ಈ ಶ್ರದ್ಧಾವಂತನ ಭೀಷಣ ಅಪಘಾತವಾಗಿಯೂ, ಅವನು ಮಾತ್ರ ತುಂಬಾ ಶಾಂತಚಿತ್ತದಿಂದ ಒಂದೊಂದು ಹೆಜ್ಜೆಗಳನ್ನಿಡುತ್ತಾ, ಆ ಅಪಘಾತದ ಪರಿಣಾಮಗಳಿಂದ ಬಿಡುಗಡೆ ಹೊಂದುತ್ತಾನೆ ಮತ್ತು ಮೊದಲಿನಂತೆ ಜೀವನವನ್ನು ಬದುಕಲು ಸಾಧ್ಯವಾಗುತ್ತದೆ-ಇದು ಕೇವಲ ಸದ್ಗುರು ಅನಿರುದ್ಧರ ಕೃಪೆಮೂಲಕ.
..............................................................................................
ಹರಿ ಓಂ. ಸನ್ 2003 ರಿಂದ ನಾನು ಸದ್ಗುರು ಅನಿರುದ್ಧ ಬಾಪೂರವರ ಸತ್ಸಂಗದಲ್ಲಿ ಸಹಭಾಗಿಯಾದೆನು. ನನಗೆ ಬಾಪೂರವರ ಎಷ್ಟೋ ಅನುಭವಗಳು ಬಂದಿವೆ. ಅದರಲ್ಲಿಯ ಒಂದು ಅನುಭವ ನಾನು ಇಲ್ಲಿ ಹೇಳುವವನಿದ್ದೇನೆ.
ನಾನು 2009 ರಿಂದ ಫೊ೦ಡಾ (ಗೋವಾ) ಉಪಾಸನಾ ಕೇಂದ್ರದಲ್ಲಿ ಉಪಾಸನೆಗೆ ಹೋಗತೊಡಗಿದೆ. ಅಲ್ಲಿ ನನ್ನ ಪರಿಚಯ ಶ್ರದ್ಧಾವಂತ ಬಾಪೂಭಕ್ತ ಪ್ರಥಮೇಶಸಿಂಹ ನಾಯಕ ಇವರ ಜೊತೆಗೆ ಆಯಿತು. ಅವರು ನನಗೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ನಾನು ಅವರ ಕಂಪನಿಯಲ್ಲಿ ಸುಪರವಾಯುಜರನೆಂದು ಹಾಜರಾದೆ. ಉಪಾಸನಾ ಕೇಂದ್ರದಲ್ಲಿಯ ಸೇವಾಕಾರ್ಯದಲ್ಲೂ ನಾನು ಭಾಗವಹಿಸತೊಡಗಿದೆ. ನನ್ನ ಈ ಅನುಭವ ಸನ್ 2012 ರಲ್ಲಿಯದಿದೆ. ಸರಿಯಾಗಿ ಆ ದಿವಸ ಯಂತ್ರಚಾಲಕನು ಇಲ್ಲದಿರುವದರಿಂದ, ನಾನು ಯಂತ್ರ ನಡೆಸಲು ಹೋದೆ. ಯಂತ್ರ ನಡೆಸುತ್ತಿರುವಾಗ ಅಕಸ್ಮಾತ್ತಾಗಿ ನಾನು ಮಾಡುತ್ತಿದ್ದ ಜಾಬ್ ಆ ಯಂತ್ರದಲ್ಲಿ ಸಿಲುಕಿಕೊಂಡಿತು. ನಾನು ತಕ್ಷಣ ಅದರಲ್ಲಿ ಕೈ ಹಾಕಿ ಅದನ್ನು ತೆಗೆಯಲು ಹೋಗಿದ್ದಾಗ ನನ್ನ ಕೈ ಒಮ್ಮಿಂದೊಮ್ಮೆ ಯಂತ್ರದಲ್ಲಿ ಸಿಲುಕಿತು. ನಾನು ತುಂಬಾ ಜೋರಾಗಿ ಕಿರಿಚಿದೆ. ಅಲ್ಲಿ ಒಬ್ಬ ಕಾರ್ಮಿಕನು ಬಂದಿದ್ದನು. ಅವನು ಓಡುತ್ತಲೇ ನನ್ನ ಹತ್ತಿರ ಬಂದನು ಹಾಗು ಪರಿಸ್ಥಿತಿಯನ್ನು ನೋಡಿ ಅವನು ತಕ್ಷಣ ಆ ಯಂತ್ರದ ಬಟನ್ ಆಫ್ ಮಾಡಿದನು.
