ಮೃತ್ಯುವಿನ ದ್ವಾರದಿಂದ ಮರಳಿ ಬಂದ ತಾಯಿ- ಪೂಜಾಬಾಯಿ ಮೋರೆ, ಠಾಣೆ

ಮೃತ್ಯುವಿನ ದ್ವಾರದಿಂದ ಮರಳಿ ಬಂದ ತಾಯಿ

ನಿಜವಾಗಿಯೂ, ಈ ಬಾಪು ಅವರ ಚರಣಗಳಿಗೆ ಯಾರು ಅನನ್ಯಭಾವದಿಂದ ಶರಣಾಗುತ್ತಾರೋ, ಅವರ ದೋಣಿ ಪಾರಾಗುತ್ತದೆ ಎಂಬ ಅನುಭವವನ್ನು ಎಲ್ಲಾ ಬಾಪುಭಕ್ತ ಶ್ರದ್ಧಾವಂತರು ಹೇಳುವುದನ್ನು ನಾವು ನೋಡುತ್ತೇವೆ. ನಮ್ಮ ಬಾಪು ನಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ, ನಮ್ಮ ಸುಖ-ದುಃಖಗಳಲ್ಲಿ ನಮ್ಮ ಜೊತೆಗಿರುತ್ತಾರೆ, ನಮಗೆ ಮನಸ್ಸಿನ ಸಾಮರ್ಥ್ಯವನ್ನು ನೀಡುತ್ತಾರೆ ಎಂಬ ಶ್ರದ್ಧಾವಂತರ ನಂಬಿಕೆ ಎಂದಿಗೂ ಅಲುಗಾಡುವುದಿಲ್ಲ. ಪ್ರಾರಬ್ಧಕ್ಕನುಗುಣವಾಗಿ ದುಃಖವು ಬಂದೇ ಬರುತ್ತದೆ, ಆದರೆ ಯಾರು ಸದ್ಗುರುಗಳ ಚರಣಗಳಲ್ಲಿ ಅನನ್ಯಭಾವದಿಂದ ನಂಬಿಕೆಯಿಡುತ್ತಾರೋ, ಅವರಿಗೆ ತಮ್ಮ ಭಯ-ದುಃಖದ ಭಾರ ಎಂದಿಗೂ ಅನಿಸುವುದಿಲ್ಲ.

----------------------

2002 ನೇ ಇಸವಿಯಿಂದ ನಾನು ಬಾಪು ಪರಿವಾರಕ್ಕೆ ಬಂದೆ. ಬಾಪು ಅವರ ಅನೇಕ ಸಣ್ಣ-ಪುಟ್ಟ ಅನುಭವಗಳು ನನಗಾಗಿವೆ. 2009 ನೇ ಇಸವಿಯ ಒಂದು, ನನಗೆ ಎಂದಿಗೂ ಮರೆಯಲಾಗದಂತಹ ಅನುಭವವಿದು.

ಮುಂದೆ ನಡೆಯಲಿರುವ ಘಟನೆಯ ಬಗ್ಗೆ ನಮಗೆ ಮೊದಲೇ ತಿಳಿದಿರುವುದಿಲ್ಲ. ಆದರೆ ಆ ಸದೈವ-ಜಾಗೃತ ಸದ್ಗುರುತತ್ತ್ವವು ತನ್ನ ಭಕ್ತರ ಮೇಲಿರುವ ಸಂಕಟರೂಪಿ ಬಲೆಯನ್ನು ತೆಗೆದುಹಾಕಿ ಅವರನ್ನು ಮುಕ್ತಗೊಳಿಸುತ್ತದೆ. ಹೀಗೆಯೇ ಒಂದು ಶನಿವಾರ ನಾನು ನಮ್ಮ ಉಲ್ಲಾಸನಗರ ಉಪಾಸನಾ ಕೇಂದ್ರದಿಂದ ಎಂಟು-ಎಂಟೂವರೆ ಸುಮಾರಿಗೆ ಮನೆಗೆ ಹೋದೆ. ಆಮೇಲೆ 5 ನಿಮಿಷಗಳ ನಂತರ ನನ್ನ ಅಮ್ಮನ ಫೋನ್ ಊರಿನಿಂದ ಬಂತು. ಅಮ್ಮನ ಜೊತೆ ನಾನು ಬಹಳ ಹೊತ್ತು ಫೋನ್‌ನಲ್ಲಿ ಮಾತನಾಡಿದೆ.

