ಸ್ವಂತ ಪರಿಶ್ರಮ ಮತ್ತು ಆಸಕ್ತಿಯಿಂದ ಮಾಡಿದ ಸೇವೆಗೆ, ನಂಬಿಕೆ ಮತ್ತು ಮನಃಪೂರ್ವಕ ಭಕ್ತಿಯ ಬೆಂಬಲ ಸಿಕ್ಕರೆ ಒಬ್ಬ ಶ್ರದ್ಧಾವಂತನಿಗೆ ಎಷ್ಟು ಸುಂದರವಾದ ಅನುಭವ ಸಿಗಬಹುದು ಎಂಬುದನ್ನು ತಿಳಿಸುವ ಹೃದಯಸ್ಪರ್ಶಿ ಅನುಭವವಿದು.
ಹರಿ ಓಂ. ನಾನು ವಿಜಯಸಿಂಗ್ ಶಿಂಧೆ, ವಾನೋಡೆ ಉಪಾಸನಾ ಕೇಂದ್ರ. ನಾನು 2003 ರಿಂದ ಮಾಡರ್ನ್ ಹೈಸ್ಕೂಲ್, ಪುಣೆಯಲ್ಲಿ ಉಪಾಸನೆಗೆ ಹೋಗುತ್ತಿದ್ದೆ. ನನ್ನ ಮುಂದಿನ ಅನುಭವವನ್ನು ಹೇಳುವಾಗ ನಾನು ಪೂರ್ಣ ನಂಬಿಕೆಯಿಂದ ಹೇಳುತ್ತೇನೆ, ನಮ್ಮ ಬಾಪೂ ಪ್ರತಿ ಬಾರಿಯೂ ನಮ್ಮ ಜೊತೆಗೆ ಇದ್ದೆ ಇರುತ್ತಾರೆ.
ಒಮ್ಮೆ ನಮ್ಮ ಕೇಂದ್ರದ ವತಿಯಿಂದ ನಮಗೆ, ಗೋವಿದ್ಯಾಪೀಠಮ್, ಕೋಠಿಂಬೆ, ಕರ್ಜತ್‌ಗೆ ಸೇವೆಗಾಗಿ ಹೋಗಬೇಕಿತ್ತು. ಕೋಠಿಂಬೆ ಸೇವೆಯ ಸಂದೇಶ ನನಗೆ ಬಂದಾಗ ಸಂಜೆ 5 ಗಂಟೆಗೆ ನಾನು ನನ್ನ ಕೆಲಸದಲ್ಲಿದ್ದೆ. ಮರುದಿನ ಬೆಳಗ್ಗೆ ಹೊರಡಬೇಕಿತ್ತು. ಸಂಜೆ ಸಿಂಹಗಡ ರಸ್ತೆಯಿಂದ ಮನೆಗೆ ವಾಪಸ್ ಬರುವಾಗ ನನ್ನ ಸ್ಕೂಟರ್ ಸ್ಲಿಪ್ ಆಗಿ ನನ್ನ ಬಲಗೈ ಫ್ರಾಕ್ಚರ್ ಆಯಿತು. ನನಗೆ ಕೈ ಅಲ್ಲಾಡಿಸಲು ಕೂಡ ಆಗುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲೂ ಬೆಳಗ್ಗೆ ಬೇಗ ಎದ್ದು ನಾವು ಕೋಠಿಂಬೆಗೆ ಹೋಗಲು ಹೊರಟೆವು. ಅಲ್ಲಿ ಸೇವೆ ಮಾಡುವಾಗ ಒಂದು ಕಡೆ ಗುಂಡಿ ತೋಡಬೇಕಿತ್ತು. ಅದಕ್ಕಾಗಿ ದೊಡ್ಡ ಕಲ್ಲೊಂದನ್ನು ಒಡೆಯಬೇಕಿತ್ತು. ಈಗ ನನ್ನ ಕೈಯೋ ಊದಿಕೊಂಡಿದೆ. ಇಂತಹ ಸ್ಥಿತಿಯಲ್ಲಿ ನಾನು ಆ ಗುಂಡಿಯನ್ನು ತೋಡುವುದು ಹೇಗೆ? ಆದರೆ ನನಗೂ ಸೇವೆ ಮಾಡಲೇಬೇಕಿತ್ತು, ಏಕೆಂದರೆ ನಾನು ಸೇವೆಗಾಗಿಯೇ ಕೋಠಿಂಬೆಗೆ ಹೋಗಿದ್ದೆ. ಆಗ ನಾನು ಬಾಪೂ ಅವರ ಹೆಸರು ಹೇಳಿ ನೇರವಾಗಿ ಕೆಲಸ ಪ್ರಾರಂಭಿಸಿದೆ. ಆಶ್ಚರ್ಯವೆಂದರೆ ನನಗೆ ಯಾವುದೇ ತೊಂದರೆಯಾಗಲಿಲ್ಲ ಮತ್ತು ಬಾಪೂ ಅವರೇ ನನ್ನ ಕೈಯಿಂದ ಸೇವೆಯನ್ನು ಮಾಡಿಸಿಕೊಂಡರು. ಬಾಪೂ ಅವರ ಅಗಾಧ ಲೀಲೆಯಿಂದಾಗಿ ನನ್ನ ಮತ್ತು ಸೇವೆಯ ಮಧ್ಯೆ ನನ್ನ ನೋವು ಬರಲಿಲ್ಲ. ನಾನು ಅಂಬಜ್ಞನಾಗಿದ್ದೇನೆ
ಕರ್ಜತ್‌ಗೆ ಬೆಳಗ್ಗೆ ಬೇಗ ತಲುಪಿದ್ದರಿಂದ ನಮಗೆ ತಿಂಡಿ ತಿನ್ನಲು ಹೇಳಿದರು. ನಾವೆಲ್ಲರೂ ತಿಂಡಿ ತಿನ್ನಲು ಹೋದೆವು. ನಾನು ವಡಾ ಸಾಂಬಾರ್ ತಿನ್ನಲು ತೆಗೆದುಕೊಂಡೆ. ಸಾಂಬಾರ್‌ನಲ್ಲಿ ನುಗ್ಗೆಕಾಯಿ ಇತ್ತು. ಮೊದಲಿನಿಂದಲೂ ನುಗ್ಗೆಕಾಯಿ ತಿಂದರೆ ನನ್ನ ಮೈಮೇಲೆ ಗಂಟುಗಳು ಏಳುತ್ತಿದ್ದವು. ನನಗೆ ಅದರ ಅಲರ್ಜಿ ಇತ್ತು. ತಲೆಯ ಕೂದಲಿನಿಂದ ಹಿಡಿದು ಕಾಲಿನ ಉಗುರಿನವರೆಗೆ ದೊಡ್ಡ ದೊಡ್ಡ ಕೆಂಪು ಕೆಂಪು ದದ್ದುಗಳು ಏಳುತ್ತಿದ್ದವು. ನನ್ನ ಇಡೀ ಮೈ ಕೆಂಪಗಾಗುತ್ತಿತ್ತು. ಹಾಗೇನಾದರೂ ಆದರೆ ಡಾಕ್ಟರ್ ಚಿಕಿತ್ಸೆ ವಿನಃ ಬೇರೆ ದಾರಿಯೇ ಇರುತ್ತಿರಲಿಲ್ಲ. ಇಂಜೆಕ್ಷನ್ ಅಂತೂ ಕೊಡಿಸಲೇಬೇಕಾಗುತ್ತಿತ್ತು. ಅದಾದ ನಂತರ ಸುಮಾರು ಅರ್ಧ-ಒಂದು ಗಂಟೆಯಲ್ಲಿ ಆ ಗಂಟುಗಳು ಕಡಿಮೆಯಾಗುತ್ತಿದ್ದವು. ಈಗ ಅಲ್ಲಿ ಬೆಳಗ್ಗಿನ ತಿಂಡಿಗೆ ನಾನು ವಡೆಯ ಜೊತೆ ಸಾಂಬಾರ್‌ನ ಎರಡು ತುತ್ತು ತಿಂದೆ. ಅದರಲ್ಲಿ ಎರಡು ದೊಡ್ಡ ನುಗ್ಗೆಕಾಯಿ ತುಂಡುಗಳಿದ್ದವು. ತಿಳಿಯದೇ ನಾನು ಅದನ್ನು ಕೂಡ ತಿಂದೆ. ತಕ್ಷಣವೇ ನನಗೆ ಆ ತೊಂದರೆ ಶುರುವಾಯಿತು. ತಲೆಯಿಂದ ಕಾಲಿನವರೆಗೆ ಕೆಂಪು ಕೆಂಪು ಪಿತ್ತದ ಗಂಟುಗಳು ಏಳಲು ಶುರುವಾದವು.
