ನವರಾತ್ರಿಯಲ್ಲಿ ಅಂಬಜ್ಞ ಇಷ್ಟಿಕಾ ಪೂಜೆ

 

ನವರಾತ್ರಿಯಲ್ಲಿ ಅಂಬಜ್ಞ ಇಷ್ಟಿಕಾ ಪೂಜೆ

2017ರ ಅಶ್ವಿನ ನವರಾತ್ರಿಯಿಂದ, ನಾವು ಪರಮಪೂಜ್ಯ ಸದ್ಗುರುಗಳು ಹೇಳಿದಂತೆ ಅಂಬಜ್ಞ ಇಷ್ಟಿಕೆಯ ಪೂಜೆಯನ್ನು ಮಾಡಲು ಶುರು ಮಾಡಿದೆವು. ಈ ಪೂಜಾ ವಿಧಿಯನ್ನು ಎಲ್ಲಾ ಭಕ್ತರಿಗಾಗಿ ಇಲ್ಲಿ ನೀಡಲಾಗಿದೆ.


ಪ್ರತಿಯೊಬ್ಬ ಭಕ್ತನೂ ತನ್ನ ಮನೆಯಲ್ಲಿ ಹೀಗೆ ನವರಾತ್ರಿ ಪೂಜೆ ಮಾಡಬಹುದು.


ಪೂಜೆಗೆ ಬೇಕಾದ ಸಾಮಗ್ರಿಗಳು:
 
ರಾಮನಾಮ ಪುಸ್ತಕದ ಕಾಗದದಿಂದ ಅಥವಾ ಇತರ ಕಾಗದದ ತಿರುಳಿನಿಂದ ತಯಾರಿಸಿದ, ಗೇರು ಬಣ್ಣದ ಲೇಪನ ಮಾಡಿ ಒಣಗಿಸಿ ಪೂಜೆಗೆ ಸಿದ್ಧಪಡಿಸಿದ ಇಷ್ಟಿಕಾ (ಇಟ್ಟಿಗೆ).


ಇಷ್ಟಿಕಾ ತಯಾರಿಸುವ ವಿಧಿ ಈ ಕೆಲಗಿನ ಯುಟ್ಯುಬ್ ಲಿ೦ಕ್ ನಲ್ಲಿ ಇದೆ.




ಪವಿತ್ರ ತಟ್ಟೆಯ ಹಿಂಭಾಗದಲ್ಲಿ ಅಥವಾ ಮುಂಭಾಗದಲ್ಲಿ ಇಡಲು ತಮ್ಮ ತಮ್ಮ ಕುಲದೇವತೆಯ ಭಾವಚಿತ್ರ, ಅಥವಾ ಚಿಕ್ಕ ಮೂರ್ತಿ ಅಥವಾ ಕುಲದೇವತೆಯ ಫಲಕ.

ಚಿಕ್ಕ ಮೂರ್ತಿ ಅಥವಾ ದೇವಿಯ ಫಲಕ ಇಡಲು ಚಿಕ್ಕ ತಾಮ್ರದ ತಟ್ಟೆ (ತಾಮ್ರ).

ಪರಾತ್ (ತಟ್ಟೆ),

ಮಣೆ,

ಸೋಹ್ಳಾ ಧೋತಿ ಅಥವಾ ಹಸಿರು ಬಣ್ಣದ ಬ್ಲೌಸ್ ಪೀಸ್

ಮೃತ್ತಿಕೆ (ಮಣ್ಣು),

ಮೃತ್ತಿಕೆ ಒದ್ದೆ ಮಾಡಲು ನೀರು,

ಗೋಧಿ,

ರಂಗೋಲಿ,

ಕಾಜಲ್ ಅಥವಾ ಬುಕ್ಕ (ಅಬೀರ),

10 ಚೂನರಿ ಅಥವಾ 1 ಚೂನರಿ ಮತ್ತು 9 ಬ್ಲೌಸ್ ಪೀಸ್‌ಗಳು.

(ಮೊದಲ ದಿನದ ಪೂಜೆಯಲ್ಲಿ ದೊಡ್ಡಮ್ಮನಿಗೆ ಚೂನರಿಯನ್ನೇ ಅರ್ಪಿಸಬೇಕು, ಬೇರೆ ದಿನಗಳಲ್ಲಿ ಬ್ಲೌಸ್ ಪೀಸ್‌ಗಳನ್ನು ಅರ್ಪಿಸಬಹುದು)

ದೀಪ,

ಧೂಪ,

ಅರಿಶಿನ,

ಕುಂಕುಮ,

ಕುಂಕುಮ ಅಕ್ಷತೆ,

ಹರಿದ್ರಾ (ಅರಿಶಿನ) ಅಕ್ಷತೆ,

ತುಳಸಿ ಎಲೆಗಳು,

ಬಿಲ್ವಪತ್ರೆಗಳು,

ಸುಗಂಧಿತ ಹೂಗಳು,

ವೇಣಿ ಅಥವಾ ಗಜರ,

ಜೆ೦ಡು ಹೂಗಳ ಹಾರ,

ಬೆಳಿಗ್ಗೆ ಮತ್ತು ಸಂಜೆಯ ಪೂಜೆಗಾಗಿ ಹಾಲು ಮತ್ತು ಸಕ್ಕರೆ,

ಆರತಿ ತಟ್ಟೆ.

ಪ್ರತಿಷ್ಠಾಪನೆ: 


ಚೈತ್ರ ಮತ್ತು ಅಶ್ವಿನ ನವರಾತ್ರಿಯ ಮೊದಲ ದಿನ, ಒಂದು ತಟ್ಟೆಯಲ್ಲಿ ಅಗತ್ಯವಿರುವಷ್ಟು ಮೃತ್ತಿಕೆ (ಮಣ್ಣು) ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಚಿಮುಕಿಸಬೇಕು.


