ಅಕಸ್ಮಾತ್ತಾಗಿ ಕೋಮಾದಲ್ಲಿ ಹೋಗಿದ್ದ ಒಬ್ಬಳು ಶ್ರದ್ಧಾವಂತ ಮಹಿಳೆ ಅದರಿಂದ ಹೊರಗೆ ಬರುತ್ತಾಳೆ ಮತ್ತು ಸರಿಯಾದ ಸಮಯಕ್ಕೆ ಸರಿಯಾದ ಉಪಚಾರದ ವ್ಯವಸ್ಥೆ ಆಗಿದ್ದರಿಂದ, ತಾನಾಗಿ ಸರಿಯಾಗಿ ನಡೆಯಲೂ ಆಗದ ಈ ಮಹಿಳೆ ಮೊದಲಿನಂತೆ ನಡೆಯತೊಡಗುತ್ತಾಳೆ. ಅವಳ ಯಜಮಾನರು ನಂಬಿಕೆಯಿಂದ ಹೇಳುತ್ತಾರೆ, ಸದ್ಗುರು ಅನಿರುದ್ಧರು ನೀಡಿದ 'ಹರಿ ಓಂ' ಈ ಪದಗಳಲ್ಲಿ ಒಂದು ಬೇರೆಯದೇ ಸಾಮರ್ಥ್ಯ ಸಮಾವಿಷ್ಟವಾಗಿದೆ.
----------------------------
ಹರಿ ಓಂ. ಸನ್ 2004 ರಿಂದ ನಾನು ಹಾಗು ನನ್ನ ಪತ್ನಿ ಸದ್ಗುರು ಅನಿರುದ್ಧ ಬಾಪೂರವರ ಶನಿವಾರದ ಉಪಾಸನೆಗೆ ಕೇಂದ್ರದಲ್ಲಿ ಹೋಗತೊಡಗಿದೆವು.
ಸನ್ 2008 ರಲ್ಲಿ ನನ್ನ ಪತ್ನಿಗೆ ಸ್ನಾನ ಮಾಡುವಾಗ ಒಮ್ಮಿಂದೊಮ್ಮೆ ತಲೆ ತಿರುಗಿ ಬಂದಿತು. ನಮ್ಮ ಮನೆಯ ಕೆಳಗಡೆಯಲ್ಲಿಯೇ ಒಬ್ಬ ಡಾಕ್ಟರು ಇರುತ್ತಾರೆ. ನಾವು ಅವಳನ್ನು ಅವರ ಕಡೆಗೆ ಕೊಂಡೊಯ್ದೆವು. ಡಾಕ್ಟರರು ಪತ್ನಿಗೆ ಆಸ್ಪತ್ರೆಯಲ್ಲಿ ದಾಖಲು ಮಾಡಲು ಹೇಳಿದರು. ಅಲ್ಲಿ ಅವಳಿಗೆ ಸಲಾಯಿನ್ ಹಚ್ಚಲಾಯಿತು, ಆದರೆ ಆ ಆಸ್ಪತ್ರೆಯಲ್ಲಿ ಬೇಕಾದಹಾಗೆ ಉಪಚಾರ ಆಗಲಾರದಕ್ಕೆ, ನಾವು ಅವಳನ್ನು ಬಾಂಬುಳಿಗೆ ಮತ್ತೊಂದು ಆಸ್ಪತ್ರೆಯಲ್ಲಿ ದಾಖಲು ಮಾಡಿದೆವು. ಅಲ್ಲಿ ಪತ್ನಿಗೆ ಮತ್ತೆ ಸಲಾಯಿನ್ ಹಚ್ಚಲಾಯಿತು.
