ಉಪಾಸನೆ ಕೇಂದ್ರದಲ್ಲಿಯ ಶ್ರೀಸ್ವಸ್ತಿಕ್ಷೇಮ್ ಸಂವಾದ ಹಾಗು ಅದರಂತೆ ಮನೆಯಲ್ಲಿಯೂ ಚಂಡಿಕಾಕುಲದ ಎದುರಿಗೆ ನಂಬಿಕೆಯಿಂದ ಮಾಡಿದ ಪ್ರಾರ್ಥನೆ ಹೇಗೆ ಫಲಿಸುತ್ತದೆ ಎಂಬುದರ ಇದೊಂದು ಸುಂದರ ಅನುಭವ.
--------------------
ಹರಿ ಓಂ. ಮಹಾತಾಯಿ ಮಹಿಷಾಸುರಮರ್ದಿನಿ ಹಾಗು ಸದ್ಗುರು ಶ್ರೀಅನಿರುದ್ಧ ಬಾಪೂರ ಮೇಲೆ ನಮ್ಮ ಸಂಪೂರ್ಣ ಪರಿವಾರದ ಅಪಾರ ಪ್ರೀತಿಯಿದೆ ಹಾಗು ಬಾಪೂ ನಮ್ಮ ಜೀವನದಲ್ಲಿ ಎಲ್ಲವನ್ನು ನೆಟ್ಟಗೆ ಮಾಡುವವರೇ ಎಂಬುದರ ಮೇಲೆ ನಂಬಿಕೆಯಿದೆ.
ಇಂದು, 2019 ರಂದು ನಾನು 19 ವರ್ಷದವನಾಗಿದ್ದೇನೆ. ಸನ್ 2014 ರಲ್ಲಿ ನಾನು 14 ವರ್ಷದವನಿರುವಾಗ, ನಾನು ತುಂಬಾ ಅಶಕ್ತನಾಗಿದ್ದೆ. ನಾನು ಬಹಳ ಬೇಗ ದಣಿಯುತ್ತಿದ್ದೆ. ಆ ಸುಮಾರಿಗೆ ನನ್ನ ಅಮ್ಮ ಅಪ್ಪ ನನ್ನನ್ನು ಆಸ್ಪತ್ರೆಗೆ ಉಪಚಾರಕ್ಕೆಂದು ಕೊಂಡೊಯ್ದರು. ಡಾಕ್ಟರರು ನನ್ನನ್ನು ಚೆಕ್ ಅಪ್ ಮಾಡಿ ಅಸ್ತಮಾದ ಟೆಸ್ಟ್ ಮಾಡಲು ಹೇಳಿದರು. ಡಾಕ್ಟರರು ಹೇಳಿರುವ ಟೆಸ್ಟು ನಾವು ಮಾಡಿದೆವು ಹಾಗು ಅದರ ರಿಪೋರ್ಟು ತೆಗೆದುಕೊಂಡು ಮತ್ತೆ ಡಾಕ್ಟರರ ಕಡೆಗೆ ಹೋದೆವು.
ರಿಪೋರ್ಟು ನೋಡಿ ಡಾಕ್ಟರರಿಗೂ ಆಶ್ಚರ್ಯವೆನಿಸಿತು. ನನ್ನ ರಿಪೋರ್ಟಿನಲ್ಲಿ ಎಲ್ಲಕ್ಕೂ ಹೆಚ್ಚಾಗಿ ಅಸ್ಥಮಾದ ಲಕ್ಷಣ ಕಾಣುತ್ತಿತ್ತು. ಡಾಕ್ಟರರು ನನ್ನಮೇಲೆ ಅಸ್ತಮಾದ ಉಪಚಾರ ಆರಂಭಮಾಡಿದರು. ತನ್ನ ಮಗನಿಗೆ ಅಸ್ಥಮಾ ಇದೆಎಂಬ ಚಿಂತೆಯಿಂದ ನನ್ನ ಅಮ್ಮಳಿಗೆ ಬಹಳ ಕಾಳಜಿ ಎನಿಸತೊಡಗಿತು. ನನ್ನ ತಾಯಿಗೆ ರಾತ್ರಿ ನಮ್ಮ ಮನೆಯಲ್ಲಿಯ ಚಂಡಿಕಾಕುಲದ ಫೋಟೋದ ಮುಂದೆ ನಿಂತುಕೊಂಡು ಸಂವಾದವನ್ನು ಸಾಧಿಸುವ ಅಭ್ಯಾಸವಿತ್ತು. ಒಮ್ಮೊಮ್ಮೆ ರಾತ್ರಿ ನಿದ್ರೆಯಿಂದ ಎದ್ದುಕೂಡ ಅಮ್ಮ ತನ್ನ ಸಮಸ್ಯೆಯನ್ನು ಫೋಟೊದ ಮುಂದೆ ನಿಂತು ಮಾತನಾಡುತ್ತಾಳೆ. ಉಪಾಸನೆ ಕೇಂದ್ರದಲ್ಲಿಯ ಶ್ರೀಸ್ವಸ್ತಿಕ್ಷೇಮ ಸಂವಾದದಲ್ಲಿಯೂ ಅಮ್ಮಳು ಮಹಾತಾಯಿಗೆ ಹಾಗು ಬಾಪೂರವರಿಗೆ ಯಾವತ್ತಿಗೂ ಹೇಳುತ್ತಿದ್ದಳು, ‘ನನ್ನ ಮಗನಿಗೆ ಅಸ್ತಮಾ ಇದೆ, ನೀವು ಅವನನ್ನು ಬೇಗನೆ ಗುಣಪಡಿಸಿರಿ.’ ಅಸ್ತಮಾ ಈ ಕಾಯಿಲೆ ಎಂದಿಗೂ ಗುಣವಾಗುವದಿಲ್ಲವೆಂದು ಅಮ್ಮಳಿಗೆ ಅವಳ ಪರಿಚಯಸ್ಥರು ಹೇಳಿದ್ದರು. ನನಗೆ ಒಂದು ದಿನದಲ್ಲಿ ಕನಿಷ್ಠ ನಾಲ್ಕು ಸಲವಾದರೂ ಇನಹೇಲರ (ಅಸ್ಥಮಾಸಲುವಾಗಿ ಬಾಯಿಮುಖಾಂತರ ಔಷಧಿ ಸ್ಪ್ರೆ ತೆಗೆದುಕೊಳ್ಳುವ ಉಪಚಾರಪದ್ಧತಿ) ಬಳಸಬೇಕಾಗುತ್ತಿತ್ತು. ಅದರ ಜೊತೆಗೆ ನೆಬ್ಯುಲಾಯಝರ ಕೂಡ ಬಳಸುತ್ತಿದ್ದೆ.