ಆ ಮಣ್ಣು ಚೆನ್ನಾಗಿ ಒದ್ದೆಯಾದ ಮೇಲೆ ಅದರಲ್ಲಿ ಗೋಧಿ ಕಾಳುಗಳನ್ನು ಬಿತ್ತಿ, ಅದರ ಮೇಲೆ ಮತ್ತೆ ಸ್ವಲ್ಪ ನೀರು ಮತ್ತು ಮಣ್ಣನ್ನು ಸಿಂಪಡಿಸಬೇಕು. ತಟ್ಟೆಯಲ್ಲಿನ ಮೃತ್ತಿಕೆಯಲ್ಲಿ ಗೋಧಿ ಬಿತ್ತುವ ವಿಧಿ ಇದೆ. ಈ ವಿಧಿಯ ಪ್ರಕಾರ, ಬಿತ್ತಬೇಕಾದ ಗೋಧಿಯನ್ನು ಅಂಬಜ್ಞ ಇಷ್ಟಿಕೆಯ ಮುಖದ ಮುಂದೆ ಬಿತ್ತಬಾರದು, ಆದರೆ ಇತರ ಎಲ್ಲಾ ಕಡೆಗಳಲ್ಲಿ ಬಿತ್ತಬೇಕು, ಇದರಿಂದ ನವರಾತ್ರಿಯ ಸಮಯದಲ್ಲಿ ಗೋಧಿ ಕಾಳುಗಳಿಂದ ಮೊಳೆದ ಹುಲ್ಲು ದೊಡ್ಡಮ್ಮನ ಮುಖವನ್ನು ಮುಚ್ಚುವುದಿಲ್ಲ.

(ಸಂದರ್ಭಕ್ಕಾಗಿ ಸಮೀರ್ ದಾದಾರವರ ಬ್ಲಾಗ್‌ನಲ್ಲಿನ ಫೋಟೋ ನೋಡಿ)


ನಂತರ, ಒಂದು ಮಣೆ ಅಥವಾ ಟೇಬಲ್ ಅಥವಾ ಚೌರಂಗದ ಮೇಲೆ ಒಂದು ಸೋಹ್ಳಾ ಧೋತಿ ಅಥವಾ ಹಸಿರು ಬಣ್ಣದ ಬ್ಲೌಸ್ ಪೀಸ್ ಹಾಸಬೇಕು. ಆ ಸ್ಥಳದ ಕೆಳಗೆ ಮತ್ತು ಸುತ್ತಲೂ ರಂಗೋಲಿ ಇರುವುದು ಕಡ್ಡಾಯ.


ನಂತರ, "ಜೈ ಜಗದಂಬಾ ಜೈ ದುರ್ಗೆ" ಎಂದು ಘೋಷಿಸುತ್ತಾ, ಈ ತಟ್ಟೆಯನ್ನು ಆ ಪೂಜಾ ಸ್ಥಳದ ಮೇಲೆ ಇಡಬೇಕು (ಮಣೆ/ಚೌರಂಗ/ಟೇಬಲ್).


ನಂತರ, ಆ ಇಷ್ಟಿಕಾವನ್ನು, ಅದರ ಚಪ್ಪಟೆ ಭಾಗವು ನಮ್ಮ ಕಡೆಗೆ ಬರುವಂತೆ, ಆ ಗೋಧಿ ಮಿಶ್ರಿತ ಮೃತ್ತಿಕೆ (ಮಣ್ಣು) ಇರುವ ತಟ್ಟೆಯಲ್ಲಿ ಇಡಬೇಕು.


ನಂತರ, ಆ ಇಷ್ಟಿಕೆಯ ಚಪ್ಪಟೆ ಭಾಗದ ಮೇಲೆ ಕಾಜಲ್ (ಅಬೀರ) ದೇವಿಯ ಕಣ್ಣು, ಮೂಗು ಮತ್ತು ತುಟಿಗಳನ್ನು ಚಿತ್ರಿಸಬೇಕು.


ನಂತರ, ಆ ಇಷ್ಟಿಕೆಯ ಮೇಲೆ ನಿಮಗೆ ಇಷ್ಟವಾದ ಬಣ್ಣದ ಒಂದು ಚೂನರಿಯನ್ನು, ತಲೆಯ ಮೇಲಿನ ಪದರದಂತೆ ಅರ್ಪಿಸಬೇಕು.

(ಪೂಜಾ ವಿಧಿಯಲ್ಲಿ ಅರ್ಪಿಸಲು, ಎರಡನೇ ದಿನದಿಂದ, ನಿಮ್ಮ ಇಷ್ಟದಂತೆ ಚೂನರಿ ಅಥವಾ ಬ್ಲೌಸ್ ಪೀಸ್ ಅನ್ನು ಅರ್ಪಿಸಬಹುದು)

ಆದರೆ, ಮೊದಲ ದಿನದ ಪೂಜೆಯಲ್ಲಿ, ದೊಡ್ಡಮ್ಮನಿಗೆ ಚೂನರಿಯನ್ನೇ ಅರ್ಪಿಸಬೇಕು.


ನಂತರ, ಒಂದು ತುಳಸಿ ಎಲೆ ಮತ್ತು ಒಂದು ಬಿಲ್ವಪತ್ರೆಯನ್ನು ಆ ಇಷ್ಟಿಕೆಯ ಎರಡೂ ಬದಿಯ ಮಣ್ಣಿನಲ್ಲಿ ನೆಡಬೇಕು. ಈಗ ಈ "ಅಂಬಜ್ಞ ಇಷ್ಟಿಕಾ" ಅಂದರೆ "ಮಾತೃಪಾಷಾಣ" ಅಂದರೆ "ಆದಿಮಾತಾ ದುರ್ಗೆಯ ಪೂಜೆಯ ಪ್ರತೀಕ" ಸಿದ್ಧವಾಯಿತು.