ಬಟನ್ ಆಫ್ ಮಾಡಿದ ಮೇಲೆ ನಾನು ತಕ್ಷಣ ನನ್ನ ಕೈಯನ್ನು ಯಂತ್ರದಿಂದ ಹೊರಗೆ ತೆಗೆದೆನು. ನನ್ನ ಎಲ್ಲ ಬೆರಳುಗಳು ನೇತಾಡುತ್ತಿದ್ದವು ಹಾಗು ರಕ್ತಸ್ರಾವ ಆಗುತ್ತಿತ್ತು. ಇಷ್ಟು ಆದರೂ ತೀರಾ ಏನೂ ಆಗಲಿಲ್ಲ ಎನ್ನುವಂತೆ ನಾನು ಶಾಂತವಾಗಿದ್ದೆ ! ನಾನು ಕೇವಲ ಬಾಪೂರವರನ್ನು ಕೂಗುತ್ತಿದ್ದೆ. ನಾನು ನೀರಿನ ಬಕೇಟಿನಲ್ಲಿ ಕೈ ಮುಳುಗಿಸಿದೆ ಹಾಗು ಅಲ್ಲಿಯೇ ಕೆಲವು ವಸ್ತ್ರಗಳು ಬಿದ್ದಿದ್ದವು, ಅದರಲ್ಲಿಯ ಒಂದನ್ನು ಎತ್ತಿಕೊಂಡು ಅದನ್ನು ಕೈಯ ಸುತ್ತಲೂ ಸುತ್ತಿದೆ. ಆದರೆ ರಕ್ತಸ್ರಾವವೇನು ನಿಲ್ಲುತ್ತಿರಲಿಲ್ಲ. ನನ್ನ ಸಹಾಯಕ್ಕೆಂದು ಬಂದಿರುವ ಕಾರ್ಮಿಕನು ಇದನ್ನೆಲ್ಲಾ ನೋಡಿ ಗಾಬರಿಯಾದನು ಮತ್ತು ಅಳತೊಡಗಿದನು. ನಾನು ಕೇವಲ ಬಾಪೂರವರನ್ನೇ ಕೂಗುತ್ತ ಹೇಳುತ್ತಿದ್ದೆ, 'ಬಾಪೂ, ಈಗ ನೀವೇ ಏನೆಂಬುದನ್ನು ನೋಡಿಕೊಳ್ಳಿ'.
ಬಾಪೂರ ಮೂಲಕವೇ ನನಗೆ ಸಾಮರ್ಥ್ಯ ದೊರಕಿತು ಹಾಗು ನಾನು ಆ ಕಾರ್ಮಿಕ ಹುಡುಗನಿಗೆ ಹೇಳಿದೆ, ''ನನಗೆ ಫೋನು ಕೊಡು''. ಕಣಕವಲಿಯಲ್ಲಿ ಸಚಿನಸಿಂಹ, ನನ್ನ ಪರಿಚಯದ ಒಬ್ಬ ಶ್ರದ್ಧಾವಂತ ಬಾಪೂಭಕ್ತನಿದ್ದಾನೆ. ಅವನು ನನ್ನ ನೆರೆಯಲ್ಲಿಯದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು. ಫೋನು ಮುಖಾಂತರ ನಾನು ಅವನಿಗೆ ಎಲ್ಲ ಘಟನೆಯನ್ನು ತಿಳಿಸಿ ಹೇಳಿದೆ. ಅವನು, ''ಅಂಕಲ್, ನೀವು ಗಾಬರಿಯಾಗಬೇಡಿ. ನಿಮ್ಮನ್ನು ಕರೆದುಕೊಂಡು ಹೋಗಲು ನಾನು ಬರುತ್ತೇನೆ.' ಅವನು ತನ್ನ ಬಾಯಿಕದಿಂದ ಬಂದು ಹೇಳಿದನು, ''ಅಂಕಲ್, ನಾನು ನಿಮ್ಮನ್ನು ಆಸ್ಪತ್ರೆಗೆ ಕೊಂಡೊಯ್ಯುವೆ. ನೀವು ಗಾಡಿಯಮೇಲೆ ಕೂಡಬಹುದಲ್ಲ?'' ನಾನು ಅವನಿಗೆ ಸಮ್ಮತಿ ಹೇಳಿದೆ ಹಾಗು ನಾವು 4 ಕಿ.