ನನ್ನ ಜೊತೆಯಲ್ಲಿದ್ದ ಬಾಪೂ ಭಕ್ತರು ನನಗೆ ಧೈರ್ಯ ಹೇಳಿದರು, " ಭಯಪಡಬೇಡ, ಎಲ್ಲವೂ ಸರಿಯಾಗುತ್ತದೆ" ಎಂದರು. ನಾವು ಎಲ್ಲಿ ಸೇವೆ ಮಾಡುತ್ತಿದ್ದೆವೋ, ಅಲ್ಲಿ ತಕ್ಷಣಕ್ಕೆ ಉದಿ ಲಭ್ಯವಿರಲಿಲ್ಲ. ಈಗ ಏನು ಮಾಡುವುದು ಎಂಬುದು ನನ್ನ ಮುಂದಿದ್ದ ಪ್ರಶ್ನೆಯಾಗಿತ್ತು. ಹತ್ತಿರದಲ್ಲಿ ಆಸ್ಪತ್ರೆಯೂ ಇರಲಿಲ್ಲ. ಆದರೆ ಬಾಪೂ ಇರುವಾಗ ಚಿಂತೆ ಮಾಡುವ ಅಗತ್ಯವೇ ಇರಲಿಲ್ಲ. ನನ್ನ ಸ್ನೇಹಿತರು ನನಗೆ ಹೇಳಿದರು, "ಕೋಠಿಂಬೆಯ ಈ ಪವಿತ್ರ ಜಾಗದ ಕಣಕಣದಲ್ಲೂ ಬಾಪೂ ಅವರ ವಾಸವಿದೆ. ಹಾಗಾಗಿ ಬಾಪೂ ಅವರ ಹೆಸರು ಹೇಳಿ, ಮನಸ್ಸಿನಲ್ಲಿ ಯಾವುದೇ ಸಂಶಯ ಇಲ್ಲದೆ, ನೀನು ಇಲ್ಲಿನ ಮಣ್ಣನ್ನು ತೆಗೆದುಕೊಂಡು ನಿನ್ನ ಇಡೀ ಮೈಗೆ ಮತ್ತು ಹಣೆಗ ಹಚ್ಚಿಕೊ. ಬಾಪೂ ಅವರ ನಾಮಸ್ಮರಣೆಯಿಂದ ಮತ್ತು ಮುಖ್ಯವಾಗಿ ಅವರ ಮೇಲಿನ ನಂಬಿಕೆಯಿಂದ ಹಚ್ಚಿದ ಮಣ್ಣು ಕೂಡ ಉದಿಯ ಕೆಲಸ ಮಾಡಬಲ್ಲದು." ಅದರಂತೆ ಬಾಪೂ ಅವರ ಹೆಸರನ್ನು ಪೂರ್ಣ ನಂಬಿಕೆಯಿಂದ ಹೇಳಿ ನಾನು ನೆಲದ ಮೇಲಿನ ಮಣ್ಣನ್ನು ಎತ್ತಿಕೊಂಡು ನನ್ನ ದದ್ದುಗಳಿಗೆ ಹಚ್ಚಿಕೊಂಡೆ. ಮತ್ತು ಏನು ಆಶ್ಚರ್ಯ! ಮರುಕ್ಷಣದಲ್ಲೇ ನಾನು ಸಂಪೂರ್ಣ ನಾರ್ಮಲ್ ಆದೆ. ನನ್ನ ಮೈಮೇಲಿನ ಎಲ್ಲಾ ದದ್ದುಗಳು, ಗಂಟುಗಳು ಕೆಲವೇ ಕ್ಷಣಗಳಲ್ಲಿ ಮಾಯವಾದವು. ಊದಿಕೊಂಡಿದ್ದ ನನ್ನ ಕೈ ಕ್ಷಣಾರ್ಧದಲ್ಲಿ ಮೊದಲಿನಂತಾಯಿತು.
ನಾನು ಮೊದಲಿನಂತಾಗಿದ್ದನ್ನು ನೋಡಿ ನನಗೆ ಆದ ಆನಂದ, ಅದು ನನ್ನ ಬಾಪೂ ಅವರ ಕೃಪೆಯಿಂದಲೇ ನನಗೆ ಸಿಕ್ಕಿತ್ತು. ಬಾಪೂ ಪ್ರತಿ ಬಾರಿಯೂ ನಮ್ಮ ಜೊತೆಗೆ ಇರುತ್ತಾರೆ ಎಂಬ ಅನುಭವ ನನಗೆ ಸಿಕ್ಕಿತು. ಅವರು ಎಲ್ಲೇ ಇದ್ದರೂ ಅವರ ಗಮನ ನಮ್ಮ ಮೇಲೆ ಇದ್ದೇ ಇರುತ್ತದೆ. ಇಂದು ಅವರ ಕೃಪೆಯಿಂದಲೇ ನನ್ನ ಜೀವನ ಚೆನ್ನಾಗಿ ಸಾಗುತ್ತಿದೆ. ಇಂದಿಗೂ ನುಗ್ಗೆಕಾಯಿಯ ಒಂದು ಸಣ್ಣ ಕಣ ತಿಂದರೂ ನನಗೆ ಪಿತ್ತ ಏಳುತ್ತದೆ. ಆದರೆ ಉದಿಯ ರೂಪದಲ್ಲಿ, ಕೇವಲ ಆ ಪವಿತ್ರ ಜಾಗದ ಮಣ್ಣನ್ನು ಬಾಪೂ ಅವರ ಹೆಸರು ಹೇಳಿ ಹಚ್ಚಿದ್ದರಿಂದ ನನ್ನ ನೋವು ಶಾಂತವಾಯಿತು.
ನನ್ನ ಪಾಲಿಗೆ ನನಗೆ ಬಂದ ಬಾಪೂರವರ ನಾಮಸ್ಮರಣೆಯ ಈ ಅನುಭವ ಅತ್ಯಂತ ಅಮೂಲ್ಯ ಮತ್ತು ದೊಡ್ಡದಾಗಿದೆ.
|| ಹರಿ ಓಂ | ಶ್ರೀರಾಮ್ | ಅಂಬಜ್ಞ | ನಾಥಸಂವಿತ್ ||
| Hindi | English |
|---|---|