ನನ್ನ ಗಂಡನಿಗೆ ಪ್ರತಿದಿನ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗಿತ್ತು, ಹಾಗಾಗಿ ನಾನು ಒಂದೂವರೆ ವರ್ಷ ಊರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಅದರಿಂದಾಗಿ ನನ್ನ ಮತ್ತು ಅಮ್ಮನ ಭೇಟಿಯಾಗಿರಲಿಲ್ಲ. ನಾವು ಹೀಗೆಯೇ ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ಆ ದಿನ ಅಮ್ಮ ಅಂದಳು, ಅಳಿಯನ ಆರೋಗ್ಯ ಸರಿಯಾಗಿದ್ದರೆ, ಭೇಟಿಯಾಗಲು ಊರಿಗೆ ಬಾ. ನನಗೆ ನಿನ್ನ ನೆನಪು ತುಂಬಾ ಬರುತ್ತಿದೆ. ನಾನು ಸರಿ ಎಂದು ಹೇಳಿ ಫೋನ್ ಇಟ್ಟೆ. ತಮ್ಮನ ಫೋನ್ ಬಂತು. ಸಿಕ್ಕ ಟ್ರೈನ್ ಹಿಡಿದುಕೊಂಡು ಊರಿಗೆ ಬಾ ಎಂದು ತಮ್ಮ ಹೇಳಿದ ಮತ್ತು ಅವನು ಫೋನ್ ಇಟ್ಟುಬಿಟ್ಟ.

ನನಗೆ ಏನೂ ಅರ್ಥವಾಗುತ್ತಿರಲಿಲ್ಲ. ನಮ್ಮ ಊರು ಚಾಲೀಸ್ ಗಾಂವ್ ತಾಲೂಕಿನಲ್ಲಿದೆ. ಕಲ್ಯಾಣ್‌ನಿಂದ ಒಂದೂವರೆಯ ಟ್ರೈನ್ ಹಿಡಿದು ನಾನು ಊರಿಗೆ ಹೋಗಲು ಹೊರಟೆ. ದಾರಿಯಲ್ಲಿ ಬಾಪು ಅವರ ಸ್ಮರಣೆ ನಡೆಯುತ್ತಲೇ ಇತ್ತು. ನಾನು ಚಾಲೀಸ್ ಗಾಂವ್‌ನಲ್ಲಿ ಇಳಿದೆ. ಸಣ್ಣ ತಮ್ಮ ನನ್ನನ್ನು ಕರೆದೊಯ್ಯಲು ಬೈಕ್ ತೆಗೆದುಕೊಂಡು ಬಂದಿದ್ದ. ನಾನು ತಮ್ಮನ ಜೊತೆ ಹೊರಟೆ. ಮನೆಗೆ ತಲುಪಿದರೆ ಮನೆಯ ಅಂಗಳದಲ್ಲಿ ಊರಿನ ಜನ, ನೆಂಟರು ಎಲ್ಲರೂ ಸೇರಿದ್ದರು. ಎಲ್ಲರೂ ನನಗಾಗಿ ಕಾಯುತ್ತಿದ್ದರು. ನಾನು ಅಮ್ಮನ ಕೋಣೆಗೆ ಹೋದೆ, ಅಲ್ಲಿ ಇಬ್ಬರೂ ತಂಗಿಯರು ಅಳಲು ಶುರುಮಾಡಿದರು. ಅಮ್ಮ ಈಗ ಯಾವ ಪ್ರತಿಕ್ರಿಯೆಯನ್ನೂ ಕೊಡುತ್ತಿರಲಿಲ್ಲ. ಅವರು ನನಗೆ ಅಮ್ಮನಿಗೆ ನೀರು ಕುಡಿಸಲು ಹೇಳಿದರು. ನಾನು ಅಮ್ಮನಿಗೆ ನೀರು ಕುಡಿಸಲು ಎಚ್ಚರಿಸಬೇಕೆಂದು ಅವಳ ಕಿವಿಯ ಹತ್ತಿರ ಜೋರಾಗಿ ಕೂಗಿದೆ. ಐದು ನಿಮಿಷಗಳ ನಂತರ, ನಿದ್ದೆಯಿಂದ ಎಚ್ಚರಾಗುವ ಹಾಗೆ ಅಮ್ಮ ಎಚ್ಚರಾದಳು ಮತ್ತು ಅಂದಳು, ಅಕ್ಕಾ! ಬಂದ್ಯಾ? ನನಗೆ ನೀರು ಕೊಡು. ಎಬ್ಬಿಸಿ ಕೂರಿಸು. ನಾನು ಅಮ್ಮನನ್ನು ಕೂರಿಸಿದೆ. ನನ್ನ ಕೈಯಿಂದ ಚಮಚ-ಚಮಚ ಮಾಡುತ್ತಾ ಒಂದು ಲೋಟದಷ್ಟು ನೀರು ಅಮ್ಮ ಕುಡಿದಳು ಮತ್ತು ನನಗೆ ಅಂದಳು, ನೀನು ರಾತ್ರಿಯ ಗಾಡಿಯಲ್ಲಿ ಬಂದ್ಯಾ? ನಾನು ಹೌದು ಅಂದೆ.