ಆ ದಿವಸ ರಾತ್ರಿ 1-2 ರ ಸುಮಾರಿಗೆ ಪತ್ನಿಗೆ ರಕ್ತದ ವಾಂತಿ ಆಯಿತು. ನನ್ನ ಹಿರಿಯ ಮಗ ಮುಂಬಯಿಯಲ್ಲಿ ಇದ್ದನು. ನಾನು ಅವನನ್ನು ಫೋನ್ ಮಾಡಿ ಕರೆಯಿಸಿಕೊಂಡೆ. ಅವನು ಬಂದನು ಮತ್ತು ಅವನನ್ನು ಪತ್ನಿಯ ಆರೋಗ್ಯದ ಬಗ್ಗೆ ನಾನು ತಿಳಿಹೇಳಿದೆ. ಈಗೇನು ಮಾಡಬೇಕೆಂಬುದು ಪ್ರಶ್ನೆಯೇ ಆಗಿತ್ತು. ಮಗನು ಹೇಳಿದನು, ''ಅಮ್ಮಳಿಗೆ ನಾವು ಮುಂಬಯಿಗೆ ಉಪಚಾರಕ್ಕೆಂದು ಕೊಂಡೊಯ್ಯೋಣ''. ಅವಳ ಆರೋಗ್ಯ ಇಷ್ಟು ಕೆಟ್ಟಿತೆಂದರೆ ಡಾಕ್ಟರರು ಕೇವಲ 12 ಗಂಟೆಗಳ ಅವಧಿ ಕೊಟ್ಟರು. ಆಮೇಲೆ ಏನುಬೇಕಾದರೂ ಆಗಬಹುದೆಂದು ಅವರು
ಹೇಳಿದರು.
ನಾವು ರಾತ್ರಿ 3 ಗಂಟೆಗೆ ವಿಮಾನದಿಂದ ಮುಂಬಯಿಗೆ ಹೋಗುವದಾಗಿ ನಿರ್ಧರಿಸಿದೆವು. ಮಗನ ಸ್ನೇಹಿತನು ನಮಗೆ ಸಹಾಯ ಮಾಡುವ ಸಲುವಾಗಿ ಸಂಪೂರ್ಣವಾಗಿ ಪ್ರಯತ್ನ ಮಾಡಿದನು. ಆದರೆ ಟಿಕೆಟ್ಟು ಸಿಗಲೊಲ್ಲದು. ಈಗೇನು ಮಾಡುವದು ? ನಾನು ಮನಸ್ಸಿನಲ್ಲಿ 'ಹರಿ ಓಂ' ಹೇಳಿದೆ ಹಾಗು ಬಾಪೂರವರನ್ನು ಹೇಳಿದೆ, 'ನೀವೇ ನೋಡಿಕೊಳ್ಳಿ'. ಆಗ ನನ್ನ ಶೆಡ್ಡಕನ ಮಗನಿಗೆ, ಡಾ. ಸಚಿನ ಗೆ ನಾನು ಫೋನು ಮಾಡಿದೆ. ಅವನಿಗೆ ಪತ್ನಿಯ ಆರೋಗ್ಯದ ಬಗ್ಗೆ ಹೇಳಿದೆ. ಅವನು ಹೇಳಿದನು, '' ನಾನು ಗೋವಾದಲ್ಲಿ ಇದ್ದೇನೆ. ನೀವು ಮಡಗಾವದಲ್ಲಿ ನಾನು ಹೇಳುವ ಆಸ್ಪತ್ರೆಯಲ್ಲಿ ಅವರನ್ನು ದಾಖಲು ಮಾಡಿ''. ಆಗ ನಾವು ತಕ್ಷಣ ಪತ್ನಿಗೆ ಮಡಗಾವದ ಆಸ್ಪತ್ರೆಗೆ ಕೊಂಡೊಯ್ದೆವು. ಅಲ್ಲಿ ಅವಳನ್ನು ದಾಖಲು ಮಾಡಿದೆವು ಮತ್ತು ಮರುದಿವಸ ಅವಳು ಕೋಮಾದಲ್ಲಿ ಹೋದಳು, ಅವಳು ಎಷ್ಟೋ ದಿನ ಕೋಮಾದಲ್ಲಿ ಇದ್ದಳು.
