರೂ ಉಪಾಯ ಮಾಡಲೇಬೇಕಿತ್ತು, ಏಕೆಂದರೆ ಮನೆಯಲ್ಲಿ ಪೂಜೆಯೂ ನಡೆಯುತ್ತಿತ್ತು ಮತ್ತು ಮದುವೆಯ ದಿನ ಅಳಿಯನ ಆರೋಗ್ಯದ ಬಗ್ಗೆ ಯಾವುದೇ ತೊಂದರೆಗಳು ಬೇಡವಾಗಿದ್ದವು. ಆದ್ದರಿಂದ ನಾನು ತಕ್ಷಣವೇ ಅವನನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದೆ.

ಆಸ್ಪತ್ರೆಯ ವೈದ್ಯರು ಅವನ ಸಂಪೂರ್ಣ ಪರೀಕ್ಷೆ ಮಾಡಿದರು. ವೈದ್ಯರು ಅವನನ್ನು ಪರೀಕ್ಷಿಸುತ್ತಿದ್ದಾಗ ನಾವು ಅವನ ಬಳಿ ಕುಳಿತು ಹನುಮಾನ್ ಚಾಲೀಸಾ ಹೇಳುತ್ತಿದ್ದೆವು. ಬಾಪು ಹತ್ತಿರ ಒಂದೇ ಪ್ರಾರ್ಥನೆ ಮಾಡಿದೆವು, 'ಬಾಪು, ಅಳಿಯನನ್ನು ಗುಣಪಡಿಸಿ. ಅವನ ಮದುವೆ ನಾಳೆ ಇದೆ'. ಅವನನ್ನು ಸಂಪೂರ್ಣವಾಗಿ ಪರೀಕ್ಷಿಸಿದ ನಂತರ ವೈದ್ಯರು, "ಇವನಿಗೆ ಏನೂ ಆಗಿಲ್ಲ. ಇವನು ಸಂಪೂರ್ಣವಾಗಿ ಗುಣಮುಖನಾಗಿರುವುದರಿಂದ ನೀವು ಇವನನ್ನು ಮನೆಗೆ ಕರೆದುಕೊಂಡು ಹೋಗಬಹುದು" ಎಂದು ಹೇಳಿದರು. ನಾವು ಸ್ವಲ್ಪ ನಿಶ್ಚಿಂತರಾಗಿ ಮನೆಗೆ ಹಿಂದಿರುಗಿದೆವು. ಆದರೆ ಮನಸ್ಸಿನ ಆತಂಕ ಹೆಚ್ಚುತ್ತಲೇ ಇತ್ತು. ಈಗಂತೂ ಅವನು ಗುಣಮುಖನಾಗಿದ್ದಾನೆ ಎಂದು ತಿಳಿದಿತ್ತು. ಆದರೂ ಮನಸ್ಸಿನ ಆತಂಕ ಕಡಿಮೆಯಾಗಲಿಲ್ಲ. ಅಳಿಯನಿಗೆ ಏನಾದರೂ ಆದರೂ, ತ್ರಿವಿಕ್ರಮ ಲಾಕೆಟ್ ಅವನನ್ನು ಖಂಡಿತವಾಗಿಯೂ ರಕ್ಷಿಸುತ್ತದೆ ಎಂದು ಒಂದು ಮನಸ್ಸು ನನಗೆ ವಿಶ್ವಾಸದಿಂದ ಹೇಳುತ್ತಿತ್ತು. ನನ್ನ ಸಲುವಾಗಿಯಾದರೂ, ಅಳಿಯನು ಯಾವುದೇ ವಿರೋಧವಿಲ್ಲದೆ ಲಾಕೆಟ್ ಅನ್ನು ಕುತ್ತಿಗೆಗೆ ಹಾಕಿಕೊಂಡಿದ್ದನು.

ಈ ಲಾಕೆಟ್ ಯಾರ ಕುತ್ತಿಗೆಯಲ್ಲಿರುತ್ತದೋ, ಅವರನ್ನು ರಕ್ಷಿಸಲು ಬಾಪು ಯಾವಾಗಲೂ ಸಮರ್ಥರಾಗಿದ್ದಾರೆ.

ಬಾಪು ನನ್ನ ಅಳಿಯನೊಂದಿಗೂ ಇದ್ದಾರೆ ಎಂಬುದು ನನ್ನ ವಿಶ್ವಾಸವಾಗಿತ್ತು.