ಅಮ್ಮ ಗೊಂದಲದ ಸ್ಥಿತಿಯಲ್ಲೇ ಇದ್ದಳು. ಪ್ರಜ್ಞೆ ತಪ್ಪಿದ್ದಾಗ ಅವಳು ಒಂದು ಕನಸಿನಂತಹ ದೃಶ್ಯವನ್ನು ನೋಡಿದ್ದಳು ಮತ್ತು ಅದು ಅವಳಿಗೆ ಚೆನ್ನಾಗಿ ನೆನಪಿತ್ತು, ಆದರೆ ಅವಳಿಗೆ ಅದರ ಅರ್ಥ ತಿಳಿದಿರಲಿಲ್ಲ. ಅದರ ಬಗ್ಗೆ ಮುಂದೆ ಅಮ್ಮ ಹೇಳತೊಡಗಿದಳು, ನಾನು ಒಂದು ಬಸ್‌ನಲ್ಲಿ ಕುಳಿತಿದ್ದೆ. ನಮ್ಮ ಬಸ್ ಪೂರ್ತಿ ತುಂಬಿತ್ತು. ಮಧ್ಯದಲ್ಲೇ ಬಸ್ ಇದ್ದಕ್ಕಿದ್ದಂತೆ ನಿಂತಿತು. ಒಬ್ಬ ಆಜಾನುಬಾಹು, ಖಾಕಿ ಬಟ್ಟೆ ಹಾಕಿದ್ದ ಮನುಷ್ಯ ಬಸ್ ಒಳಗೆ ಬಂದ ಮತ್ತು ನೇರವಾಗಿ ನನ್ನ ಬಳಿ ಬಂದು ನನಗೆ ಅಂದ, ಅಜ್ಜಿ, ನಿಮ್ಮ ಟಿಕೆಟ್ ಹರಿದಿಲ್ಲ ಮತ್ತು ಹೀಗೆ ಹೇಳಿ ಅವನು ನನ್ನ ಕೈ ಹಿಡಿದು ಬಸ್‌ನಿಂದ ಕೆಳಗೆ ಇಳಿಸಿದ ಮತ್ತು ಬಸ್ ತೆಗೆದುಕೊಂಡು ಹೊರಟುಹೋದ. ಅಮ್ಮನ ಮಾತನ್ನು ಎಲ್ಲರೂ ದಂಗಾಗಿ ಕೇಳುತ್ತಿದ್ದರು. ಇದ್ದಕ್ಕಿದ್ದಂತೆ ಮರುದಿನ ಬೆಳಗ್ಗೆ 8 ಗಂಟೆಗೆ, ಈ ಐದು ನಿಮಿಷಗಳ ಮೊದಲು ಬಹುತೇಕ ಸಾಯುವ ಸ್ಥಿತಿಯಲ್ಲಿದ್ದ ಅಮ್ಮ ಚೆನ್ನಾಗಿ, ಸ್ಪಷ್ಟವಾಗಿ ಮಾತನಾಡುತ್ತಿದ್ದಳು. ಇದೇನು ನಡೆಯುತ್ತಿದೆ ಎಂದು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಆದರೆ ನನ್ನ ಪ್ರಕಾರ ನನ್ನ ಜೊತೆ ಮಾತನಾಡುವುದಕ್ಕಾಗಿಯೇ ಅಮ್ಮ ವಾಪಸ್ ಬಂದಿದ್ದಳು....