ಇಚ್ಛೆ ಇರುವವರು ತಮ್ಮ ತಮ್ಮ ಕುಲದೇವರ ಭಾವಚಿತ್ರ, ದೇವಿಯ ಫಲಕ ಅಥವಾ ಮೂರ್ತಿಯನ್ನು ಈ

ಪವಿತ್ರ ತಟ್ಟೆಯ ಹಿಂದೆ ಅಥವಾ ಮುಂದೆ ಅನುಕೂಲಕ್ಕೆ ತಕ್ಕಂತೆ ಇಡಬಹುದು. ದೊಡ್ಡ ಭಾವಚಿತ್ರವಾಗಿದ್ದರೆ ಅದನ್ನು ಸಾಧ್ಯವಾದಷ್ಟು ಹಿಂದಿಡಬೇಕು. ದೇವಿಯ ಫಲಕ ಮತ್ತು ಚಿಕ್ಕ ಮೂರ್ತಿಯನ್ನು ತಟ್ಟೆಯ ಮುಂದೆ ಒಂದು ಚಿಕ್ಕ ತಾಮ್ರದಲ್ಲಿ ಕುಂಕುಮ ಮಿಶ್ರಿತ ಅಕ್ಷತೆಯ ಮೇಲೆ ಇಡಬೇಕು.





ನಂತರ, ತಮ್ಮ ತಮ್ಮ ಅನುಕೂಲ ಮತ್ತು ಇಚ್ಛೆಗೆ ತಕ್ಕಂತೆ ದಂಪತಿ ಅಥವಾ ಒಬ್ಬ ವ್ಯಕ್ತಿ ಭಕ್ತರ ವೇಷಭೂಷಣದಲ್ಲಿ ಎದುರಿಗೆ ಕುಳಿತುಕೊಳ್ಳಬೇಕು ಅಥವಾ ನಿಂತುಕೊಳ್ಳಬೇಕು.


ನಂತರ, ಆ ಆದಿಮಾತೆ ಸ್ವರೂಪದ ಅಂಬಜ್ಞ ಇಷ್ಟಿಕೆಗೆ "ಓಂ ನಮಶ್ಚಂಡಿಕಾಯೈ" ಎಂದು ಹೇಳುತ್ತಾ ಅರಿಶಿನ ಮತ್ತು ಕುಂಕುಮ ಹಚ್ಚಬೇಕು.


ನಂತರ ಕೈಗಳನ್ನು ಜೋಡಿಸಿ, "ಓಂ ಗಂ ಗಣಪತಯೇ ನಮಃ" ಈ ಜಪವನ್ನು ಐದು ಬಾರಿ ಮಾಡಬೇಕು.


ನಂತರ ನವದುರ್ಗೆಯರ  ''ನಾಮಮಂತ್ರಮಾಲೆ"  ಯನ್ನು ಒಮ್ಮೆ ಅಥವಾ ಮೂರು ಬಾರಿ ಅಥವಾ ಐದು ಬಾರಿ ಅಥವಾ ಒಂಬತ್ತು ಬಾರಿ ಹೇಳುತ್ತಾ, ಆದಿಮಾತೆಗೆ ಕುಂಕುಮ ಅಕ್ಷತೆ, ಹರಿದ್ರಾ (ಅರಿಶಿನ) ಅಕ್ಷತೆ, ಬಿಲ್ವಪತ್ರೆಗಳು, ತುಳಸಿ ಎಲೆಗಳು ಮತ್ತು ಹೂಗಳನ್ನು ಅರ್ಪಿಸಬೇಕು.

("ನವದುರ್ಗಾ ನಾಮಮಂತ್ರಮಾಲೆ" ಹೇಳುವುದರಿಂದ, ಪೂಜೆಯಲ್ಲಿ ಅರಿಯದೆ ಏನಾದರೂ ತಪ್ಪುಗಳು ನಡೆದಿದ್ದರೆ, ಅವು ನಿವಾರಣೆಯಾಗುತ್ತವೆ)


ನವದುರ್ಗಾ ನಾಮಮಂತ್ರಮಾಲೆ -


ಓಂ ಶ್ರೀಶೈಲಪುತ್ರೈ ನಮಃ 2) ಓಂ ಶ್ರೀ ಬ್ರಹ್ಮಚಾರಿಣ್ಯೈ ನಮಃ

3) ಓಂ ಚಂದ್ರಘಂಟಾಯೈ ನಮಃ 4) ಓಂ ಶ್ರೀ ಕುಷ್ಮಾಂಡಾಯೈ ನಮಃ

5) ಓಂ ಶ್ರೀ ಸ್ಕಂದಮಾತ್ರೈ ನಮಃ 6) ಓಂ ಶ್ರೀ ಕಾತ್ಯಾಯನ್ಯೈ ನಮಃ

7) ಓಂ ಶ್ರೀ ಕಾಲರಾತ್ರೈ ನಮಃ 8) ಓಂ ಶ್ರೀ ಮಹಾಗೌರ್ಯೈ ನಮಃ

9) ಓಂ ಶ್ರೀ ಸಿದ್ಧಿದಾತ್ರೈ ನಮಃ


ಆದಿಮಾತೆಗೆ ವೇಣಿ ಅಥವಾ ಗಜರವನ್ನು ಪ್ರತಿದಿನ ಅರ್ಪಿಸುವುದರಲ್ಲಿ ಯಾವುದೇ ತಪ್ಪಿಲ್ಲ.


ನಂತರ ಜೆ೦ಡು ಹೂಗಳ ಒಂದು ಹಾರವನ್ನು ಆ ತಟ್ಟೆಯ ಸುತ್ತಲೂ (“ಅಂಬಜ್ಞ ಇಷ್ಟಿಕೆಯ” ವ್ಯವಸ್ಥೆಯ ಸುತ್ತಲೂ) ಅರ್ಪಿಸಬೇಕು.


ನಂತರ ಪುರಾಣ-ವರಣದ ನೈವೇದ್ಯವನ್ನು ಅರ್ಪಿಸಬೇಕು. ವರಣ-ಭಾತ ಮತ್ತು ಪುರಾಣದ ಜೊತೆಗೆ, ತಮ್ಮ ಇಚ್ಛೆ ಮತ್ತು ಇಷ್ಟಕ್ಕೆ ತಕ್ಕಂತೆ ಯಾವುದೇ ಭೋಜನ ಪದಾರ್ಥಗಳನ್ನು ಅರ್ಪಿಸಬಹುದು. ಆದರೆ ನೈವೇದ್ಯ ಅರ್ಪಿಸುವಾಗ ಪುರಾಣದ ಮೇಲೆ ಮಾತ್ರ ತುಳಸಿ ಎಲೆಯನ್ನು ಇಡಬೇಕು.


ನಂತರ ದೀಪ ಹಚ್ಚಿ "ಮಾತೆ ಗಾಯತ್ರಿ ಸಿಂಹಾರೂಢ ಭಗವತಿ ಮಹಿಷಾಸುರಮರ್ದಿನಿ..."

ಈ ಆರತಿಯನ್ನು ಮಾಡಬೇಕು. ಈ ಸಮಯದಲ್ಲಿ ಬೇರೆ ಯಾವುದೇ ಆರತಿಯನ್ನು ತೆಗೆದುಕೊಳ್ಳಬಾರದು.

ಮೊದಲ ರಾತ್ರಿಯಲ್ಲಿ ಸಹ ಈ ಆರತಿ ಮಾಡುವುದು ಅಗತ್ಯ. ನಂತರ ಹಾಲು ಸಕ್ಕರೆಯ ನೈವೇದ್ಯವನ್ನು ಅರ್ಪಿಸಿ ಅದನ್ನು ಪ್ರಸಾದದ ರೂಪದಲ್ಲಿ ಹಂಚಬೇಕು.


ಇದರ ನಂತರ "ಓಂ ಯಜ್ಞೇನ ಯಜ್ಞಮಯಜಂತ.." ಈ ಮಂತ್ರಪುಷ್ಪಾಂಜಲಿಯನ್ನು ಹೇಳಿ ಹಾಜರಿರುವ ಎಲ್ಲರೂ ಹೂಗಳು, ಬಿಲ್ವಪತ್ರೆಗಳು ಮತ್ತು ತುಳಸಿ ಎಲೆಗಳನ್ನು ಅರ್ಪಿಸಬೇಕು.


ನಂತರ ಆದಿಮಾತೆಗೆ ಧೂಪ ತೋರಿಸಬೇಕು.


ನಂತರ ನೆಲದ ಮೇಲೆ ಬಿದ್ದು ಸ೦ಪೂರ್ಣ ದ೦ಡವತ್ (ಲೋಟಂಗಣ) ಮಾಡಬೇಕು.


ಪ್ರತಿದಿನ ಮಣ್ಣಿನ ಮೇಲೆ ನೀರು ಚಿಮುಕಿಸಬೇಕು.


ನಿತ್ಯ ಪೂಜೆ:

ಎರಡನೇ ದಿನದಿಂದ ಪೂಜೆಯನ್ನು, ಮನೆಯ ಇತರ ಯಾವುದೇ ಸದಸ್ಯರು ಮಾಡಬಹುದು.

ಹಾಗೆಯೇ, ಪ್ರತಿದಿನ ಮನೆಯ ಬೇರೆ ಬೇರೆ ಸದಸ್ಯರೂ ಪೂಜೆ ಮಾಡಬಹುದು.

14 ವರ್ಷಕ್ಕಿಂತ ಮೇಲ್ಪಟ್ಟ ಯಾರು ಬೇಕಾದರೂ ಈ ಪೂಜೆಯನ್ನು ಮಾಡಬಹುದು.


ನಿತ್ಯ ಪೂಜೆಯನ್ನು ಪ್ರತಿದಿನ ಸಂಜೆ, ಸ್ನಾನ ಮಾಡಿ ಭಕ್ತರ ವೇಷಭೂಷಣದಲ್ಲಿ ಮಾಡಬೇಕು. 


ಎರಡನೇ ದಿನದಿಂದ, ನಿತ್ಯ ಪೂಜೆ ಮಾಡುವಾಗ, ಮೊದಲ ದಿನ ಅರ್ಪಿಸಿದ ಚೂನರಿಯನ್ನು ಹಾಗೆಯೇ ಇಟ್ಟು, ಭಕ್ತರು ಹೊಸ ಚೂನರಿ ಅಥವಾ ಬ್ಲೌಸ್ ಪೀಸ್‌ಗಳನ್ನು ಅರ್ಪಿಸಬಹುದು.



ಒಂದು ವೇಳೆ ಬ್ಲೌಸ್ ಪೀಸ್‌ಗಳನ್ನು ಅರ್ಪಿಸಿದರೆ, ಅವುಗಳನ್ನು "ಅಂಬಜ್ಞ ಇಷ್ಟಿಕೆಯ" ಮೇಲೆ ಇಡದೆ, "ಅಂಬಜ್ಞ ಇಷ್ಟಿಕೆಯ" ಒಂದು ಬದಿಯಲ್ಲಿ ಇಡಬೇಕು.

ಅಂದರೆ, ಮೊದಲ ದಿನ ಅರ್ಪಿಸಿದ ಚೂನರಿಯು, ಪೂಜೆಯ ಎಲ್ಲಾ ದಿನಗಳಲ್ಲಿ "ಅಂಬಜ್ಞ ಇಷ್ಟಿಕೆಯ" ಮೇಲೆ ಇರುತ್ತದೆ ಮತ್ತು ಅರ್ಪಿಸಿದ ಬ್ಲೌಸ್ ಪೀಸ್‌ಗಳನ್ನು ಅರ್ಪಿಸಿದ ನಂತರ, ಬದಿಗೆ ತೆಗೆದಿಡಬಹುದು. ಈ ಅರ್ಪಿಸಿದ ಬ್ಲೌಸ್ ಪೀಸ್‌ಗಳನ್ನು, ಭಕ್ತರು 'ಮಾಯೇಚಿ ಊಬ್' ಈ ಯೋಜನೆಯ ಮುಕಾ೦ತರ, ಗೋಧಡಿ (ಹಾಸಿಗೆ) ಹೊಲಿಯಲು ಬಳಸಬಹುದು ಅಥವಾ ತಮ್ಮ ಸ್ವಂತ ಉಪಯೋಗಕ್ಕೂ ಬಳಸಬಹುದು. (ನಿತ್ಯ ಪೂಜಾ ವಿಧಿಯಲ್ಲಿ, ಎರಡನೇ ದಿನದಿಂದ, ಆದಿಮಾತೆಗೆ ಚೂನರಿ ಅರ್ಪಿಸಬೇಕೇ ಅಥವಾ ಬ್ಲೌಸ್ ಪೀಸ್ ಎಂದು ಭಕ್ತರು ಸ್ವಇಚ್ಛೆಯಿಂದ ನಿರ್ಧರಿಸಬೇಕು. ಭಕ್ತರು ಪ್ರತಿದಿನ ಅಂಬಜ್ಞ ಇಷ್ಟಿಕೆಗೆ ಚೂನರಿ ಅರ್ಪಿಸಿದರೆ, ಕೊನೆಯಲ್ಲಿ ಎಲ್ಲಾ ಚೂನರಿಗಳನ್ನು ಪುನರ್ಮಿಲಾಪ ಮಾಡಬೇಕು.)


ಆದಿಮಾತೆಗೆ, ಚೂನರಿ ಅಥವಾ ಬ್ಲೌಸ್ ಪೀಸ್ ಅರ್ಪಿಸಿದ ನಂತರ, ಕೆಳಗೆ ನಮೂದಿಸಿದ ಎಲ್ಲಾ ಉಪಚಾರಗಳನ್ನು ಮಾಡಿ ನಿತ್ಯ ಪೂಜೆ ಮಾಡಬೇಕು:-


ಆದಿಮಾತೆ ಸ್ವರೂಪದ "ಅಂಬಜ್ಞ ಇಷ್ಟಿಕೆಗೆ""ಓಂ ನಮಶ್ಚಂಡಿಕಾಯೈ" ಎಂದು

ಹೇಳುತ್ತಾ ಅರಿಶಿನ ಮತ್ತು ಕುಂಕುಮ ಹಚ್ಚಬೇಕು.


ನಂತರ ಕೈಗಳನ್ನು ಜೋಡಿಸಿ, "ಓಂ ಗಂ ಗಣಪತಯೇ ನಮಃ" ಈ ಜಪವನ್ನು ಐದು ಬಾರಿ ಮಾಡಬೇಕು.


ನಂತರ ನವದುರ್ಗೆಯರ ''ನಾಮಮಂತ್ರಮಾಲೆ" ಯನ್ನು ಒಮ್ಮೆ ಅಥವಾ ಮೂರು ಬಾರಿ ಅಥವಾ ಐದು ಬಾರಿ ಅಥವಾ ಒಂಬತ್ತು ಬಾರಿ ಹೇಳುತ್ತಾ, ಆ ಆದಿಮಾತೆಗೆ ಕುಂಕುಮ ಅಕ್ಷತೆ, ಹರಿದ್ರಾ (ಅರಿಶಿನ) ಅಕ್ಷತೆ, ಬಿಲ್ವಪತ್ರೆಗಳು, ತುಳಸಿ ಎಲೆಗಳು ಮತ್ತು ಹೂಗಳನ್ನು ಅರ್ಪಿಸಬೇಕು. ("ನವದುರ್ಗಾ ನಾಮಮಂತ್ರಮಾಲೆ" ಹೇಳುವುದರಿಂದ, ಪೂಜೆಯಲ್ಲಿ ಅರಿಯದೆ ಏನಾದರೂ ತಪ್ಪುಗಳು ನಡೆದಿದ್ದರೆ, ಅವು ನಿವಾರಣೆಯಾಗುತ್ತವೆ)


 ನವದುರ್ಗಾ ನಾಮಮಂತ್ರಮಾಲೆ -


ಓಂ ಶ್ರೀಶೈಲಪುತ್ರೈ ನಮಃ 2) ಓಂ ಶ್ರೀ ಬ್ರಹ್ಮಚಾರಿಣ್ಯೈ ನಮಃ

3) ಓಂ ಶ್ರೀ ಚಂದ್ರಘಂಟಾಯೈ ನಮಃ 4) ಓಂ ಶ್ರೀ ಕುಷ್ಮಾಂಡಾಯೈ ನಮಃ

5) ಓಂ ಶ್ರೀ ಸ್ಕಂದಮಾತ್ರೈ ನಮಃ 6) ಓಂ ಶ್ರೀ ಕಾತ್ಯಾಯನ್ಯೈ ನಮಃ

7) ಓಂ ಶ್ರೀ ಕಾಲರಾತ್ರೈ ನಮಃ 8) ಓಂ ಶ್ರೀ ಮಹಾಗೌರ್ಯೈ ನಮಃ

9) ಓಂ ಶ್ರೀ ಸಿದ್ಧಿದಾತ್ರೈ ನಮಃ


ಆದಿಮಾತೆಗೆ ವೇಣಿ ಅಥವಾ ಗಜರವನ್ನು ಪ್ರತಿದಿನ ಅರ್ಪಿಸುವುದರಲ್ಲಿ ಯಾವುದೇ ತಪ್ಪಿಲ್ಲ.


ಎರಡನೇ ದಿನದಿಂದ, ಸಂಜೆಯ ನಿತ್ಯ ಪೂಜೆಯಲ್ಲಿ ಜೆ೦ಡು ಹೂಗಳ ಹೊಸ ಹಾರವನ್ನು ಅರ್ಪಿಸುವಾಗ, ಹಿಂದಿನ ದಿನದ ಹಾರ/ಹಾರಗಳನ್ನು ಪೂಜೆಯ ವ್ಯವಸ್ಥೆಯಲ್ಲಿ ಹಾಗೆಯೇ ಇಡಬೇಕೇ ಅಥವಾ ಬೇಡವೇ ಎಂದು, ಭಕ್ತರು ತಮ್ಮ ಇಷ್ಟ ಮತ್ತು ಅನುಕೂಲಕ್ಕೆ ತಕ್ಕಂತೆ ನಿರ್ಧರಿಸಬಹುದು.


