ಸದ್ಗುರು ಶ್ರೀ ಬಾಪು ಅವರ ಕೃಪೆಯಿಂದ ನಾನು ಅವರ ಸಾನಿಧ್ಯಕ್ಕೆ ಬಂದೆ ಮತ್ತು ಶಾಶ್ವತವಾಗಿ ಅವರವನಾದೆ. ಈ ಸದ್ಗುರುಗಳ ಅಕಾರಣ ಕರುಣೆಯು ನನ್ನನ್ನು ಅನೇಕ ಬಾರಿ ಸಣ್ಣ-ಪುಟ್ಟ ಸಂಕಟಗಳಿಂದ ಕಾಪಾಡಿದೆ. ಸಾಕ್ಷಾತ್ ಕಾಲನನ್ನೇ (ಯಮನನ್ನೇ) ಹಿಂದಕ್ಕೆ ಕಳುಹಿಸಿ ಅವರು ನನ್ನ ಪತ್ನಿಗೆ (ಮಾನಸಿಗೆ) ಪುನರ್ಜನ್ಮ ನೀಡಿದರು.
16 ನವೆಂಬರ್ 2000 ದ ದಿನ, ಗುರುವಾರ ಅಂದರೆ ಬಾಪು ಅವರ ಪ್ರವಚನದ ದಿನ. ಮಾನಸಿ ಮನೆಯಲ್ಲೇ ಇದ್ದಳು. ನಾನು ಸಂಜೆ 4.45 ಕ್ಕೆ ಆಫೀಸ್‌ನಿಂದ ಹೊರಡುವಾಗ ಮನೆಗೆ ಫೋನ್ ಮಾಡಿದೆ. ಮತ್ತು ಮಾನಸಿಗೆ ದಾದರ್‌ನ ಆಂಟೋನಿಯಾ ಡಿಸಿಲ್ವಾ ಹೈಸ್ಕೂಲ್‌ಗೆ (ಪ್ರವಚನದ ಸ್ಥಳ) ಎಷ್ಟು ಗಂಟೆಗೆ ಬರುತ್ತೀಯಾ ಎಂದು ಕೇಳಿದೆ. ಅವಳು 6.00 ಗಂಟೆಯಷ್ಟರಲ್ಲಿ ಬರುತ್ತೇನೆ ಅಂದಳು. ನಾನು ಸಂಜೆ 5.30 ಕ್ಕೆ ಆಂಟೋನಿಯಾ ಡಿಸಿಲ್ವಾ ಹಾಲ್‌ಗೆ ಬಂದೆ ಮತ್ತು ಎಂದಿನಂತೆ ನನ್ನ ಕೆಲಸ ಮಾಡತೊಡಗಿದೆ. 5.45/6 ರ ಸುಮಾರಿಗೆ ನನಗೆ ಒಂದು ಮೆಸೇಜ್ ಬಂತು, ನಿನ್ನನ್ನು ತಕ್ಷಣ ಮನೆಗೆ ಕರೆದಿದ್ದಾರೆ ಅಂತ. ನನಗೆ ಮೊದಲು ಏನೂ ಅರ್ಥವಾಗಲಿಲ್ಲ. ಏಕೆಂದರೆ ನನ್ನನ್ನು ಮನೆಗೆ ಕರೆದಿದ್ದಾರೆ ಅಂದರೆ ಏನಾದರೂ ಸೀರಿಯಸ್ ಇರಬೇಕು. ಹಾಗಾಗಿ ನಾನು ಮತ್ತೆ ಮನೆಗೆ ಫೋನ್ ಮಾಡಿದೆ. ಫೋನ್ ಅನ್ನು ಅಪ್ಪ ಎತ್ತಿದರು. ಅಪ್ಪನ ಧ್ವನಿ ಕೇಳಿದರೆ ಅವರು ತುಂಬಾ ಹೆದರಿದಂತೆ ಅನಿಸುತ್ತಿತ್ತು. ಅವರು ನನಗೆ ಹೇಳಿದರು, ಮಾನಸಿಯ ಆರೋಗ್ಯ ತುಂಬಾ ಹದಗೆಟ್ಟಿದೆ. ಅವಳ ಹೊಟ್ಟೆ ಉಬ್ಬುತ್ತಿದೆ ಮತ್ತು ದೇಹ ತಣ್ಣಗಾಗುತ್ತಿದೆ. ನೀನು ತಕ್ಷಣ ಮನೆಗೆ ಬಾ ಅಂತ. ಈ ವಿಷಯವನ್ನು ನಾನು ಸುಚಿತ್‌ದಾದಾ ಅವರ ಕಿವಿಗೆ ಹಾಕಲು ಸ್ವಲ್ಪ ಹೊತ್ತು ಕಾದೆ. ಆದರೆ ಆ ದಿನ ದಾದಾ ಲೇಟಾಗಿ ಬಂದರು. ಅಷ್ಟರಲ್ಲಿ ಶ್ರೀ. ಅಜಯ್ ದಳವಿ ಮತ್ತು ನೀತಾ ದಳವಿ ಅವರು ನನಗೆ ತಕ್ಷಣ ಮನೆಗೆ ಹೋಗಲು ಹೇಳಿದರು ಮತ್ತು ''ನಾವು ದಾದಾ ಅವರ ಕಿವಿಗೆ ಹಾಕುತ್ತೇವೆ, ನೀನು ಹೊರಡು'' ಎಂದು ಅವರು ಹೇಳಿದರು.