ಅಲ್ಲ, ಆ ಪರಮದಯಾಳು ಸದ್ಗುರುತತ್ತ್ವವೇ ನಮ್ಮ ಭೇಟಿ ಮಾಡಿಸುವುದಕ್ಕಾಗಿ ಅವಳನ್ನು ವಾಪಸ್ ಕರೆತಂದಿತ್ತು, ಎಂಬುದು ನನ್ನ ದೃಢವಾದ ನಂಬಿಕೆ. ಯಾಕೆಂದರೆ ಕಳೆದ ಒಂದೂವರೆ ವರ್ಷದಲ್ಲಿ ಅವಳು ನನ್ನನ್ನು ನೋಡದ ಕಾರಣ ನನ್ನ ಜೊತೆ ಪ್ರತ್ಯಕ್ಷವಾಗಿ ಮಾತನಾಡುವ ಅವಳ ತೀವ್ರ ಇಚ್ಛೆಯಿತ್ತು, ಅದನ್ನು ಆ ಸದ್ಗುರುತತ್ತ್ವವು ಪೂರೈಸಿತು. ಅವಳು ಬಾಪು ಅವರನ್ನು ಎಂದಿಗೂ ನೋಡಿರಲಿಲ್ಲ. ಆದರೆ ಅವಳು ಬಹಳ ಮುಗ್ಧ ಭಕ್ತೆಯಾಗಿದ್ದಳು. ಅವಳು ನನಗೆ ಅಂದಳು, ನನಗೆ ಮುತ್ತೈದೆಯಾಗಿ ಹೋಗಬೇಕಾಗಿದೆ. ಅವರು ನನಗೆ ಆ ರೀತಿ ಸಾವು ಕೊಡುತ್ತಾರಾ? ನಾನು ತಕ್ಷಣ ಅಂದೆ, ಹೌದು, ಅವರು ಹಾಗೆಯೇ ಮಾಡುತ್ತಾರೆ...ಮತ್ತು ಹಾಗೆಯೇ ಆಯಿತು. ಅದರ ನಂತರ ಐದೇ ದಿನಗಳಲ್ಲಿ ಅಂದರೆ 7 ಆಗಸ್ಟ್ 2009 ರಂದು ಅವಳು ನಮ್ಮನ್ನು ಬಿಟ್ಟು ಹೋದಳು. ಈ 5 ದಿನಗಳಲ್ಲಿ ನಾವು ತುಂಬಾ ಮಾತನಾಡಿದೆವು. ಈ ರೀತಿಯಾಗಿ ಬಾಪ್ಪಾ, ತಾಯಿ ಮತ್ತು ಮಗಳ ಕೊನೆಯ ಭೇಟಿಯನ್ನು ಮತ್ತೆ ಮಾಡಿಸಿದರು. ಬಾಪು ಗ್ರೇಟ್ ಆಗಿದ್ದಾರೆ. ಬಾಪುರವರ ಚರಣಗಳಿಗೆ ಯಾರು ಶರಣು ಬಂದರೋ ಅವರಿಗೆ ಯಾವುದರ ಕೊರತೆಯೂ ಆಗುವುದಿಲ್ಲ.

