Wednesday, 23 July 2014

ಶಾಸ್ತ್ರಜ್ನ ನಿಕೋಲಾ ಟೇಸಲಾರವರ (Scientist Nikola Tesla) ಬಗ್ಗೆ ಸದ್ಗುರು ಅನಿರುದ್ಧ ಬಾಪೂರವರು ಅವರ ಪ್ರವಚನದಲ್ಲಿ ಹೇಳಿದ ಮಾಹಿತಿ

ಪರಮ ಪೂಜ್ಯ ಸದ್ಗುರು ಶ್ರೀ ಅನಿರುದ್ಧ ಬಾಪೂರವರು ಗುರುವಾರ ದಿ. ೨೭ ಮಾರ್ಚ್ ೨೦೧೪ ರಂದು ಮರಾಠಿ ಪ್ರವಚನದಲ್ಲಿ ಶ್ರೀ ಹರಿಗುರುಗ್ರಾಮದಲ್ಲಿ ವಿಖ್ಯಾತ ಶಾಸ್ತ್ರಜ್ನರಾದ ನಿಕೋಲಾ ಟೇಸಲಾರವರ ಬಹುಮೂಲ್ಯ ಸಂಶೋಧನೆಯ ಕಾರ್ಯದ ಬಗ್ಗೆ ಹೇಳಿದರು.




ಅಸಂಖ್ಯ ತೊಡಕುಗಳನ್ನು ಎದುರಿಸಲಾಗುತ್ತಿದ್ದರೂ ಕೂಡ ಭಗವಂತನ ಮೇಲಿರುವ ಶ್ರದ್ಧೆಯನ್ನು ಸ್ವಲ್ಪ ಕೂಡ ವಿಚಲಿತಗೊಳಿಸದ ವಿಖ್ಯಾತ ಶಾಸ್ತ್ರಜ್ನರಾದ ನಿಕೋಲಾ ಟೇಸಲಾ ಅವರು ಅಥಕ ಪರಿಶ್ರಮದಿಂದ ಬಹುಮೂಲ್ಯ ಸಂಶೋಧನೆಗಳನ್ನು ಮಾಡಿ ಲೋಕೋಪಯೋಗಕ್ಕಾಗಿ ಅನೇಕ ಶೋಧನೆಗಳನ್ನು ಮಾಡಿದರು. ಬಾಪೂರವರು ಅವರ ಮಹಾನ ಕಾರ್ಯದ ಪರಿಚಯವನ್ನು ಮಾಡಿ ಕೊಟ್ಟರು. ಅದನ್ನು ನಾವು ಈ ವ್ಹಿಡಿಯೋದಲ್ಲಿ ನೋಡಬಹುದು.

Thursday, 19 June 2014

ಸದ್ಗುರು ಅನಿರುದ್ಧ ಬಾಪೂರವರ ಉಪಾಸನೆ

ಪರಮಪೂಜ್ಯ ಸದ್ಗುರು ಬಾಪೂರವರು ಕಳೆದ ಮೂರು ಗುರುವಾರ ಶ್ರೀಹರಿಗುರುಗ್ರಾಮಕ್ಕೆ ಪ್ರವಚನಕ್ಕಾಗಿ ಬಂದಿಲ್ಲವೆಂದು ಸಮಸ್ತ ಶ್ರದ್ಧಾವಾನರಿಗೆ ಇದರ ಕಲ್ಪನೆಯಿದೆ. ಬಾಪೂರವರ ಸಲಗವಾಗಿ ೩ ಗುರುವಾರ ದರ್ಶನವಾಗದಿಲ್ಲದ್ದರಿಂದ ಅನೇಕ ಶ್ರದ್ಧಾವಾನರು ಬಾಪೂರವರ ಬಗ್ಗೆ ಆಸ್ಥೆಯಿಂದ ಹಾಗು ಪ್ರೇಮದಿಂದ ವಿಚಾರಣೆ  ಮಾಡಿರುವರು. ಆ ಎಲ್ಲಾ ಶ್ರದ್ಧಾವಾನರಿಗೆ ನಾನು ತಿಳಿಯಲಿಚ್ಛಿಸುವೆನೆಂದರೆ ಬಾಪೂ ಅವರ ಅತೀಶಯ ಕಠೋರವಾದ ಉಪಾಸನೆಯಲ್ಲಿ ವ್ಯಸ್ತರಿದ್ದು ಮುಂದಿನ ಕೆಲವು ಕಾಲದತನಕ ಈ ಉಪಾಸನೆಯು ನಡೆಯಲಿದೆ. ಈ ಉಪಾಸನೆಯ ಕಾರಣದಿಂದಾಗಿ ಪರಮಪೂಜ್ಯ ಬಾಪೂ ಕಳೆದ ೩ ಗುರುವಾರ ಶ್ರೀಹರಿಗುಗ್ರಾಮಕ್ಕೆ ಬರಲಿಲ್ಲ ಇದನ್ನು ಕೃಪೆಯಾಗಿ ಶ್ರದ್ಧಾವಾನರು ತಿಳಿದು ಕೊಳ್ಳ ಬೆಕೆಂದು ವಿನಂತಿ.