ನಾನು 7.30 ಕ್ಕೆ ಮನೆಗೆ ತಲುಪಿದೆ. ಮಾನಸಿಯನ್ನು ನೋಡಿದರೆ ಅವಳು ನಿಶ್ಚೇಷ್ಟಿತಳಾಗಿ ಬಿದ್ದಿದ್ದಳು. ಅವಳ ಹೊಟ್ಟೆ ಉಬ್ಬಿತ್ತು. ದೇಹ ಪೂರ್ತಿ ತಣ್ಣಗಾಗಿತ್ತು ಮತ್ತು ಹೊಟ್ಟೆಗೆ ಸುಮ್ಮನೆ ಬೆರಳು ತಾಗಿಸಿದರೂ ಅವಳಿಗೆ ಪ್ರಾಣ ಹೋಗುವಷ್ಟು ನೋವಾಗುತ್ತಿತ್ತು. ಯಾರ ಮಾತಿನ ಶಬ್ದವೂ ಅವಳಿಗೆ ಸಹಿಸಿಕೊಳ್ಳಲಾಗುತ್ತಿರಲಿಲ್ಲ. ನಮ್ಮ ಫ್ಯಾಮಿಲಿ ಡಾಕ್ಟರ್ ಮೆಹತ ಕೂಡ ಬಂದಿದ್ದರು. ಆದರೆ ಅವರಿಗೂ ಏನೂ ಅರ್ಥವಾಗುತ್ತಿರಲಿಲ್ಲ (ರೋಗನಿರ್ಣಯವಾಗುತ್ತಿರಲಿಲ್ಲ). ಅವರು ನನಗೆ ಹೇಳಿದರು, ಇವಳನ್ನು ನಾವು ತಕ್ಷಣ ಹಾಸ್ಪಿಟಲ್‌ಗೆ ಕರೆದುಕೊಂಡು ಹೋಗೋಣ ಅಂತ. ಸುಚಿತ್‌ದಾದಾ ಅವರಿಂದಲೂ ಮೆಸೇಜ್ ಬಂತು, ಅವಳನ್ನು ತಕ್ಷಣ ಹಾಸ್ಪಿಟಲ್‌ನಲ್ಲಿ ಅಡ್ಮಿಟ್ ಮಾಡು ಮತ್ತು ಯಾವುದೇ ಚಿಂತೆ ಮಾಡಬೇಡ ಅಂತ. ದಾದಾ ಅವರ ಈ ಒಂದು ಮಾತಿನಿಂದ ನನಗೆ ತುಂಬಾನೇ ಧೈರ್ಯ ಬಂತು.