ಎರಡನೇ ಅನುಭವ...

2013 ರ ಅನುಭವವಿದು. ನಾನು ಮತ್ತು ನನ್ನ ತಂಗಿಯ ಮಗಳು ಮನ್ಮಾಡ್‌ಗೆ ಟ್ರೈನ್‌ನಲ್ಲಿ ಹೋಗಲು ಹೊರಟಿದ್ದೆವು. ನಿಜ ಹೇಳಬೇಕೆಂದರೆ ಆ ಟ್ರೈನ್‌ನಲ್ಲಿ ಯಾವಾಗಲೂ ವಿಪರೀತ ನೂಕುನುಗ್ಗಲು ಇರುತ್ತದೆ. ನಾನು ಮನೆಯಿಂದ ಹೊರಡುವಾಗ ಬಾಪು ಅವರಿಗೆ ಮನಸ್ಸಿನಲ್ಲೇ ಅಂದುಕೊಂಡೆ, ಬಾಪು, ನನಗೆ ಕೂರಲು ಸಿಂಗಲ್ ಸೀಟ್ ಆದರೂ ಸಿಗುವಂತೆ ಮಾಡು ಎಂದು ಹೇಳಿ ಮನೆಯಿಂದ ಹೊರಬಿದ್ದೆ. ಕಲ್ಯಾಣ್‌ನಲ್ಲಿ ನಾಲ್ಕನೇ ನಂಬರ್ ಪ್ಲಾಟ್‌ಫಾರ್ಮ್‌ಗೆ ಬಂದೆವು. ಪುಷ್ಪಕ್ ಮೇಲ್ ಪ್ಲಾಟ್‌ಫಾರ್ಮ್‌ಗೆ ಬಂತು. ನಾವು ಲೇಡೀಸ್ ಡಬ್ಬಿಯ ಹತ್ತಿರ ಬಂದೆವು. ಡಬ್ಬಿಯಲ್ಲಿ ವಿಪರೀತ ಗದ್ದಲವಿತ್ತು. ಕೂರಲು ಜಾಗ ಹುಡುಕುತ್ತಿದ್ದೆವು. ಎಲ್ಲರೂ ಹೇಳುತ್ತಿದ್ದರು - ಮುಂದೆ ಜಾಗವಿಲ್ಲ, ಇಲ್ಲೇ ನಿಲ್ಲಿ ಆದರೂ ನಾವು ಛಲದಿಂದ ಮುಂದೆ ಸರಿಯುತ್ತಾ ಒಳಗೆ ಹೋಗುತ್ತಿದ್ದೆವು. ಒಂದು ಸಿಂಗಲ್ ಸೀಟ್ ಮೇಲೆ ಒಬ್ಬ 12-13 ವರ್ಷದ ಹುಡುಗ ಕೂತಿದ್ದ. ನನ್ನನ್ನು ನೋಡಿದೊಡನೆ ಅವನು ಎದ್ದು ನನಗೆ ಕೂರಲು ಜಾಗ ಕೊಟ್ಟ. ನಾನು ಕೂತೆ ಮತ್ತು ಬ್ಯಾಗ್ ಅನ್ನು ತೊಡೆಯ ಮೇಲೆ ಇಟ್ಟುಕೊಂಡೆ ಮತ್ತು ಆ ಹುಡುಗನನ್ನು ಹುಡುಕತೊಡಗಿದೆ, ಆದರೆ ಹುಡುಗ ಎಲ್ಲೂ ಕಾಣಿಸಲಿಲ್ಲ. ಎದುರಿನ ಸೀಟಿನಲ್ಲಿದ್ದ ಮಹಿಳೆಗೆ - ಅವನು ನಿಮ್ಮ ಮಗನಾ ಎಂದು ಕೇಳಿದೆ. ಆಗ ಆ ಸ್ತ್ರೀ ಇಲ್ಲ ಎಂದು ಹೇಳಿದಳು. ಅಷ್ಟರಲ್ಲೇ ಅವಳಿಗೆ ನೆನಪಾಯಿತು ಆ ಹುಡುಗ ಟ್ರೈನ್ ಹೊರಡುವಾಗ ದಾದರ್‌ನಲ್ಲಿ ಹತ್ತಿದ್ದ ಎಂದು. ಈ ಮಾತು ಕೇಳುತ್ತಲೇ ನನ್ನ ತಲೆಯಲ್ಲಿ ಯೋಚನೆ ಬಂತು ಆ ಹುಡುಗ ಯಾರೇ ಆಗಿರಲಿ, ನನಗಂತೂ ಅವನು ಬೇರೆ ಯಾರೂ ಆಗಿರದೆ ಸಾಕ್ಷಾತ್ ನನ್ನ ಬಾಪು ಅವರೇ ಆಗಿದ್ದರು, ಅವರು ಈ ವಿಪರೀತ ಗದ್ದಲದಲ್ಲೂ ನನಗೆ ಕೂರಲು ವ್ಯವಸ್ಥೆ ಮಾಡಿಕೊಟ್ಟರು. ಇಲ್ಲದಿದ್ದರೆ ದಾದರ್‌ನಲ್ಲಿ ಹತ್ತಿ ಕಲ್ಯಾಣ್‌ನಲ್ಲಿ ಯಾರು, ಯಾತಕ್ಕಾಗಿ, ಯಾರಿಗೆ ಕೇಳದೆಯೇ ಜಾಗ ಬಿಟ್ಟುಕೊಡುತ್ತಾರೆ? ಮತ್ತು ಮುಖ್ಯವಾಗಿ ಆ ಹುಡುಗ ನಂತರದ ಪ್ರಯಾಣದಲ್ಲಿ ಕಾಣಿಸಲೇ ಇಲ್ಲ.

ನಿಜಕ್ಕೂ, ಬಾಪುರಾಯಾ! ಎಷ್ಟು ಕಷ್ಟಪಡುತ್ತೀಯಾ ನಮಗಾಗಿ!

ನಾನು ಅಂಬಜ್ಞಳಾಗಿದ್ದೇನೆ.

Hindi English