ಮುಂದೆ ಬರುವ ಕೆಲವು ಕಾಲದತನಕ ಪರಮಪೂಜ್ಯ ಬಾಪೂರವರ ಶ್ರೀಹರಿಗುರುಗ್ರಾಮದಲ್ಲಿ ಪ್ರವಚನಕ್ಕಾಗಿ ಬರುವದು ಅವರ ಉಪಾಸನೆಯನ್ನು ಅವಲಂಬಿಸರುತ್ತದೆ.



|| ಹರಿ ಓಂ || ಶ್ರೀರಾಮ || ಅಂಬಜ್ನ ||

Saturday, 2 November 2013

ಶ್ರೀಗಂಗಾ ತ್ರಿವೇಣಿ Algorithm

ಮೊನ್ನೆ ಅಂದರೆ ೧೯ ಸಪ್ಟೆಂಬರ್ ೨೦೧೩ ರಂದು ಸದ್ಗುರು ಬಾಪೂರವರು ’ಶ್ರೀಗಂಗಾ ತ್ರಿವೇಣಿ Algorithm’ ನ್ನು ಎಲ್ಲಾ ಶ್ರದ್ಧಾವಾನರಿಗೆ ತಿಳಿಸಿ ಹೇಳಿದಾಗ, ಬಾಪೂರವರು Pascal Triangle ನ Algorithm ಒಟ್ಟಿಗೆ ಇದ್ದ ಸಂದರ್ಭವನ್ನು ಕೊಟ್ಟರು. ಶ್ರೀಗಂಗಾ ತ್ರಿವೇಣಿ algorithm (ಎಲ್ಗೋರಿದಮ್) ಬಗ್ಗೆ ತಿಳಿಸುವಾಗ ಬಾಪೂ ಹೇಳಿದರು, ’ಗಂಗಾ-ಯಮುನಾ-ಸರಸ್ವತಿ ಈ ಮೂರು ನದಿಗಳ ಎಲ್ಲಿ ಸಂಗಮವಾಗುವದು ಅದಕ್ಕೆ ತ್ರಿವೇಣಿ ಸಂಗಮ ಹೇಳುತ್ತಾರೆ. "ಗಂಗಾ, ಯಮುನಾ ಮತ್ತು ಸರಸ್ವತಿ ಈ ಮೂರು ನದಿಗಳು ನಮ್ಮ ದೇಹದಲ್ಲಿ ಇಡಾ, ಪಿಂಗಲಾ ಹಾಗು ಸುಷುಮ್ನಾ ನಾಡಿಯ ರೂಪದಲ್ಲಿರುತ್ತದೆ, "ಮನುಷ್ಯನ ಹಣೆಯ ಮಧ್ಯಭಾಗದಲ್ಲಿ ಅಂದರೆ ಆಜ್ನಾಚಕ್ರದಲ್ಲಿ ಈ ಮೂರು ನಾಡಿಗಳ ತ್ರಿವೇಣಿ ಸಂಗಮವಾಗುವದು. ಸುಷುಮ್ನೆಯಲ್ಲಿ ಹನುಮಂತನ ಸಂಚಾರವಿರುವದು ಅಂದರೆ ಅದರಲ್ಲಿ ಮಹಾಪ್ರಾಣನ ಸಾಮ್ರಾಜ್ಯವಿರುವದು.

ನಮ್ಮ ಮನದಲ್ಲಿರುವ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮದ ಕುರಿತಾಗಿ ನಮಗೆ ಗೊತ್ತಿರುವುದು ಆವಶ್ಯಕವಾಗಿದೆ. ಈ ಮೂರು ನದಿಯ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ನಮ್ಮೆಲ್ಲಾ ಪಾಪಗಳ ಕ್ಷಾಲನವಾಗುವುದೆಂಬ ಸಿದ್ಧಾಂತವಿದೆ. ಆದರೆ ತ್ರಿವೇಣಿ ಸಂಗಮದಲ್ಲಿ ನಿಜವಾಗಲೂ ಸ್ನಾನಮಾಡುವುದೆಂದರೆ ನಮ್ಮ ಮನದಲ್ಲಿಯ ಗಂಗಾ, ಯಮುನಾ ಸರಸ್ವತಿಯ ಸಂಗಮದಲ್ಲಿ ಅಂದರೆ ಇಡಾ, ಪಿಂಗಲಾ ಹಾಗು ಸುಷುಮ್ನೆಯ ಸಂಗಮದಲ್ಲಿ ಸ್ನಾನ ಮಾಡಿದಂತಿರುವದು. ಮತ್ತು ಈ ಸಂಧಿಯು ಪ್ರತಿಯೊಬ್ಬರಿಗೂ ಸಿಗಲು ಸಾಧ್ಯವಿದೆ.