ನಂತರ ಪುರಾಣ-ವರಣ ಮತ್ತು ಇತರ ಭೋಜನ ಪದಾರ್ಥಗಳ ನೈವೇದ್ಯವನ್ನು, ತಮ್ಮ ಇಚ್ಛೆಗೆ ತಕ್ಕಂತೆ ಅರ್ಪಿಸಬಹುದು. ಆದರೆ, ಸಸ್ಯಹಾರಿ ಮತ್ತು ಮಾಂಸಹಾರಿ ಎರಡೂ ಪ್ರಕಾರದ ವ್ಯಕ್ತಿಗಳು ಸಸ್ಯಹಾರಿ ನೈವೇದ್ಯವನ್ನು ಅರ್ಪಿಸುವುದು ಉತ್ತಮ. ಭೋಜನದ ಇತರ ಪದಾರ್ಥಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿಯ ನಿಯಮವಿಲ್ಲ, ಮಾಂಸಾಹಾರವನ್ನು ಆದಷ್ಟು ತಪ್ಪಿಸಬೇಕು.


ನಂತರ ಸಂಜೆ ಆರತಿ ಮಾಡುವಾಗ, ವಿವಿಧ ಆರತಿಗಳನ್ನು ಮಾಡಲು ಯಾವುದೇ ತಪ್ಪಿಲ್ಲ; ಈ ಸಮಯದಲ್ಲಿ ಯಾವುದೇ ಕ್ರಮದಲ್ಲಿ ಆರತಿ ಮಾಡಬಹುದು.


ನಂತರ ಹಾಲು-ಸಕ್ಕರೆಯ ನೈವೇದ್ಯವನ್ನು ಅರ್ಪಿಸಿ ಅದನ್ನು ಪ್ರಸಾದದ ರೂಪದಲ್ಲಿ ಹಂಚಬೇಕು.


(ನಿತ್ಯ ಪೂಜೆಯ ಉಪಚಾರಗಳ ಪ್ರಕಾರ, ದೊಡ್ಡಮ್ಮನಿಗೆ, ಪ್ರತಿದಿನ, ಕ್ರಮವಾಗಿ ಬೆಳಿಗ್ಗೆ ಮತ್ತು ಸಂಜೆ, ಹಾಲು ಸಕ್ಕರೆಯ ನೈವೇದ್ಯವನ್ನು ಅರ್ಪಿಸುವುದು ಅವಶ್ಯಕ.)

ಇದರ ನಂತರ "ಓಂ ಯಜ್ಞೇನ ಯಜ್ಞಮಯಜಂತ" ಈ ಮಂತ್ರಪುಷ್ಪಾಂಜಲಿಯನ್ನು

ಹೇಳಿ ಹಾಜರಿರುವ ಎಲ್ಲರೂ ಹೂಗಳು, ಬಿಲ್ವಪತ್ರೆಗಳು ಮತ್ತು ತುಳಸಿ ಎಲೆಗಳನ್ನು ಅರ್ಪಿಸಬೇಕು.


ನಂತರ ಆದಿಮಾತೆಗೆ ಧೂಪ ತೋರಿಸಬೇಕು.


ನಂತರ ನೆಲದ ಮೇಲೆ ಬಿದ್ದು ಸ೦ಪೂರ್ಣ ದ೦ಡವತ್ (ಲೋಟಂಗಣ) ಮಾಡಬೇಕು.


ಪ್ರತಿದಿನ ಮಣ್ಣಿನ ಮೇಲೆ ನೀರು ಚಿಮುಕಿಸಬೇಕು.


ಕೆಲವೊಮ್ಮೆ ನವರಾತ್ರಿ ತಿಥಿ ಕೇವಲ ಎಂಟು ದಿನಗಳಲ್ಲಿ ಬರುತ್ತದೆ, ಆಗ 'ಅಶ್ವಿನ ನವರಾತ್ರಿಯಲ್ಲಿ' ವಿಜಯದಶಮಿಯ ಹಿಂದಿನ ದಿನ ಮತ್ತು 'ಚೈತ್ರ ನವರಾತ್ರಿಯಲ್ಲಿ' ರಾಮನವಮಿಯ ಹಿಂದಿನ ದಿನ, ಎರಡು ಚೂನರಿ/ಬ್ಲೌಸ್ ಪೀಸ್‌ಗಳನ್ನು ಅರ್ಪಿಸಬೇಕು.

ಒಂದು ವೇಳೆ ಯಾವುದೇ ವರ್ಷ ನವರಾತ್ರಿ ತಿಥಿ ಒಂಬತ್ತಕ್ಕೆ ಬದಲಾಗಿ ಹತ್ತು ದಿನಗಳು ಬಂದರೆ, ಹೆಚ್ಚುವರಿ ಕ್ರಮದಲ್ಲಿ ಚೂನರಿ / ಬ್ಲೌಸ್ ಪೀಸ್‌ಗಳನ್ನು ಅರ್ಪಿಸಬೇಕು. (ಒಟ್ಟು ಹತ್ತು ಚೂನರಿಗಳು ಅಥವಾ 1 ಚೂನರಿ (ಮೊದಲ ದಿನಕ್ಕಾಗಿ) ಮತ್ತು ಇತರ ದಿನಗಳಿಗಾಗಿ 9 ಬ್ಲೌಸ್ ಪೀಸ್‌ಗಳನ್ನು ಅರ್ಪಿಸಲಾಗುತ್ತದೆ.)


ಪುನರ್ಮಿಲಾಪ:


ಅಶ್ವಿನ ನವರಾತ್ರಿಯಲ್ಲಿ ವಿಜಯದಶಮಿಯ ದಿನ ಮತ್ತು ಚೈತ್ರ ನವರಾತ್ರಿಯಲ್ಲಿ ರಾಮನವಮಿಯ ಎರಡನೇ ದಿನ, ಬೆಳಿಗ್ಗೆ ಆದಿಮಾತೆಗೆ ಅರಿಶಿನ-ಕುಂಕುಮ ಅರ್ಪಿಸಿ, 'ಹಾಲು-ಸಕ್ಕರೆ' ಮತ್ತು ಕೇವಲ 'ಪುರಾಣ'ದ ನೈವೇದ್ಯವನ್ನು ಮಾತ್ರ ಅರ್ಪಿಸಬೇಕು.