ಒಂದು ತಿಂಗಳು ಉರುಳಿದರೂ ಏನೇನೂ ಸುಧಾರಣೆ ಕಂಡುಬರಲಿಲ್ಲ. ನಾನು ಬಾಪೂರವರನ್ನು ಹೇಳಿದೆ, ''ಹರಿ ಓಂ ಬಾಪೂ, ಈಗೇನು ಮಾಡೋಣ ?' ಅವಳನ್ನು ಯಾವ ಸಮಯ ಆಸ್ಪತ್ರೆಗೆ ತಂದಿದ್ದೇವೋ, ಆ ದಿವಸದಿಂದ ಬಾಪೂರವರ ಉಪಾಸನೆಯ ಪುಸ್ತಿಕೆ ನನ್ನಬಳಿ ಇತ್ತು. ನಾನು ದಿನಾಲು ಬೆಳಿಗ್ಗೆ ಎದ್ದಮೇಲೆ ಅವರ ಉಪಾಸನೆ ಮಾಡುತ್ತಿದ್ದೆ. ನಾನು ಬಾಪೂಗೆ ಯಾವತ್ತಿಗೂ ಒಂದೇ ಮಾತನ್ನು ಹೇಳುತ್ತಿದ್ದೆ, 'ಹರಿ ಓಂ ಬಾಪೂ. ನಾನು ನಿಮ್ಮ ಉಪಾಸನೆಯ ಪುಸ್ತಕ ಓದುತ್ತೇನೆ ಮತ್ತು ಪತ್ನಿಯ ಅನಾರೋಗ್ಯದ ಬಗ್ಗೆ ಏನು ಮಾಡಬೇಕೊ ಅದನ್ನು ನೀವೇ ನೋಡಿ'.
ಒಂದೂವರೆ ತಿಂಗಳ ನಂತರ, ನನ್ನ ಪತ್ನಿ ಕೋಮಾದಿಂದ ಹೊರಬಂದಾಗ ನನ್ನ ಜೀವ ನನಗೆ ಮರಳಿತು. ಅವಳ ಒಂದು ಬದಿ ಪೂರ್ತಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಅವಳಿಗೆ ಸರಿಯಾಗಿ ನಡೆಯಲೂ ಬರುತ್ತಿರಲಿಲ್ಲ. ನಾವು ಡಾಕ್ಟರರಿಗೆ ಸ್ಪಷ್ಟವಾಗಿ ಕೇಳಿದೆವು,“ಇವಳು ಮೊದಲಿನಂತೆ ಆಗುವಳೇನು?” ಇಷ್ಟು ದೊಡ್ಡ ಆಸ್ಪತ್ರೆಯ ಡಾಕ್ಟರರ ಕಡೆಗೆ ಅದರ ಉತ್ತರ ಇರಲಿಲ್ಲ. ನನಗೆ ಆಶ್ಚರ್ಯವೇ ಎನಿಸಿತು. ಇಲ್ಲಿಯ ತನಕ 8 ಲಕ್ಷ ರೂಪಾಯಿ ವ್ಯಯವಾಗಿತ್ತು. ನಾನು ಬಾಪೂರವರ ನಂಬಿಕೆಯ ಮೇಲೆ ಮಗನಿಗೆ ಹೇಳಿದೆ,“ನಾವು ಇವಳನ್ನು ಮನೆಗೆ ಕೊಂಡೊಯ್ಯೋಣ. ನನ್ನ ಬಾಪೂರವರೇ ಮುಂದಿನದೆಲ್ಲ ನೋಡಿಕೊಳ್ಳುವರು”. ಆಗ ಬಾಪೂಕೃಪೆಯಿಂದ ಒಬ್ಬ ಶ್ರದ್ಧಾವಂತ ಬಾಪೂಭಕ್ತ ಡಾಕ್ಟರ್ ಮ್ಹಸ್ಕರ ಇವರ ಭೇಟಿ ಆಯಿತು. ಆ ಡಾಕ್ಟರ ಸ್ವತಃ ಕುರುಡರಿದ್ದಾರೆ, ಆದರೆ ನಾವು ಪತ್ನಿಗೆ ಅವರ ಕಡೆಗೆ ಕೇವಲ ಬಾಪೂರ ಮೇಲಿನ ನಂಬಿಕೆಯ ಮೇಲೆ ಕೊಂಡೊಯ್ದೆವು.