 
                                          श्रीगंगा त्रिवेणी Algorithm

ಮೇಲಿನ ಆಕೃತಿಯು ನಮ್ಮ ದೇಹದಲ್ಲಿಯ ಇಡಾ, ಪಿಂಗಲಾ ಹಾಗು ಸುಷುಮ್ನಾ ಅಂದರೆ ಗಂಗಾ, ಯಮುನಾ ಹಾಗು ಸರಸ್ವತಿಯ ಕಾರ್ಯವನ್ನು ತೋರಿಸುವದು. ಈ ತ್ರಿಕೋನದಲ್ಲಿ ೧ ರಿಂದ ೯ ಹಾಗು ೦ ಯ ಅಂಕೆಯು ಒಂದು ನಿರ್ಧಾರಿತ ಕ್ರಮದಲ್ಲಿ ಬರುವದು. ಕೇವಲ ಸುಷುಮ್ನಾ ನಾಡಿಯ ಮೇಲೆ ನಮಗೆ ಶೂನ್ಯ ಕಾಣುತ್ತದೆ. ಈ ಶೂನ್ಯಾವಸ್ಥೆ ಅಂದರೆ ಶಾಂತ-ತೃಪ್ತಾವಸ್ಥೆ ಅಂದರೇನೆ ಪೂರ್ಣತ್ವ. ಹನುಮಂತನು ಪೂರ್ಣನಿರುವರು. ಆದ್ದರಿಂದ  ಸುಷುಮ್ನಾ ನಾಡಿಯಲ್ಲಿ ಅವರ ಸಂಚಾರವಿರುವದು. ಈ ಸುಷುಮ್ನೆಯನ್ನೇ ’ಜ್ಯೋತಿಷಮತಿ’ ಕೂಡ ಹೇಳುವರು ಯಾಕೆಂದರೆ ಇದಕ್ಕೆ ಮುಂದಿನದು ಗೊತ್ತಿರುವದು.

ಆದರೆ ಈ ಗಂಗಾ-ತ್ರಿವೇಣಿಯ ತ್ರಿಕೋನದಲ್ಲಿ ಸ್ನಾನ ಹೇಗೆ ಮಾಡಬೇಕು? ನಮ್ಮ ಮೆಚ್ಚಿನ ದೇವರ ಪ್ರತಿಮೆಗೆ (ಮೂರ್ತಿ/ಫ್ರೇಮ್) ಅಭಿಷೇಕವನ್ನು ಮಾಡುವಾಗ ಹರಿವಾಣದ ಕೆಳಗೆ ಈ ಶ್ರೀಗಂಗಾ ತ್ರಿವೇಣಿ algorithm ತೆಗೆದಿರುವ ಕಾಗದವನ್ನಿಡಬೇಕು. ಇದರಿಂದ ಗಂಗಾ-ತ್ರಿವೇಣಿ ಸಂಗಮದ ಪಾವಿತ್ರ್ಯವು ಅಭಿಷೇಕದ ತೀರ್ಥದಲ್ಲಿ ಇಳಿಯುವದು. ಆನಂತರ ದೇವರ ಅಭಿಷೋಕ್ತ ಪ್ರತಿಮೆಗೆ ಅತ್ಯಂತ ಪ್ರೀತಿಯಿಂದ ಹಾಗು ಜಾಗರೂಕತೆಯಿಂದ ಒರೆಸಬೇಕು. ಅಭಿಷೇಕ ಮಾಡಿದ ಮೇಲೆ ಈ ತೀರ್ಥವನ್ನು ಗಂಗಾ, ಯಮುನಾ ಸರಸ್ವತಿಯ ಸ್ಮರಣೆ ಮಾಡುತ್ತ ನಾವು ಅದರ ಪ್ರಾಶನ ಮಾಡಬೇಕು. ಈ ಜಲವು ಗಂಗಾ, ಯಮುನಾ, ಸರಸ್ವತಿಯದ್ದೇ ಆಗಿದೆಯೆಂಬ ಭಾವವಿಡಬೇಕು. ಹಾಗೆಯೇ ನಮ್ಮ ಮೇಲೆ ಯಾರು ನಿಜವಾದ ಪ್ರೀತಿ ಮಾಡುವರು ಆ ಪ್ರತಿಯೊಬ್ಬರಿಗಾಗಿ ಕೂಡ ಈ ತೀರ್ಥವನ್ನು ಪ್ರಾಶನ ಮಾಡುತ್ತಿರುವೆಂಬ ಭಾವ ಇರಬೇಕು. ಆ ತೀರ್ಥವನ್ನು ತೆಗೆದುಕೊಂಡ ಮೇಲೆ ಅದೇ ಒದ್ದೆ ಕೈಯನ್ನು ಎರಡು ಕಣ್ಣು, ಆಜ್ನಾಚಕ್ರ ಹಾಗು ತಲೆಯ ಹಿಂದೆ ಅಂದರೆ Circle of Willis ನ ಸ್ಥಳದಲ್ಲಿ ಇಡಬೇಕು. ಈ ರೀತಿಯ ಅಭಿಷೇಕವನ್ನು ನಾವು ದಿನಂಪ್ರತಿ ಮಾಡಿದರೆ ಅದು ನಮಗಾಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದಂತಾಗಿರುವದು.

ಇದರ ಚಿಹ್ನೆಯನ್ನು ತೆಗೆಯುವಾಗ ಅದರ ಮೇಲಿನ ಭಾಗದಲ್ಲಿ ಶ್ರೀಗಂಗಾ ತ್ರಿವೇಣಿ ಬರೆಯಬೇಕು. ಅದರ ಕೆಳಗೆ ಮಧ್ಯಭಾಗದಲ್ಲಿ algorithm ನ ಚಿಹ್ನೆಯನ್ನು ತೆಗೆಯಬೇಕು. ಚಿಹ್ನೆಯ ಕೆಳಗೆ ನಮ್ಮ ಮೆಚ್ಚಿನ ದೇವರ ಹೆಸರನ್ನು ಬರೆಯಬೇಕು. ಕಾಗದದಮೇಲೆ, ವಸ್ತ್ರದಮೇಲೆ ಬರೆದು ದೇವರಿಡುವ ಸ್ಥಳದ ಕೆಳಗೆ ಈ algorithm ನ್ನು ಇಟ್ಟರೆ ಬಹಳ ಶ್ರೇಯಸ್ಕರವಾಗಿರುವದು. ಒಂದು ವೇಳೆ ನಾವು ಈ ಪ್ರತಿಮೆಗೆ ಅರಶಿನ ಹಾಗು ಕುಂಕುಮವನ್ನು ಹಚ್ಚಲು ಮರೆತರೂ ನಡೆಯಬಹುದು. ಕೇವಲ ನಾವು ಎನು ಮಾಡುತ್ತೇವೆ ಅದನ್ನು ಬಹಳ ಪ್ರೀತಿಯಿಂದ ಮಾಡಬೇಕು. ಈ algorithm ನ ಪ್ರತಿಮೆಯನ್ನು ನಮ್ಮ ವಾಹನದಲ್ಲಿಟ್ಟರು ಕೂಡ ನಡೆಯಬಹುದು, ಯಾಕೆಂದರೆ ಹೀಗೆ ಮಾಡುವುದರಿಂದ ಈ ಪ್ರತಿಮೆಯ ಮೇಲೆ ಸೂರ್ಯಕಿರಣದ ಅಭಿಷೇಕವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಸೂರ್ಯಕಿರಣದ ಅಭಿಷೇಕವನ್ನು ಬಹಳ ಪವಿತ್ರ ಹಾಗು ಸರ್ವೋತ್ತಮವೆಣಿಸಲಾಗುತ್ತದೆ. ಈ algorithm ನ್ನು ನಾವು ರಂಗೋಲಿಯಲ್ಲಿಯೂ ತೆಗೆಯಬಹುದು ಮತ್ತು ಇದರಲ್ಲಿ ಯಾವುದೇ ಬಣ್ಣವನ್ನು ಉಪಯೋಗಿಸಿದರೂ ಆಗಬಹುದು. ಈ ಗಂಗಾ-ತ್ರಿವೇಣಿಯ ಚಿಹ್ನೆಯನ್ನು ನಾವು ದೇವರನ್ನು ಯಾವ ವಸ್ತ್ರದ ಮೇಲೆ ಇಡುತ್ತೇವೆ ಆ ವಸ್ತ್ರದ ಕೆಳಗಿಟ್ಟರೆ ದೇವರಪೂಜೆ ಮಾಡುವ ಸಮಯದಲ್ಲಿ ನಮ್ಮ ಕೈಯಿಂದ ಯಾವುದೇ ಪ್ರಕಾರದ ತಪ್ಪಾದರೆ ಹೆದರುವ ಕಾರಣವಿಲ್ಲ.