ಮರುದಿನ ಮದುವೆ ಸಮಾರಂಭವು ಯಾವುದೇ ಅಡೆತಡೆಯಿಲ್ಲದೆ ನೆರವೇರಿತು. ಮನೆಗೆ ಹೊರಡಲು ಸಮಯವಾಯಿತು ಮತ್ತು ನವವಧುವಿನ ಬೀಳ್ಕೊಡುಗೆಯ ಸಮಯದಲ್ಲಿ ನನ್ನ ಅಳಿಯ ಇದ್ದಕ್ಕಿದ್ದಂತೆ ಕೆಳಗೆ ಬಿದ್ದನು ಮತ್ತು ಅವನ ಬಾಯಿಯಿಂದ ನೊರೆ ಬರಲು ಶುರುವಾಯಿತು. ಒಂದು ಕಡೆ ಆನಂದದ ಸಮಾರಂಭ, ಮತ್ತು ಯಾರ ಮದುವೆಯೋ ಅವನೇ ಅಚೇತನನಾಗಿ ಬಿದ್ದಿದ್ದನು ಮತ್ತು ಜೊತೆಗೆ ನವವಧು ಮತ್ತು ಅವಳ ತಾಯಿ ಮನೆಯವರು ನಿಂತಿದ್ದರು. ಎಲ್ಲರ ಮುಂದೆ ಒಂದೇ ಪ್ರಶ್ನೆಯಿತ್ತು: ಅವನಿಗೆ ಇದ್ದಕ್ಕಿದ್ದಂತೆ ಏನಾಯಿತು? ಆನಂದಕ್ಕೆ ಕಳಂಕ ತಗುಲಿದಂತೆ ಆಯಿತು. ಯಾರಿಗೂ ಏನೂ ತೋಚಲಿಲ್ಲ, ಏನು ಮಾಡಬೇಕೆಂದು ತಿಳಿಯಲಿಲ್ಲ. ಎಲ್ಲರೂ ಹೆದರಿ ಅಳಲು ಶುರುಮಾಡಿದರು ಮತ್ತು ಅಳಿಯನನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ನಿರ್ಧಾರವನ್ನು ಮನೆಯವರೆಲ್ಲರೂ ತೆಗೆದುಕೊಂಡರು.

ನಾನು ಮತ್ತು ನನ್ನ ಹೆಂಡತಿ ಬಾಪು ಭಕ್ತರಾಗಿರುವುದರಿಂದ, ಬಾಪು, ಬಂದ ಸಂಕಟಕ್ಕೆ ಖಂಡಿತವಾಗಿಯೂ ಸರಿಯಾದ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಎಂದು ನಮಗೆ ಬಾಪು ಅವರ ಮೇಲೆ ಸಂಪೂರ್ಣ ನಂಬಿಕೆ ಇತ್ತು. ನನ್ನ ಹೆಂಡತಿಗೆ ಅವಳು ತಂದಿದ್ದ ಉದಿಯ ನೆನಪಾಯಿತು. ಹೊರಗಡೆ ಹೋಗುವಾಗ, ಅಥವಾ ಮನೆಯಿಂದ ಹೊರಡುವಾಗ ನಾವು ಯಾವಾಗಲೂ ಉದಿಯನ್ನು ಜೊತೆಗೆ ತೆಗೆದುಕೊಂಡು ಹೋಗುತ್ತೇವೆ ಮತ್ತು ಹಚ್ಚುತ್ತೇವೆ. ನನ್ನ ಸಹೋದರಿಯೂ ಬಾಪುರವರ ಭಕ್ತಲಾಗಿದ್ದರಿಂದ ಅವಳ ಬಳಿಯೂ ಉದಿ ಇತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲು ತಕ್ಷಣವೇ ಅವನಿಗೆ ಉದಿ ಹಚ್ಚುವುದು ಒಳ್ಳೆಯದು ಎಂಬ ಯೋಚನೆಯಿಂದ ಹೆಂಡತಿಯು ಓಡುತ್ತಾ ಉದಿಯ ಡಬ್ಬಿಯನ್ನು ತೆಗೆದುಕೊಂಡು ಅಳಿಯನ ಹತ್ತಿರ ಹೋದಳು. ನಮ್ಮ ಇತರ ಸಂಬಂಧಿಗಳು ಬಾಪು ಭಕ್ತರಲ್ಲದ ಕಾರಣ ಅವರೆಲ್ಲರೂ ತಕ್ಷಣವೇ ಹೆದರಿ ಹೋಗಿದ್ದರು ಮತ್ತು ಹೆಂಡತಿಯ ಮಾತು ಕೇಳದೆ ಅವಳನ್ನು ಪಕ್ಕಕ್ಕೆ ಸರಿಯಲು ಹೇಳಿದರು. ಆದರೆ ನನ್ನ ಹೆಂಡತಿ ಮಾತ್ರ ಅವರಿಗೆ ದೃಢವಾಗಿ ಹೇಳಿದಳು, "ಇದು ನಮ್ಮ ಸಂಸ್ಥೆಯ ಪವಿತ್ರ ಉದಿ. ಆದ್ದರಿಂದ ನಾನು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲು ಅದನ್ನು ಹಚ್ಚುತ್ತೇನೆ." ಹೆಂಡತಿಯು ಪ್ರಜ್ಞಾಹೀನನಾಗಿದ್ದ ಅಳಿಯನಿಗೆ ಉದಿ ಹಚ್ಚಿದಳು ಮತ್ತು ಅದನ್ನು ಹಚ್ಚಿದ ತಕ್ಷಣ ಅವನಿಗೆ ಆರಾಮವಾಯಿತು ಮತ್ತು ಅವನು ಪ್ರಜ್ಞೆಗೆ ಬಂದನು. ಅಳಿಯನು ಪ್ರಜ್ಞೆಗೆ ಬಂದ ನಂತರ ನನ್ನ ಸಹೋದರಿ ಅವನಿಗೆ ನೀರಿಗೆ ಉದಿ ಹಾಕಿ, ಉದಿಯ ನೀರನ್ನು ಸಹ ಕೊಟ್ಟಳು. ಅದನ್ನು ತೆಗೆದುಕೊಂಡ ತಕ್ಷಣ ಅಳಿಯನು ಸಂಪೂರ್ಣವಾಗಿ ಗುಣಮುಖನಾಗಿ ಎದ್ದು ಕುಳಿತುಕೊಂಡನು. ಅವನನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವೂ ಇರಲಿಲ್ಲ. ಚಿಕಿತ್ಸೆಯ ನಂತರ ಇಂದು ಅವನು ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ.