ಡಾ. ಮ್ಹಸ್ಕರ ಇವರ ಉಪಚಾರದಿಂದ ಹೆಂಡತಿಯ ಆರೋಗ್ಯದಲ್ಲಿ ಬಹಳ ಒಳ್ಳೆಯ ವ್ಯತ್ಯಾಸ ಕಂಡುಬಂದಿತು. ಅವಳಿಗೆ ಕೈ ಮೇಲೆ ಎತ್ತಲು ಬರತೊಡಗಿತು. ಆಗಿದ್ದೆಲ್ಲವೂ ಬಾಪೂರವರ ಅಕಾರಣ ಕರುಣೆಯಿಂದಲೇ ಆಗಿತ್ತು. ಒಂದು ದಿವಸ ಅಕಸ್ಮಾತ್ತಾಗಿ ಪತ್ನಿ ಹೇಳಿದಳು, ''ನಾನೇನು ಈಗ ಎಲ್ಲಿಯೂ ಉಪಚಾರಕ್ಕೆಂದು ಹೋಗುವದಿಲ್ಲ. ಏನು ಮಾಡುವದಿದೆಯೋ ಅದನ್ನು ನೀವು ಮನೆಯಲ್ಲಿಯೇ ಮಾಡಿ''. ಆಗ ಮಗನು ಇನ್ನೊಬ್ಬ ಡಾಕ್ಟರರನ್ನು ಮನೆಗೆ ತಂದನು. ಪತ್ನಿಯ ಆರೋಗ್ಯ ಇನ್ನಷ್ಟೂ ಸುಧಾರಣೆಯಾಗತೊಡಗಿತು. ನಮ್ಮೆಲ್ಲರಿಗೆ ಸಂತೋಷವಾಯಿತು. ಒಂದು ತಿಂಗಳಲ್ಲಿ ಅವಳು ಸ್ವತಃ ನಡೆಯತೊಡಗಿದಳು. ನಿಜವಾಗಿಯೂ ಬಾಪೂರವರೇ ಇದನ್ನು ಘಟಿಸಿ ತಂದಿದ್ದರು.
ನಾನು ಯಾವತ್ತಿಗೂ 'ಹರಿ ಓಂ ಬಾಪೂ' ಎಂಬುದೇ ಜಪ ಮಾಡುತ್ತೇನೆ. ಯಾರಾದರೂ ಭೇಟಿಯಾದರೆ ಅಥವಾ ನಾನು ಕೆಲಸಕ್ಕೆ ಹೋದಾಗ ನನ್ನ ಸಾಹೇಬರು ಕರೆದಾಗ ಮೊದಲಿಗೆ ನಾನು 'ಹರಿ ಓಂ' ಹೇಳಿ ಮುಂದಿನದು ಮಾತನಾಡುತ್ತೇನೆ. ಬಾಪೂರವರು ಹೇಳಿರುವ 'ಹರಿ ಓಂ' ಈ ಪದಗಳಲ್ಲಿ ಇಷ್ಟು ದೊಡ್ಡ ಶಕ್ತಿಯಿದೆ. 'ಹರಿ ಓಂ' ನನ್ನ ಸಲುವಾಗಿ ಇದೊಂದು ಮಂತ್ರವೇ ಆಗಿದೆ. ಅದನ್ನು ಉಚ್ಚರಿಸಿದಾಗ ಎಲ್ಲ ಕೆಲಸಗಳು ಬೇಗೆಬೇಗ ಆಗುತ್ತವೆ. ನಮ್ಮ ಪರಿವಾರದಲ್ಲಿಯ ನಾವೆಲ್ಲರೂ ನಿತ್ಯ ' ಹರಿ ಓಂ' ದ ಸ್ಮರಣೆ ನಂಬಿಕೆಯಿಂದ ಖಂಡಿತವಾಗಿ
ಮಾಡುತ್ತಿರುತ್ತೇವೆ.
II ಹರಿ ಓಂ II II ಶ್ರೀರಾಮ II
II ಅಂಬಜ್ಞ II II ನಾಥಸಂವಿಧ್ II
| Hindi | English |
|---|---|