ನಂತರ ಅಕ್ಷತೆ ಮತ್ತು ಹೂಗಳನ್ನು ಅರ್ಪಿಸಿ ಆದಿಮಾತೆಯ ಬಳಿ, ತಮ್ಮದೇ ಶಬ್ದಗಳಲ್ಲಿ ಕ್ಷಮೆಯನ್ನು ಮತ್ತು ಕೃಪೆಯನ್ನು ಯಾಚಿಸಬೇಕು ಮತ್ತು ಎರಡೂ ಕೈಗಳನ್ನು ಜೋಡಿಸಿ ಈ ಮುಂದಿನ ಮಂತ್ರವನ್ನು ಹೇಳಬೇಕು: "ಆವಾಹನಂ ನ ಜಾನಾಮಿ ನ ಜಾನಾಮಿ ತವಾರ್ಚನಂ। ಪೂಜಾಂ ಚೈವ ನ ಜಾನಾಮಿ ಕ್ಷಮಸ್ವ ಪರಮೇಶ್ವರಿ ॥"

ನಂತರ ತಮ್ಮ ಸುತ್ತಲೂ ಮೂರು ಪ್ರದಕ್ಷಿಣೆಗಳನ್ನು ಹಾಕುವಾಗ ಈ ಮುಂದಿನ ಮಂತ್ರವನ್ನು ಹೇಳಬೇಕು: 
 
"ಯಾನಿ ಕಾನಿ ಚ ಪಾಪಾನಿ ಜನ್ಮಾಂತರಕೃತಾನಿ ಚ। ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ್ಯಾಂ ಪದೇ ಪದೇ ॥"


ನಂತರ ತಟ್ಟೆಯಲ್ಲಿ ಬೆಳೆದ ಸಸಿಗಳ ಮೇಲೆ ಹೂವಿನಿಂದ ಹಾಲು ಚಿಮುಕಿಸಬೇಕು ಮತ್ತು ಆದಿಮಾತೆಯ ತಲೆಯ ಮೇಲೆ ಕುಂಕುಮ ಅಕ್ಷತೆಯನ್ನು ಅರ್ಪಿಸುವಾಗ 'ಗುರುಕ್ಷೇತ್ರ ಮಂತ್ರ' ಹೇಳಿ ತಟ್ಟೆಯನ್ನು ಸ್ವಲ್ಪ ಅಲುಗಿಸಬೇಕು.


ನಂತರ ನಾವು ಸ್ವಇಚ್ಛೆ ಮತ್ತು ಅನುಕೂಲಕ್ಕೆ ತಕ್ಕಂತೆ ಆ "ಅಂಬಜ್ಞ ಇಷ್ಟಿಕೆಯನ್ನು" ನೀರಿನಲ್ಲಿ ಪುನರ್ನಿಲಾಪ ಮಾಡಬೇಕು ಮತ್ತು ಆ ತಟ್ಟೆಯಲ್ಲಿನ ಸ್ವಲ್ಪ ಮಣ್ಣನ್ನು ತುಳಸಿ ಗಿಡಕ್ಕೆ ಅರ್ಪಿಸಬೇಕು ಮತ್ತು ತಟ್ಟೆಯಲ್ಲಿ ಬೆಳೆದ ಸಸಿಗಳಲ್ಲಿ ಒಂದನ್ನು ತುಳಸಿ ಕುಂಡದಲ್ಲಿ ನೆಡಬೇಕು, ಉಳಿದ ಎಲ್ಲವನ್ನೂ ವಿಸರ್ಜನೆ ಮಾಡಬೇಕು. 
ಪುನರ್ಮಿಲಾಪ ಪೂಜೆಯ ನಂತರ ಅಶ್ವಿನ ನವರಾತ್ರಿಯಲ್ಲಿ ವಿಜಯದಶಮಿಯ ದಿನ ಮತ್ತು ಚೈತ್ರ ನವರಾತ್ರಿಯಲ್ಲಿ ರಾಮನವಮಿಯ ದಿನ ಅಥವಾ ಅದರ ನಂತರದ ಮೂರು ದಿನಗಳಲ್ಲಿ ಯಾವಾಗ ಬೇಕಾದರೂ "ಅಂಬಜ್ಞ ಇಷ್ಟಿಕೆಯನ್ನು" ನೀರಿನಲ್ಲಿ ಪುನರ್ಮಿಲಾಪ ಮಾಡಬಹುದು.

(ಚೈತ್ರ ನವರಾತ್ರಿಯಲ್ಲಿ ಭಕ್ತರು, ಅವರಿಗೆ ಬೇಕಿದ್ದರೆ, ಪುನರ್ಮಿಲಾಪವನ್ನು ಹನುಮಾನ ಪೂರ್ಣಿಮೆಯ ದಿನವೂ ಮಾಡಬಹುದು.)

ಆದರೆ ಪುನರ್ಮಿಲಾಪ ಆಗುವ ತನಕ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಾಲು-ಸಕ್ಕರೆಯ ನೈವೇದ್ಯವನ್ನು ಅರ್ಪಿಸಬೇಕು.


ಇತರ ಮಾಹಿತಿ:

ಮನೆಯಲ್ಲಿ ಸೋಯರ್-ಸೂತಕ್ (ಹುಟ್ಟು ಅಥವಾ ಸಾವು) ಇರುವಾಗಲೂ ಈ ಪೂಜೆಯನ್ನು ಮಾಡಬಹುದು.

ಮುಟ್ಟು ಆಗಿರುವ ಸಮಯದಲ್ಲಿ ಸ್ತ್ರೀಯರು ದರ್ಶನ ಪಡೆಯಬಹುದು ಮತ್ತು ನಮಸ್ಕಾರ ಮಾಡಬಹುದು.

ನವರಾತ್ರಿಯ ಸಮಯದಲ್ಲಿ ತಮ್ಮ ಸ್ವಂತ ಮನೆಯ ಹೊರತು ಬೇರೆ ಸ್ಥಳದಲ್ಲಿ ಇರುವಾಗಲೂ, ಭಕ್ತರು ಈ ಪೂಜೆಯನ್ನು ಅಲ್ಲಿಯೂ ಮಾಡಬಹುದು.