ಮೀ, ದೂರದಲ್ಲಿಯ ಆಸ್ಪತ್ರೆಗೆ ಹೋದೆವು. ಅಲ್ಲಿ ನನ್ನ ಕೈಗೆ ಡ್ರೆಸ್ಸಿಂಗ್ ಮಾಡಲಾಯಿತು ಹಾಗು ಆಮೇಲೆ ನನಗೆ ತಲೆ ಸುತ್ತಿಬಂದಿತು. ಡಾಕ್ಟರರು ನನ್ನ ಎಲ್ಲ ಟೆಸ್ಟು ಮಾಡಿದರು. ಇದರಲ್ಲಿ ನನ್ನ ರಕ್ತದಲ್ಲಿಯ ಸಕ್ಕರೆ ಬೆಳೆದಿದೆಯೆಂದು (ಡಾಯಬಿಟಿಜ / ಮಧುಮೇಹ) ತಿಳಿದು ಬಂದಿತು. ತಕ್ಷಣ ಶಸ್ತ್ರಕ್ರಿಯೆ ಮಾಡಲು ಬರುವದಿಲ್ಲವೆಂದು ಡಾಕ್ಟರರು ಹೇಳಿದರು ಹಾಗು ನಾನು ಬಹಳೇ ಗಾಬರಿಯಾದೆ. ಅವರು ನನಗೆ ಮಧುಮೇಹದ ಮೇಲೆ ಔಷೋಧಪಚಾರ ಆರಂಭಿಸಿದರು. ಕೊನೆಗೆ ರಾತ್ರಿ 11 ಗಂಟೆಗೆ ನನ್ನ ರಕ್ತದಲ್ಲಿಯ ಸಕ್ಕರೆ ಕಡಿಮೆಯಾಯಿತು. ಆ ರಾತ್ರಿಯೇ ನನ್ನಮೇಲೆ ಶಸ್ತ್ರಕ್ರಿಯೆ ಮಾಡಲಾಯಿತು. ಅದಾದಮೇಲೆ ನನ್ನ ದಿನಾಲು ಉದಿ ಹಚ್ಚಿಕೊಳ್ಳುವದು ಹಾಗು ರಾಮರಕ್ಷೆ ಮತ್ತು ಹನುಮಾನ ಚಲೀಸಾ ಹೇಳುವದು ನಡದೇ ಇತ್ತು. ಕೈ ನೋಯುತ್ತಲೇ ಇತ್ತು ಮತ್ತು 15 ದಿವಸ ನಾನು ಆಸ್ಪತ್ರೆಯಲ್ಲಿದ್ದೆ. ಆಮೇಲೆ ನಾನು ಬಾಂದಾಕ್ಕೆ ಬಂದೆನು ಹಾಗು ಒಂದು ತಿಂಗಳ ನಂತರ ನನ್ನ ಕೈಗೆ ಹಾಕಿದ ರಾಡ್ ತೆಗೆಯಲಾಯಿತು. ಆಸ್ಪತ್ರೆಯಿಂದ ಮನೆಗೆ ಬಂದನಂತರ ಕೂಡ ಔಷಧಿಗಳ ಜೊತೆಗೆ ಉದಿ ಹಚ್ಚುವದು ನಡದೇ ಇತ್ತು. ನಾನು ವಿಶ್ವಾಸದಿಂದ ಬಾಪೂರವರಿಗೆ ಹೇಳುತ್ತಿದ್ದೆ, ' ಬಾಪೂ, ನೀವೇ ನನ್ನನ್ನು ಬೇಗ ಗುಣಪಡಿಸಿರಿ'. ಕೈ ನೋವಾಗಿದ್ದರಿಂದ ನನಗೆ ರಾಮನಾಮದ ಬುಕ್ ಬರೆಯಲು ಆಗುತ್ತಿಲ್ಲ, ಇದರ ನನಗೆ ಕೆಡುಕೆನಿಸುತ್ತಿತ್ತು. ಆದರೆ ಬಾಪೂಕೃಪೆಯಿಂದ ನನ್ನ ಕೈ ಇಷ್ಟು ಒಳ್ಳೆಯದಾಗಿದೆ, ನಾನು ಬುಕ್ ಬರೆಯಬಲ್ಲೆ, ಎಲ್ಲ ಕೆಲಸಗಳನ್ನೂ ಮಾಡಬಲ್ಲೆ. ಇಷ್ಟೇ ಅಲ್ಲ, ಈಗ ನನಗೆ ಆ ಕೈಯಿಂದ ಭಾರಕೂಡ ಎತ್ತಲು ಬರುತ್ತದೆ.
ನಾನು ನಂಬಿಕೆಯಿಂದ ಇಷ್ಟೇ ಹೇಳುವೆ, ಬಾಪೂರವರು ನನಗೆ ಬಹಳ ಸಹಾಯವನ್ನು ಪೂರೈಸಿದರು ಹಾಗು ನನ್ನ ಕೈಯನ್ನು ಗುಣಪಡಿಸಿದರು. ನನ್ನ ಕೈ ಹಾಗು ಕೈಯ ಬೆರಳುಗಳು ಉಳಿದವು ಕೇವಲ ಮತ್ತು ಕೇವಲ ಬಾಪೂರಮೂಲಕವೇ ! ಕೊನೆಗೆ ನಾನಂತೂ ಇಷ್ಟೇ ಹೇಳುವೆ, ' ಬಾಪೂ ರಕ್ಷಕನಿರುವಾಗ, ಯಾರಿಂದ ಸಾಯಿಸಲು ಸಾಧ್ಯ ?
II ಹರಿ ಓಂ II II ಶ್ರೀರಾಮ II
II ಅಂಬಜ್ಞ II II ನಾಥಸಂವಿಧ್ II
| Hindi | English |
|---|---|