ನಮ್ಮ ಫ್ಯಾಮಿಲಿ ಡಾಕ್ಟರ್ ಕ್ರಿಟಿಕೇರ್ ಹಾಸ್ಪಿಟಲ್‌ಗೆ ಫೋನ್ ಮಾಡಿದರು ಮತ್ತು ಮಾನಸಿಯ ಬಗ್ಗೆ ತಿಳಿಸಿದರು. ಬಾಪು ಅವರ ಕೃಪೆಯಿಂದ ಆ ಸಮಯದಲ್ಲಿ ಹಾಸ್ಪಿಟಲ್‌ನಲ್ಲಿ ಸರ್ಜನ್, ಅನೆಸ್ತೇಶಿಯನ್, ಸೋನೋಗ್ರಫಿ ಮಾಡುವ ಎಲ್ಲಾ ಡಾಕ್ಟರ್‌ಗಳು ಲಭ್ಯವಿದ್ದರು. ಮನೆಗೆ ಆಂಬ್ಯುಲೆನ್ಸ್ 8.00 ಗಂಟೆಗೆ ಬಂತು. ಮಾನಸಿಯನ್ನು ಸ್ಟ್ರೆಚರ್ ಮೇಲೆ ಕರೆದೊಯ್ಯಲಾಯಿತು, ಏಕೆಂದರೆ ಅವಳ ನೋವು ತುಂಬಾನೇ ಹೆಚ್ಚಾಗಿತ್ತು. ಆಂಬ್ಯುಲೆನ್ಸ್‌ನಿಂದ ಹಾಸ್ಪಿಟಲ್‌ಗೆ ಕರೆದೊಯ್ಯುವಾಗ ಗಾಡಿ ಸಣ್ಣ ಗುಂಡಿಯ ಮೇಲೆ ಹೋದರೂ ಅವಳಿಗೆ ಪ್ರಾಣ ಹೋಗುವಷ್ಟು ನೋವಾಗುತ್ತಿತ್ತು. ನಮ್ಮಲ್ಲಿ ಯಾರಿಗೂ ಏನೂ ಅರ್ಥವಾಗುತ್ತಿರಲಿಲ್ಲ. ಅವಳ ಆ ಸ್ಥಿತಿಯನ್ನು ನೋಡಿ ನನ್ನ ಕಣ್ಣಲ್ಲೂ ನೀರು ಬಂತು. ಮನಸ್ಸಿನಲ್ಲಿ ಬಾಪು ಅವರ ತಾರಕ ಮಂತ್ರ ‘ಓಂ ಮನಃಸಾಮರ್ಥ್ಯದಾತಾ ಶ್ರೀ ಅನಿರುದ್ಧಾಯ ನಮಃ॥ ಸತತವಾಗಿ ನಡೆಯುತ್ತಲೇ ಇತ್ತು. ರಾತ್ರಿ 8.20 ಕ್ಕೆ ಅವಳನ್ನು ಹಾಸ್ಪಿಟಲ್‌ನಲ್ಲಿ ಅಡ್ಮಿಟ್ ಮಾಡಿದೆವು. ಮಾನಸಿಯ ಬ್ಲಡ್ ಪ್ರೆಷರ್ 80 ಕ್ಕೆ ಕುಸಿದಿತ್ತು. ಡಾಕ್ಟರ್‌ಗಳು ಸೋನೋಗ್ರಫಿ ಮಾಡಿದರು ಮತ್ತು ನನಗೆ ಹೇಳಿದರು, ಇದು ಎಕ್ಟೋಪಿಕ್ ಪ್ರೆಗ್ನೆನ್ಸಿಯ ಕೇಸ್ ಆಗಿದೆ. ಮಾನಸಿಯ ಹೊಟ್ಟೆಯಲ್ಲಿ ಸುಮಾರು 2 ಲೀಟರ್ ರಕ್ತವಿದೆ. ಹಾಗಾಗಿ ನಾವು ತಕ್ಷಣ ಇವಳ ಆಪರೇಷನ್ ಮಾಡಬೇಕಾಗುತ್ತದೆ. ಮತ್ತು ಅದಕ್ಕಾಗಿ 5 ಬಾಟಲಿ ರಕ್ತದ ಅವಶ್ಯಕತೆಯಿದೆ. ನಾನು ಸುಚಿತ್‌ದಾದಾ ಅವರ ಕಿವಿಗೆ ಈ ವಿಷಯ ಹಾಕಿದೆ. ಅವರು ನನಗೆ ಮತ್ತೆ ಧೈರ್ಯ ತುಂಬಿದರು. ಡಾ. ಅಥಂಗಪ್ರಭತಿ ಅವರು ನನಗೆ ಆಪರೇಷನ್ ಎಷ್ಟು ಸೀರಿಯಸ್ ಆಗಿದೆ ಎಂದು ಹೇಳಿದರು. ಈ ಕೇಸ್‌ನಲ್ಲಿ ಪೇಷೆಂಟ್ ಸಾಯುವ ಸಾಧ್ಯತೆಯೇ ಹೆಚ್ಚಿರುತ್ತದೆ. ಇಡೀ ದೇಹದಲ್ಲಿ ವಿಷ ಹರಡುತ್ತದೆ. ಡಾಕ್ಟರ್‌ಗಳು ನನ್ನನ್ನು ಅಲ್ಲೇ ಇರಲು ಹೇಳಿದರು. ಅದಲ್ಲದೆ, ಡಾಕ್ಟರ್‌ಗಳು ನಮಗೆ ರಕ್ತ ಸಿಗುವವರೆಗೂ ಆಪರೇಷನ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ನನ್ನ ತಂಗಿ ಮಲಾಡ್‌ನಲ್ಲಿರುವ ಬ್ಲಡ್ ಬ್ಯಾಂಕ್‌ಗೆ ರಕ್ತ ತರಲು ಹೋದಳು. ಡಾಕ್ಟರ್‌ಗಳು ಅವಳಿಗೆ, ರಕ್ತ ಸಿಕ್ಕ ತಕ್ಷಣ ಹೊರಡುವಾಗ ಫೋನ್ ಮಾಡು ಅಂದರೆ ನಾವು ಇಲ್ಲಿ ಆಪರೇಷನ್ ಶುರು ಮಾಡುತ್ತೇವೆ ಎಂದು ಹೇಳಿದ್ದರು. ಸರಿಯಾಗಿ 10 ಗಂಟೆಗೆ ನನ್ನ ತಂಗಿಯ ಫೋನ್ ಬಂತು, ರಕ್ತ ಸಿಕ್ಕಿದೆ ಅಂತ. ತಕ್ಷಣ ಮಾನಸಿಯನ್ನು ಓ.ಟಿ. ಯಲ್ಲಿ ಶಿಫ್ಟ್ ಮಾಡಲಾಯಿತು. ಆಗ ಡಾಕ್ಟರ್‌ಗಳು ಮಾನಸಿಗೆ ಕೇಳಿದರು, ನಿನ್ನ ಬಾಪು ಮೇಲೆ ನಿನಗೆ ಎಷ್ಟು ಶ್ರದ್ಧೆ ಇದೆ ಅಂತ. ಅವಳು ಏನೂ ಮಾತನಾಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಅದೇ ಪ್ರಶ್ನೆಯನ್ನು ಡಾಕ್ಟರ್‌ಗಳು ನನಗೆ ಕೇಳಿದರು, ನಿನ್ನ ಬಾಪು ಮೇಲೆ ನಿನಗೆ ಎಷ್ಟು ಶ್ರದ್ಧೆ ಇದೆ ಅಂತ. ನಾನು ಅವರಿಗೆ ಹೇಳಿದೆ 100%, ಏನೇ ಮಾಡಿದರೂ ಅದು ಬಾಪು ಮಾಡುತ್ತಾರೆ ಅಂತ, ಇದನ್ನು ಕೇಳಿ ಡಾಕ್ಟರ್ ನನಗೆ ಹೇಳಿದರು, ಹಾಗಾದರೆ ಏನೂ ಹೆದರಬೇಡ, ಮಾನಸಿಗೆ ಏನೂ ಆಗುವುದಿಲ್ಲ. ಮತ್ತು ಡಾಕ್ಟರ್ ಓ.ಟಿ. ಒಳಗೆ ಹೋದರು, ಆ ಸಮಯ 10.14 ಆಗಿತ್ತು.
10.20 ರ ಸುಮಾರಿಗೆ ನನ್ನ ತಂಗಿ ರಕ್ತ ತೆಗೆದುಕೊಂಡು ಬಂದಳು. ಮೂರೇ ಬಾಟಲಿ ರಕ್ತ ಸಿಕ್ಕಿತ್ತು. ಮತ್ತು ಅದೇ ಸುಮಾರಿಗೆ ಸುಚಿತ್‌ದಾದಾ ಅವರು ಡಾ. ಜಯೇಶ್ ಶಾ ಅವರನ್ನು ಕಳುಹಿಸಿದರು. ಅವರು ಕೂಡ ನನಗೆ ಧೈರ್ಯ ಹೇಳಿದರು ಮತ್ತು ಓ.ಟಿ. ಒಳಗೆ ಹೋದರು. 11.45 ರ ಸುಮಾರಿಗೆ ಡಾಕ್ಟರ್ ಹೊರಗೆ ಬಂದರು ಮತ್ತು ಆಪರೇಷನ್ ಚೆನ್ನಾಗಿ ಆಯಿತು ಎಂದು ಹೇಳಿದರು. ಯಾವುದೇ ಚಿಂತೆ ಮಾಡಬೇಡ. ಡಾಕ್ಟರ್‌ಗಳು ನನ್ನನ್ನು ಓ.