ನವರಾತ್ರಿಯ ಸಮಯದಲ್ಲಿ ಮನೆಯಲ್ಲಿ ಅಥವಾ ಸಂಬಂಧಿಕರಲ್ಲಿ ಯಾರಾದರೂ ತೀರಿಕೊಂಡರೆ ನವರಾತ್ರಿ ಪೂಜೆಯನ್ನು ಮುಂದುವರೆಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಭಕ್ತರಿಗೆ ಸ್ವಾತಂತ್ರ್ಯ ಇದೆ; ಆದರೆ ಮಧ್ಯದಲ್ಲಿಯೇ ಪುನರ್ಮಿಲಾಪ ಮಾಡಬೇಕಾಗಿದ್ದರೆ "ಆದಿಮಾತಾ ಶುಭಂಕರ ಸ್ತವನಂ" ಹನ್ನೊಂದು ಬಾರಿ ಹೇಳಿ ನಂತರ ಅಕ್ಷತೆ ಹಾಕಿ ನಂತರ ಪುನರ್ಮಿಲಾಪ ಮಾಡಬೇಕು.

ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ಒಂದು ವರ್ಷ ಈ ನವರಾತ್ರಿ ಪೂಜೆಯನ್ನು ಹೊಸದಾಗಿ ಶುರು ಮಾಡಿದರೆ, ಪ್ರತಿ ವರ್ಷ ಈ ಪೂಜೆಯನ್ನು ಮಾಡುವುದು ಕಡ್ಡಾಯವಿಲ್ಲ. ಆದರೆ ಯಾರ ಮನೆಯಲ್ಲಿ ಮೊದಲಿನಿಂದ ವಂಶಪರಂಪರೆಯಿಂದ ನವರಾತ್ರಿ ಪೂಜೆ ನಡೆಯುತ್ತಿದೆಯೋ, ಅವರು ಪ್ರತಿ ವರ್ಷ ಪೂಜೆ ಮಾಡುವುದು ಅಗತ್ಯ.

ಒಂದು ಮನೆಯಲ್ಲಿ ನವರಾತ್ರಿ ಪೂಜೆ ನಿರಂತರವಾಗಿ ನಡೆಯುತ್ತಿದ್ದರೆ, ಮುಂದಿನ ಪೀಡಿಗೆಯವರು ಈ ಪೂಜೆಯನ್ನು ಮುಂದುವರೆಸುವುದು ಅಗತ್ಯ.

ಒಬ್ಬ ವ್ಯಕ್ತಿ ಹೊಸದಾಗಿ ಈ ಪೂಜೆಯನ್ನು ಶುರು ಮಾಡಿದರೆ, ಪೂಜೆಯನ್ನು ಶುರು ಮಾಡುವಾಗ ಹೀಗೆ ಸಂಕಲ್ಪ ಮಾಡಬೇಕು, "ಪೂಜೆಯನ್ನು ಮುಂದೆ ಮುಂದುವರೆಸಬೇಕೇ ಅಥವಾ ಬೇಡವೇ ಎಂದು ಮುಂದಿನ ಪ್ರತಿ ಪೀಡಿಯೆ ನಿರ್ಧರಿಸುತ್ತಾರೆ".


ಮನೆಯಲ್ಲಿನ ಇತರ ಶುಭ-ಮಂಗಳ ಸಂದರ್ಭಗಳಲ್ಲಿಯೂ ಈ ಪೂಜೆಯನ್ನು ಒಂದು ದಿನಕ್ಕಾಗಿ ಮಾಡಬಹುದು. ಅಂತಹ ಒಂದು ದಿನದ ಪೂಜೆಯ ಸಮಯದಲ್ಲಿ, ತಟ್ಟೆಯಲ್ಲಿ ಗೋಧಿ ತೆಗೆದುಕೊಂಡು ಅದರ ಮೇಲೆ "ಅಂಬಜ್ಞ ಇಷ್ಟಿಕೆಯನ್ನು" ಇಟ್ಟು, ಪೂಜೆ ಮಾಡಬೇಕು ಮತ್ತು ನಂತರ ಆ ಗೋಧಿಯನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು. 


ಭಕ್ತರು ತಮ್ಮ ಹಳೆಯ ಪದ್ಧತಿಯ ಪ್ರಕಾರ ಪೂಜೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಮೇಲಿನ ವಿಧಿಯ ಪ್ರಕಾರ ಪೂಜೆ ಮಾಡಿದರೆ, ನವರಾತ್ರಿ ಪೂಜೆಯಲ್ಲಿನ ತಪ್ಪುಗಳು ಮತ್ತು ವೈಯಕ್ತಿಕ ದೋಷಗಳ ಪರಿಣಾಮ ಆಗುವುದಿಲ್ಲ.

ಕೆಲವು ಭಕ್ತರು ಈ ಹಿಂದೆ ಬೇರೆ ಬೇರೆ ರೀತಿಯಲ್ಲಿ ಪೂಜೆ ಮಾಡುತ್ತಾ ಬಂದಿದ್ದಾರೆ. ಆದರೆ, ಸದ್ಗುರುಗಳ ಮಾತಿನ ಪ್ರಕಾರ ಪೂಜೆ ಮಾಡಬೇಕೇ ಅಥವಾ ಬೇರೆ ರೀತಿಯಲ್ಲಿ ಪೂಜೆ ಮಾಡಬೇಕೇ ಎಂಬ ನಿರ್ಣಯ, ಭಕ್ತರು ವೈಯಕ್ತಿಕವಾಗಿ ತೆಗೆದುಕೊಳ್ಳಬಹುದು.2017ರ ಶ್ವಿನ ನವರಾತ್ರೋತ್ಸವದಲ್ಲಿ ಶುರುವಾದ, ಪರಮಪೂಜ್ಯ ಸದ್ಗುರುಗಳು ನೀಡಿದ, ನವರಾತ್ರಿ ಪೂಜೆಯ ಈ ವಿಶೇಷ ಪದ್ಧತಿಯ ಲಾಭವನ್ನು ಅನೇಕ ಭಕ್ತರು ಪಡೆಯುತ್ತಿದ್ದಾರೆ. 


ಹರಿ ಓಂ ಶ್ರೀರಾಮ ಅಂಬಜ್ಞ ನಾಥಸಂವಿಧ.