ಇಂತವನು ನನ್ನ ಬಾಪು. ಭಕ್ತನ ಒಂದು ಕರೆಯನ್ನು ಕೇಳಿದ ತಕ್ಷಣ ಅವರು ಎಲ್ಲಿಯಾದರೂ, ಯಾವಾಗ ಬೇಕಾದರೂ ಮತ್ತು ಹೇಗೆ ಬೇಕಾದರೂ ಧಾವಿಸಿ ಬರುತ್ತಾರೆ. ಅಯ್ಯೋ, ಕರೆದರೆ ಮಾತ್ರವಲ್ಲ, ಕರೆಯದಿದ್ದರೂ ಬಾಪು ನಮ್ಮ ಸಹಾಯಕ್ಕೆ ಬರುತ್ತಾರೆ. ಬಾಪು ಯಾವಾಗಲೂ ನಮ್ಮೊಂದಿಗಿರುವ ಕಾರಣ ಅವರು ಇಂದೋರ್ ಮತ್ತು ವರ್ಧಾದಲ್ಲಿ ನನ್ನೊಂದಿಗಿದ್ದರು. ಅಳಿಯನ ಕುತ್ತಿಗೆಗೆ ತ್ರಿವಿಕ್ರಮ ಲಾಕೆಟ್ ನನ್ನಿಂದ ಹಾಕಲ್ಪಟ್ಟಿತು, ಅದು ಕೂಡ ಬಾಪು ಅವರೇ ಅವನ ಮೇಲೆ ಮತ್ತು ನನ್ನ ಮೇಲಿನ ಅಕಾರಣ ಕರುಣೆಯಿಂದ. ಆ ತ್ರಿವಿಕ್ರಮ ಲಾಕೆಟ್ ಮತ್ತು ಉದಿಯು ಅಳಿಯನನ್ನು ರಕ್ಷಿಸಿತು ಮತ್ತು ಮುಂದಿನ ಪ್ರಸಂಗ ತಪ್ಪಿತು, ಇದನ್ನು ನಾನು ವಿಶ್ವಾಸದಿಂದ ಹೇಳುತ್ತೇನೆ. ಅವನು ಬಾಪು ಅವರನ್ನು ನಂಬದಿದ್ದರೂ, ಬಾಪು ಅವನನ್ನು ರಕ್ಷಿಸಿದರು. ಅವನು ಬಾಪು ಭಕ್ತನಲ್ಲದಿದ್ದರೂ, ನನ್ನ ಸಹೋದರಿ (ಅವನ ತಾಯಿ) ಬಾಪು ಅವರ ಉಪಾಸನೆಗೆ ಹೋಗುತ್ತಾಳೆ ಮತ್ತು ಮನೆಯಲ್ಲಿಯೂ ಬಾಪು ಅವರ ನಿತ್ಯ ಉಪಾಸನೆ ಮತ್ತು ಪಠಣ ಮಾಡುತ್ತಾಳೆ. ಈಗಂತೂ ಅವಳ ಸೊಸೆಯೂ ಸದ್ಗುರು ಬಾಪು ಅವರ ಉಪಾಸನೆಯಲ್ಲಿ ಭಾಗಿಯಾಗಿದ್ದಾಳೆ ಮತ್ತು ಬಾಪು ಭಕ್ತಿಯಲ್ಲಿ ಸ್ಥಿರವಾಗಿದ್ದಾಳೆ.

ಹರಿ ಒಮ್ ಶ್ರೀರಾಮ್ ಅಮ್ಬದ್ನ್ಯ


ગુજરાતી>> తెలుగు>> বাংলা>> தமிழ்>>

No comments:

Post a Comment