ಟಿ. ಯೊಳಗೆ ಕರೆದರು ಮತ್ತು ಮಾನಸಿಯ ಹೊಟ್ಟೆಯಿಂದ ತೆಗೆದ ರಕ್ತವನ್ನು ತೋರಿಸಿದರು. ಉಪ್ಪಿನಕಾಯಿಯ ದೊಡ್ಡ ಜಾಡಿಯ ಸೈಜ್‌ನ ಬಾಟಲಿ ತುಂಬುವಷ್ಟು ರಕ್ತವನ್ನು ತೋರಿಸಿದರು ಮತ್ತು ಒಂದು ದೊಡ್ಡ ಡಿಶ್‌ನಷ್ಟು ರಕ್ತದ ಕ್ಲಾಟ್ (ಜೆಲ್ಲಿಯಂತೆ ದಪ್ಪನಾದ) ಅನ್ನು ತೋರಿಸಿದರು. ಮತ್ತು ಹೇಳಿದರು, ಎಕ್ಟೋಪಿಕ್ ಪ್ರೆಗ್ನೆನ್ಸಿಯ ಕೇಸ್‌ನಲ್ಲಿ ಟ್ಯೂಬ್ ಒಡೆದರೆ ರಕ್ತಸ್ರಾವ ಶುರುವಾಗುತ್ತದೆ. ಅದೇ ರೀತಿ ಬ್ಲಡ್ ಪ್ರೆಷರ್ ಕೂಡ ಕುಸಿಯುತ್ತದೆ. ಈ ಕೇಸ್‌ನಲ್ಲಿ ನೋವು ಎಷ್ಟೊಂದು ಪ್ರಾಣಾಂತಿಕವಾಗಿರುತ್ತದೆ ಅಂದರೆ ಇದರಲ್ಲಿ ಬ್ರೈನ್ ಹ್ಯಾಮರೇಜ್ ಆಗುವ ಸಾಧ್ಯತೆ ಕೂಡ ಇರುತ್ತದೆ ಮತ್ತು ಇಂತಹ ಕೇಸ್‌ನಲ್ಲಿ ಪೇಷೆಂಟ್ ಖಂಡಿತವಾಗಿಯೂ ಸಾಯುತ್ತಾರೆ. ಮಾನಸಿಯ ಟ್ಯೂಬ್ ಬರ್ಸ್ಟ್ ಆಗಿತ್ತು.
ಅಂದು ಬಾಪು ಅವರ ಪ್ರವಚನದ ನಂತರ ದರ್ಶನವನ್ನು ಮಧ್ಯದಲ್ಲೇ ನಿಲ್ಲಿಸಿ ಬಾಪು ಮನೆಗೆ ಹೊರಟುಹೋದರು. ಯಾರಿಗೂ ಏನೂ ಅರ್ಥವಾಗಲಿಲ್ಲ. ಅದೇ ಸಮಯಕ್ಕೆ ಆ ಕಡೆ ಮಾನಸಿಯನ್ನು ಓ.ಟಿ. ಒಳಗೆ ತೆಗೆದುಕೊಂಡಿದ್ದರು. ಮಾನಸಿಯ ಬ್ಲಡ್ ಪ್ರೆಷರ್ 60 ಕ್ಕೆ ಕುಸಿದಿತ್ತು. ಅತ್ತ ಬಾಪು ಅವರ ಬ್ಲಡ್ ಪ್ರೆಷರ್ ಕೂಡ ಕುಸಿದಿತ್ತು. ಮಾನಸಿಯ ಇಡೀ ಕಾಯಿಲೆಯನ್ನು ಅವರು ತಮ್ಮ ಮೇಲೆ ತೆಗೆದುಕೊಂಡಿದ್ದರು.
ಏಳು ದಿನಗಳ ನಂತರ ಮಾನಸಿಯನ್ನು ಮನೆಗೆ ಕರೆತಂದೆವು, ಆಮೇಲೆ ನಾನು ಬಾಪು ಅವರನ್ನು ಭೇಟಿಯಾದಾಗಲೂ ನಾನು ತುಂಬಾ ಅತ್ತೆ. ನಾನು ಬಾಪು ಅವರಿಗೆ ಹೇಳಿದೆ, ಬಾಪು ನಿಮಗೆ ತುಂಬಾ ತ್ರಾಸಾಗಿರಬೇಕಲ್ವಾ ಅಂತ. ಆಗ ಬಾಪು ನಕ್ಕು ಒಂದೇ ಮಾತು ಹೇಳಿದರು, ''ಯಾರು ಬಂದಿದ್ದನೋ, ಅವನನ್ನು ನಾನು ವಾಪಸ್ ಕಳುಹಿಸಲೇಬೇಕಿತ್ತು.''
| Hindi | English |
|---|---|