ನನ್ನ ದೊಡ್ಡಣ್ಣ ರೂಪೇಶಸಿಂಹ ಮುಂಬಯಿಯಲ್ಲಿ ಇರುತ್ತಾನೆ. ಅವನ ಫೋನು ಬಂದ ನಂತರ ಅಮ್ಮಳು ಅವನಿಗೆ ನನ್ನ ರಿಪೋರ್ಟ ಬಗ್ಗೆ ಹೇಳಿದಳು. ರೂಪೇಶಸಿಂಹನು ತಕ್ಷಣ ಅಮ್ಮಳಿಗೆ ಹೇಳಿದನು, ''ನಾವು ಅನಿರುದ್ಧನನ್ನು ಸುಚಿತದಾದಾರಕಡೆಗೆ ಕೊಂಡೊಯ್ಯೋಣ''. ಅವನು ಇದನ್ನು ಹೇಳಿದಮೇಲೆ ನಾವು ಎಲ್ಲ ರಿಪೋರ್ಟ್ಸ್ ತೆಗೆದುಕೊಂಡು ಸುಚಿತದಾದಾರವರನ್ನು ಭೇಟಿಯಾಗಲು ಮುಂಬಯಿಗೆ ಹೋಗಲು ಹೊರಟೆವು.
ಸುಚಿತದಾದಾರವರು ನನ್ನ ರಿಪೋರ್ಟ್ಸ್ ನೋಡಿ ನನಗೆ ಔಷಧಿ ಕೊಟ್ಟು ನನ್ನಮೇಲೆ ಉಪಚಾರ ಆರಂಭಿಸಿದರು. ನನಗೆ ಬಹಳೇ ತೊಂದರೆಯಾಗುತ್ತಿತ್ತು. ನನ್ನ ಅಸ್ಥಮಾ ಸಂಪೂರ್ಣವಾಗಿ ಗುಣವಾಗಲು ಕನಿಷ್ಠ ಒಂದು ವರ್ಷವಾದರೂ ಬೇಕಾಗಿತ್ತು. ಒಮ್ಮೊಮ್ಮೆ ನಮ್ಮಕಡೆಗೆ ಔಷಧಿಗಾಗಿ ದುಡ್ಡು ಇರುತ್ತಿರಲಿಲ್ಲ, ಆದರೆ ಬಾಪೂರವರ ಕೃಪೆಯಿಂದ ಎಂದಿಗೂ ಔಷಧಿಗಾಗಿ ಅಡತಡೆ ಆಗಲಿಲ್ಲ. ಒಂದು ವರ್ಷದಲ್ಲಿಯೇ ಬಾಪೂರವರ ಕೃಪೆಯಿಂದ ಹಾಗು ಸುಚಿತದಾದಾರವರ ಔಷಧಿಯಿಂದ ನಾನು ಪೂರ್ತಿಯಾಗಿ ಗುಣ ಹೊಂದಿದೆನು. ಇದಾದಮೇಲೆ ನನಗೆ ಒಮ್ಮೆ ಜ್ವರ ಬಂದಿತು ಹಾಗು ನನ್ನನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಜ್ವರದ ನಿಮಿತ್ತವಾಗಿ ಆಸ್ಪತ್ರೆಯಲ್ಲಿ ನನ್ನ ಎಲ್ಲ ಟೆಸ್ಟು ಮಾಡಲಾಯಿತು. ಬಾಪೂರವರ ಕೃಪಾಶೀರ್ವಾದದಿಂದ ನನ್ನ ಎಲ್ಲ ರಿಪೋರ್ಟ್ಸ್ ನೋರ್ಮಲ್ ಬಂದವು ಹಾಗು ಅದರಲ್ಲಿ ಅಸ್ಥಮಾದ ಲಕ್ಷಣ ಸ್ವಲ್ಪ ಕೂಡ ಕಂಡುಬರಲಿಲ್ಲ.
ಇದು ಕೇವಲ ನನ್ನ ಸದ್ಗುರು ಬಾಪೂರವರೇ ಮಾಡಲು ಸಾಧ್ಯ. ಅಸಾಧ್ಯದ ರೂಪಾಂತರ ಸಾಧ್ಯದಲ್ಲಿ ಮಾಡುವವರು ಕೇವಲ ಬಾಪೂರವರೇ ಇದ್ದಾರೆಯೆಂದು ನನ್ನ ನಂಬಿಕೆಯಿದೆ.
ಜಯ ಜಗದಂಬ ಜಯ ದುರ್ಗೆ!
II ಹರಿ ಓಂ II II ಶ್ರೀರಾಮ II
II ಅಂಬಜ್ಞ II II ನಾಥಸಂವಿಧ್ II
| Hindi | English |
|---|---|
